Tag: ಹೆಬ್ಬಾಳ

  • `ನಮ್ಮ ಮೆಟ್ರೋ’ದಿಂದ ಬಿಗ್ ಅಪ್ಡೇಟ್ – ಒಂದೂವರೆ ವರ್ಷದೊಳಗೆ ಬರಲಿದ್ಯಾ ಹೆಬ್ಬಾಳ-ಏರ್‌ಪೋರ್ಟ್ ಮೆಟ್ರೋ?

    `ನಮ್ಮ ಮೆಟ್ರೋ’ದಿಂದ ಬಿಗ್ ಅಪ್ಡೇಟ್ – ಒಂದೂವರೆ ವರ್ಷದೊಳಗೆ ಬರಲಿದ್ಯಾ ಹೆಬ್ಬಾಳ-ಏರ್‌ಪೋರ್ಟ್ ಮೆಟ್ರೋ?

    ಬೆಂಗಳೂರು: ಬೆಂಗಳೂರಿನ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ (Bengaluru International Airport)  ಮತ್ತು ಸಿಟಿಯ ನಡುವಿನ ಸಂಚಾರಕ್ಕಾಗಿ ಇದೀಗ ನಮ್ಮ ಮೆಟ್ರೋ (Namma Metro) ಒಂದು ಬಿಗ್ ಅಪ್ಡೇಟ್ ನೀಡಿದೆ.

    ಏರ್‌ಪೋರ್ಟ್‌ನಿಂದ ಸಿಟಿಯವರೆಗೂ ಮೆಟ್ರೋ ಮಾರ್ಗದ ಸಂಚಾರಕ್ಕಾಗಿ ಲಕ್ಷಾಂತರ ಬೆಂಗಳೂರಿಗರು ಕಾಯುತ್ತಿದ್ದಾರೆ. ಇದೀಗ ಬಿಎಂಆರ್‌ಸಿಎಲ್ (BMRCL) ಬಿಗ್ ಅಪ್ಡೇಟ್ ಕೊಟ್ಟಿದ್ದು, 2026ರ ಜೂನ್‌ನಲ್ಲಿ ವಿಮಾನ ನಿಲ್ದಾಣ ಮಾರ್ಗವನ್ನು ಹೆಬ್ಬಾಳದವರೆಗೆ ಸಂಚಾರ ಮುಕ್ತಗೊಳಿಸುವ ಬಗ್ಗೆ ಮಾಹಿತಿ ನೀಡಿದೆ.ಇದನ್ನೂ ಓದಿ: ‌ಭಾರತದಲ್ಲಿ ಬ್ರಿಟಿಷರ ಆಡಳಿತ ವಿರೋಧಿಸಿದ ಕೀರ್ತಿ ಟಿಪ್ಪುವಿನದ್ದು: ವಿದೇಶಾಂಗ ಸಚಿವ ಜೈಶಂಕರ್

    ಸಿಲಿಕಾನ್ ಸಿಟಿಯ ಹಲವೆಡೆ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ಜೊತೆಗೆ ಅನೇಕ ಹೊಸ ಮಾರ್ಗಗಳಿಗೆ ಪ್ಲ್ಯಾನ್ ಕೂಡ ಆಗುತ್ತಿದೆ. ಈ ಮಧ್ಯೆ ನಗರದ ಬಹುನಿರೀಕ್ಷಿತ ಏರ್‌ಪೋರ್ಟ್ ಮಾರ್ಗ ಸಂಬಂಧ ನಮ್ಮ ಮೆಟ್ರೋ ಸಿಹಿ ಸುದ್ದಿಯನ್ನು ನೀಡಿದೆ. ಇದರಿಂದ ಲಕ್ಷಾಂತರ ಜನರ ಬಹುವರ್ಷಗಳ ಕನಸು ನನಸಾಗಲಿದೆ.

    ಬೆಂಗಳೂರು ನಗರ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ನಿತ್ಯ ಲಕ್ಷಾಂತರ ಜನ ಓಡಾಟ ಮಾಡುತ್ತಾರೆ. ಈ ಭಾಗದ ಸವಾರರು ಟ್ರಾಫಿಕ್ ಕಿರಿಕಿರಿಗಳಿಂದ ಬೇಸತ್ತಿದ್ದಾರೆ. ಹೀಗಾಗಿ ಮೆಟ್ರೋ ಯಾವಾಗ ಆರಂಭ ಆಗುತ್ತದೆ ಎಂದು ಜನ ಕಾಯುತ್ತಿದ್ದರು. ಈ ಮಧ್ಯೆ ಮೆಟ್ರೋ ಮಾರ್ಗ ಶುರುವಾಗುವ ಬಗ್ಗೆ ಬಿಎಂಆರ್‌ಸಿಎಲ್ ಪಬ್ಲಿಕ್ ಟಿವಿ ಮೂಲಕ ಅಪ್ಡೇಟ್ ನೀಡಿದೆ.

    ಇನ್ನೂ ಒಂದೂವರೆ ವರ್ಷದೊಳಗೆ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ. ಇದು ಕೆಆರ್‌ಪುರ ಮತ್ತು ವಿಮಾನ ನಿಲ್ದಾಣ ನಡುವಿನ 38 ಕಿ.ಮೀ ಉದ್ದದ ಮಾರ್ಗವಾಗಿದ್ದು, ಹೆಬ್ಬಾಳದ ಮೂಲಕ ಹಾದು ಹೋಗಲಿದೆ. ಸದ್ಯ ಹೆಬ್ಬಾಳದವರೆಗೂ ಮೆಟ್ರೋ ಓಪನ್ ಆಗುವ ಸಾಧ್ಯತೆ ಇದೆ. ಹೆಬ್ಬಾಳದಿಂದ ಕೆಆರ್‌ಪುರವರೆಗೆ ಮಾರ್ಗ ಪೂರ್ಣಗೊಳ್ಳಲು ಮತ್ತಷ್ಟು ಕಾಲವಾಕಾಶ ಬೇಕಿದ್ದು, 2026ರ ಜೂನ್‌ನಲ್ಲಿ ವಿಮಾನ ನಿಲ್ದಾಣ ಮಾರ್ಗವನ್ನು ಹೆಬ್ಬಾಳದವರೆಗೆ ಸಂಚಾರ ಮುಕ್ತಗೊಳಿಸುವ ಬಗ್ಗೆ ಮಾಹಿತಿ ನೀಡಿದೆ.

    ಸದ್ಯ ಈ ಮಾರ್ಗವನ್ನು ಅಂದುಕೊಂಡಂತೆ ಆರಂಭಗೊಳಿಸುವ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಮತ್ತಷ್ಟು ವೇಗ ನೀಡುವಂತೆ ಗುತ್ತಿಗೆ ಕಂಪನಿಗೆ ಬಿಎಂಆರ್‌ಸಿಎಲ್ ಸೂಚನೆ ನೀಡಿದೆ. ಅದರಂತೆ ಸಿವಿಲ್ ಕೆಲಸಗಳಿಗೆ ವೇಗ ಸಿಗಲಿದೆ. ಮಾರ್ಗದಲ್ಲಿ ಸಿವಿಲ್ ಕಾಮಗಾರಿ ಶೇಕಡಾ 50ರಷ್ಟು ಮುಗಿದಿದೆ. ಮಾರ್ಗದಲ್ಲಿ ಟ್ರ‍್ಯಾಕ್‌ನ ವಯಾಡಕ್ಟ್ಗಳನ್ನ ಕೂಡ ಜೋಡಿಸುವ ಕಾರ್ಯ ವೇಗವಾಗಿ ಸಾಗುತ್ತಿದೆ. ಯಾವುದೇ ಸಮಸ್ಯೆ ಇಲ್ಲದೇ ಕಾಮಗಾರಿ ವೇಗವಾಗಿ ಮುಗಿದರೆ 2026ರ ಜೂನ್‌ನಲ್ಲಿ ಸಂಚಾರ ಮುಕ್ತವಾಗಿ ಈ ಭಾಗದ ಜನರ ಟ್ರಾಫಿಕ್ ಜಂಜಾಟಕ್ಕೆ ಬ್ರೇಕ್ ಬೀಳಲಿದೆ.ಇದನ್ನೂ ಓದಿ: Cyclone Fengal | ಚಂಡಮಾರುತಕ್ಕೆ ಮೂವರು ಬಲಿ – 100ಕ್ಕೂ ಹೆಚ್ಚು ಮಂದಿ ರಕ್ಷಣೆ

  • ಡಿವೈಡರ್‌ಗೆ ಡಿಕ್ಕಿ ಹೊಡೆದು ಸೆಲ್ಫ್ ಆಕ್ಸಿಡೆಂಟ್ – ಇಬ್ಬರು ಸ್ಥಳದಲ್ಲೇ ಸಾವು

    ಡಿವೈಡರ್‌ಗೆ ಡಿಕ್ಕಿ ಹೊಡೆದು ಸೆಲ್ಫ್ ಆಕ್ಸಿಡೆಂಟ್ – ಇಬ್ಬರು ಸ್ಥಳದಲ್ಲೇ ಸಾವು

    -ಮೃತ ಓರ್ವನ ಸೊಂಟದಲ್ಲಿ ಚಾಕು ಪತ್ತೆ

    ಬೆಂಗಳೂರು: ನಿಯಂತ್ರಣ ತಪ್ಪಿ ಇಬ್ಬರು ಸೆಲ್ಫ್ ಆಕ್ಸಿಡೆಂಟ್ ಮಾಡಿಕೊಂಡ ಘಟನೆ ನಗರದ ಔಟರ್ ರಿಂಗ್ ರೋಡ್‌ನ ದೇವಿನಗರ ಬಸ್ ನಿಲ್ದಾಣದ ಬಳಿ ನಡೆದಿದೆ.

    ಮೃತ ಯುವಕರ ಗುರುತು ಇನ್ನೂ ಪತ್ತೆಯಾಗಿಲ್ಲ.ಇದನ್ನೂ ಓದಿ: ನೈಜೀರಿಯಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡು 147 ಮಂದಿ ಸಾವು

    ರಾತ್ರಿ 1 ಗಂಟೆ ಸುಮಾರಿಗೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇಬ್ಬರು ಯುವಕರು ಬಿಇಎಲ್ ಕಡೆಯಿಂದ ಹೆಬ್ಬಾಳಕ್ಕೆ (Hebbal) ಬರುತ್ತಿದ್ದರು. ಒಬ್ಬ ಸೊಂಟಕ್ಕೆ ಟೂಲ್ಸ್ ಸಿಕ್ಕಿಸಿಕೊಂಡಿದ್ದ. ಔಟರ್ ರಿಂಗ್ ರೋಡ್‌ನ ದೇವಿನಗರ ಬಸ್ ನಿಲ್ದಾಣ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದು, ಸ್ಕೂಟಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನಾ ಸ್ಥಳಕ್ಕೆ ಹೆಬ್ಬಾಳ ಪೊಲೀಸರು (Hebbal Police) ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ಮೃತ ಓರ್ವನ ಸೊಂಟದಲ್ಲಿ ಚಾಕು ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ (Baptist Hospital) ರವಾನಿಸಲಾಗಿದೆ.

    ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಯುವಕರು ಎಂದು ಶಂಕೆ ವ್ಯಕ್ತವಾಗಿದ್ದು, ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ: 17-10-2024

  • ಮೆಟ್ರೋ ತಡೆಗೋಡೆಗೆ ಗೂಡ್ಸ್ ಲಾರಿ ಡಿಕ್ಕಿ – 10 ಕಿಮೀವರೆಗೂ ಟ್ರಾಫಿಕ್ ಜಾಮ್

    ಮೆಟ್ರೋ ತಡೆಗೋಡೆಗೆ ಗೂಡ್ಸ್ ಲಾರಿ ಡಿಕ್ಕಿ – 10 ಕಿಮೀವರೆಗೂ ಟ್ರಾಫಿಕ್ ಜಾಮ್

    – ಸತತ 1 ಗಂಟೆಗಳ ಕಾಲ ನಿಂತಲ್ಲೇ ನಿಂತ ವಾಹನಗಳು

    ಬೆಂಗಳೂರು: ಗೂಡ್ಸ್ ಲಾರಿ (Goods Lorry) ಮೆಟ್ರೋ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ನಾಗವಾರ-ಹೆಬ್ಬಾಳ (Nagavara – Hebbal) ಮಾರ್ಗದ ಕೆಂಪಾಪುರದ ಬಳಿ ನಡೆದಿದೆ.

    ಇಂದು (ಸೆ.20) ಬೆಳಗ್ಗೆ 7ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು. ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.ಇದನ್ನೂ ಓದಿ: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್

    ನಾಗವಾರ-ಹೆಬ್ಬಾಳ ಮಾರ್ಗದ ಕೆಂಪಾಪುರದ ಬಳಿಯಿರುವ ಔಟರ್‌ರಿಂಗ್ ರೋಡ್ ಸರ್ವೀಸ್ ರಸ್ತೆಯ ಮುಖ್ಯರಸ್ತೆಯಲ್ಲಿ 10 ಚಕ್ರದ ಲಾರಿ ಮೆಟ್ರೋ ಕಾಮಗಾರಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಎರಡು ಜೆಸಿಬಿ ಬಳಸಿ ಪೊಲೀಸರು ಲಾರಿಯನ್ನು ತೆಗೆಯಲು ಪ್ರಯತ್ನಪಡುತ್ತಿದ್ದಾರೆ.

    ಈ ಅವಘಡದಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, 10ಕಿಮೀವರೆಗೂ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ಹೆಬ್ಬಾಳದಿಂದ ರಾಮಮೂರ್ತಿನಗರದವರೆಗೆ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದಾಗಿ ಸತತ 1 ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತು, ವಾಹನ ಚಾಲಕರು ಪರದಾಡುವಂತಾಯಿತು. ಕಾದು ಬೇಸತ್ತು ಹೋಗಿ, ಕೊನೆಗೆ ಟೈಂ ಆದ ಹಿನ್ನೆಲೆ ಬೈಕ್ ಸವಾರರು ಅಪಘಾತಗೊಂಡಿರುವ ಲಾರಿ ಕೆಳಗೆ ನುಗ್ಗಿಸಿ ಮುಂದೆ ಸಾಗುತ್ತಿದ್ದಾರೆ ಇದನ್ನೂ ಓದಿ: ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ – ಹೆಚ್.ಡಿ ರೇವಣ್ಣ ಸವಾಲ್

  • ಬೆಂಗ್ಳೂರಲ್ಲಿ 12,690 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಯೋಜನೆಗೆ ಸಂಪುಟ ಸಭೆ ಅಸ್ತು

    ಬೆಂಗ್ಳೂರಲ್ಲಿ 12,690 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಯೋಜನೆಗೆ ಸಂಪುಟ ಸಭೆ ಅಸ್ತು

    -500 ಕೋಟಿ ರೂ. ವೆಚ್ಚದಲ್ಲಿ ಸ್ಕೈಡೆಕ್ ನಿರ್ಮಾಣ

    ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು (Brand Bengaluru) ಕನಸಿನ ಭಾಗವಾಗಿ ಗುರುವಾರ ಸಂಪುಟ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. 12,690 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ (Hebbala) ಸಿಲ್ಕ್ ಬೋರ್ಡ್‌ವರೆಗೆ (Silk Board) ಸುರಂಗ ರಸ್ತೆ ನಿರ್ಮಿಸುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೇ, 500 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಲ್ಲಿ 250 ಅಡಿ ಎತ್ತರದ ಸ್ಕೈಡೆಕ್ (Sky Deck) ನಿರ್ಮಾಣಕ್ಕೂ ಅನುಮೋದನೆ ನೀಡಿದೆ.

    ಅಲ್ಲದೇ, ಮೈಸೂರು ಮಿನರಲ್ ಸಂಸ್ಥೆ ಎ.ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸ್ಸಿನಂತೆ ಬಾಕಿ ವೇತನ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಎಂಎಸ್‌ಎಂಇ ಕೈಗಾರಿಕೆಗಳಿಗೆ ವೇಗ ನೀಡಲು ಕೈಗಾರಿಕಾ ನಿಯಮಗಳ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದೆ. ಅಲ್ಲದೇ, ಸಂಡೂರಿನಲ್ಲಿರುವ 3,724 ಎಕರೆ ಭೂಮಿಯನ್ನು ಜೆಎಸ್‌ಡಬ್ಲ್ಯೂ ಸಂಸ್ಥೆಗೆ ಕ್ರಯಪತ್ರ ಮಾಡಿಕೊಡಲು ಸಮ್ಮತಿ ಸೂಚಿಸಿದೆ. ಅಲ್ಲದೇ, ಸಹಕಾರಿ ಸಂಸ್ಥೆಗೆ 1,600 ಕೋಟಿ ರೂ. ಸಾಲ ಪಡೆಯಲು ಖಾತರಿಯನ್ನು ನೀಡಲು ಮುಂದಾಗಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಸಿಎಂ ಸೂಚನೆ

    ಏನಿದು ಟನೆಲ್ ರೋಡ್ ಯೋಜನೆ?
    * ಹೆಬ್ಬಾಳ – ಸಿಲ್ಕ್‌ಬೋರ್ಡ್ 18 ಕಿ.ಮೀ ಸುರಂಗ
    * ಬೋಟ್ ಶೈಲಿಯ ಸುರಂಗ ಮಾರ್ಗ ರಸ್ತೆ
    * ಇದು ಡಬಲ್ ಡೆಕ್ ರಸ್ತೆಗಳನ್ನು ಒಳಗೊಂಡಿರುತ್ತದೆ
    * ವಾಹನಗಳಿಗೆ ಐದು ಎಂಟ್ರಿ, ಐದು ಎಕ್ಸಿಟ್ ಪಾಯಿಂಟ್
    * ಎಸ್ಟೀಮ್ ಮಾಲ್, ಪ್ಯಾಲೇಸ್ ಗ್ರೌಂಡ್, ಗಾಲ್ಫ್ ಕ್ಲಬ್, ಲಾಲ್‌ಬಾಗ್, ಸಿಲ್ಕ್ಬೋಡ್ ಬಳಿ ಎಂಟ್ರಿ-ಎಕ್ಸಿಟ್
    * ಉದ್ದೇಶಿತ ನಮ್ಮ ಮೆಟ್ರೋಗೆ ಸಮನಾಂತರವಾಗಿ ಸುರಂಗ ರಸ್ತೆ (ಸರ್ಜಾಪುರ ರೋಡ್-ಹೆಬ್ಬಾಳ ಮೆಟ್ರೋ ಯೋಜನೆ)
    * ಈ ಯೋಜನೆಗೆ ಭೂಸ್ವಾಧೀನದ ಅಗತ್ಯ ಬೀಳಲ್ಲ

    ಮೊದಲು ಈ ಯೋಜನೆಗೆ 8,000 ಕೋಟಿ ರೂ. ಅಂದಾಜು ವೆಚ್ಚ ಎಂದು ಹೇಳಲಾಗಿತ್ತು ಆದರೀಗ ಈ ಮೊತ್ತ ಒಂದೂವರೆ ಪಟ್ಟು ಹೆಚ್ಚಾಗಿದೆ. ಅಂದರೆ 12,690 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದಾಜು ಒಂದು ಕಿಲೋಮೀಟರ್ ಸುರಂಗ ರಸ್ತೆಗೆ ಅಂದಾಜು 705 ಕೋಟಿ ರೂ. ವೆಚ್ಚವಾಗಲಿದೆ. ಇದನ್ನೂ ಓದಿ: POCSO Case | ಬಿಎಸ್‌ವೈ ಬಂಧನ ತೆರವಿಗೆ ಕಾನೂನು ಹೋರಾಟ; ಆ.30ರವರೆಗೆ ಮದ್ಯಂತರ ಆದೇಶ ಮುಂದುವರಿಕೆ

  • ಬೆಂಗಳೂರಿನಲ್ಲಿ ಮಳೆಯ ನಡುವೆಯೇ ಹೊತ್ತಿ ಉರಿದ ಎಲೆಕ್ಟ್ರಿಕ್ ಬಸ್

    ಬೆಂಗಳೂರಿನಲ್ಲಿ ಮಳೆಯ ನಡುವೆಯೇ ಹೊತ್ತಿ ಉರಿದ ಎಲೆಕ್ಟ್ರಿಕ್ ಬಸ್

    ಬೆಂಗಳೂರು: ಭಾರೀ ಮಳೆಯ ನಡುವೆಯೇ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ (Electric BMTC Bus) ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಸೋಮವಾರ ರಾತ್ರಿ 11:30ರ ಸುಮಾರಿಗೆ ಘಟನೆ ನಡೆದಿದ್ದು, ಬಸ್ ಸಂಪೂರ್ಣ ಬೆಂಕಿಗಾಹುತಿ ಆಗಿದೆ. ಎಲೆಕ್ಟ್ರಿಕ್ ಬಸ್ ನಾಗಾವರ ಕಡೆಯಿಂದ ಹೆಬ್ಬಾಳ ಕಡೆಗೆ ಬರುತ್ತಿತ್ತು. ಹೆಬ್ಬಾಳದ BWSSB ಬಳಿಯ ಸರ್ವಿಸ್ ರಸ್ತೆಗೆ ಬರುತ್ತಿದ್ದಂತೆ ಏಕಾಏಕಿ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಂಡಕ್ಟರ್ ಬಸ್‌ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಏಕಾಏಕಿ ಬಸ್ ಹೊತ್ತಿ ಉರಿದಿದೆ. ಇದನ್ನೂ ಓದಿ: ರಾಜಾಶ್ರಯಕ್ಕೆ ಹಸೀನಾ ಯುಕೆಗೆ ಹೋಗೋದು ಯಾಕೆ? – ವಾಯುನೆಲೆಯಲ್ಲಿ ದೋವಲ್‌ ಭೇಟಿ

    ಜೋರು ಮಳೆಯ ಪರಿಣಾಮ ಬಸ್‌ನ ಎಂಜಿನ್‌ಗೆ ನೀರು ಹೋಗಿ ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನ ಅಧಿಕಾರಿಗಳು, ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸುವ ಸಲುವಾಗಿ ಅಗ್ನಿಶಾಮಕ ವಾಹನಗಳು ಬಂದ ಪರಿಣಾಮ ಹೆಬ್ಬಾಳ ಕಡೆಯ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸುಮಾರು ಎರಡು ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತಿದ್ದವು. ಸುಮಾರು 8 ಕಿಲೋ ಮೀಟರ್‌ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಬಸ್ ತೆರವು ಕಾರ್ಯ ನಡೆಯಿತು. ಇದನ್ನೂ ಓದಿ: ದೇಶ ತೊರೆದ ಶೇಖ್ ಹಸೀನಾಗೆ ಭಾರತ ಆಶ್ರಯ – ʻಮಹಾ ಪಲಾಯನʼ ಬೆನ್ನಲ್ಲೇ ಉದ್ರಿಕ್ತರಿಂದ ಸಂಭ್ರಮಾಚರಣೆ

  • ಮೂರನೇ ಹಂತದ ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ತೀರ್ಮಾನ

    ಮೂರನೇ ಹಂತದ ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ತೀರ್ಮಾನ

    ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮೂರನೇ ಹಂತದ ಮೆಟ್ರೋ (Metro) ಕಾಮಗಾರಿ ಕೈಗೆತ್ತಿಕೊಳ್ಳಲು ಇಂದಿನ ಸಚಿವ ಸಂಪುಟ (Cabinet of Ministers) ಒಪ್ಪಿಗೆ ನೀಡಿದೆ.

    ಒಟ್ಟು 15,611 ಕೋಟಿ ವೆಚ್ಚದಲ್ಲಿ ಮೂರನೇ ಹಂತದ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. 2028 ರೊಳಗೆ ಮೂರನೆ ಹಂತದ ಕಾಮಗಾರಿ ಮುಗಿಸುವ ಲೆಕ್ಕಾಚಾರದಲ್ಲಿ ಸಂಪುಟ ಒಪ್ಪಿಗೆ ನೀಡಿದೆ. 80-85% ರಾಜ್ಯ ಸರ್ಕಾರ ಹಾಗೂ 15% ಅಂದಾಜು ಕೇಂದ್ರ ಸರ್ಕಾರ ವೆಚ್ಚ ಭರಿಸಲಿದೆ. ಒಟ್ಟು 44.65 ಕಿ.ಮೀನ ಮೂರನೇ ಹಂತದ ಮೆಟ್ರೋ ಕಾಮಗಾರಿ ಇದಾಗಿದೆ. ಇದನ್ನೂ ಓದಿ: ರಾಜಕೀಯಕ್ಕೆ ಬಂದಾಗ ಜಾಸ್ತಿ ಟೀಕೆ ಎದುರಿಸಬೇಕು: ಯದುವೀರ್ ಒಡೆಯರ್

    ಹೆಬ್ಬಾಳದಿಂದ (Hebbala) ಶುರುವಾಗಿ ತುಮಕೂರು ರಸ್ತೆ ರಾಜ್‌ಕುಮಾರ್ ಸಮಾಧಿ ಆಸುಪಾಸು ಹಾಗೂ ಅಲ್ಲಿಂದ ಮೈಸೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ ಮೂಲಕ ಜೆಪಿ ನಗರ (JP Nagar) ತಲುಪುವ ಮೆಟ್ರೋ ಕಾಮಗಾರಿ ಇದಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಚುನಾವಣಾ ಬಾಂಡ್‌ ವಿವರವನ್ನು ಬಹಿರಂಗಪಡಿಸಿದ ಚುನಾವಣಾ ಆಯೋಗ

  • ಹೆಬ್ಬಾಳ ಬಳಿಕ ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ

    ಹೆಬ್ಬಾಳ ಬಳಿಕ ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ

    ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗ್ತಾ ಇದೆ. ಟ್ರಾಫಿಕ್ (Bengaluru Traffic) ಕಡಿಮೆ ಮಾಡಲು ಸರ್ಕಾರ ನಾನಾ ಯೋಜನೆ, ಕಾಮಗಾರಿಗಳನ್ನ ಮಾಡ್ತಾ ಇದೆ. ಅದರಲ್ಲೂ ಇತ್ತಿಚೆಗೆ ಚರ್ಚೆಗೆ ಇರುವ ವಿಚಾರ ಅಂದರೆ ಅದು ಹೆಬ್ಬಾಳದ ಬಳಿ ಎರಡೂವರೆ ಸಾವಿರ ಕೋಟಿ ವೆಚ್ಚದಲ್ಲಿ ಟನಲ್ ನಿರ್ಮಾಣ. ಅದರ ಜೊತೆಗೆ ಈಗ ಯಶವಂತಪುರ, ಗೊರುಗುಂಟೆ ಪಾಳ್ಯದಲ್ಲಿ ಟನಲ್ (Tunnel) ನಿರ್ಮಿಸಲು ಪೀಸಿಬಲ್ ವರದಿ ಸಿದ್ದಪಡಿಸಲಾಗ್ತಿದ್ಯಂತೆ.

    ಗೊರಗುಂಟೆ ಪಾಳ್ಯದ ಬಳಿ ಮೆಟ್ರೋ ಹಾದು ಹೊಗಿರುವ ಕಾರಣ ಟನಲ್ ನಿರ್ಮಾಣ ಮಾಡಬೇಕಾ ಅಥವಾ ಫ್ಲೈಓವರ್ ಮಾಡಬೇಕಾ ಎಂಬ ಚರ್ಚೆ ನಡೀತಿದೆ. ಸುಮನಹಳ್ಳಿ ವರೆಗೂ ಕೂಡ ಡಬಲ್ ರಸ್ತೆ ಸೇರಿದಂತೆ ನಾನಾ ರೀತಿಯಲ್ಲಿ ಆಲೋಚನೆ ನಡೆಯುತ್ತಾ ಇದೆ. ಆದರೆ ಯಶವಂತಪುರ ಮತ್ತು ಗೊರಗುಂಟೆ ಪಾಳ್ಯದಲ್ಲಿ ಟ್ರಾಫಿಕ್ ಜಾಸ್ತಿ ಆಗ್ತಿದ್ದು ಟ್ರಾಫಿಕ್ ಮುಕ್ತಿಗೆ ಬೇರೆ ಮಾರ್ಗ ಕಂಡುಕೊಳ್ಳಬೇಕಿದೆ.

    ಗೊರಗುಂಟೆ ಪಾಳ್ಯ ಮತ್ತು ಯಶವಂತಪುರದಲ್ಲಿ ಟನಲ್ ನಿರ್ಮಾಣ ಚರ್ಚಾ ಹಂತದಲ್ಲಿದ್ದು, ಎಷ್ಟು ಕಿಲೋ ಮೀಟರ್‍ವರೆಗೆ ಆಗಲಿದೆ. ವೆಚ್ಚ ಎಷ್ಟು ಆಗಲಿದೆ. ಯಾವಾಗ ಆರಂಭ ಅಂತಾ ಕಾದು ನೋಡಬೇಕಿದೆ. ಇದನ್ನೂ ಓದಿ: ಬೆಂಗಳೂರು ವಿವಿಗೆ ಪಿಎಂ ಉಷಾ ಯೋಜನೆಯಡಿ 100 ಕೋಟಿ ಅನುದಾನ ಘೋಷಣೆ

  • ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಭೈರತಿ ಸುರೇಶ್ ಆಪ್ತ ಸಿಸಿಬಿ ವಶಕ್ಕೆ

    ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಭೈರತಿ ಸುರೇಶ್ ಆಪ್ತ ಸಿಸಿಬಿ ವಶಕ್ಕೆ

    ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಹೊತ್ತಲ್ಲಿ ನಕಲಿ ವೋಟರ್ ಐಡಿ (Fake Voter ID) ತಯಾರಿಸುತ್ತಿದ್ದ ಸಚಿವ ಭೈರತಿ ಸುರೇಶ್ (Byrathi Suresh) ಆಪ್ತನನ್ನು ಸಿಸಿಬಿ (CCB) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಸಚಿವರ ಆಪ್ತನಾದ ಮೌನೇಶ್ ಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಈತನ ಜೊತೆಗೆ ಶಾಮೀಲಾಗಿದ್ದ ಭಗತ್ ಹಾಗೂ ರಾಘವೇಂದ್ರ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಹಣ ಕೊಟ್ಟರೆ ನಕಲಿ ವೋಟರ್ ಐಡಿ, ಆಧಾರ್ ಕಾರ್ಡ್ ಹಾಗೂ ಡಿಎಲ್‍ನ್ನು ಮಾಡಿಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: Gaganyaan Mission- ಇಸ್ರೋ ಗಗನಯಾನ ಪರೀಕ್ಷಾರ್ಥ ಉಡಾವಣೆ ಯಶಸ್ವಿ

    ಆರೋಪಿಗಳು ಯಾವುದೇ ಕ್ಷೇತ್ರದ ವೋಟರ್ ಐಡಿ ಹಾಗೂ ಯಾವುದೇ ಆಧಾರ್ ಕೇಳಿದರೂ ಮಾಡಿಕೊಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಕನಕನಗರದಲ್ಲಿರುವ ಎಂಎಸ್‍ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ದಾಳಿ ನಡೆಸಲಾಗಿದೆ. ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

    ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಎಂ.ಬಿ ಪಾಟೀಲ್ ಸಿಎಂ ಆಗಬೇಕಂದ್ರೆ ಜನ ಬಯಸಬೇಕು- ಸಚಿವರ ಇಂಗಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಮ್ಮೆ ಚರ್ಮದ ಪಾಲಿಕೆ ಇನ್ನೂ ಪಾಠ ಕಲಿತಿಲ್ಲ- ಹೆಚ್‌ಡಿಕೆ ಕಿಡಿ

    ಎಮ್ಮೆ ಚರ್ಮದ ಪಾಲಿಕೆ ಇನ್ನೂ ಪಾಠ ಕಲಿತಿಲ್ಲ- ಹೆಚ್‌ಡಿಕೆ ಕಿಡಿ

    – ಕಸದ ಲಾರಿಗೆ ಬಾಲಕಿ ಬಲಿ, ಹೆಬ್ಬಾಳದ ದುರ್ಘಟನೆಗೆ ಆಕ್ರೋಶ
    – ಗಬ್ಬೆದ್ದು ಹೋಗಿರುವ ಪಾಲಿಕೆಯನ್ನು ಮೊದಲು ಸ್ವಚ್ಛ ಮಾಡಬೇಕು

    ಬೆಂಗಳೂರು: ಹೆಬ್ಬಾಳದ ಬಳಿ ಶಾಲಾ ಬಾಲಕಿಯೊಬ್ಬಳನ್ನು ಬಿಬಿಎಂಪಿ ಕಸದ ಲಾರಿ ಬಲಿ ಪಡೆದ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಗಬ್ಬೆದ್ದು ಹೋಗಿರುವ ಪಾಲಿಕೆಯನ್ನು ಮೊದಲು ಸ್ವಚ್ಚ ಮಾಡಬೇಕು ಎಂದು ಹೇಳಿದ್ದಾರೆ. ಬಿಬಿಎಂಪಿ ಬೇಜವಾಬ್ದಾರಿ, ನಿರ್ಲಕ್ಷ್ಯ, ಅವೈಜ್ಞಾನಿಕ ಕಸದ ವಿಲೇವಾರಿ ಹಾಗೂ ಅಸಮರ್ಪಕ ರಸ್ತೆ, ಚರಂಡಿ ನಿರ್ವಹಣೆಯಿಂದ ಜನರ ಜೀವಕ್ಕೆ ಕಿಮ್ಮತ್ತಿಲ್ಲದಾಗಿದೆ. ಹೆಬ್ಬಾಳದ ಮೇಲುಸೇತುವೆ ಬಳಿ ಕಸದ ಲಾರಿಗೆ ನೂರು ವರ್ಷ ಬಾಳಿ ಬದುಕಬೇಕಿದ್ದ ಬಾಲಕಿ ಬಲಿಯಾಗಿದ್ದಾಳೆ ಎಂದಿದ್ದಾರೆ. ಇದನ್ನೂ ಓದಿ: ಭಗವದ್ಗೀತೆಯ ಮೂಲ ಪುಸ್ತಕದ ಬಗ್ಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ: ನ್ಯಾಯವಾದಿ ಸುರೇಂದ್ರ ಉಗಾರೆ

    ಭಾನುವಾರ ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಫ್ಲೈಓವರ್ ಅಂಡರ್ ಪಾಸ್‌ನಲ್ಲಿ ನೀರು ತುಂಬಿತ್ತು. ಹೀಗಾಗಿ ಮಕ್ಕಳು ಅಂಡರ್ ಪಾಸ್‌ನಲ್ಲಿ ಹೋಗದೆ ರಸ್ತೆ ಮೂಲಕ ದಾಟುತ್ತಿದ್ದರು. ಆ ಸಂದರ್ಭದಲ್ಲಿ ದುರಂತ ಘಟಿಸಿದೆ ಎಂದು ತಿಳಿಸಿದರು.

    ಸ್ವತಃ ಗೌರವಾನ್ವಿತ ಹೈಕೋರ್ಟ್ ಛೀಮಾರಿ ಹಾಕಿದ್ದರೂ, ಎಂಜಿನಿಯರುಗಳನ್ನು ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ನೀಡಿದ್ದರೂ, ಎಮ್ಮೆ ಚರ್ಮದ ಪಾಲಿಕೆ ಪಾಠ ಕಲಿತಿಲ್ಲ. ಬಿಬಿಎಂಪಿ ಆಟಗಳಿಗೆ ಸೀಟಿ ಹೊಡೆಯುತ್ತಾ, ಅಲ್ಲಿನ ಅದಕ್ಷ ಅಧಿಕಾರಿಗಳನ್ನು ಪೊರೆದು ಪೋಷಣೆ ಮಾಡುತ್ತಿರುವ ಸರ್ಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ನೂರಾರು ಶಾಸಕರು ಚಕ್ಕರ್ – ಸಹಿ ಮಾಡಿ ಶಾಸಕರು ಹೋಗೋದು ಎಲ್ಲಿಗೆ..?

    ಬೆಂಗಳೂರು ನಗರದ ಗೌರವ, ಪ್ರತಿಷ್ಠೆ ಹಾಳು ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಅಲ್ಲಿಂದ ಹೊರಹಾಕಿ ಬಿಬಿಎಂಪಿಯನ್ನು ಮೊದಲು ಸ್ವಚ್ಚಗೊಳಿಸಬೇಕಿದೆ. ಅಲ್ಲಿಂದಲೇ ಬೆಂಗಳೂರಿನ ಸ್ವಚ್ಚತೆ ಆರಂಭವಾಗಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

  • ಹೆಬ್ಬಾಳ ದುರ್ಘಟನೆ – ಮೃತ ಅಕ್ಷಯ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ಪರಿಹಾರ ಘೋಷಿಸಿದ ಭೈರತಿ ಸುರೇಶ್

    ಹೆಬ್ಬಾಳ ದುರ್ಘಟನೆ – ಮೃತ ಅಕ್ಷಯ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ಪರಿಹಾರ ಘೋಷಿಸಿದ ಭೈರತಿ ಸುರೇಶ್

    ಬೆಂಗಳೂರು: ಹೆಬ್ಬಾಳದ ಫ್ಲೈ ಓವರ್ ಬಳಿ ಡಿವೈಡರ್ ದಾಟುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ ಅಕ್ಷಯ ಕುಟುಂಬಕ್ಕೆ ಶಾಸಕ ಭೈರತಿ ಸುರೇಶ್ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಆಗಿದ್ದು ಏನು?:
    ಹೆಬ್ಬಾಳದ ಫ್ಲೈಓವರ್ ಬಳಿ ಅಂಡರ್ ಪಾಸ್‍ನಲ್ಲಿ ನೀರು ತುಂಬಿದ್ದ ಪರಿಣಾಮ ಪಾದಚಾರಿಗಳು ರಸ್ತೆ ಮೇಲೆ ಓಡಾಡುತ್ತಾ ರಸ್ತೆ ದಾಟುತ್ತಿದ್ದರು. ಮಧ್ಯಾಹ್ನ 12:30ರ ವೇಳೆಗೆ ಬಸ್ ಇಳಿದ ಬಾಲಕಿ ಅಂಡರ್ ಪಾಸ್‍ನಲ್ಲಿ ನೀರು ತುಂಬಿರುವುದನ್ನು ನೋಡಿ, ಡಿವೈಡರ್ ದಾಟಿ ರಸ್ತೆ ಕ್ರಾಸ್ ಮಾಡುತ್ತಿದ್ದಳು. ಐದು ಜನ ವಿದ್ಯಾರ್ಥಿಗಳು ಒಟ್ಟಿಗೆ ಡಿವೈಡರ್ ಜಂಪ್ ಮಾಡಿ ರಸ್ತೆ ದಾಟುತ್ತಿದ್ದರು. ಈ ವೇಳೆ ಕಾರು ಮತ್ತು ಬೈಕ್ ಸಡನ್ ಆಗಿ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಿಬಿಎಂಪಿ ಕಸದ ಲಾರಿ, ಕಾರು, ಬೈಕ್‍ಗೆ ಡಿಕ್ಕಿಯಾಗಿ ಬಾಲಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ಸಾವನ್ನಪ್ಪಿದ್ದು, ಇತರೇ ಎಂಟು ಜನರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಭೈರತಿ ಸುರೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಜೀವ ಅಮೂಲ್ಯವಾದದ್ದು, ಬೆಲೆ ಕಟ್ಟಲಾಗುವುದಿಲ್ಲ. ಈ ದುರ್ಘಟನೆಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಕಮೀಷನರ್‍ಗೆ ಸೂಚನೆ ನೀಡಿದ್ದೇನೆ. ಅಂಡರ್ ಪಾಸ್ ನೀರು ತುಂಬಿಕೊಂಡಿದ್ದರಿಂದಾಗಿ ಬಾಲಕಿ ರಸ್ತೆ ದಾಟೋಕೆ ಹೋಗಿದ್ದಾಳೆ. ದುರಂತ ಘಟನೆ ನಡೆದು ಹೋಗಿದೆ. ಈ ಪ್ರದೇಶದಲ್ಲಿ ಯಾರು ಕೂಡ ವಾಹನಗಳ ಹೆಚ್ಚಿನ ಓಡಾಟದ ವೇಳೆ ರಸ್ತೆ ದಾಟುವ ಸಾಹಸ ಮಾಡಬಾರದು. ಮೃತ ಅಕ್ಷಯ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರವಾಗಿ ಕೊಡುತ್ತೇನೆ ಎಂದರು.