Tag: ಹೆಲ್ತ್ ಟಿಪ್ಸ್

  • ಸ್ಸಾರಿ, ಈ ಫೋಟೋ ನಿಮಗೆ ಇಷ್ಟವಾಗದೇ ಇರಬಹುದು: ರಶ್ಮಿಕಾ ಮಂದಣ್ಣ

    ಸ್ಸಾರಿ, ಈ ಫೋಟೋ ನಿಮಗೆ ಇಷ್ಟವಾಗದೇ ಇರಬಹುದು: ರಶ್ಮಿಕಾ ಮಂದಣ್ಣ

    ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ರಶ್ಮಿಕಾ ಮಂದಣ್ಣ ಯಾವತ್ತೂ ಮುಂದು. ದಿನವೂ ಅವರು ಹಲವು ಗಂಟೆಗಳ ಕಾಲ ಜಿಮ್ ನಲ್ಲಿ ಕಾಲಕಳೆಯುತ್ತಾರೆ. ಅದರಲ್ಲೂ ಡಾನ್ಸ್ ಮತ್ತು ಯೋಗದ ಮೂಲಕವೂ ದೇಹದಂಡಿಸುತ್ತಾರೆ. ಅನೇಕ ಬಾರಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜತೆ ಹಂಚಿಕೊಂಡು ಆರೋಗ್ಯದ ಬಗ್ಗೆ ಟಿಪ್ಸ್ ಕೊಡುತ್ತಾರೆ. ಆದರೆ, ಈ ಬಾರಿ ಅವರು ಕೊಂಚ ಭಯದಿಂದಲೇ ವರ್ಕೌಟ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಈ ಫೋಟೋ ನಿಮಗೆ ಇಷ್ಟವಾಗುತ್ತದೆಯೋ ಇಲ್ಲವೋ ಎಂದೂ ಕೇಳಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ರಶ್ಮಿಕಾ ಮಂದಣ್ಣ ಹಾಟ್ ಹಾಟ್ ಆಗಿ ಮತ್ತು ತುಂಡುಡುಗೆ ತೊಟ್ಟಾಗೆಲ್ಲ ಟ್ರೋಲ್ ಆಗಿದ್ದಾರೆ. ಅನೇಕ ಬಾರಿ ಅವರು ಧರಿಸುವ ಕಾಸ್ಟ್ಯೂಮ್ ನಿಂದಾಗಿಯೇ ಸುದ್ದಿ ಆಗಿದ್ದಾರೆ. ಹಾಗಾಗಿ ಫೋಟೋ ಹಾಕುವಾಗ ಇದೀಗ ಯೋಚಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಹೀಗಾಗಿಯೇ ಈ ಫೋಟೋವನ್ನು ಹಾಕುವುದೋ ಬೇಡವೋ ಗೊತ್ತಿಲ್ಲ ಎನ್ನುತ್ತಾ ಆ ಫೋಟೋ ಹಾಕಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಜಿಮ್ ನಲ್ಲಿರುವ ಫೋಟೋ ಹಾಕಿಕೊಂಡು, ‘ನಿಮ್ಮಲ್ಲಿಯ ತುಂಬಾ ಜನರಿಗೆ ಈ ಫೋಟೋ ಇಷ್ಟವಾಗುವುದಿಲ್ಲ. ಆದರೆ, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನಿರಂತರವಾಗಿ ವ್ಯಾಯಾಮ ಇರಲಿ. ಡಯಟ್, ವರ್ಕೌಟ್ ಮತ್ತು ಸಕಾರಾತ್ಮಕ ಆಲೋಚನೆಗಳಿಂದ ಉತ್ತಮ ಜೀವನ ನಡೆಸಬುದು’ ಎಂದು ಆರೋಗ್ಯದ ಕುರಿತಾಗಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಪುಷ್ಪಾ ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ತಮಿಳು ಸಿನಿಮಾ ರಂಗದಲ್ಲಿ ಮತ್ತಷ್ಟು ಬೇಡಿಕೆ ಪಡೆದಿದ್ದಾರೆ. ಪುಷ್ಪಾ 2 ಸಿನಿಮಾದಲ್ಲೂ ಅವರಿಗೆ ಪ್ರಮುಖ ಪಾತ್ರವಿದ್ದು, ಸದ್ಯ ಆ ಸಿನಿಮಾದ ತಯಾರಿಯಲ್ಲಿ ಅವರು ತೊಡಗಿದ್ದಾರೆ ಎನ್ನಲಾಗುತ್ತಿದೆ.

  • ತುಟಿಯ ಚರ್ಮ ಒಣಗುತ್ತಿದೆಯೇ? ಇಲ್ಲಿದೆ ಪರಿಹಾರ

    ತುಟಿಯ ಚರ್ಮ ಒಣಗುತ್ತಿದೆಯೇ? ಇಲ್ಲಿದೆ ಪರಿಹಾರ

    ಚೆಂದದ ತುಟಿ ಆಕರ್ಷಣೆಯ ಕೇಂದ್ರ ಬಿಂದು. ಬಿರುಕಿಲ್ಲದ ಸುಂದರವಾದ ಹೊಳೆಯುವ ಮೃದುವಾದ ತುಟಿ ಬೇಕು ಎನ್ನುವುದು ಮಹಿಳೆಯರ ಆಸೆ. ಮಹಿಳೆಯರು ತುಟಿಗಳ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಕೆಲವೊಮ್ಮೆ ಒಣಗಿದ ತುಟಿ, ತುಟಿಯ ಚರ್ಮ ಕಿತ್ತು ಬರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತುಟಿ ಒಣಗಲು ಮತ್ತು ಚರ್ಮ ಕಿತ್ತುಬರಲು ಕಾರಣ ಮತ್ತು ಪರಿಹಾರವೇನು ಇಲ್ಲಿದೆ ಮಾಹಿತಿ.

    ತುಟಿಗಳು ಒಣಗುವುದು ಚಳಿಗಾಲದಲ್ಲಿ ಮಾತ್ರ ಎನ್ನುವ ಭಾವನೆ ತಪ್ಪು. ಬೇಸಿಗೆ ಕಾಲದಲ್ಲಿಯೂ ತುಟಿ ಡ್ರೈ ಆಗುತ್ತೆ. ತುಟಿಯ ಚರ್ಮವು ದೇಹದ ಇತರರ ಭಾಗಗಳ ಚರ್ಮಕ್ಕಿಂತ ತೆಳ್ಳಗೆ ಮತ್ತು ಮೃದುವಾಗಿರುತ್ತದೆ. ಹಾಗಾಗಿ ತುಟಿಯ ಚರ್ಮದ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ.

    ತುಟಿಗಳಲ್ಲಿ ಕಡಿಮೆ ಪ್ರಮಾದ ತೈಲ ಗ್ರಂಥಿಗಳಿರುತ್ತವೆ. ಶೀತ, ಶುಷ್ಕಗಾಳಿ, ತುಟಿಯುನ್ನು ಒಣಗುವಂತೆ ಮಾಡುತ್ತದೆ. ಇದರಿಂದ ತುಟಿಯ ಚರ್ಮ ಒಣಗಿ ಸಿಪ್ಪೆಯಂತಾಗಿ ಕಿತ್ತು ಬರುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ತುಟಿಗಳು ಬಿರುಕು ಬಿಡುವುದು, ಚಪ್ಪಟೆಯಂತಾಗುವುದು ಸಹಜವಾಗಿದೆ. ಚಳಿಗಾಲದಲ್ಲಿ ತುಟಿ ಒಣಗಿದಂತಾಗಿ ಚರ್ಮ ಕಿತ್ತು ಬರುವುದು ಮಹಿಳೆಯರಿಗರೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೊರಗೆ ಹೋಗುವಾಗ ಮಹಿಳಿಯರು ಟೈಟಾನಿಯಂ ಡೈ ಆಕ್ಸೈಡ್ ಮತ್ತು ಜೆನಿಕ್ ಆಕ್ಸೈಡ್ ಅಂಶವನ್ನು ಹೊಂದಿರುವ ಸನ್‍ಸ್ಕ್ರೀನ್ ಬಳಕೆಯನ್ನು ಮಾಡುತ್ತಾರೆ. ಆದರೂ ತುಟಿಯ ಚರ್ಮ ಒಣಗುತ್ತದೆ.

    ಒಣಗಿದ ತುಟಿಗೆ ಕಾರಣಗಳೇನು?
    * ನೀರಿನ ಕೊರತೆ : ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ತುಟಿಗಳು ಶುಷ್ಕತೆಯಿಂದ ಒಡೆಯುತ್ತದೆ. ರಕ್ತದ ಕೊರತೆ ಉಂಟಾದರೆ ತುಟಿಯು ಬಣ್ಣವನ್ನು ಕಳೆದುಕೊಂಡು ಬಿಳುಚಾಗಿ ಕಾಣಿಸಿಕೊಳ್ಳುತ್ತದೆ. ತುಟಿ ಒಣಗುವುದರಿಂದ ಆರೋಗ್ಯದಲ್ಲಿನ ಏರುಪೇರುಗಳು ಕಾಣಿಸಿಕೊಳ್ಳುತ್ತದೆ. ನೀರಿನ ಪ್ರಮಾಣ ಕಡಿಮೆಯಾಗಿರುವುದನ್ನು ತುಟಿ ಒಣಗುವುದರಿಂದ ಗುರುತಿಸಬಹುದಾಗಿದೆ. ಆದಷ್ಟು ನೀರನ್ನು ಸೇವಿಸುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.

    * ಅತಿಯಾದ ಧೂಮಪಾನ: ತುಟಿಗಳು ಕಂದು ಬಣ್ಣಕ್ಕೆ ತಿರುಗಬಹುದು ಅಥವಾ ಗಾಢವಾದ ಬಣ್ಣಕ್ಕೆ ತಿರುಗಬಹುದು. ಧೂಮಪಾನ, ಯಕೃತ್ತಿನಂತಹ ಸಮಸ್ಯೆ ಉಂಟಾದರೆ ತುಟಿಗಳು ಗಾಢವಾದ ಬಣ್ಣಕ್ಕೆ ತಿರುಗುತ್ತವೆ. ಇದ್ದಕ್ಕಿದ್ದಂತೆ ತುಟಿಯ ಬಣ್ಣ ಗಾಢ ಅಥವಾ ಕಂದು ಬಣ್ಣಕ್ಕೆ ತಿರುಗಿದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ.

    * ಸೌಂದರ್ಯ ವರ್ಧಕಗಳ ಬಳಕೆ: ತುಟಿಗೆ ಲೇಪಿಸುವ ಬಣ್ಣ, ಲಿಪ್ ಬಾಮ್, ಔಷಧಿ ಸೇರಿದಂತೆ ಇನ್ನಿತರ ಸೌಂದರ್ಯ ವರ್ಧಕ ಉತ್ಪನ್ನಗಳಿಂದಲೂ ಉಂಟಾಗಬಹುದು. ಇಂತಹ ಅಲರ್ಜಿ ಮಾರಣಾಂತಿಕ ಕಾಯಿಲೆಯೂ ಆಗುವ ಸಾಧ್ಯತೆಗಳಿರುತ್ತವೆ. ಟೂತ್ ಪೇಸ್ಟ್ ಅಲರ್ಜಿಯಿಂದಲೂ ಸಹ ತುಟಿಯಲ್ಲಿ ಅಲರ್ಜಿ ಉಂಟಾಗಬಹುದು. ಆದ್ದರಿಂದ ಬಹುಬೇಗ ವೈದ್ಯರ ಸಲಹೆ ಪಡೆದ ನಿಮ್ಮ ಚರ್ಮಕ್ಕೆ ಅನುಗುಣವಾದ ಕ್ರೀಮ್ ಬಳಸುವುದು ಉತ್ತಮ.

    * ಕಬ್ಬಿಣಾಂಶದ ಕೊರತೆ: ತುಟಿಯ ಸಂದುಗಳಲ್ಲಿ ಸೀಳುವಿಕೆ ಮುಖ್ಯ ಕಾರಣ ಕಬ್ಬಿಣಾಂಶದ ಕೊರತೆ. ಸೇವಿಸುವ ಆಹಾರದಲ್ಲಿ ಕಬ್ಬಿಣಾಂಶದ ಕೊರತೆ ಹೆಚ್ಚಾದಾಗ ಇಂತಹ ಸಮಸ್ಯೆಗಳು ಉಂಟಾಗುತ್ತದೆ.

    ತುಟಿಯ ಆರೈಕೆ ಹೀಗಿರಲಿ:
    * ಬೆಳಗ್ಗೆ ಹಲ್ಲು ಉಜ್ಜಿದ ಬಳಿಕ ತುಟಿಗಳನ್ನು ಬ್ರಶ್ ನಿಂದ ಮೃದುವಾಗಿ ಉಜ್ಜಬೇಕು.
    * ವಾರಕ್ಕೊಮ್ಮೆ ತುಟಿಗೆ ನೈಸರ್ಗಿಕವಾಗಿ ತಯಾರಿಸಿದ ಸ್ಕ್ರಬ್ ಲೇಪಿಸಿಕೊಳ್ಳಬೇಕು.
    * ತುಟಿಗೆ ನಿಮ್ಮ ಆರೋಗ್ಯಕ್ಕೆ ಅನುಗುಣವಾದ ಲಿಪ್ ಬಾಮ್ ಬಳಸಿ. (ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ)
    * ವಿಟಮಿನ್ ಎ ಹೇರಳವಾಗಿರುವ ಕ್ಯಾರೆಟ್, ಟೊಮೆಟೋ, ಹಸಿತರಕಾರಿ ಆಹಾರ ಮತ್ತು ಪ್ರತಿನಿತ್ಯ ದೇಹಕ್ಕೆ ಅಗತ್ಯ ಇರುವಷ್ಟು ನೀರನ್ನು ಸೇವಿಸಬೇಕು.

    * ಜೇನುತುಪ್ಪ, ಹಾಲಿನಕೆನೆಗಳಂತಹ ನೈಸರ್ಗಿಕ ಉತ್ಪನ್ನಗಳನ್ನು ತುಟಿಗೆ ಹಚ್ಚಬಹುದು. ಅಲೋವೆರಾ ಜೆಲ್ ತುಟಿಗೆ ಹಚ್ಚವುದರಿಂದ ಒಣಗಿ ಬಿರುಕು ಬಿಟ್ಟ ತುಟಿಗಳು ಮೃದುವಾಗುತ್ತದೆ. ಸವತೆಕಾಯಿ ಪೇಸ್ಟ್‍ಮಾಡಿ ತುಟಿಗೆ ಹಚ್ಚುವುದರಿಂದ ಕಪ್ಪಾದ ತುಟಿಯ ಬಣ್ಣ ಬದಲಾಗುತ್ತದೆ. ಕಡಿಮೆ ಗುಣಮಟ್ಟದ ಸೌಂದರ್ಯವರ್ಧಕಗಳನ್ನು ತುಟಿಗೆ ಬಳಸಬೇಡಿ.

    * ಮಲಗುವ ಮುನ್ನ ತುಟಿಗೆ ರೋಸ್ ವಾಟರ್ ಹಚ್ಚಬೇಕು.

  • ಪುರುಷರ ತ್ವಚೆಯ ರಕ್ಷಣೆಗಾಗಿ ನಾಲ್ಕು ಸರಳ ಹೆಲ್ತ್ ಟಿಪ್ಸ್

    ಪುರುಷರ ತ್ವಚೆಯ ರಕ್ಷಣೆಗಾಗಿ ನಾಲ್ಕು ಸರಳ ಹೆಲ್ತ್ ಟಿಪ್ಸ್

    ಹಿಳೆಯರ ರೀತಿಯಲ್ಲಿ ಪುರುಷರು ಸಹ ತ್ವಚೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಹಿಳೆಯ ರೀತಿ ತ್ವಚೆಯ ಕಾಳಜಿಯ ಬಗ್ಗೆ ಪುರುಷರು ಹೆಚ್ಚು ಗಮನ ಹರಿಸಲ್ಲ. ಕೆಲಸದ ಒತ್ತಡಗಳ ನಡುವೆ ತ್ವಚೆಯ ರಕ್ಷಣೆ ಮಾಡಿಕೊಳ್ಳುವುದನ್ನ ಮರೆತು ಬಿಡುತ್ತಾರೆ. ಕೆಲವು ಸರಳ ವಿಧಾನಗಳನ್ನು ಫಾಲೋ ಮಾಡೋದರಿಂದ ಮೊಡವೆ, ಒಣ ತ್ವಚೆ, ಎಣ್ಣೆ ತ್ವಚೆ ಸಮಸ್ಯೆಗಳನ್ನ ದೂರ ಮಾಡಬಹುದಾಗಿದೆ.

    1. ಪ್ರೊಡೆಕ್ಟ್ ಆಯ್ಕೆ: ಮೊದಲಿಗೆ ನಿಮ್ಮ ತ್ವಚೆಯ ಗುಣ ಯಾವ ರೀತಿ ಅನ್ನೋದನ್ನ ತಿಳಿದುಕೊಳ್ಳಬೇಕು. ನಿಮ್ಮ ಸ್ಕಿನ್ ಡ್ರೈ, ಆಯಿಲ್ ಅಥವಾ ಎರಡೂ ಗುಣಗಳಿಂದ ಕೂಡಿದೆ ಎಂಬುದನ್ನ ತಿಳಿಯಬೇಕು. ನಂತರ ನಿಮ್ಮ ತ್ವಚೆಗೆ ಅನುಗುಣವಾಗುವಂತಹ ಕ್ರೀಮ್, ಪೌಡರ್, ಸೋಪ್ ಸೇರಿದಂತೆ ಇನ್ನಿತರ ಪ್ರೊಡೆಕ್ಟ್ ಬಳಸುವ ಅಭ್ಯಾಸ ರೂಡಿ ಮಾಡಿಕೊಳ್ಳಬೇಕು. ಇದರಿಂದ ತ್ವಚೆಯ ಅರ್ಧ ಸಮಸ್ಯೆಗಳು ನಿವಾರಣೆ ಆಗುತ್ತವೆ.

    2. ಸಿಟಿಎಂ: ದಿನಕ್ಕೆ ಎರಡೂ ಬಾರಿಯಾದ್ರೂ ಸಿಟಿಎಂ(ಕ್ಲೀನ್ಸಿಂಗ್, ಟೋನಿಂಗ್ ಮತ್ತು ಮೊಯಿಸ್ಚರೈಸಿಂಗ್) ಮಾಡಿಕೊಳ್ಳಬೇಕು. ಸಿಟಿಎಂ ಮಾಡುವದರಿಂದ ನಿಮ್ಮ ತ್ವಚೆ ಸ್ವಚ್ಛವಾಗಿರುತ್ತದೆ. ಟೋನಿಂಗ್ ಗಾಗಿ ನಿಮ್ಮ ತ್ವಚೆಯನುಗುಣವಾದ ಟೋನರ್ ಪ್ರೊಡೆಕ್ಟ್ ಬಳಸಬೇಕು. ನಿಮ್ಮ ತ್ವಚೆ ಜಿಗುಟು ಜಿಗುಟಾಗಿದ್ರೆ ಲಿಕ್ವಿಡ್ ಮೊಯಿಸ್ಚರೈಸರ್ ಮತ್ತು ಒಣ ತ್ವಚೆಯಾಗಿದ್ರೆ ಆಯಿಲ್ ಮೊಯಿಸ್ಟರೈಸರ್ ಬಳಸಿದ್ರೆ ಉತ್ತಮ.

    3. ಸ್ಕ್ರಬ್ಬಿಂಗ್: ತ್ವಚೆಯ ಆರೋಗ್ಯಕ್ಕಾಗಿ ಸ್ಕ್ರಬ್ಬಿಂಗ್ ಮಾಡಿಕೊಳ್ಳಬೇಕು ಎಂದು ಸೌಂದರ್ಯ ತಜ್ಞರು ಸಲಹೆ ನೀಡುತ್ತಾರೆ. ವಾತಾವರಣದಲ್ಲಿ ಧೂಳು ಮುಖದ ಮೇಲೆ ನೇರವಾಗಿ ಬೀಳುವದರಿಂದ ಬ್ಲ್ಯಾಕ್ ಡಾಟ್ಸ್, ವೈಟ್‍ಹೆಡ್ಸ್ ಉಂಟಾಗುತ್ತವೆ. ಹೀಗಾಗಿ ಸ್ಕ್ರಬ್ಬಿಂಗ್ ಮಾಡಿಕೊಳ್ಳುವದರಿಂದ ಈ ಎಲ್ಲ ಸಮಸ್ಯೆಗಳ ನಿವಾರಣೆ ಆಗುತ್ತವೆ. ನೀವು ಹೆಚ್ಚು ಹೊರಗಡೆ ಸುತ್ತುತ್ತಿದ್ದರೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಸ್ಕ್ರಬ್ಬಿಂಗ್ ಮಾಡಿಸಿಕೊಂದ್ರೆ ತ್ವಚೆ ಆರೋಗ್ಯ ಮತ್ತು ಕಾಂತಿಯುತವಾಗಿ ಹೊಳೆಯುತ್ತಿರುತ್ತದೆ.

    4. ಸನ್‍ಸ್ಕ್ರೀನ್: ಕೆಲವರು ಬೇಸಿಗೆಯಲ್ಲಿ ಮಾತ್ರ ಸನ್‍ಸ್ಕ್ರೀನ್ ಬಳಸುತ್ತಾರೆ. ವರ್ಷದ ಎಲ್ಲ ದಿನವೂ ಸನ್‍ಸ್ಕ್ರೀನ್ ಬಳಸುವ ಸಲಹೆಯ ಸೌಂದರ್ಯ ತಜ್ಞರು ನೀಡುತ್ತಾರೆ. ಸನ್‍ಸ್ಕ್ರೀನ್ ಬಳಕೆಯಿಂದ ಸೂರ್ಯನ ಕಿರಣಗಳಿಂದ ತ್ವಚೆಗೆ ರಕ್ಷಣೆ ಸಿಗುತ್ತೆ.

  • ಬದಲಾಗ್ತಿದೆ ಹವಾಮಾನ- ನಿಮ್ಮ ಆಹಾರದಲ್ಲಿರಲಿ ಬೆಲ್ಲ

    ಬದಲಾಗ್ತಿದೆ ಹವಾಮಾನ- ನಿಮ್ಮ ಆಹಾರದಲ್ಲಿರಲಿ ಬೆಲ್ಲ

    -ಬೆಲ್ಲದಿಂದಾಗುವ 5 ಆರೋಗ್ಯಕರ ಲಾಭಗಳು

    ಳೆದ ಕೆಲ ದಿನಗಳಿಂದ ಹವಾಮಾನದಲ್ಲಿ ವಿಪರೀತ ಬದಲಾವಣೆ ಆಗುತ್ತಿದೆ. ದಿಢೀರ್ ಅಂತ ಬರೋ ಮಳೆ, ಕೆಲವೊಮ್ಮೆ ದಿನವಿಡೀ ಮೋಡ ಮುಸುಕಿದ ವಾತಾವರಣ ಹಿರಿಯ ಜೀವಿಗಳನ್ನು ಮುದ್ದೆ ಮಾಡುತ್ತವೆ. ಇತ್ತ ಮಕ್ಕಳಲ್ಲಿ ಕೆಮ್ಮು ಮತ್ತು ಶೀತ ಸಂಬಂಧಿತ ರೋಗಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಮಕ್ಕಳು ಮತ್ತು ಹಿರಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಆಹಾರದಲ್ಲಿ ಮಿತವಾಗಿ ಬೆಲ್ಲ ಬಳಕೆ ಮಾಡೋದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.

    ನೀವು ಪ್ರತಿದಿನ ಮಾಡುವ ಅಡುಗೆಗಳಲ್ಲಿ ಬೆಲ್ಲ ಬಳಸುವುದರಿಂದ ನಿಮಗೆ ಅದು ಐರನ್ ಶಕ್ತಿಯನ್ನು ನೀಡುತ್ತದೆ. ಬೆಲ್ಲದಿಂದ ಮಾಡುವ ಸಿಹಿ ತಿಂಡಿ, ಬೆಲ್ಲದ ಟೀ, ಸಾಂಬಾರ್ ನಲ್ಲಿ ಸ್ವಲ್ಪ ಬೆಲ್ಲ ಹಾಕುವದರಿಂದ ಹೊಸ ರುಚಿಯ ಜೊತೆಗೆ ಗುಣಮಟ್ಟದ ಆಹಾರ ಸಿದ್ಧವಾಗುತ್ತದೆ.

    ಆಹಾರದಲ್ಲಿ ಬೆಲ್ಲದ ಬಳಕೆಯಿಂದಾಗುವ 5 ಪ್ರಯೋಜನಗಳು
    1. ಹೀಮೋಗ್ಲೊಬಿನ್ ಹೆಚ್ಚಳ: ಬೆಲ್ಲದಲ್ಲಿ ಐರನ್ ಪ್ರಮಾಣ ಯಥೇಚ್ಛವಾಗಿರುತ್ತದೆ. ಆಹಾರದಲ್ಲಿ ಬೆಲ್ಲ ಬಳಸುವದರಿಂದ ಸಹಜವಾಗಿ ಹಿಮೋಗ್ಲೊಬಿನ್ ಪ್ರಮಾಣ ಸಹಜವಾಗಿ ಹೆಚ್ಚಳವಾಗುತ್ತದೆ. ಅನಿಮಿಯಾ ರೋಗಿಗಳಿಗೆ ಬೆಲ್ಲದ ಅಮೃತ ಎಂದು ಹೇಳಲಾಗುತ್ತದೆ.
    2. ರಕ್ತದೊತ್ತಡದ ನಿಯಂತ್ರಣ: ಪ್ರತಿದಿನ ಆಹಾರದಲ್ಲಿ ಬೆಲ್ಲ ಬಳಸುವದರಿಂದ ರಕ್ತದೊತ್ತಡವನ್ನು ಕಂಟ್ರೋಲ್ ತರಬಹುದು. ರಕ್ತದೊತ್ತಡದ ಸಮಸ್ಯೆ ಇರೋ ರೋಗಿಗಳಿಗೆ ವೈದ್ಯರು ಬೆಲ್ಲ ಸೇವನೆಯ ಸಲಹೆ ನೀಡುತ್ತಾರೆ.

    3. ಚಳಿಯಿಂದ ರಕ್ಷಣೆ: ವಾತಾವರಣದಲ್ಲಿ ವ್ಯತ್ಯಾಸ ಆಗುತ್ತಿರುವ ಹಿನ್ನೆಲೆಯಲ್ಲಿ ಶೀತ ಸಂಬಂಧಿತ ರೋಗಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬೆಲ್ಲದ ಹೆಚ್ಚು ಉಷ್ಣಾಂಶ ಹೊಂದಿರುವ ವಸ್ತು ಆಗಿರೋದರಿಂದು ಅದು ಮಕ್ಕಳನ್ನು ಬೆಚ್ಚಗಿರುಸುತ್ತದೆ. ಮಳೆಗಾಲದಲ್ಲಿ ಜನರು ಕಡ್ಲೆ ಹಿಟ್ಟು ಮತ್ತು ಬೆಲ್ಲ ಸೇರಿಸಿ ಪಾನಕ ತಯಾರಿಸಿ ಸೇವಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಸಣ್ಣ ಜ್ವರ ಕಾಣಿಸಿಕೊಂಡ್ರೆ ಕಾಳು ಮೆಣಸು, ಶುಂಠಿ ಮತ್ತು ಬೆಲ್ಲ ಹಾಕಿ ತಯಾರಿಸಿದ ಕಷಾಯ ಸೇವಿಸುತ್ತಾರೆ.
    4. ಮೂಳೆಗಳಿಗೆ ಸಹಕಾರಿ: ಬೆಲ್ಲ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಅಂಶವನ್ನು ಸಹ ಒಳಗೊಂಡಿರುತ್ತದೆ. ನಿಯಮಿತವಾಗಿ ಬೆಲ್ಲ ಸೇವಿಸುವದರಿಂದ ಮೂಳೆಗಳು ಬಲಗೊಳ್ಳುತ್ತವೆ. ಬೆಲ್ಲ ಮತ್ತು ಶುಂಠಿ ಎರಡೂ ಸೇರಿಸಿ ತಿನ್ನುವದರಿಂದ ಮೊಳಕಾಲಿನ ನೋವು ಕಡಿಮೆ ಆಗುತ್ತದೆ ಎಂದು ಮನೆಯಲ್ಲಿ ಹೇಳಿರೋದನ್ನು ನೀವು ಕೇಳಿರಬಹುದು.

    5. ತ್ವಚೆಯ ರಕ್ಷಣೆ: ನಿಮ್ಮ ಆಹಾರದ ಜೊತೆ ಬೆಲ್ಲ ಸೇವಿಸುವರಿಂದ ತ್ವಚೆಯ ರಕ್ಷಣೆ ಸಹ ಆಗುತ್ತದೆ. ಬೆಲ್ಲದಲ್ಲಿನ ಅಂಶಗಳು ಬ್ಲಡ್ ಪ್ಯೂರಿಫೈ ಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಬೆಲ್ಲ ಸೇವನೆಯುಂದ ನಿಮ್ಮ ತ್ವಚೆ ಗ್ಲೋ ಆಗುತ್ತದೆ.

  • ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು

    ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು

    ಬೆಂಗಳೂರು: ಕೊರೊನಾ ತಡೆಗಾಗಿ ಮುಂಜಾಗ್ರತ ಕ್ರಮಗಳ ಜೊತೆಯಲ್ಲಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಬಳಸುವುದು ಉತ್ತಮ. ಸೋಂಕಿಕತರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನೇ ನೀಡಲಾಗುತ್ತದೆ. ಮಕ್ಕಳು, ಗರ್ಭಿಣಿ ಮತ್ತು ಹಿರಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರೋದರಿಂದ ಉತ್ತಮ ಆಹಾರ ಸೇವನೆ ಮಾಡಬೇಕು. ಸೋಂಕಿತರು ಗುಣಮುಖರಾಗಿ ಬಂದ ಮೇಲೆಯೂ ವೈದ್ಯರ ಸಲಹೆಯ ಮೇರೆಗೆ ಆಹಾರ ಸೇವಿಸಬೇಕು.

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು:
    * ಕುಡಿಯಲು ಯಾವಾಗ ಬಿಸಿನೀರು ಉಪಯೋಗಿಸುವುದು.
    * ಪ್ರತಿದಿನ ಯೋಗಾಸನ, ಪ್ರಾಣಾಯಾಮವನ್ನು ಕನಿಷ್ಠ 30 ನಿಮಿಷಗಳವರೆಗೆ ಮಾಡುವುದು.
    * ಅರಿಶಿನ, ಜೀರಿಗೆ, ಬೆಳ್ಳುಳ್ಳಿ ಮತ್ತು ಧನಿಯಾಗಳನ್ನು ಆಹಾರದಲ್ಲಿ ಬೆಳೆಸುವುದು.
    * ಗಿಡಮೂಲಿಕೆಯ ಟೀಗಳನ್ನು ಕುಡಿಯುವುದು (ವೈದ್ಯರ ಸಲಹೆಯ ಮೇರೆಗೆ)
    * ಪುದೀನ ಎಲೆಗಳನ್ನು ಬಿಸಿನೀರಿಗೆ ಹಾಕಿ ಹಬೆಯನ್ನು ತೆಗೆದುಕೊಳ್ಳುವುದು.
    * ಕೆಮ್ಮು ಅಥವಾ ಗಂಟಲಿನ ಕಿರಿಕಿರಿ ಇದ್ದರೆ ಸಕ್ಕರೆ ಅಥವಾ ಜೇನು ತುಪ್ಪವನ್ನು ಎರಡು ಮೂಗಿನ ಹೊಳ್ಳೆಗಳಿಗೆ ದಿನಕ್ಕೆರಡು ಬಾರಿ ಸವರಿಕೊಳ್ಳುವುದು.
    * 1 ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನಕಾಯಿ ಎಣ್ಣೆಯನ್ನು 2-3 ನಿಮಿಷ ಬಾಯಲ್ಲಿಟ್ಟುಕೊಂಡು ತಿರುಗಾಡಿಸಿ ಉಗುಳಬೇಕು. ನಂತರ ಬಿಸಿನೀರಿನಿಂದ ಬಾಯಿ ಮುಕ್ಕಳಿಸಬೇಕು. ಇದನ್ನು ದಿನಕ್ಕೆರಡು ಬಾರಿ ಮಾಡಬೇಕು.

    ಒಣಕೆಮ್ಮು ಹಾಗೂ ಗಂಟಲು ಕೆರತವಿದ್ದರೆ:
    * ಪುದಿನ ಎಲೆ ಅಥವಾ ಓಮದ ಕಾಳುಗಳನ್ನು ಕುದಿಯುವ ನೀರಿಗೆ ಹಾಕಿ ಹಬೆ (ಆವಿ)ಯನ್ನು ದಿನಕ್ಕೊಂದು ಬಾರಿ ತೆಗೆದುಕೊಳ್ಳುವುದು.
    * ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ 2-3 ಬಾರಿ ಸೇವಿಸುವುದು.
    (ಇವೆಲ್ಲ ಕೇವಲ ಸಾಮನ್ಯ ಜ್ವರ, ಕೆಮ್ಮು, ನೆಗಡಿಗೆ ಶಮನ ನೀಡುತ್ತವೆ. ಒಂದು ವೇಳೆ ಈ ಲಕ್ಷಣಗಳು ಮುಂದುವರಿದ್ರೆ ವೈದ್ಯರನ್ನು ಸಂಪರ್ಕಿಸಬೇಕು)

  • ಮಾಸ್ಕ್ ಏಕೆ? ಯಾರು? ಯಾವಾಗ? ಹೇಗೆ ಧರಿಸಬೇಕು?- ಇಲ್ಲಿದೆ ಸಂಪೂರ್ಣ ಮಾಹಿತಿ

    ಮಾಸ್ಕ್ ಏಕೆ? ಯಾರು? ಯಾವಾಗ? ಹೇಗೆ ಧರಿಸಬೇಕು?- ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ಕೊರೊನಾ ಆತಂಕ ಮತ್ತು ತಡೆಗಾಗಿ ಸಾರ್ವಜನಿಕರು ಮಾಸ್ಕ್ ಧರಿಸುತ್ತಿದ್ದಾರೆ. ಆದ್ರೆ ಮಾಸ್ಕ್ ಧರಿಸೋದು ಹೇಗೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

    ಮಾಸ್ಕ್ ಏಕೆ ಧರಿಸಬೇಕು?: ಕೋವಿಡ್-19 ವೈರಸ್ ವ್ಯಕ್ತಿಯಿಂದ ವ್ಯಕ್ತಿಯ ನಡುವೆ ಆಗುವ ಸಂಪರ್ಕದಿಂದ ಸುಲಭವಾಗಿ ಹರಡುತ್ತದೆ. ವೈರಸ್ ಗಳನ್ನು ಹೊತ್ತ ನೀರಿನ ಹನಿಗಳು ಬೇಗನೆ ಒಣಗಿ, ಬೀಜಕಣಗಳಾಗಿ ತೇಲಾಡಿ ನಂತರ ನೆಲ ಅಥವಾ ಇನ್ಯಾವುದೇ ಪದರುಗಳ ಮೇಲೆ ಚಿಮ್ಮುತ್ತವೆ. ಕೋವಿಡ್-19 ಸಂಭವಿಸಲು ಕಾರಣವಾದ ಸಾರ್ಸ್-ಸಿಓವಿ-2 ವೈರಸ್ ಅನ್ನು ಗಾಳಿ ಅಥವಾ ಅನಿಲದಲ್ಲಿ ಘನ ಅಥವಾ ದ್ರವರೂಪದ ಕಣಗಳಾಗಿ ಮೂರು ಗಂಟೆಗಳವರೆಗೂ ಇರುತ್ತದೆ. ಪ್ಲಾಸ್ಟಿಕ್ ಮತ್ತು ತುಕ್ಕು ಹಿಡಿಯದ ಸ್ಟೀಲ್ ಗಳ ಮೇಲ್ಮೈಮೇಲೆ ಮೂರು ದಿನಗಳವರೆಗೆ ಇರಲಿದೆ. ಸೋಂಕಿತ ವ್ಯಕ್ತಿಯಿಂದ ಗಾಳಿಯಲ್ಲಿ ಚಿಮ್ಮುವ ಹನಿಗಳು ಉಸಿರಾಟದ ಮೂಲಕ ಇನ್ನೊಬ್ಬ ವ್ಯಕ್ತಿಯೊಳಗೆ ಪ್ರವೇಶಿಸುವ ಸಾಧ್ಯತೆಯನ್ನು ಮಾಸ್ಕ್ ಕಡಿಮೆ ಮಾಡುತ್ತದೆ.

    ಮಾಸ್ಕ್ ಯಾರು ಧರಿಸಬೇಕು?
    * ಕಾಯಿಲೆಯ ಲಕ್ಷಣಗಳಿರುವವರು
    * ಸಾರ್ವಜನಿಕ ಮತ್ತು ಜನಜಂಗುಳಿ ಸ್ಥಳದಲ್ಲಿ ಸಂಚರಿಸುವ ವ್ಯಕ್ತಿಗಳು
    * ಕೊರೊನಾ ಫ್ರಂಟ್ ಲೈನ್ ಕೆಲಸಗಾರರು
    * ಸೋಂಕು ಇರುವ ವ್ಯಕ್ತಿಗಳಿಗೆ ಆರೈಕೆ ಮಾಡುತ್ತಿರುವವರು
    * ಸಂಪರ್ಕ ಮತ್ತು ಶಂಕಿತ ಪ್ರಕರಣಗಳು.

    ಮಾಸ್ಕ್ ಯಾವಾಗ ಧರಿಸಬೇಕು? (ಆರೋಗ್ಯ ಸೇವಾ ಕಾರ್ಯಕರ್ತರು ಹೊರತುಪಡಿಸಿ)
    * ಕೆಮ್ಮು ಅಥವಾ ಜ್ವರ ಇದ್ದಾಗ ಮೂರು ಪದರುಗಳುಳ್ಳ ವೈದ್ಯಕೀಯ ಮಾಸ್ಕ್ ನಿಮ್ಮಿಂದ ಇತರರಿಗೆ ಸೋಂಕು ಹರಡುವುದನ್ನು ತಡೆಗಟ್ಟುತ್ತದೆ. ಆದರೆ ಇತರರಿಗೆ ಸೋಂಕು ಹರಡದಿರಲು ನೀವು ನಿಮ್ಮ ಕೈಗಳನ್ನು ತೊಳೆಯುತ್ತಿರಬೇಕು.
    * ವೈದ್ಯಕೀಯ ನೆರವು ನೀಡುವ ಕೇಂದ್ರಗಳಿಗೆ ಭೇಟಿ ನೀಡಿದಾಗ
    * ಕಾಯಿಲೆ ಪೀಡಿತರಿಗೆ ನೀವು ಶುಶ್ರೂಷೆ ನೀಡುತ್ತಿರುವವರಿಗೆ
    * ಸೋಂಕು ತಗುಲಿರುವ ಶಂಕೆ/ ಸೋಂಕು ತಗುಲಿದೆ ಎಂದು ಖಚಿತವಾಗಿರುವವರು ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಲ್ಲಿ ಅವರ ಕುಟುಂಬದ ಸದಸ್ಯರು 3 ಪದರುಗಳುಳ್ಳ ವೈದ್ಯಕೀಯ ಮಾಸ್ಕ್ ಧರಿಸಬೇಕು.

    ಮಾಸ್ಕ್ ಧರಿಸುವಾಗ ಅನುಸರಿಸಬೇಕಾದ ಅಂಶಗಳು
    1. ಮಾಸ್ಕ್ ಧರಿಸುವಾಗ:
    * ಮಾಸ್ಕ್ ತೆಗೆದುಕೊಳ್ಳುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಮುಟ್ಟಿ.
    * ಮಾಸ್ಕ್ ಪದರುಗಳನ್ನು ಬಿಡಿಸಿ, ಪದರುಗಳು ಕೆಳ ಮುಖವಾಗಿರುವುದನ್ನು ನೋಡಿಕೊಳ್ಳಿ.
    * ಮೂಗು, ಬಾಯಿ ಮತ್ತು ಗದ್ದದ ಭಾಗಗಳು ಮಾಸ್ಕ್ ನಿಂದ ಪೂರ್ಣವಾಗಿ ಮುಚ್ಚುವಂತೆ ಧರಿಸುವುದು.
    * ಮಾಸ್ಕ್ ಧರಿಸದ ಮೇಲೆ ಪದೇ ಪದೇ ಮುಟ್ಟಿಕೊಳ್ಳದಿರುವುದು.
    * ಕುತ್ತಿಗೆಯಿಂದ ಮಾಸ್ಕ್ ನೇತಾಡದಂತೆ ನೋಡಿಕೊಳ್ಳುವುದು.
    * ಮಾಸ್ಕ್ ಒದ್ದೆಯಾದಲ್ಲಿ ಅಥವಾ ತೇವವಾದ್ರೆ ಕೂಡಲೇ ಬದಲಾಯಿಸಿ.
    * ಒಮ್ಮೆ ಬಳಸುವಂತಹ ಮಾಸ್ಕ್ ಗಳನ್ನು ಯಾವುದೇ ಕಾರಣಕ್ಕೂ ಪುನರ್ಬಳಕೆ ಮಾಡಬಾರದು. (ಪುನರ್ ಬಳಸಬಹುದಾದವುಗಳನ್ನು ಹೊರತುಪಡಿಸಿ)

    2. ಮಾಸ್ಕ್ ತೆಗೆಯುವಾಗ
    * ಮಾಸ್ಕ್ ಮುಂಭಾಗವನ್ನು ಮುಟ್ಟದೇ ಲೇಸ್ ಗಳನ್ನು ಹಿಡಿದು ಹಿಂಭಾಗದಿಂದ ತೆಗೆಯಬೇಕು.
    * ಕೆಳಗಿನ ಲೇಸ್ ಸಡಿಲಿಸಿ ನಂತರ ಮೇಲಿನ ಲೇಸ್ ಸಡಿಲಗೊಳಿಸಿ.
    * ಹಿಂಭಾಗದ ಲೇಸ್ ಹಿಡಿದುಕೊಂಡು ಮಾಸ್ಕ್ ತೆಗೆಯಿರಿ. (ಎಚ್ಚರ ಮಾಸ್ಕ್ ಮುಂಭಾಗ ನಿಮ್ಮ ಮೂಗು, ಬಾಯಿ ಅಥವಾ ಕೈಯನ್ನು ಸ್ಪರ್ಶಿಸದಂತೆ ನೋಡಿಕೊಳ್ಳಿ)

    3. ಮಾಸ್ಕ್ ವಿಲೇವಾರಿ ಮಾಡುವುದು
    * ಮಾಸ್ಕ್ ತೆಗೆದ ನಂತರ ಅದರ ಮೇಲ್ಮೈಯನ್ನು ಅತಾಚುರ್ಯದಿಂದ ಮುಟ್ಟಿದಾಗ ಕೂಡಲೇ ಸೋಪ್/ ಸ್ಯಾನಿಟೈಸರ್/ ಬಿಸಿ ನೀರಿನಿಂದ ಕೈಗಳನ್ನು ತೊಳೆದುಕೊಳ್ಳಿ.
    * ಮಾಸ್ಕ್ ಸರಿಯಾಗಿ ಡಸ್ಟ್ ಬಿನ್ ನಲ್ಲಿ ಎಸೆಯಿರಿ.
    * ಪುನಃ ಬಳಸಬಹುದಾದ ಮಾಸ್ಕ್ ಆಗಿದ್ರೆ, ಅದನ್ನು ಸೋಪಿನ ನೀರಿನಲ್ಲಿ 30 ನಿಮಿಷಗಳ ಕಾಲ ಹುದುಗಿಸಿ. ನಂತರ ತೊಳೆದು ಚೆನ್ನಾಗಿ ಒಣಗಿಸಿ ಬಳಸಬೇಕು.

  • ಉತ್ತಮ ಆರೋಗ್ಯಕ್ಕಾಗಿ ನೆನೆಸಿದ ನೆಲಗಡಲೆ ತಿನ್ನಿ

    ಉತ್ತಮ ಆರೋಗ್ಯಕ್ಕಾಗಿ ನೆನೆಸಿದ ನೆಲಗಡಲೆ ತಿನ್ನಿ

    ಡವರ ಬಾದಾಮಿ ಎಂದು ಕರೆಯಲ್ಪಡುವ ನೆಲಗಡಲೆ ಒಂದು ಆರೋಗ್ಯಕರ ಸ್ನ್ಯಾಕ್ಸ್ ಎನ್ನಬಹುದು. ಕೆಲವರಿಗೆ ನೆಲಗಡೆಲೆಯನ್ನು ಬೇಯಿಸಿ ತಿನ್ನಲು ಇಷ್ಟವಾದರೆ, ಇನ್ನು ಕೆಲವರಿಗೆ ಅದನ್ನು ಹುರಿದು ತಿನ್ನಲು ಇಷ್ಟ. ಅಲ್ಲದೇ ಅವಲಕ್ಕಿ, ಚಿತ್ರನ್ನ, ಪುಳಿಯೋಗರೆ ಸೇರಿದಂತೆ ಅನೇಕ ಅಡುಗೆ ಮಾಡುವಾಗ ಸ್ವಲ್ಪ ನೆಲಗಡೆಲೆ ಹಾಕಿದರೆ ಅಡುಗೆಯ ರುಚಿಯೂ ಹೆಚ್ಚುತ್ತದೆ. ಇದರಲ್ಲಿ ಅತ್ಯುತ್ತಮವಾದ ಕೊಬ್ಬಿನಂಶ, ನಾರಿನಂಶ, ಪೊಟಾಷ್ಯಿಯಂ, ರಂಜಕ, ವಿಟಮಿನ್ ಬಿ, ಮೆಗ್ನಿಷ್ಯಿಯಂ ಇದೆ. ಹೀಗಾಗಿ ನೆಲಗಡೆಲೆಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.

    ಬಾದಾಮಿಯನ್ನು ನೆನೆಸಿ ತಿಂದರೆ ಆರೋಗ್ಯಕ್ಕೆ ಒಳ್ಳೆದು ಎನ್ನುವುದು ಸಮಾನ್ಯವಾಗಿ ಗೊತ್ತಿರುವ ವಿಚಾರ. ಆದರೆ ನೆಲಗಡಲೆಯನ್ನು ನೆನೆಸಿ ತಿಂದರೆ ಎಷ್ಟು ಆರೋಗ್ಯಕರ ಲಾಭ ಸಿಗುತ್ತದೆ ಎಂದು ಹಲವರಿಗೆ ತಿಳಿದಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ.

    ನೆನೆ ಹಾಕಿದ ನೆಲಗಡೆಲೆಯ ಆರೋಗ್ಯಕರ ಲಾಭವೇನು?

    1. ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ
    ಸಾಮಾನ್ಯವಾಗಿ ಹಲವರಿಗೆ ಅಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಈ ರೀತಿ ಸಮಸ್ಯೆ ಇರುವವರು ಪ್ರತಿದಿನ ಸ್ವಲ್ಪ ನೆಲಗಡಲೆ ನೆನೆ ಹಾಕಿ ತಿಂದರೆ ಹೊಟ್ಟೆ ಉಬ್ಬುವ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸರಿಯಾಗುವಂತೆ ನೋಡಿಕೊಳ್ಳುತ್ತದೆ.

    2. ಹೃದಯ ಸಮಸ್ಯೆಗೆ
    ನೆಲಗಡಲೆಯಲ್ಲಿ ಹೃದಯದ ಆರೋಗ್ಯ ವೃದ್ಧಿಸುವ ಗುಣವಿದೆ. ಹೃದಯ ಸಂಬಂಧಿ ಸಮಸ್ಯೆ ಇರುವವರು ಆಹಾರಕ್ರಮದ ಕಡೆಗೆ ಹೆಚ್ಚಿಗೆ ನಿಗಾ ವಹಿಸಬೇಕು. ನೆಲಗಡಲೆಯನ್ನು ನೀರಿನಲ್ಲಿ ನೆನೆ ಹಾಕಿ ತಿಂದರೆ, ಅದು ಹೃದಯದ ಸಮಸ್ಯೆ ತಡೆಗಟ್ಟುವಲ್ಲಿ ಸಹಕರಿಸುತ್ತದೆ. ಅಲ್ಲದೇ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವಂತೆ ಮಾಡುತ್ತದೆ.

    3. ಬೆನ್ನು ನೋವುಗೆ
    ಇತ್ತೀಚಿನ ಜೀವನ ಶೈಲಿಯಿಂದ ಬೆನ್ನುನೋವು ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಬೆನ್ನು ನೋವು ಬರಲು ವಯಸ್ಸಾಗಬೇಕು ಎನ್ನುವ ಹಾಗಿಲ್ಲ, ಚಿಕ್ಕ ಪ್ರಾಯದಲ್ಲಿಯೇ ಬೆನ್ನು ನೋವಿನ ಸಮಸ್ಯೆ ಹಲವರಿಗೆ ಕಾಡುತ್ತದೆ. ನಾವು ಕೂರುವ ಭಂಗಿ ಮತ್ತಿತರ ಕಾರಣಗಳಿಂದ ಬೆನ್ನು ನೋವು ಬರುತ್ತದೆ. ನೆನೆ ಹಾಕಿದ ನೆಲಗಡಲೆ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ತಿಂದರೆ ಇಂತಹ ಬೆನ್ನು ನೋವು ಕಡಿಮೆ ಆಗುತ್ತದೆ.

    4. ಕಟ್ಟು ಮಸ್ತಿನ ಮೈಕಟ್ಟಿಗಾಗಿ
    ಕಟ್ಟು ಮಸ್ತಿನ ಮೈಕಟ್ಟು ಬೇಕೆಂದು ಹಲವರು ಜಿಮ್‍ನಲ್ಲಿ ತಾಸುಗಟ್ಟೆಲೆ ವರ್ಕೌಟ್ ಮಾಡುತ್ತಾರೆ. ಹೀಗೆ ವರ್ಕೌಟ್ ಮಾಡುವವರು ತಾವು ಸೇವಿಸುವ ಪೌಷ್ಠಿಕ ಆಹಾರಗಳ ಜೊತೆಗೆ ಸ್ವಲ್ಪ ನೆನೆಸಿದ ನೆಲಗಡಲೆಯನ್ನು ಸೇವಿಸುವುದು ಒಳ್ಳೆದು. ಸದೃಢ ಮೈಕಟ್ಟು ಪಡೆಯುವಲ್ಲಿ ನೆಲಗಡಲೆಯಲ್ಲಿರುವ ಪೋಷಕಾಂಶ ಸಹಾಯ ಮಾಡುತ್ತದೆ. ಇದನ್ನು ನೀರಿನಲ್ಲಿ ಹಾಕಿ ಮೊಳಕೆ ಬರಿಸಿ ತಿಂದರೆ ಆರೋಗ್ಯಕ್ಕೆ ಇನ್ನೂ ಉತ್ತಮ.

    5. ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುತ್ತದೆ
    ಕಲುಷಿತ ವಾತಾವರಣ ಹಾಗೂ ರಾಸಾಯನಿಕ ಸಿಂಪಡಿಸಿದ ಆಹಾರ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ನಮ್ಮ ದೇಹದಲ್ಲಿರುವ ಫ್ರೀ ರ‌್ಯಾಡಿಕಲ್ಸ್ ಹೋಗಲಾಡಿಸುವಲ್ಲಿ ನೆನೆಸಿದ ನೆಲಗಡಲೆ ಸೇವನೆ ಉಪಯುಕ್ತವಾಗಿದೆ. ಇದರಲ್ಲಿ ಕಬ್ಬಿಣದಂಶ, ಫೋಲೆಟ್, ಕ್ಯಾಲ್ಸಿಯಂ ಇದ್ದು ಕ್ಯಾನ್ಸರ್ ಕಣಗಳು ದೇಹದಲ್ಲಿ ಉತ್ಪತ್ತಿಯಾಗದಂತೆ ತಡೆದು, ಆರೋಗ್ಯವಾಗಿರಲು ಸಹಕರಿಸುತ್ತದೆ.

  • ಸೋಡಾ ಮಿಶ್ರಿತ ಪಾನೀಯ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಬೇಡಿ

    ಸೋಡಾ ಮಿಶ್ರಿತ ಪಾನೀಯ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಬೇಡಿ

    ಸೋಡಾ ಅಥವಾ ಸೋಡಾ ಮಿಶ್ರಿತ ಪಾನೀಯ ಅಂದರೆ ಹಲವರಿಗೆ ಅಚ್ಚುಮೆಚ್ಚು. ಅದರಲ್ಲೂ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿಗಳಿಗೆ ಬಹುತೇಕ ಮಂದಿ ಸೋಡಾದ ಮೊರೆ ಹೋಗುತ್ತಾರೆ. ಕೇವಲ ಸೋಡಾ ಮಾತ್ರವಲ್ಲದೆ ಕೆಲವು ತಂಪು ಪಾನೀಯಗಳು ಕೂಡ ಕೆಲವರ ದೈನಂದಿನ ಆಹಾರದ ಒಂದು ಭಾಗವಾಗಿಬಿಟ್ಟಿದೆ. ಆದರೆ ಇಷ್ಟವೆಂದು ಈ ಪಾನೀಯಗಳನ್ನು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ.

    ಯಾಕೆಂದರೆ ಸೋಡಾದಲ್ಲಿ ಯಾವುದೇ ಪೋಷಕಾಂಶ ಇರುವುದಿಲ್ಲ. ಸೋಡಾ ಸೇವನೆಯಿಂದ ಆರೋಗ್ಯಕ್ಕೆ ಉಪಯೋಗ ಆಗುವುದಕ್ಕಿಂತ ಅಡ್ಡಪರಿಣಾಮವೇ ಹೆಚ್ಚಾಗಿವೆ. ಆರೋಗ್ಯಕ್ಕೆ ಉಪಯುಕ್ತವಾದ ಒಂದು ಅಂಶವು ಸೋಡಾದಲ್ಲಿ ಇಲ್ಲ. ಇದರಲ್ಲಿ ಇರುವಂತಹ ಅನೈಸರ್ಗಿಕ ಅಂಶಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

    ಅತೀಯಾಗಿ ಸೋಡಾ ಅಥವಾ ತಂಪು ಪಾನೀಯಗಳನ್ನು ಸೇವಿಸಿದರೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕ್ಯಾಲ್ಸಿಯಂ ಕೊರತೆ, ತೂಕ ಹೆಚ್ಚುವಿಕೆ, ನಿದ್ರಾಹೀನತೆ ಎಂತಹ ಕಾಯಿಲೆಗಳು ಬರುತ್ತದೆ.

    ಸೋಡಾ ಸೇವನೆ ಆರೋಗ್ಯಕ್ಕೆ ಎಷ್ಟು ಹಾನಿಕರ?

    ನೀರು
    ಸೋಡಾದಲ್ಲಿ ಹೆಚ್ಚಾಗಿ ನಲ್ಲಿ ನೀರನ್ನು ಬಳಸಲಾಗುತ್ತದೆ. ಹೀಗಾಗಿ ಇದರಲ್ಲಿ ಕ್ಲೋರಿನ್, ಫ್ಲೋರೈಡ್ ಮತ್ತು ಇತರ ಕೆಲವು ಲೋಹಗಳು ಸೇರಿಕೊಂಡಿರುತ್ತದೆ. ಈ ಲೋಹದ ಅಂಶ ದೇಹ ಸೇರಿದರೆ ಅನಾರೋಗ್ಯಕ್ಕೆ ಬಹುಬೇಗ ತುತ್ತಾಗುತ್ತೇವೆ.

    ಸಕ್ಕರೆ
    ಒಂದು ಸಣ್ಣ ಕ್ಯಾನ್ ತಂಪು ಪಾನೀಯದಲ್ಲಿ ಅಂದಾಜು 10 ಚಮಚ ಸಕ್ಕರೆ ಇರುತ್ತದೆ. ಈ ಪಾನೀಯವನ್ನು ಕುಡಿದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿ, ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಏರುಪೇರು ಮಾಡುತ್ತದೆ. ಇದರಿಂದಾಗಿ ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧಕ ಸಮಸ್ಯೆ ಉಂಟಾಗುತ್ತದೆ.

    ಅಲ್ಲದೇ ಹೆಚ್ಚಾಗಿ ಸಕ್ಕರೆ ಅಂಶವಿರುವ ಪಾನೀಯಗಳನ್ನು ಸೇವಿಸಿದರೆ ತೂಕ ಹೆಚ್ಚಳವಾಗುತ್ತದೆ ಮತ್ತು ಇತರೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾಡಲು ಆರಂಭವಾಗುತ್ತದೆ.

    ಕೆಫಿನ್
    ಹೆಚ್ಚಿನ ಸೋಡಾಗಳಲ್ಲಿ ಕೆಫಿನ್ ಅಂಶವಿರುತ್ತದೆ. ಇದು ಕ್ಯಾನ್ಸರ್, ಸ್ತನದಲ್ಲಿ ಗಡ್ಡೆ, ಹೃದಯ ಸಂಬಂಧಿ ಸಮಸ್ಯೆ, ರಕ್ತದೊತ್ತಡ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುವುದು. ಆದ್ದರಿಂದ ಹೆಚ್ಚು ಸೋಡಾ ಅಂಶವಿರುವ ಪಾನೀಯ ಸೇವಿಸುವವರು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

    ಫಾಸ್ಪರಸ್ ಆಮ್ಲ
    ಸೋಡಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಾಸ್ಪರಸ್ ಆಮ್ಲದ ಅಂಶ ಇರುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟುಮಾಡುತ್ತದೆ. ಇದರಿಂದಾಗಿ ಅಸ್ಥಿರಂಧ್ರತೆ, ದಂತಕುಳಿ ಮತ್ತು ಮೂಳೆಗಳ ಸಮಸ್ಯೆ ಬರುತ್ತದೆ.

  • ಸಾಧಾರಣ ಕೆಮ್ಮು, ನೆಗಡಿಗೆ ಮನೆಮದ್ದು ಈರುಳ್ಳಿ ಸಿರಪ್

    ಸಾಧಾರಣ ಕೆಮ್ಮು, ನೆಗಡಿಗೆ ಮನೆಮದ್ದು ಈರುಳ್ಳಿ ಸಿರಪ್

    ಮೊದಲೆಲ್ಲಾ ಕೆಮ್ಮು, ಶೀತ ಬಂದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗಿನಿಂದ ಕೊರೊನಾ ವೈರಸ್ ಕಾಟ ಶುರುವಾಯ್ತೋ ಆಗಿನಿಂದ ಸಣ್ಣದಾಗಿ ಕೆಮ್ಮು ಬಂದರೂ ಭಯ ಆಗುತ್ತಿದೆ. ಏಕೆಂದರೆ ಕೆಮ್ಮು, ನೆಗಡಿ, ಜ್ವರ ಕೊರೊನಾ ವೈರಸ್ ಲಕ್ಷಣವಾಗಿದ್ದು, ಕೆಮ್ಮು ಬಂದಾಗ ಸೋಂಕಿಗೆ ತುತ್ತಾಗಿ ಬಿಟ್ವಾ? ಇದು ಸಾಧಾರಣ ಕೆಮ್ಮಾ? ಅಥವಾ ಕೊರೊನಾ ವೈರಸ್ ಲಕ್ಷಣವಾ ಎಂಬ ಪ್ರಶ್ನೆ ಕಾಡಲು ಆರಂಭವಾಗುತ್ತದೆ. ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬಿದ್ದ ಮೇಲೆ ವಾತಾವರಣ ಬದಲಾವಣೆಯಿಂದ ಕೆಮ್ಮು, ನೆಗಡಿ ಆಗುವುದು ಸಹಜ.

    ಸಾಧಾರಣ ಕೆಮ್ಮು, ನೆಗಡಿಯನ್ನು ಮನೆಮದ್ದಿನಿಂದಲೇ ಗುಣಪಡಿಸಿಕೊಳ್ಳಬಹುದು. ಕೆಮ್ಮು, ನೆಗಡಿಗೆ ಸಾಕಷ್ಟು ಮನೆಮದ್ದುಗಳಿವೆ. ಅದರಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಈರುಳ್ಳಿ ಸಿರಪ್. ಹೌದು. ಈರುಳ್ಳಿ ಸಿರಪ್ ಕೆಮ್ಮು, ನೆಗಡಿಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದ್ದು, ಇದನ್ನು ತಯಾರಿಸುವುದು ಕೂಡ ಸುಲಭವಾಗಿದೆ. ಮನೆಯಲ್ಲಿ ಈರುಳ್ಳಿ ಸಿರಪ್ ಮಾಡಿ ಒಂದು ಡಬ್ಬದಲ್ಲಿ ತುಂಬಿಟ್ಟರೆ ಕೆಮ್ಮು ಬಂದಾಗ ಅದನ್ನು ಹೋಗಲಾಡಿಸಲು ಮದ್ದಾಗಿ ಬಳಸಬಹುದಾಗಿದೆ.

    ಈರುಳ್ಳಿ ಸಿರಪ್ ಮಾಡುವ ವಿಧಾನ
    ಈರುಳ್ಳಿಯ ಸಿಪ್ಪೆ ಸುಲಿದು ಅದನ್ನು ಚಿಕ್ಕದಾಗಿ ಕತ್ತರಿಸಿ ಗಾಜಿನ ಜಾರ್ ನಲ್ಲಿ ಹಾಕಿಡಿ. ನಂತರ ಅದರ ಮೇಲೆ 2 ಚಮಚ ಜೇನು ತುಪ್ಪ ಹಾಕಿ. ರಾತ್ರಿ ಈ ಮಿಶ್ರಣ ಮಾಡಿ ಜಾರ್ ನ ಮುಚ್ಚಳ ಹಾಕಿಡಿ. ಸುಮಾರು 6-10 ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನಂತರ ಜಾರ್ ತಳದಲ್ಲಿ ಸಂಗ್ರಹವಾದ ಮಿಶ್ರಣವನ್ನು ಬೇರೆ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ. ಕೆಮ್ಮು ಇದ್ದವರು ಈ ರಸವನ್ನು 1 ಚಮಚದಂತೆ ದಿನಕ್ಕೆ 2-3 ಬಾರಿ ತೆಗೆದುಕೊಂಡರೆ ಕೆಮ್ಮು ಕಡಿಮೆಯಾಗುತ್ತದೆ.

    ಈರುಳ್ಳಿಯ ಆರೋಗ್ಯಕರ ಲಾಭವೇನು?
    ಈರುಳ್ಳಿಯಲ್ಲಿ ರಂಜಕದ ಅಂಶವಿದೆ. ಈರುಳ್ಳಿಯಲ್ಲಿರುವ ಖಾರ ಹಾಗೂ ಘಾಟು ಅದರಲ್ಲಿ ಅಡಗಿರುವ ಔಷಧೀಯ ಗುಣಗಳನ್ನು ಸೂಚಿಸುತ್ತದೆ. ಇದು ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿಯಾಗಿದ್ದು, ಈರುಳ್ಳಿ ಸೇವನೆಯಿಂದ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ. ಈರುಳ್ಳಿಯಲ್ಲಿ ಏಲ್ಲಿನ್ ಎಂಬ ಅಂಶವಿದೆ. ಈ ಅಂಶ ಬೆಳ್ಳುಳ್ಳಿಯಲ್ಲಿಯೂ ಇರುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿ ಏಲ್ಲಿನ್ ಅಂಶ ಉತ್ಪತ್ತಿಯಾಗುತ್ತದೆ. ಇದು ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ.

    ಜೇನು ತುಪ್ಪದಲ್ಲಿರುವ ಆರೋಗ್ಯಕರ ಲಾಭವೇನು?
    ಜೇನು ತುಪ್ಪದಲ್ಲಿ ವಿಟಮಿನ್ ಬಿ, ಆ್ಯಂಟಿಬಾಡಿ, ಖನಿಜಾಂಶಗಳು, ಪ್ರೀಬಯೋಟಿಕ್ ಅಂಶ ಅಡಕವಾಗಿದೆ. ಜೇನು ತುಪ್ಪ ಸೇವನೆ ಮಾಡಿದರೆ ಅದು ಗಂಟಲಿನಲ್ಲಿ ಉಂಟಾದ ಕೆರೆತ ಕಡಿಮೆ ಮಾಡುತ್ತದೆ. ಜೇನು ತುಪ್ಪದಲ್ಲಿ ಆ್ಯಂಟಿಬಯೋಟಿಕ್ ಹಾಗೂ ಆ್ಯಂಟಿಫಂಗಲ್ ಅಂಶವಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯ ವೃದ್ಧಿಸುತ್ತದೆ.

    ಈ ಈರುಳ್ಳಿ ಸಿರಪ್ ಅನ್ನು ಒಂದು ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಕೊಡಬೇಡಿ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ ದೊಡ್ಡವರು ಈ ಸಿರಪ್ ಸೇವಿಸಬಹುದು.

  • ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಕಷಾಯಗಳು

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಕಷಾಯಗಳು

    ರೋಗ್ಯವೇ ಭಾಗ್ಯ ಎನ್ನುವ ಹಿರಿಯರ ಮಾತು ಸುಳ್ಳಲ್ಲ. ಯಾಕೆಂದರೆ ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ. ಈಗಿನ ಜೀವನಶೈಲಿಯಲ್ಲಿ ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯದ ಕಡೆಗೆ ಸರಿಯಾಗಿ ಗಮನ ಕೊಡಲ್ಲ. ಸದಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುವ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲು ಕೂಡ ಕೆಲವರಿಗೆ ಆಗೋದಿಲ್ಲ.

    ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾಗಿ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದ ಆರೋಗ್ಯವಾಗಿರಲು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಕೊಳ್ಳಬೇಕು. ಪೌಷ್ಠಿಕ ಆಹಾರದ ಜೊತೆಗೆ ಆರೋಗ್ಯಕ್ಕೆ ಹಿತವಾದ ಕಷಾಯಗಳನ್ನು ದಿನನಿತ್ಯ ಕುಡಿದರೆ ಸುಲಭವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಔಷಧೀಯ ಸಸ್ಯಗಳು, ಬೇರುಗಳು, ಕಾಳುಗಳು ಇವೆ. ಅವುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಕೆಲವು ಕಷಾಯಗಳನ್ನು ಸೇವಿಸಿದರೆ ಅದು ದೇಹದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಮ್ಮು, ಶೀತ, ಜ್ವರ ಇಂಥ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಇತರ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡಿ ಆರೋಗ್ಯ ಕಾಪಾಡುತ್ತದೆ.

    ಆರೋಗ್ಯಕರ ಕಷಾಯಗಳು ಯಾವುದು?

    1. ಅರಿಶಿಣ ಮತ್ತು ಹಾಲು ಕಷಾಯ
    ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅರಶಿಣ ಮಿಶ್ರಿತ ಹಾಲು ಕುಡಿದರೆ ಕೆಮ್ಮು, ಗಂಟಲು ಕೆರೆತ ಕಡಿಮೆ ಆಗುತ್ತದೆ. ಬೇಕಾದರೆ ರುಚಿಗೆ ಹಾಲಿಗೆ ಅರಿಶಿಣ ಜೊತೆಗೆ ಸ್ವಲ್ಪ ಶುಂಠಿ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಕುಡಿಯಬಹುದು.

    2. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯ
    ನಿಂಬೆ ರಸದಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯವನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಏಲಕ್ಕಿ, ಮತ್ತು ಕಾಳು ಮೆಣಸು ಮಿತವಾಗಿ ಬಳಸಬೇಕು. ಯಾಕೆಂದರೆ ತುಂಬಾ ಬಳಸಿದರೆ ಉಷ್ಣವಾಗುತ್ತದೆ. ನೀರಿಗೆ ಕಾಳುಮೆಣಸು(ಪುಡಿ ಮಾಡಿದ್ದು), ಏಲಕ್ಕಿ, ನಿಂಬೆರಸ ಹಾಕಿ ಕುದಿಸಿ ಕುಡಿಯುವುದರಿಂದ ಸಾಮಾನ್ಯ ಶೀತ ನಿವಾರಣೆಯಾಗುತ್ತದೆ.

    3. ತುಳಸಿ ಮತ್ತು ಕಾಳು ಮೆಣಸಿನ ಕಷಾಯ
    ತುಳಸಿ ದೇಹದ ಆರೋಗ್ಯವನ್ನು ಕಾಡುವುವಲ್ಲಿ ಪರಿಣಾಮಕಾರಿಯಗಿದ್ದು, ತುಳಿಸಿ ಎಲೆಗಳನ್ನು ನೀರಿಗೆ ಹಾಕಿ ಕುಡಿದರೆ ಒಳ್ಳೆಯದು. ಕೆಮ್ಮು ಇದ್ದರೆ ತುಳಸಿ, ಕಾಳು ಮೆಣಸು, ಶುಂಠಿ ಜಜ್ಜಿ ಎರಡು ಲೋಟ ನೀರಿಗೆ ಹಾಕಿ, ಅದು ಅರ್ಧ ಲೋಟದಷ್ಟು ಆಗುವ ತನಕ ಕುದಿಸಿ. ಬಳಿಕ ಅದನ್ನು ಸೋಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ. 2 ಲೀಟರ್ ನೀರಿಗೆ 5-6 ತುಳಸಿ ಎಲೆ, 3-4 ಕಾಳು ಮೆಣಸು ಹಾಕಿ ಕುದಿಸಿ, ಈ ಕಷಾವನ್ನು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

    4. ಅಶ್ವಗಂಧ ಕಷಾಯ ಮತ್ತು ಅಣಬೆ ಸೂಪ್
    ಅಶ್ವಗಂಧದಲ್ಲಿ ರೋಗ ನಿರೋಧಕ ಗುಣ ಅಡಕವಾಗಿದೆ. ಹೀಗಾಗಿ ಆಯುರ್ವೇದದಲ್ಲಿ ಅನೇಕ ಆರೋಗ್ಯ ಸಮಸ್ಯೆ ನಿವಾರಿಸಲು ಇದನ್ನು ಬಳಸುತ್ತಾರೆ. ಅಣಬೆ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಅಣಬೆ ಸೂಪ್ ಹಾಗೂ ಅಶ್ವಗಂಧ ಹಾಕಿ ಕಷಾಯ ಕುಡಿದರೆ ಒಳ್ಳೆದು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಆರೋಗ್ಯ ಚೆನ್ನಾಗಿರುತ್ತದೆ.

    5. ಪುದೀನಾ ಮತ್ತು ರೋಸ್‍ಮೆರಿ ಕಷಾಯ
    ಪುದೀನಾದಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಅಂಶವಿದೆ. ಪುದೀನಾ ಮತ್ತು ರೋಸ್‍ಮೆರಿ ಎರಡನ್ನು ಮಿಶ್ರಣ ಮಾಡಿದ ಕಷಾಯ ಸೇವನೆಯಿಂದ ಹವಾಮಾನ ಬದಲಾವಣೆಯಿಂದ ಕಾಣಿಸುವ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಬಹುದು.