Tag: ಹೆಬ್ಬಗೋಡಿ ಪೊಲೀಸರು

  • ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ – ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿ ಅರೆಸ್ಟ್

    ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ – ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿ ಅರೆಸ್ಟ್

    ಆನೇಕಲ್: ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಕರೆಂಟ್ ಶಾಕ್‌ನಿಂದ ಸತ್ತಿದ್ದಾಳೆಂದು ಬಿಂಬಿಸಿದ್ದ 2ನೇ ಪತಿಯನ್ನು ಹೆಬ್ಬಗೋಡಿ ಪೊಲೀಸರು (Hebbagodi Police) ಬಂಧಿಸಿದ್ದಾರೆ.

    ಬಂಧಿತ ಆರೋಪಿ ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಪತ್ನಿ ರೇಷ್ಮಾಳನ್ನು (32) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.ಇದನ್ನೂ ಓದಿ: ಸೀನಿಯರ್‌ನಿಂದ ಪ್ರೀತಿಸುವಂತೆ ಕಿರುಕುಳ ಆರೋಪ – ಬೆಂಗಳೂರಲ್ಲಿ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

    ಮೃತ ಮಹಿಳೆ ರೇಷ್ಮಾಗೆ ಮದುವೆಯಾಗಿ ಪತಿ ಸಾವನ್ನಪ್ಪಿದ್ದ. ತನ್ನ 15 ವರ್ಷದ ಮಗಳೊಂದಿಗೆ ರೇಷ್ಮಾ ಶಿಕಾರಿಪಾಳ್ಯದ ಓಂಶಕ್ತಿ ಲೇಔಟ್‌ನಲ್ಲಿ ವಾಸವಾಗಿದ್ದರು. ಇದೇ ವೇಳೆ ಇನ್‌ಸ್ಟಾಗ್ರಾಂನಲ್ಲಿ ಆರೋಪಿ ಪ್ರಶಾಂತ್ ಕುಮಾರ್ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೀತಿ ಶುರುವಾಗಿ ಕಳೆದ 9 ತಿಂಗಳ ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಪತ್ನಿಯ ಶೀಲ ಶಂಕಿಸಿ ಪ್ರಶಾಂತ್ ಪ್ರತಿದಿನ ಜಗಳವಾಡುತ್ತಿದ್ದ. ಅ.15ರಂದು ಇಬ್ಬರ ಮಧ್ಯೆ ಜಗಳವಾಗಿ ತಾರಕಕ್ಕೇರಿತ್ತು. ಗಲಾಟೆಯಲ್ಲಿ ರೇಷ್ಮಾಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಬಾತ್‌ರೂಮ್‌ನಲ್ಲಿ ಮೃತದೇಹ ಹಾಕಿ, ವಾಟರ್‌ಹೀಟರ್ ಸ್ವಿಚ್ ಆನ್ ಮಾಡಿ, ಕರೆಂಟ್ ಶಾಕ್ ತಗುಲಿ ಸತ್ತಿದ್ದಾಳೆಂದು ಬಿಂಬಿಸಿ ಅಲ್ಲಿಂದ ಪರಾರಿಯಾಗಿದ್ದ. ಮೃತ ರೇಷ್ಮಾ ಮಗಳು ಮನೆಗೆ ಬಂದು ನೋಡಿದಾಗ ತಾಯಿ ಅಸ್ವಸ್ಥಳಾಗಿ ಬಾತ್‌ರೂಮ್‌ನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದರು.

    ಮೊದಲು ತಾಯಿಯನ್ನು ನೋಡಿದ್ದ ಮಗಳು ಬಾತ್‌ರೂಮ್ ಚಿಲಕ ಹೊರಗಿನಿಂದ ಹಾಕಿದ್ದನ್ನು ಗಮನಿಸಿದ್ದಳು. ಇದರಿಂದ ಅನುಮಾನಗೊಂಡು ಕೂಡಲೇ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ತಕ್ಷಣ ಆರೋಪಿ ಪ್ರಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

    ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.ಇದನ್ನೂ ಓದಿ: ಬೆಳಗಾವಿ | ಪ್ರೀತಿಸಿ ಮದ್ವೆಯಾದ, ವಿಚ್ಛೇದನ ಪಡೆದು ಮಾಜಿ ಪತ್ನಿ ಕೊಂದ ಪೊಲೀಸಪ್ಪ

  • ಶೂ ಒಳಗೆ, ಮನೆ ಎದುರು ಕೀ ಮುಚ್ಚಿಡುವವರೇ ಹುಷಾರ್ – 65 ಲಕ್ಷ ರೂ. ಕನ್ನ ಹಾಕಿದ್ದವ ಅರೆಸ್ಟ್

    ಶೂ ಒಳಗೆ, ಮನೆ ಎದುರು ಕೀ ಮುಚ್ಚಿಡುವವರೇ ಹುಷಾರ್ – 65 ಲಕ್ಷ ರೂ. ಕನ್ನ ಹಾಕಿದ್ದವ ಅರೆಸ್ಟ್

    ಬೆಂಗಳೂರು: ಅಕ್ಕನ ಮನೆಯಲ್ಲಿದ್ದುಕೊಂಡು ಅಕ್ಕಪಕ್ಕದ ಫ್ಲ್ಯಾಟ್‌ಗಳಲ್ಲಿ ಕಳ್ಳತನ ಮಾಡಿ, 65 ಲಕ್ಷ ರೂ. ಕನ್ನ ಹಾಕಿದ್ದವನನ್ನು ಹೆಬ್ಬಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಪಶ್ಚಿಮ ಬಂಗಾಳ (West Bengal) ಮೂಲದ ನಿತೇಶ್ ಸುಬ್ಬು ಬಂಧಿತ ಆರೋಪಿ. ಇತ್ತೀಚಿಗೆ ಹೆಬ್ಬಗೋಡಿ ಪೊಲೀಸ್ (Hebbagodi Police) ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ಮೇಲಿಂದ ಮೇಲೆ ಕಳ್ಳತನ ಕೇಸ್‌ಗಳು ವರದಿಯಾಗುತ್ತಿದ್ದವು. ಹೀಗಾಗಿ ಫೀಲ್ಡ್‌ಗಿಳಿದ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದರು.ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಸ್ನೇಹಿತರಿಂದ ವಿಶೇಷ ಪೂಜೆ

    ಆರೋಪಿ ಅಕ್ಕನ ಫ್ಲ್ಯಾಟ್‌ನಲ್ಲಿ ಉಳಿದುಕೊಂಡಿದ್ದ. ಯಾರು ಇಲ್ಲದಿದ್ದಾಗ ಅಕ್ಕಪಕ್ಕದ ಫ್ಲ್ಯಾಟ್‌ಗಳ ಬೆಲ್ ಮಾಡಿ ಓಡಿ ಹೋಗ್ತಿದ್ದ. ಒಂದು ವೇಳೆ ಬೆಲ್ ಮಾಡಿದಾಗ ಮನೆಗಳ ಬಾಗಿಲು ಓಪನ್ ಮಾಡಿದರೆ ಸೇಫ್. ಫ್ಲ್ಯಾಟ್‌ಗಳ ಡೋರ್ ಓಪನ್ ಮಾಡದೇ ಇದ್ದರೆ ಕಳ್ಳತನ ಮಾಡುತ್ತಿದ್ದ.

    ಬೆಲ್ ಹೊಡೆದರೂ ಬಾಗಿಲು ತೆಗೆಯದ ಫ್ಲ್ಯಾಟ್‌ಗಳ ಬಳಿ ಬಂದು ಶೂ, ಅಲ್ಲಿ ಇಲ್ಲಿ ಹುಡುಕಾಡಿದಾಗ ಕೀ ಸಿಕ್ಕಿದರೆ, ಆಗ ಆರಾಮಾಗಿ ಬಾಗಿಲು ತೆಗೆದು ಚಿನ್ನಾಭರಣ ಗುಡಿಸಿ ಗುಂಡಾಂತರ ಮಾಡುತ್ತಿದ್ದ.

    ಸದ್ಯ ಹೆಬ್ಬಗೋಡಿ ಪೊಲೀಸರು ಆರೋಪಿ ನಿತೇಶ್‌ನನ್ನು ಬಂಧಿಸಿದ್ದು, 65 ಲಕ್ಷ ರೂ. ಮೌಲ್ಯದ 621 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಪೂರ್ಣಾನಂದಶ್ರೀ ಜೊತೆ ಬಹಿರಂಗ ಚರ್ಚೆಗೆ ಸಿದ್ಧ: ಸವಾಲು ಸ್ವೀಕರಿಸಿದ ಶಿವರಾಜ್ ತಂಗಡಗಿ