Tag: ಹೇಮಂತ್

  • ಸುದೀಪ್‌ಗೆ ‘ಸಪ್ತಸಾಗರದಾಚೆ ಎಲ್ಲೋ’ ನಿರ್ದೇಶಕ ಆ್ಯಕ್ಷನ್ ಕಟ್

    ಸುದೀಪ್‌ಗೆ ‘ಸಪ್ತಸಾಗರದಾಚೆ ಎಲ್ಲೋ’ ನಿರ್ದೇಶಕ ಆ್ಯಕ್ಷನ್ ಕಟ್

    ‘ಸಪ್ತಸಾಗರದಾಚೆ ಎಲ್ಲೋ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಇದೀಗ ಸೂಪರ್ ಸ್ಟಾರ್‌ಗೆ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಜೊತೆ ಕೆಲಸ ಮಾಡೋಕೆ ಮುಂದಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಸ್ವೀಟ್‌ ಸರ್ಪ್ರೈಸ್‌ ಸಿಕ್ಕಿದೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ವರುಣ್ ಧವನ್ ಪತ್ನಿ ನತಾಶಾ

    ‘ಘೋಸ್ಟ್’ ಖ್ಯಾತಿಯ ನಿರ್ಮಾಪಕ ಸಂದೇಶ್ ನಾಗರಾಜ ಅವರು ಸುದೀಪ್ ಜೊತೆ ಸಿನಿಮಾ ಮಾಡೋದಾಗಿ ಇತ್ತೀಚೆಗೆ ಅಧಿಕೃತ ಘೋಷಣೆ ಮಾಡಿದ್ದರು. ಆದರೆ ನಿರ್ದೇಶನ ಯಾರದ್ದು, ಎಂಬುದನ್ನು ರಿವೀಲ್ ಆಗಿರಲಿಲ್ಲ. ಆದರೆ ಸಂದೇಶ್ ಮತ್ತು ಸುದೀಪ್ ಕಾಂಬಿನೇಷನ್ ಚಿತ್ರಕ್ಕೆ ಹೇಮಂತ್ ರಾವ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ.

    ಪ್ರತಿ ಸಿನಿಮಾದಲ್ಲೂ ಒಂದಕ್ಕಿಂತ ಒಂದು ವಿಭಿನ್ನ ಕಂಟೆಂಟ್ ಕೊಡುವ ಹೇಮಂತ್ ರಾವ್ ಅವರು ಸುದೀಪ್‌ಗೂ ಉತ್ತಮ ಕಥೆಯನ್ನೇ ಬರೆದಿರುತ್ತಾರೆ ಎಂದು ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೂವರ ಕಾಂಬಿನೇಷನ್ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    ಅಂದಹಾಗೆ, ಕೆಲ ದಿನಗಳ ಹಿಂದೆ ಶಿವರಾಜ್‌ಕುಮಾರ್ ಜೊತೆ ಹೇಮಂತ್ ರಾವ್ ಸಿನಿಮಾ ಮಾಡುವ ಬಗ್ಗೆ ಅನೌನ್ಸ್ ಆಗಿತ್ತು. ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಬಳಿಕ ಸ್ಟಾರ್ ನಟರಿಗೆ ಹೇಮಂತ್ ನಿರ್ದೇಶನ ಮಾಡುತ್ತಿದ್ದಾರೆ. ಅವರ ಸಿನಿಮಾಗಳು ಹೇಗಿರಲಿದೆ ಎಂಬುದು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.

  • ರುದ್ರಪ್ಪ: ಇದು 21 ಸಾವಿರ ರೂಪಾಯಿ ಬಹುಮಾನ ಪಡೆದ ಟೈಟಲ್

    ರುದ್ರಪ್ಪ: ಇದು 21 ಸಾವಿರ ರೂಪಾಯಿ ಬಹುಮಾನ ಪಡೆದ ಟೈಟಲ್

    ಸ್ಟಾಕರ್’ ಚಿತ್ರ ನಿರ್ಮಾಣ ಮಾಡಿದ್ದ ಎಸ್‌ಎಂಎಲ್ ಪ್ರೊಡಕ್ಷನ್ ಸಂಸ್ಥೆಯು  ’ಪ್ರೊಡಕ್ಷನ್ ನಂ.2’ ಹೆಸರಿನಲ್ಲಿ ಹೊಸ ಚಿತ್ರವನ್ನು ಶುರು ಮಾಡಲು ಸಜ್ಜಾಗಿತ್ತು. ಸೂಕ್ತ ಶೀರ್ಷಿಕೆ (Title) ನೀಡಿದವರಿಗೆ ಇಪ್ಪತ್ತೊಂದು ಸಾವಿರ ಬಹುಮಾನ ನೀಡುವುದಾಗಿ ಹೇಳಿಕೊಂಡಿತ್ತು.  ಇದಕ್ಕಾಗಿ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್‌ನ್ನು ಬಿಡುಗಡೆ ಮಾಡಿದ್ದರು. ಅದರಂತೆ ನೂರಾರು ಸಿನಿರಸಿಕರು ಹೆಸರುಗಳನ್ನು ನೀಡಿದ್ದಾರೆ.

    ಪ್ರೇಕ್ಷಕರು ನೀಡಿದ ಟೈಟಲ್ ನಲ್ಲೇ ಕೊನೆಗೊಂದು ಆಯ್ಕೆ ಮಾಡಿಕೊಂಡಿದ್ದು,  ಬೆಂಗಳೂರಿನ ಸುರೇಶ್ (Suresh) ಎಂಬುವರು ನೀಡಿದ ಟೈಟಲ್ ಆಯ್ಕೆಯಾಗಿದೆ. ’ರುದ್ರಪ್ಪ’ (Rudrappa) ಎಂಬ ಟೈಟಲ್ ನೀಡುವ ಮೂಲಕ ಸುರೇಶ್  ಬಹುಮಾನ ಪಡೆದಿದ್ದಾರೆ. ರಮೇಶ್ (Ramesh) ನಾಯಕನಾಗಿ ಎರಡನೇ ಅನುಭವ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಹೇಮಂತ್ (Hemant) ನಿರ್ದೇಶನದಲ್ಲಿ ಭರತ್.ಹೆಚ್.ಎಸ್ ಸಂಗೀತ ಮತ್ತು ಸುಧೀರ್ ಛಾಯಾಗ್ರಹಣ ಇರಲಿದೆ. ನಾಯಕಿ, ಮಿಕ್ಕಂತೆ ಕಲಾವಿದರುಗಳನ್ನು ಅಡಿಷನ್ ಮೂಲಕ ಆಯ್ಕೆ ಮಾಡಲಿದ್ದು, ಪ್ರಕ್ರಿಯೆ ಶುರುವಾಗಿದೆ. ಇನ್ನರೆಡು ತಿಂಗಳಲ್ಲಿ ಶೂಟಿಂಗ್ ಪ್ರಾರಂಭಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಹಣಕ್ಕಾಗಿ ಬೇಡಿಕೆ – ಖಾಸಗಿ ವಾಹಿನಿ ಎಂಡಿಗೆ ಸಿಸಿಬಿ ಫುಲ್ ಡ್ರಿಲ್

    ಹಣಕ್ಕಾಗಿ ಬೇಡಿಕೆ – ಖಾಸಗಿ ವಾಹಿನಿ ಎಂಡಿಗೆ ಸಿಸಿಬಿ ಫುಲ್ ಡ್ರಿಲ್

    ಬೆಂಗಳೂರು: ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿ ಎಂಡಿ ಕಂ ಪತ್ರಕರ್ತ ಹೇಮಂತ್‍ರನ್ನು ಕೇಂದ್ರ ಅಪರಾಧ ದಳ(ಸಿಸಿಬಿ) ಪೊಲೀಸರು ಬಂಧಿಸಿದ್ದು, ಇದೀಗ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

    ಮಾಜಿ ಸಚಿವ, ಬಿಜೆಪಿ ಹಾಲಿ ಶಾಸಕ ಅರವಿಂದ ಲಿಂಬಾವಳಿ ಕೇಸ್ ಜೊತೆಗೆ ಹಳೇ ಕೇಸ್‍ಗಳನ್ನು ಓಪನ್ ಮಾಡಿರೋ ಸಿಸಿಬಿ(ಪೊಲೀಸರು ಹೇಮಂತ್‍ಗೆ ಫುಲ್ ಡ್ರಿಲ್ ಮಾಡಿಸುತ್ತಿದ್ದಾರೆ.

    ಹೇಮಂತ್, ಈ ಹಿಂದೆಯೂ ಹಲವು ರಾಜಕಾರಣಿ ಹಾಗೂ ಉದ್ಯಮಿಗಳಿಗೆ ಬ್ಲಾಕ್ ಮೇಲ್ ಮಾಡಿರುವುದು ವಿಚಾರಣೆ ವೇಳೆ ಬಯಲಾಗುತ್ತಿದೆ. ಹೇಮಂತ್ ಜೊತೆಗೆ ಬ್ಲಾಕ್‍ಮೇಲ್‍ಗೆ ಒಳಗಾದವರು ದೂರು ನೀಡಬಹುದು ಎಂದು ಸಿಸಿಬಿ ಮನವಿ ಮಾಡಿಕೊಂಡಿದೆ.

    ಬ್ಲ್ಯಾಕ್ ಮೇಲ್ ಏನು:
    ನಿಮ್ಮ ಖಾಸಗಿ ಬದುಕಿನ ವಿಡಿಯೋ ನನ್ನ ಬಳಿ ಇದೆ. ಎಂದು ಬೇರೆ ಪಕ್ಷದವರು ಕೇಳಿದ್ದರು. ಆದರೆ ನಾವು ಕೊಟ್ಟಿಲ್ಲ. ಕೇವಲ 50 ಲಕ್ಷ ರೂ. ಕೊಟ್ಟರೆ ಆ ಸಿಡಿಯನ್ನು ನಿಮಗೆ ಒಪ್ಪಿಸಿಬಿಡುತ್ತೇನೆ ಎಂದು ಲಿಂಬಾವಳಿ ಅವರಿಗೆ ಕರೆ ಮಾಡಿ ಫೋಕಸ್ ಟಿವಿಯ ಹೇಮಂತ್ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

    ಈ ಬಗ್ಗೆ ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಕಳೆದ ರಾತ್ರಿ ಹೇಮಂತ್ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಿ ಲ್ಯಾಪ್‍ಟಾಪ್, ಡೆಸ್ಕ್ ಟಾಪ್, ಹಾರ್ಡ್ ಡಿಸ್ಕ್, ಮೊಬೈಲ್‍ಗಳನ್ನು ವಶಪಡಿಸಿಕೊಂಡಿದೆ.

  • ಧನಂಜಯ್ ಅತ್ರೆ ‘ಕರ್ಷಣಂ’ ನ.23ಕ್ಕೆ ರಿಲೀಸ್

    ಧನಂಜಯ್ ಅತ್ರೆ ‘ಕರ್ಷಣಂ’ ನ.23ಕ್ಕೆ ರಿಲೀಸ್

    ಬೆಂಗಳೂರು: ಧನಂಜಯ್ ಅತ್ರೆ ನಾಯಕರಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ಕರ್ಷಣಂ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅದರ ಮೂಲಕವೇ ಈ ಚಿತ್ರ ವಿಶೇಷವಾದೊಂದು ಕಥೆ ಹೊಂದಿದೆ ಎಂಬ ಸ್ಪಷ್ಟ ಸುಳಿವು ಪ್ರೇಕ್ಷಕರಿಗೆ ಸಿಕ್ಕಿದೆ. ಈ ಟ್ರೇಲರ್ ಕೂಡಾ ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿ ಟ್ರೆಂಡಿಂಗ್‍ನಲ್ಲಿದೆ. ಈ ಚಿತ್ರದ ಅಸಲೀ ಖದರ್ ತೆರೆ ಮೇಲೆ ಅನಾವರಣಗೊಳ್ಳುವ ಕ್ಷಣವೂ ಹತ್ತಿರವಾಗಿದೆ! ನವೆಂಬರ್ 23ರಂದು ಚಿತ್ರ ರಿಲೀಸ್ ಆಗಲಿದೆ.

    ಹೆಸರಲ್ಲಿಯೇ ಮಾಸ್ ಫೀಲೊಂದನ್ನು ರವಾನಿಸುವಂತಿರೋ ಕರ್ಷಣಂ ಎಂಬ ಟೈಟಲ್ಲು ಕಥೆ ಪೂರಕವಾಗಿಯೇ ಹುಟ್ಟಿಕೊಂಡಿರುವಂಥಾದ್ದು. ಗೌರಿ ಅತ್ರೆ ಬರೆದ ಕಥಾ ಎಳೆಯನ್ನು ಚಿತ್ರಕಥೆಯ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿಸಿದ ಶರವಣರಿಗೆ ಧನಂಜಯ್ ಅತ್ರೆ ಬಯಸಿದಂತೆಯೇ ಇಡೀ ಚಿತ್ರವನ್ನು ರೂಪಿಸಿಕೊಟ್ಟ ತೃಪ್ತಿಯಿದೆ. ಅದರಂತೆಯೇ ತಾವು ದಶಕಗಳ ಕಾಲ ಎಂಥಾ ಚಿತ್ರವನ್ನು ನಿರ್ದೇಶನ ಮಾಡಬೇಕೆಂದು ಕನಸು ಕಂಡಿದ್ದರೋ ಅಂತಾದ್ದೇ ಚಿತ್ರವನ್ನು ತಯಾರು ಮಾಡಿದ ಖುಷಿಯೂ ಶರವಣರದ್ದು.

    ಇದು ಸ್ಲಂ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಏನಾದರೊಂದು ಸಾಧಿಸುವ ಹಂಬಲವಿರುತ್ತದೆ. ಆದರೆ ಅದಕ್ಕಾಗಿ ಯಾರನ್ನೂ ಬಲಿಯಾಗಿಸದೇ, ಯಾರ ಕನಸನ್ನೂ ಚಿವುಟದಿರೋ ಪರಿಶ್ರಮದ ಹಾದಿಯಲ್ಲಿ ನಡೆದರೆ ಮಾತ್ರವೇ ಸಿಕ್ಕ ಗೆಲುವನ್ನು ಸಂಭ್ರಮಿಸಲು ಸಾಧ್ಯವಾಗುತ್ತೆ. ಆದರೆ ಸಾಧನೆಗೆ ಇನ್ನೊಬ್ಬರನ್ನು ತುಳಿಯ ಬಾರದು. ಹಾಗೆ ಮಾಡಿದರೆ ಪರಿಣಾಮ ಏನಾಗುತ್ತದೆ ಎಂಬ ಸಂದೇಶವನ್ನೂ ಕೂಡಾ ಈ ಚಿತ್ರದಲ್ಲಿ ಸಾರಲಾಗಿದೆಯಂತೆ.

    ಈ ಚಿತ್ರದ ಮೂಲಕವೇ ಗಾಯಕರಾಗಿ ಹೆಸರು ಮಾಡಿದ್ದ ಹೇಮಂತ್ ಸಂಗೀತ ನಿರ್ದೇಶಕರಾಗಿಯೂ ಭಡ್ತಿ ಹೊಂದಿದ್ದಾರೆ. ವಿಶೇಷವೆಂದರೆ, ಹೇಮಂತ್ ಎಂಬ ಪ್ರತಿಭೆ ಪ್ರೀತ್ಸೆ ಚಿತ್ರದ ಪ್ರೀತ್ಸೆ ಪ್ರೀತ್ಸೆ ಎಂಬ ಹಾಡಿನ ಮೂಲಕ ಖ್ಯಾತರಾಗುವಂತೆ ಮಾಡಿದ್ದೇ ರಾಕ್ ಲೈನ್ ವೆಂಕಟೇಶ್. ಹೇಮಂತ್ ಕಂಠ ಟ್ರ್ಯಾಕ್‍ನಲ್ಲಿಯೇ ಲೀನವಾಗೋದನ್ನು ತಪ್ಪಿಸಿ ಆ ಹಾಡು ಅವರ ಧ್ವನಿಯಲ್ಲಿಯೇ ಮೂಡಿ ಬರುವಂತೆ ಕಾಳಜಿ ವಹಿಸಿದ್ದವರೂ ಇದೇ ರಾಕ್‍ಲೈನ್. ಇದೀಗ ಹೇಮಂತ್ ಮೊದಲ ಸಲ ಸಂಗೀತ ನೀಡಿರುವ ಕರ್ಷಣಂ ಚಿತ್ರದ ಹಾಗಳು ಕೂಡಾ ಹಿಟ್ ಆಗಿವೆ.

    https://www.youtube.com/watch?v=9KI8Yv5aysQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews