Tag: ಹೇರ್ ಸ್ಟೈಲಿಸ್ಟ್

  • ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ – ಕಂಗನಾ ಹೇರ್ ಸ್ಟೈಲಿಸ್ಟ್ ಬಂಧನ

    ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ – ಕಂಗನಾ ಹೇರ್ ಸ್ಟೈಲಿಸ್ಟ್ ಬಂಧನ

    ಹೈದರಾಬಾದ್: 16 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಕೇಶ ವಿನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ.

    ಬ್ರ್ಯಾಂಡನ್ ಅಲಿಸ್ಟರ್ ಡಿ ಗೀ(42) ಬಂಧಿಸಿರುವ ಕೇಶ ವಿನ್ಯಾಸಕ. ಈತ ದಕ್ಷಿಣ ಆಫ್ರಿಕಾದದಲ್ಲಿ ಕೇಶ ವಿನ್ಯಾಸಕನಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದನು. ಕಂಗನಾ ಅವರ ಮುಂದಿನ ‘ಮಣಿಕರ್ಣಿಕಾ’ ಸಿನಿಮಾದ ಶೂಟಿಂಗ್ ಮಹಾರಾಷ್ಟ್ರದ ರಾಯ್ಗಡ ಜಿಲ್ಲೆಯಲ್ಲಿ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಶೂಟಿಂಗ್ ಸೆಟ್ ಗೆ ಬಂದು ಬ್ರ್ಯಾಂಡನ್ ನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    16 ವರ್ಷದ ಬಾಲಕ ಸಾಮಾಜಿಕ ಜಾಲತಾಣದ ಡೇಟಿಂಗ್ ಆ್ಯಪ್ ನಲ್ಲಿ ತನ್ನ ವಯಸ್ಸು 18 ದಾಟಿದೆ ಎಂದು ಸುಳ್ಳು ಹೇಳಿ ಸೇರಿದ್ದನು. ಈ ಆ್ಯಪ್ ಮೂಲಕ ಆರೋಪಿ ಬ್ರ್ಯಾಂಡನ್ ಪರಿಚಯವಾಗಿದ್ದನು. ಆದರೆ ಆತ ಅನೇಕ ಪುರುಷರ ಜತೆ ಸಂಬಂಧ ಕೂಡ ಬೆಳಸಿದ್ದನು. ಒಂದು ದಿನ ಬಾಲಕನ ರೂಮಿನಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಇರುವುದನ್ನು ತಾಯಿ ನೋಡಿದ್ದಾರೆ. ನಂತರ ಬಾಲಕ ತಾನು ಅನೇಕ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೂಡಲೇ ಈ ಬಗ್ಗೆ ಬಾಲಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಖಾರ್ ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿ ಬ್ರ್ಯಾಂಡನ್ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಕೋರ್ಟ್ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಕೋರ್ಟ್ ಅಕ್ಟೋಬರ್ 3 ರವರೆಗೆ ಬ್ರ್ಯಾಂಡನ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಕ ಮತ್ತು ಉದ್ಯಮಿ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೀರಿಯಲ್ ಶೂಟಿಂಗ್ ಸ್ಪಾಟ್ ನಲ್ಲಿ ಹೇರ್ ಸ್ಟೈಲಿಸ್ಟ್ ಮೇಲೆ ಹಲ್ಲೆ!

    ಸೀರಿಯಲ್ ಶೂಟಿಂಗ್ ಸ್ಪಾಟ್ ನಲ್ಲಿ ಹೇರ್ ಸ್ಟೈಲಿಸ್ಟ್ ಮೇಲೆ ಹಲ್ಲೆ!

    ಬೆಂಗಳೂರು: ಖಾಸಗಿ ವಾಹಿನಿಯ ಪತ್ತೆದಾರಿ ಪ್ರತಿಭಾ ಸೀರಿಯಲ್ ಶೂಟಿಂಗ್ ಸ್ಪಾಟ್ ನಲ್ಲಿ ಮಹಿಳೆಯೊಬ್ಬಳು ಹೇರ್ ಸ್ಟೈಲಿಸ್ಟ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಸುರೇಶ್ ಹೈರ್ ಸ್ಟೈಲಿಸ್ಟ್ ಆಗಿದ್ದು, ಅವರ ಮೇಲೆ ಮನೆಯ ಒಡತಿ ಹಲ್ಲೆ ನಡೆಸಿದ್ದಾರೆ. ಹಲವು ದಿನದಿಂದ ಕನಕಪುರ ರಸ್ತೆಯಲ್ಲಿ ಪತ್ತೆಧಾರಿ ಪ್ರತಿಭಾ ಧಾರಾವಾಹಿ ಶೂಟಿಂಗ್ ನಡೆಯುತ್ತಿತ್ತು. ಮನೆಯನ್ನು ಬಾಡಿಗೆ ಪಡೆದುಕೊಂಡು ಶೂಟಿಂಗ್ ನಡೆಸಲಾಗುತ್ತಿತ್ತು.

    ಈ ಸಂದರ್ಭದಲ್ಲಿ ಏಕಾಏಕಿ ಮನೆಯ ಒಡತಿ ಮಮತಾ ಕ್ಯಾತೆ ತೆಗೆದಿದ್ದಾರೆ ಅಂತ ಎನ್ನಲಾಗಿದೆ. ಚಪ್ಪಲಿ ಹೊರಗೆ ಬಿಟ್ಟು ಬರುವಂತೆ ಹೇಳಿ ಅವಾಜ್ ಹಾಕಿ, ನಂತರ ಮಮತಾ ಹೇರ್ ಸ್ಟೈಲಿಸ್ಟ್ ಸುರೇಶ್ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ.

    ಮಮತಾ ಸೀರಿಯಲ್ ಸೆಟ್ ನಲ್ಲಿರುವವರ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಮಮತಾ ದೌರ್ಜನ್ಯವನ್ನು ಖಂಡಿಸಿ ಸೀರಿಯಲ್ ತಂಡ ಶೂಟಿಂಗ್ ನಿಲ್ಲಿಸಿದ್ದಾರೆ. ಅಲ್ಲದೇ ಹಲ್ಲೆಗೆ ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.