Tag: ಹೆಸರು ಬೇಳೆ ಕೋಸಂಬರಿ

  • ರಾಮನವಮಿ ಸ್ಪೆಷಲ್- ಹೆಸರುಬೇಳೆ ಕೋಸಂಬರಿ ಮಾಡೋದು ಹೇಗೆ?

    ರಾಮನವಮಿ ಸ್ಪೆಷಲ್- ಹೆಸರುಬೇಳೆ ಕೋಸಂಬರಿ ಮಾಡೋದು ಹೇಗೆ?

    ರ್ನಾಟಕ ಶೈಲಿಯ ಪ್ರಮುಖ ಪಾಕವಿಧಾನಗಳಲ್ಲಿ ಹೆಸರು ಬೇಳೆ ಕೋಸಂಬರಿಯೂ ಒಂದಾಗಿದೆ. ಇದನ್ನು ಉತ್ಸವ ಹಾಗೂ ಹಬ್ಬಗಳಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೆಸರು ಬೇಳೆ ಕೋಸಂಬರಿ ಮಾಡೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಹೆಸರು ಬೇಳೆ – 50 ಗ್ರಾಂ
    * ಬಿಡಿಸಿದ ದಾಳಿಂಬೆ ಕಾಳು – 1/4 ಕಪ್
    * ಸೌತೆಕಾಯಿ- 1
    * ಕೊತ್ತಂಬರಿ – ಸ್ವಲ್ಪ
    * ಕಾಯಿ ತುರಿ – ಸ್ವಲ್ಪ
    * ಕ್ಯಾರೆಟ್ ತುರಿ – ಸ್ವಲ್ಪ
    * ಈರುಳ್ಳಿ – ಚಿಕ್ಕದು, ಸಣ್ಣಗೆ ಹೆಚ್ಚಿದ್ದು
    * ನಿಂಬೆಹಣ್ಣು – ಮೀಡಿಯಂ ಸೈಜ್

    ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
    * ಕಡ್ಲೆಬೇಳೆ – 1 ಟಿಎಸ್‍ಪಿ
    * ಉದ್ದಿನ ಬೇಳೆ – 1 ಟಿಎಸ್‍ಪಿ
    * ಎಣ್ಣೆ – 2 ಟಿಎಸ್‍ಪಿ
    * ಕೆಂಪು ಮೆಣಸಿನಕಾಯಿ – 3-4
    * ಸಾಸಿವೆ – ಚಿಟಿಕೆ
    * ಇಂಗು – ಚಿಟಿಕೆ
    * ಜೀರಿಗೆ – ಚಿಟಿಕೆ
    * ಕರಿಬೇವು – ಸ್ವಲ್ಪ ಇದನ್ನೂ ಓದಿ: ರಾಜ್ಯದಲ್ಲಿಂದು ಶ್ರೀರಾಮನವಮಿ ಆಚರಣೆ – ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ

    ಮಾಡುವ ವಿಧಾನ
    * ಮೊದಲು ಹೆಸರುಬೇಳೆಯನ್ನು ಅರ್ಧಗಂಟೆ ನೆನೆಸಿ, ಸೋಸಿಡಿ.
    * ಒಂದು ಮಿಕ್ಸಿಂಗ್ ಬೌಲ್‍ಗೆ ಸಣ್ಣಗೆ ಹೆಚ್ಚಿ ನೀರು ಹಿಂಡಿದ ಸೌತೆಕಾಯಿ, ನೆನೆಸಿ ಸೋಸಿದ ಹೆಸರುಬೇಳೆ, ಬಿಡಿಸಿದ ದಾಳಿಂಬೆ, ಕ್ಯಾರೆಟ್ ತುರಿ, ಕಾಯಿ ತುರಿ, ಸಣ್ಣಗೆ ಕಟ್ ಮಾಡಿದ ಕೊತ್ತಂಬರಿಸೊಪ್ಪು, ಈರುಳ್ಳಿ, ನಿಂಬೆ ಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ.
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ಎಣ್ಣೆ ಕಾದ ಮೇಲೆ ಸಾಸಿವೆ, ಜೀರಿಗೆ, ಇಂಗು, ಹಾಕಿ ಸಿಡಿದ ಮೇಲೆ, ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ ಫ್ರೈ ಮಾಡಿ. ಆಮೇಲೆ ಕರಿಬೇವು, ಕೆಂಪು ಮೆಣಸಿನಕಾಯಿ ಹಾಕಿ ಫ್ರೈ ಮಾಡಿಡಿ.
    * ಬಳಿಕ ಫ್ರೈ ಮಾಡಿಟ್ಟ ಒಗ್ಗರಣೆಯನ್ನು ಮಿಕ್ಸಿಂಗ್ ಬೌಲ್‍ನಲ್ಲಿರುವ ಹೆಸರುಬೇಳೆ ಮಿಕ್ಸ್‍ಗೆ ಸೇರಿಸಿ ಕಲಸಿ ಸವಿಯಿರಿ.