Tag: ಹೆಸರುಬೆಳೆ ಪಾಯಸ

  • ಹೆಸರುಬೇಳೆ ಪಾಯಸ ಮಾಡುವ ಸರಳ ವಿಧಾನ ನಿಮಗಾಗಿ

    ಹೆಸರುಬೇಳೆ ಪಾಯಸ ಮಾಡುವ ಸರಳ ವಿಧಾನ ನಿಮಗಾಗಿ

    ಯಾವುದೇ ವಿಶೇಷವಿಲ್ಲ. ಆದರೂ ರುಚಿಯಾಗಿ ಎನಾದರೂ ತಿನ್ನಬೇಕು ಅನ್ನಿಸುತ್ತದೆ. ಇಂದು ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಹೆಸರುಬೆಳೆ ಪಾಯಸ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಹೆಸರುಬೇಳೆ – 1ಕಪ್
    * ಸಬ್ಬಕ್ಕಿ – 1ಕಪ್
    * ಬೆಲ್ಲ- 2 ಕಪ್
    * ಒಣದ್ರಾಕ್ಷಿ, ಗೋಡಂಬಿ, ಬಾದಾಮಿ- ಸ್ವಲ್ಪ
    * ಏಲಕ್ಕಿ 4 (ಕುಟ್ಟಿ ಪುಡಿ ಮಾಡಿದ್ದು)
    * ತುಪ್ಪ- ಅರ್ಧ ಕಪ್
    * ಹಾಲು- 2 ಕಪ್ ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    ಮಾಡುವ ವಿಧಾನ:

    * ಸಬ್ಬಕ್ಕಿಯನ್ನು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಹೆಸರುಬೇಳೆ ತೊಳೆದು ಇಟ್ಟುಕೊಳ್ಳಬೇಕು.
    * ಈಗ ಸ್ಟವ್ ಮೇಲೆ ಕುಕ್ಕರ್ ಇರಿಸಿ ಅದಕ್ಕೆ ತುಪ್ಪ ಹಾಕಿ. ಅದಕ್ಕೆ ಹೆಸರುಬೇಳೆ ಹಾಕಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ.

    * ಇದಕ್ಕೆ 2ಕಪ್ ನೀರು ಸೇರಿಸಿ. ನಂತರ ಅದಕ್ಕೆ ನೆನೆದ ಸಬ್ಬಕ್ಕಿ ಹಾಕಿ 4 ವಿಷಲ್ ಕೂಗಿಸಿ.
    * ಈಗ ಪಾತ್ರೆಯೊಂದಕ್ಕೆ ಬೆಲ್ಲ, 1 ಕಪ್ ನೀರು ಹಾಕಿ ಕರಗಿಸಿಕೊಳ್ಳಿ.

    * ಈಗ ಕುಕ್ಕರ್‌ಗೆ  ಹಾಲು, ಕರಗಿಸಿದ ಬೆಲ್ಲ ನೀರು, ಏಲಕ್ಕಿ ಪುಡಿ, ಸೇರಿಸಿ ಮಿಶ್ರಣ ಮಾಡಿ.
    * ಈಗ ತುಪ್ಪದಲ್ಲಿ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಹುರಿದು ಪಾಯಸಕ್ಕೆ ಸೇರಿಸಿ ಚೆನ್ನಾಗಿ ಕುದಿಸಿದರೆ ರುಚಿಯಾದ ಪಾಯಸ ಸವಿಯಲು ಸಿದ್ಧವಾಗುತ್ತದೆ.