Tag: ಹೆಣ್ಣುಮಗು

  • ಗುಜರಾತ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ – ಮಗುವಿನ ಅಪ್ಪನ ಸ್ನೇಹಿತನಿಂದಲೇ ಕೃತ್ಯ

    – ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ, ಆಕ್ರೋಶ

    ಗಾಂಧಿನಗರ: ಗುಜರಾತ್‌ನ (Gujarat) ವಲ್ಸಾದ್‌ನ ಉಮರ್ಗಾಮ್ (Umargam) ಪ್ರದೇಶದಲ್ಲಿ ಮೂರು ವರ್ಷದ ಮಗುವಿನ ಮೇಲೆ ಆಕೆಯ ತಂದೆಯ ಆಪ್ತ ಸ್ನೇಹಿತ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

    ಘಟನೆ ಬಳಿಕ ಕಾಮುಕ ಆರೋಪಿ ಎಸ್ಕೇಪ್‌ ಆಗಿದ್ದಾನೆ. ಇನ್ನೂ ಲೈಂಗಿಕ ದೌರ್ಜನ್ಯದ ಸುದ್ದಿ ಹರಡುತ್ತಿದ್ದಂತೆ, ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಉಮರ್ಗಾಮ್ ಪೊಲೀಸ್ ಠಾಣೆಗೆ (Umargam Police Station) ಮುತ್ತಿಗೆ ಹಾಕಿದ್ದಾರೆ. ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಯನ್ನ ಬಂಧಿಸಿ, ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: 12 ನೂತನ ಕೈಗಾರಿಕಾ ಸ್ಮಾರ್ಟ್ ಸಿಟಿ, 10 ಲಕ್ಷ ಹೊಸ ಉದ್ಯೋಗ ಸೃಷ್ಟಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ

    ಇದಾದ ನಂತರ ಪೊಲೀಸರು ಮಧ್ಯಾಹ್ನದ ಒಳಗೆ ಆರೋಪಿಯನ್ನು ಹಿಡಿದು ತರುವುದಾಗಿ ಊರಿನ ಜನರಿಗೆ ಭರವಸೆ ನೀಡಿದ್ದರು. ಆದಾಗ್ಯೂ ಜಗ್ಗದ ಜನ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಹಾಗೂ ಕಾಮುಕನಿಗೆ ಮರಣದಂಡನೆ ವಿಧಿಸುವಂತೆ ಪಟ್ಟು ಹಿಡಿದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಉಮರ್ಗಾಮ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದರು.

    ಸದ್ಯ ತನಿಖೆ ಮುಂದುವರಿಸುತ್ತಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಇತ್ತ ಸಂತ್ರಸ್ತ ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸುವ ಜೊತೆಗೆ ಶಾಂತಿ ಸುವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Chikkaballapur | ಭೀಕರ ರಸ್ತೆ ಅಪಘಾತ – ಮದುವೆಗೆಂದು ತೆರಳುತ್ತಿದ್ದ ಅಪ್ಪ-ಅಮ್ಮ-ಮಗನ ದುರ್ಮರಣ

  • ಕಿರುಕುಳ ಕೊಟ್ಟ ನಟಿಯ ಪತಿಯಿಂದಲೇ ಮಗುವನ್ನು ತೋರಿಸುವಂತೆ ಕಣ್ಣೀರು

    ಕಿರುಕುಳ ಕೊಟ್ಟ ನಟಿಯ ಪತಿಯಿಂದಲೇ ಮಗುವನ್ನು ತೋರಿಸುವಂತೆ ಕಣ್ಣೀರು

    ಟ ಹಾಗೂ ತಮ್ಮ ಪತಿ ಅರ್ನವ್ ಕಿರುಕುಳ ನೀಡಿದ್ದಾರೆ ಎಂದು ಕಣ್ಣೀರಿಡುತ್ತಲೇ ಪೊಲೀಸರಿಗೆ ದೂರು ನೀಡಿದ್ದ ಕನ್ನಡದ ನಟಿ ದಿವ್ಯಾ ಶ್ರೀಧರ್ ಇತ್ತೀಚೆಗಷ್ಟೇ ಹೆಣ್ಣು (girl) ಮಗುವಿಗೆ ಜನ್ಮ ನೀಡಿದ್ದಾರೆ. ಮೊನ್ನೆಯಷ್ಟೇ ಆ ಮುದ್ದಾದ ಮಗುವಿನ ಫೋಟೋ ಶೇರ್ ಮಾಡಿದ್ದರು. ಗಂಡನಿಂದ ದೂರವಿರುವ ಅವರು ಮಗುವನ್ನು ಬಲು ಪ್ರೀತಿಯಿಂದ ಬೆಳೆಸುತ್ತಿದ್ದಾರೆ. ಈಗ ಆಮಗುವನ್ನು ನೋಡಬೇಕು ಎಂದು ಅರ್ನವ್ ಕೇಳಿಕೊಂಡಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿದ ಅನರ್ವ್, ‘ಬೇರೆಯವರ ಮಕ್ಕಳನ್ನು ಎತ್ತಿಕೊಂಡು ಮುದ್ದಾಡುತ್ತಿರುವೆ. ನನ್ನ ಮಗುವನ್ನು ನೋಡುವುದಕ್ಕೂ ಆಗುತ್ತಿಲ್ಲ. ದಯವಿಟ್ಟು ನನ್ನ ಮಗುವಿನ ವಿಡಿಯೋವನ್ನಾದರೂ ದಿವ್ಯಾ ಹಂಚಿಕೊಳ್ಳಲಿ ಎಂದು ಕೇಳಿಕೊಂಡಿದ್ದಾರೆ. ಕಾನೂನು ಮೂಲಕ ಹೋಗಬಹುದು. ಆದರೆ, ನನಗೆ ಅದು ಇಷ್ಟವಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:Exclusive: ‘ಬಡವ ರಾಸ್ಕಲ್’ ನಿರ್ದೇಶಕನ ಜೊತೆ ಡಾಲಿ ಹೊಸ ಸಿನಿಮಾ

    ‘ಆಕಾಶದೀಪ’ (Akashadeepa) ಸೀರಿಯಲ್ ನಾಯಕಿ ದಿವ್ಯಾ ಶ್ರೀಧರ್ (Divya Shridhar) ಅವರು ಪತಿ ಅರ್ನವ್ (Arnav) ಕಿರುಕುಳ ವಿರುದ್ಧ ತಿರುಗಿ ಬಿದ್ದಿದ್ದರು. ಕಳೆದ ವರ್ಷ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಅರ್ನವ್‌ನ ಬಂಧಿಸಿದ್ದರು. ಎರಡು ದಿನಗಳ ಹಿಂದೆ ನಟಿ ದಿವ್ಯಾ ಮುದ್ದಾದ ಹೆಣ್ಣು ಮಗುವಿಗೆ ಫೋಟೋ ಹಂಚಿಕೊಂಡಿದ್ದಾರೆ.

    ಪ್ರೀತಿಸಿ ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಕಿರುತೆರೆ ನಟ ಅರ್ನವ್ ಬಂಧನವಾಗಿತ್ತು. ಕಳೆದ ವರ್ಷ ಈ ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು. ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಮಗಳ ಆಗಮನದ ಖುಷಿಯಲ್ಲಿದ್ದಾರೆ.

    ನನ್ನ ಮುದ್ದು ಕಂದ ಲವ್ ಯೂ ಡಾರ್ಲಿಂಗ್ ಎಂದು ಮಗಳ ಆಗಮನದ ಬಗ್ಗೆ ನಟಿ ಹೇಳಿಕೊಂಡಿದ್ದರು. ಈ ಬೆನ್ನಲ್ಲೇ ಮುದ್ದಾದ ಮಗಳ ಮುಖವನ್ನ ರಿವೀಲ್ ಮಾಡಿದ್ದಾರೆ. ಪುಟ್ಟ ದೇವತೆ ಸ್ವಾಗತ ಎಂದು ಅಡಿಬರಹ ನೀಡಿ ಶೇರ್ ಮಾಡಿದ್ದಾರೆ. ಆಕಾಶದೀಪ, ಕಣ್ಮಣಿ ಸೀರಿಯಲ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೇವಂತಿ ಧಾರಾವಾಹಿ ಮೂಲಕ ತಮಿಳು ಕಿರುತೆರೆಗೆ ದಿವ್ಯಾ ಶ್ರೀಧರ್ ಕಾಲಿಟ್ಟರು.

  • ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ: ತುಳಜಾ ಭವಾನಿ ಬಂದ್ಳು ಎಂದ ದಂಪತಿ

    ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ: ತುಳಜಾ ಭವಾನಿ ಬಂದ್ಳು ಎಂದ ದಂಪತಿ

    ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಮನೆಗೆ ಮಗಳು ಬಂದ ಖುಷಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮನೆಗೆ ತುಳಜಾ ಭವಾನಿ ಬಂದಳು ಎಂದು ಸಂಭ್ರಮಿಸಿದ್ದಾರೆ. ಜೀವನದ ನವ ಅಧ್ಯಾಯದ ಕುರಿತು ಶ್ರಾವಣಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದ ಈ ದಂಪತಿ ರಾಜಾ ರಾಣಿ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದರು. ಅಲ್ಲದೇ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಕನ್ನಡ ಕೋಟ್ಯಧಿಪತಿಯಲ್ಲೂ ಸಮೀರ್ ಆಚಾರ್ಯ ಭಾಗಿಯಾಗಿದ್ದರು. ರಾಜಾ ರಾಣಿ ರಿಯಾಲಿಟಿ ಶೋ ವೇಳೆ ತಮಗೆ ಮಿಸ್ ಕ್ಯಾರೇಜ್ ಆಗಿರುವ ಕುರಿತು ಶ್ರಾವಣಿ ಮಾತಾಡಿ ಭಾವುಕರಾಗಿದ್ದರು. ಇದನ್ನೂ ಓದಿ: ಉಡುಪಿ ಕೃಷ್ಣನ ದರ್ಶನ ಪಡೆದ ಸಿಂಹಪ್ರಿಯ ಜೋಡಿ

    ಮಗುವಿನ ಕಾಲುಗಳನ್ನು ತೋರಿಸುವಂತಹ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಶ್ರಾವಣಿ, ತಮ್ಮ ಮೊದಲ ಮಗುವಿಗೆ ನಿಮ್ಮೆಲ್ಲ ಆಶೀರ್ವಾದವಿರಲಿ ಎಂದು ಕೇಳಿದ್ದಾರೆ. ಈ ದಂಪತಿಯ ಮಗುವಿಗೆ ಶುಭವಾಗಲಿ ಎಂದು ಹಲವರು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಣಕ್ಕಾಗಿ ಮೊಮ್ಮಗಳನ್ನೇ ಮಾರಾಟ ಮಾಡಿದ ಪಾಪಿ ಅಜ್ಜ

    ಹಣಕ್ಕಾಗಿ ಮೊಮ್ಮಗಳನ್ನೇ ಮಾರಾಟ ಮಾಡಿದ ಪಾಪಿ ಅಜ್ಜ

    ದಾವಣಗೆರೆ: ಆಧುನಿಕತೆ ಬೆಳೆದಂತೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಮೊದಲೆಲ್ಲ ಮನೆಯಲ್ಲಿ ಮಗು ಹುಟ್ಟಿದೆ ಎಂದರೆ ಸಾಕು ಸಂಭ್ರಮದ ವಾತಾವರಣ ಇರುತ್ತಿತ್ತು. ಯಾಕಂದ್ರೆ ಆ ಮಗುವಿಗಾಗಿ ಇಡೀ ಕುಟುಂಬವೇ ಕಾತುರದಿಂದ ಕಾಯುತ್ತಿರುತ್ತದೆ. ದಾವಣಗೆರೆಯಲ್ಲಿ ಒಬ್ಬ ಅಜ್ಜ ಹಣದ ಆಸೆಗೆ ತನ್ನ ಮೊಮ್ಮಗಳನ್ನೇ ಬೇರೆಯವರಿಗೆ ಮಾರಾಟ ಮಾಡಿದ್ದಾನೆ.

    ದಾವಣಗೆರೆಯ ಶಾಮನೂರು ಬಳಿ ಇರುವ, ಕೇಶವಮೂರ್ತಿ ಬಡಾವಣೆಯ ನಿವಾಸಿ ಅಜ್ಜ ಬಸಣ್ಣ ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದ. ಈತನಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳು. ಮಗಳು ಸ್ವಲ್ಪ ಬುದ್ದಿಮಾಂಧ್ಯೆಯಾಗಿದ್ದು, ಸಣ್ಣವರಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಬಸಣ್ಣ ಮದ್ಯವೆಸನಿಯಾಗಿದ್ದು, ಮದ್ಯಪಾನ ಮಾಡಲು ಹಣಕ್ಕಾಗಿ ಪರದಾಡುತ್ತಿದ್ದ. ಹೇಗೋ ಸಾಲಸೋಲಮಾಡಿ ಮಗಳಾದ ಸುಜಾತಾಳ ಮದುವೆ ಮಾಡಿದ.

    ಮಗು ಸತ್ತಿದೆ ಎಂದು ಸುಳ್ಳು
    ಇತ್ತ ಕುಡಿಯಲು ಹಣ ಬೇಕು, ಅತ್ತ ಸಾಲ ಕಟ್ಟಬೇಕು ಎನ್ನುವ ಚಿಂತೆಯಲ್ಲಿ ಬಸಣ್ಣ ಇದ್ದ. ಅದೇ ಸಮಯಕ್ಕೆ ಸುಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದೇ ಸಮಯಕ್ಕೆ ಕಾದು ಕುಳಿತಿದ್ದ ಬಸಣ್ಣ ಮಗಳಿಗೆ ಹುಟ್ಟಿದ ಹೆಣ್ಣು ಮಗುವನ್ನು ಹುಟ್ಟಿದ ಎರಡೇ ದಿನಕ್ಕೆ ತುಮಕೂರಿನಲ್ಲಿರುವ ಒಂದು ಕುಟುಂಬಕ್ಕೆ 50 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಇತ್ತ ಸಂಬಂಧಿಕರಿಗೆ, ತಾಯಿಗೆ ಮಗು ಹುಟ್ಟಿದ ತಕ್ಷಣ ಸಾವನ್ನಪ್ಪಿದೆ. ಮಗುವನ್ನು ತಿಪ್ಪೆಯಲ್ಲಿ ಮುಚ್ಚಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ನಂತರ ಅನುಮಾನಗೊಂಡ ಮಗ ಪ್ರಶಾಂತ್ ಪ್ರಶ್ನಿಸಿದಾಗ ಬಸಣ್ಣ ತಪ್ಪೊಪ್ಪಿಕೊಂಡಿದ್ದಾನೆ.

    ಸಾಲ ತೀರಿಸಿ, ಕುಡಿಯಲು ಬಳಕೆ
    ಸ್ಥಳೀಯ ಮುಖಂಡರು ಬಸಣ್ಣ ಮಗು ಮಾರಾಟ ಮಾಡಿರುವುದರ ಬಗ್ಗೆ ವಿವರವಾಗಿ ಬಾಯಿ ಬಿಡಿಸಿದ್ದು, ಮಗುವನ್ನು ತುಮಕೂರಿನ ಬಳಿ ಇರುವ ಒಂದು ಗ್ರಾಮದ ದಂಪತಿಗೆ 50 ಸಾವಿರಕ್ಕೆ ಮಾರಾಟ ಮಾಡಲಾಗಿದೆ. ಆ ಹಣದಲ್ಲಿ ಸಾಲು ತೀರಿಸಿ ಉಳಿದ ಹಣವನ್ನು ಕುಡಿಯಲು ಬಳಕೆ ಮಾಡಿಕೊಂಡಿದ್ದಾನೆ. ಅಲ್ಲದೆ ಸ್ಥಳಕ್ಕೆ ಮಹಿಳಾ ಠಾಣೆ ಪೊಲೀಸರು ಆಶಾ ಕಾರ್ಯಕರ್ತೆಯರು ಧಾವಿಸಿ, ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಪಡೆದರು.

    ALCOHOL

    ಬಸಣ್ಣ, ಬುದ್ಧಿಮಾಂದ್ಯತೆ ಇರುವ ತಾಯಿ ಸುಜಾತಾಳನ್ನು ಮಹಿಳಾ ಠಾಣೆಯ ಪೊಲೀಸರು ಹೆಚ್ಚಿನ ತನಿಖೆಗೆ ಠಾಣೆಗೆ ಕರೆದೊಯ್ದಿದ್ದಾರೆ. ಹೀಗೆ ಹೆತ್ತ ಮಗಳ ಮಗುವನ್ನು ಮಾರಾಟ ಮಾಡಿ ಮಾನವೀಯ ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೂಡಲೇ ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಿ ಅವರಿಗೂ ಕೂಡ ಶಿಕ್ಷೆ ಕೊಡಿಸಬೇಕಿದೆ ಎಂದು ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.

    ಏನೇ ಅಗಲಿ ಹಣದ ಆಸೆಗೆ ಎರಡು ದಿನದ ನವಜಾತ ಶಿಶುವನ್ನೇ ಮಾರಾಟ ಮಾಡಿದ್ದು, ಇತ್ತ ಮಗುವಿಗಾಗಿ ತಾಯಿ ಹೃದಯ ಹಂಬಲಸುತ್ತಿದೆ. ಪಾಪಿ ಅಜ್ಜ ತುಮಕೂರಿನಲ್ಲಿ ಯಾರಿಗೆ ಮಗು ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತನಿಖೆ ನಡೆಸಿ ಹುಡುಕಾಟ ನಡೆಸುತ್ತಿದ್ದಾರೆ.

  • ಮಲಮಗನನ್ನು ವಿವಾಹವಾಗಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಮಲಮಗನನ್ನು ವಿವಾಹವಾಗಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಮಾಸ್ಕೋ: ರಷ್ಯಾದ 35 ವರ್ಷದ ಮಹಿಳೆ ತನ್ನ ಮೊದಲ ಮಗುವಿಗೆ ಮಲಮಗನೊಂದಿಗೆ ಜನ್ಮ ನೀಡಿರುವುದಾಗಿ ಘೋಷಿಸಿದ್ದಾಳೆ. ಗಂಡನನ್ನು ತೊರೆದು ಮಲಮಗನನ್ನೇ ವಿವಾಹವಾಗಿ ಮಗುವಿಗೆ ಜನ್ಮ ನೀಡುತ್ತಿರುವ ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

    ಮರೀನಾ ಮಾಜಿ ಗಂಡನ ಹೆಣ್ಣು ಮಗುವಿಗೆ ಜನ್ಮ ನೀಡುವ ಮುನ್ನವೇ ಆತನ ಪುತ್ರ ವ್ಲಾಡಿಮಿರ್ ನನ್ನು ವಿವಾಹವಾಗಿದ್ದಾಳೆ. ಇದೀಗ ಮಾಜಿ ಗಂಡನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗು 3 ಕೆಜಿ ತೂಕವಿದೆ.

    10 ವರ್ಷದಿಂದ ಜೊತೆಗಿದ್ದ ಮಾಜಿ ಪತಿಗೆ ಇದೀಗ ಮರೀನಾ ವಿಚ್ಛೇದನ ನೀಡಿದ್ದಾಳೆ. ವ್ಲಾಡಿಮಿರ್ ರಜೆಯ ದಿನಗಳಲ್ಲಿ ಮನೆಗೆ ಬರುತ್ತಿದ್ದಾಗ ಆಕೆಗೆ ಆತನ ಮೇಲೆ ಪ್ರೇಮವಾಗಿದ್ದು ಈಗ ಆತನನ್ನೆ ಗಂಡನೆಂದು ಘೋಷಿಸಿದ್ದಾಳೆ.

    7 ವರ್ಷದಿಂದ ಮರೀನಾ ತನ್ನ ತಂದೆ ಅಲೆಕ್ಸಿ ಶಾವಿರಿನ್(45)ನನ್ನು ಮದುವೆಯಾಗಿದ್ದಳು ಮತ್ತು ಅವರಿಬ್ಬರು 5 ದತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು ಎಂಬ ವಿಚಾರ ಮಲಮಗನಾದ ವ್ಲಾಡಿಮಿರ್ ತಿಳಿದಿತ್ತು.

    ಇನ್ ಸ್ಟಾಗ್ರಾಮ್ ನಲ್ಲಿ 5 ಲಕ್ಷ ಫಾಲೋವರ್ ಹೊಂದಿರುವ ಮರೀನಾ ವ್ಲಾಡಿಮಿರ್ ಸೂಚನೆ ಮೇರೆಗೆ ಮಗುವಿನ ಮುಖ ಕಾಣಿಸದಂತೆ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾಳೆ. ತನ್ನ ಹೊಸ ಸಂಗಾತಿಯನ್ನು ಆಕರ್ಷಿಸಲು ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆ ಮಾಡಿಸಿಕೊಂಡಿರುವ ಸತ್ಯವನ್ನು ಬಹಿರಂಗ ಪಡಿಸಿದ್ದಾಳೆ ಮತ್ತು ವಿಶ್ವದಲ್ಲಿಯೇ ತಾನು ಆಕರ್ಷಿತ ನೀಲಿ ಕಣ್ಣುಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ.

    ಈ ಹಿಂದೆ ನನಗೆ ಬಹಳಷ್ಟು ಜನರು ಹೊಸ ಸಂಗಾತಿಯನ್ನು ಆಕರ್ಷಿಸಲು ಮೇಕಪ್ ಮಾಡಿಕೊಳ್ಳುವುದಾಗಿ ಸಲಹೆ ನೀಡಿದ್ದರು. ಆದರೆ ಅದರ ಅವಶ್ಯಕತೆ ಇಲ್ಲ. ತನ್ನ ಪ್ಲಾಸ್ಟಿಕ್ ಸರ್ಜರಿ, ಚರ್ಮ ಮತ್ತು ವ್ಯಕ್ತಿತ್ವವನ್ನು ನನ್ನ ಈಗಿನ ಪತಿಯಾಗಿರುವ ವ್ಲಾಡಿಮಿರ್ ಪ್ರೀತಿಸುತ್ತಾನೆ. ನಾನು ಹೀಗೆಯೇ ಇರಲು ಬಯಸುತ್ತೇನೆ ಇದ್ದಕ್ಕಿಂತ ಸುಂದರವಾಗಿ ಕಾಣಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ.

  • ಪುಟ್ಟ ಕಂದನ ಜೊತೆ ಮಗುವಾದ ಅಪ್ಪು- ಬುಟ್ಟ ಬೊಮ್ಮ ಹಾಡಿಗೆ ಡ್ಯಾನ್ಸ್

    ಪುಟ್ಟ ಕಂದನ ಜೊತೆ ಮಗುವಾದ ಅಪ್ಪು- ಬುಟ್ಟ ಬೊಮ್ಮ ಹಾಡಿಗೆ ಡ್ಯಾನ್ಸ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಪುಟ್ಟ ಕಂದಮ್ಮನ ಜೊತೆ ಬುಟ್ಟ ಬೊಮ್ಮ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪುನೀತ್ ರಾಜ್‍ಕುಮಾರ್ ಅವರು ಸರಳ ವ್ಯಕ್ತಿತ್ವವಿರುವ ನಟ ಎಂಬುದು ಇಡೀ ಕರುನಾಡಿಗೆ ಗೊತ್ತು. ಅಪ್ಪು ಅಪ್ಪನ ಹಾಗೆಯೇ ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಾರೆ. ಜೊತೆಗೆ ಅವರಿಗೆ ಮಕ್ಕಳು ಎಂದರೆ ಬಹಳ ಇಷ್ಟ, ಹೀಗಾಗಿ ತೆಲುಗು ಪುಟ್ಟ ಪೋರಿಯ ಜೊತೆಗೆ ಬುಟ್ಟಬೊಮ್ಮ ಹಾಡಿದೆ ಹೆಜ್ಜೆ ಹಾಕಿದ್ದಾರೆ.

    ಅಪ್ಪು ಪುಟ್ಟ ಹೆಣ್ಣುಮಗುವಿನ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅವರ ಅಭಿಮಾನಿಗಳು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಗುವಿನ ಜೊತೆ ಮಗುವಾದ ಅಪ್ಪು ಎಂದು ಬರೆದುಕೊಂಡಿದ್ದಾರೆ. ಕೇವಲ 26 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಅಪ್ಪು ಮಗುವನ್ನು ಪ್ರೀತಿಯಿಂದ ಮಾತನಾಡಿಸಿ, ಬುಟ್ಟಬೊಮ್ಮ ಹಾಡಿನ ಸ್ಟೆಪ್ ಹಾಕುತ್ತಾರೆ. ಜೊತೆಗೆ ಇದು ಯಾವ ಹಾಡು ಎಂದು ಮಗುವನ್ನು ಪ್ರಶ್ನೆ ಮಾಡುತ್ತಾರೆ. ಆಗ ಪಾಪು ಬುಟ್ಟ ಬೊಮ್ಮ ಎಂದಾಗ ಅಪ್ಪು ಖುಷಿಯಿಂದ ನಗುವುದನ್ನು ವಿಡಿಯೋದಲ್ಲಿ ಕಾಣಬಹುದು.

    ವಿಡಿಯೋದಲ್ಲಿ ಕಾಣಿಸುವ ಈ ಮಗು ಯಾವುದು ಎಂದು ಮಾಹಿತಿ ಸಿಕ್ಕಿಲ್ಲ. ಆದರೆ ವಿಡಿಯೋದಲ್ಲಿ ಈ ಮಗು ತೆಲುಗು ಮಾತನಾಡುತ್ತಿರುವುದನ್ನು ಕಾಣಬಹುದು. ಈ ಮಗು ಅಪ್ಪು ಅವರನ್ನು ತಮ್ಮ ಪೋಷಕರ ಜೊತೆ ಭೇಟಿಯಾಗಿದೆ. ಈ ವೇಳೆ ಮಗುವಿನ ಜೊತೆ ಆಟವಾಡಿರುವ ಅಪ್ಪು, ಮಗುವಿನ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಸ್ಥಳದಲ್ಲೇ ಇದ್ದ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಪುನೀತ್ ಅವರಿಗೆ ಮಕ್ಕಳು ಎಂದರೆ ಇಷ್ಟ. ಅವರು ಎಲ್ಲೇ ಹೋದರು ಮಕ್ಕಳು ಎತ್ತಿಕೊಂಡು ಅಪ್ಪಿ ಮುದ್ದಾಡುತ್ತಾರೆ. ಕಳೆದ ವರ್ಷ ನಟಸಾರ್ವಭೌಮ ಶೂಟಿಂಗ್ ಲೋಕೇಷನ್‍ಗೆ ಹೋಗುವ ವೇಳೆ ಅಪ್ಪು ಚಿಕ್ಕಮಗಳೂರಿನ ಅತ್ತಿಬೆಲೆ ಗ್ರಾಮಕ್ಕೆ ಹೋಗಿದ್ದರು. ಈ ಊರಿನಲ್ಲಿ ಅಪ್ಪು `ಬೆಟ್ಟದ ಹೂವು’ ಚಿತ್ರವನ್ನು ಚಿತ್ರೀಕರಣ ಮಾಡಿದ್ದರು. ಈ ವೇಳೆ ಅಲ್ಲಿಗೆ ಹೋದಾಗ ಅಲ್ಲಿನ ಗ್ರಾಮಸ್ಥರನ್ನು ಮಾತನಾಡಿಸಿ ಅಲ್ಲೂ ಕೂಡ ಮಗುವನ್ನು ಎತ್ತಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ನಂತರ ಮನೆಯಲ್ಲೇ ಇದ್ದ ಅಪ್ಪು, ಮನೆಯಲ್ಲೇ ವ್ಯಾಯಾಮ ಮಾಡಿ ವಿಡಿಯೋ ಹಂಚಿಕೊಳ್ಳುತ್ತಿದ್ದರು. ಈಗ ಲಾಕ್‍ಡೌನ್ ಸಡಿಲಿಕೆ ಆದ ನಂತರ ಚಿಕ್ಕಮಗಳೂರಿನಲ್ಲಿರುವ ಅಶ್ವಿನಿ ಫಾರ್ಮ್ ಹೌಸ್‍ನಲ್ಲಿ ಸುತ್ತಾಡಿ ಮನಸು ಹಗುರಾಗಿಸಿಕೊಂಡಿದ್ದಾರೆ. ಜೊತೆಗೆ ಹಚ್ಚ ಹಸಿರಿನ ಗಿರಿಯ ಮೇಲೆ ನಿಂತು ಮನಸು ತಂಪು ಮಾಡಿಕೊಂಡಿದ್ದಾರೆ. ಕೈಯಲ್ಲಿ ಕ್ಯಾಮೆರಾ ಹಿಡಿದು ಬೆಸ್ಟ್ ಮೊಮೆಂಟ್ ಅನ್ನು ಕ್ಯಾಪ್ಚರ್ ಮಾಡಿದ್ದಾರೆ.

  • ಆಸ್ಪತ್ರೆ ಸಿಗದೇ 7 ಕಿ.ಮೀ ನಡಿಗೆ – ಕೊನೆಗೆ ಡೆಂಟಲ್ ಆಸ್ಪತ್ರೆಯಲ್ಲಿ ಹೆರಿಗೆ

    ಆಸ್ಪತ್ರೆ ಸಿಗದೇ 7 ಕಿ.ಮೀ ನಡಿಗೆ – ಕೊನೆಗೆ ಡೆಂಟಲ್ ಆಸ್ಪತ್ರೆಯಲ್ಲಿ ಹೆರಿಗೆ

    – ಡೆಂಟಲ್ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿದ ದಂತವೈದ್ಯೆ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಏಳು ಕಿ.ಮೀ ನಡೆದುಕೊಂಡು ಬಂದು ಕೊನೆಗೆ ಎಲ್ಲೂ ಆಸ್ಪತ್ರೆ ಸಿಗದೆ ಡೆಂಟಲ್ ಆಸ್ಪತ್ರೆಯಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ ದೊಡ್ಡ ಬೊಮ್ಮಸಂದ್ರದಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದ ದೇಶವೇ ಸ್ತಬ್ಧವಾಗಿದೆ. ಈ ವೇಳೆ ಲೊಟ್ಟೆಗೊಲ್ಲಹಳ್ಳಿಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಆಕೆ ಆಸ್ಪತ್ರೆ ಸಿಗುತ್ತದೆ ಎಂಬ ನಂಬಿಕೆ ಮೇಲೆ ಲೊಟ್ಟೆಗೊಲ್ಲಹಳ್ಳಿಯಿಂದ ದೊಡ್ಡ ಬೊಮ್ಮಸಂದ್ರದವರೆಗೂ ಸುಮಾರು ಏಳು ಕಿ.ಲೋ ಮೀಟರ್ ಹೆರಿಗೆ ನೋವಿನ ನಡುವೆಯೂ ನಡೆದುಕೊಂಡು ಬಂದಿದ್ದಾರೆ.

    ಹೀಗೆ ತನ್ನ ಗಂಡನ ಜೊತೆ ನಡೆದುಕೊಂಡು ಬಂದ ಮಹಿಳೆಗೆ ಲಾಕ್‍ಡೌನ್ ಇರುವುದರಿಂದ ಯಾವುದೇ ಆಸ್ಪತ್ರೆ ಸಿಕ್ಕಿಲ್ಲ. ಜೊತೆಗೆ ಮುಂದೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಈ ನಡುವೆ ಆಕೆಗೆ ಹೆರಿಗೆ ನೋವು ಜಾಸ್ತಿಯಾಗಿದೆ. ಹೀಗಾಗಿ ಆಕೆಯ ಗಂಡ ಅಲ್ಲಿಯೇ ಇದ್ದ ದೊಡ್ಡ ಬೊಮ್ಮಸಂದ್ರದ ಡೆಂಟಲ್ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ದಂತವೈದ್ಯರು ಡೆಂಟಲ್ ಆಸ್ಪತ್ರೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ಹೆರಿಗೆ ಮಾಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹೆರಿಗೆ ಮಾಡಿಸಿದ ದಂತವೈದ್ಯೆ ಡಾ. ರಮ್ಯಾ, ಆಕೆ ಹೆರಿಗೆ ನೋವಿನ ನಡುವೆಯೂ ಆಸ್ಪತ್ರೆ ಸಿಗುತ್ತೆ ಎಂಬ ನಂಬಿಕೆ ಮೇಲೆ ಸುಮಾರು 7 ಕಿ.ಮೀ ನಡೆದುಕೊಂಡು ಬಂದಿದ್ದಾರೆ. ಆದರೆ ಅವರಿಗೆ ಯಾವುದೇ ಆಸ್ಪತ್ರೆ ಸಿಕ್ಕಿರಲಿಲ್ಲ. ನಂತರ ನಮ್ಮ ಆಸ್ಪತ್ರೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆರಿಗೆಯ ನಂತರ ಬ್ಲೀಡಿಂಗ್ ಜಾಸ್ತಿ ಇತ್ತು ಜೊತೆಗೆ ಮಗು ಯಾವುದೇ ಪ್ರತಿಕ್ರಿಯೆ ನೀಡಿಲಿಲ್ಲ. ಆದರೆ ನಂತರ ಮಗು ಪ್ರತಿಕ್ರಿಯೆ ನೀಡಿತು. ಬಳಿಕ ಅವರನ್ನು ಅಂಬುಲೆನ್ಸ್ ನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು ಎಂದು ಹೇಳಿದ್ದಾರೆ.

    ಲಾಕ್‍ಡೌನ್ ರೀತಿಯ ತುರ್ತುಪರಿಸ್ಥಿತಿಯ ಸಮಯದಲ್ಲಿ ದಂತವೈದ್ಯೆ ಯಾದರೂ ಹೆರಿಗೆ ಮಾಡಿಸಿದ ವೈದ್ಯೆ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಮಗು ಮತ್ತು ವೈದ್ಯೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ತುಂಬ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೆ ಧನ್ಯವಾದ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಬೆಂಗ್ಳೂರಲ್ಲಿ ಅನಾಥ ನವಜಾತ ಹೆಣ್ಣು ಶಿಶು ಪತ್ತೆ

    ಬೆಂಗ್ಳೂರಲ್ಲಿ ಅನಾಥ ನವಜಾತ ಹೆಣ್ಣು ಶಿಶು ಪತ್ತೆ

    ಬೆಂಗಳೂರು: ನಗರದಲ್ಲಿ ಅನಾಥ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.

    ನೆಲಗದರನಹಳ್ಳಿಯ ಮಾರಮ್ಮ ದೇವಾಲಯದ ಬಳಿ ನವಜಾತ ಹೆಣ್ಣು ಮಗುವನ್ನ ಬಿಟ್ಟು ಹೋಗಲಾಗಿತ್ತು. ಮಗುವನ್ನ ನೋಡಿ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದರು. ನಂತರ ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮಗುವನ್ನ ಆಂಬುಲೆನ್ಸ್‍ನಲ್ಲಿ ವಾಣಿವಿಲಾಸ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ವಾಣಿವಿಲಾಸ ಆಸ್ಪತ್ರೆಯಲ್ಲಿ ಮಗುವಿನ ಆರೈಕೆ ಮಾಡಲಾಗ್ತಿದೆ. ಹೆಣ್ಣು ಮಗು ಅನ್ನೋ ಕಾರಣಕ್ಕೆ ಹುಟ್ಟಿದ ಕೂಡಲೇ ತಾಯಿಯೇ ಮಗುವನ್ನ ಬಿಟ್ಟು ಹೋಗಿರಬಹುದು ಎಂದು ಊಹಿಸಲಾಗಿದೆ.

  • ತಾಯಿಯ ಮಡಿಲು ಸೇರಿದ ಪುಟಾಣಿ- ದುಷ್ಕರ್ಮಿಗಳು ಎಸ್ಕೇಪ್

    ತಾಯಿಯ ಮಡಿಲು ಸೇರಿದ ಪುಟಾಣಿ- ದುಷ್ಕರ್ಮಿಗಳು ಎಸ್ಕೇಪ್

    ಬೆಂಗಳೂರು: ಇಲ್ಲಿನ ಸಿದ್ದಾಪುರದಲ್ಲಿ ಅಪಹರಣವಾಗಿದ್ದ ಹೆಣ್ಣು ಮಗು ಕೊನೆಗೂ ಹೆತ್ತವರ ಕೈಸೇರಿದೆ. ಮೂರು ದಿನಗಳ ಹಿಂದೆ ಗುಟ್ಟೆಪಾಳ್ಯ ನಿವಾಸಿ ಶಬನಮ್ ಹಾಗೂ ಸೈಯದ್ ದಂಪತಿಯ ಮೂರು ವರ್ಷದ ಮಗು ಕತೀಜಾರನ್ನು ಯಾರೋ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ರು.

    ಮನೆಯ ಪಕ್ಕದ ಅಂಗಡಿಗೆ ಐಸ್ ತರಲು ಹೋದ ಮಗುವನ್ನು ಎತ್ತಿಕೊಂಡೋಗಿದ್ರು. ಸಿಸಿಟಿವಿಯಲ್ಲಿ ಆ ದೃಶ್ಯ ಸೆರೆಯಾಗಿತ್ತು. ಸಿದ್ದಾಪುರ ಪೊಲೀಸರು ಮಗುಗಾಗಿ ಹುಡುಕಾಟ ನಡೆಸ್ತಿದ್ರು. ಆದ್ರೆ ಸೋಮವಾರ ಮಧ್ಯಾಹ್ನ ಮಡಿವಾಳದ ದರ್ಗಾ ಬಳಿ ಬಂದ ಮಹಿಳೆಯೊಬ್ಬಳು ಮಗುವನ್ನು ಬಿಟ್ಟು ಎಸ್ಕೇಪ್ ಆಗಿದ್ದಾಳೆ.

    ಇತ್ತ ಮಾಧ್ಯಮಗಳಲ್ಲಿ ಮಗು ನಾಪತ್ತೆ ಸುದ್ದಿ ನೋಡಿದ್ದ ವ್ಯಕ್ತಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂದ ಮಡಿವಾಳ ಪೊಲೀಸ್ರು ಮಗುವನ್ನು ಹೆತ್ತವರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನೂ, ಆರೋಪಿಗಳು ಮಗುವನ್ನು ಕಿಡ್ನಾಪ್ ಮಾಡಿ ಬಸ್ಸಿನಲ್ಲಿ ಬೇರೆ ಕಡೆಗೆ ಕರೆದೊಯ್ದಿದ್ದರಂತೆ. ಒರ್ವ ಮಹಿಳೆಯ ಜತೆ ಮನೆಯೊಂದರಲ್ಲಿ ಬಚ್ಚಿಡಲಾಗಿತ್ತಂತೆ. ಆದ್ರೆ ಮಾಧ್ಯಮಗಳಲ್ಲಿ ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿರುವುದು ನೋಡಿದ ಅರೋಪಿಗಳು ಮಗು ಬಿಟ್ಟು ಪರಾರಿಯಾಗಿರಬಹುದು ಎನ್ನಲಾಗುತ್ತಿದೆ.

    ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=3AexHtfodPM