Tag: ಹೆಬ್ಬಾಳ ಶಾಸಕ

  • ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ

    ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ

    ಬೆಂಗಳೂರು: ಹೆಬ್ಬಾಳ ಶಾಸಕ ಭೈರತಿ ಬಸವರಾಜ್ ಅವರ ಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ.

    ಭೈರತಿ ಗ್ರಾಮದಲ್ಲೇ ಶಾಸಕರ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಶಾಸಕರ ಪರಿಚಯಸ್ಥ 35 ವರ್ಷದ ಶಿವಕುಮಾರ್ ಎಂಬಾತ ಈ ಕೃತ್ಯ ಎಸಗಲು ಯತ್ನಿಸಿದ್ದಾನೆ. ಆದರೆ ಗನ್ ಮ್ಯಾನ್ ಗಳ ಸಹಾಯದಿಂದ ಭೈರತಿ ಸುರೇಶ್ ಪಾರಾಗಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭೈರತಿಸುರೇಶ್, ಶಿವು ಮೊದಲು ನನ್ನ ಕಾರಿಗೆ ಗುದ್ದಿ ಮುಂದಕ್ಕೆ ಹೋದನು. ಮತ್ತೆ ವಾಪಸ್ ಬಂದು ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಆದರೆ ಗನ್ ಮ್ಯಾನ್ ಸಹಾಯದಿಂದ ಪಾರಾಗಿದ್ದೇನೆ ಎಂದರು.

    ಶಿವು ತಾಯಿ ನಮ್ಮ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಅವನ ಮನೆಯವರೆಲ್ಲರೂ ಒಳ್ಳೆಯವರು. ಈತ ಮಾತ್ರ ಸ್ವಲ್ಪ ಪೋಲಿಯಾಗಿದ್ದನು. ಶಿವು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ ಯಾಕೆ ಹೀಗೆ ಮಾಡಿದನೆಂದು ನನಗೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.

    ಶಿವು ಕಳೆದ 2-3 ದಿನಗಳಿಂದ ಮನೆ ಹೊರಗಡೆ ಓಡಾಡುತ್ತಿದ್ದನು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆತನನ್ನು ಚಿಕ್ಕ ವಯಸ್ಸಿನಿಂದಲೇ ನೋಡುತ್ತಿದ್ದೇನೆ. ನಮ್ಮ ಮುಂದೆಯೇ ಆಡಿ ಬೆಳೆದ ಹುಡುಗ ಆತನಾಗಿದ್ದು, ನಮ್ಮೊಂದಿಗೆ ಚೆನ್ನಾಗಿಯೇ ಇದ್ದನು. ಶಿವು ಅವರಿಗೆ ಮನೆ ಕೂಡ ಕಟ್ಟಿಸಿ ಕೊಡಲಾಗಿತ್ತು. ಆದರೆ ಕೊಲೆ ಮಾಡಲು ಯಾಕೆ ಯತ್ನಿಸಿದ ಎಂದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗೃಹ ಮಂತ್ರಿಗಳು ಕೂಡ ಕರೆ ಮಾಡಿ ನನ್ನೊಂದಿಗೆ ಮಾತುಕತೆ ನಡೆಸಿದರು. ತನಿಖೆಯ ಬಳಿಕವಷ್ಟೇ ಆತ ಯಾಕೆ ಹೀಗೆ ಮಾಡಿದನೆಂದು ತಿಳಿದು ಬರಬೇಕಿದೆ ಎಂದು ಭೈರತಿ ತಿಳಿಸಿದರು.

  • ಅಜ್ಞಾತ ಸ್ಥಳದಲ್ಲಿ ಸಿದ್ದರಾಮಯ್ಯ ಸಂಧಾನ

    ಅಜ್ಞಾತ ಸ್ಥಳದಲ್ಲಿ ಸಿದ್ದರಾಮಯ್ಯ ಸಂಧಾನ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಜ್ಞಾತ ಸ್ಥಳದಲ್ಲಿ ಬೆಂಗಳೂರು ನಗರ ಶಾಸಕರ ಸಂಧಾನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

    ಸಿದ್ದರಾಮಯ್ಯ ಅವರು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಅವರ ಜೊತೆಗೆ ರಹಸ್ಯ ಸ್ಥಳದಲ್ಲಿ ಸಂಧಾನ ನಡೆಸಿದರು. ಹೀಗಾಗಿ ತಮ್ಮ ಗನ್ ಮೆನ್‍ಗಳು ಹಾಗೂ ಆಪ್ತ ಸಹಾಯಕರನ್ನು ಬಿಟ್ಟು ಗೌಪ್ಯ ಸ್ಥಳಕ್ಕೆ ತೆರಳಿ ಬೇಡಿಕೆಯನ್ನು ಆಲಿಸಿದ್ದಾರೆ. ಬೆಂಗಳೂರಿಗೆ ಸಿಎಂ ಬಂದರೂ ಸಿದ್ದರಾಮಯ್ಯ ಅವರು ಅಜ್ಞಾತ ಸ್ಥಳದಲ್ಲಿಯೇ ಉಳಿದುಕೊಂಡು ಅತೃಪ್ತ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಮಾಜಿ ಸಿಎಂ ಫುಲ್ ಗರಂ:
    ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಶಾಸಕರ ಜೊತೆ ಸಭೆ ಮುಗಿಸಿ ಹೊರ ಬಂದರು. ಈ ವೇಳೆ ಮುಂಬೈನಲ್ಲಿ ಅತೃಪ್ತರ ಸುದ್ದಿಗೋಷ್ಠಿಯ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದರು. ಮಾಧ್ಯಮಗಳ ವಿರುದ್ಧ ಫುಲ್ ಗರಂ ಆದ ಅವರು, ನಾನು ಮಾತನಾಡಲ್ಲ ಹೋಗ್ರಿ ಎಂದು ಲೋಗೋ ತಳ್ಳಿ ನಡೆದರು.