Tag: ಹೆಣ್ಣು ಮಗು

  • ಆಪರೇಷನ್ ಸಿಂಧೂರ ದಿನವೇ ಹೆಣ್ಣು ಮಗು ಜನನ – ‘ಸಿಂಧೂರ’ ಎಂದು ಹೆಸರಿಟ್ಟ ಪೋಷಕರು

    ಆಪರೇಷನ್ ಸಿಂಧೂರ ದಿನವೇ ಹೆಣ್ಣು ಮಗು ಜನನ – ‘ಸಿಂಧೂರ’ ಎಂದು ಹೆಸರಿಟ್ಟ ಪೋಷಕರು

    ಪಾಟ್ನಾ: ಪಾಕಿಸ್ತಾನದ ಮೇಲೆ ಭಾರತ ‘ಆಪರೇಷನ್ ಸಿಂಧೂರ’ (Operation Sindoor) ನಡೆಸಿದ್ದು ಭಾರತದ ಪಾಲಿಗೆ ಐತಿಹಾಸಿಕ ದಿನ. ಇದೀಗ ಆಪರೇಷನ್ ಸಿಂಧೂರದಿಂದ ಪ್ರೇರಿತರಾದ ಬಿಹಾರದ (Bihar) ದಂಪತಿ ತಮ್ಮ ನವಜಾತ ಹೆಣ್ಣು ಮಗುವಿಗೆ `ಸಿಂಧೂರ’ ಎಂದು ಹೆಸರಿಟ್ಟಿದ್ದಾರೆ.

    ಭಾರತೀಯ ಸೇನೆ ಪಾಕಿಸ್ತಾನದಲ್ಲಿ ‘ಆಪರೇಷನ್ ಸಿಂಧೂರ’ ಪ್ರಾರಂಭಿಸಿದ ದಿನವೇ ಬಿಹಾರದ ಕತಿಹಾರ್‌ನಲ್ಲಿರುವ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ಜನಿಸಿದೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ದಿನವೇ ಜನಿಸಿದ ಹಿನ್ನೆಲೆ ‘ಸಿಂಧೂರ’ ಎಂದು ಹೆಸರಿಟ್ಟು ಗೌರವ ಸಮರ್ಪಣೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಭಾರತದಿಂದ ದಾಳಿ ಭೀತಿ – ಊರುಬಿಟ್ಟ ಮುಜಾಫರಾಬಾದ್ ಜನತೆ

    ತನ್ನ ಮಗುವಿಗೆ ‘ಸಿಂಧೂರ’ ಎಂದು ಹೆಸರಿಡೋದಕ್ಕೆ ಭಾರತೀಯ ಸೇನೆಯ ಆಪರೇಷನ್ ಸಿಂಧೂರವೇ ನನಗೆ ಪ್ರೇರಣೆ ಎಂದು ತಂದೆ ಭಾವುಕರಾಗಿದ್ದಾರೆ. ಇದನ್ನೂ ಓದಿ: ಉಗ್ರರ ನೆಲೆಗಳ ಮೇಲೆ ಬಿದ್ದ ಸೂಸೈಡ್‌ ಡ್ರೋನ್‌ಗಳು ತಯಾರಾಗಿದ್ದು ಬೆಂಗಳೂರಿನಲ್ಲಿ!

  • 14,000 ರೂ. ಹಣಕ್ಕೆ ಹೆಣ್ಣು ಮಗು ಮಾರಾಟಕ್ಕೆ ಯತ್ನ

    14,000 ರೂ. ಹಣಕ್ಕೆ ಹೆಣ್ಣು ಮಗು ಮಾರಾಟಕ್ಕೆ ಯತ್ನ

    ಮೈಸೂರು: ಹೆಣ್ಣು ಮಗುವನ್ನು 14,000 ರೂ.ಗೆ ಮಾರಾಟ ಮಾಡಿರುವ ಆರೋಪವೊಂದು ಮೈಸೂರು (Mysuru) ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠ ನಗರದಲ್ಲಿ ಕೇಳಿಬಂದಿದೆ.

    ದಂಪತಿಗೆ ಹುಟ್ಟಿದ ಮೂರು ಮಕ್ಕಳೂ ಕೂಡ ಹೆಣ್ಣಾದ ಕಾರಣ ಮೂರನೇ ಮಗುವನ್ನ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಮತ್ತೆ ದರ ಏರಿಕೆ ಶಾಕ್‌ – ಎಸ್ಕಾಂ ಪಿಂಚಣಿ ಹಣ ಹೊಂದಿಸಲು ಜನರ ಜೇಬಿಗೆ ಕತ್ತರಿ

    ಗುಂಡ್ಲುಪೇಟೆ ನಿವಾಸಿಯೊಬ್ಬರಿಗೆ ಹೆಣ್ಣು ಮಗು ಮಾರಾಟ ಮಾಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಬಿಕಿನಿ ಧರಿಸಿ ಹಾಟ್ ಅವತಾರ ತಾಳಿದ ‘ಬಿಗ್‌ ಬಾಸ್‌’ ಖ್ಯಾತಿಯ ಇಶಾನಿ

    ಮಗುವನ್ನ ಖರೀದಿ ಮಾಡಿದವರನ್ನು ಸಂಪರ್ಕಿಸಿದಾಗ 14,000 ರೂ.ಗೆ ಮಗು ಮಾರಾಟ ಮಾಡಿರುವುರು ಬೆಳಕಿಗೆ ಬಂದಿದೆ. ನಾವು ನೀಡಿದ ಹಣವನ್ನು ಹಿಂದಿರುಗಿಸಿದರೆ ಮಗು ಕೊಡುವುದಾಗಿ ಮಗು ಖರೀದಿ ಮಾಡಿದವರು ಹೇಳಿದ್ದರು. ಮೊದಲು ಮಗುವನ್ನ ತಂದು ಕೊಡಿ ನಂತರ ಹಣದ ವಿಚಾರ ಮಾತನಾಡೋಣ ಎಂದು ಹೇಳಿ ಮಗುವನ್ನು ವಾಪಸ್ ಪಡೆದುಕೊಂಡಿದ್ದರು. ಇದನ್ನೂ ಓದಿ: 2023-24ನೇ ಸಾಲಿನಲ್ಲಿ ಸಿಎಂ ಹೆಲಿಕಾಪ್ಟರ್ ಪ್ರಯಾಣಕ್ಕೆ 11 ಕೋಟಿ ಹಣ ಖರ್ಚು

    ಈವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಮಗುವನ್ನ ಮಾರಾಟ ಮಾಡಿದವರಾಗಲಿ, ಮಧ್ಯವರ್ತಿಯಾಗಲಿ ಅಥವಾ ಖರೀದಿಸಿದವರನ್ನಾಗಲಿ ವಶಕ್ಕೆ ಪಡೆದಿಲ್ಲ. ಕೇವಲ ಮಧ್ಯವರ್ತಿಗಳಂತೆ ವರ್ತಿಸಿ ಮಗುವನ್ನು ವಾಪಸ್ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

  • ಹೆಣ್ಣು ಮಗುವೆಂದು ಮಾತ್ರೆ ಸೇವಿಸಿ ಗರ್ಭಪಾತ-ಸ್ಕ್ಯಾನಿಂಗ್ ಸೆಂಟರ್ ಸೀಜ್

    ಹೆಣ್ಣು ಮಗುವೆಂದು ಮಾತ್ರೆ ಸೇವಿಸಿ ಗರ್ಭಪಾತ-ಸ್ಕ್ಯಾನಿಂಗ್ ಸೆಂಟರ್ ಸೀಜ್

    ಕೋಲಾರ: ಹೆಣ್ಣು ಮಗುವೆಂದು ಭಾವಿಸಿ, ಮಾತ್ರೆ ಸೇವಿಸಿ ಗಂಡು ಮಗುವಿನ ಗರ್ಭಪಾತವಾದ ಘಟನೆ ಕೋಲಾರ (Kolar) ಜಿಲ್ಲೆಯ ಮಾಲೂರು ನಗರದಲ್ಲಿ ನಡೆದಿದೆ.

    ಕೆಜಿಎಫ್ ತಾಲೂಕಿನ ಆಡಂಪಲ್ಲಿ ನಿವಾಸಿ ಮುರುಗೇಶ್ ಹಾಗೂ ಅನಿತಾ ದಂಪತಿಯ 3 ತಿಂಗಳ ಮಗು ಮೃತಪಟ್ಟಿದೆ.

    ನಡೆದಿದ್ದೇನು..?: ಕಳೆದ ಸೋಮವಾರ ದಂಪತಿ ಮಾಲೂರು ನಗರದ ಸಂಜನಾ ಖಾಸಗಿ ಆಸ್ಪತ್ರೆಗೆ ಸ್ಕ್ಯಾನಿಂಗ್ ಗೆಂದು ತೆರಳಿದ್ದರು. ಈ ಹಿಂದಿನ 2 ಮಕ್ಕಳು ಹೆಣ್ಣಾಗಿದ್ದು, ಮೂರನೇಯದ್ದು ಗಂಡು ಮಗುವಾಗಲಿ ಎಂದು ದಂಪತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಹೊಟ್ಟೆಯಲ್ಲಿರುವ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತನೆ ಮಾಡಿಸುವುದಾಗಿ ಹೇಳಿ ವೈದ್ಯರು ಮಾತ್ರೆಗಳನ್ನು ಕೊಟ್ಟಿದ್ದಾರೆ ಎಂದು ಇದೀಗ ಪೋಷಕರು ಆರೋಪ ಮಾಡುತ್ತಿದ್ದಾರೆ.

    ಹೆಣ್ಣು ಮಗುವೆಂದು ಸುಳ್ಳು ಹೇಳಿ 25 ಸಾವಿರ ಹಣ ಪಡೆದು ವಂಚಿಸಿದ್ದಾರೆಂದು ತಂದೆ ಮುರುಗೇಶ್ ಆರೋಪ ಮಾಡಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು, ನಾವು ಗರ್ಭಪಾತಕ್ಕೆ ಮಾತ್ರೆ ಕೊಟ್ಟೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಕೆಎಎಸ್ ಅಧಿಕಾರಿಯ ಪತ್ನಿ, ಹೈಕೋರ್ಟ್ ವಕೀಲೆ ಆತ್ಮಹತ್ಯೆ – ಕಾರಣ ನಿಗೂಢ!

    ಆಸ್ಪತ್ರೆಯಲ್ಲಿ ಭ್ರೂಣ ಲಿಂಗದ ಸ್ಕ್ಯಾನಿಂಗ್ ಮಾಡಿಸಿ ಸಾವಿರಾರು ಹಣ ಪೀಕುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಲೂರು ತಾಲೂಕು ವೈದ್ಯಾದಿಕಾರಿಗೆ ಮುರುಗೇಶ್ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದೆ. ಡಿಹೆಚ್‍ಓ ಜಗದೀಶ್ ನೇತೃತ್ವದಲ್ಲಿ ಮಾಲೂರು ಪಟ್ಟಣದ ಸಂಜನಾ ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದೆ.

    ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎರಡೂ ಹೆಣ್ಣುಮಗು ಅಂತ ಸಿಟ್ಟಿಗೆದ್ದ ಪತಿ- 2ನೇ ಮಗುವನ್ನು ಮಾರಲು ಮುಂದಾದ ಪಾಪಿ

    ಎರಡೂ ಹೆಣ್ಣುಮಗು ಅಂತ ಸಿಟ್ಟಿಗೆದ್ದ ಪತಿ- 2ನೇ ಮಗುವನ್ನು ಮಾರಲು ಮುಂದಾದ ಪಾಪಿ

    ಹಾವೇರಿ: ಅವರಿಬ್ಬರಿಗೂ ಮದುವೆಯಾಗಿ ಸುಮಾರು ಆರು ವರ್ಷ ಕಳೆದಿವೆ. ಅದರೆ ಆ ದಂಪತಿಗೆ ಮೊದಲ ಮಗು ಹೆಣ್ಣು, ಕಳೆದ ನಾಲ್ಕು ದಿನಗಳ ಹಿಂದೆ ಜನಿಸಿದ ಮಗು ಕೂಡಾ ಹೆಣ್ಣು. ಎರಡು ಮಕ್ಕಳು ಹೆಣ್ಣುಮಕ್ಕಳು ಹುಟ್ಟಿದ್ದಕ್ಕೆ, ಮಗುವನ್ನೇ ಕಿಡ್ನಾಪ್ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಪತಿ ಮಾಹಾಶಯ. ಪತಿ ಮಹಾಶಯನಿಂದ ಮಗುವನ್ನ ಕಾಪಾಡಿದ ಪತ್ನಿ ಪರಿಚಯಸ್ಥರ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿಸಿದ್ದಾನೆ. ಬಾಣಂತಿಯ ಮಹಿಳೆ ಹಸಗೂಸು ಕರೆದುಕೊಂಡು ಎಸ್‍ಪಿ ಕಚೇರಿಗೆ ಆಗಮಿಸಿದಳು.

    ಮೊದಲನೇಯದು ಹೆಣ್ಣು ಮಗು, ಎರಡನೇಯದು ಹೆಣ್ಣು ಮಗು ಅಂತ ಸಿಟ್ಟಿಗೆದ್ದ ಪಾಪಿ ಪತಿರಾಯ ಹಸುಗೂಸನ್ನೇ ಮಾರಾಟ ಮಾಡಲು ಮುಂದಾಗಿದ್ದಾನೆ. ಕಳೆದ 4 ದಿನಗಳ ಹಿಂದೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ ತಾಲೂಕು ಆಸ್ಪತ್ರೆಯಿಂದ ಬಾಣಂತಿ ಗೀತಾ ಪತಿ ಸಿದ್ದಲಿಂಗಪ್ಪ ಹಸುಗೂಸನ್ನ ಕಿಡ್ನಾಪ್ ಮಾಡಿ ಮಾರಲು ಯತ್ನಿಸಿದ್ದಾನೆ. ವಿಷಯ ತಿಳಿದ ಪತ್ನಿ ಹಸುಗೂಸು ಸಮೇತ ಅಂಬುಲೆನ್ಸ್ ನಲ್ಲಿ ಎಸ್‍ಪಿ ಕಚೇರಿಗೆ ಆಗಮಿಸಿ ಪತಿ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ:ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ- 44 ಯುವತಿಯರ ರಕ್ಷಣೆ

    ಮಗು ರಕ್ಷಿಸಿದವರ ವಿರುದ್ಧವೇ ಕಿಡ್ನಾಪ್ ದೂರು: ಮತ್ತೊಂದೆಡೆ ಹಸುಗೂಸನ್ನು ಮಾರಲು ಮುಂದಾಗಿದ್ದ ಸಿದ್ದಲಿಂಗಪ್ಪನ ಕೈಯಿಂದ ಪರಿಚಯಸ್ಥ ಯುವಕರು ಮಗುವನ್ನು ಕಾಪಾಡಿದ್ದರು. ಅವರ ವಿರುದ್ಧವೇ ಸಿದ್ಧಲಿಂಗಪ್ಪ ಕಿಡ್ನಾಪ್ ಆರೋಪ ಮಾಡಿ ದೂರು ನೀಡಿದ್ದಾನೆ. ಪ್ರಕರಣ ಸಂಬಂಧ ಓರ್ವ ಜೈಲುಪಾಲಾಗಿದ್ದಾನೆ. ಹೀಗಾಗಿ ಸಹಾಯ ಮಾಡಲು ಬಂದವರದ್ದು ತಪ್ಪಿಲ್ಲಾ ಅವರಿಕೇಗೆ ಶಿಕ್ಷೆ. ಅವರನ್ನು ಬಿಟ್ಬಿಡಿ. ನನ್ನ ಪತಿರಾಯನೆ ತನಗೆ ಹುಟ್ಟಿದ ಮಕ್ಕಳನ್ನ ಕದ್ದು ಮಾರಲು ಯತ್ನಿಸಿದ್ದಾನೆ. ಅವರಿಗೆ ಗಂಡು ಹುಟ್ಟಿಲ್ಲಾ ಎಂದು ಬೇಸರವಿದೆ. ಬೇರೆ ಮಹಿಳೆಯರ ಜೊತೆ ಅನೈತಿಕ ಸಂಬಂಧವಿದೆ ಅಂತ ಪತ್ನಿ ಗೀತಾ ಆರೋಪಿಸಿದ್ದಾರೆ.

    ಸದ್ಯ ಸಿದ್ದಲಿಂಗಪ್ಪ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಒಟ್ಟಿನಲ್ಲಿ ಎರಡು ಹೆಣ್ಣುಮಕ್ಕಳು ಜನಿಸಿದ ಕಾರಣಕ್ಕಾಗಿ ಪಾಪಿ ತಂದೆ ಮಗಳನ್ನ ಮಾರಾಟ ಮಾಡಲು ಮುಂದಾಗಿದ್ದು ದುರಂತವೇ ಸರಿ.

  • ಹೆಣ್ಣು ಮಗುವಿನ ತಾಯಿಯಾದ ‘ಕಾಮಿಡಿ ಕಿಲಾಡಿ’ ನಯನಾ

    ಹೆಣ್ಣು ಮಗುವಿನ ತಾಯಿಯಾದ ‘ಕಾಮಿಡಿ ಕಿಲಾಡಿ’ ನಯನಾ

    ಕಾಮಿಡಿ ಕಿಲಾಡಿಗಳು (Comedy Kiladigalu) ಖ್ಯಾತಿಯ ನಟಿ ನಯನಾ (Nayana) ಹೆಣ್ಣು ಮಗುವಿಗೆ (Baby girl) ಜನ್ಮ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನದಂದು ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ನಯನಾ, ಮಗುವಿಗೆ ನಿಮ್ಮ ಆಶೀರ್ವಾದವಿರಲಿ ಎಂದು ಕೋರಿದ್ದಾರೆ.

    ತೆರೆ ಮೇಲೆ ನಮ್ಮ ಮುಂದೆ ಪಾತ್ರಗಳಾಗಿ ಕಾಣುವ ನಮ್ಮನ್ನು ನಗಿಸುವ ನಮಗೆ ಮನರಂಜನೆ ನೀಡುವ ನಮ್ಮನ್ನು ಸಂತೋಷ ಪಡಿಸುವ ಕಲಾವಿದರು ಅದೆಷ್ಟೋ ಜನರು ತಮ್ಮ ಜೀವನದಲ್ಲಿ ಸಂತೋಷವನ್ನೇ ಕಂಡಿರೋದಿಲ್ಲ. ಅದರಲ್ಲೂ ಕಲಾವಿದನಾಗಿ ಸಿನಿಮಾಗಳಲ್ಲಿಯೋ ಅಥವಾ ಕಿರುತೆರೆಯಲ್ಲಿಯೋ ಒಂದು ಹಂತಕ್ಕೆ ಬಂದು ನಿಲ್ಲೋವಾಗ ನಿಜಕ್ಕೂ ಅದೆಷ್ಟೋ ಜನ ಅರ್ಧ ಪಯಣದಲ್ಲಿಯೇ ತಮ್ಮ ಜರ್ನಿಯನ್ನು ಮುಗಿಸಿ ಹೋಗಿಬಿಟ್ಟಿರುತ್ತಾರೆ. ಇನ್ನೂ ಕೆಲವರು ಎಲ್ಲಾ ಅಡೆತಡೆಗಳನ್ನು ದಾಟಿ ಯಶಸ್ಸನ್ನು ಕಾಣುತ್ತಾರೆ. ಆ ಸಾಲಿಗೆ ನಟಿ ನಯನಾ ಸೇರುತ್ತಾರೆ.

    ಹುಬ್ಬಳ್ಳಿಯ (Hubli) ಸಾಮಾನ್ಯ ಹುಡುಗಿ ನಯನಾ ಅವರು ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋ ಎಂಟ್ರಿ ಕೊಟ್ಟು ತಾವು ಎಂತಹ ಪ್ರತಿಭಾನ್ವಿತ ಕಲಾವಿದೆ ಎಂದು ತೋರಿಸಿಕೊಟ್ಟರು. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ರಂಜಿಸಿದ್ರು. ಕಾಮಿಡಿ ಮಾತ್ರವಲ್ಲ ಎಂತಹ ಪಾತ್ರಕ್ಕೂ ತಾನು ಸೈ ಅನ್ನೋದನ್ನ ಪ್ರೂವ್ ಮಾಡಿದ್ರು.

     

    ಕಳೆದ ಮೂರು ವರ್ಷಗಳ ಹಿಂದೆ ಶರತ್ (Sharath) ಎಂಬುವವರ ಜೊತೆ ನಯನಾ ಸರಳವಾಗಿ ಮದುವೆಯಾದರು. ಈಗ ಮೊದಲ ಮಗುವಿನ ಬರಮಾಡಿಕೊಂಡಿದ್ದಾರೆ. ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಈ ಹಿಂದೆ ಸಿಹಿ ಕಹಿ ಚಂದ್ರು ಅವರ ನಿರೂಪಣೆಯ ‘ಬೊಂಬಾಟ್ ಭೋಜನ’ ಕಾರ್ಯಕ್ರಮಕ್ಕೆ ನಟಿ ಎಂಟ್ರಿ ಕೊಟ್ಟಿದ್ದರು. ತಾಯಿಯಾಗುತ್ತಿರುವ ಸಂತಸವನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ನಟಿಯಗೆ ಶುಭಹಾರೈಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರಮಹಾಲಕ್ಷ್ಮಿ ಹಬ್ಬದಂದೇ ಯುವರಾಜ್ ಸಿಂಗ್ ಮನೆಗೆ ‘ಲಕ್ಷ್ಮಿ’ಯ ಆಗಮನ

    ವರಮಹಾಲಕ್ಷ್ಮಿ ಹಬ್ಬದಂದೇ ಯುವರಾಜ್ ಸಿಂಗ್ ಮನೆಗೆ ‘ಲಕ್ಷ್ಮಿ’ಯ ಆಗಮನ

    ನವದೆಹಲಿ: ವರಮಹಾಲಕ್ಷ್ಮಿ ಹಬ್ಬದಂದೇ (Varamahalakshmi Festival) ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‍ರೌಂಡರ್, ವಿಶ್ವಕಪ್ ವಿಜೇತ ತಂಡದ ಸದಸ್ಯ ಯುವರಾಜ್ ಸಿಂಗ್ (Yuvraj Singh) ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

    ಹೌದು, ಯುವಿ ಪತ್ನಿ ಹೇಜಲ್ ಕೀಚ್ (Hazel Keech) ಅವರು ಆಗಸ್ಟ್ 25ರಂದು (ಇಂದು) ಹೆಣ್ಣು ಮಗುವಿಗೆ (Girl Baby) ಜನ್ಮ ನೀಡಿದ್ದಾರೆ. ಈ ಮೂಲಕ ದಂಪತಿ ಹಬ್ಬದಂದೇ ಲಕ್ಷ್ಮಿಯನ್ನು ಸ್ವಾಗತಿಸಿದ್ದಾರೆ. ಈ ಸಂಬಂಧ ಸ್ವತಃ ಯುವಿ ಅವರೇ ತಮ್ಮ ಟ್ವಿಟ್ಟರ್ ಅಕೌಂಟ್‍ನಿಂದ ತಿಳಿಸಿದ್ದಾರೆ. ಪತ್ನಿ ಹಾಗೂ ಮಗುವಿನ ಜೊತೆಗಿನ ಫೋಟೋ ಶೇರ್ ಮಾಡಿ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ಫೋಟೋ ಜೊತೆಗೆ ನಿದ್ದೆಯಿಲ್ಲದ ರಾತ್ರಿಗಳು ಹೆಚ್ಚು ಸಂತೋಷಕರವಾಗಿದ್ದು, ನಮ್ಮ ಪುಟ್ಟ ರಾಜಕುಮಾರಿ ಔರಾಳನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಯುವಿ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಯುವರಾಜ್ ಸಿಂಗ್ ಹಾಗೂ ಹೇಜಲ್ ಕೀಚ್ ದಂಪತಿಗೆ ಈಗಾಗಲೇ ಒಂದೂವರೆ ವರ್ಷದ ಮಗನಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 6 ತಿಂಗಳ ಹೆಣ್ಣು ಮಗು ಕೊಳೆತ ಸ್ಥಿತಿಯಲ್ಲಿ ಪತ್ತೆ

    6 ತಿಂಗಳ ಹೆಣ್ಣು ಮಗು ಕೊಳೆತ ಸ್ಥಿತಿಯಲ್ಲಿ ಪತ್ತೆ

    ತಿರುವನಂತಪುರ: ಸುಮಾರು 6 ತಿಂಗಳ ಹೆಣ್ಣು ಮಗು (Girl Baby) ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೇರಳದ (Kerala) ತಿರುವಲ್ಲಾ ಬಳಿ ನಡೆದಿದೆ.

    ತಿರುವಲ್ಲಾ (Thiruvalla) ಬಳಿಯ ರಸ್ತೆ ಪಕ್ಕದ ಜೌಗು ಪ್ರದೇಶದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆ ಶನಿವಾರ ಸಂಜೆ ಸಮೀಪದ ಅಂಗಡಿಯ ಕೆಲಸದವರೊಬ್ಬರು ಇದರ ಮೂಲವನ್ನು ಹುಡುಕಿಕೊಂಡು ಹೋದಾಗ ಕೊಳೆತ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಫ್ರೀ ಚಿಕನ್ ಕೊಟ್ಟಿಲ್ಲವೆಂದು ಯುವಕನಿಗೆ ಚಪ್ಪಲಿಯೇಟು!

    ಈ ಕುರಿತು ಸ್ಥಳೀಯರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಮೃತದೇಹವು ಕೈಕಾಲುಗಳನ್ನು ಕಳೆದುಕೊಂಡಿದೆ. ಗುರುತಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಮುಖ ಕೊಳೆತಿದೆ ಎಂದರು. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮಧ್ಯರಾತ್ರಿ ಸಮೀಪದ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಇದನ್ನೂ ಓದಿ: ಉಡುಪಿ ಮಾದರಿ ಮತ್ತೊಂದು ಕೇಸ್‌; ಹಾಸ್ಟೆಲ್‌ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ

    ಅಸ್ವಾಭಾವಿಕ ಮತ್ತು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಘಟನೆಯ ಕುರಿತು ಮಾಹಿತಿ ಪಡೆಯುವ ಸಲುವಾಗಿ ಪೊಲೀಸರು ಆ ಪ್ರದೇಶದಲ್ಲಿನ ಅಂಗಡಿಗಳು ಮತ್ತು ಮನೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೌಟುಂಬಿಕ ದ್ವೇಷ – ಚಾಕುವಿನಿಂದ ಇರಿದು ನರ್ಸ್ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 4 ಲಕ್ಷಕ್ಕೆ 21 ದಿನದ ಹೆಣ್ಣು ಶಿಶುವನ್ನು ಮಾರಿದ ತಾಯಿ!

    4 ಲಕ್ಷಕ್ಕೆ 21 ದಿನದ ಹೆಣ್ಣು ಶಿಶುವನ್ನು ಮಾರಿದ ತಾಯಿ!

    ಕೋಲ್ಕತ್ತಾ: ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಜನ ಏನು ಮಾಡಲು ತಯಾರು ಇರುತ್ತಾರೆ. ಅಂತೆಯೇ ಇಲ್ಲೊಬ್ಬ ನಿರ್ದಯಿ ತಾಯಿ ತನ್ನ 21 ದಿನದ ಹೆಣ್ಣು ಮಗುವನ್ನು 4 ಲಕ್ಷಕ್ಕೆ ಮಾರಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಮಹಿಳೆಯನ್ನು ರೂಪಾಲಿ ಮೊಂಡಲ್ ಎಂದು ಗುರುತಿಸಲಾಗಿದೆ. ಈಕೆ ಇನ್ನೊಬ್ಬ ಮಹಿಳೆಗೆ 4 ಲಕ್ಷಕ್ಕೆ ತನ್ನ ಮಗಳನ್ನು ಮಾರಾಟ ಮಾಡಿದ್ದಾಳೆ. ರೂಪಾಲಿ ಮಗು ಮಾರಾಟ ಮಾಡಿದ ವಿಚಾರದ ಸಂಬಂಧ ಆನಂದಪುರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಸಂಬಂಧ ತನಿಖೆ ನಡೆಸಿದಾಗ ಸತ್ಯ ವಿಚಾರ ಬಯಲಿಗೆ ಬಂದಿದೆ.

    ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರು ರೂಪಾಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಸ್ಪಷ್ಟ ಕಾರಣ ಕೊಡುವಲ್ಲಿ ಎಡವಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಅನುಮಾನಗೊಂಡ ಪೊಲೀಸರು ರೂಪಾಲಿಯನ್ನು ಬಂಧಿಸಿದ್ದಾರೆ. ಬಳಿಕ ತನಿಕೆಗೆ ಒಳಪಡಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈಕೆಯ ಜೊತೆ ರೂಪ ದಾಸ್ ಹಾಗೂ ಸ್ವಪ್ನಾ ಸರ್ದಾರ್ ಎಂಬ ಇನ್ನಿಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಟೊಮೆಟೋ ಕಳ್ಳತನದ ವೇಳೆ ರೈತನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

    ರೂಪಾಲಿ ಅವರ ಪಕ್ಕದ ಮನೆಯವರಾದ ಪ್ರತಿಮಾ ಭುವಿನ್ಯಾ ಅವರ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ. ಆರೋಪಿಗಳ ಮೇಲೆ 317 (ಮಗುವನ್ನು ತ್ಯಜಿಸುವುದು), 370 (ಖರೀದಿ- ಮಾರಾಟ), 372 (ಅಪ್ರಾಪ್ತರ ಮಾರಾಟ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇಬ್ಬರೂ ಆರೋಪಿಗಳ ತೀವ್ರ ವಿಚಾರಣೆಯ ನಂತರ, ಅವರು ಮಿಡ್ನಾಪುರದ ಕಲ್ಯಾಣಿ ಗುಹಾ ಹೆಸರನ್ನು ಹೇಳಿದ್ದಾರೆ. ಹೀಗಾಗಿ ಪರ್ನಶ್ರ್ರೀ ಪೊಲೀಸ್ ಠಾಣೆಯ ಅಧಿಕಾರಿಗಳು ಗುಹಾನನ್ನು ಕೂಡ ಬಂಧಿಸಿದ್ದಾರೆ. ಇತ್ತ ಶಿಶುವನ್ನು ರಕ್ಷಣೆ ಮಾಡಿದ್ದು, ಶಿಶುಪಾಲನಾ ಘಟಕಕ್ಕೆ ಹಸ್ತಾಂತರಿಸಲಾಗಿದೆ. ಕಲ್ಯಾಣಿ ಗುಹಾಗೆ ಮದುವೆಯಾಗಿ 15 ವರ್ಷಗಳಾಗಿದ್ದು, ಮಕ್ಕಳಿಲ್ಲ. ಹೀಗಾಗಿ ಕಲ್ಯಾಣಿ ಮಗುವನ್ನು 4 ಲಕ್ಷ ಕೊಟ್ಟು ತೆಗೆದುಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗು ನನ್ನನ್ನೇ ಹೋಲುತ್ತಿದೆ: ಸಂಭ್ರಮ ಹಂಚಿಕೊಂಡ ನಟ ರಾಮ್ ಚರಣ್

    ಮಗು ನನ್ನನ್ನೇ ಹೋಲುತ್ತಿದೆ: ಸಂಭ್ರಮ ಹಂಚಿಕೊಂಡ ನಟ ರಾಮ್ ಚರಣ್

    ರೋಬ್ಬರಿ ಹನ್ನೊಂದು ವರ್ಷಗಳ ನಂತರ ತಂದೆಯಾಗಿದ್ದಾರೆ ತೆಲುಗು ನಟ ರಾಮ್ ಚರಣ್ (Ram Charan). ಉದ್ದೇಶ ಪೂರ್ವಕವಾಗಿಯೇ ಮಗು ಹೊಂದದಿರಲು ರಾಮ್ ಚರಣ್ ಮತ್ತು ಉಪಾಸನಾ ಸಂಕಲ್ಪ ಮಾಡಿದ್ದರು. ಕುಟುಂಬದವರ ಒತ್ತಡವಿದ್ದರೂ, ತಾವು ಹೊಂದಿದ್ದ ಸಂಕಲ್ಪವನ್ನು ಅವರು ಮುರಿದಿರಲಿಲ್ಲ. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಕುಟುಂಬದಲ್ಲಿ ಸಂಭ್ರಮ ಹೆಚ್ಚಿಸಿದ್ದಾರೆ ಉಪಾಸನಾ.

    ಇಂದು ಮಗುವನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ ರಾಮ್ ಚರಣ್. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಮ್ ಚರಣ್, ‘ಮಗುವನ್ನು ಮೊದಲ ಬಾರಿಗೆ ನೋಡಿದಾಗ ಆದ ಆನಂದವನ್ನು ಹೇಳಲು ಕಷ್ಟ. ಹೇಳಿದರೆ, ಅದು ಕೃತಕ ಅನಿಸಬಹುದು. ಅಷ್ಟೊಂದು ಸಂಭ್ರಮವನ್ನು ಮಗು ಕೊಟ್ಟಿದೆ’ ಎಂದು ಹೇಳಿದರು. ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ಮಗು ತಾಯಿಯನ್ನು ಹೋಲುತ್ತಾ? ಅಥವಾ ನಿಮ್ಮನ್ನು ಹೋಲುತ್ತಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ ಅದು ನನ್ನನ್ನೇ ಹೋಲುತ್ತದೆ’ ಎಂದು ಹೇಳಿ ಸಂಭ್ರಮಿಸಿದರು. ಮಗುವಿಗೆ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು. ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮಗುವಿಗೆ ಯಾವ ಹೆಸರನ್ನು (Name) ಇಡಬೇಕು ಎನ್ನುವ ಕುರಿತು ಚರ್ಚೆ ಮಾಡಿದ್ದಾರಂತೆ. ಅದನ್ನು ನಂತರ ಹೇಳುವೆ ಎನ್ನುವುದು ರಾಮ್ ಚರಣ್ ಮಾತು.

    ಜೂನ್ 20ರಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ (Upasana) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದರು. ಈ ದಂಪತಿಯ ಪುಟಾಣಿ ಮಗುವಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Photo, Viral) ಆಗಿತ್ತು. ಮಗುವಿಗೆ ಹಾರೈಕೆಯ ಮಹಾಪುರವೇ ಹರಿದು ಬಂದಿತ್ತು.

    ಎರಡು ವಾರಗಳ ಹಿಂದೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ.

  • ಮಗುವನ್ನು ಮನೆಗೆ ಕರೆತಂದ ನಟ ರಾಮ್ ಚರಣ್-ಉಪಾಸನಾ

    ಮಗುವನ್ನು ಮನೆಗೆ ಕರೆತಂದ ನಟ ರಾಮ್ ಚರಣ್-ಉಪಾಸನಾ

    ಮೂರು ದಿನಗಳ ಹಿಂದೆಯಷ್ಟೇ ನಟ ರಾಮ್ ಚರಣ್  (Ram Charan) ಅವರ ಪತ್ನಿ ಉಪಾಸನಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವನ್ನು ಮನೆಗೆ ಕರೆತರಲು ರಾಮ್ ಚರಣ್ ಕುಟುಂಬ ಕಾಯುತ್ತಿತ್ತು. ಇದೀಗ ಪತ್ನಿ ಮತ್ತು ಮಗುವನ್ನು ಮನೆಗೆ ಕರೆತಂದಿದ್ದಾರೆ ರಾಮ್ ಚರಣ್. ಮಗುವಿಗೆ ಹಾರೈಸಿದ ಎಲ್ಲರಿಗೂ ಇದೇ ಸಂದರ್ಭದಲ್ಲಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

    ಜೂನ್ 20ರಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ (Upasana) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದರು. ಈ ದಂಪತಿಯ ಪುಟಾಣಿ ಮಗುವಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Photo, Viral) ಆಗಿತ್ತು. ಮಗುವಿಗೆ ಹಾರೈಕೆಯ ಮಹಾಪುರವೇ ಹರಿದು ಬಂದಿತ್ತು.

    ಎರಡು ವಾರಗಳ ಹಿಂದೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ. ಇದನ್ನೂ ಓದಿ:‘ಕಾಂತಾರ’ 2ಗಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಶೆಟ್ಟಿ ಬ್ಯುಸಿ

    ಈ ಹಿಂದೆ ರಾಮ್ ಚರಣ್ ತೇಜ ಅವರ ಮೊದಲ ಮಗುವಿನ ಜನನ (Childbirth) ಯಾವ ದೇಶದಲ್ಲಿ ಆಗಲಿದೆ ಎನ್ನುವ ಕುರಿತು ಚರ್ಚೆ ನಡೆದಿತ್ತು. ಅಮೆರಿಕಾದಲ್ಲೇ ಅವರು ಮೊದಲ ಮಗುವಿನ ಜನನಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಆಗಿತ್ತು. ರಾಮ್ ಚರಣ್ ಪತ್ನಿ ಉಪಾಸನಾ ಅವರ ಸಲಹೆ ಮೇರೆಗೆ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಊಹಾಪೋಹಗಳಿಗೂ ಉಪಾಸನಾ ಉತ್ತರಿಸಿದ್ದರು.

    ರಾಮ್ ಚರಣ್ ಪತ್ನಿ ಉಪಾಸನಾ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ‘ಅಮೆರಿಕಾದಲ್ಲಿ ಹೆರಿಗೆಗೆ ತಯಾರಿ ಮಾಡಿಕೊಂಡಿದ್ದೇವೆ ಎನ್ನುವ ಸುದ್ದಿ ಸುಳ್ಳು. ಅದು ಯಾಕೆ ಈ ರೀತಿ ಹಬ್ಬಿತೋ ಗೊತ್ತಿಲ್ಲ. ನಮ್ಮ ಮಗುವಿನ ಜನನ ಭಾರತದಲ್ಲೇ ಆಗಲಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದಿದ್ದಾರೆ. ಭಾರತದಲ್ಲೇ ನಮ್ಮ ಮಗು ಜನಿಸಲಿದೆ ಎಂದು ಅವರು ತಿಳಿಸಿದ್ದರು.

     

    ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಡವಾಗಿ ಮಗು ಮಾಡಿಕೊಳ್ಳಲು ನಿರ್ಧರಿಸಿದ್ದರು. ಹಲವು ವರ್ಷಗಳ ನಂತರ ಉಪಾಸನಾ ಮಡಿಲಿಗೆ ಮಗು ಬರುತ್ತಿದೆ. ಹಾಗಾಗಿ ಸಹಜವಾಗಿಯೇ ದೊಡ್ಡ ಆಸ್ಪತ್ರೆಯಲ್ಲೇ ಮಗುವಿನ ಜನನ ಆಗಲಿದೆ ಎಂದು ಊಹಿಸಲಾಗಿತ್ತು. ಅಮೆರಿಕಾ ವೈದ್ಯರ ಬಗ್ಗೆ ರಾಮ್ ಚರಣ್ ಮಾತನಾಡಿದ್ದರಿಂದ, ಅಮೆರಿಕಾದಲ್ಲಿ ಮಗುವಿನ ಜನನ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಇದೆಲ್ಲದಕ್ಕೂ ಉಪಾಸನಾ ಪ್ರತಿಕ್ರಿಯಿಸಿದ್ದಾರೆ. ಕೊನೆಗೂ ತಮ್ಮದೇ ಆಸ್ಪತ್ರೆಯಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದರು.