Tag: ಹೆಬ್ಬಾಳ

  • ಹೆಬ್ಬಾಳ ಟನಲ್ ಡಿಪಿಆರ್‌ನಲ್ಲಿ ಲೋಪದೋಷ ಪತ್ತೆ – 1 ತಿಂಗಳ ಹಿಂದೆಯೇ ನ್ಯೂನತೆ ತಿಳಿಸಿದ್ದೆ: ಪಿಸಿ ಮೋಹನ್‌

    ಹೆಬ್ಬಾಳ ಟನಲ್ ಡಿಪಿಆರ್‌ನಲ್ಲಿ ಲೋಪದೋಷ ಪತ್ತೆ – 1 ತಿಂಗಳ ಹಿಂದೆಯೇ ನ್ಯೂನತೆ ತಿಳಿಸಿದ್ದೆ: ಪಿಸಿ ಮೋಹನ್‌

    ಬೆಂಗಳೂರು: ಡಿಪಿಆರ್ (DPR) ಅಧ್ಯಯನಕ್ಕಾಗಿ ಸರ್ಕಾರವೇ ರಚಿಸಿದ ಸಮಿತಿ ಇದೀಗ ಡಿಪಿಆರ್‌ನಲ್ಲಿ ಲೋಪದೋಷಗಳನ್ನು ಪತ್ತೆಹಚ್ಚಿದ್ದನ್ನು ಪ್ರಶ್ನಿಸಿ ಸಂಸದ ಪಿಸಿ ಮೋಹನ್  (PC Mohan) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಟನಲ್ ಡಿಪಿಆರ್ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವೇ ನಗರಾಭಿವೃದ್ಧಿ ಇಲಾಖೆಯ ಐವರ ತಜ್ಞರ ಸಮಿತಿ ರಚನೆ ಮಾಡಿತ್ತು. ಈಗ ಆ ಸಮಿತಿಯೇ ಡಿಪಿಆರ್‌ನಲ್ಲಿ ಇರುವ ಲೋಪದೋಷಗಳನ್ನ ಪತ್ತೆಹಚ್ಚಿದೆ. ಈ ಕುರಿತು ಸಂಸದ ಪಿಸಿ ಮೋಹನ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಳೆದ ಒಂದು ತಿಂಗಳ ಹಿಂದೆ ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ಮಾರ್ಗದ ನ್ಯೂನತೆಗಳನ್ನ ಬಿಚ್ಚಿಟ್ಟಿದ್ದೆ. ಆದರೆ ಇದೀಗ ಸರ್ಕಾರ ರಚಿಸಿದ ತಜ್ಞರ ಸಮಿತಿಯೇ ಡಿಪಿಆರ್ ಲೋಪದೋಷಗಳನ್ನ ಪತ್ತೆ ಹಚ್ಚಿದೆ. ವರದಿಯಲ್ಲಿ ದುಬಾರಿ ವೆಚ್ಚ, ಅಸಮರ್ಪಕ, ಭೂ ಅವೈಜ್ಞಾನಿಕ ವಿಚಾರವಾಗಿ ತಜ್ಞರು ಉಲ್ಲೇಖಿಸಿದ್ದಾರೆ ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ.ಇದನ್ನೂ ಓದಿ:ಡಿಕೆಶಿ ಕನಸಿನ ಕೂಸು ಟನಲ್‌ ರಸ್ತೆ ಯೋಜನೆಗೆ ವಿಘ್ನ – ಡಿಪಿಆರ್‌ನಲ್ಲಿ ಲೋಪದೋಷ ಪತ್ತೆ

    ತರಾತುರಿಯಲ್ಲಿ ಡಿಪಿಆರ್ ತಯಾರಿಕೆ ಮಾಡಿದ್ದಾರೆ ಎಂದು ಹೇಳಿರುವ ಸಮಿತಿ ಟನಲ್ ದೊಡ್ಡ ಯೋಜನೆ ಕೇವಲ 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಮಾಡಲಾಗಿದೆ. ಇದು ಸಾಕಾಗಲ್ಲ ಎಂದು ತಿಳಿಸಿದೆ. ಹೆಬ್ಬಾಳ – ಸಿಲ್ಕ್ ಬೋರ್ಡ್ಗೆ ರೆಡ್‌ಲೈನ್ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಏಕೆ? ಲಾಲ್ ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ ಅಂತಲೂ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

    ಟನಲ್ ಡಿಪಿಆರ್‌ನಲ್ಲಿ ಲೋಪದೋಷ – ತಜ್ಞರ ವರದಿಯಲ್ಲೇನಿದೆ?
    * ಟನಲ್ ದೊಡ್ಡ ಯೋಜನೆ, 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಸಾಕಾಗಲ್ಲ
    * ಹೆಬ್ಬಾಳ-ಸಿಲ್ಕ್ ಬೋರ್ಡ್ಗೆ ರೆಡ್‌ಲೈನ್ ಮೆಟ್ರೋ ಇದ್ರೆ ಟನಲ್ ಏಕೆ..?
    * ಲಾಲ್‌ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ..?
    * ಪೀಕ್ ಅವರ್ ಟ್ರಾಫಿಕ್ ಗಣನೆಗೆ ತೆಗೆದುಕೊಂಡಿಲ್ಲ
    * ಕನಿಷ್ಠ 25 ವರ್ಷಕ್ಕೆ ಯೋಜನೆ ರೂಪಿಸಬೇಕು, 10 ವರ್ಷಕ್ಕಲ್ಲ
    * ಪಾದಚಾರಿ, ಒಳಚರಂಡಿ, ನೈಸರ್ಗಿಕ ವಿಪತ್ತು ನಿರ್ವಹಣೆ ಬಗ್ಗೆ ಉಲ್ಲೇಖ
    * ಬಿಎಂಟಿಸಿ, ಮೆಟ್ರೋ, ಉಪನಗರ ರೈಲುಗಳಿಗೆ ಅನಾನುಕೂಲದ ಮಾಹಿತಿ ಇಲ್ಲ
    * ಸುರಂಗ ರಸ್ತೆ, ಪರಿಸರ ಕಾಳಜಿ, ಸಾರಿಗೆ ವ್ಯವಸ್ಥೆ ನಿರ್ವಹಣೆ ಉಲ್ಲೇಖಿಸಿಲ್ಲ
    * ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಜಿಬಿಎಯಿಂದ ಡಿಪಿಆರ್
    * ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಪರಿಶೀಲನೆ ನಡೆಸಿಲ್ಲ.

    ಏನಿದು ಯೋಜನೆ?
    ಹೆಬ್ಬಾಳದಿಂದ-ಸಿಲ್ಕ್ ಬೋರ್ಡ್ ವರೆಗೆ 18 ಸಾವಿರ ಕೋಟಿ ರೂ. ವೆಚ್ಚದಲ್ಲಿ 19 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಡಿಪಿಆರ್ ಕೂಡ ರಚನೆ ಮಾಡಲಾಗಿದೆ. ಸುರಂಗ ಮಾರ್ಗದಿಂದ ಲಾಲ್‌ಬಾಗ್‌ಗೂ ಹಾನಿಯಾಗುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕರ ವಿರೋಧ, ಡಿಪಿಆರ್ ಲೋಪದೋಷಗಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ ತಜ್ಞರ ಸಮಿತಿ.ಇದನ್ನೂ ಓದಿ:ಡಿಕೆಶಿ ಕನಸಿನ ಟನಲ್‌ ರೋಡ್‌ ಡಿಪಿಆರ್‌ನಲ್ಲಿ ಲೋಪದೋಷ!

  • ಸಕಲ ಸರ್ಕಾರಿ ಗೌರವಗಳೊಂದಿಗೆ ಟಿಜೆಎಸ್‌ ಜಾರ್ಜ್‌ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವಗಳೊಂದಿಗೆ ಟಿಜೆಎಸ್‌ ಜಾರ್ಜ್‌ ಅಂತ್ಯಕ್ರಿಯೆ

    ಬೆಂಗಳೂರು: ಪದ್ಮಭೂಷಣ ಪುರಸ್ಕೃತ, ಭಾರತೀಯ ಪತ್ರಿಕೋದ್ಯಮ ಭೀಷ್ಮ ಟಿಜೆಎಸ್ ಜಾರ್ಜ್ (TJS George) ಅವರ ಅಂತ್ಯಕ್ರಿಯೆ ಬೆಂಗಳೂರಿನ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

    ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಚಿತಾಗಾರಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ಟಿಜೆಎಸ್ ಗೌರವಾರ್ಥವಾಗಿ ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಗೌರವ ಸಲ್ಲಿಸಲಾಯ್ತು. ಮೂರು ಸುತ್ತು ಗಾಳಿಯಲ್ಲಿ ಗುಂಡುಹಾರಿಸಿ ಪೊಲೀಸರು ಗೌರವ ಸಲ್ಲಿಸಿದರು. ಇದನ್ನೂ ಓದಿ:  ಮುಖ್ಯಮಂತ್ರಿ ಭೇಟಿಯಾದ ಫಾಕ್ಸ್‌ಕಾನ್‌ ಮುಖ್ಯಸ್ಥ ರಾಬರ್ಟ್‌ ವೂ

    ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಸೇರಿದಂತೆ, ಹಲವಾರು ಗಣ್ಯರು ಅಂತ್ಯಕ್ರಿಯೆಲ್ಲಿ ಭಾಗಿಯಾಗಿ ಟಿಜೆಎಸ್ ಜಾರ್ಜ್ ಅವರಿಗೆ ಗೌರವ ನಮನ ಸಲ್ಲಿಸಿದರು.

  • ಹೆಬ್ಬಾಳದ ಪಶು ವಿವಿ ಆವರಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ – ಸ್ಥಳ ಪರಿಶೀಲಿಸಿದ ಬೈರತಿ ಸುರೇಶ್

    ಹೆಬ್ಬಾಳದ ಪಶು ವಿವಿ ಆವರಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ – ಸ್ಥಳ ಪರಿಶೀಲಿಸಿದ ಬೈರತಿ ಸುರೇಶ್

    ಸದ್ಯದಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ

    ಬೆಂಗಳೂರು: ಹೆಬ್ಬಾಳ (Hebbal) ವಿಧಾನಸಭಾ ಕ್ಷೇತ್ರದ ನಾಗರಿಕರಿಗಾಗಿ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi Speciality Hospital) ನಿರ್ಮಾಣವಾಗಲಿದೆ. ಕ್ಷೇತ್ರದ ಶಾಸಕರು, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ (Byrathi Suresh) ಅವರು ಸೋಮವಾರ (ಸೆ.1) ಆವರಣದಲ್ಲಿ ಆಸ್ಪತ್ರೆಗೆ ನಿಗದಿಪಡಿಸಿರುವ ಜಾಗದ ಪರಿಶೀಲನೆ ನಡೆಸಿದರು.

    ಕಳೆದ ಹಲವು ದಶಕಗಳಿಂದಲೂ ಕ್ಷೇತ್ರಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಬೇಕೆಂಬ ಬೇಡಿಕೆ ಹೆಬ್ಬಾಳದ ನಾಗರಿಕರದ್ದಾಗಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಬಳಿ ಚರ್ಚಿಸಿ ಸಭೆಗಳನ್ನೂ ನಡೆಸಲಾಗಿತ್ತು. ಕ್ಷೇತ್ರದ ಅಗತ್ಯತೆಯನ್ನು ಮನಗಂಡ ಮುಖ್ಯಮಂತ್ರಿಗಳು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು 200 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.ಇದನ್ನೂ ಓದಿ: ಭಾರೀ ಭ್ರಷ್ಟಾಚಾರ ಆರೋಪ – ಆನೇಕಲ್‌ ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ

    ಕ್ಷೇತ್ರದ ಪ್ರತಿಯೊಬ್ಬ ಬಡ ಜನರಿಗೆ ಸುಲಭ ಮತ್ತು ಉಚಿತವಾಗಿ ಚಿಕಿತ್ಸೆ ದೊರೆಯಬೇಕೆಂಬುದು ಸರ್ಕಾರದ ಆಶಯವಾಗಿದೆ. ಇಲ್ಲಿನ ಜನರು ಹೆಚ್ಚಿನ ಚಿಕಿತ್ಸೆಗಾಗಿ ಕಿದ್ವಾಯಿ, ಜಯದೇವದಂತಹ ದೂರವಿರುವ ಹಲವಾರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

    ಶೀಘ್ರದಲ್ಲೇ ಶಿಲಾನ್ಯಾಸ:
    ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಆವರಣದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಎಲ್ಲಾ ವರ್ಗದ ಜನರಿಗೆ ಈ ಜಾಗ ಹತ್ತಿರವಾಗಲಿದೆ. ಈ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸದ್ಯದಲ್ಲೇ ಶಿಲಾನ್ಯಾಸ ನೆರವೇರಲಿದ್ದು, ಹಂತಹಂತವಾಗಿ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಅತ್ಯುತ್ತಮ ಗುಣಮಟ್ಟದಲ್ಲಿ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಯಾವುದೇ ಲೋಪವಾಗದ ರೀತಿಯಲ್ಲಿ ಕಾಮಗಾರಿಯನ್ನು ಕೈಗೊಂಡು ರಾಜ್ಯದಲ್ಲಿ ಅತ್ಯುತ್ತಮ ಮತ್ತು ಉತ್ಕೃಷ್ಟ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಏನೆಲ್ಲಾ ಸೌಲಭ್ಯ?
    ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಯಂತ್ರೋಪಕರಣಗಳು, ಡಯಾಲಿಸಿಸ್, ಹೃದ್ರೋಗ, ಮಹಿಳಾ ಮತ್ತು ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ, ತಜ್ಞ ವೈದ್ಯರು ಮತ್ತು ಶುಶ್ರೂಕರ ತಂಡ ಸೇರಿದಂತೆ ಹತ್ತು ಹಲವಾರು ಚಿಕಿತ್ಸಾ ಸೌಲಭ್ಯಗಳು ಕ್ಷೇತ್ರದ ಜನತೆಗೆ ದೊರೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ತೀವ್ರ ಮಳೆಯಿಂದಾಗಿ ಮಲೆನಾಡಾದ ರಾಯಚೂರು – ವೈರಲ್ ಫೀವರ್ ಪ್ರಮಾಣ ಹೆಚ್ಚಳ

  • ಆವತ್ತು ಸೈಕಲ್; ಇವತ್ತು ಸ್ಕೂಟರ್ – ಹೊಸ ಫ್ಲೈಓವರ್ ಮೇಲೆ ಡಿಕೆಶಿ ಸ್ಕೂಟರ್ ಸವಾರಿ

    ಆವತ್ತು ಸೈಕಲ್; ಇವತ್ತು ಸ್ಕೂಟರ್ – ಹೊಸ ಫ್ಲೈಓವರ್ ಮೇಲೆ ಡಿಕೆಶಿ ಸ್ಕೂಟರ್ ಸವಾರಿ

    ಬೆಂಗಳೂರು: ಆವತ್ತು ಸೈಕಲ್ಲು, ಇವತ್ತು ಸ್ಕೂಟರು. ಡಿಸಿಎಂ ಡಿಕೆಶಿ (DK Shivakumar) ವಿಧಾನಸೌಧದಲ್ಲಿ ಸೈಕಲ್ ತುಳಿದು ಗಮನ ಸೆಳೆದಿದ್ದರು. ಇಂದು ಹೆಬ್ಬಾಳದ ಹೊಸ ಮೇಲ್ಸೇತುವೆ (Hebbal Flyover) ಮೇಲೆ ಸ್ಕೂಟರ್ ಓಡಿಸಿ ಗಮನ ಸೆಳೆದರು.

    ಇಂದು ಬೆಳಗ್ಗೆ ಹೆಬ್ಬಾಳ ಬಳಿ ಬಿಡಿಎ ವತಿಯಿಂದ ನಿರ್ಮಿಸುತ್ತಿರುವ ಹೊಸ ಮೇಲ್ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು. ಬಳಿಕ ಹೊಸ ಫ್ಲೈಓವರ್ ಮೇಲೆಯೇ ಡಿಕೆಶಿ ಸ್ಕೂಟರ್ ರೈಡ್ ಮಾಡಿ ಖುಷಿ ಪಟ್ಟರು. ಡಿಕೆಶಿಯವರು ಈ ವೇಳೆ ಕಾರ್ಯಕರ್ತರೊಬ್ಬರ ಡಿಯೋ ಸ್ಕೂಟರ್ ಅನ್ನು ತಾವೇ ಓಡಿಸಿಕೊಂಡು ಹೊಸ ಫ್ಲೈಓವರ್ ಮೇಲೆ ಒಂದು ರೌಂಡ್ ಹೋಗಿ ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ ಖಚಿತ – ಬಿಜೆಪಿ ಕಾರ್ಯಕರ್ತರ ಸಮಾವೇಶ, ರೋಡ್ ಶೋಗೆ ಕೊಕ್

    ಇನ್ನು ಡಿಕೆಶಿ ಹಿಂದೆಯೇ ಶಾಸಕ ಎನ್‌ಎ ಹ್ಯಾರೀಸ್ ಕೂಡಾ ಸ್ಕೂಟರ್‌ನಲ್ಲಿ ರೌಂಡ್ ಹೊಡೆದರು. ಡಿಕೆಶಿ ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸಿದ್ರೆ, ಹೆಲ್ಮೆಟ್ ಹಾಕದೇ ಹ್ಯಾರಿಸ್ ಗಾಡಿ ಓಡಿಸಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ: 11ನೇ ಪಾಯಿಂಟ್‌ನಲ್ಲಿ ಸಿಗಲಿಲ್ಲ ಕಳೇಬರ

  • ಬಿಎಂಟಿಸಿ ಬಸ್ಸು ಡಿಕ್ಕಿ- ದ್ವಿಚಕ್ರ ವಾಹನ ಸವಾರ ಸಾವು

    ಬಿಎಂಟಿಸಿ ಬಸ್ಸು ಡಿಕ್ಕಿ- ದ್ವಿಚಕ್ರ ವಾಹನ ಸವಾರ ಸಾವು

    ಬೆಂಗಳೂರು: ಬಿಎಂಟಿಸಿ ಬಸ್ (BMTC) ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಹೆಬ್ಬಾಳದ ರಿಂಗ್ ರಸ್ತೆಯಲ್ಲಿರುವ (Hebbala Ring Road) ಕಲ್ಯಾಣ ನಗರದ ಬಳಿ ನಡೆದಿದೆ.

    ಮೊಹಮ್ಮದ್ ಜಮೀರ್‌ ಮೃತ ದುರ್ದೈವಿ (40). ಸ್ಕೂಟರ್‌ನಲ್ಲಿ ಪತ್ನಿ, ಇಬ್ಬರು ಮಕ್ಕಳು ತೆರಳುತ್ತಿದ್ದಾಗ ಬಿಎಂಟಿಸಿ ಬಸ್ಸು ಡಿಕ್ಕಿ ಹೊಡೆದಿದೆ.

    ಪತ್ನಿ , ಮಕ್ಕಳಿಗೆ ಚಿಕ್ಕಪುಟ್ಟ ಗಾಯ, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ನಂ KA-51 AJ 8655 ನಿಂದ ಈ ಅಪಘಾತ ಸಂಭವಿಸಿದೆ.

  • Ramanagara | ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ – ಓರ್ವ ಸ್ಥಳದಲ್ಲೇ ಸಾವು

    Ramanagara | ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ – ಓರ್ವ ಸ್ಥಳದಲ್ಲೇ ಸಾವು

    – ನಾಲ್ವರ ಸ್ಥಿತಿ ಗಂಭೀರ

    ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ಪಾಂಡುಪುರ ಗ್ರಾಮದ ಸಮೀಪ ನಡೆದಿದೆ.

    ಬೆಂಗಳೂರಿನ (Bengaluru) ಹೆಬ್ಬಾಳ ಮೂಲದ ಮೋಹನ್ ಮೃತ ದುರ್ದೈವಿ. ಬೆಂಗಳೂರಿನಿಂದ ಕಬ್ಬಾಳು ದೇವಸ್ಥಾನಕ್ಕೆ ಐವರು ಸ್ನೇಹಿತರು ಬರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಇದನ್ನೂ ಓದಿ: ತಂಗಿ ಮದುವೆಗೆ ಬಂದಿದ್ದ ಅಣ್ಣನಿಗೆ ಸೇನೆಯಿಂದ ತುರ್ತು ಕರೆ – ಕರ್ತವ್ಯಕ್ಕೆ ಮರಳಿದ ಯೋಧ

    ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ರವಾನಿಸಿ ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

  • ಪತ್ನಿ ಆತ್ಮಹತ್ಯೆ; ಹಳೇ ಲವರ್ ಜೊತೆಗಿದ್ದ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡ ಟೆಕ್ಕಿ ಪತಿ

    ಪತ್ನಿ ಆತ್ಮಹತ್ಯೆ; ಹಳೇ ಲವರ್ ಜೊತೆಗಿದ್ದ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡ ಟೆಕ್ಕಿ ಪತಿ

    ಬೆಂಗಳೂರು: ಹಳೇ ಪ್ರಿಯತಮೆಯೊಂದಿಗೆ ಅಕ್ರಮ ಸಂಬಂಧವೇ ತನ್ನ ಪತ್ನಿ (Wife) ಆತ್ಮತ್ಯೆಗೆ ಕಾರಣ ಎಂದು ಟೆಕ್ಕಿ (Techie) ಬಶೀರ್ ಉಲ್ಲಾ ಕೊನೆಗೂ ಪೊಲೀಸರ ಎದುರು ಸತ್ಯ ಒಪ್ಪಿಕೊಂಡಿದ್ದಾರೆ.

    ಹೌದು. ಇತ್ತೀಚೆಗಷ್ಟೇ ತನ್ನ ಪತಿ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಗೃಹಿಣಿ ಬಾಹರ್ ಅಸ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳೆಯ ಪೋಷಕರು ಟೆಕ್ಕಿ ಪತಿ ಬಶೀರ್ ಉಲ್ಲಾ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆಂದು ಆರೋಪಿಸಿದ್ದರು. ಇದನ್ನೂ ಓದಿ: ಪತಿ ವಿರುದ್ಧ ಅಕ್ರಮ ಸಂಬಂಧ ಆರೋಪ – ಪತ್ನಿ ನೇಣಿಗೆ ಶರಣು

    ಪೊಲೀಸರು, ಟೆಕ್ಕಿ ಬಶೀರ್ ಉಲ್ಲಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಬಂಧನ ಮಾಡಿ ತನಿಖೆಗೆ ಒಳಪಡಿಸಿದ್ದರು. ಅಸ್ಮಾ ಸೂಸೈಡ್‌ಗೆ ಪ್ರೇರಣೆ ನೀಡಿದ್ದ ಆರೋಪದ ಮೇಲೆ ಆರೋಪಿ ಟೆಕ್ಕಿ ಬಶೀರ್ ಉಲ್ಲಾನನ್ನ ವಿಚಾರಣೆ ಮಾಡಿದಾಗ ಮಾಜಿ ಪ್ರಿಯತಮೆಯೊಂದಿಗೆ ಅಕ್ರಮ ಸಂಬಂಧ ಇದ್ದ ಬಗ್ಗೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಖಳನಟ ಶೇಷಗಿರಿ ಬಸವರಾಜು ವಿರುದ್ಧ ರೇಪ್ ಆರೋಪ ಪ್ರಕರಣ‌; ಬಿ-ರಿಪೋರ್ಟ್ ಸಲ್ಲಿಕೆ

    ನನಗೆ ಅಕ್ರಮ ಸಂಬಂಧ ಇತ್ತು. ಅದನ್ನು ಅವಳಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ ನಿತ್ಯ ನನ್ನ ಜೊತೆ ಗಲಾಟೆಗೆ ಮುಂದಾಗುತ್ತಾ ಇದ್ದಳು. ಆಕೆಯ ಗಲಾಟೆಗೆ ನಾನು ಕೇರ್ ಮಾಡದೇ ಇದ್ದುದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿ ಟೆಕ್ಕಿ ಬಶೀರ್ ಉಲ್ಲಾ ಪೊಲೀಸರ ಮುಂದೆ ತಪ್ಪೋಪ್ಪಿಕೊಂಡಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಮದ್ಯ ಖರೀದಿಗೆ ಹಣ ಕೊಡಲಿಲ್ಲ ಅಂತ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮಗ

    ಆರೋಪಿ ಬಶೀರ್ ಗೆ ಕಾಲೇಜು ದಿನಗಳಲ್ಲಿದ್ದ ಪ್ರಿಯತಮೆಗೆ ಮದುವೆ ಆಗಿದ ಬಳಿಕ ಸಂಪರ್ಕ ತಪ್ಪಿ ಹೋಗಿತ್ತು. ಆರೋಪಿ ಟೆಕ್ಕಿಗೆ ಮದುವೆ ಆದ ಬಳಿಕ ಪುನಃ ಮಾಜಿ ಪ್ರಿಯತಮೆಯ ಸಂಪರ್ಕಕ್ಕೆ ಸಿಕ್ಕಿದ್ದಳು. ಅಂದಿನಿಂದ ಹೆಂಡತಿಯನ್ನ ಕಡೆಗಣಿಸಿ ಆಕೆಯ ಜೊತೆ ಸಂಬಂಧ ಬೆಳೆಸಿಕೊಂಡಿದ್ದ ಬಗ್ಗೆ ಆರೋಪಿ ಹೆಬ್ಬಾಳ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

  • ರೈತರ ಹೊಟ್ಟು, ಮೇವಿನ ಬಣವೆಗೆ ಬೆಂಕಿ – ಕೃಷಿ ಸಲಕರಣೆಗಳು ಬೆಂಕಿಗಾಹುತಿ

    ರೈತರ ಹೊಟ್ಟು, ಮೇವಿನ ಬಣವೆಗೆ ಬೆಂಕಿ – ಕೃಷಿ ಸಲಕರಣೆಗಳು ಬೆಂಕಿಗಾಹುತಿ

    ಗದಗ: ರೈತರ ಹೊಟ್ಟು, ಮೇವಿನ ಬಣವೆಗಳು ಹಾಗೂ ಕೃಷಿ ಸಲಕರಣೆಗಳು ಬೆಂಕಿಗಾಹುತಿಯಾಗಿರುವ ಘಟನೆ ಶಿರಹಟ್ಟಿ (Shirahatti) ತಾಲೂಕಿನ ಹೆಬ್ಬಾಳ (Hebbal) ಗ್ರಾಮದಲ್ಲಿ ನಡೆದಿದೆ.

    ಸುಮಾರು 40ಕ್ಕೂ ಅಧಿಕ ಹೊಟ್ಟು, ಮೇವಿನ ಬಣವೆಗಳು ಬೆಂಕಿಗಾಹುತಿಯಾಗಿವೆ. ಕಿಡಿಗೇಡಿಗಳು ಬಣವೆಗೆ ಬೆಂಕಿ ಹಚ್ಚಿರುವ ಕುರಿತು ರೈತರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ – ಡಿವೈಎಸ್ಪಿ ಕನಕಲಕ್ಷ್ಮೀ ಬಂಧನ

    ಊರ ಹೊರವಲಯದ ಬಯಲು ಜಾಗದಲ್ಲಿ ಗ್ರಾಮದ ರೈತರು ಒಂದೇ ಕಡೆ 40ಕ್ಕೂ ಅಧಿಕ ಬಣವೆಗಳನ್ನು ಹಾಕಲಾಗಿತ್ತು. ಏಕಾಏಕಿ ಹತ್ತಾರು ಬಣವೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಬೆಂಕಿ ನಂದಿಸಲು ಮುಂದಾದರು. ಅಷ್ಟರಲ್ಲಾಗಲೇ ಬಣವೆಗಳು ಸುಟ್ಟು ಹೋಗಿದ್ದವು. ಅಗ್ನಿಶಾಮಕ ದಳ ಸಿಬ್ಬಂದಿಗಳು ತಡವಾಗಿ ಬಂದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ SCSP, TSP ಹಣ ಗ್ಯಾರೆಂಟಿಗೆ ಬಳಕೆ – ಕೋಲಾರ ಬಿಜೆಪಿ ಮುಖಂಡರಿಂದ ಖಂಡನೆ

    ರೈತರು ತಮ್ಮ ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಬೇಸಿಗೆ ಸಂದರ್ಭದಲ್ಲಿ ಹೊಟ್ಟು, ಮೇವು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ರೈತರ ಕೃಷಿ ಸಲಕರಣೆಗಳು ಸುಟ್ಟಿವೆ. ಲಕ್ಷಾಂತರ ರೂ. ಹಾನಿಯಾಗಿದ್ದು, ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ಮುದ್ದು ಸೊಸೆ’ಗೆ ತ್ರಿವಿಕ್ರಮ್ ಹೀರೋ

    ಈ ಘಟನೆ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಬೇರೆ ರೂಟ್‌ಗೆ ಕರೆದೊಯ್ದ ಚಾಲಕ – ಭಯಗೊಂಡು ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

    ಬೇರೆ ರೂಟ್‌ಗೆ ಕರೆದೊಯ್ದ ಚಾಲಕ – ಭಯಗೊಂಡು ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ

    ಬೆಂಗಳೂರು: ಆಟೋ ಚಾಲಕನೋರ್ವ (Auto Driver) ತಪ್ಪಾದ ಜಾಗಕ್ಕೆ ಮಹಿಳೆಯನ್ನು ಕರೆದೊಯ್ಯಲು ಯತ್ನಿಸಿದ್ದು, ಭಯಗೊಂಡ ಮಹಿಳೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಸೇಫ್ ಆದ ಘಟನೆ ಹೆಬ್ಬಾಳದ (Hebbal) ವೀರಣ್ಣಪಾಳ್ಯ ಬಳಿ ಗುರುವಾರ ರಾತ್ರಿ ನಡೆದಿದೆ.

    KA 03 AM 89566 ನೋಂದಣಿಯ ಆಟೋ ಚಾಲಕ ಈ ಕೃತ್ಯವೆಸಗಿದ್ದಾನೆ. ಮಹಿಳೆ ಹೊರಮಾವಿನಿಂದ (Horamavu) ಥಣಿಸಂದ್ರಗೆ ಆಟೋ ಬುಕ್ ಮಾಡಿದ್ದರು. ಚಾಲಕ ಮಹಿಳೆಯನ್ನು ತಪ್ಪಾದ ಜಾಗಕ್ಕೆ ಕರೆದುಕೊಂಡು ಹೋಗುತ್ತಿದ್ದ. ಆಟೋ ನಿಲ್ಲಿಸಿ ಎಂದು ಕೂಗಾಡಿದರೂ ಆಟೋ ಚಾಲಕ ನಿಲ್ಲಿಸಲಿಲ್ಲ. ಚಾಲಕನ ವರ್ತನೆಯಿಂದ ಭಯಗೊಂಡು ಚಲಿಸುತ್ತಿದ್ದ ಆಟೋದಿಂದ ಜಿಗಿದು ಮಹಿಳೆ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಟ್ಯೂಷನ್ ಟೀಚರ್‌ನಿಂದಲೇ ವಿದ್ಯಾರ್ಥಿನಿ ಕಿಡ್ನ್ಯಾಪ್ – ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ

    ಘಟನೆಯ ಬಗ್ಗೆ ಮಹಿಳೆಯ ಪತಿ ಬೆಂಗಳೂರು ಪೊಲೀಸರಿಗೆ ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ತವರು ಕ್ಷೇತ್ರದಲ್ಲೇ ದಲಿತ ಕುಟುಂಬಕ್ಕೆ 4 ವರ್ಷದಿಂದ ದಲಿತರಿಂದಲೇ ಬಹಿಷ್ಕಾರ

  • ಸರ್ಜಾಪುರದಿಂದ ಹೆಬ್ಬಾಳದವರೆಗೆ ‘ನಮ್ಮ ಮೆಟ್ರೋ 3ಎ ಹಂತ’ – ಸಚಿವ ಸಂಪುಟ ಅನುಮೋದನೆ

    ಸರ್ಜಾಪುರದಿಂದ ಹೆಬ್ಬಾಳದವರೆಗೆ ‘ನಮ್ಮ ಮೆಟ್ರೋ 3ಎ ಹಂತ’ – ಸಚಿವ ಸಂಪುಟ ಅನುಮೋದನೆ

    * 28,405 ಕೋಟಿ ರೂ. ವೆಚ್ಚದಲ್ಲಿ 36.59 ಕಿಮೀ ಮೆಟ್ರೋ ಮಾರ್ಗ
    * ಈವರೆಗಿನ ಹಂತಗಳ ಪೈಕಿ ಅತೀ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಮಾರ್ಗ

    ಬೆಂಗಳೂರು: ಸರ್ಜಾಪುರದಿಂದ (Sarjapura) ಹೆಬ್ಬಾಳದವರೆಗೆ (Hebbal) ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆ `ನಮ್ಮ ಮೆಟ್ರೋ 3ಎ’ (Namma Metro) ಹಂತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

    ನಮ್ಮ ಮೆಟ್ರೋ ಜಾಲವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ನಮ್ಮ ಮೆಟ್ರೋದ 3ಎ ಹಂತವಾಗಿರುವ ಕೆಂಪು ಮಾರ್ಗ (Red Line) ಸರ್ಜಾಪುರದಿಂದ ಪ್ರಾರಂಭವಾಗಿ ಕೋರಮಂಗಲ (Koramangala) ಮೂಲಕ ಹೆಬ್ಬಾಳಕ್ಕೆ ತಲುಪುವ 36.59 ಕಿ.ಮೀ ಇದಾಗಿದೆ. ಈವರೆಗಿನ ಹಂತಗಳ ಪೈಕಿ ಅತೀ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಮಾರ್ಗ ಇದಾಗಿದೆ.ಇದನ್ನೂ ಓದಿ: ಸಿರಿಯಾದಲ್ಲಿ ಹೆಚ್ಚಿದ ಹಿಂಸಾಚಾರ – ಕೂಡಲೇ ದೇಶವನ್ನು ತೊರೆಯಿರಿ; ಭಾರತೀಯರಿಗೆ ಸೂಚನೆ

    ಕೆಂಪು ಮಾರ್ಗದ ಪ್ರತಿ ಕಿ.ಮೀ ನಿರ್ಮಾಣಕ್ಕೆ 776 ರೂ. ಕೋಟಿ ತಗುಲಲಿದ್ದು, ಒಟ್ಟು 28,405 ಕೋಟಿ ರೂ. ವೆಚ್ಚದಲ್ಲಿ 36.59 ಕಿಮೀ ಮೆಟ್ರೋ ಮಾರ್ಗ ನಿರ್ಮಿಸಲು ಸಂಪುಟ ತೀರ್ಮಾನಿಸಿದೆ. ಕೆಂಪು ಮಾರ್ಗದ ಮೆಟ್ರೋ ನಿರ್ಮಾಣಗೊಂಡರೆ ನಮ್ಮ ಮೆಟ್ರೋದ ಒಟ್ಟು 258 ಕಿ.ಮೀ. ಮಾರ್ಗ ಸಿದ್ಧವಾಗುತ್ತದೆ.

    ಈ ಯೋಜನೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಮುಂದಿನ ಒಂದು ವರ್ಷದೊಳಗೆ ಕೇಂದ್ರದ ಅನುಮೋದನೆ ಸಿಗುವ ಸಾಧ್ಯತೆ ಇದೆ. ಬಳಿಕ 2026ರಲ್ಲಿ ಇದರ ಕಾಮಗಾರಿ ಆರಂಭವಾಗಿ 2031ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

    ಸರ್ಜಾಪುರದಿಂದ ಹೆಬ್ಬಾಳದ ವರೆಗೆ 36.59 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು, 36.59 ಕಿ.ಮೀ ಪೈಕಿ 22.14 ಕಿ.ಮೀ ಫ್ಲೈಓವರ್ ಮಾರ್ಗವಾಗಿದೆ. ಇನ್ನುಳಿದ 14.45 ಕಿ.ಮೀ ಸುರಂಗ ಮಾರ್ಗವಾಗಿರಲಿದೆ. ಒಟ್ಟು 28 ಸ್ಟೇಷನ್‌ಗಳಿದ್ದು, ಅದರಲ್ಲಿ 17 ಮಹಡಿ ನಿಲ್ದಾಣಗಳು ಹಾಗೂ 11 ಸುರಂಗ ಮಾರ್ಗ ನಿಲ್ದಾಣಗಳು ಇರಲಿವೆ. ಇಬ್ಬಲೂರು, ಅಗರ, ಡೈರಿ ಸರ್ಕಲ್, ಕೆಆರ್ ಸರ್ಕಲ್ ಹಾಗೂ ಹೆಬ್ಬಾಳದಲ್ಲಿ 5 ಇಂಟರ್ ಚೇಂಜ್ ಸ್ಟೇಷನ್‌ಗಳ ನಿರ್ಮಾಣವಾಗಲಿದೆ.

    ಮೆಟ್ರೋ ನಿಲ್ದಾಣಗಳು ಯಾವವು?
    ಸರ್ಜಾಪುರದಿಂದ ಪ್ರಾರಂಭವಾಗಿ ಕಾಡ ಅಗ್ರಹಾರ ರೋಡ್ – ಸೋಂಪುರ – ದೊಮ್ಮಸಂದ್ರ – ಮುತ್ತನಲ್ಲೂರು ಕ್ರಾಸ್ – ಕೊಡತಿ ಗೇಟ್ – ಅಂಬೇಡ್ಕರ್ ನಗರ – ಕಾರ್ಮಲ್ ರಾಂ – ದೊಡ್ಡಕನ್ನೆಲ್ಲಿ – ಕೈಕೊಂಡ್ರಹಳ್ಳಿ – ಬೆಳ್ಳಂದೂರು ಗೇಟ್ – ಇಬ್ಬಲೂರು – ಅಗರ – ಜಕ್ಕಸಂದ್ರ – ಕೋರಮಂಗಲ 3ನೇ ಬ್ಲಾಕ್ – ಕೋರಮಂಗಲ 2ನೇ ಬ್ಲಾಕ್ – ಡೈರಿ ಸರ್ಕಲ್ – ನಿಮ್ಹಾನ್ಸ್ – ಶಾಂತಿನಗರ – ಟೌನ್ ಹಾಲ್ – ಕೆಆರ್ ಸರ್ಕಲ್ – ಬಸವೇಶ್ವರ ಸರ್ಕಲ್ – ಬೆಂಗಳೂರು ಗಾಲ್ಫ್ ಕೋರ್ಸ್ – ಮೇಖ್ರಿ ಸರ್ಕಲ್ – ಪ್ಯಾಲೇಸ್ ಗುಟ್ಟಹಳ್ಳಿ – ವೆಟರ್ನರಿ ಕಾಲೇಜು – ಗಂಗಾನಗರ – ಹೆಬ್ಬಾಳವರೆಗೆ ಪ್ರಯಾಣಿಸಲಿದೆ.ಇದನ್ನೂ ಓದಿ: ಪವರ್ ಶೇರಿಂಗ್ – ಹೈಕಮಾಂಡ್‌ನಲ್ಲಿ ಆಗಿರೋ ತೀರ್ಮಾನದ ವಿಚಾರ ಅವರಿಬ್ಬರಿಗೆ ಗೊತ್ತು: ಮುನಿಯಪ್ಪ