Tag: ಹೆದ್ದಾರಿ ಬಂದ್

  • ಪ್ರವಾಹದಿಂದ ಹೆದ್ದಾರಿ ಬಂದ್- 14 ದಿನದಿಂದ ರಸ್ತೆಯಲ್ಲೇ ಸಿಲುಕಿದ ಲಾರಿ ಚಾಲಕರಿಂದ ಪ್ರತಿಭಟನೆ

    ಪ್ರವಾಹದಿಂದ ಹೆದ್ದಾರಿ ಬಂದ್- 14 ದಿನದಿಂದ ರಸ್ತೆಯಲ್ಲೇ ಸಿಲುಕಿದ ಲಾರಿ ಚಾಲಕರಿಂದ ಪ್ರತಿಭಟನೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಜುಲೈ 24ರಂದು ಯಲ್ಲಾಪುರ-ಹುಬ್ಬಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅರೆಬೈಲ್ ಘಟ್ಟ ಪ್ರದೇಶದಲ್ಲಿ ಭೂ ಕುಸಿತವಾದ್ದರಿಂದ ಭಾರೀ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ ಲಾರಿಗಳು ಅಂಕೋಲ ಭಾಗದ ಬಾಳೆಗುಳಿ ಕ್ರಾಸ್ ನಲ್ಲಿ ಸಿಲುಕಿಕೊಂಡಿದ್ದವು. ಆದರೆ ಊಟಕ್ಕೆ ಹಣವಿಲ್ಲದೆ ಕಂಗಾಲಾಗಿರುವ ಚಾಲಕರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು.

    ಅಂಕೋಲ ಸೇರಿದಂತೆ ಹಲವು ಭಾಗದಲ್ಲಿ ನೂರಾರು ಟ್ರಕ್ ಗಳು 14 ದಿನದಿಂದ ನಿಂತಿದ್ದು, ಇದೀಗ ಲಾರಿ ಚಾಲಕರಿಗೆ ಊಟಕ್ಕೂ ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇಂದು ಅಂಕೋಲದ ಬಾಳೆಗುಳಿ ಕ್ರಾಸ್ ನಲ್ಲಿ ಲಾರಿ ಚಾಲಕರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಲಾರಿ ಚಾಲಕರಿಗೆ ಇರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ನಂತರ ಕಾರವಾರ-ಮಂಗಳೂರು ಹೆದ್ದಾರಿಯಲ್ಲಿ ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಟ್ಟರು.

    ಸದ್ಯ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲು ಘಟ್ಟದಲ್ಲಿ ಇದೀಗ ಭಾರೀ ಗಾತ್ರದ ವಾಹನ ಹೊರತುಪಡಿಸಿ ಉಳಿದ ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹೊನ್ನಾವರ ಭಾಗದಲ್ಲೂ ರಸ್ತೆಯನ್ನು ಸರಿಪಡಿಸಲಾಗುತಿದ್ದು, ನಾಳೆಯಿಂದ ಭಾರೀ ಗಾತ್ರದ ವಾಹನಗಳು ತೆರಳಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

    ಕಳೆದ ತಿಂಗಳು ಸುಮಾರು 500ಕ್ಕೂ ಹೆಚ್ಚು ಟ್ರಕ್ ಗಳು ಅಂಕೋಲದ ಬಾಳೆಗುಳಿ ಕ್ರಾಸ್ ನಲ್ಲಿಯೇ ಇರುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ಇದಾದ ನಂತರ ಕೆಲವು ಟ್ರಕ್ ಗಳು ಅಂಕೋಲದಿಂದ ಹೊನ್ನಾವರ ಭಾಗ ಹಾಗೂ ಶಿರಸಿ ಭಾಗದ ಹೆದ್ದಾರಿ ಮೂಲಕ ಸಂಚಾರ ಪ್ರಾರಂಭ ಮಾಡಿದವು. ಆದರೆ ಹೊನ್ನಾವರ ಭಾಗದಲ್ಲಿ ಭಾರೀ ವಾಹನಗಳ ಸಂಚಾರದಿಂದ ಕೆಲವು ಕಡೆ ರಸ್ತೆಗಳು ಕುಸಿಯತೊಡಗಿದವು ಇದಲ್ಲದೇ ಶಿರಸಿ ಭಾಗಕ್ಕೆ ತೆರಳುವ ಘಟ್ಟ ಪ್ರದೇಶದಲ್ಲೂ ಟ್ರಕ್ ಗಳು ಜಾಮ್ ಆಗತೊಡಗಿದ್ದು, ಬೇರೆ ಭಾಗದಿಂದ ಕರಾವಳಿ ಭಾಗಕ್ಕೆ ಬರಬೇಕಾದ ಅಗತ್ಯ ವಸ್ತುಗಳು ಬಾರದೇ ಜನರು ಸಮಸ್ಯೆ ಅನುಭವಿಸುವಂತಾಗಿತ್ತು. ಈ ಕಾರಣದಿಂದ ಭಾರೀ ಗಾತ್ರದ ಟ್ರಕ್ ಗಳನ್ನು ಪೊಲೀಸ್ ಇಲಾಖೆ 14 ದಿನದಿಂದ ತಡೆದು ನಿಲ್ಲಿಸಿದೆ.

  • ಕೃಷಿ ಕಾಯ್ದೆ ವಿರುದ್ಧ ರೈತರ ಕಿಚ್ಚು – ನಾಳೆ ದೇಶಾದ್ಯಂತ ಹೆದ್ದಾರಿ ಬಂದ್ ಮಾಡಿ ವಾರ್ನಿಂಗ್

    ಕೃಷಿ ಕಾಯ್ದೆ ವಿರುದ್ಧ ರೈತರ ಕಿಚ್ಚು – ನಾಳೆ ದೇಶಾದ್ಯಂತ ಹೆದ್ದಾರಿ ಬಂದ್ ಮಾಡಿ ವಾರ್ನಿಂಗ್

    ಬೆಂಗಳೂರು: ರೈತರ ಹೋರಾಟವನ್ನ ಹತ್ತಿಕ್ಕಲು ಯತ್ನಿಸುತ್ತಿರೋ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅನ್ನದಾತರು ಒಂದಾಗಿದ್ದಾರೆ. ನಾಳೆ ದೇಶದ್ಯಾಂತ ರಾಷ್ಟ್ರೀಯ ಹೆದ್ದಾರಿ ಬಂದ್‍ಗೆ ರೈತ ನಾಯಕರು ಕರೆ ನೀಡಿದ್ದಾರೆ.

    ಗಣರಾಜ್ಯೋತ್ಸವ ದಿನದಂದು ಆದ ಘಟನೆಗೆ ಖಂಡಿಸಿ ನಾಳೆ ದೇಶದ್ಯಾಂತ ರಾಷ್ಟ್ರೀಯ ಹೆದ್ದಾರಿ ಬಂದ್‍ಗೆ ರೈತ ನಾಯಕರು ಕರೆ ನೀಡಿದ್ದಾರೆ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕುವಲ್ಲಿ ಕೇಂದ್ರ ಸರ್ಕಾರ ಪ್ರಯತ್ನ ನಡೆಯುತ್ತಿದೆ. ಹೀಗೆ ಮುಂದುವರಿದ್ರೆ ದೇಶಾದ್ಯಂತ ರೈತರು ಉಗ್ರ ಹೋರಾಟ ನಡೆಸೋದಾಗಿ ರೈತ ನಾಯಕರು ಎಚ್ಚರಿಸಿದ್ದಾರೆ. ಈ ನಡುವೆ ರಾಜ್ಯದಲ್ಲೂ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಯಲಿದೆ.

    ದೆಹಲಿ ರೈತರ ಹೋರಾಟದ ಬೆಂಬಲ ನೀಡುವ ಸಲುವಾಗಿ ರಾಜ್ಯದ ಮೂಲೆಮೂಲೆಗಳಲ್ಲೂ ಹೆದ್ದಾರಿ ಬಂದ್ ನಡೆಸಲು ರಾಜ್ಯ ರೈತರು ನಾಯಕರು ತೀರ್ಮಾನಿಸಿದ್ದಾರೆ. ಕೇವಲ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದ ಹೈವೇಗಳು ಬಂದ್ ಆಗಲಿದ್ದು, ರೈತರು, ಕಾರ್ಮಿಕರು, ದಲಿತರು, ಮಹಿಳಾ ಸಂಘಟನೆಗಳು ಸೇರದಂತೆ ನೂರಾರು ಸಂಘಟನೆಗಳು ಹೆದ್ದಾರಿ ಬಂದ್‍ಗೆ ಸಾಥ್ ನೀಡಲಿದೆ. ನಾಳೆ ಮಧ್ಯಾಹ್ನ 12 ರಿಂದ 3ರ ವರೆಗೆ ಹೆದ್ದಾರಿ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ.

    ನಾಳೆ ಕುರುಬೂರು, ದೆಹಲಿಯಲ್ಲಿರೋ ಕೋಡಿಹಳ್ಳಿ ಚಂದ್ರಶೇಖರ್ ಅವರ ಹಸಿರು ಸೇನೆಯಿಂದಲೂ ಎನ್ ಹೆಚ್ ಬಂದ್ ನಡೆಸಲು ನಿರ್ಧರಿಸಲಾಗಿದೆ. ರೈತರ ಕಹಳೆಗೆ ಬೆಂಗಳೂರು ಕಂಪ್ಲೀಟ್ ಸ್ತಬ್ಧವಾಗಲಿದೆ. ಮೈಸೂರು ರೋಡ್, ರಾಮನಗರ ಬೆಂಗಳೂರಿನ ಗಡಿ ಭಾಗ, ತುಮಕೂರು ರೋಡ್ ಬಂದ್,ಮಾದವಾರ ಬಳಿ ರಾಷ್ಟ್ರೀಯ ಹೆದ್ದಾರಿ ದ್ವೀಮುಖ ರಸ್ತೆ, ಅತ್ತಿಬೆಲೆ ಗಡಿ, ಕೆ ಆರ್ ಪುರಂ ಜಂಕ್ಷನ್, ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ ಹೈವೇ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಹೈವೇಗಳನ್ನ ಬಂದ್ ಮಾಡಲು ನಿರ್ಧರಿಸಲಾಗಿದೆ.

    ಒಟ್ಟಿನಲ್ಲಿ ರೈತರ ಹೆದ್ದಾರಿ ಬಂದ್‍ನಿಂದ ಬೆಂಗಳೂರಿನ ಹೊರಭಾಗ ಮಾತ್ರವಲ್ಲದೇ ಸುತ್ತಮುತ್ತಲಿನ ರಸ್ತೆಗಳು ಟ್ರಾಫಿಕ್ ಜ್ಯಾಮ್ ಆಗೋದು ಪಕ್ಕಾ ಅಲ್ಲದೇ ಇಡೀ ರಾಜ್ಯದ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲೂ ರಸ್ತೆ ಬಂದ್ ಆಗೋದು ಪಕ್ಕಾ ಎಂದು ರೈತರು ಹೇಳಿದ್ದಾರೆ.

  • ರೈತ ವಿರೋಧಿ ಮಸೂದೆ ವಿರೋಧಿಸಿ ರಣಕಹಳೆ- ಇಂದು ಹೆದ್ದಾರಿ ಬಂದ್

    ರೈತ ವಿರೋಧಿ ಮಸೂದೆ ವಿರೋಧಿಸಿ ರಣಕಹಳೆ- ಇಂದು ಹೆದ್ದಾರಿ ಬಂದ್

    – ಬೆಂಗಳೂರಿಗೆ ಬರುವಂತಿಲ್ಲ, ಬೆಂಗಳೂರಿನಿಂದ ಹೋಗುವಂತಿಲ್ಲ

    ಬೆಂಗಳೂರು: ರೈತ ವಿರೋಧಿ ಮಸೂದೆ ರಣಕಹಳೆಯನ್ನು ಮೊಳಗಿಸಿರುವ ಪರಿಣಾಮ ಇಂದು ಕೊರೊನಾ ಲಾಕ್‍ಡೌನ್ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಬಂದ್ ಆಗುತ್ತಿದೆ. ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ರೈತ ಸಂಘಟನೆಗಳು ಬೀದಿಗೆ ಇಳಿದಿದ್ದು, ಬೆಂಗಳೂರು ಸೇರಿ ಇಡೀ ರಾಜ್ಯಾದ್ಯಂತ ಹೆದ್ದಾರಿಗಳನ್ನು ಬಂದ್ ಮಾಡಲಾಗುತ್ತಿದೆ.

    ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯ ಹೆದ್ದಾರಿಗಳನ್ನು ರೈತರು ಬಂದ್ ಮಾಡಿ ಬೃಹತ್ ಪ್ರತಿಭಟನೆಗೆ ರೈತರು ಸಜ್ಜಾಗಿದ್ದಾರೆ. ಅಧಿಕೃತವಾಗಿ ರಾಜ್ಯದಲ್ಲಿ ಬಂದ್ ಸ್ಥಿತಿ ಇಲ್ಲಿದ್ದರೂ, ರಸ್ತೆಗಳು ಬಂದ್ ಆಗೋ ಕಾರಣ ಸಂಚಾರದಲ್ಲಿ ಭಾರೀ ವ್ಯತ್ಯಯ ನಿರೀಕ್ಷೆ ಇದೆ. ಇತ್ತ ರೈತರಿಂದ ಹೆಚ್ಚು ಸಮಯ ರಸ್ತೆ ಬಂದ್ ಆದರೆ ಉಂಟಾಗುವ ಸಂಚಾರ ವ್ಯತ್ಯಯವನ್ನು ತಡೆಯಲು ಬೀಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.

    ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಸೇರಿದಂತೆ ಮೈಸೂರು ಬ್ಯಾಂಕ್ ಸರ್ಕಲ್, ಏರ್‍ಪೋರ್ಟ್ ರಸ್ತೆ, ಗೊರಗುಂಟೆ ಪಾಳ್ಯ, ನೆಲಮಂಗಲ ಟೋಲ್, ತ್ತಿಬೆಲೆ ಟೋಲ್, ದೇವನಹಳ್ಳಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಟೋಲ್, ವಿಧಾನಸೌಧ ಅಸುಪಾಸು, ಚಿಕ್ಕಪೇಟೆ-ಕೆ.ಆರ್. ಮಾರುಕಟ್ಟೆ ಪ್ರದೇಶಗಳ ರಸ್ತೆಗಳು ಲಾಕ್ ಆಗುವ ಸಾಧ್ಯತೆ ಇದೆ. ಇದರೊಂದಿಗೆ ನಗರವನ್ನು ಸಂಪರ್ಕಿಸುವ ಹೆದ್ದಾರಿಗಳು ಬಂದ್ ಆಗಲಿದ್ದು, ಬೆಂಗಳೂರು- ಮೈಸೂರು ಹೆದ್ದಾರಿ, ಬೆಂಗಳೂರು- ತುಮಕೂರು ಹೆದ್ದಾರಿ, ಬೆಂಗಳೂರು- ಹೊಸೂರು ಹೆದ್ದಾರಿ, ಬೆಂಗಳೂರು- ಹಾಸನ ಹೆದ್ದಾರಿ, ಓಲ್ಡ್ ಮದ್ರಾಸ್ ರೋಡ್, ಬೆಂಗಳೂರು-ಹೊಸಕೋಟೆ, ರೋಡ್ ಹಾಗೂ ಬೆಂಗಳೂರು-ದೇವನಹಳ್ಳಿ ರೋಡ್ ಲಾಕ್ ಆಗಲಿದೆ.

    ರಾಜ್ಯದಾದ್ಯಂತ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ಮಾಡಲಿದ್ದು, ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಂದ್ ಆಗಲಿದೆ. ತಾಲೂಕು ಕೇಂದ್ರಗಳಲ್ಲೂ ರಸ್ತೆಗಳನ್ನು ಬಂದ್ ಮಾಡಲು ನಿರ್ಧಾರ ಮಾಡಲಿದ್ದು, ಗ್ರಾಮಗಳಲ್ಲೂ ರಸ್ತೆ ತಡೆದು ರೈತರಿಂದ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಇತ್ತ ರೈತ ವಿರೋಧಿ ಮಸೂದೆ ವಿರುದ್ಧ ರೈತ ಮುಖಂಡರು ಗುಡುಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರ ಹೋರಾಟ ಪ್ರಶ್ನಿಸುತ್ತಿರುವ ಸಚಿವ ಬಿಸಿ ಪಾಟೀಲ್, ಸಿಟಿ ರವಿ ಹಾಗೂ ಸೋಮಶೇಖರ್ ಮೇಲೆ ಫುಲ್ ಗರಂ ಆಗಿದ್ದಾರೆ. ನಿಮ್ಮ ಪ್ರಧಾನಿ ಹೇಳಿದ್ದನ್ನು ಸಮರ್ಥಿಸಿಕೊಳ್ಳಿ ಆದರೆ ರೈತರಿಗೆ ಅನುಕೂಲ ಅಂತ ಹೇಳಬೇಡಿ. ಸಿಟಿ ರವಿ ಅವರೇ ಪ್ರೊಫೆಸರ್ ನಂಜುಂಡ ಸ್ವಾಮಿ ಹೇಳಿದ್ದೇನು ಎಂಬುದೇ ನಿಮಗೆ ಅರ್ಥ ಆಗಿಲ್ಲ. ಎಲ್ಲರೂ ಸೇರಿಕೊಂಡು ರೈತರ ಕಥೆ ಮುಗಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ್ದರು. ಆದರೆ ನಾಳೆ ರಸ್ತೆ ನಡೆಸೋದಕ್ಕೆ ತಮ್ಮ ಬೆಂಬಲ ಇಲ್ಲ. ಸೋಮವಾರ ಬಂದ್‍ಗೆ ನಮ್ಮ ಬೆಂಬಲ ಹೇಳಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ತರಲು ಉದ್ದೇಶಿಸಿರುವ ಕೃಷಿ ಮಸೂದೆ ವಿರೋಧಿಸಿ 2000ಕ್ಕೂ ಹೆಚ್ಚು ರೈತ ಸಂಘಟನೆಗಳು ದೇಶದ್ಯಾಂತ ಪ್ರತಿರೋಧ್ ದಿವಸ್ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿಯೂ ಇದರ ಪರಿಣಾಮ ಇರಲಿದೆ.

  • ಸಿಡಿದೆದ್ದ ರೈತರಿಂದ ನಾಳೆ ರಾಜ್ಯದಲ್ಲಿ ಹೆದ್ದಾರಿ ಬಂದ್ – ಬೆಂಗಳೂರಲ್ಲಿ ಅಘೋಷಿತ ಬಂದ್ ಸಾಧ್ಯತೆ

    ಸಿಡಿದೆದ್ದ ರೈತರಿಂದ ನಾಳೆ ರಾಜ್ಯದಲ್ಲಿ ಹೆದ್ದಾರಿ ಬಂದ್ – ಬೆಂಗಳೂರಲ್ಲಿ ಅಘೋಷಿತ ಬಂದ್ ಸಾಧ್ಯತೆ

    – ಜನರೇ ನೀವು ಹೊರಗೆ ಹೋಗುವ ಮುನ್ನ ಎಚ್ಚರ
    – ಬೆಂಗಳೂರಿನ ಯಾವ ರಸ್ತೆ ಲಾಕ್ ಆಗುತ್ತೆ?

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಶುಕ್ರವಾರ ಲಾಕ್ ಆಗುತ್ತಿದೆ. ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಾಳೆ ಬೀದಿಗೆ ಇಳಿಯಲಿದ್ದು, ಬೆಂಗಳೂರು ಸೇರಿ ಇಡೀ ರಾಜ್ಯಾದ್ಯಂತ ಹೆದ್ದಾರಿಗಳನ್ನು ಬಂದ್ ಮಾಡಲಿದ್ದಾರೆ. ಇದರಿಂದ ರಾಜ್ಯದಲ್ಲಿ ಜನಜೀವನ ಸ್ತಬ್ಧವಾಗುವ ಎಲ್ಲಾ ಸಾಧ್ಯತೆಗಳು ಇವೆ.

    ಬೆಂಗಳೂರಿನ ದಶ ದಿಕ್ಕುಗಳಲ್ಲೂ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಲಿದ್ದು, ಪ್ರಮುಖ ಜಂಕ್ಷನ್‍ಗಳು ಲಾಕ್ ಆಗಲಿವೆ. ವ್ಯಾಪಾರ ವಹಿವಾಟಿನ ಮೇಲೆಯೂ ಪರಿಣಾಮ ಬೀರಲಿದೆ. ಹೆದ್ದಾರಿ ತಡೆ ಕಾರಣ ನಾಳೆ ಬೆಂಗಳೂರಿಗೆ ಎಂಟ್ರಿ ಮತ್ತು ಎಕ್ಸಿಟ್ ಎರಡೂ ಇರಲ್ಲ. ಜೊತೆಗೆ ನಾಳೆಯಿಂದ ನಾಲ್ಕು ದಿನ ಸಾಲು ಸಾಲು ರಜೆಗಳು ಇವೆ. ನಾಳೆ ಅಧಿಕೃತವಾಗಿ ರಜೆ ಘೋಷಣೆ ಮಾಡಿಲ್ಲ. ಆದ್ರೆ ‘ಅಘೋಷಿತ’ ಬಂದ್ ಇರಲಿದೆ. ನಾಡಿದ್ದು 4ನೇ ಶನಿವಾರದ ರಜೆ ಇದೆ. ಭಾನುವಾರ ಮಾಮೂಲಿ ರಜೆ ಇರಲಿದೆ. ಸೋಮವಾರ ಕರ್ನಾಟಕ ಬಂದ್ ಇದೆ.

    ಸಾಲು ಸಾಲು ರಜೆ ಇದೆ ಎಂದು ಪ್ರವಾಸ ಹೊರಟಿದ್ರೆ, ನಿಮ್ಮ ಪ್ರಯಾಣ ರದ್ದು ಮಾಡುವುದೋ ಅಥ್ವಾ ಮುಂದಕ್ಕೆ ಹಾಕುವುದು ಒಳ್ಳೆಯದು. ಇಲ್ಲವಾದ್ರೆ ಮಾರ್ಗ ಮಧ್ಯೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು.

    ಬೆಂಗಳೂರಿನ ಯಾವ ರಸ್ತೆಗಳು ಲಾಕ್: ಮೈಸೂರು ಬ್ಯಾಂಕ್ ಸರ್ಕಲ್, ಏರ್‍ಪೋರ್ಟ್ ರಸ್ತೆ, ಗೊರಗುಂಟೆ ಪಾಳ್ಯ, ನೆಲಮಂಗಲ ಟೋಲ್, ಅತ್ತಿಬೆಲೆ ಟೋಲ್, ದೇವನಹಳ್ಳಿ ರಸ್ತೆ, ಮಲ್ಲೇಶ್ವರಂ- ಯಶವಂತಪುರ ರಸ್ತೆ, ಮಾರತ್‍ಹಳ್ಳಿ-ಎಂಜಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಟೋಲ್, ವಿಧಾನಸೌಧ ಅಸುಪಾಸು, ಚಿಕ್ಕಪೇಟೆ-ಕೆ.ಆರ್.ಮಾರ್ಕೆಟ್

    ಹೆದ್ದಾರಿ ಲಾಕ್: ಬೆಂಗಳೂರು- ಮೈಸೂರು ಹೆದ್ದಾರಿ, ಬೆಂಗಳೂರು- ತುಮಕೂರು ಹೆದ್ದಾರಿ, ಬೆಂಗಳೂರು- ಹೊಸೂರು ಹೆದ್ದಾರಿ, ಬೆಂಗಳೂರು- ಹಾಸನ ಹೆದ್ದಾರಿ, ಓಲ್ಡ್ ಮದ್ರಾಸ್ ರೋಡ್, ಬೆಂಗಳೂರು-ಹೊಸಕೋಟೆ, ಬೆಂಗಳೂರು-ದೇವನಹಳ್ಳಿ ರೋಡ್, ಬೆಂಗಳೂರು- ಹೊಸೂರು ಹೈವೇ

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ತರಲು ಉದ್ದೇಶಿಸಿರುವ ಕೃಷಿ ಮಸೂದೆ ವಿರೋಧಿಸಿ 2000ಕ್ಕೂ ಹೆಚ್ಚು ರೈತ ಸಂಘಟನೆಗಳು ದೇಶದ್ಯಾಂತ ನಾಳೆ ಹಾಗೂ ಸೆಪ್ಟೆಂಬರ್ 28ರಂದು ಪ್ರತಿರೋಧ್ ದಿವಸ್ ಹಮ್ಮಿಕೊಂಡಿದ್ದು, ರಾಜ್ಯದಲ್ಲಿಯೂ ಇದರ ಪರಿಣಾಮ ಇರಲಿದೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು ನಾಳೆ ರಸ್ತೆ ರೋಕೋ ಮತ್ತು ಸೋಮವಾರ ಕರ್ನಾಟಕ ಬಂದ್ ನಡೆಸೋದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಜೊತೆಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

    ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಾಪುರ ನಾಗೇಂದ್ರ ಮಾತನಾಡಿ, ದುಡಿಯುವ ವರ್ಗವನ್ನ ತುಳಿದು ಬದುಕುವ ಕೆಲಸ ನಡೆದಿದೆ ಎಂದು ಆಕ್ರೋಶ ಹೊರಹಾಕಿದರು. ಕೋಡಿಹಳ್ಳಿ ಚಂದ್ರಶೇಖರ್, ರೈತರ ಹೋರಾಟ ಪ್ರಶ್ನಿಸುತ್ತಿರುವ ಸಚಿವ ಬಿಸಿ ಪಾಟೀಲ್, ಸಿಟಿ ರವಿ ಹಾಗೂ ಸೋಮಶೇಖರ್ ಮೇಲೆ ಫುಲ್ ಗರಂ ಆದ್ರು. ನಿಮ್ಮ ಪ್ರಧಾನಿ ಹೇಳಿದ್ದನ್ನು ಸಮರ್ಥಿಸಿಕೊಳ್ಳಿ. ಆದರೆ ರೈತರಿಗೆ ಅನುಕೂಲ ಅಂತ ಹೇಳಬೇಡಿ. ಸಿಟಿ ರವಿ ಅವ್ರೇ ಪ್ರೊಫೆಸರ್ ನಂಜುಂಡ ಸ್ವಾಮಿ ಹೇಳಿದ್ದೇನು ಎಂಬುದೇ ನಿಮಗೆ ಅರ್ಥ ಆಗಿಲ್ಲ. ಎಲ್ಲರೂ ಸೇರಿಕೊಂಡು ರೈತರ ಕಥೆ ಮುಗಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ್ರು. ಆದರೆ ರಸ್ತೆ ತಡೆ ನಡೆಸೋದಕ್ಕೆ ತಮ್ಮ ಬೆಂಬಲ ಇಲ್ಲ. ಸೋಮವಾರ ಬಂದ್‍ಗೆ ನಮ್ಮ ಬೆಂಬಲ ಅಂತಾ ಹೇಳಿದರು.

    ಈ ಮಧ್ಯೆ ಬಿಜೆಪಿಯವರು ರೈತರನ್ನ ಮಾರಾಟ ಮಾಡ್ತಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹೀಗೆ ಮಾಡಲಾಗ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದರು. ಕೃಷಿ ಸಚಿವ ಬಿಸಿ ಪಾಟೀಲ್ ಮಾತನಾಡಿ, ಎಪಿಎಂಸಿ ಕಾಯಿದೆಯಿಂದ ಯಾವ ರೈತರಿಗೂ ನಷ್ಟ ಇಲ್ಲ ಅಂತಾ ಪುನರುಚ್ಛಿರಿಸಿದ್ರು. ರೈತರಿಗೆ ಅನ್ಯಾಯ ಆಗ್ತಿದೆ ಅಂದ್ರೆ ಅದು ಯಾವ ರೀತಿ ಅಂತಾ ಕಾಂಗ್ರೆಸ್‍ನವರು ಹೇಳಲಿ. ಕಾಂಗ್ರೆಸ್‍ಗೆ ಹೆದರಿಕೊಂಡು ಕೂರೋಕೆ ಆಗುತ್ತಾ? ಅವ್ರು ಹೇಳಿದಂತೆ ಕೇಳಿಕೊಂಡು ಸರ್ಕಾರ ನಡೆಸೋಕೆ ಆಗಲ್ಲ ಅಂತಾ ಗರಂ ಆದರು.

  • ಕೃಷ್ಣಾ ನದಿಗೆ 1.82 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ರಾಯಚೂರಿನ ಶೀಲಹಳ್ಳಿ ಸೇತುವೆ ಮುಳುಗಡೆ

    ಕೃಷ್ಣಾ ನದಿಗೆ 1.82 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ರಾಯಚೂರಿನ ಶೀಲಹಳ್ಳಿ ಸೇತುವೆ ಮುಳುಗಡೆ

    ರಾಯಚೂರು: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಪ್ರವಾಹ ಭೀತಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.

    ನಾರಾಯಣಪುರದ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ ಕೃಷ್ಣಾ ನದಿಗೆ 1 ಲಕ್ಷ 82 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ಯರಗೋಡಿ, ಹಂಚಿನಾಳ, ಕಡದರಗಡ್ಡಿ, ಯಳಗುಂದಿ, ಶೀಲಹಳ್ಳಿ ಮಾರ್ಗ ಕಡಿತವಾಗಿದೆ. ಅಲ್ಲದೇ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

    ಇನ್ನೂ ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆಗೆ ಕೆಲವೇ ಅಡಿ ಬಾಕಿಯಿದ್ದು, ಈಗಾಗಲೇ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ರಾಯಚೂರು-ಕಲಬುರಗಿ ನಡುವಿನ ಸಂಪರ್ಕ ಸೇತುವೆ ಮುಳುಗಡೆ ಭೀತಿಯಿಂದ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ.

    ನದಿ ದಡದಲ್ಲಿನ ಗಡ್ಡಿಗೂಳಿ ಬಸವಣ್ಣ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. 2.5 ಲಕ್ಷ ಕ್ಯೂಸೆಕ್ ನೀರಿಗೆ ಸೇತುವೆ ಮುಳುಗಡೆಯಾಗಲಿದೆ. ಸದ್ಯ 1 ಲಕ್ಷ 82 ಸಾವಿರ ಕ್ಯೂಸೆಕ್ ನೀರನ್ನು ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಬಿಡಲಾಗುತ್ತಿದ್ದು, ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ. ಹೀಗಾಗಿ ಕೃಷ್ಣಾ ಜಲಾನಯನ ಪ್ರದೇಶದ ಗ್ರಾಮಗಳಲ್ಲಿ ಪ್ರವಾಹ ಆತಂಕ ಹೆಚ್ಚಾಗಿದೆ.

  • ಮಹಾ ಮಳೆಗೆ ರಸ್ತೆ ಬಂದ್: ಮಂಗಳೂರು-ಬೆಂಗಳೂರು ವಿಮಾನದಲ್ಲಿ ಹೋಗೋಕೆ ಕನಿಷ್ಠ 10 ಸಾವಿರ ರೂ.!

    ಮಹಾ ಮಳೆಗೆ ರಸ್ತೆ ಬಂದ್: ಮಂಗಳೂರು-ಬೆಂಗಳೂರು ವಿಮಾನದಲ್ಲಿ ಹೋಗೋಕೆ ಕನಿಷ್ಠ 10 ಸಾವಿರ ರೂ.!

    ಮಂಗಳೂರು: ಮಳೆಯಿಂದ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರಸ್ತೆ ಮಾರ್ಗಗಳೆಲ್ಲಾ ಬಹುತೇಕ ಬಂದ್ ಆಗಿದ್ದರೆ, ಇದರ ಸಂಪೂರ್ಣ ಲಾಭ ಪಡೆಯಲು ವಿಮಾನಯಾನ ಕಂಪೆನಿಗಳು ಮುಂದಾಗಿವೆ. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಇರುವ ದರಕ್ಕಿಂತ ದುಪ್ಪಟ್ಟು – ಮೂರು ಪಟ್ಟು ದರವನ್ನು ನಿಗದಿಗೊಳಿಸಿ ವಿಮಾನಯಾನ ಸಂಸ್ಥೆಗಳು ಗ್ರಾಹಕರನ್ನು ಪೀಡಿಸುತ್ತಿವೆ.

    ಸಾಮಾನ್ಯ ದಿನಗಳಲ್ಲಿ 1,500 ರೂ.ಗಳಿಂದ 4 ಸಾವಿರ ರೂ.ವರೆಗೆ ಇರುವ ಮಂಗಳೂರು-ಬೆಂಗಳೂರು ವಿಮಾನದಲ್ಲಿ ಈಗ ನೀವು ಪ್ರಯಾಣಿಸಬೇಕು ಎಂದರೆ ಕನಿಷ್ಠ 10 ಸಾವಿರ ರೂ. ನೀಡಲೇಬೇಕಾದಂತಹ ಅನಿವಾರ್ಯ ಸ್ಥಿತಿಗೆ ತಲುಪಿದೆ. ಇಂದು ಕೆಲವು ಕಂಪೆನಿಗಳು 14,700 ರೂ.ಗೆ ಟಿಕೆಟ್ ನೀಡಿದೆ ಎನ್ನುವುದು ಸದ್ಯಕ್ಕೆ ಬಂದಿರುವ ಲೇಟೆಸ್ಟ್ ನ್ಯೂಸ್.

    ಕರಾವಳಿ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಬೆಂಗಳೂರು, ಮಂಗಳೂರು ನಡುವಿನ ಶಿರಾಡಿ ಘಾಟ್, ಮಾಣಿಘಾಟ್ – ಮೈಸೂರು ಮಾರ್ಗದ ಹೆದ್ದಾರಿ ಹಾಗೂ ರೈಲು ಮಾರ್ಗ ಬಂದ್ ಆಗಿದೆ. ಅಲ್ಲದೇ ಈ ಮಾರ್ಗಗಳ ಮೂಲಕ ಪ್ರಯಾಣಿಸುವುದು ಕಷ್ಟ ಸಾಧ್ಯವಾಗಿದ್ದು, ಇದರಿಂದ ಹೆಚ್ಚಿನ ಮಂದಿ ವಿಮಾನದಲ್ಲಿ ಪ್ರಯಾಣಿಸಲು ಬೇಡಿಕೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರ ಏರಿಕೆ ಮಾಡಿವೆ. ದಿನಂಪ್ರತಿ ಸಾವಿರಾರು ಪ್ರಯಾಣಿಕರು ಈ ಮಾರ್ಗದಲ್ಲಿ ವಿಮಾನ ಪ್ರಯಾಣ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ 

    ಒಂದು ದಿನ ಮುಂಚೆಯೇ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವವರಿಗೆ ಏಕಮುಖ ಸಂಚಾರಕ್ಕೆ 1,500 ರೂ. ದರ ನಿಗದಿ ಮಾಡಲಾಗಿದೆ. ಆದರೆ ತಕ್ಷಣದಲ್ಲಿ ಪ್ರಯಾಣ ಮಾಡಲು ಟಿಕೆಟ್ ಬುಕ್ ಮಾಡಬೇಕಾದರೆ ಅನಿವಾರ್ಯವಾಗಿ ಅಧಿಕ ಮೊತ್ತ ನೀಡಬೇಕಿದೆ. ಸಾಮಾನ್ಯವಾಗಿ ಮಂಗಳೂರು ಹಾಗೂ ಬೆಂಗಳೂರು ನಡುವೆ ವಾರದ ರಜಾ ದಿನಗಳ ಅವಧಿಯಲ್ಲಿ ಮಾತ್ರ ಟಿಕೆಟ್ ದರ 5 ಸಾವಿರ ರೂ.ಗೆ ಹೆಚ್ಚಳವಾಗುವುದು ಈ ಹಿಂದೆ ಸಾಮಾನ್ಯವಾಗಿತ್ತು. ಇದನ್ನೂ ಓದಿ:  ಚಾರ್ಮಾಡಿ ಘಾಟಿಯಲ್ಲಿ ಕಂಟೈನರ್ ಪಲ್ಟಿ: ಭಾರೀ ಟ್ರಾಫಿಕ್ ಜಾಮ್ 

    ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‍ನ ಹಲವು ಕಡೆ ಮಳೆಗೆ ಭೂ ಕುಸಿತ ಘಟನೆಗಳು ವರದಿಯಾಗಿದ್ದು, ಆಗಸ್ಟ್ 20ರವರೆಗೆ ಲಘು ವಾಹನಗಳ ಸಂಚಾರ ಹಾಗೂ 25ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣಿನ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದಕ್ಕಾಗಿ ಹತ್ತು ದಿನಗಳ ಕಾಲ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ಆಗಸ್ಟ್ 20ರವರೆಗೆ ಎಲ್ಲಾ ವಾಹನ ಹಾಗೂ ಆಗಸ್ಟ್ 25 ರವರೆಗೆ ರಾಷ್ಟ್ರೀಯ ಹೆದ್ದಾರಿ-75 ಶಿರಾಡಿಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.  ಇದನ್ನೂ ಓದಿ:  ಶಿರಾಡಿ ಘಾಟ್‍ ನಲ್ಲಿ ಆ.23ರವರೆಗೆ ಲಘುವಾಹನ, ಆ.25 ವರೆಗೆ ಭಾರೀ ವಾಹನಗಳ ಸಂಚಾರ ನಿರ್ಬಂಧ

  • ಮನೆಗೆ ಮಳೆ ನೀರು ನುಗ್ಗಿತೆಂದು UPS ಆಫ್ ಮಾಡಲು ಹೋಗಿ ಮಹಿಳೆ ಸಾವು

    ಮನೆಗೆ ಮಳೆ ನೀರು ನುಗ್ಗಿತೆಂದು UPS ಆಫ್ ಮಾಡಲು ಹೋಗಿ ಮಹಿಳೆ ಸಾವು

    ಬೆಂಗಳೂರು: ಕಳೆದ ರಾತ್ರಿ ಸುರಿದ ಭಾರೀ ಮಳೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ವಿದ್ಯುತ್ ಶಾಕ್‍ನಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿದೆ.

    ಕೆ.ಆರ್.ಪುರ ಆರ್.ಎಂ.ಎಸ್ ಬಡಾವಣೆಯ ಮನೆಯೊಂದಕ್ಕೆ ನೀರು ನುಗ್ಗಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಮೀನಮ್ಮ ಎಂದು ಗುರುತಿಸಲಾಗಿದೆ. ಮನೆಗೆ ನೀರು ನುಗ್ಗಿದ ಸಂದರ್ಭದಲ್ಲಿ ಯುಪಿಎಸ್ ಸ್ವಿಚ್ ಆಫ್ ಮಾಡಲು ಹೋದಾಗ ಘಟನೆ ನಡೆದಿದೆ. ವಿಷಯ ತಿಳಿದ ಸ್ಥಳೀಯ ಶಾಸಕ ಬಿ.ಎ.ಬಸವರಾಜು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

    ಕೊಚ್ಚಿ ಹೋದ ಅಂಗಡಿಗಳು: ಭಾರೀ ಮಳೆಯಿಂದ ನೆಲಮಂಗಲ ತಾಲೂಕಿನ ಅಮಾನಿಕೆರೆ, ಬಿನ್ನಮಂಗಲ, ದಾಸನಪುರ ಕರೆಗೆಗಳು ಭರ್ತಿಯಾಗಿದ್ದು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ. ರಸ್ತೆಯ ಮೇಲೆ ಸುಮಾರು ಮೂರು ಅಡಿ ನೀರು ನಿಂತಿದ್ದು, ನೀರಿನ ರಭಸಕ್ಕೆ ಹಲವು ಅಂಗಡಿಗಳು ಕೊಚ್ಚಿ ಹೋಗಿವೆ. ರಸ್ತೆ ದಾಟಲಾಗದೆ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋಮೀಟರ್‍ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸ್ಥಳೀಯ ಜನರು ತೆರವು ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ.

    ಗೋಡೆ ಕುಸಿತ: ಮಳೆಯ ಅರ್ಭಟಕ್ಕೆ ನೆಲಮಂಗಲ ಸಮೀಪದ ಹಿಮಾಲಯ ಡ್ರಗ್ ಕಂಪನಿಯ ಒಳ ಕಾಂಪೌಂಡ್ ಕುಸಿತವಾಗಿದೆ. ಬಿನ್ನಮಂಗಲ ಕೆರೆ ಕೋಡಿ ಒಡೆದ ಪರಿಣಾಮ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಿಂದ ಕಂಪನಿಯ ಒಳಗೆ ನೀರು ಹರಿದುಬಂದಿದೆ. ಕಂಪನಿಯ ಕೆಲವು ಸ್ಥಳಗಳು ಜಲಾವೃತಗೊಂಡಿದೆ.