Tag: ಹೆಣ್ಣು ಮಕ್ಕಳು

  • ಗಂಡು ಮಕ್ಕಳಾಗದಕ್ಕೆ ಮೂವರು ಹೆಣ್ಣು ಮಕ್ಕಳನ್ನ ಬಾವಿಗೆ ತಳ್ಳಿ, ತಾಯಿ ಆತ್ಮಹತ್ಯೆ

    ಗಂಡು ಮಕ್ಕಳಾಗದಕ್ಕೆ ಮೂವರು ಹೆಣ್ಣು ಮಕ್ಕಳನ್ನ ಬಾವಿಗೆ ತಳ್ಳಿ, ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಗಂಡು ಮಕ್ಕಳಾಗಲಿಲ್ಲ ಎನ್ನುವ ಕೊರಗಿನಿಂದ ತಾಯಿ ತನ್ನ ಮೂವರು ಹೆಣ್ಣು ಮಕ್ಕಳನ್ನ ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಾಕಲಚಿಂತೆ ಗ್ರಾಮದಲ್ಲಿ ನಡೆದಿದೆ.

    ತಾಯಿ ನಾಗಶ್ರೀ (30) ಮಕ್ಕಳಾದ ನವ್ಯಶ್ರೀ (6) ದಿವ್ಯಶ್ರೀ (3) ಹಾಗೂ ಮೂರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದವರು. ಮೃತ ನಾಗಶ್ರೀ ಹಾಗೂ ಗಂಗರಾಜು ದಂಪತಿ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ ಮೂವರು ಹೆಣ್ಣು ಮಕ್ಕಳು ಜನಿಸಿದ್ದರು.

    ಆದರೆ ನಮ್ಮ ಸಂಸಾರಕ್ಕೆ ಗಂಡು ಮಕ್ಕಳಾಗಿಲ್ಲ ಎಂದು ಕೊರಗುತ್ತಿದ್ದ ನಾಗಶ್ರೀ ಇಂದು ಗ್ರಾಮದ ಹೊರವಲಯದ ಬಾವಿಗೆ ತನ್ನ ಮೂವರು ಮಕ್ಕಳನ್ನ ತಳ್ಳಿ ತಾನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗುಜರಾತ್ ನಲ್ಲಿ ಅಗ್ನಿ ಅವಘಡ- ಮೂವರು ಬಾಲಕಿಯರ ಸಾವು, 15 ಮಂದಿಗೆ ಗಾಯ

    ಗುಜರಾತ್ ನಲ್ಲಿ ಅಗ್ನಿ ಅವಘಡ- ಮೂವರು ಬಾಲಕಿಯರ ಸಾವು, 15 ಮಂದಿಗೆ ಗಾಯ

    ಅಹಮದಾಬಾದ್: ಅಗ್ನಿ ಅವಘಡದಲ್ಲಿ ಮೂವರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಗುಜರಾತ್‍ನ ರಾಜ್‍ಕೊಟ್‍ನಲ್ಲಿನ ಪ್ರಾನ್ಸಲಾ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಯೋಜನಗೆಗೊಂಡಿದ್ದ ಸ್ವಾಮಿ ಧರ್ಮಬಂಧು ಅವರ ರಾಷ್ಟ್ರಕಥಾ ಶಿಬಿರದ ಸಂದರ್ಭದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಪರಿಣಾಮ ಶಿಬಿರಲ್ಲಿ ಪಾಲ್ಗೊಂಡಿದ್ದ ಮೂವರು ಹೆಣ್ಣು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 15 ಮಂದಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಗ್ನಿ ದುರಂತದ ಮಾಹಿತಿ ಪಡೆಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಈ ಶಿಬಿರದಲ್ಲಿ ಹಲವು ಮಂದಿ ಎನ್‍ಆರ್‍ಐಗಳು ಕೂಡ ಪಾಲ್ಗೊಂಡಿದ್ದರು. ಘಟನೆಯ ಬಳಿಕ ಸುಮಾರು 500 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ.

    ಇಂತಹ ಶಿಬಿರಗಳನ್ನು ಆಯೋಜಿಸುವ ಮೊದಲು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆದ್ರೆ ಈ ಶಿಬಿರವನ್ನು ಆಯೋಜನೆ ಮಾಡುವಾಗ ಆಯೋಜಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಇನ್ನು ಘಟನೆಯ ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್‍ಪಿ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

    ಅಗ್ನಿ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಆದ್ರೆ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

    ಇನ್ನೊಂದು ಅಗ್ನಿ ದುರಂತ ಪ್ರಕರಣ ರಾಜಸ್ಥಾನದಲ್ಲಿ ಭಾನುವಾರದಂದು ನಡೆದಿದ್ದು, ಜೈಪುರದಲ್ಲಿನ ವಿದ್ಯಾಸಾಗರದ ಒಂದೇ ಕುಟುಂಬದ ಐವರು ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಭಾನುವಾರ ನಡೆದಿದೆ. ಸಿಲಿಂಡರ್ ಸ್ಫೋಟವಾಗಿ ಈ ದುರಂತ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

  • ಇಬ್ಬರು ಹೆಣ್ಣುಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!

    ಇಬ್ಬರು ಹೆಣ್ಣುಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!

    ಬೆಂಗಳೂರು: ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನೇಣು ಬಿಗಿದು ಬಳಿಕ ತಾಯಿಯೂ ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    34 ವರ್ಷದ ರೇಣುಕಾ, ಮಕ್ಕಳಾದ ಪಾವನಿ(10) ಹಾಗೂ ನಿಶಿತಾ (6) ಮೃತ ದುರ್ದೈವಿಗಳು. ರೇಣುಕಾ ಅವರ ಪತಿ 35 ಲಕ್ಷ ರೂ.ನಷ್ಟು ಸಾಲ ಮಾಡಿದ್ರು. ಮಕ್ಕಳಿಗಾಗಿ ಗಂಡ ಏನನ್ನೂ ಉಳಿತಾಯ ಮಾಡದ ಹಿನ್ನೆಲೆಯಲ್ಲಿ ಮನನೊಂದ ತಾಯಿ ರೇಣುಕಾ ಮಕ್ಕಳನ್ನು ಸಾಯಿಸಿ ಬಳಿಕ ಬೆಡ್‍ರೂಮ್‍ನಲ್ಲಿ ನೇಣು ಹಾಕಿಕೊಂಡಿದ್ದಾರೆ.

    ರೇಣುಕಾ ಚಿನ್ಮಯ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡ್ತಿದ್ದರು. ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಡ್ಯ: 2ನೇ ಪತ್ನಿಯ ಇಬ್ಬರು ಹೆಣ್ಮಕ್ಕಳಿಗೆ ನೇಣು ಬಿಗಿದು ತಾನೂ ನೇಣಿಗೆ ಶರಣಾದ!

    ಮಂಡ್ಯ: 2ನೇ ಪತ್ನಿಯ ಇಬ್ಬರು ಹೆಣ್ಮಕ್ಕಳಿಗೆ ನೇಣು ಬಿಗಿದು ತಾನೂ ನೇಣಿಗೆ ಶರಣಾದ!

    ಮಂಡ್ಯ: ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನೇಣು ಬಿಗಿದು ನಂತರ ತಂದೆಯೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹಂಚಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    45 ವರ್ಷದ ಜಯರಾಮ್ ಎಂಬವರೇ ತನ್ನ ಇಬ್ಬರು ಮಕ್ಕಳಾದ 4 ವರ್ಷದ ಸೌಭಾಗ್ಯ ಮತ್ತು 2 ವರ್ಷದ ಹರ್ಷಿಕಾಗೆ ನೇಣು ಬಿಗಿದು, ಆ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ.

    ಜಯರಾಮ್‍ಗೆ ಇಬ್ಬರು ಹೆಂಡತಿಯರಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಮೊದಲ ಪತ್ನಿ ಬೆಂಗಳೂರಿನಲ್ಲಿ ವಾಸವಿದ್ದು, ಜಯರಾಮ್ ಎರಡನೇ ಪತ್ನಿಯೊಂದಿಗೆ ವಾಸವಿದ್ದರು. ಆದ್ರೆ ಇತ್ತೀಚಿಗೆ ಇಬ್ಬರ ನಡುವೆ ಜಗಳವಾಗಿದ್ದು, ಪತ್ನಿ ತನ್ನ ತವರು ಸೇರಿಕೊಂಡಿದ್ದರು ಎನ್ನಲಾಗಿದೆ.

    ಮಂಗಳವಾರ ತನ್ನ ಎರಡನೇ ಪತ್ನಿ ಮಕ್ಕಳನ್ನು ಕರೆದುಕೊಂಡು ಬಂದಿದ್ದ ಜಯರಾಮ್, ರಾತ್ರಿ ಈ ಕೃತ್ಯ ಎಸಗಿದ್ದಾರೆ. ಇಂದು ಬೆಳಗ್ಗೆ ಮೊದಲ ಪತ್ನಿಯ ಮಗ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಸ್ಥಳಕ್ಕೆ ಭೇಟಿ ನೀಡಿರುವ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • 2 ಹೆಣ್ಣುಮಕ್ಕಳ ಜೊತೆ ತನ್ನನ್ನು ಬೀದಿಪಾಲು ಮಾಡಿದ್ರೂ ಪತಿ ಬೇಕೆಂದು ಪತ್ನಿ ಕಣ್ಣೀರು!

    2 ಹೆಣ್ಣುಮಕ್ಕಳ ಜೊತೆ ತನ್ನನ್ನು ಬೀದಿಪಾಲು ಮಾಡಿದ್ರೂ ಪತಿ ಬೇಕೆಂದು ಪತ್ನಿ ಕಣ್ಣೀರು!

    ವಿಜಯಪುರ: ಗಂಡು ಮಗು ಆಗಲಿಲ್ಲ ಎಂದು ವ್ಯಕ್ತಿಯೊಬ್ಬ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಬೀದಿ ಪಾಲು ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ವಿಜಯಪುರದ ಭಜಂತ್ರಿ ಕಾಲೋನಿ ನಿವಾಸಿಯಾದ ಕಾವ್ಯ ಮತ್ತು ಪ್ರಭು 2011 ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇವರಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ.

    ಆದ್ರೆ ಗಂಡು ಮಗು ಆಗದ ಕಾರಣ ಪ್ರಭು ತಾಯಿ ಮಾತು ಕೇಳಿ ಊಟದಲ್ಲಿ ವಿಷದ ಮಾತ್ರೆ ಬೆರಸಿ ಕಾವ್ಯಾಗೆ ಕೊಟ್ಟಿದ್ದಾರೆ ಎನ್ನುವ ಆರೋಪವೊಂದು ಕೇಳಿಬಂದಿದೆ. ಘಟನೆಯಿಂದ ಕಾವ್ಯ ಅದೃಷ್ಟವಶಾತ್ ಬದುಕುಳಿದಿದ್ದು, ಆಕೆಯ ಹೊಟ್ಟೆಯಲ್ಲಿ ಭ್ರೂಣ ಮಾತ್ರ ಉಳಿಯಲಿಲ್ಲವಂತೆ. ಇಷ್ಟಕ್ಕೆ ಸುಮ್ಮನಾಗದ ಪಾಪಿ ಗಂಡ ಪ್ರಭು ಕಾವ್ಯಾ ಮತ್ತು ಎರಡು ಹೆಣ್ಣು ಮಕ್ಕಳನ್ನು ಬೀದಿಪಾಲು ಮಾಡಿ ಪರಾರಿಯಾಗಿದ್ದಾನೆ.

    ಸದ್ಯ ಆಶ್ರಯ ಇಲ್ಲದೆ ಕಾವ್ಯ ಮತ್ತು ಎರಡು ಮಕ್ಕಳು ಬೀದಿ ಬೀದಿ ಅಲೆದಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇಷ್ಟಾದ್ರು ಕಾವ್ಯ ಮಾತ್ರ ಗಂಡ ಬೇಕು, ಗಂಡ ಬೇಕು ಅಂತಾ ಅಂತ ಕಣ್ಣೀರು ಸುರಿಸುತ್ತಿದ್ದಾರೆ.