Tag: ಹೆಸ್ಕಾಂ

  • ಗುತ್ತಿಗೆದಾರರ ಸಂಘದಲ್ಲಿ ಒಳ ರಾಜಕೀಯ – ಇಕ್ಕಟ್ಟಿನಲ್ಲಿ ಇಂಧನ ಇಲಾಖೆ

    ಗುತ್ತಿಗೆದಾರರ ಸಂಘದಲ್ಲಿ ಒಳ ರಾಜಕೀಯ – ಇಕ್ಕಟ್ಟಿನಲ್ಲಿ ಇಂಧನ ಇಲಾಖೆ

    ಹುಬ್ಬಳ್ಳಿ: ಹೆಸ್ಕಾಂ (Hescom) ಕಚೇರಿಯಲ್ಲಿ ನಡೆದ ಟೆಂಡರ್ ಗೋಲ್ ಮಾಲ್ ಇದೀಗ ರಾಜಕೀಯ ಬಣ್ಣ ಬಳಿದುಕೊಂಡಿದೆ.

    ಅನುಮತಿ ಪಡೆದ ಗುತ್ತಿಗೆದಾರರ (Contractors) ಸಂಘದ ಕೆಲ ಸದಸ್ಯರು ಹೆಸ್ಕಾಂ ಎಂಡಿ ಭಾರತಿ ಹಾಗೂ ತಾಂತ್ರಿಕ ನಿರ್ದೇಶಕ ಶ್ರೀಕಾಂತ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹೆಸ್ಕಾಂ ಕಚೇರಿಯಲ್ಲಿ ಟೆಂಡರ್ ಪಾಸ್ ಮಾಡಲು 20 ರಿಂದ 25 ಪರ್ಸೆಂಟ್ ಕಮೀಷನ್ (Commission) ಆರೋಪವನ್ನು ಅನುಮತಿ ಪಡೆದ ಗುತ್ತಿಗೆದಾರರ ಸಂಘದ ರುದ್ರೇಶ್, ವಿಜಯಕುಮಾರ್ ಗುಡ್ಡದ ಸೇರಿ ಹಲವರು ಮಾಡಿದ್ದರು. ಈ ಆರೋಪ ಕೇಳಿ ಬರುತ್ತಲೇ ಇಂಧನ ಇಲಾಖೆ ಟೆಂಡರ್ (Energy Department) ಪ್ರಕ್ರಿಯೆಯನ್ನು ರದ್ದು ಮಾಡಿ ಆದೇಶ ಹೊರಡಿಸಿತು. ಈ ಆರೋಪ ಮಾಡಿದ ಬೆನ್ನಲ್ಲೆ ಗುತ್ತಿಗೆದಾರ ಮತ್ತೊಂದು ಬಣ ನಿನ್ನೆ ಸುದ್ದಿಗೋಷ್ಠಿ ನಡೆಸಿದವರ ವಿರುದ್ಧ ತೊಡೆ ತಟ್ಟಿದೆ.

    ಲಂಚದ ಆರೋಪ ಮಾಡಿದವರು ಈ ಹಿಂದೆ ನಡೆದ ಗುತ್ತಿಗೆದಾರರ ಸಂಘದ ಚುನಾವಣೆಯಲ್ಲಿ ಸೋತಿದ್ದು, ಆ ಕಾರಣಕ್ಕೆ ಈ ಲಂಚದ ಆರೋಪ ಮಾಡಿದ್ದಾರೆ. ಟೆಂಡರ್ ಪ್ರಕ್ರಿಯೆ ಆರಂಭವಾದಾಗ ಮಾತನಾಡದವರು ಇವರು ಇದೀಗ ಯಾಕೆ ಆರೋಪ ಮಾಡಿದ್ದಾರೆ? ಇದಕ್ಕೆಲ್ಲಾ ಕಾರಣ ಸಂಘದ ಚುನಾವಣೆ ಸೋಲು ಎನ್ನುವುದು ಸಿ. ರಮೇಶ್ ಬಣದ ವಾದವಾಗಿದೆ.

    ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ 472 ಕೋಟಿ ರೂ.ಯ ವಿವಿಧ ಕಾಮಗಾರಿಗಳನ್ನು ಲಂಚ ನೀಡಿದವರಿಗೆ ಮಾತ್ರ ನೀಡಲಾಗಿದೆ ಎಂದು ಆರೋಪ ಮಾಡಿದವರು ಅಸಲಿಗೆ ಹುಬ್ಬಳ್ಳಿ ಅವರು ಅಲ್ಲ ಎನ್ನುವ ಸತ್ಯ ಬೆಳಕಿಗೆ ಬಂದಿದೆ. 15 ವರ್ಷ ಹೆಸ್ಕಾಂನಲ್ಲಿ ಆಡಳಿತ ಮಾಡಿ ಸೋತ ಕಾರಣಕ್ಕೆ ಇಂತಹ ಆರೋಪಗಳು ಕೇಳಿ ಬರುತ್ತಿವೆ. ಇದನ್ನೂ ಓದಿ: ಕಳ್ಳನೇ ತಿರುಗಿ ಬೊಬ್ಬೆ ಹೊಡೆದ ರೀತಿಯಲ್ಲಿ ಬೊಮ್ಮಾಯಿ ಬೊಬ್ಬೆ ಹೊಡೆಯುತ್ತಿದ್ದಾರೆ: ನಾಲಿಗೆ ಹರಿಬಿಟ್ಟ ಶಿವಸೇನೆ ಪುಂಡ

    ಲಂಚದ ಆರೋಪ ಮಾಡಿದ ಗುತ್ತಿಗೆದಾರರು ಎಲ್2 ಇದ್ದು ಎಲ್1 ಇದ್ದವರಿಗೆ ಟೆಂಡರ್ ನೀಡಲಾಗಿದೆ. ಇವರು ಸುಮ್ಮನೆ ಆರೋಪ ಮಾಡುತ್ತಿದ್ದು, ನಾವು ನಯಾಪೈಸೆ ಕಮಿಷನ್ ಕೊಟ್ಟಿಲ್ಲ ಎನ್ನುವುದು ಟೆಂಡರ್ ಪಡೆದ ಗುತ್ತಿಗೆದಾರರ ಮಾತು.

    ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ ಹಾಗೂ ಬೆಳಗಾವಿಯ ನೂರಕ್ಕೂ ಹೆಚ್ಚು ಗುತ್ತಿಗೆದಾರರು 472 ಕೋಟಿ ರೂ. ಟೆಂಡರ್‌ನಲ್ಲಿ ಭಾಗಿಯಾಗಿ ಕಾಮಗಾರಿ ಪಡೆದಿದ್ದಾರೆ. ಈಗ ಏಕಾಏಕಿ ಟೆಂಡರ್ ರದ್ದಾಗಿದ್ದು ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಬಡ್ಡಿಗೆ ಹಣ ಸಾಲ ತಂದು ಟೆಂಡರ್‌ಗೆ ಹಾಕಿದ್ದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವು ಇದನ್ನು ಇಂಧನ ಸಚಿವ ಸುನಿಲ್ ಕುಮಾರ್ ಗಮನಕ್ಕೆ ತರುತ್ತೇವೆ. ಟೆಂಡರ್ ರದ್ದಾದ ಬಗ್ಗೆ ಮತ್ತು ಸುಳ್ಳು ಆರೋಪ ಮಾಡಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ನೊಂದ ಗುತ್ತಿಗೆದಾರರು ತಿಳಿಸಿದ್ದಾರೆ. ಇದನ್ನೂ ಓದಿ: ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ

    Live Tv
    [brid partner=56869869 player=32851 video=960834 autoplay=true]

  • ಕರೆಂಟ್‌ ತಗುಲಿ ಕಾಮಗಾರಿ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಬಲಿ – ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ

    ಕರೆಂಟ್‌ ತಗುಲಿ ಕಾಮಗಾರಿ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಬಲಿ – ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ

    ಚಿಕ್ಕೋಡಿ: ಕಾಮಗಾರಿ ಮಾಡುತ್ತಿದ್ದ ವೇಳೆ ಕರೆಂಟ್‌ ತಗುಲಿ ಇಬ್ಬರು ಕಾರ್ಮಿಕರು (Labor) ಮೃತಪಟ್ಟಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದ್ದು, ಈ ದುರಂತಕ್ಕೆ ಹೆಸ್ಕಾಂ (Hescom) ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹನಮಂತ ಮಗದುಮ್(34) ಹಾಗೂ ಅಶೋಕ್ ಮಾಳಿ(36) ಮೃತ ದುರ್ದೈವಿಗಳು. ಹನಮಂತ ಹಾಗೂ ಅಶೋಕ್ ಇಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಕವಾಗಿದ್ದರು. ಮೃತ ಹನಮಂತ ಹಾಗೂ ಅಶೋಕ್ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ನಿವಾಸಿಗಳಾಗಿದ್ದರು.

    crime

    ಬಳ್ಳಿಗೇರಿ ಗ್ರಾಮದಿಂದ ದೇವನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಕಾಮಗಾರಿ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಈ ಇಬ್ಬರು ಕಾರ್ಮಿಕರು ವಿದ್ಯುತ್ ಕಂಬ ಏರಿ ದುರಸ್ತಿ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಗಂಡಸರ ಸುದ್ದಿ ನನಗೆ ಬೇಡಪ್ಪ – ಅಶ್ವಥ್ ನಾರಾಯಣಗೆ ಡಿಕೆಶಿ ತಿರುಗೇಟು

    ಘಟನೆಗೆ ಸಂಬಂಧಿಸಿ ಅಲ್ಲಿನ ಸ್ಥಳೀಯರು ಸ್ಟೇಷನ್ ಆಪರೇಟರ್ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಪರೀಕ್ಷಾ ನಿಯಮ ಪಾಲಿಸದ 2 ಪರೀಕ್ಷಾ ಕೇಂದ್ರ ರದ್ದು

    Live Tv
    [brid partner=56869869 player=32851 video=960834 autoplay=true]

  • ಕುಟುಂಬ ಕಲಹ – ವಿದ್ಯುತ್ ಹೈಟೆನ್ಷನ್ ಟವರ್ ಏರಿ ವ್ಯಕ್ತಿ ಹೈಡ್ರಾಮಾ

    ಕುಟುಂಬ ಕಲಹ – ವಿದ್ಯುತ್ ಹೈಟೆನ್ಷನ್ ಟವರ್ ಏರಿ ವ್ಯಕ್ತಿ ಹೈಡ್ರಾಮಾ

    ಹುಬ್ಬಳ್ಳಿ: ಕುಟುಂಬ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯುತ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದ ವ್ಯಕ್ತಿಯನ್ನು ಹೆಸ್ಕಾಂ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಇಲ್ಲಿನ ಬಿಡ್ನಾಳದ 11 ಕೆವಿ ಹೈಟೆನ್ಷನ್ ಟವರ್ ಮೇಲೆ ಏರಿ ರಾಘವೇಂದ್ರ ಬಳ್ಳಾರಿ ಎಂಬಾತ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಹೆಸ್ಕಾಂ ಕಚೇರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ವ್ಯಕ್ತಿ ಹತ್ತಿರುವುದು ಯಾವ ಲೈನ್ ಟವರ್ ಮೇಲೆ ಎಂಬುವುದು ಖಾತ್ರಿಯಾಗಿರಲಿಲ್ಲ. ಕೂಡಲೇ ಎಚ್ಚೆತ್ತುಕೊಂಡ ಗ್ರಾಮೀಣ ಉಪವಿಭಾಗದ ಕಾರ್ಯಾನಿರ್ವಾಹಕ ಅಭಿಯಂತರ ಕಿರಣಕುಮಾರ್, ಆ ಮಾರ್ಗದಲ್ಲಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಇತ್ತ ರಾಘವೇಂದ್ರ ವಿದ್ಯುತ್ ತಂತಿಯನ್ನು ಸ್ಪರ್ಶಿಸುತ್ತಿದ್ದಂತೆ ಅತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಇದರಿಂದ ರಾಘವೇಂದ್ರನ ಪ್ರಾಣ ಉಳಿದಿದೆ.‌ ಇದನ್ನೂ ಓದಿ: ರಾಷ್ಟ್ರಧ್ವಜ ರಕ್ಷಣಾ ಅಭಿಯಾನ ಆರಂಭಿಸಿದ ಯೂತ್ ಕಾಂಗ್ರೆಸ್ – ಜಗದೀಶ್ ಶೆಟ್ಟರ್‌ಗೆ ಧ್ವಜ ಕಾಣಿಕೆ ನೀಡಿ ಚಾಲನೆ

    ಬಳಿಕ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಾಘವೇಂದ್ರನಿಗೆ ಬುದ್ದಿ ಹೇಳಿ ಮನೆಗೆ ಕಳುಹಿಸಿದ್ದಾರೆ. ಕ್ಷಣದಲ್ಲೇ ಕಾರ್ಯಪ್ರವೃತರಾದ ಹೆಸ್ಕಾಂ ಸಿಬ್ಬಂದಿಗೆ ಪೊಲೀಸರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಶಾಲಾ ಬಾಲಕಿ ಸಾವು

    ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಶಾಲಾ ಬಾಲಕಿ ಸಾವು

    ಬೆಳಗಾವಿ: ಪಕ್ಕದ ಮನೆಗ ಓದಲು ಹೋಗಿ ವಾಪಸ್ ಮನೆಗೆ ಬರುವಾಗ ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎಂಟು ವರ್ಷದ ಶಾಲಾ ಬಾಲಕಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಹುಲಿಕಟ್ಟಿ ಗ್ರಾಮದ ಚೂನವ್ವ ಸರ್ವಿ(8) ಮೃತ ದುರ್ದೈವಿ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಂಡರಿಸಿ ಬಿದ್ದಿದ್ದ ತಂತಿಯ ಮೇಲೆ ಕಾಲಿಟ್ಟು ವಿದ್ಯುತ್ ಸ್ಪರ್ಶಿಸಿ ಚೂನವ್ವ ಸರ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಘಟನೆ ಜೂ.24ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪ್ರೇಯಸಿ ದೂರಾಗಿದ್ದಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಪ್ರಾಣ ಬಿಟ್ಟ!

    ಇದೀಗ ಬಾಲಕಿ ಸಾವಿಗೆ ಕಾರಣರಾದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು, ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಡೀಸೆಲ್ ಕೊರತೆ- ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಸುತ್ತೇವೆ: BMTC ಎಂಡಿ ಸ್ಪಷ್ಟನೆ

    Live Tv

  • ಕೋಟಿ ಕೋಟಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳು!

    ಕೋಟಿ ಕೋಟಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳು!

    – ಕತ್ತಲಲ್ಲಿ ಮುಳುಗಿದ ಬಾಗಲಕೋಟೆಯ 100ಕ್ಕೂ ಹೆಚ್ಚು ಗ್ರಾಮಗಳು

    ಬಾಗಲಕೋಟೆ: ಗ್ರಾಮ ಪಂಚಾಯ್ತಿಗಳು ಗ್ರಾಮದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ, ಅಭಿವೃದ್ದಿಗಾಗಿ ಹುಟ್ಟು ಹಾಕಿದ ಸ್ಥಳೀಯ ಸಂಸ್ಥೆಗಳು. ಗ್ರಾಮದಲ್ಲಿ ರಸ್ತೆ, ವಿದ್ಯುತ್, ನೀರು ಎಲ್ಲವನ್ನೂ ಕಲ್ಪಿಸಬೇಕಾಗಿರೋದು ಗ್ರಾಪಂ ಜವಾಬ್ದಾರಿ ಹಾಗೂ ಕರ್ತವ್ಯ. ಆದರೆ ಆ ಜಿಲ್ಲೆಯಲ್ಲಿ ಗ್ರಾ.ಪಂಗಳೇ ಗ್ರಾಮಗಳನ್ನು ಅಂಧಕಾರದಲ್ಲಿ ಮುಳುಗಿಸಿವೆ. ಗ್ರಾ.ಪಂ ಬೇಜವಾಬ್ದಾರಿತನದಿಂದ 35ಕ್ಕೂ ಹೆಚ್ಚು ಹಳ್ಳಿಗಳು ಕತ್ತಲಮಯವಾಗಿವೆ. ರಾತ್ರಿ ಬೀದಿಯಲ್ಲಿ ಜನರು ಭಯದಲ್ಲಿ ಸಂಚರಿಸಬೇಕಾಗಿದೆ.

    ಹೌದು. ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಪಂ ನ ಬೇಜವಾಬ್ದಾರಿತನದಿಂದ ಹಳ್ಳಿ ಜನರು ರಾತ್ರಿಯಾದರೆ ಕತ್ತಲಲ್ಲಿ ಕನವರಿಸಬೇಕಾಗಿದೆ. ಯಾಕೆಂದರೆ ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಪಂಗಳಿಂದ ಬರೊಬ್ಬರಿ 47 ಕೋಟಿ ಕರೆಂಟ್ ಬಿಲ್ ಬಾಕಿ ಇದೆ. ಇದರಿಂದ ಹೆಸ್ಕಾಮ್ ಬಾಕಿ ಉಳಿಸಿಕೊಂಡ ಗ್ರಾಪಂಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 35 ಕ್ಕೂ ಅಧಿಕ ಗ್ರಾಪಂ ಕಚೇರಿ ಹಾಗೂ ಆ ಗ್ರಾಪಂ ವ್ಯಾಪ್ತಿಯಲ್ಲಿನ ನೂರಕ್ಕೂ ಹೆಚ್ಚು ಹಳ್ಳಿಗಳ ಬೀದಿದೀಪಗಳ ವಿದ್ಯುತ್ ಕಡಿತ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ರಾತ್ರಿ ಕತ್ತಲಲ್ಲಿ ಕನವರಿಸಬೇಕಾಗಿದೆ. ಬೀದಿಯಲ್ಲಿ ಭಯದಲ್ಲಿ ಸಂಚರಿಸಬೇಕಾಗಿದೆ. ರಸ್ತೆಯಲ್ಲಿ ಹುಳು ಹುಪ್ಪಡಿಗಳು ಓಡಾಡುತ್ತವೆ. ಕತ್ತಲಲ್ಲಿ ಯಾರಿಗಾದರೂ ಏನಾದರೂ ತೊಂದರೆ ಆದರೆ ಯಾರು ಜವಾಬ್ದಾರಿ, ಕೂಡಲೇ ವಿದ್ಯುತ್ ಬಿಲ್ ಬಾಕಿ ಪಾವತಿಸಿ ಕತ್ತಲಿಂದ ಮುಕ್ತಿ ನೀಡಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

    ಸದ್ಯ ಬಾಗಲ ತಾಲೂಕಿನ ಮುನಾಳ, ಗದ್ದನಕೇರಿ, ಸೀಗಿಕೇರಿ, ನೀರಲಕೇರಿ ಗ್ರಾಪಂಗಳು, ಹುನಗುಂದ ತಾಲೂಕು, ಇಳಕಲ್ ತಾಲೂಕಿನ ಗ್ರಾಪಂ ಸೇರಿ ಒಟ್ಟು 35 ಕ್ಕೂ ಅಧಿಕ ಗ್ರಾಪಂ ವ್ಯಾಪ್ತಿಯ ಬೀದಿದೀಪಗಳ ವಿದ್ಯುತ್ ಕಡಿತ ಮಾಡಲಾಗಿದೆ. ಆದರೆ ಕುಡಿಯುವ ನೀರು ಸರಬರಾಜು ಮಾಡೋದಕ್ಕೆ ಬೇಕಾದ ವಿದ್ಯುತ್ ಕಡಿತ ಮಾಡಿಲ್ಲ ಎನ್ನೋದು ಸ್ವಲ್ಪ ಸಮಾಧಾನಕರ ಸಂಗತಿ. ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಪಂ ನಿಂದ ಪ್ರತಿ ತಿಂಗಳು ಮೂರು ಕೋಟಿ ಬಿಲ್ ಬರಬೇಕು. ಆದರೆ ಸರಿಯಾಗಿ ತುಂಬದ ಕಾರಣ 2016-17 ನೇ ಸಾಲಿನಿಂದ ಇದುವರೆಗೂ ಹೆಸ್ಕಾಮ್ ಬಾಗಲಕೋಟೆ ವೃತ್ತದಲ್ಲಿ 24,79,81 ಸಾವಿರ, ಜಮಖಂಡಿ ವೃತ್ತದಿಂದ 5,562 ಸಾವಿರ, ಮುಧೋಳ ವೃತ್ತದಿಂದ 17,19,67 ಸಾವಿರ. ಒಟ್ಟು 47,5,12 ಸಾವಿರ ಬಾಕಿ ಉಳಿದಿದೆ. ಇದನ್ನೂ ಓದಿ: ಅತ್ತೆ ಮನೆಗೆ ಮತ ಕೇಳಲು ಹೋದ ಸಿಎಂ ಬಸವರಾಜ ಬೊಮ್ಮಾಯಿ

    ಹೆಸ್ಕಾಮ್ ಎಮ್ ಡಿ ಆದೇಶದ ಪ್ರಕಾರ ಬಾಕಿ ಉಳಿಸಿಕೊಂಡ ಹಿನ್ನೆಲೆ ಸಂಪರ್ಕ ಕಡಿತ ಮಾಡುತ್ತಿದ್ದೇವೆ. ಇದು ಅನಿವಾರ್ಯ ಯಾವ ಪಂಚಾಯ್ತಿಯಿಂದ ಬಾಕಿ ಪಾವತಿಸಲಾಗುತ್ತದೆ ಪುನಃ ಸಂಪರ್ಕ ಕಲ್ಪಿಸುತ್ತೇವೆ. ಬಾಕಿ ನೀಡದವರೆಗೂ ವಿದ್ಯುತ್ ಸಂಪರ್ಕ ಕಡಿತ ಕಾರ್ಯ ಮುಂದುವರಿಯುತ್ತದೆ ಅಂತ ಹೆಸ್ಕಾಮ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಗ್ರಾಪಂ ಪಿಡಿಒ ಗಳು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೆಸ್ಕಾಮ್ ಅಧಿಕಾರಿಗಳ ಜೊತೆಯೂ ಮಾತಾಡಲಾಗಿದೆ. ಇನ್ನೆರಡು ದಿನದಲ್ಲಿ ಸಮಸ್ಯೆ ಸರಿಯಾಗುವ ವಿಶ್ವಾಸ ಇದೆ. ಗ್ರಾಪಂ ಅನುದಾನದಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತೇವೆ ಅಂತಿದ್ದಾರೆ. ಒಟ್ಟಿನಲ್ಲಿ ಗ್ರಾಮದ ಶ್ರೇಯೋಭೀವೃದ್ದಿಗೆ ಇರಬೇಕಿದ್ದ ಗ್ರಾಪಂಗಳಿಂದಲೇ ಗ್ರಾಮಕ್ಕೆ ಕತ್ತಲು ಆವರಿಸುತ್ತಿದೆ. ಆದಷ್ಟು ಬೇಗ ಜಿಪಂ ಅಧಿಕಾರಿಗಳು ಹೆಸ್ಕಾಮ್ ಅಧಿಕಾರಿಗಳು ಚರ್ಚೆ ಮಾಡಿ ಈ ಸಮಸ್ಯೆ ಬಗೆಹರಿಸಬೇಕಾಗಿದೆ.

  • ವಿದ್ಯುತ್ ಕಂಬದಿಂದ ಜಿಗಿದು ಜೀವ ಉಳಿಸಿಕೊಂಡ ಸಿಬ್ಬಂದಿ

    ವಿದ್ಯುತ್ ಕಂಬದಿಂದ ಜಿಗಿದು ಜೀವ ಉಳಿಸಿಕೊಂಡ ಸಿಬ್ಬಂದಿ

    ಧಾರವಾಡ: ವಿದ್ಯುತ್ ಕಂಬ ಬದಲಿಸುವ ವೇಳೆ ಭಾರೀ ಅನಾಹುತವೊಂದು ತಪ್ಪಿದೆ.

    ಧಾರವಾಡ ನಗರದ ಕಮಲಾಪುರದಲ್ಲಿ ಈ ಘಟನೆ ನಡೆದಿದೆ. ಹೆಸ್ಕಾಂ ಲೈನ್ ಮ್ಯಾನ್ ಕಂಬ ಬದಲಿಸುವ ವೇಳೆ ಏಕಾಏಕಿ ಕಂಬ ಸಿಬ್ಬಂದಿ ಮೈಮೇಲೆ ಬೀಳುತ್ತಿತ್ತು. ಈ ವೇಳೆ ಲೈನ್ ಮ್ಯಾನ್ ಕಂಬದಿಂದ ಹಾರಿ ಪಾರಾಗಿದ್ದಾರೆ.

    ಕಂಬ ಬದಲಿಸುವ ಕೆಲಸದ ವೇಳೆ ಕಂಬದ ಮೇಲೆ ಹತ್ತಿ ವೈಯರ್ ತಪ್ಪಿಸುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಮುರಿದಿದ್ದ ಕಂಬ ವಾಲತೊಡಗಿದೆ. ಇದನ್ನರಿತ ಲೈನ್ ಮ್ಯಾನ್ ತಕ್ಷಣ ಕಂಬದಿಂದ ಜಿಗಿದು ಪಾರಾಗಿದ್ದಾರೆ.

    ಹೆಸ್ಕಾಂ ಸಿಬ್ಬಂದಿ ಕಂಬದಿಂದ ಬೀಳುವಾಗ ಕೆಳಗಡೆನೇ ಟ್ರ್ಯಾಕ್ಟರ್ ಕೂಡ ನಿಂತಿತ್ತು. ಟ್ರ್ಯಾಕ್ಟರ್ ಹಾಗೂ ಕಂಬದ ನಡುವೆ ಹೆಸ್ಕಾಂ ಸಿಬ್ಬಂದಿ ಸಿಲುಕುತ್ತಿದ್ರೂ ಅವರ ಜೀವಕ್ಕೆ ಅಪಾಯವಿತ್ತು. ಆದರೆ ಅವರು ತಕ್ಷಣ ಎಚ್ಚೆತ್ತ ಕಾರಣ ಜೀವ ಉಳಿಸಿಕೊಂಡು ಪಾರಾಗಿದ್ದಾರೆ.

    ಕಂಬದ ಬಳಿಯೇ ನಿಂತಿದ್ದ ಟ್ರ್ಯಾಕ್ಟರ್ ಚಾಲಕ ಕೂಡ ಈ ಕಂಬ ಬೀಳುವುದನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದಾರೆ. ಸದ್ಯ ಈ ಎಲ್ಲ ದೃಶ್ಯವನ್ನು ಅಲ್ಲೇ ನಿಂತಿದ್ದ ಯುವಕನೋರ್ವ ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ.

  • ವಿದ್ಯುತ್ ತಂತಿ ತುಂಡಾಗಿ ಬಿದ್ದರೂ ತಲೆಕೆಡಿಸಿಕೊಳ್ಳದ ಹೆಸ್ಕಾಂ- ಶಾಕ್ ಹೊಡೆದು ಇಬ್ಬರು ಸಾವು

    ವಿದ್ಯುತ್ ತಂತಿ ತುಂಡಾಗಿ ಬಿದ್ದರೂ ತಲೆಕೆಡಿಸಿಕೊಳ್ಳದ ಹೆಸ್ಕಾಂ- ಶಾಕ್ ಹೊಡೆದು ಇಬ್ಬರು ಸಾವು

    ಬಾಗಲಕೋಟೆ: ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಟೆ ಗ್ರಾಮದ ಜಮೀನಿನಲ್ಲಿ ನಡೆದಿದೆ.

    ಗೋಟೆ ಗ್ರಾಮದ ಸಂತೋಷ್ ಪಾಟೀಲ್(30) ಹಾಗೂ ಬಾಳಾಸಾಹೇಬ್ ಕಟಾವೆ(20) ಮೃತ ದುರ್ದೈವಿಗಳು. ಜಮೀನಿನಲ್ಲಿ ತೊಗರಿ ಬೆಳೆಗೆ ಔಷಧಿ ಸಿಂಪರಣೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ಬಗ್ಗೆ ಹೆಸ್ಕಾಂಗೆ ಮಾಹಿತಿ ತಿಳಿಸಿ ಹಲವಾರು ಬಾರಿ ದುರಸ್ಥಿ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ದುರಸ್ಥಿ ಕಾರ್ಯ ಮಾಡದೆ ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷಿಸಿದ್ದರು.

    ಹೀಗಾಗಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂದು ನಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ಆರೋಪಿಸಿ ಕಣ್ಣೀರಿಡುತ್ತಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ರಾತ್ರೋರಾತ್ರಿ ಎಲೆಕ್ಟ್ರಾನಿಕ್ಸ್ ಉಪಕರಣಗಳು ಭಸ್ಮ- ರೊಚ್ಚಿಗೆದ್ದ ಗ್ರಾಮಸ್ಥರು ಬಿಲ್ ಕಲೆಕ್ಟರ್ ನ ಕೂಡಿ ಹಾಕಿದ್ರು

    ರಾತ್ರೋರಾತ್ರಿ ಎಲೆಕ್ಟ್ರಾನಿಕ್ಸ್ ಉಪಕರಣಗಳು ಭಸ್ಮ- ರೊಚ್ಚಿಗೆದ್ದ ಗ್ರಾಮಸ್ಥರು ಬಿಲ್ ಕಲೆಕ್ಟರ್ ನ ಕೂಡಿ ಹಾಕಿದ್ರು

    ಧಾರವಾಡ: ಹೈವೋಲ್ಟೇಜ್ ವಿದ್ಯುತ್ ಹರಿದ ಪರಿಣಾಮ ಗ್ರಾಮದ ಹಲವು ಮನೆಗಳ ಎಲೆಕ್ಟ್ರಾನಿಕ್ಸ್ ಉಪಕರಣಗಳೆಲ್ಲ ಸುಟ್ಟು ಭಸ್ಮವಾಗಿರುವ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಕ್ಯಾರಕೊಪ್ಪ ಗ್ರಾಮದಲ್ಲಿ ಬುಧವಾರ ತಡರಾತ್ರಿ ಹೈವೋಲ್ಟೇಜ್ ವಿದ್ಯುತ್‍ನಿಂದ ಹಲವು ಮನೆಗಳ ಟಿವಿ, ಫ್ರಿಡ್ಜ್, ಚಾರ್ಜ್ ಹಾಕಿದ್ದ ಮೊಬೈಲ್ ಫೋನ್‍ಗಳು ಹಾಗೂ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸುಟ್ಟು ಹೋಗಿದೆ. ಸುಮಾರು 8 ಮನೆಗಳಲ್ಲಿದ್ದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸುಟ್ಟು ಹಾಳಾಗಿದೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಬೆಳ್ಳಂಬೆಳಗ್ಗೆ ಗ್ರಾಮದ ಬಿಲ್ ಕಲೆಕ್ಟರ್‍ಗೆ ಕರೆ ಮಾಡಿ ಅವಘಡದ ಬಗ್ಗೆ ತಿಳಿದ್ದಾರೆ. ಅಲ್ಲದೆ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ.

    ಗ್ರಾಮಸ್ಥರ ಒತ್ತಾಯದ ಮೇಲೆ ಸ್ಥಳಕ್ಕೆ ಬಂದ ಬಿಲ್ ಕಲೆಕ್ಟರ್ ನನ್ನು ತರಾಟೆಗೆ ತೆರೆದುಕೊಂಡು, ನಂತರ ಮೇಲಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಿನ್ನನ್ನು ಬಿಡಲ್ಲ ಎಂದು ಗ್ರಾಮ ಪಂಚಾಯ್ತಿಯಲ್ಲಿದ್ದ ಕೋಣೆಯಲ್ಲಿ ಗ್ರಾಮಸ್ಥರು ಕೂಡಿ ಹಾಕಿದ್ದಾರೆ. ಹಾಗೆಯೇ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಲಿಸುತ್ತಿದ್ದ ರೈಲಿನ ಮುಂದೆ ಮಲಗಿ ಪ್ರಾಣಬಿಟ್ಟ ಹೆಸ್ಕಾಂ ಉದ್ಯೋಗಿ!

    ಚಲಿಸುತ್ತಿದ್ದ ರೈಲಿನ ಮುಂದೆ ಮಲಗಿ ಪ್ರಾಣಬಿಟ್ಟ ಹೆಸ್ಕಾಂ ಉದ್ಯೋಗಿ!

    – ಕಣ್ಣಮುಂದೆಯೇ ಮಗನ ಸಾವು ಕಂಡು ಕಣ್ಣೀರಿಟ್ಟ ತಂದೆ

    ಬಾಗಲಕೋಟೆ: ಯುವಕನೊಬ್ಬ ಬೈಕಿನಿಂದ ಇಳಿದು ಓಡಿ ಹೋಗಿ ಚಲಿಸುತ್ತಿದ್ದ ರೈಲಿನ ಮುಂದೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

    ಬಾಗಲಕೋಟೆ ತಾಲೂಕಿನ ಗುಳಬಾಳ ತಾಂಡಾದ ನಿವಾಸಿ ಪರಶುರಾಮ್ ರಾಠೋಡ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಪರಶುರಾಮ್ ಬಾಗಲಕೋಟೆಯ ಹೆಸ್ಕಾಂನಲ್ಲಿ ಲೈನ್‍ಮನ್ ಆಗಿ ಕೆಲಸ ಮಾಡುತ್ತಿದ್ದ. ತಮ್ಮ ಮುಂದೆಯೇ ಮಗ ಆತ್ಮಹತ್ಯೆ ಶರಣಾಗಿದ್ದಕ್ಕೆ ತಂದೆ ಕಣ್ಣೀರಿಟ್ಟಿದ್ದಾರೆ.

    ಘಟನೆಯ ವಿವರ:
    ಪರಶುರಾಮ್ ತನ್ನ ಸಹೋದರ ಹಾಗೂ ತಂದೆಯ ಜೊತೆಗೆ ಬಾಗಲಕೋಟೆಗೆ ಬರುತ್ತಿದ್ದ. ಈ ವೇಳೆ ವಿಜಯಪುರದಿಂದ ಹುಬ್ಬಳ್ಳಿಗೆ ಹೊರಟಿದ್ದು, ರೈಲು ಗೇಟ್ ಹಾಕಲಾಗಿತ್ತು. ಆದರೆ ಪರಶುರಾಮ್ ಬೈಕ್‍ನಿಂದ ಇಳಿದು ತಕ್ಷಣವೇ ರೈಲು ಹಳಿಯ ಮೇಲೆ ತಲೆ ಇಟ್ಟು ಮಲಗಿದ್ದಾನೆ. ಪರಿಣಾಮ ರೈಲು ಹರಿದು ಪರಶುರಾಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಕಣ್ಣ ಮುಂದೆಯೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಪರಶುರಾಮ್ ತಂದೆ ಕಣ್ಣೀರಿಟ್ಟಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆ ಶಹರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಯುವಕ ಪರಶುಮ್ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರಿಗೆ ಆತಂಕ!

    ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರಿಗೆ ಆತಂಕ!

    ಚಿಕ್ಕೋಡಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ಗ್ರಾಮಸ್ಥರೇ ಆತಂಕದಿಂದ ಕಾಲ ಕಳೆಯುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆಯುತ್ತಿದೆ.

    ಸ್ವಲ್ಪ ವಿದ್ಯುತ್ ತಾಗಿದರೆ ಪ್ರಾಣ ಹೋಗುತ್ತದೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿದಿದ್ದರೂ ಗ್ರಾಮದ ಬಹುತೇಕ ಮನೆಗಳ ಮೇಲೆ ಹೈ ಟೆನ್ಶನ್ ವಿದ್ಯುತ್ ಕೇಬಲ್ ಗಳನ್ನು ಹರಿ ಬಿಟ್ಟಿದ್ದು ಜನರು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಾಂಕ್ರೆಟ್ ಮನೆಗಳು ಆಗಿರುದರಿಂದ ಎಲ್ಲಿ ಸ್ವಲ್ಪ ಶಾರ್ಟ್ ಸರ್ಕ್ಯೂಟ್‍ ಆದರೂ ಮನೆಗೆಲ್ಲ ಕರೆಂಟ್ ತಾಗಿ ಬಿಡುತ್ತೆ ಎಂಬ ಭಯ ಜನರನ್ನು ಕಾಡುತ್ತಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ಲಾಸ್ಟಿಕ್ ಪೈಪ್ ಅಳವಡಿಸಿಕೊಳ್ಳಿ ಏನೂ ಆಗಲ್ಲ ಅನ್ನುತ್ತಿರುವ ಹೆಸ್ಕಾಂ ಸಿಬ್ಬಂದಿ ಮಾತು ಕೇಳಿ ಅದನ್ನೂ ಮಾಡಿದರೂ ಪ್ಲಾಸ್ಟಿಕ್ ಸುಟ್ಟು ಹೋಗುತ್ತಿದೆ. ಇದರಿಂದ ನಮಗೆ ತುಂಬ ಭಯ ಆಗುತ್ತಿದ್ದು ಚಿಕ್ಕ ಮಕ್ಕಳ ಬಗ್ಗೆ ಕಾಳಜಿ ಹೆಚ್ಚಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಜನರು ಕಿಡಿಕಾರಿದ್ದಾರೆ.

    ಇಲ್ಲಿನ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದ್ದು ಯಾವುದೇ ಅವಘಡ ಸಂಭವಿಸುವ ಮುನ್ನ ಹೆಸ್ಕಾಂ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews