Tag: ಹೆಸ್ಕಾಂ

  • ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ – ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ವಿದ್ಯುತ್ ಪೂರೈಸಿದ ಹೆಸ್ಕಾಂ ಸಿಬ್ಬಂದಿ

    ಮಳೆಗೆ ವಿದ್ಯುತ್ ಲೈನ್ ಮೇಲೆ ಬಿದ್ದ ಮರ – ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ವಿದ್ಯುತ್ ಪೂರೈಸಿದ ಹೆಸ್ಕಾಂ ಸಿಬ್ಬಂದಿ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿಯಲ್ಲಿ ಮಳೆಗೆ ವಿದ್ಯುತ್‌ ಲೈನ್‌ ಮೇಲೆ ಮರ ಬಿದ್ದು, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಮೊಸಳೆಗಳಿರುವ ನದಿಯಲ್ಲಿ 2 ದಿನ ಕಾರ್ಯಾಚರಣೆ ನಡೆಸಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್‌ ಪೂರೈಕೆ ಮಾಡಿದ್ದಾರೆ.

    ಮುಂಗಾರು ಪೂರ್ವ ಭಾರೀ ಗಾಳಿ, ಮಳೆಯಿಂದ ಬೃಹತ್ ಗಾತ್ರದ ಮಾವಿನ ಮರ ಬಿದ್ದು ವಿದ್ಯುತ್ ಲೈನ್ ತುಂಡಾಗಿ ಕಾಳಿ ನದಿ ನೀರಿಗೆ ಬಿದ್ದಿತ್ತು. ಇದರಿಂದಾಗಿ ಈ ಭಾಗದ ಬೊಮ್ಮನಳ್ಳಿ, ಕೇದಾಳ, ಕುಳಗಿ ಹಾಗೂ ಅಂಬಿಕಾನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

    ತಕ್ಷಣ ಕಾರ್ಯಪ್ರವೃತ್ತರಾದ ಹೆಸ್ಕಾಂ ಸಿಬ್ಬಂದಿ, 11 ಕೆ.ವಿ. ಪ್ರಾಜೆಕ್ಟ್ 1 ಮತ್ತು 2 ಹಾಗೂ ಕಾಳಿ ಮಾರ್ಗದ ವಿದ್ಯುತ್‌ ಲೈನ್‌ ದುರಸ್ತಿ ಕಾರ್ಯಕ್ಕೆ ಕೈ ಹಾಕಿದರು. ಆದರೆ, ನದಿಯಲ್ಲಿ ಬಿದ್ದ ವಿದ್ಯುತ್ ಲೈನ್‌ಗಳನ್ನು ತೆಗೆದು ಸರಿಪಡಿಸಲು ಬೋಟ್ ವ್ಯವಸ್ಥೆ ಇಲ್ಲದೇ ಕಷ್ಟವಾಗಿತ್ತು. ಈ ನದಿಯಲ್ಲಿ ಮೊಸಳೆಗಳು ಹೆಚ್ಚಿದ್ದು, ದಾಳಿ ನಡೆಸುವ ಸಾಧ್ಯತೆಗಳಿತ್ತು.

    ಆದರೆ, ಹೆಸ್ಕಾಂ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ವಿದ್ಯುತ್ ಲೈನ್ ಸರಿಪಡುಸಲು ಮುಂದಾದರು. ಇದಕ್ಕಾಗಿ ಸಂತೋಷ್ ಎಂಬವರು ರಿವರ್ ರಾಪ್ಟಿಂಗ್ ಬೋಟ್ ವ್ಯವಸ್ಥೆ ಮಾಡಿಕೊಟ್ಟರು. ಎರಡು ದಿನ ಕಾಳಿ ನದಿಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿ ಕೊನೆಗೂ ವಿದ್ಯುತ್ ತಂತಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ದಾಂಡೇಲಿಯ ಅಂಬಿಕಾ ನಗರ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಿದ್ದಾರೆ.

  • ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ – ರೈತರ ಜಮೀನಿನಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿ, ಟ್ರಾನ್ಸ್‌ಫಾರ್ಮರ್

    ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ – ರೈತರ ಜಮೀನಿನಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿ, ಟ್ರಾನ್ಸ್‌ಫಾರ್ಮರ್

    ಹಾವೇರಿ: ಹೆಸ್ಕಾಂ (HESCOM) ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಹಲವು ರೈತರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು, ಟ್ರಾನ್ಸ್‌ಫಾರ್ಮರ್‌ಗಳು ಕೈಗೆಟಕುವಂತಿವೆ. ಟ್ರಾನ್ಸ್‌ಫಾರ್ಮರ್‌ಗಳಂತೂ ಬಾಗಿ ನೆಲಕ್ಕೆ ಬೀಳುವಂತಿವೆ.

    ಶಿರಬಡಗಿ ಗ್ರಾಮದ ರೈತ ಮುತ್ತನಗೌಡ ಮತ್ತು ಶಿವನಗೌಡ ಎಂಬವರ ಜಮೀನಿನಲ್ಲಿ ಬಾಗಿ ನಿಂತಿರುವ ಟ್ರಾನ್ಸ್‌ಫಾರ್ಮರ್ ಮತ್ತು ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಬೆಳೆಗಳಿಗೆ ತಗುಲಿ ಬೆಳೆಗಳು ಸುಟ್ಟು ಹಾಳಾಗಲಿವೆ. ಅಷ್ಟೇ ಅಲ್ಲದೇ ಜಮೀನಿನಲ್ಲಿ ಕೃಷಿ ಕೆಲಸ ಮಾಡುವ ರೈತರು ಜೋತು ಬಿದ್ದ ವಿದ್ಯುತ್ ತಂತಿಗಳು ಮತ್ತು ಬಾಗಿದ ಟ್ರಾನ್ಸ್‌ಫಾರ್ಮರ್‌ಗಳಿಂದ ಯಾವಾಗ ಏನಾಗುತ್ತದೆಯೋ ಎಂಬ ಜೀವ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ದಂಧೆ ಭೇದಿಸಿದ ಪೊಲೀಸರು – 11 ಮಂದಿ ಅರೆಸ್ಟ್‌

    ಗ್ರಾಮದ ರೈತರು ಮನವಿಗಳ ಮೇಲೆ ಮನವಿಗಳನ್ನು ಸಲ್ಲಿಸಿ ಹೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಅವಘಡಗಳು ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಉಡುಪಿ| ದೈವದ ಕಾರಣಿಕ – 28 ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ

  • ಸಿಎಂ ಬಂಪರ್ ಗಿಫ್ಟ್ – ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿ ನೇಮಕ

    ಸಿಎಂ ಬಂಪರ್ ಗಿಫ್ಟ್ – ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿ ನೇಮಕ

    ಬೆಂಗಳೂರು: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ (Congress) ಗೆಲುವು ಬೆನ್ನಲ್ಲೇ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ (Syed Azeempeer Khadri) ಕಾಂಗ್ರೆಸ್ ಬಂಪರ್ ಗಿಫ್ಟ್ ನೀಡಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ (HESCOM) ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿಯನ್ನು ಕಾಂಗ್ರೆಸ್ ನೇಮಕ ಮಾಡಿದೆ.

    ಶಿಗ್ಗಾಂವಿ ಉಪಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ಖಾದ್ರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಖಾದ್ರಿಗೆ ಉತ್ತಮ ಸ್ಥಾನಮಾನದ ಭರವಸೆ ನೀಡಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ನಾಮಪತ್ರ ಹಿಂಪಡೆಯುವಂತೆ ಸೂಚಿಸಿದ್ದರು. ಭರವಸೆ ಬೆನ್ನಲ್ಲೇ ಖಾದ್ರಿ ನಾಮಪತ್ರ ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್‌ಗೆ ಬೆಂಬಲ ಸೂಚಿಸಿದ್ದರು. ಇದನ್ನೂ ಓದಿ: ಬಣ ಬಡಿದಾಟ ಜೋರು – ಯತ್ನಾಳ್‌ ಟೀಂ ವಿರುದ್ಧವೇ ಬಿಜೆಪಿಯಿಂದ ಪೊಲೀಸ್‌ ದೂರು

    ಅದರಂತೆಯೇ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಬೆನ್ನಿಗೆ ನಿಂತು ಗೆಲ್ಲಿಸಿದ್ದರು. ಇದೀಗ ಕೊಟ್ಟ ಮಾತಿನಂತೆಯೇ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ರಣಹೇಡಿ, ಮಗನನ್ನೇ ಗೆಲ್ಲಿಸೋಕೆ ಆಗಿಲ್ಲ ಅಂದ್ರೆ ಕೇಂದ್ರ ಸಚಿವನಾಗಿ ಏನು ಪ್ರಯೋಜನ?: ಸಿಪಿವೈ

  • ವಿದ್ಯುತ್ ಬಿಲ್ ನೀಡಲು ತೆರಳಿದ್ದ ನೌಕರನ ಕೊಲೆಗೆ ಯತ್ನ- ಆರೋಪಿ ಅರೆಸ್ಟ್

    ವಿದ್ಯುತ್ ಬಿಲ್ ನೀಡಲು ತೆರಳಿದ್ದ ನೌಕರನ ಕೊಲೆಗೆ ಯತ್ನ- ಆರೋಪಿ ಅರೆಸ್ಟ್

    ಹುಬ್ಬಳ್ಳಿ: ವಿದ್ಯುತ್ ಬಿಲ್ ನೀಡಲು ತೆರಳಿದ್ದ ಹೆಸ್ಕಾಂ (HESCOM )ನೌಕರನ ಕೊಲೆಗೆ ಯತ್ನಿಸಿದ ಘಟನೆ ಮಹಾಲಕ್ಷ್ಮಿ ಬಡವಾವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬ್ದುಲ್ ಎಂಬಾತನನನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಆರೋಪಿ ಅಬ್ದುಲ್ ಕಳೆದ ಮೂರು ತಿಂಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ. ಹೀಗಾಗಿ ಈ ತಿಂಗಳ ಬಿಲ್ 5 ಸಾವಿರ ರೂ.ಗಿಂತ ಜಾಸ್ತಿ ಬಂದಿದೆ. ಅಲ್ಲದೇ ವಿದ್ಯುತ್ ಬಳಕೆ 200 ಯೂನಿಟ್‍ಗಿಂತ ಹೆಚ್ಚು ಬಳಕೆ ಮಾಡಿದ್ದ ಹಿನ್ನೆಲೆ ಗೃಹ ಜ್ಯೋತಿ ಯೋಜನೆಯ ಉಪಯೋಗ ಪಡೆಯಲು ಸಾಧ್ಯವಾಗಿಲ್ಲ. ಇದರಿಂದ ಕೋಪಗೊಂಡ ಅಬ್ದುಲ್ ಬಿಲ್ ನೀಡಲು ಹೋದ ಮಲ್ಲಯ್ಯ ಗಣಾಚಾರಿ ಎಂಬ ನೌಕರನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಮನಬಂದಂತೆ ಥಳಿಸಿದ್ದಾನೆ. ಇದನ್ನೂ ಓದಿ: ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಬಹುದು ಆದರೆ ಫಸ್ಟ್ ಬೆಂಚ್ ಸಿಗಲ್ಲ: ಪರಮೇಶ್ವರ್

    ಬಳಿಕ ಸ್ಥಳೀಯರು ನೌಕರ ಮಲ್ಲಯ್ಯನನ್ನು ರಕ್ಷಣೆ ಮಾಡಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡಿರುವ ಮಲ್ಲಯ್ಯನಿಗೆ ಚಿಕಿತ್ಸೆ ನೀಡಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಸಂಬಂಧ ಅಶೋಕನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನೆಹರೂ ಸ್ಮಾರಕ ಇನ್ಮುಂದೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ – ಕೇಂದ್ರದಿಂದ ಹೆಸರು ಮರುನಾಮಕರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಹೆಸ್ಕಾಂ ಗುತ್ತಿಗೆ ನೌಕರ ಸಾವು

    ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಹೆಸ್ಕಾಂ ಗುತ್ತಿಗೆ ನೌಕರ ಸಾವು

    ಚಿಕ್ಕೋಡಿ: ದುರಸ್ತಿ ಕಾರ್ಯ ಮಾಡುತ್ತಿದ್ದ ವೇಳೆ ವಿದ್ಯುತ್ (Electricity) ಪ್ರವಹಿಸಿ ಕಂಬದ ಮೇಲೆಯೇ ಹೆಸ್ಕಾಂ (HESCOM) ಗುತ್ತಿಗೆ ನೌಕರ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಜಿಲ್ಲೆ ಚಿಕ್ಕೋಡಿಯ (Chikkodi) ಹೊಸಪೇಟೆ ಗಲ್ಲಿಯಲ್ಲಿ ನಡೆದಿದೆ.

    ಚಿಕ್ಕೋಡಿಯ ದಫೇದರ್‌ಕೋಡಿ ನಿವಾಸಿ ಸಿದ್ದರಾಮ ಕುಪವಾಡೆ (38) ಮೃತ ನೌಕರ. ವಿದ್ಯುತ್ ಕಂಬದ ಮೇಲೆ ದುರಸ್ತಿ ಮಾಡುವ ವೇಳೆ ಅವಘಡ ಸಂಭವಿಸಿದೆ. ಇದನ್ನೂ ಓದಿ: ನಾನು ಕಾಂಗ್ರೆಸ್‌ ಕಾರ್ಯಕರ್ತನಾಗಿ ಮೇಲೆ ಬಂದವನು, JDS ಕಚೇರಿಯಲ್ಲೇ ಕಾಂಗ್ರೆಸ್ ನನ್ನ ತಾಯಿ ಅಂದಿದ್ದೇನೆ: ವಿಶ್ವನಾಥ್

    ಸಾಂದರ್ಭಿಕ ಚಿತ್ರ

    ದುರಸ್ತಿ ಕಾರ್ಯಕ್ಕಾಗಿ ಲೈನ್‌ಮೆನ್‌ವೊಬ್ಬ ಗುತ್ತಿಗೆ ಆಧಾರದ ಮೇಲೆ ಸಿದ್ದರಾಮನನ್ನ ಕೆಲಸಕ್ಕೆ ಕರೆ ತಂದಿದ್ದ. ಹೊಸಪೇಟೆ ಗಲ್ಲಿ ಹೊರವಲಯದ ಕೃಷಿ ಜಮೀನು ಬಳಿಯ ವಿದ್ಯುತ್ ಕಂಬ ಏರಿ ಸಿದ್ದರಾಮಯ್ಯ ದುರಸ್ತಿ ಕೆಲಸ ಮಾಡುತ್ತಿದ್ದ. ದುರಸ್ತಿ ಕೆಲಸಕ್ಕೆ ಬಂದಿದ್ದ ಮೂವರಲ್ಲಿ ಉಳಿದ ಇಬ್ಬರು ಕೆಳಗೆ ನಿಂತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಸಿದ್ದರಾಮ ಕುಪವಾಡೆ ಮೃತಪಟ್ಟಿದ್ದಾನೆ.

    ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು, ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ವ್ಯಕ್ತಿಯನ್ನ ಕೆಲಸಕ್ಕೆ ತಂದಿದ್ದ ಹೆಸ್ಕಾಂ ಲೈನ್‌ಮೆನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಮೃತನಿಗೆ ಸೂಕ್ತ ಪರಿಹಾರ ಕೊಡುವಂತೆ ಸಿದ್ದರಾಮ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರಿಗಷ್ಟೇ ಗಂಡಸ್ತನ ಮೀಸೆ ಇರೋದಲ್ಲ, ಹಿಂದೂ ಹುಡುಗರಿಗೂ ಇದೆ: ಸ್ವಾಮೀಜಿಯಿಂದ ವಿವಾದಾತ್ಮಕ ಹೇಳಿಕೆ

    ಚಿಕಿತ್ಸೆ ಫಲಿಸದೇ ಯುವಕ ಸಾವು:
    ಚಿತ್ರದುರ್ಗದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೋಲಾರದ ಕೆಜಿಎಫ್ ಮೂಲದ ಯುವಕ ಮಧುಸೂದನ್ (24) ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪಘಾತ ನಡೆದ ಬಳಿಕ ಯುವಕನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸದ್ಯ ಯುವಕನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈ ಬಾರಿಯೂ ದುಬಾರಿ ವಿದ್ಯುತ್‌ ಬಿಲ್‌ – ಹೆಸ್ಕಾಂ ಕಳ್ಳಾಟ ಬಿಚ್ಚಿಟ್ಟ ಪಬ್ಲಿಕ್‌ ಟಿವಿ

    ಈ ಬಾರಿಯೂ ದುಬಾರಿ ವಿದ್ಯುತ್‌ ಬಿಲ್‌ – ಹೆಸ್ಕಾಂ ಕಳ್ಳಾಟ ಬಿಚ್ಚಿಟ್ಟ ಪಬ್ಲಿಕ್‌ ಟಿವಿ

    ಹುಬ್ಬಳ್ಳಿ: ಕಳೆದ ತಿಂಗಳಿನಂತೆ ಈ ಬಾರಿಯೂ ದುಬಾರಿ ವಿದ್ಯುತ್‌ ಬಿಲ್‌ (Electricity Bill) ಬಂದಿದ್ದು ಗ್ರಾಹಕರಿಂದ ಹಗಲು ದರೋಡೆಗೆ ಹೆಸ್ಕಾಂ (HESCOM) ಇಳಿದಿದ್ಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

    ಹೌದು. ರಾಜ್ಯಾದ್ಯಂತ ಕಳೆದ ತಿಂಗಳು ಎಲ್ಲಾ ಮನೆಗಳಿಗೆ ದುಬಾರಿ ವಿದ್ಯುತ್‌ ಬಿಲ್‌ ಬಂದಿತ್ತು. ದುಬಾರಿ ಬಿಲ್‌ ಬಂದಿದ್ದು ಯಾಕೆ ಎಂದು ಪ್ರಶ್ನಿಸಿದ್ದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಿದ್ಯುತ್‌ ದರ ಏರಿಸಿದ್ದರಿಂದ ಜೂನ್‌ ತಿಂಗಳಿನಲ್ಲಿ ದುಬಾರಿ ಬಿಲ್‌ ಬಂದಿದೆ. ಮುಂದಿನ ತಿಂಗಳಿನಿಂದ ದುಬಾರಿ ವಿದ್ಯುತ್‌ ಬಿಲ್‌ ಬರುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು. ಆದರೆ ಈ ಬಾರಿಯೂ ಗ್ರಾಹಕರಿಗೆ ದುಬಾರಿ ಬಿಲ್‌ ಬಂದಿದ್ದು, ದುಬಾರಿ ಬಿಲ್‌ ಯಾಕೆ ಬಂದಿದೆ ಎಂದು ಕೇಳಿದ್ದಕ್ಕೆ ಹೆಸ್ಕಾಂ ಅಧಿಕಾರಿಗಳು ನೀಡುತ್ತಿರುವ ಉತ್ತರದಿಂದ ಹಗಲು ದರೋಡೆ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಈಗ ಎದ್ದಿದೆ.

     

    ಅಧಿಕಾರಿಗಳು ಹೇಳಿದ್ದು ಏನು?
    ದುಬಾರಿ ವಿದ್ಯುತ್‌ ಬಿಲ್‌ ಯಾಕೆ ಬಂದಿದೆ ಎಂದು ಹಲವು ಗ್ರಾಹಕರು ಹೆಸ್ಕಾಂ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಾಫ್ಟ್‌ವೇರ್ ಸಮಸ್ಯೆ (Software Problem), ಫಿಕ್ಸೆಡ್‌ ಚಾರ್ಜ್‌ ಪ್ರತಿ ತಿಂಗಳು ಬದಲಾವಣೆ ಆಗುತ್ತದೆ, ಕೆಇಆರ್‌ಸಿ ಪ್ರತಿ ತಿಂಗಳು ದರ ಬದಲಾವಣೆ ಮಾಡುತ್ತದೆ ಎಂಬ ಉತ್ತರಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರ ಕೊಡುವ ಅಕ್ಕಿಯಲ್ಲೂ ಕಡಿತ; ಅನ್ನಭಾಗ್ಯವಲ್ಲ ಇದು ಕನ್ನ ಭಾಗ್ಯ – ಬೊಮ್ಮಾಯಿ

    ಅಧಿಕಾರಿಗಳು ನಿಜವಾಗಿಯೂ ಗ್ರಾಹಕರಿಗೆ ಈ ರೀತಿ ಉತ್ತರ ನೀಡುತ್ತಿದ್ದಾರಾ ಎಂಬುದರ ರಿಯಾಟಲಿಟಿ ಚೆಕ್‌ ಮಾಡಲು ಪಬ್ಲಿಕ್‌ ಟಿವಿ ತಂಡ ಗ್ರಾಹಕರ ಸೋಗಿನಲ್ಲಿ ವಿದ್ಯುತ್‌ ಬಿಲ್‌ ಪಾವತಿಸಲು ಹೆಸ್ಕಾಂ ಶಿವಗಂಗಾ ನಗರದ ಕಚೇರಿಗೆ ತೆರಳಿತ್ತು.

     

    ರಿಯಾಲಿಟಿ ಚೆಕ್‌ ಹೇಗೆ?
    ಹುಬ್ಬಳ್ಳಿಯ ಕೇಶ್ವಾಪುರದ ಗ್ರಾಹಕರಿಗೆ ಈ ಬಾರಿ 688 ರೂ. ವಿದ್ಯುತ್ ಬಿಲ್ ಬಂದಿತ್ತು. ಗ್ರಾಹಕರು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸುತ್ತಿದ್ದರೂ ಈ ತಿಂಗಳ ಬಿಲ್ ನಲ್ಲಿ 25 ರೂ. ಹಿಂಬಾಕಿ ಅಂತ ಬಂದಿತ್ತು. ಈ ಬಿಲ್‌ ಹಿಡಿದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಪರಿಶೀಲಿಸುವುದಾಗಿ ತಿಳಿಸಿದರು. ಸ್ವಲ್ಪ ಹೊತ್ತಿನ ಬಳಿಕ ಸಾಫ್ಟ್‌ವೇರ್ ಸಮಸ್ಯೆಯಿಂದ 25 ರೂ.‌ ಹೆಚ್ಚುವರಿ ಬಂದಿದೆ ಎಂದು ಹೇಳಿ 25 ರೂ. ಕಳೆದು 664 ರೂ. ನೀಡಿದ್ದಾರೆ.

     

    ಪ್ರಶ್ನೆ ಮಾಡಿದ ಪರಿಣಾಮ ಒಬ್ಬ ಗ್ರಾಹಕರ ಬಿಲ್‌ ಮೊತ್ತ ಕಡಿಮೆಯಾಗಿದೆ. ಕೆಲ ಗ್ರಾಹಕರು ಬಿಲ್‌ ಸರಿಯಾದ ಸಮಯಕ್ಕೆ ಪಾವತಿ ಮಾಡುತ್ತಿದ್ದರೂ 300 ರಿಂದ 500 ರೂ. ಹಿಂಬಾಕಿ ಬಂದಿದೆ. ಬಹುತೇಕ ಗ್ರಾಹಕರು ಎಲ್ಲಿ ವಿದ್ಯುತ್‌ ಸಂಪರ್ಕ ಕಡಿತ ಮಾಡಬಹುದು ಎಂಬ ಭಯಕ್ಕೆ ಬಿದ್ದು ಈಗಾಗಲೇ ಬಿಲ್‌ ಕಟ್ಟಿದ್ದಾರೆ. ಇದು ಸಾಫ್ಟ್‌ವೇರ್‌ ದೋಷದಿಂದ ಬಂದಿರುವ ದುಬಾರಿ ಮೊತ್ತವೇ ಅಥವಾ ಹೆಸ್ಕಾಂ ಸಿಬ್ಬಂದಿ ಮಾಡುತ್ತಿರುವ ಹಗಲು ದರೋಡೆಯೇ ಎಂಬುದರ ಅನುಮಾನ ಎದ್ದಿದ್ದು ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕಿದೆ.

  • ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 18 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ ಹೆಸ್ಕಾಂ

    ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 18 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ ಹೆಸ್ಕಾಂ

    ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ (Visvesvaraya Technological University) ಹೆಸ್ಕಾಂ (HESCOM) ಬರೋಬ್ಬರಿ 18 ಲಕ್ಷ ರೂ. ಬಿಲ್ ಅನ್ನು ನೀಡಿದ್ದು, ಜೂನ್ ತಿಂಗಳ ವಿದ್ಯುತ್ ಬಿಲ್ (Electricity Bill) ಕಂಡು ಬೆಳಗಾವಿ (Belagavi) ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್ ಹೌಹಾರಿದ್ದಾರೆ.

    ಕಾಂಗ್ರೆಸ್ (Congress) ಸರ್ಕಾರ ರಾಜ್ಯದ ಜನತೆಗೆ ಉಚಿತ 200 ಯೂನಿಟ್ ವಿದ್ಯುತ್ ನೀಡುವ ಭರವಸೆ ನೀಡಿದ ಬೆನ್ನಲ್ಲೇ ವಿದ್ಯುತ್ ದರ ಏಕಾಏಕಿ ಏರಿಕೆಯಾಗಿದ್ದು, ಜನರು ಶಾಕ್ ಆಗಿದ್ದಾರೆ. ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್ ದರ ಏರಿಕೆ ಹಿನ್ನಲೆ ವಿದ್ಯುತ್ ದರ ಏರಿಕೆಯಿಂದ ಬೆಳಗಾವಿಯ ವಿಟಿಯುಗೆ 5 ಲಕ್ಷ ರೂ. ಹೆಚ್ಚುವರಿ ಬಿಲ್ ಬಂದಿದ್ದು, ವಿದ್ಯುತ್ ಬಿಲ್‌ನಿಂದ ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಶಾಕ್‌ಗೆ ಒಳಗಾಗಿದ್ದಾರೆ. ಇದನ್ನೂ ಓದಿ: ಸಿಎಂ ಅವ್ರೇ ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ- 2018ರ ಪಬ್ಲಿಕ್ ಟಿವಿ ವರದಿ ತೆಗೆದು ಸರ್ಕಾರಕ್ಕೆ ತಿವಿದ ಯತ್ನಾಳ್

    ರಾಜ್ಯದ ಐದು ಕಡೆ ವಿಭಾಗೀಯ ಕೇಂದ್ರಗಳನ್ನು ಹೊಂದಿರುವ ವಿಟಿಯು ವಿಭಾಗೀಯ ಕೇಂದ್ರ ಹಾಗೂ ವಿಟಿಯು ಕ್ಯಾಂಪಸ್ ಸೇರಿ ಜೂನ್ ತಿಂಗಳಲ್ಲಿ 35 ಲಕ್ಷ ರೂ. ಬಿಲ್ ಬಂದಿದೆ. ಅದರಲ್ಲಿ ಬೆಳಗಾವಿಯಲ್ಲಿರುವ ವಿಟಿಯು ಕ್ಯಾಂಪಸ್ಸಿನ ಈ ತಿಂಗಳ ಬಿಲ್ 18 ಲಕ್ಷ ರೂ. ಎಂದು ನಮೂದಿಸಲಾಗಿದೆ. ವಿಟಿಯು ಮುಖ್ಯ ಕ್ಯಾಂಪಸ್ ಸೇರಿ 6 ವಿಭಾಗೀಯ ಕೇಂದ್ರಗಳ ಮೇ ತಿಂಗಳ ವಿದ್ಯುತ್ ಬಿಲ್ 35 ಲಕ್ಷ ರೂ.ಬಂದಿದ್ದು, ಮಾರ್ಚ್ ತಿಂಗಳಲ್ಲಿ 25,56,958 ರೂ. ಹಾಗೂ ಏಪ್ರಿಲ್ ತಿಂಗಳಲ್ಲಿ 25,29,021 ರೂ. ವಿದ್ಯುತ್ ಬಿಲ್ ಪಾವತಿಸಿದೆ. ಇದನ್ನೂ ಓದಿ: ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

    ಮೇ ತಿಂಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ 35,05,869 ರೂ. ಬಿಲ್ ನೀಡಿದೆ. ಆದರೆ ಈಗ ಏಕಾಏಕಿ 10 ಲಕ್ಷ ಬಿಲ್ ಬಂದಿರುವುದಕ್ಕೆ ವಿಟಿಯು ಆಡಳಿತ ಮಂಡಳಿ ಕಂಗಾಲಾಗಿದ್ದು, 10 ಲಕ್ಷ ಹೆಚ್ಚುವರಿ ಬಿಲ್ ಬಂದಿರುವುದಕ್ಕೆ ಹೆಸ್ಕಾಂಗೆ ಪತ್ರಬರೆಯಲು ವಿಟಿಯು ಮುಂದಾಗಿದೆ. ಅಲ್ಲದೇ ಗೊಂದಲ ಬಗೆಹರಿದ ಬಳಿಕವಷ್ಟೇ ಹೆಸ್ಕಾಂಗೆ ವಿದ್ಯುತ್ ಬಿಲ್ ಪಾವತಿಸಲು ವಿಟಿಯು ನಿರ್ಧಾರ ಮಾಡಿದೆ. ಇದನ್ನೂ ಓದಿ: ಹೆಂಡತಿ ನನ್ನ ಮಾತು ಕೇಳುತ್ತಿಲ್ಲ, ದಯಮಾಡಿ ಪರಿಹರಿಸಿ- ಶಾಸಕರಿಗೆ ವ್ಯಕ್ತಿ ದೂರು

  • ಹೆಸ್ಕಾಂಗೆ 13 ಸಾವಿರ ಕೋಟಿ ಅನುದಾನ ನೀಡಿ ಪುನಶ್ಚೇತನ ನೀಡಿದ್ದೆ: ಬೊಮ್ಮಾಯಿ

    ಹೆಸ್ಕಾಂಗೆ 13 ಸಾವಿರ ಕೋಟಿ ಅನುದಾನ ನೀಡಿ ಪುನಶ್ಚೇತನ ನೀಡಿದ್ದೆ: ಬೊಮ್ಮಾಯಿ

    ಬೆಳಗಾವಿ: ಕಾಂಗ್ರೆಸ್ (Congress) ಕಾಲದ ದೊಡ್ಡ ಪ್ರಮಾಣದ ಹೊರೆ ಹೆಸ್ಕಾಂ (HESCOM) ಮೇಲಿತ್ತು. ನಾನು ಸಿಎಂ ಆಗಿದ್ದಾಗ ದೊಡ್ಡ ಪ್ರಮಾಣದ ಅನುದಾನವನ್ನು (Grant) ನೀಡಿದ್ದೇನೆ ಎಂದು‌ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದೊಡ್ಡ ಪ್ರಮಾಣದ ಹೊರೆಯನ್ನು ಹೆಸ್ಕಾಂ ಮೇಲೆ ಹಾಕಿತ್ತು. 13 ಸಾವಿರ ಕೋಟಿ ರೂಪಾಯಿ ನೀಡಿ ಹೆಸ್ಕಾಂಗೆ ಪುನಶ್ಚೇತನ ನೀಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಇದು ಗೊತ್ತಿಲ್ಲ. ವಿದ್ಯುಚ್ಛಕ್ತಿ ಕ್ಷೇತ್ರ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂದರು.

     

    ಒಟ್ಟು ಬಿಲ್‌ನಲ್ಲಿ 50% ಬಿಲ್ ಸರ್ಕಾರದಿಂದ ಬರುತ್ತದೆ. ಹೆಸ್ಕಾಂ ಅಧಿಕಾರಿಗಳಿಗೆ ಬಿಲ್ ವಸೂಲಿ ಮಾಡಲು ಆರ್ಥಿಕ ಇಲಾಖೆಯಲ್ಲಿ ಕುರ್ಚಿ ಹಾಕಿ ಕೊಡಬೇಕಾಗುತ್ತದೆ. ಹಳೆ ಬಾಕಿ ಅಂತಾ ಪುಕ್ಕಟೆ ಹೊರೆಯನ್ನು ಜನರ ಮೇಲೆ ಹಾಕಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ಇದು ಜನರಿಗೆ ಮಾಡಿರುವ ಒಂದು ದೋಖಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಹಿರಿಯ ವೈದ್ಯರ ಕಿರುಕುಳವೇ ಕಾರಣ: ಸಂಬಂಧಿಕರ ಆಕ್ರೋಶ

     

    ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದನ್ನ ಮಾಡುತ್ತಿದ್ದಾರೆ. ಎಷ್ಟು ವಿದ್ಯುತ್ ಬಳಕೆ ಮಾಡಬೇಕು ಎನ್ನುವ ಅಧಿಕಾರ ಪ್ರತಿ ಪ್ರಜೆಗೂ ಇದೆ. ಇವರು ಸರಾಸರಿ ಲೆಕ್ಕದಲ್ಲಿ ಅವರು ಬಳಸುವ ವಿದ್ಯುತ್ ಮೇಲೂ ಸಹ ಹಿಡಿದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

  • ಹೈಟೆನ್ಷನ್ ತಂತಿ ತಾಗಿ 13ರ ಬಾಲಕಿ ಸಾವು

    ಹೈಟೆನ್ಷನ್ ತಂತಿ ತಾಗಿ 13ರ ಬಾಲಕಿ ಸಾವು

    ಬೆಳಗಾವಿ: ಮನೆ ಮುಂದಿನ ಹೈಟೆನ್ಷನ್ ತಂತಿ (High Tension Wire) ತಾಗಿ 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಮಚ್ಛೆ ಗ್ರಾಮದಲ್ಲಿ ನಡೆದಿದೆ.

    ಮಧುರಾ ಮೋರೆ (13) ಮೃತಪಟ್ಟ ಬಾಲಕಿ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ತನ್ನ ಮನೆಯ ಒಂದನೇ ಮಹಡಿಯ ಮೇಲೆ ಆಟ ಆಡುತ್ತಿದ್ದ ಸಂದರ್ಭ ಹೈಟೆನ್ಷನ್ ವಯರ್ ತಾಗಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಹೈಟೆನ್ಷನ್ ತಂತಿ ಇದ್ದ ಹಿನ್ನೆಲೆ ಮನೆ ಕಟ್ಟದಂತೆ ಮೋರೆ ಕುಟುಂಬಕ್ಕೆ ಹೆಸ್ಕಾಂ (HESCOM) ಮೊದಲೇ ನೋಟಿಸ್ ನೀಡಿತ್ತು. ಹೆಸ್ಕಾಂ ನೋಟಿಸ್ ನೀಡಿದ್ದರೂ ಸಹಿತ ಅದನ್ನು ನಿರ್ಲಕ್ಷ್ಯ ಮಾಡಿ ಮೋರೆ ಕುಟುಂಬ ಮನೆ ನಿರ್ಮಿಸಿದ್ದರು. ಇದನ್ನೂ ಓದಿ: ಭಾರೀ ಗಾಳಿ, ಮಳೆ – ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮರ ಬಿದ್ದು ವ್ಯಕ್ತಿ ಸಾವು

    ಘಟನೆಯ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬಳಿಕ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮೊಸಳೆ ದಾಳಿಗೆ ಬಾಲಕ ಬಲಿ – ಮೃತದೇಹಕ್ಕಾಗಿ ಹುಡುಕಾಟ

  • ಹೆಸ್ಕಾಂ ಗುತ್ತಿಗೆದಾರರ ಒಳರಾಜಕೀಯ – ಆರೋಪಕ್ಕೆ VTSD ತಿರುಗೇಟು

    ಹೆಸ್ಕಾಂ ಗುತ್ತಿಗೆದಾರರ ಒಳರಾಜಕೀಯ – ಆರೋಪಕ್ಕೆ VTSD ತಿರುಗೇಟು

    ಹುಬ್ಬಳ್ಳಿ: ಹೆಸ್ಕಾಂ (HESCL)  ಅನುಮತಿಪಡೆದ ಗುತ್ತಿಗೆದಾರ ಸಂಘದ ಒಳ ರಾಜಕೀಯ ಸದ್ಯಕ್ಕೆ ಮುಗಿದಂತೆ ಕಾಣುತ್ತಿಲ್ಲ. ಹೆಸ್ಕಾಂ ನಲ್ಲಿ 25 ಪರ್ಸೆಂಟ್ ಲಂಚದ ಆರೋಪ ಬೆನ್ನಲ್ಲೇ, ಬೆಂಗಳೂರು ಮೂಲದ ವಿಟಿಎಸ್‌ಡಿ (VTSD) ಗುತ್ತಿಗೆದಾರ ಕಂಪನಿಯ ಮೇಲೆ ಟೆಂಡರ್ ಗೋಲ್ ಮಾಲ್ ಆರೋಪ ಕೇಳಿಬಂದಿತ್ತು.

    ವಿಟಿಎಸ್‌ಡಿ (VTSD) ಕಂಪನಿ ಅಧಿಕೃತ ಪರವಾನಿಗೆ ಇಲ್ಲದೇ ಟೆಂಡರ್ (Tender) ಪಡೆದಿದೆ ಎಂದು ಆರೋಪ ಮಾಡಲಾಗಿತ್ತು. ಈ ಆರೋಪ ಬೆನ್ನಲ್ಲೇ ಇಂಧನ ಇಲಾಖೆ ಒಟ್ಟು 472 ಕೋಟಿ ಟೆಂಡರ್ ಗಳನ್ನು ರದ್ದುಪಡಿಸಿತು. ಇದೀಗ ವಿಟಿಎಸ್‌ಡಿ ತನ್ನ ಮೇಲಿನ ಆರೋಪಕ್ಕೆ ತಿರುಗೇಟು ನೀಡಿದೆ. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ

    ಹುಬ್ಬಳ್ಳಿಯಲ್ಲಿಂದು (Hubballi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂಪನಿ ಪ್ರಮುಖ ಪ್ರವೀಣ್ ರುದ್ರಪ್ಪ, ಗುತ್ತಿಗೆದಾರ ಸಂಘದ ಮಾಜಿ ಪದಾಧಿಕಾರಿಗಳಾದ ವಿಜಯ್ ಕುಮಾರ್ ಹಾಗೂ ಇತರರಿಗೆ ಟೆಂಡರ್ ಸಿಕ್ಕಿಲ್ಲ ಎಂದು ನಮ್ಮ ಕಂಪನಿ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಟೆಂಡರ್ ಸಿಗದೇ ಇರೋದಕ್ಕೆ ಆರೋಪ ಮಾಡಲಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ಆರೋಪ ಕೇಳಿಬಂದ ಕೂಡಲೇ ಟೆಂಡರ್ ರದ್ದು ಪಡಿಸೋದು ಸರಿಯಲ್ಲ. ಕೂಡಲೇ ಟೆಂಡರ್ ಪ್ರಕ್ರಿಯೆಯನ್ನು ಕೂಲಂಕಷವಾಗಿ ಮರುವಿಚಾರಣೆ ಮಾಡುವಂತೆ ಮನವಿ ಸಹ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]