Tag: ಹೆಲ್ತ್ ಟಿಪ್ಸ್

  • ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಿ

    ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಿ

    ಳಿಗಾಲದಲ್ಲಿ ತ್ವಚೆ ಒಣಗುವುದು, ಹಿಮ್ಮಡಿಗಳು ಬಿರುಕು ಬಿಡುವುದು, ಮುಖದಲ್ಲಿ ಕಾಂತಿ ಕಡಿಮೆಯಾಗುವುದು, ಆರೋಗ್ಯದಲ್ಲಿ ಏರುಪೇರಾಗುವುದು ಈ ಎಲ್ಲಾ ಸಮಸ್ಯೆಗಳು ಸಹಜವಾಗಿ ಬಹುತೇಕ ಜನರು ಎದುರಿಸುತ್ತಾರೆ. ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ಈ ಸುಲಭ ಕ್ರಮಗಳನ್ನ ಅನುಸರಿಸಿದರೆ ಚಳಿಗಾಲದ ಸಮಸ್ಯೆಯಿಂದ ದೂರ ಆಗಬಹುದು.

    1. ಚಳಿಯಿಂದ ರಕ್ಷಣೆ:
    ನಿಮ್ಮನ್ನು ಚಳಿಯಿಂದ ರಕ್ಷಿಸಿಕೊಳ್ಳಲು ಆದಷ್ಟು ಬೆಚ್ಚನೆಯ ಉಣ್ಣೆಯ ಬಟ್ಟೆಗಳನ್ನ ಧರಿಸಿರಿ. ಸಾಧ್ಯವಾದಷ್ಟು ಬಿಸಿಲಿನಿಂದ ದೂರವಿರಿ. ಹೊರಗಡೆ ಹೋಗುವಾಗ ನಿಮ್ಮ ಜೊತೆ ಒಂದು ಸನ್ ಗ್ಲಾಸ್ ಮತ್ತು ಮಾಯಿಶ್ಚರೈಜರ್ ಕ್ರೀಂ ಇಟ್ಟುಕೊಳ್ಳಿ.

    2. ನೀರನ್ನ ಹೆಚ್ಚು ಕುಡಿಯಿರಿ:
    ಚಳಿಗಾಲದಲ್ಲಿ ದೇಹದಲ್ಲಿನ ನೀರಿನಾಂಶ ಕಡಿಮೆ ಆಗುತ್ತಿರುತ್ತದೆ. ಹಾಗಾಗಿ ನೀರನ್ನು ಕುಡಿಯುತ್ತೀರಿ. ಇದರಿಂದ ನಿಮ್ಮ ಚರ್ಮದ ಕೋಮಲತೆಯನ್ನು ಕಾಪಾಡಬಹುದು.

    3. ಮುಖದ ರಕ್ಷಣೆ:
    ಚಳಿಗಾಲದಲ್ಲಿ ನಾವು ಯಾವಾಗಲು ಅತಿಯಾದ ಬಿಸಿ ನೀರನಲ್ಲಿ ಸ್ನಾನ ಮಾಡಲು ಇಷ್ಟಪಡುತ್ತೇವೆ. ಆದರೆ ಇದು ನಿಮಗೆ ಗೊತ್ತಿರಲಿ, ಹೆಚ್ಚು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಮತ್ತು ಸುಕೋಮಲತೆ ಕಡಿಮೆಯಾಗುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರನಲ್ಲಿ ಮುಖ ತೊಳೆಯುವುದು ಉತ್ತಮ.

    4. ವಾರಕ್ಕೊಮ್ಮೆ ಎಣ್ಣೆ ಸ್ನಾನ:
    ಎಣ್ಣೆ ಸ್ನಾನ ಮಾಡುವುದರಿಂದ ನಮ್ಮ ದೇಹದ ಆಯಾಸ ಕಡಿಮೆಯಾಗಿ ಮಾಂಸ ಖಂಡಗಳು ಬಲಗೊಳ್ಳುತ್ತದೆ. ಇದಲ್ಲದೆ ಚರ್ಮದಲ್ಲಿ ಎಣ್ಣೆ ಅಂಶವನ್ನ ಹೆಚ್ಚಿಸಲಿದ್ದು, ಇದರಿಂದ ಸುಕ್ಕುಗಳು, ನೆರೆಗೆ, ಮತ್ತು ತ್ವಚೆ ಬಿರುಕು ಬಿಡುವುದರಿಂದ ರಕ್ಷಿಸುತ್ತದೆ.

    5. ನಿಮ್ಮ ಕಾಲುಗಳಿಗೆ ಕಾಳಜಿ ನೀಡಿ:
    ಚಳಿಗಾಲದಲ್ಲಿ ಕೈ-ಕಾಲುಗಳನ್ನ ಆದಷ್ಟು ಮಾಯಿಶ್ಚರಾಜರ್ ಹಾಕಿ. ಮನೆಯಲ್ಲಿದ್ದಾಗ ಕಾಲುಗಳಿಗೆ ಸಾಕ್ಸ್ ಹಾಕಿ ಬೆಚ್ಚನೆ ಇರಿಸಿ. ಒಡೆದ ಹಿಮ್ಮಡಿಗಳಿಗೆ ವ್ಯಾಸ್ಲೀನ್ ಜೆಲ್ ಹಚ್ಚಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಲೈವ್ ನಲ್ಲಿ ಹೆಲ್ತ್ ಟಿಪ್ಸ್ ನೀಡ್ತಾ ಅಲೋವೆರಾ ಎಂದು ಬೇರೇನನ್ನೋ ತಿಂದು ಅಸ್ವಸ್ಥಳಾದ್ಲು!

    ಲೈವ್ ನಲ್ಲಿ ಹೆಲ್ತ್ ಟಿಪ್ಸ್ ನೀಡ್ತಾ ಅಲೋವೆರಾ ಎಂದು ಬೇರೇನನ್ನೋ ತಿಂದು ಅಸ್ವಸ್ಥಳಾದ್ಲು!

    ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ವಿವಿಧ ಬ್ಲಾಗರ್‍ಗಳು ತಮ್ಮ ಫಾಲೋವರ್ಸ್‍ಗಳಿಗಾಗಿ ಮೇಕಪ್, ಫ್ಯಾಶನ್, ಅಡುಗೆ ಮುಂತಾದವುಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್‍ಗಳಲ್ಲಿ ಹರಿಯಬಿಡುವುದು ಸಾಮಾನ್ಯ.

    ಅಂತೆಯೇ ಚೀನಾದ ಹೆಲ್ತ್ ವ್ಲಾಗರ್(ವಿಡಿಯೋ ಬ್ಲಾಗರ್)ವೊಬ್ಬರು ಲೈವ್ ನಲ್ಲಿ ಹೆಲ್ತ್ ಟಿಪ್ಸ್ ಗಳನ್ನು ನೀಡುತ್ತಾ ಅಲೋವೆರಾ ಅಂತಾ ಅದನ್ನೇ ಹೋಲುವ ಅಗೇವ್ ಎಂಬ ಗಿಡವನ್ನು ತಿಂದು ಅಸ್ವಸ್ಥರಾದ ಬಗ್ಗೆ ವರದಿಯಾಗಿದೆ. ಚೀನಾ ಮೂಲದ ಝಾಂಗ್ ಎಂಬಾಕೆ ವಿಷಕಾರಿ ಸಸ್ಯವೊಂದನ್ನು ತಿಂದು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಏನಿದು ಘಟನೆ?: ಝಾಂಗ್ ತನ್ನ ಫೋಲೋವರ್ಸ್‍ಗಳಿಗೆ ಲೈವ್ ಸ್ಟ್ರೀಮ್‍ನಲ್ಲಿ ಅಲೋವೆರಾದಿಂದ ಆರೋಗ್ಯಕ್ಕೆ ಇರುವ ಲಾಭಗಳ ಬಗ್ಗೆ ಹೇಳುತ್ತಿದ್ದರು. ಅಲೋವೆರಾ ತಿಂದರೆ ಏನು ಪ್ರಯೋಜನ ಎಂಬುವುದರ ಬಗ್ಗೆ ಸವಿವರವಾಗಿ ಹೇಳುತ್ತಾ ಅಲೋವೆರಾ ಅಂತಾ ತಿಳಿದು ಅದನ್ನೇ ಹೋಲುವ ಬೇರೊಂದು ಗಿಡವನ್ನು ತಿಂದಿದ್ದಾರೆ. ಮೊದಲು ತಿಂದಾಗ ಅವರು ಆಹಾ…. ಇದು ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಆದ್ರೆ ಸ್ವಲ್ಪ ಸಮಯದಲ್ಲೇ ಇದು ಕಹಿಯಾಗಿದೆ ಎಂದು ಹೇಳಿದ್ದು, ಆಕೆಯ ಗಂಟಲಿನಲ್ಲಿ ಏನೋ ಸಮಸ್ಯೆ ಆಗ್ತಿದೆ ಅಂತಾ ಮನದಟ್ಟಾಗಿದೆ. ಬಾಯಿ ಮರಗಟ್ಟಿದಂತಾಗಿದ್ದು, ಗಂಟಲಿನಲ್ಲಿ ಉರಿತ ಉಂಟಾಗಿದೆ.

    ತಕ್ಷಣವೇ ಝಾಂಗ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಆಕೆ ತುಂಬಾ ಅಪಾಯಕಾರಿ ಸಸ್ಯವನ್ನು ತಿಂದಿದ್ದಾರೆ ಎಂದು ಆಸ್ಪತ್ರೆಯವರು ದೃಢಪಡಿಸಿರುವುದಾಗಿ ವರದಿಯಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.

    ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಕಾರ ಅಗೇವ್ ಸಸ್ಯದಲ್ಲಿ ಕ್ಯಾಲ್ಶಿಯಂ ಆಕ್ಸಿಲೇಟ್ ರಾಫೈಡ್ಸ್ ಹಾಗೂ ಇನ್ನೂ ಕೆಲವು ಕಿರಿಕಿರಿ ಉಂಟು ಮಾಡುವ ತೈಲಗಳು ಇರುತ್ತವೆ ಎನ್ನಲಾಗಿದೆ.