Tag: ಹೇನು

  • ಭಕ್ತರ ತಲೆಯಲ್ಲಿ ಹೇನು ಹುಡುಕ್ತಿರೋ ಕೋತಿ ವಿಡಿಯೊ ವೈರಲ್

    ಭಕ್ತರ ತಲೆಯಲ್ಲಿ ಹೇನು ಹುಡುಕ್ತಿರೋ ಕೋತಿ ವಿಡಿಯೊ ವೈರಲ್

    ಕೊಪ್ಪಳ: ಕೋತಿಯೊಂದು ಮಹಿಳೆಯರ ತಲೆಯಲ್ಲಿ ಹೇನು ಹುಡುಕುತ್ತಿರೋ ದ್ರಶ್ಯವೊಂದು ಮೊಬೈಲ್ ನಲ್ಲಿ ಸೆರೆಯಾಗಿದೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಕನಕಗಿರಿ ದ್ಯಾಮವ್ವ ದೇವಸ್ಥಾನದಲ್ಲಿ ಕೋತಿಯೊಂದು ಮಹಿಳೆಯರ ತಲೆ ಕ್ಲೀನ್ ಮಾಡುತ್ತಿದೆ. ದ್ಯಾಮವ್ವ ದೇವಸ್ಥಾನಕ್ಕೆ ಬಂದು ಹೋಗುವ ಭಕ್ತರ ತಲೆಯನ್ನು ಕೋತಿ ಕ್ಲೀನ್ ಮಾಡುತ್ತಿದೆ.

    ಕನಕಗಿರಿ ಹೊರವಲಯದಲ್ಲಿರೋ ದ್ಯಾಮವ್ವ ದೇವಸ್ಥಾನದಲ್ಲಿ ಬೀಡು ಬಿಟ್ಟಿರೋ ಈ ಕೋತಿ ದೇವಸ್ಥಾನಕ್ಕೆ ಬಂದ ಎಲ್ಲಾ ಭಕ್ತರ ತಲೆ ಮೇಲೆ ಕುಳಿತು ಹೇನು ಹುಡುಕುತ್ತದೆ. ಯಾವುದೇ ಮುಲಾಜಿಲ್ಲದೆ ಕೋತಿ ಮಹಿಳೆಯರ ಬೆನ್ನೇರಿ ತಲೆಯಲ್ಲಿ ಹೇನು ಹುಡುಕುತ್ತಾ ಇರುತ್ತದೆ.

    ಹೆಣ್ಣು ಮಕ್ಕಳು ಕೂಡಾ ನಾ ಮುಂದು ತಾ ಮುಂದು ಎಂದು ಕೋತಿಗೆ ತಲೆ ಕೊಡುತ್ತಿದ್ದಾರೆ. ವೃದ್ಧೆಯರು, ಯುವತಿಯರು ಹೆದರದೆ ಕೋತಿಗೆ ತಲೆಕೊಟ್ಟು ಕ್ಲೀನ್ ಮಾಡಿಸಿಕೊಳ್ಳುತ್ತಿರೋ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಯಾರಿಗೂ ತೊಂದರೆ ಕೊಡದ ಕೋತಿ ತನ್ನ ಪಾಡಿಗೆ ತಾನು ತಲೆಯಲ್ಲಿನ ಹೇನು ನೋಡುತ್ತಿರೋದನ್ನ ಕಂಡು ಜನ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಈ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

    https://www.youtube.com/watch?v=cRWKEeSAvmg&feature=youtu.be

  • ಕೋತಿ ಕೈಯಲ್ಲಿ ಹೇನು ಆರಿಸಿಕೊಂಡು ರಜೆ ಮಜಾ ಅನುಭವಿಸಿದ ಧಾರವಾಡದ ವಿದ್ಯಾರ್ಥಿಗಳು- ವಿಡಿಯೋ ವೈರಲ್

    ಕೋತಿ ಕೈಯಲ್ಲಿ ಹೇನು ಆರಿಸಿಕೊಂಡು ರಜೆ ಮಜಾ ಅನುಭವಿಸಿದ ಧಾರವಾಡದ ವಿದ್ಯಾರ್ಥಿಗಳು- ವಿಡಿಯೋ ವೈರಲ್

    ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದಲ್ಲಿ ಕೋತಿಯೊಂದು ಸೋಮವಾರ ಮಕ್ಕಳ ತಲೆಯಲ್ಲಿದ್ದ ಹೇನು ಆರಿಸಿ ಎಲ್ಲರ ಗಮನ ಸೆಳೆದಿದೆ. ಗ್ರಾಮಸ್ಥರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.

    ಸೋಮವಾರ ರಾಜ್ಯ ಬಂದ್ ಹಿನ್ನೆಲೆಯಲ್ಲಿ ಧಾರವಾಡದ ಯಾವ ಶಾಲೆಗಳಿಗೂ ರಜೆ ಘೋಷಿಸಿರಲಿಲ್ಲ. ಆದರೆ ನರೇಂದ್ರ ಗ್ರಾಮದ ಕೆಲ ಶಾಲಾ ಮಕ್ಕಳು ಶಾಲೆಗೆ ಹೋಗಿರಲಿಲ್ಲ. ಈ ಮಧ್ಯೆ ಗ್ರಾಮದ ಬೇವಿನ ಕಟ್ಟೆಯ ಮೇಲೆ ಬಂದು ಕುಳಿತಿದ್ದ ಕಪ್ಪು ಮೂತಿಯ ಕೋತಿ ಕೈಯಲ್ಲಿ ಶಾಲಾ ಮಕ್ಕಳು ಹೇನು ಆರಿಸಿಕೊಂಡು ಸಂತಸಪಟ್ಟರು.

    ಕೋತಿಯೊಂದು ಕಟ್ಟೆಯ ಮೇಲೆ ಬಂದು ಕುಳಿತಿತ್ತು. ಸುಮಾರು ಹೊತ್ತು ಅಲ್ಲೇ ಕುಳಿತ ಕೋತಿಯನ್ನು ಕಂಡ ಕೆಲ ಗ್ರಾಮಸ್ಥರು ಇಬ್ಬರು ಹುಡುಗರನ್ನು ಅದರ ಬಳಿ ಕಳುಹಿಸಿ ಅದರ ಮುಂದೆ ತಲೆಬಾಗುವಂತೆ ಹೇಳಿದ್ದಾರೆ. ಅವರ ಮಾತಿನಂತೆ ಆ ಕೋತಿ ಬಳಿ ಹೋದ ಹುಡುಗರು ಕೋತಿ ಮುಂದೆ ತಲೆ ತೋರಿಸಿ ಬಾಗುತ್ತಿದ್ದಂತೆ ಕೋತಿ ಆ ಬಾಲಕರ ತಲೆಯಲ್ಲಿ ಹೇನು ಆರಿಸಲು ಪ್ರಾರಂಭಿಸಿದೆ.

    ಕೆಲಹೊತ್ತು ಆ ಕೋತಿ ಕೈಯಿಂದಲೇ ಹೇನು ಆರಿಸಿಕೊಂಡ ಮಕ್ಕಳು ಮಜಾ ಮಾಡಿದರು. ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡಿದ್ದು, ಆ ವಿಡಿಯೋ ವೈರಲ್ ಅಗಿದೆ.

    https://youtu.be/lhRtW1RSk8A