Tag: ಹೇರ್ ಸ್ಪಾ

  • ಒರಟು, ನಿರ್ಜೀವ ತಲೆಕೂದಲಿಗೆ ಮನೆಯಲ್ಲೇ ಜೀವ ತುಂಬಿ!

    ಒರಟು, ನಿರ್ಜೀವ ತಲೆಕೂದಲಿಗೆ ಮನೆಯಲ್ಲೇ ಜೀವ ತುಂಬಿ!

    ಬೆಂಗಳೂರು: ತಲೆಕೂದಲು ಹೇಗೆ ಇರಲಿ ಅದನ್ನು ಕೇರ್ ಮಾಡುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಕೂದಲನ್ನು ಆರೈಕೆ ಮಾಡದಿದ್ದರೆ ಆರೋಗ್ಯಕರ ಕೂದಲು ಕೂಡ ಹಾಳಾಗಿ ಹೋಗುತ್ತದೆ. ಆರೋಗ್ಯಕರ ಕೂದಲು ಹಾಗೂ ಅದರ ಪೋಷಣೆಗೆಂದು ಮಹಿಳೆಯರು ಹೇರ್ ಸ್ಪಾ ಹೋಗುತ್ತಾರೆ. ಹೇರ್ ಸ್ಪಾಗೆ ಹೋಗಿಯೇ ಕೂದಲನ್ನು ರಕ್ಷಣೆ ಮಾಡಬೇಕಾಗಿಲ್ಲ. ಮನೆಯಲ್ಲೇ ಸರಳ ವಿಧಾನದ ಮೂಲಕ ಕೂದಲಿಗೆ ಜೀವ ತುಂಬ ಬಹುದು. ಯಾವ ರೀತಿ ಕೂದಲನ್ನು ಚೆನ್ನಾಗಿ ಮಾಡಬಹುದು ಎನ್ನುವ ಸರಳ ವಿವರಣೆ ಇಲ್ಲಿದೆ.

    1. ಹೇರ್ ಸ್ಪಾಗಾಗಿ ಮೊದಲು ನೆತ್ತಿ(ಸ್ಕ್ಯಾಲ್ಪ್)ಗೆ ಲೈಟಾಗಿ ಬಿಸಿ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಮಸಾಜ್ ವೇಳೆ ನಿಮ್ಮ ಗಮನ ತಲೆಕೂದಲ ಬದಲು ನೆತ್ತಿ ಮೇಲೆ ಇರಬೇಕು.

    2. ಆಯಿಲಿಂಗ್ ನಂತರ ಸ್ವಚ್ಛವಾದ ಟವೆಲ್ ತೆಗೆದುಕೊಂಡು ಬಿಸಿ ನೀರಿನಲ್ಲಿ ಹಾಕಿ ಅದನ್ನು ಚೆನ್ನಾಗಿ ಹಿಂಡಬೇಕು. ನಂತರ ಆ ಟವೆಲ್ ಅನ್ನು 10 ರಿಂದ 15 ನಿಮಿಷದವರೆಗೂ ತಲೆಕೂದಲಿಗೆ ಕಟ್ಟಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಪೋರ್ಸ್(ತಲೆಯಲ್ಲಿರುವ ಚಿಕ್ಕ ಚಿಕ್ಕ ರಂಧ್ರಗಳು) ಓಪನ್ ಆಗುತ್ತದೆ. ಈ ವೇಳೆ ಅದು ನೀವು ಕೂದಲಿಗೆ ಹಾಕಿದ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

    3. ತಲೆಕೂದಲಿಗೆ ಎಣ್ಣೆ ಹಾಗೂ ಸ್ಟೀಮ್ ಕೊಟ್ಟ ನಂತರ ಕೂದಲಿಗೆ ಜೆಂಟಲ್ ಶ್ಯಾಂಪೂ ಹಾಕಬೇಕು.

    4. ಶ್ಯಾಂಪೂ ಹಾಕಿದ ನಂತರ ತಲೆಕೂದಲಿಗೆ ಕಂಡಿಶನರ್ ಹಾಕುವುದನ್ನು ಮರೆಯಬೇಡಿ. ಕಂಡಿಶನರ್ ಹಾಕುವುದರಿಂದ ನಿಮ್ಮ ತಲೆಕೂದಲು ಮಾಯಿಶ್ಚರಸ್ ಆಗಿರಲು ಸಹಾಯ ಮಾಡುತ್ತದೆ. ಕೂದಲಿಗೆ ಕಂಡಿಶನರ್ ಹಚ್ಚಿ ಅದನ್ನು 10 ನಿಮಿಷ ಬಿಡಬೇಕು. ನಂತರ ನೀರಿನಿಂದ ತಲೆಕೂದಲನ್ನು ಚೆನ್ನಾಗಿ ತೊಳೆಯಬೇಕು.

    ವಿಶೇಷ ಸೂಚನೆ: ಕಂಡಿಶನರ್ ಬಳಸುವಾಗ ಕ್ವಾಲಿಟಿ ಇರುವ ಕಂಡಿಶನರ್ ಬಳಸಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv