Tag: ಹೆರಾಯಿನ್

  • ಪಂಜಾಬ್| ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಪಂಜಾಬ್| ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಚಂಡೀಘಡ: ಪಂಜಾಬ್‌ನ (Punjab) ಫಿರೋಜ್‌ಪುರದಲ್ಲಿ ಹೆರಾಯಿನ್ ಮತ್ತು ಪಿಸ್ತೂಲ್ ಸಾಗಿಸುತ್ತಿದ್ದ ಪಾಕಿಸ್ತಾನದ (Pakistan) ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

    ಚೀನಾದಲ್ಲಿ ತಯಾರಾದ ಡಿಜೆಐ ಮಾವಿಕ್ 3 ಕ್ಲಾಸಿಕ್ ಡ್ರೋನ್ 500 ಗ್ರಾಂ ಹೆರಾಯಿನ್, ಪಿಸ್ತೂಲ್ ಹೊತ್ತೊಯ್ಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ‘ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಪಂಜಾಬ್ ಪೊಲೀಸ್ ಪಡೆ ತಡೆದಿವೆ. ಬಿಎಸ್‌ಎಫ್ ಸಿಬ್ಬಂದಿ ತಕ್ಷಣವೇ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ತಾಂತ್ರಿಕ ಕ್ರಮಗಳನ್ನು ಬಳಸಿಕೊಂಡು ಅದನ್ನು ಕೆಳಗಿಳಿಸಿದರು’ ಎಂದು ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್ ಟ್ವೀಟ್ ಮಾಡಿದೆ. ಇದನ್ನೂ ಓದಿ: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಬಿಎಸ್‌ಎಫ್ ಈ ಹಿಂದೆ ಪಂಜಾಬ್‌ನಲ್ಲಿ ಹಲವು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಮಾರ್ಚ್‌ನಲ್ಲಿ  ಅಮೃತಸರ ಬಳಿ ಪಂಜಾಬ್ ಪೊಲೀಸರು ಎರಡು ಪಾಕಿಸ್ತಾನಿ ನಿರ್ಮಿತ ಡ್ರೋನ್‌ಗಳನ್ನು ವಶಪಡಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಗುರುದಾಸ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಚೀನಾ ನಿರ್ಮಿತ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಇದನ್ನೂ ಓದಿ: ಬಾಲಸೋರ್ ಅಪಘಾತದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ

  • 1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ – ಸಮುದ್ರದಲ್ಲಿ ಚೇಸಿಂಗ್ ವೀಡಿಯೋ ನೋಡಿ

    1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ – ಸಮುದ್ರದಲ್ಲಿ ಚೇಸಿಂಗ್ ವೀಡಿಯೋ ನೋಡಿ

    ನವದೆಹಲಿ: ಲಕ್ಷದ್ವೀಪದಿಂದ ದೋಣಿ ಮೂಲಕ ತಮಿಳುನಾಡಿಗೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದವರನ್ನು ಲಕ್ಷದ್ವೀಪ ಕರಾವಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಚೇಸಿಂಗ್ ಮಾಡಿ ಬಂಧಿಸಿದ ರೋಚಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸುಮಾರು 1 ನಿಮಿಷ 30 ಸೆಕೆಂಡ್ ಇರುವ ವೀಡಿಯೋದಲ್ಲಿ ಕಗ್ಗತ್ತಲಿನಲ್ಲಿ ಸಾಗುತ್ತಿದ್ದ ಬೆಂಬಿಡದೇ ಹಿಂಬಾಲಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾರಕಕ್ಕೇರಿದ ಆಡಳಿತಮಂಡಳಿ, ಕಾರ್ಯನಿರ್ವಹಣಾಧಿಕಾರಿ ಜಟಾಪಟಿ

    ಅರಬ್ಬಿ ಸಮುದ್ರದಲ್ಲಿ ದೋಣಿ ಮೂಲಕ ತಮಿಳುನಾಡಿಗೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದವರನ್ನು ಲಕ್ಷದ್ವೀಪ ಕರಾವಳಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಶುಕ್ರವಾರ ದಾಳಿ ನಡೆಸಿತ್ತು. ಈ ವೇಳೆ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸುಮಾರು 1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.  ಇದನ್ನೂ ಓದಿ: ಜೂನ್ 21ರಂದು ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ಮೋದಿ

    ‘ಲಿಟಲ್ ಜೀಸಸ್’ ಮತ್ತು ‘ಪ್ರಿನ್ಸ್’ ಎಂಬ ದೋಣಿಯಲ್ಲಿ ಡ್ರಗ್ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಸದ್ಯ ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ತಿಳಿಸಿದೆ.

  • ಟ್ರಾಲಿ ಬ್ಯಾಗ್‍ಗಳಲ್ಲಿ ಅಡಗಿಸಿಟ್ಟಿದ್ದ 434 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆ

    ಟ್ರಾಲಿ ಬ್ಯಾಗ್‍ಗಳಲ್ಲಿ ಅಡಗಿಸಿಟ್ಟಿದ್ದ 434 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆ

    ನವದೆಹಲಿ: ನಗರದ ವಿಮಾನನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‍ಐ) 100ಕ್ಕೂ ಹೆಚ್ಚು ಟ್ರಾಲಿ ಬ್ಯಾಗ್‍ಗಳ ಲೋಹದ ರಾಡ್‍ಗಳಲ್ಲಿ ಬಚ್ಚಿಟ್ಟ 62 ಕೆಜಿಯ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.

    ಭಾರತದಲ್ಲಿ ಕೊರಿಯರ್, ಕಾರ್ಗೋ ಅಥವಾ ಏರ್ ಪ್ಯಾಸೆಂಜರ್ ಮೋಡ್‍ಗಳ ಮೂಲಕ ಇಲ್ಲಿಯವರೆಗೆ ಹೆರಾಯಿನ್ ಅನ್ನು ವಶಪಡಿಸಿಕೊಂಡ ದೊಡ್ಡ ಪ್ರಕರಣಗಳಲ್ಲಿ ಇದೂ ಒಂದು ಎಂದು ಡಿಆರ್‍ಐ ಬಹಿರಂಗಪಡಿಸಿದೆ. ಇದನ್ನೂ ಓದಿ: ಉದ್ಯೋಗ ಸಿಗದಿದ್ದರಿಂದ ಮನನೊಂದು ಎಂಬಿಎ ಪದವೀಧರೆ ಆತ್ಮಹತ್ಯೆ

    ಕಪ್ಪು ಮತ್ತು ಬಿಳಿ ಎಂಬ ಹೆಸರಿನ ಕಾರ್ಯಾಚರಣೆಯ ಕೋಡ್‍ನಲ್ಲಿ, ಡಿಆರ್‍ಐ ಮೇ 10 ರಂದು ಉಗಾಂಡಾದ ಎಂಟೆಬ್ಬೆಯಿಂದ ಟ್ರಾಲಿ ಬ್ಯಾಗ್‍ಗಳನ್ನು ಆಮದು ಮಾಡಿದ ಸರಕು ಸಾಗಣೆಯಿಂದ 55 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ದುಬೈ ಮೂಲಕ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್‌ಗೆ ರವಾನೆ ಬಂದಿತ್ತು.

    ಪಂಜಾಬ್ ಮತ್ತು ಹರಿಯಾಣದಲ್ಲಿ ನಡೆದ ತ್ವರಿತ ಕಾರ್ಯಾಚರಣೆಯಲ್ಲಿ 7 ಕೆಜಿ ಹೆರಾಯಿನ್ ಮತ್ತು 50 ಲಕ್ಷ ರೂ. ವಶಪಡಿಸಿಕೊಂಡಿದೆ. ಮರೆಮಾಚಿಟ್ಟ 62 ಕೆಜಿ ಹೆರಾಯಿನ್‍ನ ಮೌಲ್ಯವು ಅಕ್ರಮ ಮಾರುಕಟ್ಟೆಯಲ್ಲಿ 434 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಡಿಆರ್‍ಐ ತಿಳಿಸಿದೆ.

    ಆಮದು ಮಾಡಲಾದ ರವಾನೆಯಲ್ಲಿ ಒಟ್ಟು 330 ಟ್ರಾಲಿ ಬ್ಯಾಗ್‍ಗಳಿದ್ದು, ಅದರಲ್ಲಿ ವಶಪಡಿಸಿಕೊಂಡ ಹೆರಾಯಿನ್ ಅನ್ನು 126 ಟ್ರಾಲಿ ಬ್ಯಾಗ್‍ಗಳ ಲೋಹದ ಟ್ಯೂಬ್‍ಗಳಲ್ಲಿ ಬಚ್ಚಿಡಲಾಗಿತ್ತು. ಬಚ್ಚಿಟ್ಟ ಹೆರಾಯಿನ್ ಅನ್ನು ಅಧಿಕಾರಿಗಳೂ ಪತ್ತೆ ಹಚ್ಚುವುದು ಅತ್ಯಂತ ಕಷ್ಟಕರವಾಗಿತ್ತು. ಇದನ್ನೂ ಓದಿ: ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಬಸ್ ಪಲ್ಟಿ

    ಡಿಆರ್‍ಐ ಅಧಿಕಾರಿಗಳು ರವಾನೆಯ ಆಮದುದಾರನನ್ನು ಬಂಧಿಸಿದ್ದಾರೆ. ಇತರ ಶಂಕಿತರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆಗಳು ನಡೆಯುತ್ತಿವೆ. 2021 ರಲ್ಲಿ ಡಿಆರ್‍ಐ ದೇಶಾದ್ಯಂತ 3300 ಕೆಜಿಗಿಂತ ಹೆಚ್ಚು ವಶಪಡಿಸಿಕೊಂಡಿದೆ.

  • ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ – 10 ಕೆಜಿ ಹೆರಾಯಿನ್ ವಶ

    ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ – 10 ಕೆಜಿ ಹೆರಾಯಿನ್ ವಶ

    ಚಂಡೀಗಢ: ಪಾಕಿಸ್ತಾನದಿಂದ ಡ್ರೋನ್ ಮೂಲಕ ಹೆರಾಯಿನ್ ಹೊತ್ತು ಬರುತ್ತಿದ್ದ ಮತ್ತೊಂದು ಡ್ರೋನ್‍ನನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಸಿಬ್ಬಂದಿ ಪಂಜಾಬ್‍ನ ಅಮೃತಸರದ ಅಂತರಾಷ್ಟ್ರೀಯ ಗಡಿಯಲ್ಲಿ ಹೊಡೆದುರುಳಿಸಿದ್ದಾರೆ.

    ಡ್ರೋನ್ ಮೂಲಕ ಮಾದಕ ವಸ್ತುಗಳನ್ನು ಕಳ್ಳಸಾಗಣಿಕೆ ಮಾಡುತ್ತಿದ್ದ ಪಾಕಿಸ್ತಾನದ ಮತ್ತೊಂದು ಯತ್ನವನ್ನು ಗಡಿ ಭದ್ರತಾ ಪಡೆ ವಿಫಲಗೊಳಿಸಿದ್ದಾರೆ. ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್‍ನನ್ನು ಗಮನಿಸಿದ ಬಿಎಸ್‍ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಇದರಿಂದ ಡ್ರೋನ್ ಕೆಳಗೆ ಬಿದ್ದಿದ್ದು, ಡ್ರೋನ್‍ನಲ್ಲಿ 10 ಕಿಲೋಗ್ರಾಂಗಳಷ್ಟು ಹೆರಾಯಿನ್ ಪತ್ತೆಯಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ. ಇದನ್ನೂ ಓದಿ: ಮುಹೂರ್ತದ ವೇಳೆ ಕರೆಂಟ್ ಕಟ್ – ಅಕ್ಕನ ಗಂಡ ತಂಗಿಗೆ, ತಂಗಿ ಗಂಡ ಅಕ್ಕನಿಗೆ

    ಸೋಮವಾರ ರಾತ್ರಿ 11.15ರ ಸುಮಾರಿಗೆ ನಮ್ಮ ಸೈನಿಕರು ಗಡಿ ಬೇಲಿಯ ಮೇಲೆ ಡ್ರೋನ್ ಹಾರುತ್ತಿರುವ ಶಬ್ಧವನ್ನು ಕೇಳಿಸಿಕೊಂಡಿದ್ದಾರೆ. ನಂತರ ಡ್ರೋನ್ ಕಡೆಗೆ 9 ಗುಂಡುಗಳನ್ನು ಹಾರಿಸಿದ್ದಾರೆ. ಬಳಿಕ ಡ್ರೋನ್‍ನಲ್ಲಿದ್ದ ಸುಮಾರು 10 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದೇವೆ ಎಂದು ಅಮೃತಸರ ಬಿಎಸ್‍ಎಫ್ ಡಿಐಜಿ ಭೂಪೇಂದರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರು ರಾತ್ರಿ ಮೊಬೈಲ್‍ನಲ್ಲಿ ಗಟ್ಟಿಯಾಗಿ ಮಾತನಾಡುವಂತಿಲ್ಲ: ಭಾರತೀಯ ರೈಲ್ವೆ

  • ಪ್ರಧಾನಿ ಮೋದಿ ತವರಿನಲ್ಲಿ 1,300 ಕೋಟಿ ಮೌಲ್ಯದ ಹೆರಾಯಿನ್ ವಶ

    ಪ್ರಧಾನಿ ಮೋದಿ ತವರಿನಲ್ಲಿ 1,300 ಕೋಟಿ ಮೌಲ್ಯದ ಹೆರಾಯಿನ್ ವಶ

    ಗಾಂಧಿನಗರ: ಗುಜರಾತಿನ ಕಚ್‌ ಜಿಲ್ಲೆಯ ಕಾಂಡ್ಲಾಪೋರ್ಟ್‌ನಲ್ಲಿ ಗುಜರಾತ್ ಭಯೋತ್ಪಾದನ ನಿಗ್ರಹದಳ (ATS) ಹಾಗೂ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 1,300 ಕೋಟಿ ರೂ. ಮೌಲ್ಯದ ಹೆರಾಯಿನ್ ಪತ್ತೆಯಾಗಿದೆ.

    ಒಟ್ಟು 260 ಕೆಜಿ ಹೆರಾಯಿನ್ ಇದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 1,300 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಲಾರಿಯಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ!

    DRUGS 2
    ಸಾಂದರ್ಭಿಕ ಚಿತ್ರ

    ಕಂಟೈನರ್‌ಗಳಲ್ಲಿ ಭಾರತಕ್ಕೆ ಡ್ರಗ್ಸ್ ಸಾಗಣೆಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗುಜರಾತ್ ಭಯೋತ್ಪಾದನ ನಿಗ್ರಹ ದಳವು ಡಿಆರ್‌ಐನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಕಂಟೈನರ್‌ನಲ್ಲಿದ್ದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಮಂಡ್ಯದಲ್ಲಿ ಹೆರಾಯಿನ್, ಅಫೀಮು ದಂಧೆ – ಆರೋಪಿಗಳು ಅರೆಸ್ಟ್

    ಮಂಡ್ಯದಲ್ಲಿ ಹೆರಾಯಿನ್, ಅಫೀಮು ದಂಧೆ – ಆರೋಪಿಗಳು ಅರೆಸ್ಟ್

    ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ವಿದ್ಯಾರ್ಥಿಗಳನ್ನು ಡಾರ್ಗೆಟ್ ಮಾಡಿಕೊಂಡು ಹೆರಾಯಿನ್, ಅಫೀಮುಗಳನ್ನು ಮಾರಾಟ ಮಾಡುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಮಾದಕವಸ್ತುಗಳ ದಂಧೆಕೋರರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಾಗಿದ್ದು, ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿರುವ ಹಿನ್ನೆಲೆ ಪಕ್ಕದ ಮಂಡ್ಯ ಜಿಲ್ಲೆಯತ್ತ ಮಾದಕವಸ್ತುಗಳ ದಂಧೆಕೋರರು ಮುಖ ಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಹೆರಾಯಿನ್, ಅಫೀಮುಗಳನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಮಂಡ್ಯದ ಯುವ ಪೀಳಿಗೆ ಮಾದಕವಸ್ತುಗಳ ವ್ಯಸನಿಗಳಾಗುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಎಸ್‍ಪಿ ಕಚೇರಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ಪದೇ ಪದೇ ದೂರುಗಳು ಬರುತ್ತಿದ್ದವು. ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಇಂದು ಅಯ್ಯಪ್ಪನ ದರ್ಶನವಿಲ್ಲ

    ಈ ಹಿನ್ನೆಲೆ ಮಂಡ್ಯ ಪೊಲೀಸರು ಹೆರಾಯಿನ್, ಅಫೀಮು ಮಾರಾಟ ಮಾಡುವವರನ್ನು ಬಂಧಿಸಲು ಬಲೆ ಬೀಸಿದ್ದರು. ಇತ್ತೀಚೆಗೆ ಮಂಡ್ಯದ ಚರ್ಚ್ ರಸ್ತೆ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಕಂಡ ಪೊಲೀಸರು ಆ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಈ ಇಬ್ಬರು ಹೆರಾಯಿನ್ ಹಾಗೂ ಅಫೀಮು ಪೆಡ್ಲರ್‌ಗಳು ಎಂದು ತಿಳಿದಿದೆ.

    ಇನ್ನೂ ತೀವ್ರತರವಾದ ವಿಚಾರಣೆ ಮಾಡಿದಾಗ, ನಾವು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಹೆರಾಯಿನ್ ಹಾಗೂ ಅಫೀಮು ಅನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಬಾಯಿ ಬಿಟ್ಟಿದ್ದಾರೆ. ಈ ಬಂಧಿತರಿಂದ 6 ಲಕ್ಷ ಮೌಲ್ಯದ ಹೆರಾಯಿನ್, 75 ಸಾವಿರ ಮೌಲ್ಯದ ಅಫೀಮುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಈ ಮಾದಕವಸ್ತುಗಳ ಮಾರಾಟಗಾರರು ಇನ್ನೂ ಇರಬಹುದಾದ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅವರ ಸೆರೆಗೂ ಸಹ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

  • ದೇವರ ಪ್ರಸಾದವನ್ನು ಕೊಟ್ಟುಬಿಡಿ – ಕೆಎಸ್ಆರ್‌ಟಿಸಿ ಚಾಲಕರಿಗೆ ಬ್ರೌನ್‌ ಶುಗರ್‌ ಕವರ್‌ ನೀಡ್ತಿದ್ದ ಆರೋಪಿ ಅರೆಸ್ಟ್‌

    ದೇವರ ಪ್ರಸಾದವನ್ನು ಕೊಟ್ಟುಬಿಡಿ – ಕೆಎಸ್ಆರ್‌ಟಿಸಿ ಚಾಲಕರಿಗೆ ಬ್ರೌನ್‌ ಶುಗರ್‌ ಕವರ್‌ ನೀಡ್ತಿದ್ದ ಆರೋಪಿ ಅರೆಸ್ಟ್‌

    ಬೆಂಗಳೂರು: ಸಾರಿಗೆ ನೌಕರರನ್ನೇ ಬ್ರೌನ್‌ಶುಗರ್‌ ಕಳುಹಿಸಲು ಬಳಸಿಕೊಂಡಿದ್ದ ಖತರ್ನಾಕ್‌ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ವಿಕ್ರಮ್ ಖಿಲೇರಿ(25) ಬಂಧಿತ ಆರೋಪಿ. ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗ ಒಳಪಡಿಸಿದಾಗ ತನ್ನ ಕಾರ್ಯತಂತ್ರವನ್ನು ಬಾಯಿಬಿಟ್ಟಿದ್ದಾನೆ. ಈತನಿಂದ 90 ಗ್ರಾಂ ಬ್ರೌನ್ ಶುಗರ್, 6 ಸಾವಿರ ರೂ. ನಗದು, 2 ಮೊಬೈಲ್ ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ.

    ಸಾಗಾಟ ಹೇಗೆ?
    ಬ್ರೌನ್‌ ಶುಗರ್‌ ಮಾರಾಟ ಮಾಡಲು ವಿಕ್ರಮ್‌ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕರನ್ನು ಬಳಸಿಕೊಳ್ಳುತ್ತಿದ್ದ. ಚಾಲಕರ ಬಳಿ ಬ್ರೌನ್‌ ಶುಗರ್‌ ಕವರ್‌ ನೀಡಿ ಇದು ದೇವರ ಪ್ರಸಾದವಾಗಿದ್ದು ಸ್ನೇಹಿತರಿಗೆ ಕಳುಹಿಸುತ್ತಿದ್ದೇನೆ. ಬಸ್‌ ನಿಂತ ಕೂಡಲೇ ಸ್ನೇಹಿತರು ನಿಲ್ದಾಣದಲ್ಲಿ ಇರುತ್ತಾರೆ. ಅವರಿಗೆ ಇದನ್ನು ಕೊಡಿ ಎಂದು ಹೇಳುತ್ತಿದ್ದ. ಈ ಕೆಲಸ ಮಾಡಲು ಚಾಲಕರಿಗೆ 100 ರೂ. ಪಾವತಿಸುತ್ತಿದ್ದ.

    ನಿಲ್ದಾಣಕ್ಕೆ ಬಸ್‌ ಬರುವವರೆಗೂ ಆತ ಹೆಲ್ಮೆಟ್‌ನಲ್ಲಿ ಬ್ರೌನ್ ಶುಗರ್ ಬಚ್ಚಿಡುತ್ತಿದ್ದ. ಪೊಲೀಸರು ಸೇರಿದಂತೆ ಯಾರಿಗೂ ಅನುಮಾನ ಬರಬಾರದೆಂದು ಹೆಲ್ಮೆಟ್‌ನ ಸ್ಪಂಜ್‌ ಒಳಗಡೆ ಮಾದಕವಸ್ತುವನ್ನು ಇಟ್ಟುಕೊಳ್ಳುತ್ತಿದ್ದ. ಈತನ ದಂಧೆಯ ಬಗ್ಗೆ ಮಾಹಿತಿ ಇಲ್ಲದ  ಚಾಲಕರು ಮತ್ತು ನಿರ್ವಾಹಕರು ಡ್ರಗ್ಸ್‌ ಮಾರಾಟಕ್ಕೆ ಸಾಥ್‌ ನೀಡುತ್ತಿದ್ದರು.

    ಬೆಂಗಳೂರಿನಲ್ಲಿ ಡ್ರಗ್ಸ್‌ ದಂಧೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗ ಹಲವು ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಆರೋಪಿಗಳ ಬಂಧನವಾಗುತ್ತಿದ್ದಂತೆ ಈ ಜಾಲದ ವ್ಯಾಪ್ತಿ ಹೇಗಿದೆ? ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವುದು ಬಯಲಾಗುತ್ತಿದೆ.

    ವಿಕ್ರಮ್‌ ಖಿಲೇರಿ ಈ ಐಡಿಯಾ ನೋಡಿ ಪೊಲೀಸರೇ ಒಮ್ಮೆ ದಂಗಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಹೊರಬೀಳುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ  ಕಾರ್ಯ ಚುರುಕುಗೊಳಿಸಿದ್ದಾರೆ.

  • ಶ್ರೀಲಂಕಾದ ಸ್ಟಾರ್ ಕ್ರಿಕೆಟರ್ ಅರೆಸ್ಟ್

    ಶ್ರೀಲಂಕಾದ ಸ್ಟಾರ್ ಕ್ರಿಕೆಟರ್ ಅರೆಸ್ಟ್

    ಕೊಲಂಬೋ: ಶ್ರೀಲಂಕಾದ ಸ್ಟಾರ್ ಕ್ರಿಕೆಟರ್, ಯುವ ಬೌಲರ್ ಶೆಹನ್ ಮಧುಶಂಕಾ ಅವರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

    ಶೆಹನ್ ಮಧುಶಂಕಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶ್ವದ ಗಮನ ಸೆಳೆದಿದ್ದರು. ಆದರೆ ಹೆರಾಯಿನ್ ಡ್ರಗ್ ಹೊಂದಿದ್ದ ಆರೋಪದಡಿ ಅವರನ್ನು ಭಾನುವಾರ ಬಂಧಿಸಲಾಗಿದೆ.

    ಬೌಲರ್ ಶೆಹನ್ ಮಧುಶಂಕಾ ಶ್ರೀಲಂಕಾದ ಟೌನ್ ಪನ್ನಾಲದಲ್ಲಿ ಮೇ 24ರಂದು ಇಬ್ಬರು ಪರಿಚಿತರ ಜೊತೆಗೆ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಸುಮಾರು 2.5 ಗ್ರಾಂ ತೂಕದ ಹೆರಾಯಿನ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೊರೊನಾ ಹಿನ್ನೆಲೆ ಶ್ರೀಲಂಕಾ ದೇಶದಾದ್ಯಂತ ಭಾನುವಾರ ಕರ್ಫ್ಯೂ ಜಾರಿಯಲ್ಲಿತ್ತು. ಈ ವೇಳೆ ಶೆಹನ್ ಮಧುಶಂಕಾ ಮತ್ತು ಸಹಚರರು ವಾಹನದಲ್ಲಿ ಹೋಗುತ್ತಿದ್ದಾಗ ಪೊಲೀಸರು ತಡೆದು ವಿಚಾರಿಸಿದ್ದರು. ಕಾರಿನಲ್ಲಿ ಹೆರಾಯಿನ್ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪರಿಶೀಲನೆ ನಡೆಸಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಮಧುಶಂಕಾ ಅವರನ್ನು 2 ವಾರಗಳ ಕಸ್ಟಡಿಗೆ ಒಪ್ಪಿಸಿದೆ.