Tag: ಹೆಬ್ಬಾಳ ಫ್ಲೈಓವರ್

  • ಬಿಜೆಪಿಯವ್ರು ರಾಜಕೀಯಕ್ಕಾಗಿ ಧರ್ಮಸ್ಥಳದ ಹೆಸರು ಬಳಕೆ ಮಾಡ್ತಿದ್ದಾರೆ – ಡಿಕೆಶಿ

    ಬಿಜೆಪಿಯವ್ರು ರಾಜಕೀಯಕ್ಕಾಗಿ ಧರ್ಮಸ್ಥಳದ ಹೆಸರು ಬಳಕೆ ಮಾಡ್ತಿದ್ದಾರೆ – ಡಿಕೆಶಿ

    ಬೆಂಗಳೂರು: ರಾಜಕೀಯದಲ್ಲಿ ಧರ್ಮವಿರಬೇಕೆ ಹೊರತು ಧರ್ಮದಲ್ಲಿ ರಾಜಕಾರಣವಿರಬಾರದು. ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ರಾಜಕೀಯಕ್ಕೆ ಧರ್ಮಸ್ಥಳವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.ಇದನ್ನೂ ಓದಿ: ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಕಾರ್ಡ್ ಪರಿಷ್ಕರಣೆ: ಮುನಿಯಪ್ಪ

    ಕೆ.ಆರ್ ಪುರದಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ವಿಸ್ತರಿತ ಮೇಲ್ಸೆತುವೆಯನ್ನು ಸೋಮವಾರ (ಇಂದು) ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು. ರಾಜಕೀಯದಲ್ಲಿ ಧರ್ಮವಿರಬೇಕೆ ಹೊರತು ಧರ್ಮದಲ್ಲಿ ರಾಜಕಾರಣವಿರಬಾರದು. ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ರಾಜಕೀಯಕ್ಕೆ ಧರ್ಮ ಬಳಸಿಕೊಳ್ಳುತ್ತಿದ್ದಾರೆ. ಎಸ್‌ಐಟಿ ಸರ್ಕಾರಕ್ಕೆ ವರದಿ ಸಲ್ಲಿಸುವ ಬಗ್ಗೆ ಗೃಹ ಸಚಿವರು ಉತ್ತರಿಸುತ್ತಾರೆ ಎಂದರು.

    ಇನ್ನೂ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಈ ಫ್ಲೈಓವರ್ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಪ್ಲಾನ್ ಆಗಿತ್ತು. ಕಾರ್ಯರೂಪಕ್ಕೆ ಬಂದಿರಲಿಲ್ಲ. ನಾನು ಬಂದ ಮೇಲೆ ಹಣ ಕೊಟ್ಟು, ಅನುಮತಿ ನೀಡಿದೆ. 180 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್ ಮಾಡಲಾಗಿದೆ. ಇನ್ನೊಂದು ಜಂಕ್ಷನ್ ರೋಡ್ ಮಾಡಲಾಗುತ್ತದೆ. 6 ಲೇನ್ ನವೆಂಬರ್ ಒಳಗೆ ಆಗುತ್ತದೆ. 3 ತಿಂಗಳಲ್ಲಿ ಇನ್ನೊಂದು ಲೂಪ್ ಬರಲಿದೆ. ಎಸ್ಟಿಮ್ ಮಾಲ್‌ನಿಂದ ಒಂದೂವರೆ ಕಿ.ಮೀ ತನಕ ಟನಲ್ ಮಾಡಲಾಗುತ್ತದೆ. ಎಮೆರ್ಜೆನ್ಸಿಗೆ ಇದರ ಬಳಕೆಯಾಗುತ್ತದೆ. ಏರ್ಪೋರ್ಟ್ನಿಂದ ಬರುವವರಿಗೆ ಅನುಕೂಲವಾಗಲಿದೆ. ಟನಲ್ ಯೋಜನೆಗೆ ಹೊಸ ಟೆಂಡರ್ ಸದ್ಯದಲ್ಲಿಯೇ ಶುರುವಾಗುತ್ತದೆ ಎಂದು ಹೇಳಿದ್ದಾರೆ. ಉದ್ಘಾಟನೆ ವೇಳೆ ನಟಿ ರಮ್ಯಾ, ಸಚಿವ ಬೈರತಿ ಸುರೇಶ್ ಭಾಗಿಯಾಗಿದ್ದರು.ಇದನ್ನೂ ಓದಿ: ಪಶ್ಚಿಮ ಬಂಗಾಳ | ಶಾಲೆಯ ಬಳಿಯೇ ಬಾಂಬ್‌ ಸ್ಫೋಟ – ಓರ್ವ ಸಾವು

  • ಹೆಬ್ಬಾಳ ಫ್ಲೈಓವರ್ ಉದ್ಘಾಟಿಸಿದ ಡಿಸಿಎಂ – ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ಓಡಿಸಿದ ಸ್ಟೈಲ್ ನೋಡಿ

    ಹೆಬ್ಬಾಳ ಫ್ಲೈಓವರ್ ಉದ್ಘಾಟಿಸಿದ ಡಿಸಿಎಂ – ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ಓಡಿಸಿದ ಸ್ಟೈಲ್ ನೋಡಿ

    ಬೆಂಗಳೂರು: ಕೆ.ಆರ್ ಪುರದಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ವಿಸ್ತರಿತ ಮೇಲ್ಸೆತುವೆಯನ್ನು (Hebbal Flyover) ಸೋಮವಾರ (ಇಂದು) ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಉದ್ಘಾಟಿಸಿದರು.

    700 ಮೀ. ಉದ್ದದ ಕೆ.ಆರ್ ಪುರನಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಈ ಫ್ಲೈಓವರ್ ಆರಂಭ ಸ್ಥಳದಲ್ಲಿ ಡಿಕೆಶಿ ಉದ್ಘಾಟಸಿದರು. ಫ್ಲೈಓವರ್ ಅಂತ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿಸದ್ದಾರೆ. ಬಳಿಕ ಹೊಸ ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ರೈಡ್ ಮಾಡಿ ಖುಷಿಪಟ್ಟರು. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

    ಇತ್ತೀಚೆಗೆ ಡಿಸಿಎಂ ಬೈಕ್ ಓಡಿಸಿ ಫ್ಲೈಓವರ್ ವೀಕ್ಷಣೆ ಮಾಡಿದ್ದರು, ಈ ವೇಳೆ ದಂಡ ಬಾಕಿಯಿರುವ ಬೈಕ್ ಓಡಿಸಿರೋದಾಗಿ ಬಿಜೆಪಿ ಕಾಲೆಳೆದಿತ್ತು. ಹಾಗಾಗಿ ಕಳೆದ ಬಾರಿಯ ಎಡವಟ್ಟು ಮರು ಕಳಿಸದಂತೆ ಎಚ್ಚರವಹಿಸಿ, ತನ್ನ ಪ್ರೀತಿಯ Yezdi ಬೈಕ್ ತರಿಸಿಕೊಂಡು, ಹೊಸ ಹೆಲ್ಮಟ್ ಖರೀದಿ ಮಾಡಿ ಬೈಕ್ ಓಡಿಸಿದರು. ಇದನ್ನೂ ಓದಿ: Video Viral | ಯೋಧನನ್ನ ಕಂಬಕ್ಕೆ ಕಟ್ಟಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ; ನಾಲ್ವರು ಅರೆಸ್ಟ್‌

    ನಂತರ ಮಾತನಾಡಿ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಈ ಫ್ಲೈಓವರ್ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಪ್ಲಾನ್ ಆಗಿತ್ತು. ಕಾರ್ಯರೂಪಕ್ಕೆ ಬಂದಿರಲಿಲ್ಲ. ನಾನು ಬಂದ ಮೇಲೆ ಹಣ ಕೊಟ್ಟು, ಅನುಮತಿ ನೀಡಿದೆ. 80 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್ ಮಾಡಲಾಗಿದೆ. ಇನ್ನೊಂದು ಜಂಕ್ಷನ್ ರೋಡ್ ಮಾಡಲಾಗುತ್ತದೆ. 6 ಲೇನ್ ನವೆಂಬರ್ ಒಳಗೆ ಆಗುತ್ತದೆ. 3 ತಿಂಗಳಲ್ಲಿ ಇನ್ನೊಂದು ಲೂಪ್ ಬರಲಿದೆ. ಎಸ್ಟಿಮ್ ಮಾಲ್‌ನಿಂದ ಒಂದೂವರೆ ಕಿ.ಮೀ ತನಕ ಟನಲ್ ಮಾಡಲಾಗುತ್ತದೆ. ಎಮೆರ್ಜೆನ್ಸಿಗೆ ಇದರ ಬಳಕೆಯಾಗುತ್ತದೆ. ಏರ್ಪೋರ್ಟ್ನಿಂದ ಬರುವವರಿಗೆ ಅನುಕೂಲವಾಗಲಿದೆ. ಟನಲ್ ಯೋಜನೆಗೆ ಹೊಸ ಟೆಂಡರ್ ಸದ್ಯದಲ್ಲಿಯೇ ಶುರುವಾಗುತ್ತದೆ ಹೇಳಿದ್ದಾರೆ.

    ಉದ್ಘಾಟನೆ ವೇಳೆ ಸಚಿವ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಬಿ.ಡಿ.ಎ ಅಧ್ಯಕ್ಷ, ಶಾಸಕ ಎನ್ ಎ ಹ್ಯಾರಿಸ್, ಮಾಜಿ ಸಂಸದೆ, ನಟಿ ರಮ್ಯಾ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿ.ಡಿ.ಎ. ಕಮಿಷನರ್ ಮಣಿವಣ್ಣನ್, ಬಿಬಿಎಂಪಿ ಮುಖ್ಯ ಆಯುಕ್ತ ಡಾ ಮಹೇಶ್ವರರಾವ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.

  • ಟ್ರಾಫಿಕ್‌ ಸಮಸ್ಯೆಗೆ ಕೊನೆಗೂ ಮುಕ್ತಿ – 700 ಮೀಟರ್ ಉದ್ದದ ಹೆಬ್ಬಾಳ ಮೇಲ್ಸೇತುವೆ ಇಂದು ಉದ್ಘಾಟನೆ

    ಟ್ರಾಫಿಕ್‌ ಸಮಸ್ಯೆಗೆ ಕೊನೆಗೂ ಮುಕ್ತಿ – 700 ಮೀಟರ್ ಉದ್ದದ ಹೆಬ್ಬಾಳ ಮೇಲ್ಸೇತುವೆ ಇಂದು ಉದ್ಘಾಟನೆ

    ಬೆಂಗಳೂರು: ಇಲ್ಲಿನ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗ್ತಿದೆ. ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ (Hebbal Flyover) ಇಂದು ಉದ್ಘಾಟನೆ ಆಗ್ತಿದೆ. ಇಂದು ಬೆಳ್ಳಗ್ಗೆ 10.30ರ ವೇಳೆಗೆ ಸಿಎಂ, ಡಿಸಿಎಂ ಸಾರ್ವಜನಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

    ಬಿಡಿಎ ಕಳೆದ 2 ವರ್ಷಗಳಿಂದ ಹೆಬ್ಬಾಳ ವಿಸ್ತರಿತ ಫ್ಲೈ ಓವರ್ ಕಾಮಗಾರಿ ನಡೆಸುತ್ತಾ ಇತ್ತು ಇದರ ಕಾಮಗಾರಿ ಪೂರ್ಣಗೊಂಡಿದೆ. ಇಂದು ಹೆಬ್ಬಾಳ ಪ್ಲೈ ಓವರ್ ಉದ್ಘಾಟನೆ ಮಾಡಲಾಗ್ತಿದೆ. ಉದ್ಘಾಟನೆಗೆ ಸಿದ್ಧತೆ ಆಗಿದ್ದು ಫ್ಲೈಓವರ್‌ಗೆ ಹೂವಿನ ಹಾರ ಹಾಕಿ ಸಿಂಗಾರ ಮಾಡಲಾಗಿದೆ. 700 ಮೀಟರ್ ಉದ್ದದ ಈ ಫ್ಲೈ ಓವರ್‌ನಿಂದ ಕೆ.ಆರ್ ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಸಾಗಲಿದೆ.

    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Airport) ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವುದಕ್ಕೆ ದ್ವಿಪಥ ರಸ್ತೆ ಮಾತ್ರ ಇದ್ದು. ಕೆ.ಆರ್ ಪುರ ಕಡೆಯಿಂದ ಬರುವ ರಸ್ತೆ ಇದನ್ನ ಸೇರಿಕೊಳ್ಳುತ್ತದೆ. ವಿಮಾನ ನಿಲ್ದಾಣ ಕಡೆಯಿಂದ ನಗರದ ಕಡೆಗೆ ಪ್ರಯಾಣಿಸುವ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಸಂಚಾರ ದಟ್ಟಣೆ ನಿವಾರಿಸಲು ಹೆಬ್ಬಾಳ ಫ್ಲೈಓವರ್ ಬಳ್ಳಾರಿ ರಸ್ತೆ, ವಿಮಾನ ನಿಲ್ದಾಣ ಮತ್ತು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ. ಫ್ಲೈ ಓವರ್ ಸಂಚಾರಕ್ಕೆ ಮುಕ್ತಗೊಂಡ ನಂತರ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ.

    ಇನ್ನೂ ಹೆಬ್ಬಾಳ ಫ್ಲೈಓವರ್ ಉದ್ಘಾಟನೆಗೆ ಸಾರ್ವಜನಿಕರು ಖುಷಿ ವ್ಯಕ್ತಪಡಿಸುತ್ತಾ ಇದ್ದಾರೆ. ಆದರೆ ಪ್ಲೈ ಓವರ್ ನಿಂದ ಬಂದ ವಾಹನಗಳು ಮೇಖ್ರೀ ಸರ್ಕಲ್ ಕಡೆಗೆ ಹೋಗೋದಕ್ಕೆ ಇಲ್ಲಿ ಬಂದು ನಿಲುಗಡೆ ಆಗ್ತಾವೆ ಮೇಖ್ರೀ ಸರ್ಕಲ್ ಉದ್ದಕ್ಕೂ ಮತ್ತೆ ಟ್ರಾಫಿಕ್ ಜಾಮ್ ಅಗುತ್ತೆ ಅಂತಾರೆ ವಾಹನ ಸವಾರರು.

    ಒಟ್ಟಾರೆ ಹೆಬ್ಬಾಳ ವಿಸ್ತರಿತ ಫ್ಲೈ ಓವರ್ ಇಂದು ಉದ್ಘಾಟನೆ ಆಗ್ತಾ ಇದ್ದು ಹೆಬ್ಬಾಳ ಸುತ್ತಮುತ್ತ, ಏರ್ ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಗಲಿದೆ.

  • ನಾಳೆ ಹೆಬ್ಬಾಳ ಫ್ಲೈಓವರ್ ಉದ್ಘಾಟನೆಗೆ ಭರ್ಜರಿ ಸಿದ್ಧತೆ

    ನಾಳೆ ಹೆಬ್ಬಾಳ ಫ್ಲೈಓವರ್ ಉದ್ಘಾಟನೆಗೆ ಭರ್ಜರಿ ಸಿದ್ಧತೆ

    – ಸಿಎಂ, ಡಿಸಿಎಂ ರಿಂದ ಉದ್ಘಾಟನೆ

    ಬೆಂಗಳೂರು: ಹೆಬ್ಬಾಳ ವಿಸ್ತರಿತ ಫ್ಲೈಓವರ್ (Hebbal Flyover) ಅನ್ನು ನಾಳೆ (ಆ.18) ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಉದ್ಘಾಟಿಸಲಿದ್ದಾರೆ.

    700 ಮೀಟರ್ ಉದ್ದದ ಹೆಬ್ಬಾಳ ಪ್ಲೈ ಓವರ್ ಸುಮಾರು 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಫ್ಲೈಓವರ್ ಕೆ.ಆರ್ ಪುರಂ (KR Puram) ಕಡೆಯಿಂದ ಮೇಖ್ರೀ ಸರ್ಕಲ್‌ವರೆಗೆ (Mekhri Circle) ನಿರ್ಮಾಣ ಮಾಡಲಾಗಿದೆ. ಇದರ ಕಾಮಗಾರಿಯು 2023ರಲ್ಲಿ ಆರಂಭ ಆಗಿದ್ದು, ಒಂದೂವರೆ ವರ್ಷಗಳ ಬಳಿಕ ಫ್ಲೈಓವರ್ ಕಾರ್ಯ ಪೂರ್ಣಗೊಂಡಿದೆ. ಇದನ್ನೂ ಓದಿ: ದರ್ಶನ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ – ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

    ನಾಳೆ ಬೆಳಗ್ಗೆ 9 ಗಂಟೆಗೆ ಫೈಓವರ್ ಉದ್ಘಾಟನೆ ಆಗಲಿದ್ದು, ಇದೀಗ ಉದ್ಘಾಟನೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಸಿಬ್ಬಂದಿ ಫ್ಲೈಓವರ್ ರ‍್ಯಾಂಪ್‌ಗೆ ಹೂವುಗಳ ಸರಮಾಲೆ ಹಾಕಿ ಸಿದ್ಧತೆ ಮಾಡುತ್ತಿದ್ದಾರೆ. ಈ ಫ್ಲೈಓವರ್‌ನಿಂದ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ.

  • 6-7 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ ಅಗಲೀಕರಣ ಪೂರ್ಣ: ಕೃಷ್ಣಬೈರೇಗೌಡ

    6-7 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ ಅಗಲೀಕರಣ ಪೂರ್ಣ: ಕೃಷ್ಣಬೈರೇಗೌಡ

    ಬೆಂಗಳೂರು: ಮುಂದಿನ 6-7 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ (Hebbala Flyover) ಅಗಲೀಕರಣ ಕಾರ್ಯ ಮುಕ್ತಾಯವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದರು.

    ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಒಂದೂವರೆ ವರ್ಷದಿಂದ ಕೆಲಸ ನಡೆಯುತ್ತಿದೆ. 6-7 ತಿಂಗಳಲ್ಲಿ ಮುಗಿಸೋದಾಗಿ ಹೇಳಿದರು. ಬಿಜೆಪಿ ಇದ್ದಾಗ 4 ವರ್ಷ ನಯಾಪೈಸಾ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಹೆಬ್ಬಾಳ ಫ್ಲೈಓವರ್ ಕೆಲಸ ವೇಗವಾಗಿ ಮಾಡುತ್ತಿದ್ದೇವೆ. ಕಳೆದ ಒಂದು ವರ್ಷದಲ್ಲಿ ಅಗಲೀಕರಣ ವೇಗವಾಗಿ ನಡೆದಿದೆ. ಇಂದು ಕೂಡ ನಡೆಯುತ್ತಿದೆ. 6-7 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ ಅಗಲೀಕರಣ ಮುಕ್ತಾಯವಾಗುತ್ತದೆ ಎಂದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗ್ಯಾರಂಟಿಗಳ ಪರಿಷ್ಕರಣೆ ಆಗಲ್ಲ: ಬಸವರಾಜ ರಾಯರೆಡ್ಡಿ

    ಬಿಜೆಪಿ ಕೆಲಸ ಮಾಡಲಿಲ್ಲ. ನಾವು ಮಾತು ಕೊಟ್ಟಂತೆ ಕೆಲಸ ಮಾಡುತ್ತಿದ್ದೇವೆ. ಡಿಸಿಎಂ ಕೆಲಸ ಶುರು ಮಾಡಿಸಿದ್ದಾರೆ. ನಮ್ಮ ಮಾತಿನ ಮೇಲೆ ನನ್ನ ಜವಾಬ್ದಾರಿ ಇದೆ ಎಂದು ಬಿಜೆಪಿಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ಸಕಲೇಶಪುರದಲ್ಲಿ ಹಳಿ ಮೇಲೆ ಮತ್ತೆ ಭೂಕುಸಿತ – ರೈಲು ಸಂಚಾರ ಮತ್ತೆ ಸ್ಥಗಿತ