Tag: ಹೆಸರು

  • ಕೊರೊನಾ ಭೀತಿ ನಡುವೆ ಜನಿಸಿದ ಮಗುವಿಗೆ ‘ಲಾಕ್‍ಡೌನ್’ ಎಂದು ಹೆಸರಿಟ್ಟ ದಂಪತಿ

    ಕೊರೊನಾ ಭೀತಿ ನಡುವೆ ಜನಿಸಿದ ಮಗುವಿಗೆ ‘ಲಾಕ್‍ಡೌನ್’ ಎಂದು ಹೆಸರಿಟ್ಟ ದಂಪತಿ

    – ರಾಷ್ಟ್ರೀಯ ಹಿತಾಸಕ್ತಿ ಸಂಕೇತವಾಗಿ ಹೆಸರು
    – ಕೇಂದ್ರ ಸರ್ಕಾರ, ಪ್ರಧಾನಿ ನಿರ್ಧಾರಕ್ಕೆ ಶ್ಲಾಘನೆ

    ಲಕ್ನೋ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದ ದಂಪತಿ ಲಾಕ್‍ಡೌನ್‍ನಲ್ಲಿ ಮಗು ಜನಿಸಿದ್ದಕ್ಕೆ ಮಗನಿಗೆ ‘ಲಾಕ್‍ಡೌನ್’ ಅಂತಲೇ ಹೆಸರಿಟ್ಟಿದ್ದಾರೆ.

    ಇತ್ತೀಚೆಗೆ ಹೆಣ್ಣು ಮಗುವೊಂದಕ್ಕೆ ‘ಕೊರೊನಾ’ ಎಂದು ನಾಮಕರಣ ಮಾಡಿದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಇದೇ ಬೆನ್ನಲ್ಲೇ ಈಗ ಗಂಡು ಮಗುವಿಗೆ ‘ಲಾಕ್‍ಡೌನ್’ ಎಂದು ನಾಮಕರಣ ಮಾಡಿ ಉತ್ತರ ಪ್ರದೇಶ ದಂಪತಿ ಸುದ್ದಿಯಾಗಿದ್ದಾರೆ.

    ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಖುಖುಂಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖುಖುಂಡು ಗ್ರಾಮದ ನಿವಾಸಿ ಪವನ್ ಅವರು ತಮ್ಮ ಮಗನಿಗೆ ಸೋಮವಾರದಂದು ‘ಲಾಕ್‍ಡೌನ್’ ಎಂದು ನಾಮಕರಣ ಮಾಡಿದ್ದಾರೆ.

    ನನ್ನ ಮಗ ಲಾಕ್‍ಡೌನ್ ಸಮಯದಲ್ಲಿ ಜನಿಸಿದ್ದಾನೆ. ಇಡೀ ವಿಶ್ವವನ್ನೇ ಕೊರೊನಾ ವೈರಸ್ ಕಾಡುತ್ತಿದೆ. ಭಾರತದಲ್ಲೂ ಅಟ್ಟಹಾಸ ಮೆರೆಯುತ್ತಿರುವ ಮಾಹಾಮಾರಿ ಕೊರೊನಾ ಹರಡದಂತೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಇದು ಒಳ್ಳೆಯ ನಿರ್ಧಾರ, ಸಾರ್ವಜನಿಕರ ಜೀವ ಉಳಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಕ್ರಮಗಳು ನಿಜಕ್ಕೂ ಶ್ಲಾಘನೀಯ. ರಾಷ್ಟ್ರೀಯ ಹಿತಾಸಕ್ತಿಯಿಂದ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಈ ಸಮಯದಲ್ಲಿ ಜನಿಸಿದ ನನ್ನ ಮಗನಿಗೆ ‘ಲಾಕ್‍ಡೌನ್’ ಎಂದೇ ಹೆಸರಿಟ್ಟಿದ್ದೇವೆ ಎಂದು ಪವನ್ ಅವರು ತಿಳಿಸಿದ್ದಾರೆ.

    ನನ್ನ ಮಗನ ಹೆಸರು ಕೇಳಿದ ತಕ್ಷಣ ಸ್ವಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ ಎನ್ನುವುದು ಎಲ್ಲರಿಗೂ ತಿಳಿಯಬೇಕು. ನಾವಂತೂ ಲಾಕ್‍ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಹೀಗಾಗಿ ಸದ್ಯ ಯಾವುದೇ ಧಾರ್ಮಿಕ ಕಾರ್ಯಕ್ರಮ, ಸಮಾರಂಭಗಳನ್ನು ಮಾಡುತ್ತಿಲ್ಲ. ದಯವಿಟ್ಟು ಈಗ ಯಾರೂ ಮಗುವನ್ನು ನೋಡಲು ಮನೆಗೆ ಬರಬೇಡಿ ಎಂದು ಸಂಬಂಧಿಕರಿಗೆ ಪವನ್ ಅವರು ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಗೋರಖ್‍ಪುರದಲ್ಲಿ ಮಾರ್ಚ್ 22ರಂದು ಜನತಾ ಕರ್ಫ್ಯೂ ದಿನದಂದು ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ‘ಕೊರೊನಾ’ ಎಂದು ಹೆಸರಿಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಗುವಿನ ಕುಟುಂಬ, ಕೊರೊನಾ ವೈರಸ್ ಅಪಾಯಕಾರಿ, ಜೀವವನ್ನು ತೆಗೆಯುತ್ತದೆ ಎಂದು ತಿಳಿದಿದೆ. ಆದರೆ ಅದು ಜಗತ್ತನ್ನು ಒಂದು ಮಾಡುವ ಒಳ್ಳೆಯ ಕೆಲಸವನ್ನೂ ಮಾಡಿದೆ. ಹೀಗಾಗಿ ಜನರ ಒಗ್ಗಟ್ಟಿನ ಸಂಕೇತವಾಗಿ ಮಗುವಿಗೆ ‘ಕೊರೊನಾ’ ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿತ್ತು.

  • ಹೆಸರು ಬದಲಿಸಿಕೊಂಡ್ರು ಡಾಲಿ ಧನಂಜಯ್

    ಹೆಸರು ಬದಲಿಸಿಕೊಂಡ್ರು ಡಾಲಿ ಧನಂಜಯ್

    ಬೆಂಗಳೂರು: ಟಗರು ಚಿತ್ರದಲ್ಲಿ ಡಾಲಿ ಆಗಿ ಮಿಚಿಂದ ಸ್ಯಾಂಡಲ್‍ವುಡ್ ನಟ ಧನಂಜಯ್ ಅವರು ಈಗ ಡಾಲಿ ಧನಂಜಯ್ ಅಂತನೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆದ್ರೆ ಈಗ ಧನಂಜಯ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ಹೌದು. ನಿರ್ದೇಶಕ ಸೂರಿ ಆ್ಯಕ್ಷನ್ ಕಟ್ ಹೇಳಿರುವ ‘ಪಾಪ್ ಕಾನ್ ಮಂಕಿ ಟೈಗರ್’ ಸಿನಿಮಾದಲ್ಲಿ ಸದ್ಯ ಧನಂಜಯ್ ಬ್ಯುಸಿಯಾಗಿದ್ದಾರೆ. ಫೆ. 21ರಂದು ‘ಪಾಪ್ ಕಾನ್ ಮಂಕಿ ಟೈಗರ್’ ತೆರೆಕಾಣಲಿದೆ. ಈ ಚಿತ್ರದಲ್ಲಿ ‘ಮಂಕಿ ಸೀನ’ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಪ್ರಮೋಷನ್‍ಗಾಗಿ ಸಾಮಾಜಿಕ ತಾಣದಲ್ಲಿ ತಮ್ಮ ಯೂಸರ್ ನೇಮ್ ಅನ್ನು ಧನಂಜಯ್ ಬದಲಿಸಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರನ್ನು ‘ಮಂಕಿ ಸೀನ’ ಎಂದು ಧನಂಜಯ್ ಚೇಂಜ್ ಮಾಡಿಕೊಂಡಿದ್ದಾರೆ.

    ಟಗರು ಸಿನಿಮಾದಿಂದ ಧನಂಜಯ್ ಡಾಲಿ ಆಗಿ ಫೇಮಸ್ ಆದರು. ಟಗರು ಸಿನಿಮಾ ಧನಂಜಯ್ ಅವರ ದಿಕ್ಕೇ ಬದಲಾಯಿಸಿತು. ಟಗರು ಸಿನಿಮಾದಲ್ಲಿ ಧನಂಜಯ್ ಅವರ ಖಡಕ್ ಡೈಲಾಗ್, ನಟನೆ ಅಭಿಮಾನಿಗಳ ಮನ ಗೆದ್ದಿತ್ತು. ಅದರಲ್ಲೂ ‘ಅಂಕಲ್‍ನ ಹೊಡಿತೀನಿ ಸುಬ್ಬಿ’ ಅನ್ನೋ ಡಾಲಿ ಡೈಲಾಗ್ ಅಂತೂ ಸಿಕ್ಕಾಪಟ್ಟೆ ಫೇಮಸ್. ಟಗರು ಸಿನಿಮಾ ತೆರೆಕಂಡ ಬಳಿಕ ಎಲ್ಲೇ ಹೋದರು ಜನರು ಧನಂಜಯ್ ಅವರನ್ನು ಡಾಲಿ ಎಂದೇ ಗುರುತಿಸುತ್ತಿದ್ದರು. ಹೀಗಾಗಿ ಅವರಿಗೆ ಡಾಲಿ ಧನಂಜಯ್ ಎಂದು ಹೆಸರು ಬಂತು.

    ಡಾಲಿ ಪಾತ್ರದ ಹಾಗೆ ಈ ಮಂಕಿ ಸೀನನ ಪಾತ್ರವು ಫೇಮಸ್ ಆಗುತ್ತಾ? ಡಾಲಿ ಹೋಗಿ ಮಂಕಿ ಸೀನ ಆಗುತ್ತಾರಾ ಧನಂಜಯ್ ಎನ್ನುವುದು ಸದ್ಯದ ಕುತೂಹಲವಾಗಿದೆ. ಸೂರಿ ನಿರ್ದೇಶನದಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಡಿಬಂದಿದ್ದು, ಈ ಚಿತ್ರದಲ್ಲಿ ಧನಂಜಯ್‍ಗೆ ನಾಯಕಿಯಾಗಿ ನಟಿ ನಿವೇದಿತಾ, ಅಮೃತಾ ಮತ್ತು ಸಪ್ತಮಿ ಸಾಥ್ ಕೊಟ್ಟಿದ್ದಾರೆ.

    ಈಗಾಗಲೇ ಸಿನಿಮಾದ ಫಸ್ಟ್ ಲುಕ್, ಟೀಸರ್ ಅಭಿಮಾನಿಗಳ ಗಮನ ಸೆಳೆದಿದ್ದು, ಫೆ. 21 ಶಿವರಾತ್ರಿಯಂದು ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಅಲ್ಲದೇ ಈ ಚಿತ್ರದ ಮಹದೇವ ಹಾಡು ಎಲ್ಲೆಡೆ ಕ್ರೇಜ್ ಹೆಚ್ಚಿಸಿದ್ದು, ಈ ಹಾಡಿಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಸಂಜಿತ್ ಹೆಗ್ಡೆ ಧ್ವನಿಯನ್ನು ಮೂಡಿಬಂದಿರುವ ಹಾಡಿಗೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.

  • ಶಿಲ್ಪಾ ಶೆಟ್ಟಿಗೆ ಹೊಸ ಹೆಸರಿಟ್ಟ ಪತಿ ಕುಂದ್ರಾ

    ಶಿಲ್ಪಾ ಶೆಟ್ಟಿಗೆ ಹೊಸ ಹೆಸರಿಟ್ಟ ಪತಿ ಕುಂದ್ರಾ

    ಮುಂಬೈ: ಬಾಲಿವುಡ್ ಚೆಲುವೆ, ಕುಡ್ಲದ ಶಿಲ್ಪಾ ಶೆಟ್ಟಿಗೆ ಪತಿ ರಾಜ್ ಕುಂದ್ರಾ ಅವರು ‘ಬಿಬಿಸಿ’ ಎಂದು ಹೆಸರನ್ನು ಇಟ್ಟಿದ್ದಾರೆ.

    ಈ ವಿಚಾರ ಸ್ವತಃ ಶಿಲ್ಪಾ ಶೆಟ್ಟಿ ಅವರೇ ಒಪ್ಪಿಕೊಂಡಿದ್ದು, ಹೌದು ನನ್ನ ಪತಿ ರಾಜ್ ಕುಂದ್ರಾ ನನನ್ನು ಬಿಬಿಸಿ ಎಂದು ಕರೆಯುತ್ತಾರೆ. ಬಿಬಿಸಿ ಎಂದರೆ ಬೇರೆ ಅರ್ಥ ಏನೂ ಇಲ್ಲ ಬಿಬಿಸಿ ಎಂದರೆ ಕಂಪ್ಯೂಟರ್ ಬರುವುದಕ್ಕೆ ಮುಂಚೆ ಹುಟ್ಟಿರುವವರು (ಬಾರ್ನ್ ಬಿಫೋರ್ ಕಂಪ್ಯೂಟರ್) ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

    ಇತ್ತೀಚೆಗೆ ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ದಿ ಕಪಿಲ್ ಶರ್ಮಾ ಶೋನಲ್ಲಿ ಈ ವಿಚಾರವನ್ನು ಶಿಲ್ಪಾ ಹಂಚಿಕೊಂಡಿದ್ದಾರೆ. ನನ್ನ ಪತಿ ನನ್ನನ್ನು ಬಿಬಿಸಿ ಎಂಬ ಹೆಸರಿನಿಂದ ಕರೆಯುತ್ತಾರೆ. ಯಾಕೆಂದರೆ ನಾನು ತಂತ್ರಜ್ಞಾನವನ್ನು ಬಳಕೆ ಮಡುವುದರಲ್ಲಿ ಸ್ವಲ್ಪ ಹಿಂದೆ ಇದ್ದೇನೆ. ಆದರಿಂದ ನನ್ನನ್ನು ರಾಜ್ ಕುಂದ್ರಾ ಬಾರ್ನ್ ಬಿಫೋರ್ ಕಂಪ್ಯೂಟರ್ ಎಂದು ಕರೆಯುತ್ತಾರೆ ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ.

    ಈ ವೇಳೆ ಈ ಶೋನಲ್ಲಿ ಇದ್ದ ನಟಿ ಅರ್ಚನಾ ಪುರಾನ್ ಸಿಂಗ್ ಅವರು, ನಿಮಗೆ ತಂತ್ರಜ್ಞಾನವನ್ನು ಬಳಸಲು ಬರಲ್ಲ ಎಂದು ಹೇಳುತ್ತೀರಿ. ಆದರೆ ಯಾವಗಲೂ ಇನ್‍ಸ್ಟಾಗ್ರಾಮ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಎಂದು ಶಿಲ್ಪಾ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಶಿಲ್ಪಾ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಲು ಬೇಸಿಕ್ ಮಾಹಿತಿ ಇದ್ದರೆ ಸಾಕು ಅದಕ್ಕೆ ಹೆಚ್ಚು ಶ್ರಮ ಹಾಕಬೇಕಿಲ್ಲ ಎಂದಿದ್ದಾರೆ.

    ಆದರೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವಷ್ಟು ಸುಲಭದಲ್ಲಿ ಇಂಟರ್ ನೆಟ್‍ನಲ್ಲಿ ಬೇರೆ ಕೆಲಸ ಮಾಡಲು ನನಗೆ ಬರುವುದಿಲ್ಲ. ಉದಾಹರಣೆಗೆ ನನ್ನ ಮಕ್ಕಳ ಹೋಮ್‍ವರ್ಕ್ ಅನ್ನು ಶಾಲೆಯವರು ನಮಗೆ ಮೇಲ್ ಮಾಡುತ್ತಾರೆ. ನನಗೆ ಅದನ್ನು ತೆಗೆದು ಓದಿ ಅದನ್ನು ಪ್ರಿಂಟ್‍ಔಟ್ ತೆಗೆಯುವ ಕೆಲಸ ಸಖತ್ ಬೇಸರ ತರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪೆನ್, ಬುಕ್‍ಗಳನ್ನು ಯಾರೂ ಬಳುಸುತ್ತಿಲ್ಲ. ಬದಲಿಗೆ ಮೇಲ್, ಪಿಡಿಎಫ್ ಎಂಬ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಿಲ್ಪಾ ಹೇಳಿದ್ದಾರೆ.

    ಆಗ ಮಾತನಾಡಿದ ಅರ್ಚನಾ ಪುರಾನ್ ಸಿಂಗ್ ನನ್ನ ಮಗಳು ಬೆಳೆಯುತ್ತಿದ್ದಾಳೆ. ನಾನು ಕೂಡ ಈ ರೀತಿಯ ಸಂದರ್ಭಕ್ಕೆ ಸಿದ್ಧವಾಗಬೇಕು ಎಂದು ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಕಪಿಲ್, ನನಗೆ ಮಕ್ಕಳ ಹೋಮ್‍ವರ್ಕ್ ಅನ್ನು ಪೋಷಕರ ಮೇಲ್‍ಗೆ ಕಳುಹಿಸುತ್ತಾರೆ ಎಂದರೆ ನನಗೆ ನಂಬಲಾಗುತ್ತಿಲ್ಲ. ಹಾಗಾದರೆ ಮೇಲ್ ಐಡಿ ಇಲ್ಲದ ಪೋಷಕರ ಕಥೆ ಏನು ಎಂದು ಹಾಸ್ಯ ಮಾಡಿದ್ದಾರೆ.

    ಸ್ವಲ್ಪ ಸಮಯದಿಂದ ಚಿತ್ರಲೋಕದಿಂದ ದೂರ ಇದ್ದ ಶಿಲ್ಪಾ ಶೆಟ್ಟಿ ಬೆಳ್ಳಿ ತೆರೆ ಮೇಲೆ ಬರಲು ಸಿದ್ಧವಾಗಿದ್ದಾರೆ. ಅವರ ನಟನೆಯ ಹಂಗಾಮಾ-2 ಮತ್ತು ನಿಕಮ್ಮಾ ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿವೆ.

  • ಮಗನ ಫೋಟೋ, ಹೆಸರು ರಿವೀಲ್ ಮಾಡಿದ ‘ಮಜಾ’ ರಾಣಿ

    ಮಗನ ಫೋಟೋ, ಹೆಸರು ರಿವೀಲ್ ಮಾಡಿದ ‘ಮಜಾ’ ರಾಣಿ

    ಬೆಂಗಳೂರು: ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಮೊದಲ ಬಾರಿಗೆ ತಮ್ಮ ಮಗನ ಫೋಟೋ ಮತ್ತು ಹೆಸರನ್ನು ರಿವೀಲ್ ಮಾಡಿದ್ದಾರೆ.

    ಶ್ವೇತಾ ಅವರು ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಇದುವರೆಗೂ ತಮ್ಮ ಮಗನ ಫೋಟೋವನ್ನು ಮಾತ್ರ ಎಲ್ಲೂ ರಿವೀಲ್ ಮಾಡಿರಲಿಲ್ಲ. ಇದೀಗ ಭಾನುವಾರ 26ರಂದು ವಿಶೇಷ ದಿನದ ಪ್ರಯುಕ್ತ ತಮ್ಮ ಪುತ್ರನ ಫೋಟೋ ಮತ್ತು ಹೆಸರನ್ನು ಬಹಿರಂಗಪಡಿಸಿದ್ದಾರೆ.

    ಮಗನಿಗೆ ಕೊಡಗಿನ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲಿ ಒಂದು ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ತಮ್ಮ ಮಗನ ಹೆಸರನ್ನು ತಿಳಿಸಿದ್ದಾರೆ. ಜೊತೆಗೆ ದಿನಾಂಕ 26ರಂದೇ ಫೋಟೋ ರಿವೀಲ್ ಮಾಡಿದ್ದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.

    “ಇದೇ ದಿನ ಜನವರಿ 26ರಂದು ಒಂದೂವರೆ ದಶಕದ ಹಿಂದೆ ನಾನು ಮೊದಲ ಬಾರಿಗೆ ಕ್ಯಾಮೆರಾವನ್ನು ಎದುರಿಸಿದ್ದೆ. ಜೊತೆಗೆ ನಾನು ನಿಮ್ಮೆಲ್ಲರಿಗೂ ಪರಿಚಯವಾದೆ. ಈ ಸ್ಮರಣೀಯ ದಿನದಂದು ನಾನು ನನ್ನ ಮಗನನ್ನು ಎಲ್ಲರಿಗೂ ಪರಿಚಯಿಸಲು ಬಯಸುತ್ತೇನೆ. ನಮ್ಮ ಪುಟ್ಟ ಹೃದಯ, ನಮ್ಮ ಜೀವನಕ್ಕೆ ಅನಂತ ಸಂತೋಷವನ್ನು ತಂದಿದೆ. ನಮ್ಮ ಕೊಡವ ಯೋಧ ಜಿಯಾನ್ ಅಯ್ಯಪ್ಪ ” ಎಂದು ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.

    https://www.instagram.com/p/B7yS-CdDXTg/

    ಈ ಜಗತ್ತಿಗೆ ನಮ್ಮ ಮಗುವಿನ ಮೊದಲ ಫೋಟೋ ಇದಾಗಿದೆ. ನನ್ನ ಮಗನಿಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಬೇಕು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮಗನ ಫೋಟೋ ಕ್ಲಿಕ್ಕಿಸಿದ್ದಕ್ಕೆ ಫೋಟ್ರೋಗ್ರಾಫರ್ ಗೆ ಧನ್ಯವಾದ ತಿಳಿಸಿದ್ದಾರೆ.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದರು.

  • ವಾಹನಗಳಿಗೆ ಸ್ಟೈಲಿಶ್ ಆಗಿ ನಂಬರ್, ಹೆಸರು ಹಾಕಿದ್ರೆ ದಂಡ

    ವಾಹನಗಳಿಗೆ ಸ್ಟೈಲಿಶ್ ಆಗಿ ನಂಬರ್, ಹೆಸರು ಹಾಕಿದ್ರೆ ದಂಡ

    ನೆಲಮಂಗಲ: ಕೇಂದ್ರ ಸಾರಿಗೆ ಇಲಾಖೆ ಈಗಾಗಲೇ ವಾಹನಗಳ ನಂಬರ್ ಪ್ಲೇಟ್ ಮೇಲೆ ಸಂಖ್ಯೆ ಬಿಟ್ಟು, ಚಿಹ್ನೆ, ಹೆಸರುಗಳನ್ನ ಹಾಕುವಂತಿಲ್ಲ ಎಂದು ಆದೇಶ ಮಾಡಿದೆ. ಆದರೆ ವಾಹನಗಳ ಮಾಲೀಕರು ಮಾತ್ರ ಎಚ್ಚೆತ್ತಿಲ್ಲ. ಹೀಗಾಗಿ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಆರ್‌ಟಿಓ ಅಧಿಕಾರಿಗಳು, ವಾಹನಗಳ ಮೇಲೆ ಚಿತ್ರ, ವಿಚಿತ್ರ ರೀತಿಯಲ್ಲಿ ಹೆಸರು, ಪ್ಲೇಟ್ ಡಿಸೈನ್, ಸಂಘ-ಸಂಸ್ಥೆಯ ಹೆಸರುಗಳು ಹೀಗೆ ನಿಯಮ ಮೀರಿ ಇದ್ದ ಎಲ್ಲಾ ವಾಹನಗಳ ನಂಬರ್ ಪ್ಲೇಟ್‍ಗಳನ್ನು ತೆರವು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ನೆಲಮಂಗಲ ಸಾರಿಗೆ ಅಧಿಕಾರಿ ಡಾ.ಒಡೆಯರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.

    ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನೆಲಮಂಗಲ ಭಾಗದಲ್ಲಿನ ವಾಹನ ಸವಾರಿಗೆ ಅರಿವು ಮೂಡಿಸುವುದರ ಜೊತೆಗೆ ಇನ್ಮುಂದೆ ಕಡ್ಡಾಯವಾಗಿ ತೆರವು ಮಾಡಲೇಬೇಕು ಎಂದು ಖಡಕ್ ಆಗಿ ಎಚ್ಚರಿಕೆ ನೀಡುತ್ತಿದ್ದಾರೆ. ಈ ವೇಳೆ 100ಕ್ಕೂ ಹೆಚ್ಚು ವಾಹನಗಳ ಚಿತ್ರ-ವಿಚಿತ್ರ ನಂಬರ್ ಪ್ಲೇಟ್‍ಗಳನ್ನ ಸ್ಥಳದಲ್ಲಿಯೇ ತೆರವುಗೊಳಿಸಿ ಹೊಸ ನಂಬರ್ ಪ್ಲೇಟ್‍ಗಳನ್ನ ಹಾಕಿಸಿಕೊಳ್ಳುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಯಿತು. ಸಾರಿಗೆ ಇಲಾಖೆಯ ಖಡಕ್ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

  • ಸಿಎಂ ಬಿಎಸ್‍ವೈ ಪಾಲಿಗೆ ವರವಾಗಲಿದೆ ಲಕ್ಕಿ ನಂಬರ್ 12!

    ಸಿಎಂ ಬಿಎಸ್‍ವೈ ಪಾಲಿಗೆ ವರವಾಗಲಿದೆ ಲಕ್ಕಿ ನಂಬರ್ 12!

    ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅಗತ್ಯವಿದ್ದ ಶಾಸಕ ಸ್ಥಾನ ಮತ್ತು ಸಂಖ್ಯಾಶಾಸ್ತ್ರದ ಜ್ಯೋತಿಷ್ಯದ ಲೆಕ್ಕ ಈಗ ಭರ್ಜರಿ ಚರ್ಚೆಗೆ ಕಾರಣವಾಗಿದ್ದು, ಉಪಚುನಾವಣೆ ಕಣದಲ್ಲಿ 12 ಸ್ಥಾನದಲ್ಲಿ ಗೆಲುವು ಬಾರಿಸಿರುವುದಕ್ಕೆ ಈಗ ಸಿಎಂ ಸಂಖ್ಯಾಶಾಸ್ತ್ರದ ಜ್ಯೋತಿಷ್ಯಕ್ಕೆ ಸಂತಸಗೊಂಡಿದ್ದಾರೆ.

    ಸಿಎಂ ಬಿಎಸ್‍ವೈ ಪಾಲಿಗೆ 12 ಲಕ್ಕಿ ನಂಬರ್ ಆಗಲಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದು, ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಪ್ರಕಾರ ಬಿಜೆಪಿ ಪಾಲಿಗೆ ಒಳ್ಳೆಯ ನಂಬರ್ ಆಗಿದೆ. ಮುಂದಿನ ದಿನದಲ್ಲಿ ಬಿಜೆಪಿ ಪಕ್ಷ ಭದ್ರವಾಗಿ ಬೇರೂರುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷಣೆ ನಡೆಯುತ್ತಿದೆ.

    ಸಂಖ್ಯಾಶಾಸ್ತ್ರ ಜ್ಯೋತಿಷ್ಯದಲ್ಲಿ 12 ನಂಬರಿಗೆ ಬಹಳಷ್ಟು ಮಹತ್ವ ಇದ್ದು, ಈ ನಂಬರ್ ಗೇಮ್‍ಗೆ ಬಿಎಸ್‍ವೈ ಖುಷಿಯಾಗಿದ್ದಾರೆ. 12 ಸ್ಥಾನಗಳು ಲಭಿಸಿರುವುದರಿಂದ ಬಿಜೆಪಿ ಪಾಲಿಗೆ ವರದಾನವಾಗಲಿದ್ದು, ಸರ್ಕಾರಕ್ಕೆ ಯಾವುದೇ ಗಂಡಾಂತರ ಹಾಗೂ ಕಿರಿಕಿರಿ ಇಲ್ಲದೇ ಸಂಪೂರ್ಣವಾಗಿ ಸ್ಥಿರವಾಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಚುನಾವಣೆಯಲ್ಲಿ ಅಗತ್ಯವಿದ್ದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನ ಗಳಿಸಿರುವ ಕಾರಣ ಸರ್ಕಾರ ಸೇಫ್ ಆಗಿದ್ದು, ಅಗತ್ಯ ಸ್ಥಾನಗಳನ್ನಷ್ಟೇ ಗಳಿಸದಿದ್ದರೆ ಮತ್ತೆ ವಿರೋಧಿಗಳಿಂದ ಸಮಸ್ಯೆ ಎದುರಿಸುವ ಸಾಧ್ಯತೆ ಇತ್ತು. ಆದರೆ ಈಗ 12 ಸ್ಥಾನ ಗೆಲುವು ಪಡೆದಿರುವುದರಿಂದ ಬಿಎಸ್‍ವೈ ಕೂಡ ನಿರಳರಾಗಿದ್ದಾರೆ. ಅಲ್ಲದೇ ಸಂಪುಟ ವಿಸ್ತರಣೆ ಸಮಯದಲ್ಲೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬ ಮಾಹಿತಿ ವಿಶ್ಲೇಷಣೆ ನಡೆದಿದೆ.

    ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ. ಈ ಹಿಂದೆ 2017ರ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಪರಿವರ್ತನಾ ರ್ಯಾಲಿ ನಡೆಸಿದ್ದ ಸಿಎಂ ಬಿಎಸ್‍ವೈ ಅವರ ವಾಹನ ಸಂಖ್ಯೆ 45 ಆಗಿದ್ದು. ಸಿಎಂ ಅವರು ಓಡಾಡುವ ಕಾರಿನ ನಂಬರ್ ಹಾಗೂ ಪ್ರಚಾರ ವಾಹನದ ನಂಬರ್ 45 ಆಗಿತ್ತು. 4+5=9 ಆಗಿರುವುದರಿಂದ ಅವರ ಲಕ್ಕಿ ನಂಬರ್ 9 ಬರುವ ಸಂಖ್ಯೆಯ ವಾಹನವನ್ನೇ ಬಳಕೆ ಮಾಡಿದ್ದರು.

    2007ರಲ್ಲಿ ಸಂಖ್ಯಾಶಾಸ್ತ್ರರ ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಹೆಸರಿನ ಸ್ಪೆಲಿಂಗ್ ನಲ್ಲಿದ್ದ ಒಂದು ಡಿ ಅಕ್ಷರದ (Yediyurappa) ಪಕ್ಕ ಐ ಅಕ್ಷರ ಕೈಬಿಟ್ಟು ಡಿ ಅಕ್ಷರ (Yeddyurappa)ವನ್ನು ಕೂಡಿಸಿಕೊಂಡಿದ್ದರು. ಆ ಬಳಿಕ 2019 ಜುಲೈ 26 ರಂದು ಮತ್ತೆ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಒಂದು ಡಿ ಅಕ್ಷರನ್ನು ಬಿಟ್ಟು ಮತ್ತೆ ಮೊದಲಿನಂತೆ ಬದಲಾಯಿಸಿಕೊಂಡಿದ್ದರು.

     

  • ಹೆಸರು ರಾಹುಲ್ ಸರ್ ನೇಮ್ ಗಾಂಧಿ- ಎಲ್ಲಿಯೂ ಸಿಗ್ತಿಲ್ಲ ಸಿಮ್, ಲೋನ್

    ಹೆಸರು ರಾಹುಲ್ ಸರ್ ನೇಮ್ ಗಾಂಧಿ- ಎಲ್ಲಿಯೂ ಸಿಗ್ತಿಲ್ಲ ಸಿಮ್, ಲೋನ್

    – ರಾಹುಲ್ ಗಾಂಧಿ ಹೆಸರಿನ ಯುವಕನ ಕಥೆ

    ಇಂದೋರ್: ಒಂದೇ ಊರಿನಲ್ಲಿ ಒಂದೇ ಹೆಸರಿನ ಇಬ್ಬರಿದ್ರೆ ತೊಂದರೆ ಆಗೋದು ಸಾಮನ್ಯ. ಓರ್ವನಿಗೆ ಬಂದ ಪತ್ರ ಮತ್ತೋರ್ವನ ಮನೆ ತಲುಪಿರುತ್ತೆ. ಪ್ರಮುಖ ನಾಯಕರ ಹೆಸರಿದ್ದರೆ ಆತ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾನೆ. ಕೆಲವೊಮ್ಮೆ ಇಂತಹ ಹೆಸರುಗಳು ಸಮಸ್ಯೆಗಳಾಗುತ್ತವೆ. ಮಧ್ಯಪ್ರದೇಶದ ಇಂದೋರ್ ನಿವಾಸಿ 23ರ ಯುವಕನ ಹೆಸರು ರಾಹುಲ್ ಗಾಂಧಿ. ಯುವಕನ ಹೆಸರು ಕೇಳುತ್ತಲೇ ಯಾವ ಕಂಪನಿಗಳು ಸಿಮ್ ನೀಡುತ್ತಿಲ್ಲ. ನಕಲಿ ಪ್ರಮಾಣಪತ್ರವೆಂದು ತಿಳಿದು ಕೆಲ ಬ್ಯಾಂಕ್ ಗಳು ಯುವಕನಿಗೆ ಲೋನ್ ನೀಡಿಲ್ಲ.

    ಯುವಕನಿಗೆ ಇದೀಗ ತನ್ನ ಹೆಸರು ದೊಡ್ಡ ಸಮಸ್ಯೆಯಾಗಿದೆ. 23 ವರ್ಷದ ರಾಹುಲ್ ಗಾಂಧಿ ತಂದೆ ರಾಜೇಶ್ ಗಾಂಧಿ ಇಂದೋರ್ ನಗರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಾರೆ. ಪುತ್ರ ಮತ್ತು ಕುಟುಂಬದೊಂದಿಗೆ ಇಂದೋರ್ ನ ಎರೊಡ್ರಮ್ ರಸ್ತೆಯ ಅಖಂಡನಗರದಲ್ಲಿ ವಾಸವಾಗಿದ್ದಾರೆ. ರಾಹುಲ್ ಗಾಂಧಿ ನನ್ನ ಹೆಸರು ಹೇಳಿದ್ರೆ ಯಾವ ಕಂಪನಿಗಳು ಸಿಮ್ ನೀಡುತ್ತಿಲ್ಲ. ನನ್ನ ಎಲ್ಲ ದಾಖಲಾತಿಗಳಲ್ಲಿ ರಾಹುಲ್ ಗಾಂಧಿ ಎಂದೇ ಉಲ್ಲೇಖವಾಗಿದೆ ಎಂದು ಹೇಳಿದ್ರೂ ಬಹುತೇಕರು ಹಾಸ್ಯ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಕೊನೆಗೆ ಸೋದರನ ದಾಖಲೆಯಿಂದ ಸಿಮ್ ಪಡೆದಿದ್ದೇನೆ. ಮೊಬೈಲ್ ಅಥವಾ ಯಾವುದೇ ವಸ್ತು ಖರೀದಿಸಿದ್ರೂ ಸೋದರನ ಹೆಸರಿನಲ್ಲಿಯೇ ಬಿಲ್ ಮಾಡಿಸುತ್ತೇನೆ ಎಂದು ಯುವಕ ಹೇಳುತ್ತಾನೆ.

    ಒಮ್ಮೆ ಕಾರ್ ಲೋನ್ ಪಡೆದುಕೊಳ್ಳಲು ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿದ್ದೆ. ಆರಂಭದಲ್ಲಿ ಕಂಪನಿಯ ಲೋನ್ ಬಗ್ಗೆ ಮಾಹಿತಿ ನೀಡಿದರು. ಕೊನೆಗೆ ನನ್ನ ಪರಿಚಯ ಮಾಡಿಕೊಂಡಾಗ ನಕ್ಕ ಅಧಿಕಾರಿ ನಮ್ಮೊಂದಿಗೆ ಕಾಲಹರಣ ಮಾಡಬೇಡಿ ಎಂದು ಕರೆ ಕಟ್ ಮಾಡಿದರು. ಹೆಸರಿನ ಗೊಂದಲದಿಂದಾಗಿ ಇದೂವರೆಗೂ ಡ್ರೈವಿಂಗ್ ಲೈಸನ್ಸ್ ಸಹ ಆಗಿಲ್ಲ. ಹೆಸರಿನ ಮುಂದಿರುವ ಗಾಂಧಿ ತೆಗೆದು ನಮ್ಮ ಸಮಾಜದ ಹೆಸರು ಮಾಳವೀಯ ಎಂದು ಬರೆಸಿ ಎಲ್ಲ ದಾಖಲೆಗಳ ತಿದ್ದುಪಡಿಗೆ ಮುಂದಾಗಿದ್ದೇನೆ ಎಂದು ಯುವಕ ರಾಹುಲ್ ತಿಳಿಸಿದ್ದಾನೆ.

    ತಂದೆ ರಾಜೇಶ್ ಮೊದಲಿಗೆ ಬಿಎಸ್‍ಎಫ್ ನಲ್ಲಿ ವಾಟರ್ ಮ್ಯಾನ್ ಆಗಿದ್ದರು. ಅಲ್ಲಿಯ ಸಿಬ್ಬಂದಿ ಇವರನ್ನು ಗಾಂಧಿ ಎಂದು ಕರೆಯುತ್ತಿದ್ದರು. ಹೀಗೆ ಗಾಂಧಿ ಎಂದೇ ಚಿರಪರಿಚಿತರಾದ ಕೂಡಲೇ ರಾಜೇಶ್ ಸಹ ತಮ್ಮ ಹೆಸರಿನ ಮುಂದೆ ಗಾಂಧಿ ಎಂದು ಬರೆಯಲು ಆರಂಭಿಸಿದರು. ಮಕ್ಕಳ ಶಾಲೆಯ ನೋಂದಣಿ ಸಮಯದಲ್ಲಿ ಹೆಸರಿನ ಮುಂದೆ ಗಾಂಧಿ ಎಂದು ದಾಖಲಿಸಿದ್ದಾರೆ.

  • ಸಿಎಂ ಆಗೋ ಖುಷಿಯಲ್ಲಿ ಮತ್ತೆ ಯಡಿಯೂರಪ್ಪರಿಂದ ಹೆಸ್ರು ಬದಲಾವಣೆ

    ಸಿಎಂ ಆಗೋ ಖುಷಿಯಲ್ಲಿ ಮತ್ತೆ ಯಡಿಯೂರಪ್ಪರಿಂದ ಹೆಸ್ರು ಬದಲಾವಣೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಆದರೆ ಇದರ ಬೆನ್ನಲ್ಲೇ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ಬಿ.ಎಸ್ ಯಡಿಯೂರಪ್ಪ ಅವರು ಇಂಗ್ಲಿಷ್‍ನಲ್ಲಿ ತಮ್ಮ ಹೆಸರಿನ ಸ್ಪೆಲ್ಲಿಂಗ್ ಅನ್ನು ಮಾತ್ರ ಬದಲಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೂ Yeddyurappa ಎಂದು ಎಲ್ಲ ಕಡೆ ಬರೆಯುತ್ತಿದ್ದರು. ಆದರೆ ಇದೀಗ Yediyurappa ಎಂದು ಬದಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಯಡಿಯೂರಪ್ಪ ಲೆಟರ್‌ಹೆಡ್‌ನಲ್ಲೂ Yediyurappa ಎಂದೇ ಬರೆಯಲಾಗಿದೆ.

    2007ರ ನವೆಂಬರ್ ನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರಜ್ಞರನ್ನು ಭೇಟಿಯಾಗಿ ಅವರ ಸಲಹೆಯಂತೆ ತಮ್ಮ ಹೆಸರನ್ನು Yeddyurappa ಎಂದು ಬದಲಾಯಿಸಿಕೊಂಡಿದ್ದರು. ಇಂಗ್ಲಿಷ್‍ನಲ್ಲಿ ಯಡ್ಯೂರಪ್ಪ ಎಂದು ಹೇಳುತ್ತಿದ್ದರೂ ಕನ್ನಡದಲ್ಲಿ ಯಡಿಯೂರಪ್ಪ ಎಂದೇ ಬರೆಯಲಾಗುತಿತ್ತು.

    ಇದೀಗ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಸಂತಸದದಲ್ಲಿರುವ ಯಡಿಯೂರಪ್ಪ ಅವರು ಮತ್ತೆ ಇಂಗ್ಲಿಷ್‍ನಲ್ಲಿ ಬರುವ ತಮ್ಮ ಹೆಸರಿನ ಸ್ಪೆಲ್ಲಿಂಗ್ ಬದಲಾಯಿಸಿಕೊಂಡಿದ್ದಾರೆ. ಅದೃಷ್ಟದ ಸಂಕೇತವಾಗಿ ಯಡಿಯೂರಪ್ಪ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

  • ಔಷಧಿ ಮಳಿಗೆಯಲ್ಲಿ ಬೋರ್ಡ್ ರಾಜಕೀಯ- ಫೋಟೋ ಇಲ್ಲವೆಂದು ಕಿತ್ತಾಟ

    ಔಷಧಿ ಮಳಿಗೆಯಲ್ಲಿ ಬೋರ್ಡ್ ರಾಜಕೀಯ- ಫೋಟೋ ಇಲ್ಲವೆಂದು ಕಿತ್ತಾಟ

    ಬೆಂಗಳೂರು: ನಗರದಲ್ಲಿ ಬೋರ್ಡ್ ರಾಜಕಾರಣಕ್ಕೆ ಅಂತ್ಯ ಸಿಕ್ಕಿಲ್ಲ. ಬಡವರ ಔಷಧಿ ಮಳಿಗೆಯಲ್ಲಿ ನನ್ನ ಫೋಟೋ ಇಲ್ಲ ಎಂದು ಕಿತ್ತಾಟ ಶುರುವಾಗಿದೆ. ರಾಜಕಾರಣಿಗಳ ಜಗಳ ಜನ ವಿರೋಧಕ್ಕೆ ಗುರಿಯಾಗಿದೆ.

    ಬೆಂಗಳೂರಿನ ದಾಸರಹಳ್ಳಿಯಲ್ಲಿ ಬೋರ್ಡ್, ಫೋಟೋ ರಾಜಕೀಯ ಜೋರಾಗಿದೆ. ಕೇಂದ್ರ ಸಚಿವ ಸದಾನಂದಗೌಡ, ಮಾಜಿ ಶಾಸಕ ಮುನಿರಾಜು ಫೋಟೋ ಇದೆ. ನನ್ನ ಫೋಟೋ ಇಲ್ಲ ಎಂದು ಸ್ಥಳೀಯ ಶಾಸಕರೊಬ್ಬರು ಬೋರ್ಡನ್ನೇ ಕಿತ್ತು ಹಾಕಿಸಿದ್ರಂತೆ.

    ದಾಸರಹಳ್ಳಿ ಪ್ರಧಾನ ಮಂತ್ರಿ ಜನೌಷಧಿ ಮಳಿಗೆಯಲ್ಲಿ ತಮ್ಮ ಫೋಟೋ, ಹೆಸರು ಹಾಕಿಸಿಲ್ಲ ಎಂದು ಬಿಬಿಎಂಪಿ ಪ್ರಹರಿ ವಾಹನ ಬಳಸಿ ಸ್ಥಳೀಯ ಜೆಡಿಎಸ್ ಶಾಸಕ ಮಂಜುನಾಥ್ ಬೋರ್ಡ್ ಕಿತ್ತು ಹಾಕಿಸಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸಚಿವ ಸದಾನಂದ ಗೌಡ ಈ ಔಷಧಾಲಯ ಉದ್ಘಾಟಿಸಿದ್ದು, ಈ ವೇಳೆ ಸ್ಥಳೀಯ ಜೆಡಿಎಸ್ ಶಾಸಕ ಮಂಜುನಾಥ್ ಅವರನ್ನು ಈ ಕಾರ್ಯಕ್ರಮಕ್ಕೆ ಕರೆದಿಲ್ಲ. ಜೊತೆಗೆ ಮಾಜಿ ಶಾಸಕರ ಫೋಟೋ ಹಾಕಿರೋದಕ್ಕೆ ಹೀಗೆ 10 ಸಾವಿರ ಬೆಲೆ ಬಾಳುವ ಎರಡು ಬೋರ್ಡ್ ಕಿತ್ತು ಹಾಕಿಸಿದ್ದಾರೆ ಎಂದು ವ್ಯಾಪಾರಿ ಶಿವಪ್ರಸಾದ್ ಆರೋಪಿಸಿದ್ದಾರೆ.

    ಬೋರ್ಡ್, ಫ್ಲೆಕ್ಸ್ ನಿಷೇಧವಿದೆ ಪಾಲಿಕೆ ಮೇಲಾಧಿಕಾರಿ ಹೇಳಿದ್ರು ರಿಮೂವ್ ಮಾಡ್ತಾ ಇದ್ದೇವೆ ಎಂದು ಪ್ರಹರಿ ಸಿಬ್ಬಂದಿ ಹೇಳ್ತಾರೆ.

    ಬಡವರ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಲು ಅನುಮತಿ ಇದೆ. ಆದರೆ ಉಳಿದ ರಾಜಕಾರಣಿಗಳು ನಮ್ಮ ಫೋಟೋ ಇಲ್ಲ ಎಂದು ಚಿಂತೆ ಮಾಡಿಯೇ ಘಟನೆ ನಡೆದಿದ್ದರೆ ಇದು ವಿಪರ್ಯಾಸವೇ ಸರಿ.

  • ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟ ಹಾಲಿವುಡ್ ನಟ

    ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟ ಹಾಲಿವುಡ್ ನಟ

    ಬಾಲಿ: ಹಾಲಿವುಡ್ ಖ್ಯಾತ ನಟ ಕ್ರಿಸ್ ಹೆಮ್ಸ್‌ವರ್ಥ್ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡುವ ಮೂಲಕ ಭಾರತೀಯರ ಮನ ಗೆದ್ದಿದ್ದಾರೆ.

    ಕ್ರಿಸ್ ಹೆಮ್ಸ್‌ವರ್ಥ್, ಹಾಲಿವುಡ್‍ನ ಖ್ಯಾತ ಎವೆಂಜರ್ಸ್ ಚಿತ್ರಗಳಲ್ಲಿ ಥಾರ್ ಪಾತ್ರದಲ್ಲಿ ಮಿಂಚಿ ಎಲ್ಲೆಡೆ ಹೆಸರು ಮಾಡಿದ ನಟ. ಹಾಲಿವುಡ್ ಸ್ಟಾರ್ ಆಗಿದ್ದರು ಕೂಡ ಭಾರತದ ಮೇಲೆ ಇವರು ವಿಶೇಷ ಪ್ರೀತಿ ಇಟ್ಟಿದ್ದಾರೆ. ಹೀಗಾಗಿ ತಮ್ಮ ಮುದ್ದಿನ ಮಗಳಿಗೆ ಇಂಡಿಯಾ ರೋಸ್ ಎಂದು ಕ್ರಿಸ್ ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಕ್ರಿಸ್ ಅವರೇ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ಕಳೆದ ವರ್ಷ ತಮ್ಮ ನೆಟ್‍ಫ್ಲಿಕ್ಸ್ ಪ್ರಾಜೆಕ್ಟ್ `ಧಾಕಾ’ದ ಶೂಟಿಂಗ್‍ಗಾಗಿ ಭಾರತಕ್ಕೆ ಬಂದಿದ್ದ ಕ್ರಿಸ್ ಇಲ್ಲಿನ ಅಹಮದಾಬಾದ್ ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಸಿದ್ದರು. ಮೊದಲಿಗೆ ಭಾರತದಲ್ಲಿ ಶೂಟಿಂಗ್ ಮಾಡುವುದಕ್ಕೆ ಆತಂಕವಿತ್ತು. ಆದರೆ ನಂತರ ಇಲ್ಲಿನ ಜನರ ಜೊತೆ ಬೆರೆಯುತ್ತ ಖುಷಿಯಾಯ್ತು. ಇಲ್ಲಿನ ಜನರು ಶೂಟಿಂಗ್ ವೇಳೆ ನಮಗೆ ತೋರಿದ ಪ್ರೀತಿ, ಗೌರವ ನಿಜಕ್ಕೂ ನನಗೆ ಬಹಳ ಇಷ್ಟವಾಗಿತ್ತು ಎಂದು ಹೊಗಳಿದರು.

    ನನ್ನ ಪತ್ನಿ ಎಲ್ಸಾ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಳು, ಅವಳಿಗೆ ಕೂಡ ಭಾರತ ಅಚ್ಚುಮೆಚ್ಚು ಹೀಗಾಗಿ ನಾವಿಬ್ಬರು ನಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡಲು ನಿರ್ಧರಿಸಿದೆವು ಎಂದು ತಿಳಿಸಿದರು. ಹಾಗೆಯೇ ಇದೇ ವೇಳೆ ತಮ್ಮ ಅವಳಿ ಮಕ್ಕಳಾದ ಸಾಶಾ ಹಾಗೂ ಡ್ರಿಸ್ಟನ್ ಮಗ್ಗೆ ಕೂಡ ಕ್ರಿಸ್ ಮಾತನಾಡಿದರು.

    ನನಗೆ ಭಾರತ, ಅಲ್ಲಿನ ಜನರು ಮತ್ತು ಅಲ್ಲಿ ಮಾಡಿದ ಶೂಟಿಂಗ್ ತುಂಬಾ ಇಷ್ಟ. ಇಲ್ಲಿ ಪ್ರತಿನಿತ್ಯವು ನಾವು ಶೂಟಿಂಗ್ ಮಾಡುವಾಗ ಸಾವಿರಾರು ಮಂದಿ ನಿಂತು ನೋಡುತ್ತಿದ್ದರು. ಆ ರೀತಿ ಶೂಟಿಂಗ್ ಸೆಟ್‍ನಲ್ಲಿ ಜನ ಇರುವುದನ್ನ ನಾನು ಹಿಂದೆಂದೂ ನನ್ನ ಅನುಭವದಲ್ಲಿ ನೋಡಿರಲಿಲ್ಲ. ಆಗ ಸ್ವಲ್ಪ ಭಯವಾಯ್ತು ಬಳಿಕ ಜನರನ್ನು ನೋಡಿ ಖುಷಿಯಾಯ್ತು ಎಂದರು.

    ಪ್ರತಿ ಭಾರಿ ಶೂಟಿಂಗ್ ಮಾಡುವ ವೇಳೆ ನಿರ್ದೇಶಕರು ಕಟ್ ಎಂದ ಕೂಡಲೇ ಎಲ್ಲಿದ್ದ ಜನರು ಜೋರಾಗಿ ಕೂಗಿ ಪ್ರೋತ್ಸಾಹಿಸುತ್ತಿದ್ದರು. ಆಗ ನಮಗೆ ನಾವು ರಾಕ್‍ಸ್ಟಾರ್ಸ್ ರೀತಿ ಸ್ಟೇಡಿಯಂ ಮಧ್ಯೆ ನಿಂತಂತೆ ಅನಿಸುತ್ತಿತ್ತು. ನಾವು ಶೂಟಿಂಗ್‍ಗಾಗಿ ಅವರ ಕೆಲಸಗಳಿಗೆ ಅಡ್ಡಿಮಾಡಿದ್ದರು ಜನರು ನಮಗೆ ಪ್ರೀತಿ, ಪ್ರೋತ್ಸಾಹ ನೀಡಿದರು. ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ ಎಂದು ಕ್ರಿಸ್ ಭಾರತ ಹಾಗೂ ಭಾರತೀಯರ ಬಗ್ಗೆ ನಮ್ಮ ಅಭಿಪ್ರಾಯ ಹಂಚಿಕೊಂಡರು.

    https://www.instagram.com/p/Bpyqr7mngdn/?utm_source=ig_embed