Tag: ಹೈಕೋರ್ಟ್

  • ಜಾತಿಗಣತಿ ಸಮೀಕ್ಷೆ ತಡೆ ಕೋರಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

    ಜಾತಿಗಣತಿ ಸಮೀಕ್ಷೆ ತಡೆ ಕೋರಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

    – ಈ ರೀತಿ ಸಮೀಕ್ಷೆ ಮಾಡೋದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ: ಅರ್ಜಿದಾರರ ಪರ ವಕೀಲರ ವಾದ
    – ಅಂಕಿಅಂಶಗಳಿಲ್ಲದೇ ಕಲ್ಯಾಣಕಾರಿ ಯೋಜನೆ ರೂಪಿಸಲು ಆಗಲ್ಲ: ಸರ್ಕಾರ ಪರ ವಕೀಲರು

    ಬೆಂಗಳೂರು: ಜಾತಿಗಣತಿ ಸಮೀಕ್ಷೆ (Caste Census) ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ (High COurt) ಬುಧವಾರಕ್ಕೆ ಮುಂದೂಡಿದೆ.

    ಇಂದು ಹೈಕೋರ್ಟ್ನ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರದ ಪರ ವಕೀಲರಾದ ಶಶಿಕಿರಣ್ ಶೆಟ್ಟಿ ಮತ್ತು ಅಭಿಷೇಕ್ ಮನುಸಿಂಘ್ವಿ ಹಾಗೂ ಅರ್ಜಿದಾರರ ಪರ ಪ್ರಭುಲಿಂಗ ನಾವದಗಿ, ಅಶೋಕ್ ಹಾರನಹಳ್ಳಿ, ಶ್ರೀರಂಗ, ವಿವೇಕ್ ರೆಡ್ಡಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

    ಪ್ರಭುಲಿಂಗ ನಾವದಗಿ ಅವರು ಸರ್ಕಾರದ ಆದೇಶದ ಪ್ರತಿ ಉಲ್ಲೇಖಿಸಿ ವಾದ ಮಂಡನೆ ಮಾಡಿದರು. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮೀಕ್ಷೆ ಮಾಡಲು ಸೂಚಿಸಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಂಶಗಳ ಮೇಲೆ ಸಮೀಕ್ಷೆ ಮಾಡಲು ಹೇಳಿದೆ. ರಾಜ್ಯದ ಎಲ್ಲಾ ಜನತೆಯನ್ನು ಸಮೀಕ್ಷೆಯಲ್ಲಿ ಒಳಪಡಿಸಬೇಕು ಅಂತ ಇದೆ. ರಾಜ್ಯದ ಎಲ್ಲಾ ಜನರು ಕೂಡ ಸಮೀಕ್ಷೆಯಲ್ಲಿ ಒಳಡಿಸಬೇಕು ಅಂತ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ. ಡಿಜಿಟಲ್ ಆಗಿ ದತ್ತಾಂಶ ಸಂಗ್ರಹ ಮಾಡಬೇಕು ಅಂತಿದೆ. ಆಧಾರ ಕಾರ್ಡ್ ಅನ್ನು ಕಡ್ಡಾಯ ಮಾಡಿದ್ದಾರೆ. ಈ ಸಮೀಕ್ಷೆ ಶಿಕ್ಷಕರು, ಆಶಾ ಕಾರ್ಯಕರ್ತೆಯರ ಬಳಕೆ ಮಾಡಬೇಕು ಅಂತ ಹೇಳಿಕೊಂಡಿದೆ. ಮತ್ತೊಂದು ಆದೇಶ ಪ್ರತಿ, 2025 ಆಗಸ್ಟ್ 22ರಲ್ಲಿ ಇನ್ನೊಂದು ಆದೇಶದಲ್ಲಿ ಉಲ್ಲೇಖ ಮಾಡಿದ್ದಾರೆ. ವಿದ್ಯುತ್ ಸಂಪರ್ಕದ ಮಾಹಿತಿಯನ್ನು ಕೇಳಿದೆ ಎಂದು ಸಮೀಕ್ಷೆ ಮಾಡುತ್ತಾ ಇರುವವರ ಬಳಿ ಇರುವ ಹ್ಯಾಂಡ್ ಬುಕ್‌ನ್ನು ಕೋರ್ಟ್ಗೆ ಪ್ರಭುಲಿಂಗ ಅವರು ನೀಡಿದರು.

    ಇದರಲ್ಲಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ನಮೂದಿಸಬೇಕು ಅಂತಿದೆ. ಕಡ್ಡಾಯ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ರೀತಿ ಸಮೀಕ್ಷೆ ಮಾಡೋದಕ್ಕೆ ಅಧಿಕಾರವೇ ಇಲ್ಲ. ಸಂವಿಧಾನದ ಪ್ರಕಾರ ಇದಕ್ಕೆ ಅಧಿಕಾರ ಇಲ್ಲ. ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಹಿಂದುಳಿದ ಬಗ್ಗೆ ರಾಜ್ಯ ಸರ್ಕಾರ ಪತ್ತೆ ಮಾಡೋದಕ್ಕೆ ಅಧಿಕಾರ ಇರೋದಿಲ್ಲ. ಸಂವಿಧಾನಕ್ಕೆ 105ನೇ ತಿದ್ದುಪಡಿ ಮಾಡುವುದಕ್ಕೂ ಮುನ್ನ 342(ಎ)ನಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಬೇಕು. ಈ ಪ್ರಕಾರ ಮಾಡೋ ಹಾಗೇ ಇಲ್ಲ. ಹಾಗೇನಾದರೂ ಮಾಡೋ ಹಾಗಿದ್ರೆ ಕೇಂದ್ರ ಸರ್ಕಾರ ಮಾಡಬಹುದು. ಮನೆಯ ಮುಖ್ಯಸ್ಥನ ಸಂಪೂರ್ಣ ವಿವರ ಕೇಳಲಾಗಿದೆ. ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಸರ್ವೆ ಅಧಿಕಾರವಿಲ್ಲ. ರಾಷ್ಟ್ರಪತಿಗಳು ಮಾತ್ರ ಹಿಂದುಳಿದ ವರ್ಗಗಳ ಅಧಿಸೂಚನೆ ಹೊರಡಿಸಬಹುದು ಎಂದು ವಾದಿಸಿದರು.

    ಒಕ್ಕಲಿಗರ ಪರ ವಕೀಲ ಅಶೋಕ್ ಹಾರ್ನಹಳ್ಳಿ ವಾದ ಮಂಡಿಸಿ, ಜನರಲ್ಲಿ ಗೊಂದಲ ಸೃಷ್ಟಿಸುವುದೇ ಈ ರಾಜ್ಯ ಸರ್ಕಾರದ ಉದ್ದೇಶ ಆಗಿದೆ. ಜಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಾ ಇದೆ. ಕೇಂದ್ರ ಸರ್ಕಾರ ಈಗಾಗಲೇ 2027ರ ಮಾ.1ರಿಂದ ಜನಗಣತಿ ನಡೆಸಲಿದೆ. ಜನಗಣತಿಯ ಸಂದರ್ಭದಲ್ಲೇ ಜಾತಿಗಣತಿ ನಡೆಸಲು ನಿರ್ಧರಿಸಿದೆ. ರಾಜ್ಯ ಸರ್ಕಾರಗಳ ಗಣತಿ ಉದ್ದೇಶದ ಬಗ್ಗೆ ಹಲವು ಅನುಮಾನಗಳಿವೆ. ಹೀಗಾಗಿಯೇ ಕೇಂದ್ರ ಸರ್ಕಾರ ದೇಶಾದ್ಯಂತ ಗಣತಿಗೆ ನಿರ್ಧರಿಸಿದೆ. ಈ ಹಿಂದೆ ಮಾಡಿರೋ ಸಮೀಕ್ಷೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಹಿಂದಿನ ಸಮೀಕ್ಷೆ ಏನಾಯ್ತು ಗೊತ್ತಿಲ್ಲ. 2015 ರಲ್ಲಿ ರಾಜ್ಯ ಸರ್ಕಾರ ಮಾಡಿದ ಸರ್ವೆ ಪ್ರಶ್ನಿಸಲಾಗಿತ್ತು. 2024 ರಲ್ಲಿ ಸಲ್ಲಿಸಿದ ಸರ್ವೆ ವರದಿಯ ಸ್ಥಿತಿ ಏನಾಗಿದೆ ತಿಳಿದಿಲ್ಲ. ಹಿಂದೆ 150 ಕೋಟಿ ರೂ. ಗಳಲ್ಲಿ ಸರ್ವೆ, ಈಗ ಮತ್ತೆ 420 ಕೋಟಿ ವೆಚ್ಚದಲ್ಲಿ ಸರ್ವೆ. 1,561 ಜಾತಿಗಳನ್ನು ಸರ್ವೆ ಮಾಡಲು ಸರ್ಕಾರ ಮುಂದಾಗಿದೆ. ಹೊಸ ಹೊಸ ಜಾತಿಗಳನ್ನು ಸರ್ಕಾರ ಸೃಷ್ಟಿಸಿದೆ. ಜಾತಿಗಳ ಬಗ್ಗೆ ವಿಶ್ಲೇಷಣೆ ಇಲ್ಲದೇ ಸರ್ಕಾರ ಸರ್ವೆಗೆ ಮುಂದಾಗಿದೆ. ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡುವ ದತ್ತಾಂಶ ಸೋರಿಕೆ ಆಗುವ ಸಾಧ್ಯತೆ ಹೆಚ್ಚಿದೆ. ಸಮೀಕ್ಷೆ ಆದ ಬಳಿಕ ಯಾರ ಬಳಿ ಇರಲಿದೆ ಅನ್ನೋದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲ. ಕೆಲವೊಂದು ವೈಯಕ್ತಿಕ ವಿಚಾರವನ್ನು ಸಮೀಕ್ಷೆಯಲ್ಲಿ ಕೇಳಲಾಗ್ತಾ ಇದೆ. ಸಂವಿಧಾನದ ಕೇಂದ್ರ ಪಟ್ಟಿಯಲ್ಲಿ ಜನಗಣತಿ ಬರುತ್ತದೆ. ಕೇಂದ್ರ ಸಂಗ್ರಹಿಸಿದ ಅಂಕಿಅಂಶಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಇಂತಹ ಯಾವುದೇ ರಕ್ಷಣೆ ಒದಗಿಸಿಲ್ಲ. ಮಾಹಿತಿಯ ಖಾಸಗಿತನದ ಹಕ್ಕನ್ನು ಸುಪ್ರೀಂ ಕೋರ್ಟ್ ಗುರುತಿಸಿದೆ. ಡಿಜಿಟಲ್ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದ ತೀರ್ಪು ಉಲ್ಲೇಖಿಸಿ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.

    ಸರ್ಕಾರದ ಪರವಾಗಿ ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಮಾಡಿದರು. ಇದು ಗಣತಿ ಅಲ್ಲ, ಇದೊಂದು ಸಮೀಕ್ಷೆ ಅಷ್ಟೇ. ಎಂದು ವಾದಿಸಿದರು. ಎರಡಕ್ಕೂ ಏನ್ ವ್ಯತ್ಯಾಸವಿದೆ? ಎರಡು ಒಂದೇ ಅಲಾ ಎಂದು ಸಿಜೆ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮನುಸಿಂಘ್ವಿ, ಅರ್ಜಿದಾರರು ಜಾತಿ ಸಮೀಕ್ಷೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇದು ಸಾಮಾಜಿಕ-ಆರ್ಥಿಕ ಸಮೀಕ್ಷೆ ಮಾತ್ರ. ರಾಜ್ಯ ಸರ್ಕಾರಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡುವ ಅಧಿಕಾರ ಸಂವಿಧಾನವೇ ಕಲ್ಪಿಸಿದೆ. ಇದು ಕೇವಲ ದತ್ತಾಂಶ ಸಂಗ್ರಹದ ವಿಚಾರ ಆಗಿದೆ. ಕರ್ನಾಟಕ ಸರ್ಕಾರ ಈಗಾಗಲೇ ನಾಲ್ಕು ಬಾರಿ ಈ ರೀತಿಯ ಸಮೀಕ್ಷೆಗಳನ್ನು ಮಾಡಿಸಿದೆ. ತಡೆಯಾಜ್ಞೆ ನೀಡಿದರೆ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಇದಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಕೋರ್ಟ್ನಲ್ಲಿ ಮನವಿ ಮಾಡಿದರು.

    ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸರ್ವೆ ಮಾಡಲಾಗುತ್ತಿದೆ. ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಪೂರಕವಾಗಿ ಸರ್ವೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರವಿದ್ದಾಗ ಹೇಗೆ ಮಾಡಬೇಕೆಂಬುದು ಮುಖ್ಯವಲ್ಲ. ಅಂಕಿ ಅಂಶ ಸಂಗ್ರಹಿಸಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ. ಅಂಕಿ ಅಂಶಗಳಿಲ್ಲದೇ ಕಲ್ಯಾಣಕಾರಿ ಯೋಜನೆಗಳನ್ನೂ ರೂಪಿಸಲಾಗುವುದಿಲ್ಲ. ತಡೆ ನೀಡಿದರೆ ಸರ್ಕಾರದ ಅಧಿಕಾರವನ್ನೂ ತಡೆದಂತಾಗುತ್ತದೆ. ಈ ಹಿಂದೆಯೂ 2 ಆಯೋಗಗಳನ್ನು ರಚಿಸಲಾಗಿತ್ತು. ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ ರಚಿಸಲಾಗಿತ್ತು. ಸರ್ವೆ ಎಂದರೆ ಸಂಪೂರ್ಣ ಜನರನ್ನು ಒಳಗೊಳ್ಳುತ್ತದೆ. ಸರ್ಕಾರ ಆಯ್ದು ಆಯ್ದು ಸರ್ವೆ ನಡೆಸಲಾಗುವುದಿಲ್ಲ. ಹಿಂದುಳಿದ ವರ್ಗಗಗಳನ್ನು ಪತ್ತೆ ಹಚ್ಚಲು ಸಂಪೂರ್ಣ ಸರ್ವೆ ಅಗತ್ಯ. ಇಂದಿರಾ ಸಹಾನಿ ಪ್ರಕರಣ ಉಲ್ಲೇಖಿಸಿ ಸಿಂಘ್ವಿ ವಾದ
    ಅಂಕಿ ಅಂಶ ಸಂಗ್ರಹಿಸಿದೇ ಹಿಂದುಳಿದ ವರ್ಗ ಪತ್ತೆ ಹಚ್ಚುವುದು ಹೇಗೆ ಎಂದು ಪ್ರಶ್ನಿಸಿದರು.

    ಸಂವಿಧಾನಕ್ಕೆ 105 ನೇ ತಿದ್ದುಪಡಿ ಬಳಿಕ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸಂಪೂರ್ಣ ಜನರ ಜಾತಿ ಸರ್ವೆ ನೀತಿ ನಿರೂಪಣೆಯ ಭಾಗವಾಗಿದೆ. ದಂತ ಗೋಪುರದಲ್ಲಿ ಕುಳಿತು ಜಾತಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪಟ್ಟಿ ತಯಾರಿಸಲು ಅವಕಾಶವಿದೆ. ಅಂಕಿ ಅಂಶ ಸಂಗ್ರಹಿಸದೇ ಪಟ್ಟಿ ತಯಾರಿಸುವುದು ಹೇಗೆ? ಕೇಂದ್ರ ಸರ್ಕಾರ ಮಾಡುತ್ತದೆ, ರಾಜ್ಯ ಮಾಡುವಂತಿಲ್ಲ ಎನ್ನುವಂತಿಲ್ಲ. ಕೇಂದ್ರದ ಜಾತಿ ಪಟ್ಟಿಯಲ್ಲಿರುವುದಕ್ಕಿಂತ ಪ್ರತ್ಯೇಕ ಪಟ್ಟಿ ಹೊಂದಬಹುದು. ಕೇಂದ್ರ ಸರ್ಕಾರವೇ ಸಂವಿಧಾನಕ್ಕೆ 105 ನೇ ತಿದ್ದುಪಡಿ ತಂದಿದೆ. ಆದರೆ, ಇಲ್ಲಿ ಅರ್ಜಿದಾರರಿಗೆ ಕೇಂದ್ರ ಸರ್ಕಾರ ಬೆಂಬಲಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವುದರಿಂದ ತಡೆ ನೀಡಬಾರದು. ಯಾವಾಗ ಮಾಡಬೇಕೆಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಬಿಹಾರದಲ್ಲಿ ಕೂಡಾ ಜಾತಿಗಣತಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಜಾತಿಗಣತಿಗೆ ಕಾಯಬೇಕೆಂದಿಲ್ಲ. ಹಾಗಾದರೆ, ರಾಜ್ಯದ ಆಡಳಿತ ದುರ್ಬಲವಾಗುತ್ತದೆ. ಅಂಕಿ ಅಂಶ ಸಂಗ್ರಹಿಸಿ ಅರ್ಹ ಜಾತಿಗಳಿಗೆ ಸವಲತ್ತು ನೀಡಬಹುದು. ಹಳೆಯ ಸಮೀಕ್ಷೆಗೆ ಈಗ ಅಪ್‌ಡೇಟ್ ಮಾಡುತ್ತಿದ್ದೀವಿ ಅಷ್ಟೇ ಎಂದು ಸಿಂಘ್ವಿ ವಾದಿಸಿದರು.

    ಹಿಂದುಳಿದ ಆಯೋಗದ ಪರ ರವಿವರ್ಮಕುಮಾರ್ ವಾದ ಮಂಡಿಸಿ, ನಾವು ಆಧಾರ್ ಕಾರ್ಡ್ ಪಡೆಯುತ್ತಿರೋದು ಕೆವೈಸಿ ವಿಚಾರಕ್ಕಾಗಿ. ವ್ಯಕ್ತಿ ಸ್ಪಷ್ಟೀಕರಣಕ್ಕಾಗಿ ಅಷ್ಟೇ. ನಾಳೆಗೆ ವಿಚಾರಣೆ ಮುಂದೂಡಲು ಮನವಿ ಮಾಡಿದರು. ಕೊನೆಗೆ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

  • ಜಾತಿ ಜನಗಣತಿ ವಿರೋಧಿಸಿ ಅರ್ಜಿ –  ಕೇಂದ್ರ , ರಾಜ್ಯ, ಸೆನ್ಸಸ್ ಮಂಡಳಿ, ಹಿಂದುಳಿದ ಆಯೋಗಕ್ಕೆ ನೋಟಿಸ್ ಜಾರಿ

    ಜಾತಿ ಜನಗಣತಿ ವಿರೋಧಿಸಿ ಅರ್ಜಿ – ಕೇಂದ್ರ , ರಾಜ್ಯ, ಸೆನ್ಸಸ್ ಮಂಡಳಿ, ಹಿಂದುಳಿದ ಆಯೋಗಕ್ಕೆ ನೋಟಿಸ್ ಜಾರಿ

    ಬೆಂಗಳೂರು: ಜಾತಿ ಗಣತಿ ವಿರೋಧಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ (High Court) ಕೇಂದ್ರದ ಸೆನ್ಸಸ್ ಕಮಿಷನರ್, ಹಿಂದುಳಿದ ವರ್ಗಗಳ ಆಯೋಗ, ರಾಜ್ಯ ಹಾಗೂ ಕೆಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

    ರಾಜ್ಯ ಸರ್ಕಾರದ ಜಾತಿ ಗಣತಿ (Caste Census) ವಿರೋಧಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರು ಹಾಗೂ ಹಲವು ಖಾಸಗಿ ವ್ಯಕ್ತಿಗಳಿಂದಲೂ ಪ್ರತ್ಯೇಕವಾಗಿ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದನ್ನೂ ಓದಿ:  ಕ್ಯಾಬಿನೆಟ್‌ನಲ್ಲಿ ಗೆರಿಲ್ಲಾ ಮಾದರಿ ಪೊಲಿಟಿಕಲ್ ಆಟ್ಯಾಕ್ – ಸಿಎಂ ಸೇರಿ ಹಲವರಿಗೆ ಶಾಕ್ ಕೊಟ್ಟ ಸಚಿವರ ಗುಂಪು

     

    ಹಿಂದುಳಿದ ವರ್ಗಗಳ ಆಯೋಗದ ಪರ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಕಾಲಾವಕಾಶ ಕೋರಿದರು. ಬುಧವಾರದವರೆಗೆ ವಿಚಾರಣೆ ಮುಂದೂಡಲು ಸರ್ಕಾರದ ಪರ ಎಎಜಿ ಪ್ರತಿಮಾ ಹೊನ್ನಾಪುರ ಮನವಿ ಮಾಡಿದರು.ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ವಿವೇಕ್ ರೆಡ್ಡಿ ವಾದ ಮಾಡಿದರು. ಇದನ್ನೂ ಓದಿ:  ಲಿಂಗಾಯತರನ್ನು ತುಂಡು ತುಂಡು ಮಾಡಲು ಹೇಳಿದ್ಯಾರು- ಪೇಪರ್‌ ಎಸೆದು ಕ್ಯಾಬಿನೆಟ್‌ ಸಭೆಯಲ್ಲಿ ಎಂಬಿಪಿ ರೋಷಾವೇಶ

    ಮೀಟರ್ ರೀಡರ್‌ಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸುವ ಅಂಕಿ ಅಂಶಕ್ಕೆ ರಕ್ಷಣೆ ಇಲ್ಲವೆಂದು ವಾದ ಮಂಡಿಸಿದರು. ಈಗಾಗಲೇ 2 ಕೋಟಿ ಮನೆಗಳಿಂದ ಪ್ರಕ್ರಿಯೆ ಆರಂಭಿಸಲಾಗಿದೆ. ಮೇಲ್ವರ್ಗದ ರಿಟ್ ಅರ್ಜಿಗಳೇ ಹೆಚ್ಚಾಗಿವೆ. ಹೀಗಾಗಿ ತುರ್ತು ವಿಚಾರಣೆಗೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

    ಎಲ್ಲಾ ಅರ್ಜಿ ಸಂಬಂಧ ಸರ್ಕಾರ, ಕೇಂದ್ರ ಸರ್ಕಾರ, ಸಮೀಕ್ಷಾ ಆಯೋಗಕ್ಕೆ ನೊಟೀಸ್ ನೀಡಿದ ಹೈಕೋರ್ಟ್, ಅಡ್ವೋಕೇಟ್ ಜನರಲ್ ಇಲ್ಲದ ಕಾರಣ ವಿಚಾರಣೆ ಮುಂದೂಡಿದೆ. ಎಲ್ಲಾ ರಿಟ್ ಅರ್ಜಿಗಳ ವಿಚಾರಣೆ ಸೆ.22ಕ್ಕೆ ನಿಗದಿ ಪಡಿಸಿದೆ.

  • ಅಟ್ರಾಸಿಟಿ ಕೇಸ್‌| ಯತ್ನಾಳ್‌ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

    ಅಟ್ರಾಸಿಟಿ ಕೇಸ್‌| ಯತ್ನಾಳ್‌ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

    – ಹೇಳಿಕೆಯನ್ನು ತಿರುಚಲಾಗಿದೆ ಎಂದು ವಾದಿಸಿದ ವಕೀಲರು

    ಬೆಂಗಳೂರು: ಅಟ್ರಾಸಿಟಿ ಪ್ರಕರಣಕ್ಕೆ (Atrocity Case) ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ (Basangouda Patil Yatnal) ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್‌ (High Court) ಸೂಚನೆ ನೀಡಿದೆ.

    ಅಟ್ರಾಸಿಟಿ ಕಾಯ್ದೆಯಡಿ ಕೊಪ್ಪಳದಲ್ಲಿ ಎಫ್ಐಆರ್ ದಾಖಲಾಗಿದ್ದನ್ನು ಪ್ರಶ್ನಿಸಿ ಯತ್ನಾಳ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಕೊಪ್ಪಳ | ದಲಿತ ಮಹಿಳೆಗೆ ಅವಹೇಳನ ಆರೋಪ ಯತ್ನಾಳ್ ವಿರುದ್ಧ FIR


    ವಿಚಾರಣೆ ಸಮಯದಲ್ಲಿ ಯತ್ನಾಳ್‌ ಪರ ವಕೀಲ ವೆಂಕಟೇಶ ದಳವಾಯಿ, ಸನಾತನ ಧರ್ಮದ ಹೆಣ್ಣು ಮಕ್ಕಳಿಗೆ ಚಾಮುಂಡಿ ತಾಯಿಯನ್ನು ಪೂಜಿಸುವ ಹಕ್ಕಿದೆ. ದಲಿತ ಹೆಣ್ಣುಮಕ್ಕಳರಲಿ ಯಾವುದೇ ಸಮಾಜದವರಿರಲಿ ಎಲ್ಲರಿಗೂ ಹಕ್ಕಿದೆ ಎಂದು ಹೇಳಿರುವ ಹೇಳಿಕೆಯನ್ನು ತಿರುಚಿ ಕೇಸ್‌ ದಾಖಲು ಮಾಡಲಾಗಿದೆ ಎಂದು ವಾದಿಸಿದರು. ಅಷ್ಟೇ ಅಲ್ಲದೇ ಯತ್ನಾಳ್‌ ಅವರು ಹೇಳಿದ ಹೇಳಿಕೆಯನ್ನು ಮೊಬೈಲ್‌ ಮೂಲಕ ಜಡ್ಜ್‌ ಅವರಿಗೂ ಕೇಳಿಸಿದರು.

    ವಿಡಿಯೋ ನೋಡಿದ ಬಳಿಕ ನ್ಯಾ. ಅರುಣ್ ಅವರಿದ್ದ ಏಕಸದಸ್ಯ ಪೀಠ, ಯಾವುದೇ ಪಕ್ಷದವರಿರಲಿ ಒಂದು ಸಮುದಾಯ ಓಲೈಸಿದರೆ ಹೀಗಾಗುತ್ತದೆ. ಭಾರತೀಯರನ್ನು ಭಾರತೀರಂತೆಯೇ ನೋಡಿದರೆ ಈ ಸಮಸ್ಯೆ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟು ಯತ್ನಾಳ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು. ಪೊಲೀಸರ ತನಿಖೆಗೆ ಸಹಕರಿಸಬೇಕು ಎಂದು ಯತ್ನಾಳ್‌ ಅವರಿಗೆ ಸೂಚಿಸಿತು.

  • ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    – ನ್ಯಾಯಾಲಯ ಅಸಿಂಧು ಮಾಡಿರುವುದು ಸರಿಯಲ್ಲ

    ಕೋಲಾರ: ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ (Manjunath Gowda) ಗೆದ್ದರೆ ರಾಜಕೀಯ ಬಿಡುತ್ತೇನೆ ಎಂದು ಮಾಲೂರು ಶಾಸಕ ಕೆವೈ ನಂಜೇಗೌಡ (KY Nanjegowda) ಸವಾಲು ಹಾಕಿದ್ದಾರೆ.

    2023ರ ಮಾಲೂರು (Malur) ಕ್ಷೇತ್ರದ ಮರು ಮತ ಎಣಿಕೆ ನಡೆಸುವಂತೆ ಹೈಕೋರ್ಟ್ (High Court) ತೀರ್ಪು ನೀಡಿರುವ ಕುರಿತು ಕೋಲಾರದಲ್ಲಿ (Kolar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ಬಂದಿದೆ. ನನ್ನ ವಿರುದ್ಧ ಸೋತ ಅಭ್ಯರ್ಥಿ ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು. ರೀ ಕೌಂಟಿಂಗ್ ಕೊಟ್ರೆ ನಾನು ಬದ್ಧ ಎಂದು ಹಲವು ಬಾರಿ ಹೇಳಿದ್ದೆ. ಶಾಸಕ ಸ್ಥಾನವನ್ನು ಅಸಿಂಧುಗೊಳಿಸಲಾಗಿದೆ. ಹೀಗಾಗಿ ನಾನು ಅಪೀಲು ಹಾಕಿದ್ದೇನೆ ಎಂದರು. ಇದನ್ನೂ ಓದಿ: Malur Election | ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತ ಗೆದ್ದವರಿಗೆ ಸೇರಿಸಿದ್ದಾರೆ: ಕೆ.ಎಸ್‌ ಮಂಜುನಾಥ್‌ ಗೌಡ

    ಚುನಾವಣೆ ಪ್ರಕ್ರಿಯೆ ವಜಾ ಮಾಡಿದ ಮೇಲೆ ಚುನಾವಣೆ ಘೋಷಣೆ ಮಾಡಬೇಕಿತ್ತು. ರೀ ಕೌಂಟಿಂಗ್ ಮಾಡಿದ್ದರೆ ನಾನು ತಯಾರಿದ್ದೆ. ನಿಮ್ಮದೇ ಸರ್ಕಾರ, ನಿಮ್ಮದೇ ಮಂತ್ರಿ, ಅಧಿಕಾರಿಗಳು, ನೀವೆ ಕಾವಲಿದ್ದು ಮತ ಎಣಿಕೆ ಮಾಡಿದ್ದು. ವಿವಿ ಪ್ಯಾಟ್ ಕೌಂಟಿಂಗ್ ಮಾಡಿಸಿದ್ರು, ಅವರ ಪ್ರೊಸಿಜರ್ ಪ್ರಕಾರ ಮಾಡಿದ್ರು. ಇವರಿಗೆ ಹುಚ್ವು ಹಿಡಿದಿದೆ, ಜೀವಮಾನದಲ್ಲಿ ಅವರು ಹೊಸಕೋಟೆಯಲ್ಲಿ ಶಾಸಕರಾಗಲು ಸಾಧ್ಯವಿಲ್ಲ. ನ್ಯಾಯಾಲಯ ಅಸಿಂಧು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಮಾಲೂರು ತಾಲೂಕು ತಬ್ಬಲಿಯಾಗಿಲ್ಲ, ಮೂವತ್ತು ದಿನ ಸಮಯಾವಕಾಶ ಕೊಟ್ಟಿದ್ದಾರೆ. ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ದರೆ ರಾಜಕೀಯ ಬಿಡುವೆ. ಮರು ಎಣಿಕೆ ಆಗಲಿ, ಅಸಿಂಧು ವಿರುದ್ಧ ಸುಪ್ರೀಂ ಮೊರೆ ಹೋಗುವೆ. ಅವರ ಪರವಾಗಿ ಕೆಲ ಹುಚ್ಚರಿದ್ದಾರೆ, ಅವರು ಪಟಾಕಿ ಹೊಡೆದು ಸಿಹಿ ಹಂಚಿದ್ದಾರೆ. ಅವರೇನು ಶಾಸಕರಾಗಿದ್ದಾರಾ? ಇಲ್ಲವಲ್ಲಾ, ಯಾರೋ ಕೆಲವರು ಸಂಭ್ರಮ ಮಾಡಿದ್ದಾರೆ. ಮಂಜುನಾಥ್ ಗೌಡ ಹಗಲು ಕನಸು ಕಾಣುತ್ತಿದ್ದಾರೆ, ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಚಿತ್ರ ಪ್ರದರ್ಶನ, ರಕ್ತದಾನ ಶಿಬಿರ – ಸಮಾಜಸೇವಾ ಕಾರ್ಯಗಳೊಂದಿಗೆ ಮೋದಿ ಜನ್ಮದಿನಾಚರಣೆ

  • ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ವಿಚಾರ – ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್

    ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ವಿಚಾರ – ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್

    ಬೆಂಗಳೂರು:ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ (Multiplex) ದರ ನಿಗದಿ ವಿಚಾರ ಸಂಬಂಧ ಮಧ್ಯಂತರ ಆದೇಶವನ್ನ ಹೈಕೋರ್ಟ್ (High Court) ಕಾಯ್ದಿರಿಸಿದೆ.

    200 ರೂ.ಗೆ ಚಿತ್ರ ಪ್ರದರ್ಶನ ಮಾಡಿದ್ರೆ ನಷ್ಟ ಉಂಟಾಗುತ್ತೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಮಲ್ಟಿಪ್ಲೆಕ್ಸ್‌ಗಳ ಪರವಾಗಿ ಮುಕುಲ್ ರೋಹ್ಟಗಿ ವಾದಿಸಿ, ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ‍್ಯ ಉಲ್ಲಂಘನೆಯಾಗಿದೆ. 2017ರಲ್ಲಿಯೂ ಸರ್ಕಾರ ಇದೇ ರೀತಿಯ ಆದೇಶ ಹೊರಡಿಸಿದ್ದಾಗ ಹೈಕೋರ್ಟ್ ರದ್ದುಪಡಿಸಿತ್ತು. ಟಿಕೆಟ್ ಖರೀದಿಸಿ ಚಿತ್ರ ನೋಡುವುದು ಗ್ರಾಹಕನಿಗೆ ಬಿಟ್ಟದ್ದು, ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲವೆಂದು ವಾದ ಮಂಡಿಸಿದರು. ಇದನ್ನೂ ಓದಿ: ಎಸ್‌ಟಿಗೆ ಕುರುಬ – ಮಹತ್ವದ ಸಭೆ ಕರೆದ ವಾಲ್ಮೀಕಿ ಸಮುದಾಯ

    ಹೊಂಬಾಳೆ ಫಿಲಂಸ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿ, ಜಿಎಸ್‌ಟಿ ಹೊರತುಪಡಿಸಿದ ಟಿಕೆಟ್ ದರ 200 ರೂ. ನಿಗದಿಪಡಿಸಲಾಗಿದೆ. ಇದು ವಿವೇಚನೆಯಿಲ್ಲದೇ ಸರ್ಕಾರ ಕೈಗೊಂಡ ನಿರ್ಧಾರ. ಸಿನಿಮಾ ನಿರ್ಮಿಸಲು ಎಷ್ಟೆಲ್ಲಾ ಶ್ರಮ, ಬಂಡವಾಳ ಬೇಕಾಗುತ್ತದೆ. ಅಂಕಿ ಅಂಶ ಸಂಗ್ರಹಿಸದೇ ಸರ್ಕಾರದ ಸ್ವೇಚ್ಚೆಯ ನಿರ್ಧಾರವಾಗಿದೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ, ಕೂಡಲೇ ಕೈಬಿಡಿ: ಆರ್.ಅಶೋಕ್

    ಈ ಮಧ್ಯೆ, 200 ರೂ. ನಿಗದಿ ಮಾಡಿರೋದು ಒಳ್ಳೆಯ ನಿರ್ಧಾರ ಅಂತ ನಿರ್ಮಾಪಕಿ ಪ್ರಿಯಾ ಹಾಸನ್, ನಿರ್ಮಾಪಕರಾದ ಎ ಗಣೇಶ್, ಚಿಂಗಾರಿ ಮಹದೇವ್ ಹೇಳಿದ್ದಾರೆ. ಅಲ್ಲದೇ ಕೋರ್ಟ್ ಮೆಟ್ಟಿಲೇರಿರುವವರು ಅರ್ಜಿ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ನಾವೂ ಕಾನೂನು ಹೋರಾಟ ಮಾಡುತ್ತೇವೆ ಎಂದು ಫಿಲ್ಮ್ ಚೇಂಬರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ | ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ!

  • 4.8 ಕೋಟಿ ಪತ್ತೆ ಕೇಸ್‌ – ಸುಧಾಕರ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌, FIR ರದ್ದು

    4.8 ಕೋಟಿ ಪತ್ತೆ ಕೇಸ್‌ – ಸುಧಾಕರ್‌ಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌, FIR ರದ್ದು

    ಬೆಂಗಳೂರು: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ ಕೆ ಸುಧಾಕರ್‌ಗೆ (Dr Sudhakar) ಹೈಕೋರ್ಟ್‌ (High Court) ಬಿಗ್ ರಿಲೀಫ್ ನೀಡಿದೆ.

    ಲೋಕಸಭಾ ಚುನಾವಣೆ (Loksabha Election) ವೇಳೆ ಮಾದನಾಯಕನಹಳ್ಳಿ ಮನೆಯಲ್ಲಿ 4.8 ಕೋಟಿ ರೂ. ಪತ್ತೆಯಾಗಿತ್ತು. ಹಣ ಕೆ ಸುಧಾಕರ್ ಗೆ ಸೇರಿದ್ದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.

    ಈ ಪ್ರಕರಣ ರದ್ದು ಕೋರಿ ಡಾ.ಕೆ. ಸುಧಾಕರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರುಣ್ ಅವರಿದ್ದ ಏಕಸದಸ್ಯ ಪೀಠ ಎಫ್‌ಐಆರ್‌ ರದ್ದುಗೊಳಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಏನಿದು ಪ್ರಕರಣ?
    ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಹಿಂದಿನ ದಿನ ಚುನಾವಣಾ ಆಯೋಗದ ಅಧಿಕಾರಿಗಳು ಗೋವಿಂದಪ್ಪ ಅವರ ಮನೆಯಿಂದ 4.8 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದರು. ಈ ಹಣ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶದಿಂದ ಇರಲಿಸಲಾಗಿತ್ತು ಎಂದು ಆರೋಪಿಸಲಾಗಿತ್ತು.

    ಈ ವಿಚಾರವಾಗಿ ಚುನಾವಣಾ ನೀತಿ ಸಂಹಿತೆ ಜಾರಿಯ ರಾಜ್ಯ ನೋಡಲ್ ಅಧಿಕಾರಿಯಾಗಿದ್ದ ಮನೀಶ್ ಮೌದ್ಗಿಲ್ ಅವರಿಗೆ ಸುಧಾಕರ್ ಅವರು ವಾಟ್ಸಾಪ್‌ ಮೆಸೇಜ್ ಮಾಡಿದ್ದರು ಎನ್ನಲಾಗಿತ್ತು. ಪ್ರಕರಣದ ಕುರಿತು ಚುನಾವಣಾ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು ನೆಲಮಂಗಲ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸುಧಾಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

  • ಸೋನು ನಿಗಮ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಪೊಲೀಸರು

    ಸೋನು ನಿಗಮ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಪೊಲೀಸರು

    ಬೆಂಗಳೂರು: ಗಾಯಕ ಸೋನು ನಿಗಮ್‌ಗೆ (Sonu Nigam) ಶಾಕ್ ಕೊಡಲು ಅವಲಹಳ್ಳಿ ಪೊಲೀಸರು (Avalahalli Police) ಮುಂದಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ್ದಕ್ಕೆ ಈಗ ಪೊಲೀಸರು ಕಾನೂನು ಸಮರ ಆರಂಭಿಸಲು ಮುಂದಾಗಿದ್ದಾರೆ.

    ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋನು ನಿಗಮ್‌ ಅವರಲ್ಲಿ ಕನ್ನಡ ಹಾಡನ್ನು ಹಾಡುವಂತೆ  ಕನ್ನಡ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದರು.

     

    ಈ ಬೇಡಿಕೆಗೆ ಕನ್ನಡವನ್ನು ಪಹಲ್ಗಾಮ್ ದಾಳಿಗೆ (Pahalgam Attack) ಹೋಲಿಸಿ ಸೋನು ನಿಗಮ್ ಮಾತನಾಡಿದ್ದರು. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು.  ಬೆನ್ನಲ್ಲೇ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಯಕ ಸೋನು ನಿಗಮ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.  ಇದನ್ನೂ ಓದಿ: ನನ್ನ ಆತ್ಮೀಯ ಸ್ನೇಹಿತ ಮೋದಿ ಜೊತೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಟ್ರಂಪ್

    ಕೋರ್ಟ್ ಮೊರೆ ಹೋಗಿದ್ದರಿಂದ ಬಂಧನ ಮಾಡಬಾರದು ಸೋನು ನಿಗಮ್ ತನಿಖೆಗೆ ಸಹಕಾರ ನೀಡಬೇಕೆಂದು ಹೈ ಕೋರ್ಟ್ ಆದೇಶ ನೀಡಿತ್ತು. ಈ ಆದೇಶದ ಅನ್ವಯ ಅವಲಹಳ್ಳಿ ಪೊಲೀಸರು ತನಿಖೆ ಹಾಜರಾಗುವಂತೆ ನಾಲ್ಕು ಬಾರಿ ಸೋನು ನಿಗಮ್‌ಗೆ ನೋಟಿಸ್ ಕೊಟ್ಟಿದ್ದಾರೆ.

    ನೋಟಿಸ್ ಅಲ್ಲದೇ ಪೋನ್ ಕರೆ ಮಾಡಿ ತನಿಖೆಗೆ ಸಮಯ ಅವಕಾಶ ಕೊಡುವಂತೆ ಮನವಿ ಮಾಡಿದ್ದರು. ಪೊಲೀಸರ ಫೋನ್‌ ಕರೆ ಮಾಡಿ ತಿಳಿಸಿದ್ದರೂ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಅವಲಹಳ್ಳಿ ಪೊಲೀಸರು ಹೈಕೋರ್ಟ್ ಮಧ್ಯಂತರ ಆದೇಶ ತೆರವು ಮಾಡಿಸಲು ಅಡ್ವೊಕೇಟ್‌ ಜನರಲ್‌ ಅವರಿಗೆಪತ್ರ ಬರೆಯಲು ಮುಂದಾಗಿದ್ದಾರೆ.

  • ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ – ಹೆಚ್‌ಡಿಕೆಗೆ ಹೈಕೋರ್ಟ್ ಶಾಕ್

    ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ – ಹೆಚ್‌ಡಿಕೆಗೆ ಹೈಕೋರ್ಟ್ ಶಾಕ್

    ಬೆಂಗಳೂರು: ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ (H.D.Kumaraswamy) ಹೈಕೋರ್ಟ್ ಶಾಕ್ ಕೊಟ್ಟಿದೆ.

    ಎಸ್‌ಐಟಿ ರಚನೆಗೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಈ ಆದೇಶಕ್ಕೆ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಷಿ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿದೆ. ನವೆಂಬರ್ 26 ರವರೆಗೆ ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಇದನ್ನೂ ಓದಿ: ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣ – ಹೆಚ್‌ಡಿಕೆಗೆ ಬಿಗ್ ರಿಲೀಫ್

    ಜಮೀನು ಒತ್ತುವರಿ ಆರೋಪ ಪ್ರಕರಣ ಸಂಬಂಧ ಎಸ್ಐಟಿ ರಚನೆಗೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

    6 ಎಕರೆ ಒತ್ತುವರಿ ತೆರವಿಗೆ ಸರ್ಕಾರ ಕ್ರಮ ಕೈಗೊಂಡಿದೆ. ದಾಖಲೆಗಳನ್ನು ಹಾಜರುಪಡಿಸುವಂತೆ ಎಸ್ಐಟಿ ನೋಟಿಸ್ ಜಾರಿಗೊಳಿಸಿದೆ. ಆದರೆ, ಎಸ್ಐಟಿ ರಚನೆಗೆ ಏಕಸದಸ್ಯ ಪೀಠ ತಡೆ ನೀಡಿದೆ. ಹೀಗಾಗಿ, ತಡೆಯಾಜ್ಞೆ ತೆರವಿಗೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು.

    ಈಗ ಹೈಕೋರ್ಟ್ ಆದೇಶದಿಂದ ಎಸ್ಐಟಿ ತನಿಖೆ ಮುಂದುವರಿಯಲಿದೆ. ಇದನ್ನೂ ಓದಿ: ಕೇತಗಾನಹಳ್ಳಿ‌ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ; ಹೆಚ್‌ಡಿಕೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂ

  • ನಿಸಾರ್ ಅಹಮದ್ ದಸರಾ ಉದ್ಘಾಟಿಸಿದಾಗ ಕೋರ್ಟ್‌ಗೆ ಹೋಗಿಲ್ಲ ಯಾಕೆ?: ಸಿಂಹಗೆ ಸಿಎಂ ತಿರುಗೇಟು

    ನಿಸಾರ್ ಅಹಮದ್ ದಸರಾ ಉದ್ಘಾಟಿಸಿದಾಗ ಕೋರ್ಟ್‌ಗೆ ಹೋಗಿಲ್ಲ ಯಾಕೆ?: ಸಿಂಹಗೆ ಸಿಎಂ ತಿರುಗೇಟು

    ವಿಜಯಪುರ: ನಿಸಾರ್ ಅಹಮದ್ (Nissar Ahmed) ದಸರಾ ಉದ್ಘಾಟನೆ ಮಾಡಿದಾಗ ಯಾಕೆ ನ್ಯಾಯಾಲಯಕ್ಕೆ (Court) ಹೋಗಿಲ್ಲ ಎಂದು ಸಿದ್ದರಾಮಯ್ಯ (CM Siddaramaiah) ತಿರುಗೇಟು ನೀಡಿದ್ದಾರೆ.

    ಮೈಸೂರು ದಸರಾ (Mysuru Dasara) ಉದ್ಘಾಟನೆಯನ್ನು ಬಾನು ಮುಷ್ತಾಕ್ (Banu Mushtaq) ಮಾಡುತ್ತಿರುವುದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಹೈಕೋರ್ಟ್‌ನಲ್ಲಿ (High Court) ಅರ್ಜಿ ಸಲ್ಲಿಸಿದ ವಿಚಾರಕ್ಕೆ ಅವರು ಆಲಮಟ್ಟಿ ಜಲಾಶಯದ ಬಳಿ ಪ್ರತಿಕ್ರಿಯಿಸಿದರು.

    ಪ್ರತಾಪ್ ಸಿಂಹ ಕೋರ್ಟ್‌ ಮೆಟ್ಟಿಲೇರಿದ್ದು ಬಹಳ ಸಂತೋಷ. ನಮ್ಮ ನಿರ್ಧಾರವನ್ನು ಕೋರ್ಟ್‌ ತೀರ್ಮಾನ ಮಾಡುತ್ತದೆ. ಈ ಅರ್ಜಿಗೆ ಕೋರ್ಟ್‌ ಪ್ರೋತ್ಸಾಹ ನೀಡುವುದಿಲ್ಲ ಎಂದರು. ಇದನ್ನೂ ಓದಿ:  ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

     

    ಬಾನು ಮುಷ್ತಾಕ್ ಬರೆದ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ (Booker Award) ಬಂದಿದೆ. ಬೂಕರ್ ಪ್ರಶಸ್ತಿಯನ್ನ ಅನುವಾದಕರು ಬರಹಗಾರಿಗೆ ಹಂಚಲಾಗಿದೆ. ಬಿಜೆಪಿಯವರು ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

    ಬಾನು ಮುಷ್ತಾಕ್ ಕನ್ನಡಾಂಬೆಗೆ, ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂಬ ಪ್ರಶ್ನೆಗೆ ಸಾಕ್ಷ್ಯ ಎಲ್ಲಿ ಎಂದು ಪ್ರಶ್ನಿಸಿ ಲೇಖಕಿಯ ಆಯ್ಕೆಯನ್ನು ಸಮರ್ಥಿಸಿಕೊಂಡರು.

  • ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

    ಬೆಂಗಳೂರು: ನಾಡಹಬ್ಬ ದಸರಾ (Dasara) ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನದ ವಿಚಾರ ರಾಜಕೀಯದಿಂದ ಕಾನೂನು ಹೋರಾಟಕ್ಕೆ ತಿರುವು ಪಡೆದಿದೆ. ಬಾನು ಮುಷ್ತಾಕ್ (Banu Mushtaq) ಆಹ್ವಾನ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಹೌದು, ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ (High Court) ಮೆಟ್ಟಿಲೇರಿದ ಪ್ರತಾಪ್ ಸಿಂಹ, ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಜೊತೆಗಿನ ಯುದ್ಧ ಮೇ 10ಕ್ಕೆ ಕೊನೆಗೊಂಡಿಲ್ಲ: ಭಾರತೀಯ ಸೇನಾ ಮುಖ್ಯಸ್ಥ

    ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಬಾನು ಮುಷ್ತಾಕ್ ಅವರ ಆಯ್ಕೆ ಮಾಡಿದೆ. ಮೈಸೂರಿನ ರಾಜಮನೆತನದವರೂ ಸರ್ಕಾರದ ನಡೆ ವಿರೋಧಿಸಿದ್ದಾರೆ. ಆದರೂ ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡಿದ್ದಾರೆ. ಹೀಗಾಗಿ ಬಾನು ಮುಷ್ತಾಕ್ ಅವರಿಗೆ ನೀಡಿದ ಆಹ್ವಾನ ಹಿಂಪಡೆಯುವಂತೆ ನಿರ್ದೇಶಿಸಲು ಮನವಿ ಮಾಡಿದ್ದಾರೆ. ಈ ವಿಚಾರ ಇನ್ನಷ್ಟೇ ಹೈಕೋರ್ಟ್ ಅಲ್ಲಿ ವಿಚಾರಣೆಗೆ ಬರಬೇಕಿದೆ. ಇದನ್ನೂ ಓದಿ: ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ