Tag: ಹೆಣ್ಣೂರು ಪೊಲೀಸ್ ಠಾಣೆ

  • ಹಣ ಕೇಳಿದ್ರೆ ರೇಪ್ ಮಾಡೋದಾಗಿ ಬೆದರಿಕೆ – ನೆರೆಯವನೆಂದು ನಂಬಿ 3.71 ಲಕ್ಷ ಸಾಲ ಕೊಡಿಸಿದ್ದವಳಿಗೆ ವಂಚನೆ

    ಹಣ ಕೇಳಿದ್ರೆ ರೇಪ್ ಮಾಡೋದಾಗಿ ಬೆದರಿಕೆ – ನೆರೆಯವನೆಂದು ನಂಬಿ 3.71 ಲಕ್ಷ ಸಾಲ ಕೊಡಿಸಿದ್ದವಳಿಗೆ ವಂಚನೆ

    – ನನ್ನ ಜೊತೆ ಮಲಗು ಇಲ್ಲದಿದ್ದರೆ ಗೂಂಡಾಗಳಿಂದ ರೇಪ್ ಮಾಡಿಸುವುದಾಗಿ ಬೆದರಿಸಿದ್ದ ಕಿಡಿಗೇಡಿ

    ಬೆಂಗಳೂರು: ಕಷ್ಟದಲ್ಲಿದ್ದ ನೆರೆಯವನನ್ನು ನಂಬಿ 3.71 ಸಾಲ ಕೊಡಿಸಿದ್ದವಳಿಗೆ ವಂಚಿಸಿ, ಹಣ ವಾಪಸ್ ಕೇಳಿದರೆ ರೇಪ್ ಮಾಡ್ತೀನಿ ಎಂದು ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಘಟನೆ ಹೆಣ್ಣೂರು (Hennuru) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಆರೋಪಿಯನ್ನು ಚಾರ್ಲ್ಸ್ ರಿಚರ್ಡ್ಸ್ ಎಂದು ಗುರುತಿಸಲಾಗಿದೆ. ನೆರೆಯವನೆಂದು ನಂಬಿ ಓರ್ವ ಯುವತಿ 3.71 ಲಕ್ಷ ಸಾಲ ಮಾಡಿಸಿಕೊಟ್ಟಿದ್ದು, ಬಳಿಕ ಹಣ ವಾಪಸ್ ಕೇಳಿದಾಗ ವಂಚಿಸಿದ್ದಲ್ಲದೇ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿದುಬಂದಿದೆ.ಇದನ್ನೂ ಓದಿ: ಕಾರವಾರ| ಬೆಣ್ಣೆಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

    ಹೌದು, ಓರ್ವ ಯುವತಿಗೆ ಪಕ್ಕದ ಮನೆಯವನೊಬ್ಬ ಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡು ಆಕೆಯ ಹೆಸರಿನಲ್ಲಿ 3.71 ಲಕ್ಷ ರೂ. ಸಾಲ ಮಾಡಿಸಿದ್ದಾನೆ. ಅದರಲ್ಲಿ 2.71 ಲಕ್ಷ ರೂ.ಯನ್ನು ಪಡೆದು, ಇಎಂಐ ಮೂಲಕ ಹಣ ಮರುಪಾವತಿ ಮಾಡುವುದಾಗಿ ತಿಳಿಸಿದ್ದಾನೆ. ಮೊದಲೆರಡು ತಿಂಗಳು ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಿ, ಬಳಿಕ ಅಸಲಿ ಆಟ ಶುರು ಮಾಡಿಕೊಂಡಿದ್ದಾನೆ.

    ಮರುಪಾವತಿ ಮಾಡದೇ ಇದ್ದಾಗ ಯುವತಿ ಆತನ ಬಳಿ ಹಣ ಕೇಳಿದಾಗ ಬೆದರಿಕೆ ಹಾಕಿದ್ದಾನೆ. ಹಣ ಕೇಳಿದ್ರೆ ರೇಪ್ ಮಾಡ್ತೀನಿ. ನನ್ನ ಜೊತೆ ದೈಹಿಕ ಸಂಬಂಧ ಬೆಳೆಸುವವರೆಗೂ ಇಎಂಐ ಕಟ್ಟಲ್ಲ ಎಂದಿದ್ದಾನೆ. ಜೊತೆಗೆ ಇನ್‌ಸ್ಟಾದಲ್ಲಿ ಯುವತಿಯ ಫೋಟೋ ತೆಗೆದು ಮಾರ್ಫ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೇ ನೀನು ನನ್ನ ಜೊತೆ ಮಲಗಬೇಕು. ಇಲ್ಲಂದ್ರೆ ಹಣ ವಾಪಸ್ ಕೊಡಲ್ಲ. ಗೂಂಡಾಗಳಿಂದ ರೇಪ್ ಮಾಡಿಸುತ್ತೇನೆ ಅಂತ ನಿರಂತರವಾಗಿ ಹೆದರಿಸಿದ್ದಾನೆ.

    ಕಿರುಕುಳ ತಾಳಲಾರದೇ ಯುವತಿ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಚಾರ್ಲ್ಸ್ ರಿಚರ್ಡ್ ಹಾಗೂ ಆ್ಯಂಡ್ರೂ ಅಗಾಸಿ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: 3ನೇ ಪತ್ನಿಯಿಂದ ಬರ್ಬರ ಹತ್ಯೆಗೀಡಾದ ಪತಿ – ಮೃತದೇಹನ ಕಂಬಳಿಯಲ್ಲಿ ಸುತ್ತಿ ಬಾವಿಗೆ ಎಸೆದ್ರು

  • ನನಗೆ ನೀನು ಬೇಕು ಬಾ ಎಂದ ಇನ್ಸ್‌ಪೆಕ್ಟರ್ ವಿರುದ್ಧವೇ ದೂರು

    ನನಗೆ ನೀನು ಬೇಕು ಬಾ ಎಂದ ಇನ್ಸ್‌ಪೆಕ್ಟರ್ ವಿರುದ್ಧವೇ ದೂರು

    ಬೆಂಗಳೂರು: ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲು ಹೋದವರಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕಿರುಕುಳ ನೀಡಿದ ಘಟನೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಸಂತಕುಮಾರ್ ಆರೋಪಿ. ಹೆಣ್ಣೂರಿನ ಶಕ್ತಿ ನಗರ ನಿವಾಸಿಯೊಬ್ಬರು ತಮ್ಮ ಮನೆಯನ್ನು ಕೆಲ ವರ್ಷಗಳ ಹಿಂದೆ ವರಲಕ್ಷ್ಮಿಗೆ ಲೀಸ್ ನೀಡಿದ್ದರು. ಲೀಸ್ ಹಣವಾಗಿ 7 ಲಕ್ಷ ರೂ. ಹಣವನ್ನು ಪಡೆದಿದ್ದರು. ಆದರೆ ನೀರಿನ ಬಿಲ್ ಮಾತ್ರ 1 ವರ್ಷದಿಂದ ಕಟ್ಟಿರಲಿಲ್ಲ. ವಾಟರ್ ಬಿಲ್ ಕೇಳಲು ಮನೆ ಮಾಲೀಕರಾದ ಸಂತ್ರಸ್ತೆ ಹೋಗಿದ್ದರು.

    ಈ ವೇಳೆ ಗಲಾಟೆ ತೆಗೆದು ವರಲಕ್ಷ್ಮೀ ಹಾಗೂ ಅವರ ಗುಂಪು ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಕು ಹಾಕಿ, ಕೈ ಮುರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿಗಳಿಂದ ಸಂತ್ರಸ್ತೆ ತಪ್ಪಿಸಿಕೊಂಡು ಬಂದಿದ್ದಾರೆ.

    ನೊಂದ ಸಂತ್ರಸ್ತೆ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದು ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ಹೋದರೆ, ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ. ಬದಲಿಗೆ ಇನ್ಸ್‌ಪೆಕ್ಟರ್ ವಸಂತ ಕುಮಾರ್ ದುರ್ವತನೆ ತೋರಿದ್ದಾರೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

    POLICE JEEP

    ಮಹಿಳೆ ಅನ್ನೋದು ನೋಡದೇ ಅಸಭ್ಯವಾಗಿ ವರ್ತಿಸಿದ್ದಾರೆ. ಜೊತೆಗೆ ನನಗೆ ನೀನು ಬೇಕು ಬಾ ಎಂದು ಅಸಭ್ಯ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನೊಂದ ಮಹಿಳೆ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಘಟನೆ ಕುರಿತು ನ್ಯಾಯಕ್ಕಾಗಿ ನೊಂದ ಮಹಿಳೆ ಅಲೆಯುತ್ತಿದ್ದಾಳೆ. ಇದನ್ನೂ ಓದಿ:  ಗಾಂಜಾ ಮಾರುತ್ತಿದ್ದ ಪೊಲೀಸರನ್ನು ಅರೆಸ್ಟ್ ಮಾಡಿದ್ದ ಇನ್‌ಸ್ಪೆಕ್ಟರ್ ಸಸ್ಪೆಂಡ್