Tag: ಹೇರ್ ಕಟಿಂಗ್

  • ಸಲೂನ್ ಶಾಪ್‍ನಲ್ಲಿ ಸೋಂಕಿತ ಕಟಿಂಗ್- ನಂತ್ರ 15ಕ್ಕೂ ಹೆಚ್ಚು ಜನರಿಂದ ಹೇರ್ ‌‍ಕಟ್

    ಸಲೂನ್ ಶಾಪ್‍ನಲ್ಲಿ ಸೋಂಕಿತ ಕಟಿಂಗ್- ನಂತ್ರ 15ಕ್ಕೂ ಹೆಚ್ಚು ಜನರಿಂದ ಹೇರ್ ‌‍ಕಟ್

    – ಮಲೇಷಿಯಾದಿಂದ ಬಂದ ಸೋಂಕಿತನ ಎಡವಟ್ಟು

    ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸಲೂನ್ ಒಂದರಲ್ಲಿ ಕೊರೊನಾ ಸೋಂಕಿತ ಕಟಿಂಗ್ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸಲೂನ್ ಶಾಪ್ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ.

    ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಜಿಲ್ಲೆಯಲ್ಲಿ ಈವರೆಗೆ 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದುವರೆಗೂ ಐವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಕೋಲಾರ ಜಿಲ್ಲೆಗೆ ಹೊರ ರಾಜ್ಯ, ವಿದೇಶದಿಂದ ಬಂದವರಿಂದಲೇ ಕಂಟಕ ಎದುರಾಗುತ್ತಿದೆ. ಸದ್ಯಕ್ಕೆ ಮಲೇಷಿಯಾದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿರುವುದು ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ.

    ಈ ನಡುವೆ ಸಲೂನ್ ಶಾಪ್‍ನಿಂದ ಬಂಗಾರಪೇಟೆಗೆ ಆತಂಕ ಶುರುವಾಗಿದೆ. ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರಕ್ಕೆ ಮಲೇಷಿಯಾದಿಂದ ಬಂದಿದ್ದ ರೋಗಿ 3186 ವ್ಯಕ್ತಿ ಬಂಗಾರಪೇಟೆ ಪಟ್ಟಣದ ಸೂಪರ್ ಜೆಂಟ್ಸ್ ಪಾರ್ಲರ್ ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದ. ಅದಾದ ನಂತರ ಸುಮಾರು 15ಕ್ಕೂ ಹೆಚ್ಚು ಜನ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದು, ಅವರಿಗಾಗಿ ಅಧಿಕಾರಿಗಳು ಹುಡುಕಾಟ ಮಾಡುತ್ತಿದ್ದಾರೆ.

    ಅಲ್ಲದೇ ಆ ದಿನ ಯಾರೆಲ್ಲಾ ಶೇವಿಂಗ್ ಮತ್ತು ಕಟಿಂಗ್ ಮಾಡಿಸಿಕೊಂಡಿದ್ದಾರೋ ಅವರೆಲ್ಲ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕೆಂದು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಣದ ಬೀದಿ ಬೀದಿಯಲ್ಲಿ ಮೈಕ್‍ನಲ್ಲಿ ಅನೌನ್ಸ್ ಮಾಡುತ್ತಿದ್ದಾರೆ. ಈ ಮೂಲಕ ಸಲೂನ್ ಶಾಪ್‍ನಿಂದ ಬಂಗಾರಪೇಟೆ ಪಟ್ಟಣದಲ್ಲಿ ಆತಂಕ ಶುರುವಾಗಿದೆ.

    ಸಲೂನ್ ಮಾಲೀಕರಿಂದ ವಿಭಿನ್ನ ಪ್ರಯತ್ನ:
    ಕೋಲಾರದಲ್ಲಿ ಎಚ್ಚೆತ್ತ ಸಲೂನ್ ಮಾಲೀಕರು ಸಲೂನ್‍ನಲ್ಲಿ ಪಿಪಿಇ ಕಿಟ್ ಧರಿಸಿ ಗ್ರಾಹಕರಿಗೆ ಕಟಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಮಂಜುನಾಥ್ ಹೇರ್ ಕಟಿಂಗ್ ಶಾಪ್‍ನ ಮಾಲೀಕ ವಿಭಿನ್ನ ಪ್ರಯತ್ನ ಮಾಡುತ್ತಿದ್ದು, ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಹೇರ್ ಕಟಿಂಗ್ ಮಾಡುತ್ತಿದ್ದಾರೆ. ಸೋಂಕು ಹರಡದಂತೆ ಸಲೂನ್ ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

  • ಮಗನ ಹೇರ್ ಕಟ್ ಮಾಡಿದ ಸಚಿನ್- ವಿಡಿಯೋ

    ಮಗನ ಹೇರ್ ಕಟ್ ಮಾಡಿದ ಸಚಿನ್- ವಿಡಿಯೋ

    ಮುಂಬೈ: ಬ್ಯಾಟಿಂಗ್ ಕೌಶಲ್ಯದಿಂದ ವಿಶ್ವದಾದ್ಯಂತ ಪ್ರಸಿದ್ಧರಾಗಿರುವ, ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರು ಲಾಕ್‍ಡೌನ್‍ನಿಂದಾಗಿ ಮಗನ ಹೇರ್ ಕಟಿಂಗ್ ಮಾಡಿದ್ದಾರೆ.

    ಈ ಹಿಂದೆ ಸಚಿನ್ ಸ್ವತಃ ತಮ್ಮ ಕೂದಲನ್ನು ಕತ್ತರಿಸಿಕೊಂಡಿದ್ದರು. ಇದಾದ ಒಂದು ತಿಂಗಳ ನಂತರ, ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಹೇರ್ ಕಟ್ ಮಾಡಿದ್ದಾರೆ. ತಮ್ಮ 20 ವರ್ಷದ ಮಗನ ಹೇರ್ ಕಟಿಂಗ್ ಮಾಡುತ್ತಿರುವ ವಿಡಿಯೋವನ್ನು ಲಿಟಲ್ ಮಾಸ್ಟರ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇಂದು ಹಂಚಿಕೊಂಡಿದ್ದಾರೆ. ಜೊತೆಗೆ ಈ ವೇಳೆ ಸಹಾಯಕ್ಕೆ ನಿಂತ ಮಗಳು ಸಾರಾಗೆ ಸಚಿನ್ ಧನ್ಯವಾದ ತಿಳಿಸಿದ್ದಾರೆ.

    ತಂದೆಯಾಗಿ ನೀವು ಎಲ್ಲವನ್ನೂ ಮಾಡಬೇಕಾಗುತ್ತದೆ. ನಿಮ್ಮ ಮಕ್ಕಳೊಂದಿಗೆ ಆಟವಾಡುವುದು, ಅವರೊಂದಿಗೆ ಜಿಮ್ ಮಾಡುವುದು ಅಥವಾ ಅವರ ಕೂದಲನ್ನು ಕತ್ತರಿಸುವುದು ಎಂದು ಸಚಿನ್ ಬರೆದುಕೊಂಡಿದ್ದಾರೆ. ಜೊತೆಗೆ ಕಟಿಂಗ್ ಹೇಗಾದರೂ ನೀನು ಯಾವಾಗಲೂ ಸುಂದರವಾಗಿ ಕಾಣುತ್ತಿಯಾ ಅರ್ಜುನ್. ನನ್ನ ಈ ಸಲೂನ್‍ಗೆ ಸಹಾಯಕಳಾದ ಸಾರಾಗೆ ವಿಶೇಷ ಧನ್ಯವಾದಗಳು ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

    ಕೊರೊನಾವೈರಸ್ ಲಾಕ್‍ಡೌನ್‍ನ ನಾಲ್ಕನೇ ಹಂತವನ್ನು ಘೋಷಿಸಿದ ಬಳಿಕ ಸರ್ಕಾರವು ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದ್ದರೂ, ಸಲೂನ್‍ಗಳನ್ನು ತೆರೆಯಲು ಇನ್ನೂ ಅವಕಾಶ ನೀಡಿಲ್ಲ. ಇದರಿಂದಾಗಿ ಜನರು ತಮ್ಮ ಕುಟುಂಬ ಸದಸ್ಯರಿಗೆ ಹೇರ್ ಕಟಿಂಗ್ ಮಾಡುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲದಂತಾಗಿದೆ. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರು ಮಗ ಅರ್ಜುನ್ ಅವರ ಹೇರ್ ಕಟಿಂಗ್ ಮಾಡಿದ್ದಾರೆ.

    https://www.instagram.com/p/CAXhC5klnr-/

    ಕೇಂದ್ರ ಸರ್ಕಾರವು ಮಾರ್ಚ್ ನಲ್ಲಿ ಮೊದಲ ಹಂತದ ಲಾಕ್‍ಡೌನ್ ಘೋಷಿಸಿದ ಕೆಲವೇ ದಿನಗಳ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕೂದಲನ್ನು ಪತ್ನಿ ಅನುಷ್ಕಾ ಶರ್ಮಾ ಕತ್ತರಿಸಿದ್ದರು.

  • ಕೆಲಸದ ಸಮಯದಲ್ಲೇ ಸಹೋದ್ಯೋಗಿಯ ಹೇರ್ ಕಟಿಂಗ್

    ಕೆಲಸದ ಸಮಯದಲ್ಲೇ ಸಹೋದ್ಯೋಗಿಯ ಹೇರ್ ಕಟಿಂಗ್

    – ಪೇದೆ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ

    ಜೈಪುರ: ಪೊಲೀಸ್ ಪೇದೆಯೊಬ್ಬರು ಕೆಲಸದ ಸಮಯದಲ್ಲೇ ಸಹೋದ್ಯೋಗಿಯ ಹೇರ್ ಕಟಿಂಗ್ ಮಾಡಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ರಾಜಸ್ಥಾನದ ಜೋಧ್‌ಪುರದ ನಾಗೋರಿ ಗೇಟ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ತನ್ನ ಸಹೋದ್ಯೋಗಿಗೆ ಪೊಲೀಸ್ ಪೇದೆ ಕ್ಷೌರ ಮಾಡಿದ್ದಾರೆ. ಪೇದೆಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ: ಆಸ್ಪತ್ರೆಗೆ ಕರೆದೊಯ್ದಿದ್ದ ಪೇದೆಯ ಹೆಸರನ್ನೇ ಮಗುವಿಗಿಟ್ಟ ತಾಯಿ

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ನಾಗೋರಿ ಗೇಟ್ ಠಾಣೆಯ ಅಧಿಕಾರಿ ಜಬ್ಬರ್ ಸಿಂಗ್, “ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೂಲಿ ಕಾರ್ಮಿಕರ ಮಗಳ ಹುಟ್ಟುಹಬ್ಬ ಆಚರಿಸಿದ ಪೊಲೀಸ್

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್‍ಡೌನ್‍ನಿಂದಾಗಿ ಕ್ಷೌರದ ಅಂಗಡಿಗಳು ಮುಚ್ಚಿವೆ. ಹೀಗಾಗಿ ಕೆಲವರು ಕೂದಲು, ಗಡ್ಡ ಕಟ್ ಮಾಡುವುದನ್ನೇ ಬಿಟ್ಟಿದ್ದಾರೆ. ಆದರೆ ಪೊಲೀಸರಿಗೆ ಹೇರ್ ಕಟಿಂಗ್ ಅನಿವಾರ್ಯವಾಗಿದೆ. ಇದರಿಂದಾಗಿ ಸಹೋದ್ಯೋಗಿಯ ಹೇರ್ ಕಟಿಂಗ್ ಮಾಡುವ ಮೂಲಕ ಪೇದೆ ಇತರರಿಗೆ ಮಾದರಿಯಾಗಿದ್ದಾರೆ.

  • ಕೊರೊನಾ ಎಫೆಕ್ಟ್ – ವಿರಾಟ್‍ಗೆ ಅನುಷ್ಕಾ ಹೇರ್ ಕಟಿಂಗ್

    ಕೊರೊನಾ ಎಫೆಕ್ಟ್ – ವಿರಾಟ್‍ಗೆ ಅನುಷ್ಕಾ ಹೇರ್ ಕಟಿಂಗ್

    ನವದೆಹಲಿ: ಕೊರೊನಾ ಎಫೆಕ್ಟ್‌ನಿಂದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ, ನಟಿ ಅನುಷ್ಕಾ ಶರ್ಮಾ ಹೇರ್ ಕಟಿಂಗ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಿದ್ದಾರೆ. ಹೀಗಾಗಿ ಸಿನಿಮಾ ಸೆಲೆಬ್ರಿಟಿಗಳು, ಸ್ಟಾರ್ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಪೈಕಿ ಕೆಲವರು ಕುಟುಂಬದಸ್ಥರ ಜೊತೆಗಿರುವ ಕೆಲವು ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

    ಕ್ಯೂಟ್ ಕಪಲ್ ವಿರುಷ್ಕಾ ಈ ಹಿಂದೆ ವಿಡಿಯೋ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದರು. ಇಂದು ಅನುಷ್ಕಾ ಶರ್ಮಾ ಪತಿ ವಿರಾಟ್ ಅವರಿಗೆ ಹೇರ್ ಕಟಿಂಗ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/B-Q8gWZpYPw/

    ಈ ವಿಡಿಯೋದಲ್ಲಿ ಅನುಷ್ಕಾ ಕತ್ತರಿ ಹಿಡಿದು ವಿರಾಟ್ ಅವರ ಹೇರ್ ಕಟಿಂಗ್ ಮಾಡುತ್ತಾರೆ. ಬಳಿಕ ವಿರಾಟ್, ಪತ್ನಿ ಅನುಷ್ಕಾ ಅದ್ಭುತವಾಗಿ ಹೇರ್ ಕಟಿಂಗ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅನುಷ್ಕಾ ಅವರು ಪೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ಒಂದು ಗಂಟೆಯಲ್ಲಿ 10 ಲಕ್ಷಕ್ಕೂ ಅಧಿನ ಜನರು ವೀಕ್ಷಿಸಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ವಿಟ್ ಮಾಡಿ, ಕ್ವಾರೆಂಟೈನ್ ಸಂದರ್ಭದಲ್ಲಿಯೂ ಚೆನ್ನಾಗಿ ಕಾಣುವುದಕ್ಕೆ ಒಂದು ಸಲಹೆ ಎಂದು ಬರೆದು ಟ್ವೀಟ್ ಮಾಡಿದೆ