Tag: ಹೆಸರು

  • ಹೆಸರು ಬದಲಾಯಿಸಿಕೊಂಡ ಪುಟ್ಟಗೌರಿ ಮದುವೆ ನಾಯಕ ರಕ್ಷಿತ್

    ಹೆಸರು ಬದಲಾಯಿಸಿಕೊಂಡ ಪುಟ್ಟಗೌರಿ ಮದುವೆ ನಾಯಕ ರಕ್ಷಿತ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ರಕ್ಷಿತ್ ಈಗ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡುತ್ತಿದ್ದಾರೆ.

    ಮಹೇಶ ಪಾತ್ರಧಾರಿಯ ರಕ್ಷಿತ್ ಈಗ ರಕ್ಷ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಈಗಾಗಲೇ ರಕ್ಷಿತ್ ಶೆಟ್ಟಿ ಇರುವುದರ ಕಾರಣ ಅವರು ತಮ್ಮ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದಾರೆ.

    8ಎಂಎಂ ಚಿತ್ರದ ನಿರ್ದೇಶಕರಾದ ಹರಿಕೃಷ್ಣ ರಕ್ಷ್ ಅವರ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ರೆಡ್’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ರಕ್ಷ್ ಹ್ಯಾಕರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷ್‍ಗೆ ನಾಯಕಿಯಾಗಿ ಸೋನು ಗೌಡ ಮಿಲಿಟರಿ ಆಫಿಸರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

    ಸದ್ಯ ಶುಕ್ರವಾರ ರೆಡ್ ಸಿನಿಮಾದ ಮುಹೂರ್ತ ನಡೆಯಲಿದೆ. ಅಲ್ಲದೇ ಈ ಚಿತ್ರದಲ್ಲಿ ಮತ್ತೊಬ್ಬರು ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಮತ್ತೊಬ್ಬ ನಾಯಕಿ ಅಧಿಕೃತವಾಗಿಲ್ಲ. ಈ ಚಿತ್ರಕ್ಕೆ ಜುದಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀಘ್ರವೇ ಅಲಹಾಬಾದ್ ಹೆಸರು ಪ್ರಯಾಗ್‍ರಾಜ್ ಆಗುತ್ತೆ: ಯೋಗಿ

    ಶೀಘ್ರವೇ ಅಲಹಾಬಾದ್ ಹೆಸರು ಪ್ರಯಾಗ್‍ರಾಜ್ ಆಗುತ್ತೆ: ಯೋಗಿ

    ಲಕ್ನೋ: ಅಲಹಾಬಾದ್ ಜಿಲ್ಲೆಯ ಹೆಸರನ್ನ ಶೀಘ್ರವೇ ಪ್ರಯಾಗ್‍ರಾಜ್ ಎಂದು ಬದಲಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಮುಂದಿನ ವರ್ಷ ನಡೆಯಲಿರುವ ಮಹಾ ಕುಂಭ ಮೇಳದ ಚರ್ಚೆಯಲ್ಲಿ ಮಾತನಾಡಿದ ಯೋಗಿ ಅವರು, ನನಗೆ ಅಖಾಡ ಪರಿಷದ್ ಮತ್ತು ಇತರೆ ಕೆಲವರು ಅಲಹಾಬಾದ್ ಜಿಲ್ಲೆಯಲ್ಲಿ ಪ್ರಯಾಗ್‍ರಾಜ್ ಎಂದು ಬದಲಿಸುವಂತೆ ಪ್ರಸ್ತಾವನೆ ನೀಡಿದ್ದಾರೆ. ರಾಜ್ಯಪಾಲರದ ರಾಮ್ ನಾಯಕ್ ಸಹ ಈ ನಿರ್ಧಾರಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶೀಘ್ರವೇ ಸರ್ಕಾರ ಅಲಹಾಬಾದ್ ಹೆಸರನ್ನು ಪ್ರಯಾಗ್‍ರಾಜ್ ಎಂದು ಬದಲಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಕುಂಭ ಮೇಳದ ತಯಾರಿಯ ಬಗ್ಗೆ ಮಾತನಾಡಿದ ಮುಖ್ಯ ಮಂತ್ರಿಯವರು, ಜಗತ್ತಿನ ಮೂಲೆ ಮೂಲೆಯಿಂದ ಭಕ್ತರು ಈ ಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ. ದೇಶದ 6 ಲಕ್ಷ ಹಳ್ಳಿಗಳಿಂದ ಭಕ್ತರು ಭಾಗವಹಿಸಲಿದ್ದು, ಡಿಸೆಂಬರ್ ತಿಂಗಳಿನೊಳಗೆ ಎಲ್ಲಾ ಉಳಿದ ಕೆಲಸಗಳನ್ನ ಮುಗಿಸಲಿದ್ದೇವೆ ಎಂದು ತಿಳಿಸಿದರು.

    ಕುಂಭ ಮೇಳಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲು ಹಾಲಿನ ಬೂತ್ ಗಳು, ಎಟಿಎಂ ಮೆಷಿನ್‍ಗಳು, ನೀರಿನ ಟ್ಯಾಂಕರ್ ಗಳು, ಬ್ಯಾಂಕ್ ಗಳು, ಮೊಬೈಲ್ ಟವರ್‍ಗಳನ್ನ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಪ್ರಯಾಗ್ ಎನ್ನುವುದು ಕುಂಭಮೇಳ ನಡೆಯುವ ಪವಿತ್ರ ಪ್ರದೇಶವಾಗಿದೆ. ಇದು ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ. ಈ ಕಾರಣಕ್ಕಾಗಿ ಅಲಹಾಬಾದ್ ಅನ್ನು `ಪ್ರಯಾಗ್‍ರಾಜ್’ ಎಂದು ನಾಮಕರಣ ಮಾಡುತ್ತಿದ್ದೇವೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಈಗಾಗಲೇ ಕುಂಭ ಮೇಳದ ಬ್ಯಾನ ರ್‍ಗಳಲ್ಲಿ ಅಲಹಾಬಾದ್ ಬದಲು ಪ್ರಯಾಗ್‍ರಾಜ್ ಎಂದು ಬರೆಯಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಸರು ಬದಲಾಯಿಸಿಕೊಂಡ ಟಗರು ಪುಟ್ಟಿ

    ಹೆಸರು ಬದಲಾಯಿಸಿಕೊಂಡ ಟಗರು ಪುಟ್ಟಿ

    ಬೆಂಗಳೂರು: ನಟ-ನಟಿಯರು ಸ್ಟಾರ್ ಆದ ಮೇಲೆ ಹೆಸರು ಬದಲಾಯಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈಗ ಕೆಂಡಸಂಪಿಗೆಯ ನಟಿ ಮಾನ್ವಿತಾ ಹರೀಶ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ನಟಿ ಮಾನ್ವಿತಾ ಹರೀಶ್ ಅವರು ಮಾನ್ವಿತಾ ಕಾಮತ್ ಎಂದು ಬದಲಾಯಿಸಿಕೊಂಡಿದ್ದಾರೆ. ತನ್ನ ಟ್ವಿಟ್ಟರ್, ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಮಾನ್ವಿತಾ ಹರೀಶ್ ಬದಲಾಗಿ ಮಾನ್ವಿತಾ ಕಾಮತ್ ಎಂದು ಬದಲಾಗಿದೆ.

    ಮಾನ್ವಿತಾ ಇತ್ತಿಚೇಗೆ ಹೈದರಾಬಾದ್ ನಲ್ಲಿ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಅಲ್ಲಿಂದ ಬಂದ ನಂತರ ಹೆಸರು ಬದಲಾಯಿಸಿಕೊಂಡಿದ್ದರು. ಇದರಿಂದ ಅಭಿಮಾನಿಗಳು ಮಾನ್ವಿತಾ ಅವರು ಮದುವೆಯಾಗಿದ್ದಾರೆ ಅದಕ್ಕೆ ಹೆಸರು ಬದಲಾಯಿಸಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಆದರೆ ಮಾನ್ವಿತಾ ಅವರ ತಂದೆಯ ಹೆಸರನ್ನೇ ತನ್ನ ಹೆಸರಿನ ಕೊನೆಯಲ್ಲಿ ಹಾಕಿಕೊಂಡಿದ್ದಾರೆ.

    ಮಾನ್ವಿತಾ ತಂದೆಯ ಪೂರ್ಣ ಹೆಸರು ಹರೀಶ್ ಕಾಮತ್. ಇದುವರೆಗೂ ಮಾನ್ವಿತಾ ತಮ್ಮ ತಂದೆಯ ಹೆಸರನ್ನು ತನ್ನ ಹೆಸರಿನ ಕೊನೆಯಲ್ಲಿ ಇಟ್ಟುಕೊಂಡು ಮಾನ್ವಿತಾ ಹರೀಶ್ ಎಂದು ಗುರುತಿಸಿಕೊಂಡಿದ್ದರು. ಈಗ ಕಾಮತ್ ಮಾನ್ವಿತಾ ಅವರ ಕುಟುಂಬದ ಸರ್ ನೇಮ್ ಆಗಿದ್ದು, ಈಗ ತಂದೆಯ ಹೆಸರು ಬದಲಿಗೆ ಕಾಮತ್ ಎಂದು ಸೇರಿಸಿಕೊಂಡಿದ್ದಾರೆ. ಆದ್ದರಿಂದ ಇನ್ನು ಮುಂದೆ ಮಾನ್ವಿತಾ ಹರೀಶ್ ಬದಲಿಗೆ ಮಾನ್ವಿತಾ ಕಾಮತ್ ಎಂದು ಗುರುತಿಸಿಕೊಳ್ಳುತ್ತಾರೆ.

    ಮಾನ್ವಿತಾ ಅವರು ‘ಕೆಂಡಸಂಪಿಗೆ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಲಂಡನ್ ನಲ್ಲಿ ನಡೆಯುತ್ತಿದೆ. ಮಾನ್ವಿತಾ ನಟ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಧಾನಸೌಧದಲ್ಲಿ ಇನ್ನೂ ಬದಲಾಗಿಲ್ಲ ಸಿಎಂ ಬೋರ್ಡ್!

    ವಿಧಾನಸೌಧದಲ್ಲಿ ಇನ್ನೂ ಬದಲಾಗಿಲ್ಲ ಸಿಎಂ ಬೋರ್ಡ್!

    ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಯಾರು..? ಎಚ್‍ಡಿಕೆನಾ…? ಸಿದ್ದರಾಮಯ್ಯನಾ..? ಎಂಬ ಗೊಂದಲ ಮೂಡುತ್ತದೆ. ಯಾಕಂದ್ರೆ ವಿಧಾನಸೌಧದಲ್ಲಿ ಇನ್ನೂ ಬೋರ್ಡ್ ಬದಲಾಗಿಲ್ಲ.

    ಯಾಕಂದ್ರೆ ವಿಧಾನಸೌಧದಲ್ಲಿನ ಮೊದಲ ಮಹಡಿಯಲ್ಲಿ ಕೊಠಡಿ ನಂಬರ್ 112ರ ಎದುರುಗಡೆ ಇರುವ ಬೋರ್ಡ್ ನಲ್ಲಿ ಇನ್ನೂ ಏನೂ ಅಪ್‍ಡೇಟ್ ಆಗಿಲ್ಲ. ಈ ಬೋರ್ಡ್ ನೋಡೋರಿಗೆ ಫುಲ್ ಕನ್‍ಫ್ಯೂಶನ್ನು ಆಗುತ್ತೆ.

    ರಾಜ್ಯದ ಮುಖ್ಯಮಂತ್ರಿಗಳ ಹೆಸರು ಹಾಗೂ ಅಧಿಕಾರವಧಿ ಮಾಹಿತಿಯುಳ್ಳ ಬೋರ್ಡ್ ನಲ್ಲಿ ಈಗಲೂ ಸಿದ್ದರಾಮಯ್ಯನೇ ಮುಖ್ಯಮಂತ್ರಿ. ಮೂರು ದಿನ ಸಿಎಂ ಆಗಿದ್ದ ಯಡಿಯೂರಪ್ಪನವರ ಹೆಸರೂ ಇಲ್ಲ. ಹಾಲಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೆಸರೂ ಕೂಡ ಇಲ್ಲ. ಅದೂ ಅಲ್ಲದೇ ಆಡಳಿತ ಭಾಷೆ ಕನ್ನಡದಲ್ಲೇ ಮುಖ್ಯಮಂತ್ರಿಗಳ ಹೆಸರಿಲ್ಲ. ಈ ಬಗ್ಗೆ ಸಿಎಸ್, ಕನ್ನಡ ಪ್ರಾಧಿಕಾರಕ್ಕೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ದೂರು ನೀಡಿದ್ದಾರೆ.

  • ಹುಟ್ಟುಹಬ್ಬದಂದೇ ಹೆಸರು ಬದಲಾಯಿಸಿಕೊಂಡ ಲೂಸ್ ಮಾದ ಯೋಗಿ!

    ಹುಟ್ಟುಹಬ್ಬದಂದೇ ಹೆಸರು ಬದಲಾಯಿಸಿಕೊಂಡ ಲೂಸ್ ಮಾದ ಯೋಗಿ!

    ಬೆಂಗಳೂರು: 28ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಯೋಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ಕುಟುಂಬದವರು ಮತ್ತು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಮಾಡಿದ ಯೋಗಿ ತಮ್ಮ ಹೆಸರನ್ನು ಯೋಗಿ ಪಲ್ಗುಣ್ ಎಂದು ಬದಲಾಯಿಸಿಕೊಂಡಿದ್ದಾರೆ.

    ಲೂಸ್ ಮಾದ ಯೋಗಿ ಇನ್ನು ಮುಂದೆ ಸ್ಯಾಂಡಲ್‍ವುಡ್ ನ ಯೋಗಿ ಪಲ್ಗುಣ್ ಎಂದು ಕರೆಸಿಕೊಳ್ಳಲಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ಹೆಸರು ಅದೃಷ್ಟ ತರುತ್ತದೆ ಎನ್ನುವ ಕಾರಣಕ್ಕಾಗಿ ಯೋಗಿ ಈ ಹೆಸರನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ.

    ಯೋಗಿ ಹೊಸ ಹೆಸರು ಗಾಂಧೀನಗರದಲ್ಲಿ ಮತ್ತೆ ಲಕ್ ಬದಲಿಸುತ್ತಾ ಎಂಬುದು ನೋಡಬೇಕಿದೆ. ಸದ್ಯ ಯೋಗಿ ಹುಟ್ಟುಹಬ್ಬದ ಗಿಫ್ಟ್ ಆಗಿ ‘ಲಂಬೋದರ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಯೋಗಿ ಸ್ಕೂಲ್ ಹುಡುಗನಾಗಿ ಪೋಲಿ ಪಾತ್ರದಲ್ಲಿ ಕಾಣಿಸಿಕೊಂಡು ಕಮಾಲ್ ಮಾಡಲು ರೆಡಿಯಾಗಿದ್ದಾರೆ.

  • ಭಾರತದ ಪ್ರಸಿದ್ಧ ಸ್ಥಳವೊಂದರ ಹೆಸರನ್ನು ಇಡಲಿದ್ದಾರೆ ಎಬಿಡಿ ದಂಪತಿ

    ಭಾರತದ ಪ್ರಸಿದ್ಧ ಸ್ಥಳವೊಂದರ ಹೆಸರನ್ನು ಇಡಲಿದ್ದಾರೆ ಎಬಿಡಿ ದಂಪತಿ

    ಬೆಂಗಳೂರು: ಭಾರತದ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಹಲವು ವಿದೇಶಿ ಆಟಗಾರರು ಫಿದಾ ಆಗಿದ್ದು, ಈ ಹಿಂದೆ ಜಾಂಟಿ ರೋಡ್ಸ್ ತಮ್ಮ ಪುತ್ರಿಗೆ ಇಂಡಿಯಾ ಎಂದು ಹೆಸರು ಇಡುವ ಮೂಲಕ ಪ್ರೀತಿಯನ್ನು ಮೆರೆದಿದ್ದರು. ಸದ್ಯ ಈ ಸಾಲಿಗೆ ಆರ್ ಸಿಬಿ ಆಟಗಾರ ಎಬಿಡಿ ಸೇರ್ಪಡೆಯಾಗಲಿದ್ದಾರೆ.

    ಈ ಕುರಿತು ಮಾತನಾಡಿರುವ ಎಬಿಡಿ, ಕರ್ನಾಟಕ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಸಾಕ್ಷಿಯಾಗಿ ತಮ್ಮ ಮೂರನೇ ಮಗುವಿಗೆ `ಕರ್ನಾಟಕ’ ಎಂದು ಹೆಸರಿಡಲು ನಿರ್ಧರಿಸಿದ್ದೆವು. ಆದರೆ ಸದ್ಯ `ತಾಜ್’ ಎಂದು ನಾಮಕರಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ತಾಜ್ ಎಂದು ಹೆಸರಿಡಲು ಕಾರಣವನ್ನು ಬಿಚ್ಚಿಟ್ಟ ಎಬಿಡಿ, ತಾನು ಮೊದಲ ಬಾರಿಗೆ ತನ್ನ ಗೆಳತಿಗೆ ತಾಜ್ ಮಹಲ್ ಮುಂದೇ ಪ್ರೇಮ ನಿವೇದನೆ ಮಾಡಿದ್ದು, ಅದ್ದರಿಂದ ತಮ್ಮ ಮೂರನೇ ಮಗುವಿಗೆ ತಾಜ್ ಎಂದು ಹೆಸರಿಡುವುದಾಗಿ ತಿಳಿಸಿದ್ದಾರೆ.

    ಎಬಿಡಿ ಹಾಗೂ ಡೇನಿಯಲ್ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, 2015 ರಲ್ಲಿ ಜನಿಸಿದ ತಮ್ಮ ಮೊದಲ ಮಗನಿಗೆ ಜೂನಿಯರ್ ಎಬಿಡಿ ಹಾಗೂ 2017 ರಲ್ಲಿ ಜನಿಸಿದ ಮಗನಿಗೆ ಜಾನ್ ರಿಚರ್ಡ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ಮೂರನೇ ಮಗುವಿನ ನಿರೀಕ್ಷೆಯಲ್ಲಿ ಎಬಿಡಿ ದಂಪತಿ ಇದ್ದಾರೆ.

    ಭಾರತದ ಸಂಸ್ಕೃತಿಗೆ ಮನಸೋತಿರುವ ಎಬಿಡಿ ಹಲವು ಬಾರಿ ಈ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ಅಲ್ಲದೇ ಕೆಲ ದಿನಗಳ ಹಿಂದೆ ಬೆಂಗಳೂರು ನಗರದಲ್ಲಿ ಆಟೋ ಏರಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಈ ವೇಳೆ ಎಬಿಡಿ ಜೊತೆಗಿದ್ದ ಪತ್ನಿ ಹಾಗೂ ಮಕ್ಕಳು ಸಹ “ಈ ಸಲ ಕಪ್ ನಮ್ದೆ” ಎಂದು ಹೇಳುವ ಮೂಲಕ ಮೆಚ್ಚುಗೆ ಪಡೆದಿದ್ದರು.

    ಟೂರ್ನಿಯಲ್ಲಿ ಸತತ ಸೋಲುಗಳ ಮೂಲಕ ನಿರಾಸೆ ಮೂಡಿಸಿದ್ದ ಆರ್ ಸಿಬಿ ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿತ್ತು. ಆದರೆ ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವ ಮೂಲಕ ಟೂರ್ನಿ ಹೊರನಡೆದಿದೆ.

  • ಮತದಾರರ ಪಟ್ಟಿಯಿಂದ ತಾ.ಪಂ ಸದಸ್ಯೆ ಹೆಸರು ನಾಪತ್ತೆ

    ಮತದಾರರ ಪಟ್ಟಿಯಿಂದ ತಾ.ಪಂ ಸದಸ್ಯೆ ಹೆಸರು ನಾಪತ್ತೆ

    ಮೈಸೂರು: ಮತದಾರರ ಪಟ್ಟಿಯಿಂದ ತಾಲೂಕು ಪಂಚಾಯ್ತಿ ಸದಸ್ಯೆ ಹೆಸರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ತಾ.ಪಂ ಸದಸ್ಯೆ ರಾಣಿ ಸತೀಶ್ ಹೆಸರು ನಾಪತ್ತೆಯಾಗಿದೆ. ಇವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೂರ್ಗಳ್ಳಿ ತಾ.ಪಂ ಸದಸ್ಯೆ. ಆದರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಇವರ ಹೆಸರು ನಾಪತ್ತೆಯಾಗಿದೆ. ರಾಣಿ ಸತೀಶ್ ಕುಟುಂಬದ ಎಲ್ಲರ ಹೆಸರು ಇದೆ. ಇವರ ಹೆಸರು ಮಾತ್ರ ಇಲ್ಲ.

    ಕಾಂಗ್ರೆಸ್ ಪಕ್ಷದವರು ಉದ್ದೇಶ ಪೂರ್ವವಕವಾಗಿ ಈ ರೀತಿ ಮಾಡಿದ್ದಾರೆ. ಜಿ.ಟಿ ದೇವೇಗೌಡರು ಗೆಲ್ಲಬಾರದೆಂದು ಕುತಂತ್ರ ಮಾಡಿದ್ದಾರೆ ಎಂದು ರಾಣಿ ಸತೀಶ್ ಆರೋಪಿಸಿದ್ದಾರೆ. ಈ ಬಗ್ಗೆ ರಾಣಿ ಸತೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

  • ಕರೀನಾ ಕಪೂರ್ ಬಿಚ್ಚಿಟ್ಟರು ತೈಮೂರ್ ಅಲಿಖಾನ್ ಪಟೌಡಿ ಹೆಸರಿನ ರಹಸ್ಯ!

    ಕರೀನಾ ಕಪೂರ್ ಬಿಚ್ಚಿಟ್ಟರು ತೈಮೂರ್ ಅಲಿಖಾನ್ ಪಟೌಡಿ ಹೆಸರಿನ ರಹಸ್ಯ!

    ಮುಂಬೈ: ಬಾಲಿವುಡ್‍ನ ಬೇಬೊ ಕರೀನಾ ಕಪೂರ್ ತಮ್ಮ ಮುದ್ದಾದ ಮಗನಿಗೆ ತೈಮೂರ್ ಎಂದು ಹೆಸರನ್ನು ಇರಿಸಿದ್ದು ಯಾಕೆ ಎನ್ನುವ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗ ಮಾಡಿದ್ದಾರೆ.

    `ತೈಮೂರ್’ ಹೆಸರಿನ ರಹಸ್ಯ ಬಿಚ್ಚಿಟ್ಟ ಬೇಬೊ ಕರೀನಾ, “ಈ ಹೆಸರಿನ ಅರ್ಥ ಕಬ್ಬಿಣ, ನನಗೆ ಇದರ ಅರ್ಥ ಬಹಳ ಹಿಡಿಸಿತು ಹಾಗೆಯೆ ಇದು ತುಂಬಾ ಮುದ್ದಾಗಿದೆ. ದೇಶದಲ್ಲಿ ಈ ಹೆಸರಿನ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದರೂ ನಾನು ನನ್ನ ಮಗನ ಹೆಸರನ್ನು ಬದಲಾಯಿಸುವುದಿಲ್ಲ” ಎಂದು ಹೇಳಿದ್ದಾರೆ.

    ತೈಮೂರ್ ಎಂಬುದು ಟರ್ಕೋ-ಮಂಗೋಲ್ ಸಾಮ್ರಾಜ್ಯದ ರಾಜನ ಹೆಸರಾಗಿದೆ. ಈತ ಭಾರತದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದಿದ್ದಾನೆ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ನಮ್ಮ ದೇಶದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದವನ ಹೆಸರನ್ನು ಮಗನಿಗೆ ಇಟ್ಟಿದ್ದಕ್ಕೆ ಸೈಫ್-ಕರೀನಾ ದಂಪತಿ ಟೀಕೆಗೆ ಗುರಿಯಾಗಿದ್ದರು.

    ತೈಮೂರ್ ಎಂಬುದು ಪ್ರಾಚೀನ ಪರ್ಷಿಯನ್ ಹೆಸರಾಗಿದ್ದು, ಇದರ ಅರ್ಥ ಕಬ್ಬಿಣ. ಭಾರತಕ್ಕೆ ದಾಳಿ ಮಾಡಿದ ರಾಜನ ಹೆಸರು ಟೈಮೂರ್, ನನ್ನ ಮಗನ ಹೆಸರು ತೈಮೂರ್. ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕರೀನಾ ಕಪೂರ್ ಖಾನ್ ಹೇಳಿದ್ದಾರೆ.

    ಈ ವಿವಾದಕ್ಕೆ ಪ್ರತಿಕ್ರಿಯಿಸಿದ ನಟ ಸೈಫ್ ಅಲಿಖಾನ್, “ನಾನು ಮತ್ತು ನನ್ನ ಪತ್ನಿ ಈ ಹೆಸರಿನ ಶಬ್ಧ ಮತ್ತು ಅರ್ಥವನ್ನ ಬಹಳ ಇಷ್ಟಪಟ್ಟು ಆಯ್ಕೆಮಾಡಿದ್ದೇವೆ. ನಾವು ಸೂಚಿಸಿದ್ದ ಹಲವು ಹೆಸರುಗಳಲ್ಲಿ ಕರೀನಾ ಈ ಹೆಸರನ್ನ ತುಂಬಾ ಇಷ್ಟಪಟ್ಟರು ಯಾಕೆಂದರೆ ಇದು ಸುಂದರ ಮತ್ತು ಈ ಹೆಸರಿನಲ್ಲಿ ಶಕ್ತಿ ಇದೆ. ತೈಮೂರ್ ಎಂಬ ಹೆಸರು ನನ್ನ ಜೊತೆ ಬೆಳೆದ ಸಂಬಂಧಿಯ ಹೆಸರಾಗಿದೆ. ನನ್ನ ಮಗಳಾದ ಸಾರಾಗೂ ಕೂಡ ಸಂಬಂಧಿಯ ಹೆಸರನ್ನ ಬಹಳ ಇಷ್ಟಪಟ್ಟು ಆಯ್ಕೆಮಾಡಿದ್ದೇನೆ” ಎಂದು ಹೇಳಿದರು.

    ದೇಶದಲ್ಲಿ ಮಾಡಿದ ವಿರೋಧದ ನಡುವೆಯೂ ನಮ್ಮ ನಿರ್ಧಾರವನ್ನ ಬದಲಿಸಲಿಲ್ಲ. ಜನರು ಹಲವಾರು ಬಗೆ ಮಾತನಾಡುತ್ತಾರೆ. ಆದರೆ ವಾಸ್ತವವಾಗಿ ನಮಗೆ ಸರಿ ಕಾಣುವುದನ್ನ ಮಾತ್ರ ತೆಗೆದುಕೊಳ್ಳಬೇಕು. ಜನರು ಏನೂ ಬೇಕಾದರೂ ಮಾತನಾಡಲಿ ನನ್ನ ಮಗನ ಹೆಸರಿಡುವುದು ನನ್ನ ಸ್ವಾತಂತ್ರ್ಯ ಎಂದರು.

    ಕರೀನಾ ಪ್ರಕಾರ ಮಗ ತೈಮೂರ್ ಅಲಿಖಾನ್ ಸ್ವಭಾವವೂ ಪತಿ ಸೈಫ್ ಅಲಿಖಾನ್‍ರಂತೆ ಇದ್ದು, ಅವನು ತನ್ನ ತಂದೆಯ ಹಾಗೆ ವಿಚಿತ್ರ ಸ್ವಭಾವದವನು ಎಂದು ಹೇಳಿದರು.

    ಅಕ್ಟೋಬರ್ 16, 2012 ರಲ್ಲಿ ಸೈಫ್ ಅಲಿಖಾನ್ ರನ್ನು ಮದುವೆಯಾದ ಕರೀನಾ 2016ರ ಡಿಸೆಂಬರ್ 20 ರಂದು ತೈಮೂರ್ ಗೆ ಜನ್ಮ ನೀಡಿದ್ದರು. ಕರೀನಾ ಕಪೂರ್ ಅವರನ್ನು ಮದುವೆಯಾಗುವುದಕ್ಕೂ ಮೊದಲು ಸೈಫ್ ಅಮೃತಾ ಸಿಂಗ್ ಅವರನ್ನು ವರಿಸಿದ್ದರು. ಈ ದಂಪತಿಗೆ ಸಾರಾ ಅಲಿಖಾನ್ ಮತ್ತು ಇಬ್ರಾಹಿಂ ಅಲಿಖಾನ್ ಹೆಸರಿನ ಮಕ್ಕಳಿದ್ದಾರೆ.

  • ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬೆದರಿತಾ ರಾಜ್ಯ ಸರ್ಕಾರ?

    ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬೆದರಿತಾ ರಾಜ್ಯ ಸರ್ಕಾರ?

    ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯ ಸರ್ಕಾರ ಬೆದರಿತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಹೌದು. ಉತ್ತರ ಕನ್ನಡದ ಜಿಲ್ಲಾಡಳಿತ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯನ್ನು ಈಗ ಮುದ್ರಿಸದೇ ಇರುವ ತೀರ್ಮಾನ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಮೇಲಿನ ಪ್ರಶ್ನೆ ಎದ್ದಿದೆ.

    ನವೆಂಬರ್ 10ರ ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರು ನಮೂದಿಸದಂತೆ ಅನಂತಕುಮಾರ್ ಹೆಗಡೆ ಆಪ್ತ ಸಹಾಯಕರ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರ ಕೂಡ ಶಿಷ್ಟಾಚಾರದಲ್ಲಿ ಹೆಸರು ನಮೋದಿಸದಂತೆ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಿಗೆ ಶಿಷ್ಟಾಚಾರ ವಿಭಾಗದಿಂದ ಯಾವುದೇ ಪತ್ರ ಬಾರದ ಹಿನ್ನಲೆಯಲ್ಲಿ ಆಹ್ವಾನ ಪತ್ರಿಕೆ ಮುದ್ರಣಕ್ಕೆ ಬ್ರೇಕ್ ಹಾಕಿದೆ.

    ಇದನ್ನೂ ಓದಿ: ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕ್ಸೋದು ಪ್ರೋಟೋಕಾಲ್, ಬರೋದು ಬಿಡೋದು ಸಚಿವರಿಗೆ ಬಿಟ್ಟಿದ್ದು- ಸಿಎಂ

    ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಪೇಚೆಗೆ ಸಿಲುಕಿದ್ದು, ಒಂದುವೇಳೆ ಯಾವುದೇ ಪ್ರತಿಕ್ರಿಯೆ ಬಾರದೇ ಹೆಸರು ನಮೋದಿಸದೇ ಇದ್ದಲ್ಲಿ ಹಕ್ಕುಚ್ಯುತಿ ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಗೊಂದಲ ಆಗದೇ ಇರಲು ಈಗ ಆಹ್ವಾನ ಪತ್ರಿಕೆಯನ್ನು ಮುದ್ರಿಸದೇ ಇರಲು ಜಿಲ್ಲಾಡಳಿತ ಮುಂದಾಗಿದೆ.

    ಈ ಹಿಂದೆ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ಅನಂತ್ ಕುಮಾರ್ ಹೆಗಡೆ, ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ. ಒಂದು ವೇಳೆ ಹೆಸರು ಪ್ರಕಟಿಸಿದರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟಿಪ್ಪುವಿನ ಜನ್ಮ ಜಾಲಾಡುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ್ದರೂ ಬೆಳಗಾವಿ ಜಿಲ್ಲಾಡಳಿತ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರ ಹೆಸರನ್ನು ಹಾಕಿ ಮುದ್ರಿಸಿದೆ.

    ಇದನ್ನೂ ಓದಿ:  ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಹಾಕ್ಬೇಡಿ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪತ್ರ