Tag: ಹೇಮಾಮಾಲಿನಿ

  • ಕಂಗನಾ ಅಲ್ಲ ರಾಖಿ ಸಾವಂತ್ ಬೇಕಾದ್ರೂ ಸ್ಪರ್ಧಿಸಲಿ – ಹೇಮಾಮಾಲಿನಿ ಸಿಡಿಮಿಡಿ

    ಕಂಗನಾ ಅಲ್ಲ ರಾಖಿ ಸಾವಂತ್ ಬೇಕಾದ್ರೂ ಸ್ಪರ್ಧಿಸಲಿ – ಹೇಮಾಮಾಲಿನಿ ಸಿಡಿಮಿಡಿ

    ಲಕ್ನೋ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಈ ಬಾರಿ ಮಥುರಾ ಲೋಕಸಭಾ ಚುನಾವಣೆಯಲ್ಲಿ (Loka Sabha Election) ಸ್ಪರ್ಧಿ ಸಲಿದ್ದಾರೆ ಎಂಬ ಊಹಾಪೋಹಗಳ ಕುರಿತಂತೆ ಹಾಲಿ ಬಿಜೆಪಿ ಸಂಸದೆ ಹೇಮಾಮಾಲಿನಿ (Hema Malini) ಕಂಗನಾ ಅಲ್ಲ ರಾಖಿ ಸಾವಂತ್ (Rakhi Sawant) ಬೇಕಾದರೂ ಸ್ಪರ್ಧಿಸಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಹೇಮಾಮಾಲಿನಿ ಅವರು ಪ್ರತಿನಿಧಿಸುವ ಕ್ಷೇತ್ರದಿಂದ ಈ ಬಾರಿ ನಟಿ ಕಂಗನಾ ರಣಾವತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂವ ವದಂತಿಗಳ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೇಮಾಮಾಲಿನಿ ಅವರು, ಇದು ದೇವರಿಗೆ ಬಿಟ್ಟಿದ್ದು, ಶ್ರೀಕೃಷ್ಣ ತಾನು ಅಂದುಕೊಂಡಿದ್ದನ್ನು ಮಾಡುತ್ತಾನೆ. ಮಥುರಾದಲ್ಲಿ ಸ್ಪರ್ಧಿಸಲು ಬೇರೆ ರಾಜಕಾರಣಿಗಳು (Politicians) ನಿಮಗೆ ಸಿಗುವುದಿಲ್ಲವೇ? ಸಿನಿಮಾ ತಾರೆಯರಯ ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ವಿಚಾರವನ್ನು ನೀವು ಎಲ್ಲರ ತಲೆಯಲ್ಲಿ ತುಂಬಿಸುತ್ತಿದ್ದೀರಾ. ಮಥುರಾ (Mathura)  ಸಿನಿ ತಾರೆಯರು ಮಾತ್ರ ಸ್ಪರ್ಧಿಸಬೇಕು ಎಂಬಂತೆ ಬಿಂಬಿಸುತ್ತಿದ್ದೀರಾ. ನಿಮಗೆ ಮಥುರಾದಲ್ಲಿ ಸ್ಪರ್ಧಿಸಲು ಸಿನಿ ತಾರೆಯರೇ ಬೇಕಾ? ನಾಳೆ ರಾಖಿ ಸಾವಂತ್ ಕೂಡ ಸ್ಪರ್ಧಿಸುತ್ತಾರೆ ಎಂದು ಹೇಳುವ ಮೂಲಕ ಸಿಡಿಮಿಡಿಗೊಂಡಿದ್ದಾರೆ. ಇದನ್ನೂ ಓದಿ: ವಿಪರೀತ ಟ್ರಾಫಿಕ್ ಜಾಮ್ – ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ

    ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರೊಬ್ಬರು ಓಹೋ ಈ ಮಹಿಳೆ ಸ್ವತಃ ಸಿನಿ ತಾರೆ. ಇವರ ಪತಿ ಮತ್ತು ಮಗ ಕೂಡ ರಾಜಕೀಯಕ್ಕೆ ಸೇರಿದ್ದಾರೆ. ಆದರೆ ಈ ಮಹಿಳೆಗೆ ಸಿನಿ ತಾರೆಯರು ರಾಜಕೀಯಕ್ಕೆ ಬಂದರೆ ಸಮಸ್ಯೆ ಇದೆಯೇ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108

    ಇತ್ತೀಚೆಗಷ್ಟೇ ಕಂಗನಾ ರಣಾವತ್ ಕುಟುಂಬಸ್ಥರೊಂದಿಗೆ ಪ್ರಸಿದ್ಧ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಬಂಕೆ ಬಿಹಾರಿ ದೇವಸ್ಥಾನದಿಂದ ಹೊರ ಹೋಗುವ ವಿಐಪಿ ಮಾರ್ಗದಲ್ಲಿ ಕಂಗನಾ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಭಕ್ತರ ಗುಂಪು ಮತ್ತು ಸ್ಥಳೀಯರು ಆಕೆಯ ಕಡೆಗೆ ಓಡುತ್ತಿರುವುದು ಕಂಡುಬಂದಿತ್ತು. ದೇವಾಲಯದಿಂದ ಕಂಗನಾ ಹೊರಬರಲು ಬಿಗಿ ಭದ್ರತೆ ಹೆಚ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಿಂದ ಕಂಗನಾ ರಣಾವತ್ ಬಿಜೆಪಿಯಿಂದ ಸ್ಪರ್ದಿಸುತ್ತಾರೆ ಎನ್ನುವ ಊಹಾಪೋಹ ಎದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ರಷ್ಯಾ, ಉಕ್ರೇನ್ ಯುದ್ಧದಲ್ಲಿ ಮೋದಿ ಮಧ್ಯಸ್ಥಿಕೆಯನ್ನ ಎಲ್ಲರೂ ಬಯಸುತ್ತಿದ್ದಾರೆ: ಹೇಮಾಮಾಲಿನಿ

    ರಷ್ಯಾ, ಉಕ್ರೇನ್ ಯುದ್ಧದಲ್ಲಿ ಮೋದಿ ಮಧ್ಯಸ್ಥಿಕೆಯನ್ನ ಎಲ್ಲರೂ ಬಯಸುತ್ತಿದ್ದಾರೆ: ಹೇಮಾಮಾಲಿನಿ

    ಲಕ್ನೋ: ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಉಕ್ರೇನ್ ಹಾಗೂ ರಷ್ಯಾ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಹೇಮಾಮಾಲಿನಿ ತಿಳಿಸಿದರು.

    ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಮೋದಿ ಅವರಿಂದ ಇಡೀ ಜಗತ್ತೇ ಬೆರಗಾಗುವಂತೆ ಭಾರತವನ್ನು ಅಭಿವೃದ್ಧಿಯಾಗುತ್ತಿದೆ. ಮೋದಿ ಅವರನ್ನು ವಿಶ್ವದ ಬಲಿಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿದೆ ಎಂದ ಅವರು, ಈಗ ರಷ್ಯಾ ಉಕ್ರೇನ್ ಯುದ್ಧವನ್ನು ತಡೆಯಲು ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಎಲ್ಲರೂ ಬಯಸುತ್ತಿದ್ದಾರೆ ಎಂದರು.

    ಈ ಹಿಂದೆ ರಷ್ಯಾವು ಉಕ್ರೇನ್‍ನ ನಗರಗಳ ಮೇಲೆ ದಾಳಿ ನಡೆಸುತ್ತಿದ್ದಂತೆ ಪ್ರಧಾನಿ ಮೋದಿ ಕರೆ ಮಾಡಿ ಹಿಂಸಾಚಾರವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಉಕ್ರೇನ್‍ನಿಂದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ವಿಶ್ವವೇ ನಮ್ಮೊಂದಿಗಿದೆ, ಜಯ ನಮ್ಮದೆ: ಉಕ್ರೇನ್ ಅಧ್ಯಕ್ಷ

    ಉತ್ತರಪ್ರದೇಶದ ವಿಧಾನಸಭೆ ಚುನಾವಣೆ 7 ಹಂತದಲ್ಲಿ ನಡೆಯಲಿದ್ದು, ಈಗಾಗಲೇ 4 ಹಂತದ ಮತದಾನ ನಡೆದಿದೆ. ಮಾರ್ಚ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

  • ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ

    ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ

    ಲಕ್ನೋ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು. ಬಿಜೆಪಿಗೆ ಸೇರಿದರೆ ಹೇಮಾ ಮಾಲಿನಿಯಾಗಿ ಮಾಡುತ್ತೇನೆ ಎಂದು ಹೇಳಿದ್ದರು ಎಂದು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ(ಆರ್ ಎಲ್‍ಡಿ) ಜಯಂತ್ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದರು.

    ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನನ್ನ ಮೇಲೆ ಯಾವುದೇ ಪ್ರೀತಿಯೂ ಇಲ್ಲ. ನಾನು ಹೇಮಾಮಾಲಿನಿಯಂತೆ ಆಗಲು ಇಷ್ಟಪಡುವುದಿಲ್ಲ ಎಂದ ಅವರು, ನನ್ನನ್ನು ಸಮಾಧಾನಪಡಿಸುವುದರಿಂದ ನೀವು ಏನು ಪಡೆಯುತ್ತೀರಿ? ಜನರಿಗಾಗಿ ನೀವು ಏನು ಮಾಡುದ್ದೀರಿ? ಏಳು ರೈತರ ಕುಟುಂಬಗಳಿಗೆ ಏನು ಮಾಡಿದ್ದೀರಿ? ಅಜಯ್ ಮಿಶ್ರಾ ಇನ್ನೂ ಏಕೆ ಸಚಿವರಾಗಿದ್ದಾರೆ? ಎಂದು ಇದೇ ವೇಳೆ ಪ್ರಶ್ನಿಸಿದರು.

    ಅಕ್ಟೋಬರ್‍ನಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಪ್ರತಿಭಟನೆ ವೇಳೆ ರೈತರ ಮೇಲೆ ಹರಿಹಾಯ್ದ ಆರೋಪದ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಜೈಲು ಸೇರಿದ್ದಾರೆ. ಅವರನ್ನು ಸಚಿವ ವಜಾಗೊಳಿಸಲು ವಿರೋಧ ಪಕ್ಷ ಮುಖಂಡರು ಒತ್ತಾಯಿಸಿದರೂ ಬಿಜೆಪಿ ತಮ್ಮ ಸಂಪುಟದಲ್ಲಿ ಉಳಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

    ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಜೊತೆ ಆರ್‍ಎಲ್‍ಡಿ ಪಕ್ಷ ಮೈತ್ರಿ ಮಾಡಿಕೊಂಡಿದೆ. ಇತ್ತ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಬೆಂಬಲವನ್ನು ಮರಳಿ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಜನವರಿ 26ರಂದು ಜಾಟ್ ನಾಯಕರೊಂದಿಗೆ ಅಮಿತ್ ಶಾ ಸಭೆ ನಡೆಸಿ ಜಯಂತ್ ಚೌಧರಿ ಅವರು ತಪ್ಪು ದಾರಿ ಹಿಡಿದಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ:  ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

    ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 7 ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ. ಇದನ್ನೂ ಓದಿ: ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ

  • ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ: ಹೇಮಾಮಾಲಿನಿ

    ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ: ಹೇಮಾಮಾಲಿನಿ

    ಮುಂಬೈ: ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಬಾಲಿವುಡ್ ಹಿರಿಯ ನಟಿ ಮತ್ತು ಸಂಸದೆ ಹೇಮಾಮಾಲಿನಿ ಹೇಳಿದ್ದಾರೆ.

    ತಮ್ಮ ಕ್ಷೇತ್ರದ ರಸ್ತೆಗಳನ್ನು ಹೇಮಾಲಿನಿ ಕೆನ್ನೆಗೆ ಹೋಲಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಚಿವ ಗುಲಾಬ್ ರಾವ್ ಪಾಟೀಲ್ ಹೇಳಿಕೆಗೆ ಇದೀಗ ಹೇಮಾಮಾಲಿನಿ ಅವರು ಪ್ರತಿಕ್ರಿಯಿಸಿದ್ದಾರೆ.  ಇದನ್ನೂ ಓದಿ: ತಮ್ಮ ಕ್ಷೇತ್ರದ ರಸ್ತೆಯನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಕೆ – ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಸಚಿವ

    ಇದೀಗ ನಟಿ ಹೇಮಾಮಾಲಿನಿ ಅವರು ಸಂದರ್ಶನವೊಂದರಲ್ಲಿ, ನಾನು ನನ್ನ ಕೆನ್ನೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ. ಈ ಮಾತನ್ನು ಜನಸಾಮಾನ್ಯರು ಹೇಳಿದ್ದರೆ ನಿರ್ಲಕ್ಷಿಸಬಹುದಿತ್ತು. ಆದರೆ ಈ ಹೇಳಿಕೆ ನೀಡಿರುವುದು ಓರ್ವ ಸಚಿವರು. ಅವರು ಓರ್ವ ವಿಧಾನಸಭೆಯ ಅಥವಾ ಯಾವುದೋ ಕ್ಷೇತ್ರದ ಸದಸ್ಯರಾಗಿರುವುದರಿಂದ ಈ ಮಾತು ಅವರಿಗೆ ಕ್ಷೋಭೆ ತರುವುದಿಲ್ಲ. ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: YouTube ನೋಡ್ಕೊಂಡು ಪತ್ನಿಗೆ ಡೆಲಿವರಿ ಮಾಡಿಸಿದ- ಮುಂದೆ ಆಗಿದ್ದೇನು ಗೊತ್ತಾ?

    ಇತ್ತೀಚೆಗಷ್ಟೇ ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆಯ ಹಿರಿಯ ನಾಯಕ ಗುಲಾಬ್ ರಾವ್ ಪಾಟೀಲ್ ಭಾಷಣದ ವೇಳೆ 30 ವರ್ಷಗಳಿಂದ ಶಾಸಕನಾಗಿರುವ ನನ್ನ ಕ್ಷೇತ್ರಕ್ಕೆ ಬಂದು ಒಮ್ಮೆ ರಸ್ತೆ ನೋಡಿ. ಅದು ಹೇಮಾಮಾಲಿನಿ ಅವರ ಕೆನ್ನೆಯಂತೆ ಇಲ್ಲದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತಂತೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಗುಲಾಬ್ ರಾವ್ ಪಾಟೀಲ್ ನಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಕ್ಷಮೆಯಾಚಿಸಿದ್ದರು.

  • ಸೀತಾ ಔರ್ ಗೀತಾ ಚಿತ್ರವನ್ನು 25 ಬಾರಿ ವೀಕ್ಷಿಸಿದ್ದ ವಾಜಪೇಯಿ!

    ಸೀತಾ ಔರ್ ಗೀತಾ ಚಿತ್ರವನ್ನು 25 ಬಾರಿ ವೀಕ್ಷಿಸಿದ್ದ ವಾಜಪೇಯಿ!

    ನವದೆಹಲಿ: ಅಟಲ್ ಬಿಹಾರಿ ಕೇವಲ ರಾಜಕಾರಣಿಯಲ್ಲ. ಕವಿ, ಪತ್ರಕರ್ತರಾಗಿದ್ದ ಅವರು ಸಿನಿಮಾ ನೋಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.

    ಸಾಹಿತ್ಯ, ಸಂಗೀತವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ವಾಜಪೇಯಿ ಅವರು, ಹೇಮಾಮಾಲಿನಿ ಅವರ ಮೇಲೆ ಬಹಳ ಅಭಿಮಾನವಿತ್ತು. ಅದರಲ್ಲೂ ಕನಸಿನ ಕನ್ಯೆ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ‘ಸೀತಾ ಔರ್ ಗೀತಾ’ ಚಲನಚಿತ್ರವನ್ನು ಅವರು ಬರೋಬ್ಬರಿ 25 ಬಾರಿ ವೀಕ್ಷಿಸಿದ್ದರು.

    ಹೇಮಾಮಾಲಿನಿ ವಾಹಿನಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ, ನಾನು ವಾಜಪೇಯಿ ಅವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಒಮ್ಮೆ ಅವರನ್ನು ಭೇಟಿಯಾಗಬೇಕು ಎಂದು ಅಧಿಕಾರಿಗಳನ್ನು ಕೇಳಿಕೊಂಡಿದ್ದೆ. ಅವರನ್ನು ನೋಡಲು ನಾನು ಹೋದಾಗ ಬಹಳ ಮುಜುಗರದಿಂದಲೇ ಮಾತನಾಡಿದ್ದರು ಎಂದು ಆ ಕ್ಷಣವನ್ನು ಹಂಚಿಕೊಂಡಿದ್ದರು.

    1972 ರಲ್ಲಿ ನಾನು ಅಭಿನಯಿಸಿದ ಸೀತಾ ಔರ್ ಗೀತಾ ಸಿನಿಮಾವನ್ನು ಅವರು 25 ಬಾರಿ ವೀಕ್ಷಿಸಿದ್ದರು. ನನ್ನ ಅಭಿಮಾನಿಯಾಗಿದ್ದ ಕಾರಣಕ್ಕೆ ಅವರು ಮುಜುಗರಂದಿಂದಲೇ ಮಾತನಾಡಿರಬಹುದು ಎಂದು ಹೇಮಾಮಲಿನಿ ತಿಳಿಸಿದ್ದರು.

    ಅಟಲ್ ನಿಧನಕ್ಕೆ ಕಂಬನಿ ಮಿಡಿದ ಹೇಮಾಮಾಲಿನಿ, ವಿನೋದ್ ಖನ್ನಾ ಅವರಿಂದ ನನಗೆ ಅಟಲ್ ಬಿಹಾರಿ ವಾಜಪೆಯಿ ಅವರ ಪರಿಚಯವಾಯಿತು. ನಾನು ಬಿಜೆಪಿಗೆ ಸೇರಲು ಅಟಲ್ ಕಾರಣ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

    2003 ರಿಂದ 2009 ರವರೆಗೆ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ಅವರು 2014ರಲ್ಲಿ ಉತ್ತರ ಪ್ರದೇಶದ ಮಥುರಾ ಲೋಕಸಭೆಯಿಂದ ಸ್ಪರ್ಧಿಸಿ ಗೆದ್ದಿದ್ದರು.