Tag: ಹೆಲ್ತ್ ಕೇರ್ ಸಂಸ್ಥೆ

  • ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸ್ಟ್ರೆಚರ್ ಖರೀದಿ ಗೋಲ್‍ಮಾಲ್!

    ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಸ್ಟ್ರೆಚರ್ ಖರೀದಿ ಗೋಲ್‍ಮಾಲ್!

    ಹುಬ್ಬಳ್ಳಿ: ಒಂದೇ ಸ್ಟ್ರೆಚರ್ ನಲ್ಲಿ ನಾಲ್ವರು ಗರ್ಭಿಣಿಯರನ್ನು ಸಾಗಿಸಿ ಅಪಖ್ಯಾತಿಗೆ ಒಳಗಾಗಿದ್ದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇದೀಗ ಭಾರೀ ಗೋಲ್ ಮಾಲೊಂದು ನಡೆದಿದೆ.

    ಗರ್ಭಿಣಿಯರ ಪ್ರಕರಣದ ನಂತರ ಎಚ್ಚೆತ್ತ ಕಿಮ್ಸ್, ಫೆಬ್ರವರಿಯಲ್ಲಿ ಹುಬ್ಬಳ್ಳಿಯ ಹೆಲ್ತ್ ಕೇರ್‍ವೊಂದಕ್ಕೆ 10 ಸ್ಟ್ರೆಚರ್ ಹಾಗೂ 10 ವ್ಹೀಲ್ ಚೇರ್ ನೀಡುವಂತೆ ತಿಳಿಸಿತ್ತು. ಆ ಖಾಸಗಿ ಹೆಲ್ತ್ ಕೆರ್ ಸಂಸ್ಥೆ ಒಂದೇ ವಾರದಲ್ಲಿ ಕಿಮ್ಸ್‍ಗೆ ಸ್ಟ್ರೆಚರ್ ಹಾಗೂ ವ್ಹೀಲ್ ಚೇರ್ ಸಪ್ಲೈ ಮಾಡಿತ್ತು. ಜಿಎಸ್‍ಟಿ ಅದು ಇದು ಅಂತ ಎಲ್ಲಾ ಸೇರಿಸಿ ಒಂದು ಸ್ಟ್ರೆಚರ್‍ಗೆ 11 ಸಾವಿರದಂತೆ ಬಿಲ್ ಮಾಡಿದೆ. ಇದನ್ನೂ ಓದಿ: ಚಳಿ-ಮಳೆಯಲ್ಲಿ ಗರ್ಭಿಣಿಯರಿಗೆ ನೆಲವೇ ಹಾಸಿಗೆ: ಹುಬ್ಬಳ್ಳಿ ಕಿಮ್ಸ್ ನಲ್ಲೂ ತಪ್ಪಿಲ್ಲ ವನವಾಸ

    ಸಾಮಾನ್ಯವಾಗಿ ಒಂದು ಸ್ಟ್ರೆಚರ್‍ಗೆ 3ರಿಂದ 4 ಸಾವಿರ ರೂಪಾಯಿ ಬೆಲೆ ಇದೆ. ಆದ್ರೆ ಇದೀಗ ಕಿಮ್ಸ್, ಸ್ಟ್ರೆಚರ್ ಖರೀದಿಸಿದ ಒಂದೇ ವಾರದಲ್ಲಿ ಬಿಲ್ ಪಾವತಿಸಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    https://www.youtube.com/watch?v=aejiZzYwWmc