Tag: ಹೇರ್ ಸ್ಟೇಲ್

  • ಪಾಕ್ ವಿರುದ್ಧ ಗೆಲುವಿನ ನಂತರ ಹೇರ್ ಸ್ಟೈಲ್ ಬದಲಿಸಿದ ಇಂಡಿಯಾ ಆಟಗಾರರು

    ಪಾಕ್ ವಿರುದ್ಧ ಗೆಲುವಿನ ನಂತರ ಹೇರ್ ಸ್ಟೈಲ್ ಬದಲಿಸಿದ ಇಂಡಿಯಾ ಆಟಗಾರರು

    ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ 89 ರನ್‍ಗಳ ಜಯಗಳಿಸಿರುವ ಭಾರತ ತಂಡ ಈಗ ಜಾಲಿ ಮೂಡ್‍ನಲ್ಲಿದೆ. ಪಾಕ್ ವಿರುದ್ಧದ ಗೆಲುವಿನ ನಂತರ ಇಂಡಿಯಾ ಆಟಗಾರರು ಕೂಲ್ ಹೇರ್ ಸ್ಟೈಲ್ ಮಾಡಿಸಿ ಮಿಂಚುತ್ತಿದ್ದಾರೆ.

    ವಿಶ್ವಕಪ್‍ನಲ್ಲಿ ಬಿಡುವಿಲ್ಲದ 11 ದಿನಗಳಲ್ಲಿ 4 ಪಂದ್ಯಗಳನ್ನು ಆಡಿದ ಭಾರತ ತಂಡ, ಬದ್ಧ ವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಐದು ದಿನಗಳ ವಿರಾಮವನ್ನು ಸಂಪೂರ್ಣವಾಗಿ ಬಳಸಿಕೊಂಡು ಶನಿವಾರ ಅಫ್ಘಾನಿಸ್ತಾನದ ವಿರುದ್ಧ ಪಂದ್ಯಕ್ಕೂ ಮುನ್ನ ಲಂಡನ್‍ನಲ್ಲಿ ಬಗೆ ಬಗೆಯ ಹೇರ್ ಸ್ಟೈಲ್ ಮಾಡಿಸಿಕೊಳ್ಳುತ್ತಿದ್ದಾರೆ.

    https://www.instagram.com/p/By5aQMTAMcS/?utm_source=ig_embed

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್ ಧೋನಿ, ಹಾರ್ದಿಕ್ ಪಾಂಡ್ಯ ಮತ್ತು ಯುಜ್ವೇಂದ್ರ ಚಾಹಲ್ ಅವರು ತಮ್ಮ ಕೇಶವಿನ್ಯಾಸವನ್ನು ಬದಲಿಸಿದ್ದಾರೆ. ಇನ್ನೂ ಹಾರ್ದಿಕ್ ಪಾಂಡ್ಯ ಮತ್ತು ಧೋನಿ ಅವರು ಹೇರ್ ಸ್ಟೈಲ್ ಮಾಡಿರುವ ಪ್ರಸಿದ್ಧ ಕೇಶವಿನ್ಯಾಸಗಾರ ಅಲಿಮ್ ಹಕೀಮ್ ಅವರು ಬುಧವಾರ ಈ ಫೋಟೊವನ್ನು ಟ್ವಿಟ್ಟರ್‍ ನಲ್ಲಿ ಹಂಚಿಕೊಂಡಿದ್ದಾರೆ.

    ವಿರಾಟ್ ಕೊಹ್ಲಿ ಮತ್ತು ಚಾಹಲ್ ಅವರು ಕೂಡ ತಮ್ಮ ಹೊಸ ಹೇರ್ ಸ್ಟೈಲ್‍ನನ್ನು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಶಾರ್ಟ್ ಹೇರ್‍ನೊಂದಿಗೆ ಸ್ಪೋರ್ಟ್ಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೇರ್ ಸ್ಟೈಲ್ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದೆ.

    ಭಾನುವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್‍ನಲ್ಲಿ ಆಡಿದ 4 ಪಂದ್ಯದಲ್ಲಿ 3 ರಲ್ಲಿ ಜಯಗಳಿಸಿ ಒಂದು ಪಂದ್ಯ ಮಳೆಯಿಂದ ರದ್ದು ಆಗಿದೆ. ಇನ್ನೂ ಸೆಮಿ ಫೈನಲ್ ತಲುಪುವ ಹಾದಿಯಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನದ ವಿರುದ್ಧ ಸೌಥಾಂಪ್ಟನ್‍ನಲ್ಲಿ ಶನಿವಾರ ಆಡಲಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪುನೀತ್ ಹೊಸ ಹೇರ್ ಸ್ಟೈಲ್ ಫೋಟೋ ವೈರಲ್ – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ಪುನೀತ್ ಹೊಸ ಹೇರ್ ಸ್ಟೈಲ್ ಫೋಟೋ ವೈರಲ್ – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಹೊಸ ಹೇರ್ ಸ್ಟೈಲ್ ಫೋಟೋ ಇದೀಗ ಹೆಚ್ಚು ವೈರಲ್ ಆಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

    ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ಡಾ.ರಾಜ್ ಹಾದಿಯಲ್ಲಿ ಸಾಗುವ ಭರವಸೆ ಮೂಡಿಸಿದ್ದರು. ಆದರೆ ಪುನೀತ್ ಅವರಿಗೆ ಇಂತಹ ಹೇರ್ ಸ್ಟೈಲ್ ಬೇಕಾ? ಹೇರ್ ಸ್ಟೈಲ್ ಎಂನ್ನುವುದು ವೈಯಕ್ತಿಕ ವಿಚಾರವಾದರೂ ಪುನೀತ್ ಅವರಲ್ಲಿ ರಾಜ್ ಇದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಸಿನಿಮಾ ನಟನೆಯಲ್ಲಿ ಇದೆಲ್ಲಾ ಓಕೆ. ಆದರೆ ನಿಜ ಜೀವನದಲ್ಲಿ ಬೇಕೇ ಎಂದು ಪ್ರಶ್ನಿಸಿ ಪುನೀತ್ ಹೇರ್ ಸ್ಟೈಲ್ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

    ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಆಕ್ಷೇಪ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯವನ್ನು ಬರೆದುಕೊಂಡಿದೆ. “ನಮ್ಮೆಲ್ಲರ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿ ಡಾ|| ರಾಜ್ ರ ಹಾದಿಯಲ್ಲಿ ಸಾಗುವ ಭರವಸೆ ಮೂಡಿಸಿದ್ದ, ರಾಜ್ ರ ಹೆಸರನ್ನು ಚಿರಸ್ಥಾಯಿ ಮಾಡುವ ತಾಕತ್ತುಳ್ಳ ಪುನೀತ್ ಗೆ ಇಂತಹ ಹೇರ್ ಸ್ಟೈಲ್ ಬೇಕಾ? ಸುದೀಪ್ ರನ್ನು ಅನುಸರಿಸಿದ ಯುವಕರ ದಂಡು ಅರ್ಧ ಕತ್ತರಿಸಿ ಇನ್ನರ್ಧ ಹಾಗೆ ಬಿಟ್ಟಿದ್ದರು. ಇದೀಗ ಪುನೀತ್ ಅವರ ಸರದಿ. ಹೇರ್ ಸ್ಟೈಲ್ ವಯಕ್ತಿಕ ವಿಚಾರವೇ ಅಗಿದ್ದರೂ ನಿಮ್ಮಲ್ಲೊಬ್ಬ ರಾಜ್ ಇದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಸ್ಟಾರ್ ವಾರ್ ಬಿಟ್ಟು ನೈಜ ನಾಯಕನಾಗುವ ಎಲ್ಲಾ ಅರ್ಹತೆ ನಿಮಗಿದೆ. ಸಿನಿಮಾ, ನಟನೆಯಲ್ಲಿ ಓಕೆ. ನಿಮ್ಮ ನಿಜ ಜೀವನದಲ್ಲಿ ಇದೆಲ್ಲಾ ಬೇಕೆ” ಎಂದು ಪ್ರಶ್ನಿಸಿದ್ದಾರೆ.