Tag: ಹೆರಿಗೆ ರಜೆ

  • ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 12 ತಿಂಗಳು ಹೆರಿಗೆ ರಜೆ – ಸಿಕ್ಕಿಂ ಸಿಎಂ ಘೋಷಣೆ

    ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 12 ತಿಂಗಳು ಹೆರಿಗೆ ರಜೆ – ಸಿಕ್ಕಿಂ ಸಿಎಂ ಘೋಷಣೆ

    ಗ್ಯಾಂಗ್ಟಾಕ್: ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ತಮ್ಮ ರಾಜ್ಯದಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 12 ತಿಂಗಳ ಹೆರಿಗೆ ರಜೆ ಹಾಗೂ ಮಗುವಿನ ತಂದೆಗೆ 1 ತಿಂಗಳ ರಜೆ ನೀಡುವ ಹೊಸ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸುವುದಾಗಿ ಬುಧವಾರ ತಿಳಿಸಿದ್ದಾರೆ.

    ಸಿಕ್ಕಿಂ ರಾಜ್ಯ ನಾಗರಿಕ ಸೇವಾ ಅಧಿಕಾರಿಗಳ ಸಂಘದ (SSCSOA) ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರಿ ಉದ್ಯೋಗಿಗಳಿಗೆ ಈ ಹೊಸ ಪ್ರಯೋಜನವನ್ನು ಶೀಘ್ರವೇ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. ಇದು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಮತ್ತು ಕುಟುಂಬವನ್ನು ಉತ್ತಮವಾಗಿ ನೋಡಿಕೊಳ್ಳಲು ಸಹಾಯ ಮಾಡಲಿದೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

    ಹೆರಿಗೆ ಪ್ರಯೋಜನ ಕಾಯಿದೆ 1961ರ ಪ್ರಕಾರ ಕೆಲಸ ಮಾಡುವ ಮಹಿಳೆ 6 ತಿಂಗಳು ಅಥವಾ 26 ವಾರಗಳ ವೇತನ ಸಹಿತ ಹೆರಿಗೆ ರಜೆಗೆ ಅರ್ಹಳಾಗಿರುತ್ತಾಳೆ. ಹಿಮಾಲಯದ ತಪ್ಪಲಿನಲ್ಲಿರುವ ಸಿಕ್ಕಿಂ, ಭಾರತದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಸುಮಾರು 6.32 ಲಕ್ಷ ಜನರು ನೆಲೆಸಿದ್ದಾರೆ. ಇದನ್ನೂ ಓದಿ: ರೈಲ್ವೇ ಹಳಿ ಮೇಲೆ ಕುಸಿದ ಮಣ್ಣು – ಗೋವಾ, ಕರ್ನಾಟಕ ರೈಲು ಸಂಚಾರದಲ್ಲಿ ಇನ್ನೆರಡು ದಿನ ವ್ಯತ್ಯಯ

    ಸಿಕ್ಕಿಂ ಮತ್ತು ರಾಜ್ಯದ ಜನರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವ ಅಧಿಕಾರಿಗಳು ರಾಜ್ಯದ ಆಡಳಿತದ ಬೆನ್ನೆಲುಬು. ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿ ಪ್ರಕ್ರಿಯೆ ಚುರುಕುಗೊಳಿಸುವತ್ತ ಗಮನ ಹರಿಸಲಾಗಿದ್ದು, ಬಡ್ತಿ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ತಮಾಂಗ್ ಹೇಳಿದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸರ್ವೆ ಕೇಸ್‌ – ಅಲಹಾಬಾದ್ ಹೈಕೋಟ್‌ನಲ್ಲಿ ಇಂದು ವಿಚಾರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆರಿಗೆ ಸಮಯದಲ್ಲಿ ಮಗು ಸಾವನ್ನಪ್ಪಿದರೆ ಸರ್ಕಾರಿ ಮಹಿಳಾ ನೌಕರರಿಗೆ 60 ದಿನ ವಿಶೇಷ ರಜೆ: ಕೇಂದ್ರ

    ಹೆರಿಗೆ ಸಮಯದಲ್ಲಿ ಮಗು ಸಾವನ್ನಪ್ಪಿದರೆ ಸರ್ಕಾರಿ ಮಹಿಳಾ ನೌಕರರಿಗೆ 60 ದಿನ ವಿಶೇಷ ರಜೆ: ಕೇಂದ್ರ

    ನವದೆಹಲಿ: ಹೆರಿಗೆ ಸಮಯದಲ್ಲಿ ಅಥವಾ ಮಗು ಹುಟ್ಟಿದ ನಂತರ ಮಗು ಮರಣ ಹೊಂದಿದರೆ ಕೇಂದ್ರ ಸರ್ಕಾರದ ಮಹಿಳಾ ನೌಕರರು 60 ದಿನಗಳ ಕಾಲ ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)  ಆದೇಶ ಹೊರಡಿಸಿದೆ.

    ಹೆರಿಗೆಯ ನಂತರ ಮಗುವಿನ ಮರಣದ ಸಂದರ್ಭದಲ್ಲಿ ರಜೆ ಮಾತೃತ್ವ ರಜೆ ಮಂಜೂರು ಮಾಡುವ ಕುರಿತಾಗಿ ಹಲವು ಪ್ರಶ್ನೆಗಳು ಸಿಬ್ಬಂದಿಗಳಿಂದ ಬಂದಿತ್ತು. ಹಾಗಾಗಿ ಸರ್ಕಾರಿ ಮಹಿಳಾ ನೌಕರಿಗೆ ಅನ್ವಯವಾಗುವಂತೆ ಮಗುವಿನ ಮರಣದ ಕಾರಣದಿಂದ ಉಂಟಾಗುವ ಸಂಭಾವ್ಯ ಭಾವನಾತ್ಮಕ ಆಘಾತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಒಪಿಟಿ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: KGF ಸಿನಿಮಾ ಸ್ಫೂರ್ತಿ – ದಿಢೀರ್ ಫೇಮಸ್ ಆಗಲು ನಾಲ್ವರನ್ನು ಚಚ್ಚಿಕೊಂದ ಯುವಕ

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ವಿಶೇಷ ಹೆರಿಗೆ ರಜೆಯ ಪ್ರಯೋಜನವು ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಮಹಿಳಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ದೊರಕುತ್ತದೆ. ಇದಲ್ಲದೆ ಅಧಿಕೃತ ಆಸ್ಪತ್ರೆಯಲ್ಲಿ ಮಗುವಿನ ಹೆರಿಗೆಗೆ ಮಾತ್ರ ರಜೆ ಸ್ವೀಕಾರಾರ್ಹವಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.

    ಈ ಆದೇಶಗಳು ಕೇಂದ್ರ ನಾಗರಿಕ ಸೇವೆಗಳ ರಜೆ ನಿಯಮಗಳು 1972ರ ನಿಯಮ 2ರ ಪ್ರಕಾರ ಭಾರತದ ಒಕ್ಕೂಟದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಾಗರಿಕ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡ ಸರ್ಕಾರಿ ನೌಕರರಿಗೆ ಈ ಆದೇಶ ಬಿಡುಗಡೆಯ ದಿನಾಂಕದಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಅಂತರ್ಜಾತಿ ವಿವಾಹ – ದಲಿತನೆಂದು ಅಳಿಯನನ್ನೇ ಕೊಂದ ಅತ್ತೆ

    Live Tv
    [brid partner=56869869 player=32851 video=960834 autoplay=true]

  • ಹೆರಿಗೆ ರಜೆಯ ಸಂಬಳದಲ್ಲಿ ಸಿಗಲಿದೆ ತೆರಿಗೆ ವಿನಾಯಿತಿ

    ಹೆರಿಗೆ ರಜೆಯ ಸಂಬಳದಲ್ಲಿ ಸಿಗಲಿದೆ ತೆರಿಗೆ ವಿನಾಯಿತಿ

    ನವದೆಹಲಿ: ಕೇಂದ್ರ ಸರ್ಕಾರವು ಫೆ. 1ರಂದು ಮಂಡನೆ ಮಾಡಲಿರುವ ಮಧ್ಯಂತರ ಬಜೆಟ್‍ನಲ್ಲಿ ಹೆರಿಗೆ ರಜೆಯಲ್ಲಿ ಪಡೆಯುವ ಸಂಬಳಕ್ಕೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಘೋಷಿಸಲಿದೆ. ಮಧ್ಯಂತರ ಬಜೆಟ್‍ನಲ್ಲಿ ಹೆರಿಗೆ ರಜೆಯಲ್ಲಿ ಪಡೆಯುವ ಸಂಬಳಕ್ಕೆ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆ ಇದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರ ಬೆಂಬಲ ಗಳಿಸಲು ಬಿಜೆಪಿ ಮುಂದಾಗಿದೆ. ಕಾರ್ವಿಕ ಸಚಿವಾಲಯ ಸಲ್ಲಿಸಿರುವ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತಿದೆ ಎಂದು ಮಧ್ಯಮವೊಂದು ವರದಿ ಪ್ರಕಟಿಸಿದೆ.

    ಹೆರಿಗೆ ಸೌಲಭ್ಯ ಕಾಯ್ದೆಯನ್ನು 2017ರಲ್ಲಿ ಸರ್ಕಾರ ತಿದ್ದುಪಡಿ ಮಾಡಿತ್ತು. ಆಗ ಉದ್ಯೋಗಸ್ಥ ಮಹಿಳೆಯರಿಗೆ ಕೊಡುವ ಸಂಬಳ ಸಹಿತ ಹೆರಿಗೆ ರಜೆಯನ್ನು 12 ವಾರದಿಂದ 26 ವಾರಕ್ಕೆ ಏರಿಸಿತ್ತು. ಈ ಹಿಂದೆ ಕಾರ್ವಿಕ ಸಚಿವಾಲಯವು ಕಡಿಮೆ ಸಂಬಳ ಪಡೆಯುವ ಮಹಿಳೆಯರಿಗೂ ಕೂಡ 26 ವಾರಗಳ ಹೆರಿಗೆ ರಜೆ ಸಿಗುವಂತೆ ಮಾಡಲು ಕೆಲವು ಕ್ರಮಗಳ ಬಗ್ಗೆ ಸರ್ಕಾರದ ಬಳಿ ಪ್ರಸ್ತಾವನೆ ಇಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆರಿಗೆ ರಜೆ 26 ವಾರಗಳಿಗೆ ವಿಸ್ತರಣೆ – ಸಂಸತ್‍ನಲ್ಲಿ ಮಸೂದೆ ಅಂಗೀಕಾರ

    ಹೆರಿಗೆ ರಜೆ 26 ವಾರಗಳಿಗೆ ವಿಸ್ತರಣೆ – ಸಂಸತ್‍ನಲ್ಲಿ ಮಸೂದೆ ಅಂಗೀಕಾರ

    ನವದೆಹಲಿ: ಹೆರಿಗೆ ರಜೆಯನ್ನು ಈಗಿರುವ 12 ವಾರಗಳಿಂದ 26 ವಾರಗಳಿಗೆ ಏರಿಕೆ ಮಾಡಲಾದ ಮಸೂದೆ ಸಂಸತ್‍ನಲ್ಲಿ ಅಂಗೀಕಾರವಾಗಿದೆ.

    ಗುರುವಾರದಂದು ಲೋಕಸಭೆಯಲ್ಲಿ ಮೆಟರ್ನಿಟಿ ಬೆನಿಫಿಟ್ ಅಮೆಂಡ್‍ಮೆಂಟ್ ಬಿಲ್ 2016 ಅಂಗೀಕಾರವಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಮಸೂದೆ ಅಂಗೀಕಾರವಾಗಿತ್ತು. ಈ ನಿರ್ಧಾರದಿಂದ ದೇಶದ 18 ಲಕ್ಷ ಮಹಿಳೆಯರಿಗೆ ಅನುಕೂಲವಾಗಿದೆ.

    10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಎಲ್ಲಾ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಮಹಿಳೆಯ ಮೊದಲ ಎರಡು ಹೆರಿಗೆಗೆ ಸಂಬಳ ಸಹಿತ 26 ವಾರಗಳ ರಜೆ ನೀಡಬೇಕಾಗಿದೆ. ಮೂರನೇ ಮಗುವಿಗೆ 12 ವಾರಗಳ ರಜೆ ಸಿಗಲಿದೆ.

    ಈ ಮೂಲಕ ಕೆನಡಾ ಹಾಗೂ ನಾರ್ವೆ ನಂತರ ಭಾರತ ಅತೀ ಹೆಚ್ಚು ದಿನಗಳ ಹೆರಿಗೆ ರಜೆ ನೀಡುವ ದೇಶವಾಗಿದೆ. ಕೆನಡಾದಲ್ಲಿ 50 ವಾರಗಳ ಹೆರಿಗೆ ರಜೆ ಹಾಗೂ ನಾರ್ವೆಯಲ್ಲಿ 44 ವಾರಗಳ ಹೆರಿಗೆ ರಜೆ ನೀಡಲಾಗುತ್ತಿದೆ.

    ಈವರೆಗೆ ಮಹಿಳಾ ಉದ್ಯೋಗಿಗಳಿಗೆ 3 ತಿಂಗಳು ಸಂಭಾವನೆ ಸಹಿತ ಹೆರಿಗೆ ರಜೆ ಸಿಗುತ್ತಿತ್ತು. ಈಗ ಇದು ಆರೂವರೆ ತಿಂಗಳಿಗೆ ವಿಸ್ತರಣೆ ಆದಂತಾಗಿದೆ.