Tag: ಹೆಣ್ಣು

  • ತಂದೆ-ತಾಯಿಯನ್ನು ಸಾಕುವವರೇ ಹೆಣ್ಣು ಮಕ್ಕಳು: ಭ್ರೂಣಹತ್ಯೆ ವಿರುದ್ಧ ಎಂಬಿ ಪಾಟೀಲ್ ಕಿಡಿ

    ತಂದೆ-ತಾಯಿಯನ್ನು ಸಾಕುವವರೇ ಹೆಣ್ಣು ಮಕ್ಕಳು: ಭ್ರೂಣಹತ್ಯೆ ವಿರುದ್ಧ ಎಂಬಿ ಪಾಟೀಲ್ ಕಿಡಿ

    ವಿಜಯಪುರ: ಹೆಣ್ಣು (Girl) ಲಕ್ಷ್ಮಿ ಇದ್ದ ಹಾಗೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಒಳ್ಳೆಯವರು. ತಂದೆ-ತಾಯಿಯನ್ನು ಸಾಕುವವರೇ ಅವರು ಎಂದು ಸಚಿವ ಎಂಬಿ ಪಾಟೀಲ್ (MB Patil) ಭ್ರೂಣ ಹತ್ಯೆ (Foeticide) ವಿರುದ್ಧ ಕಿಡಿಕಾರಿದ್ದಾರೆ.

    ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರೂಣ ಹತ್ಯೆ ಅತ್ಯಂತ ಹೀನ, ಅಕ್ಷಮ್ಯ ಕೃತ್ಯ. ಈ ಕೃತ್ಯ ಮಾಡುವವರಿಗೆ ತಕ್ಕ ಪಾಠ, ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಕ್ರಮವಾಗಬೇಕು. ಭ್ರೂಣ ಹತ್ಯೆ ಮಾಡುವವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತದೆ. ಅಲ್ಲದೇ ನಿರ್ದಾಕ್ಷಿಣ್ಯ ಕ್ರಮಕ್ಕೆ ನನ್ನ ಬೆಂಬಲ, ಒತ್ತಾಯವಿದೆ ಎಂದರು. ಇದನ್ನೂ ಓದಿ: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣ ಒದಗಿಸ್ತೇವೆ: ಸಿದ್ದರಾಮಯ್ಯ

    ಇದೇ ವೇಳೆ ಪಂಚರಾಜ್ಯ ಚುನಾವಣೆ (Five State Election) ಇಂದು ಮತಗಟ್ಟೆ ಸಮೀಕ್ಷೆ ಬಹಿರಂಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕನಿಷ್ಠ ಮೂರು ರಾಜ್ಯದಲ್ಲಿ ನಾವು ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತೇವೆ. ನಾಲ್ಕರಲ್ಲೂ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇಂದು ಸಂಜೆ ಎಕ್ಸಿಟ್ ಪೋಲ್ (Exit Poll) ಬರಲಿದೆ. ಎಕ್ಸಿಟ್ ಪೋಲ್‌ನಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದರು. ಇದನ್ನೂ ಓದಿ: 108 ಅಂಬುಲೆನ್ಸ್‌ನವ್ರು ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ತಾರೆ: ಡಿಕೆಶಿ ಅಸಮಾಧಾನ

    ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂಗಳಲ್ಲಿ ಈಗಾಗಲೇ ಮತದಾನ ಮುಕ್ತಾಯವಾಗಿದೆ. ತೆಲಂಗಾಣದಲ್ಲಿ ಇಂದು ಮತದಾನ ನಡೆಯುತ್ತಿದೆ. ಈ ಮೂಲಕ ಪಂಚರಾಜ್ಯ ಚುನಾವಣೆಗೆ ತೆರೆ ಬೀಳಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಜಾತಿಗಣತಿ ವರದಿ ಬಂದ ಬಳಿಕ‌ವೇ ಅನುಷ್ಠಾನಕ್ಕೆ ತೀರ್ಮಾನ – ಶಿವರಾಜ್ ತಂಗಡಗಿ

  • ಮನೆ ಇಲ್ಲದೇ ಮದುವೆಗೆ ಹೆಣ್ಣು ಕೊಡ್ತಿಲ್ಲ- ಜನತಾ ದರ್ಶನದ ವೇಳೆ ವ್ಯಕ್ತಿ ಅಳಲು

    ಮನೆ ಇಲ್ಲದೇ ಮದುವೆಗೆ ಹೆಣ್ಣು ಕೊಡ್ತಿಲ್ಲ- ಜನತಾ ದರ್ಶನದ ವೇಳೆ ವ್ಯಕ್ತಿ ಅಳಲು

    ಚಾಮರಾಜನಗರ: ಉಸ್ತುವಾರಿ ಸಚಿವ ಕೆ. ವೆಂಕಟೇಶ್ ನಡೆಸಿದ ಜನತಾ ದರ್ಶನ (Janatha Darshana) ಸಭೆ ಹೈ ಡ್ರಾಮಾವೊಂದಕ್ಕೆ ಸಾಕ್ಷಿಯಾಯ್ತು.

    ನಗರದ ಜಿಲ್ಲಾಧಿಕಾರಿ ಕಚೇರಿಯ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ಡ್ರಾಮಾ ಮಾಡಿದ್ದಾನೆ. ನಗರದಲ್ಲಿ ರಸ್ತೆ ಅಗಲೀಕರಣ ವೇಳೆಯ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿದ್ದ ನಿವೇಶನಕ್ಕೆ ಇನ್ನೂ ಪರಿಹಾರ ನೀಡಿಲ್ಲ ಎಂದು ವ್ಯಕ್ತಿಯೊಬ್ಬರು ದೂರು ನೀಡಿದರು. ಅಲ್ಲದೆ ನನಗೆ 40 ವರ್ಷ ಆದರೂ ಮದುವೆ ಆಗಿಲ್ಲ. ಸರ್ಕಾರದಿಂದ ಬೇರೆ ನಿವೇಶನವೂ ಸಿಕ್ಕಿಲ್ಲ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು.

    ಸರ್ಕಾರದಿಂದ ನಿಗದಿಯಾಗಿದ್ದ ಬದಲೀ ನಿವೇಶನ ಇನ್ನೂ ಸಿಕ್ಕಿಲ್ಲ. ನನಗೆ ಹುಡುಗಿ ಕೊಡಬೇಕೆಂದರೆ ಮನೆ ಇದೆಯಾ ಎಂದು ಪ್ರಶ್ನಿಸುತ್ತಾರೆ. ಮನೆ-ಮಠ ನಿವೇಶನ, ಮದುವೆ ಇಲ್ಲದೆ ಪರದಾಡುತ್ತಿದ್ದೇನೆ. ಹೀಗಾಗಿ ನನಗೆ ದಯಾಮರಣ ನೀಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ರಸ್ತೆಗಿಳಿಯಲ್ಲ BMTC, KSRTC; ಶಾಲಾ- ಕಾಲೇಜುಗಳಿಗೂ ರಜೆ: ಮಂಗಳವಾರ ಏನಿರತ್ತೆ..?, ಏನಿರಲ್ಲ..?

    ಈ ವ್ಯಕ್ತಿಯ ಮಾತು ಕೇಳಿ ವೇದಿಕೆಯಲ್ಲಿದ್ದ ಸಚಿವರು, ಶಾಸಕರು ಕಕ್ಕಾಬಿಕ್ಕಿಯಾದರು. ತಕ್ಷಣವೇ ಆ ವ್ಯಕ್ತಿಯನ್ನ ಅಧಿಕಾರಿಗಳು ಸಮಾಧಾನಪಡಿಸಿ ಆಚೆ ಕರೆದುಕೊಂಡು ಹೋದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ

    ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ

    ಕಾರವಾರ: ಇತ್ತೀಚೆಗೆ ಮದುವೆಯಾಗಲು ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಅಂತೆಯೇ ಇಲ್ಲೊಬ್ಬ ಇದೇ ವಿಚಾರದಿಂದ ಮನನೊಂದು ಸಾವಿನ ದಾರಿ ಹಿಡಿದ ಪ್ರಕರಣ ನಡೆದಿದೆ.

    ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಮೃತ ಯುವಕನನ್ನು ನಾಗರಾಜ ಗಣಪತಿ ಗಾಂವ್ಕರ್ (35) ಎಂದು ಗುರುತಿಸಲಾಗಿದ್ದು, ಈತ ಯಲ್ಲಾಪುರದ ತೇಲಂಗಾರ ಕಿರಗಾರಿಮನೆ ನಿವಾಸಿ.

    ಕೃಷಿ (Agriculture) ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಾಗರಾಜ್ ಎಲ್ಲರಂತೆಯೇ ತಾನೂ ಮದುವೆಯ ಕನಸು ಕಂಡಿದ್ದ. ಅಂತೆಯೇ ಹಲವು ಸಮಯದಿಂದ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದ. ಸಂಬಂಧಿಕರು, ಬ್ರೋಕರ್ ಗಳ ಬಳಿ ಹೆಣ್ಣು (Girl For Marriage) ಹುಡುಕಿಕೊಡಲು ಹೇಳುತ್ತಿದ್ದ. ಆದರೆ ಎಲ್ಲಿಯೂ ನಾಗರಾಜ್‍ಗೆ ಹೆಣ್ಣು ಸಿಗುತ್ತಿರಲಿಲ್ಲ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – ಚಾಲಕ ಸೇರಿ ಇಬ್ಬರು ಸಾವು, ಹಲವರಿಗೆ ಗಾಯ

    ತನಗೆ ಯಾಕೆ ಹೆಣ್ಣು ಸಿಗುತ್ತಿಲ್ಲ ಎಂದು ನಾಗರಾಜ್ ಪ್ರತಿನಿತ್ಯ ಯೋಚನೆಯಲ್ಲಿಯೇ ಮುಳುಗುತ್ತಿದ್ದ. ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ನಾಗರಾಜ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ತನ್ನ ಮನೆಯ ಸಮೀಪದ ಗುಡ್ಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೈಂಗಿಕ ಆದ್ಯತೆಗಳು ಹಾಸಿಗೆಗೆ ಸೀಮಿತ ಆಗಿರಲಿ: ಯಾರಿಗಾಗಿ ಬರೆದರು ಕಂಗನಾ?

    ಲೈಂಗಿಕ ಆದ್ಯತೆಗಳು ಹಾಸಿಗೆಗೆ ಸೀಮಿತ ಆಗಿರಲಿ: ಯಾರಿಗಾಗಿ ಬರೆದರು ಕಂಗನಾ?

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut), ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪೋಸ್ಟ್ ಹಾಕಿ ಬೆಂಕಿ ಹಾಕುತ್ತಲೇ ಇರುತ್ತಾರೆ. ಒಂದೊಂದು ಸಲ ಆ ಬೆಂಕಿ ಯಾರಿಗೋ ತಟ್ಟುತ್ತದೆ. ಮತ್ತೊಂದು ಸಾರಿ ತಟ್ಟದೇ ಆರುತ್ತದೆ. ಈ ಬಾರಿಯೂ ಟ್ವಿಟರ್ (Twitter) ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಅವರು, ಅದನ್ನು ಯಾರಿಗೆ ಹೇಳಿದ್ದಾರೆ ಎನ್ನುವುದನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದಾರೆ.

    ಕೆಲವು ವಿಚಾರಗಳಲ್ಲಿ ಕಂಗನಾ ರಣಾವತ್ ನೇರ, ದಿಟ್ಟ. ಯಾರಿಗೆ ತಮ್ಮ ಮಾತು ತಲುಪಬೇಕಿತ್ತೋ ಅದನ್ನು ನೇರವಾಗಿಯೇ ತಲುಪಿಸುತ್ತಾರೆ. ಅದರಲ್ಲೂ ಕರಣ್ ಜೋಹಾರ್ ಬಗ್ಗೆ ನೇರವಾಗಿಯೇ ರಣಕಣಕ್ಕೆ ಆಹ್ವಾನಿಸುತ್ತಾರೆ. ಆದರೆ, ಕೆಲವರ ವಿಚಾರದಲ್ಲಿ ಪರೋಕ್ಷವಾಗಿ ವಿಷಯ ಪ್ರಸ್ತಾಪ ಮಾಡುತ್ತಾರೆ. ಹಾಗಾಗಿ ಇವತ್ತು ಬರೆದ ಬೆಡ್, ಹಾಸಿಗೆ, ಲೈಂಗಿಕ ವಿಚಾರ ಯಾರ ಮೇಲಿನ ಪ್ರಸ್ತಾಪ ಎನ್ನುವುದು ಗೊತ್ತಾಗಿಲ್ಲ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

    ಹೆಣ್ಣು (Female)  ಗಂಡು (Male) ತಾರತಮ್ಯದ ಬಗ್ಗೆಯೂ ಮಾತನಾಡಿದ ಅವರು, ನಮ್ಮ ವೃತ್ತಿಯ ಮೇಲೆಯೇ ನಮ್ಮ ಐಡೆಂಟಿಟಿ ನಿರ್ಧಾರವಾಗುತ್ತದೆ. ಯಾರೂ ಈಗ ನಟಿ, ನಿರ್ದೇಶಕಿ ಎಂದು ಕರೆಯುವುದಿಲ್ಲ. ಕಲಾವಿದರು ಮತ್ತು ನಿರ್ದೇಶಕರು ಎನ್ನುತ್ತಾರೆ. ಜಗತ್ತು ನೀವು ಏನು ಮಾಡುತ್ತೀರಿ ಎನ್ನುವುದರ ಮೇಲೆ ನಿಮ್ಮನ್ನು ನಿರ್ಧರಿಸುತ್ತದೆ ಹೊರತು, ನೀವು ಬೆಡ್ ಮೇಲೆ ಏನು ಮಾಡಿದ್ದೀರಿ ಎನ್ನುವುದರ ಮೇಲಲ್ಲ’ ಎಂದು ಬರೆದುಕೊಂಡಿದ್ದಾರೆ.

    ಲೈಂಗಿಕ ಆದ್ಯತೆಗಳು ಅವು  ಕೇವಲ ಹಾಸಿಗೆಗೆ ಮಾತ್ರ ಸೀಮಿತವಾಗಿರಲಿ. ಅದೇ ನಿಮ್ಮ ಗುರುತಾಗಬಾರದು ಎಂದು ಮಾರ್ಮಿಕವಾಗಿ ಕಂಗನಾ ಬರೆದುಕೊಂಡಿದ್ದಾರೆ. ಈ ಕುರಿತಂತೆ ಹಲವರು ಹಲವು ರೀತಿಯಲ್ಲಿ ಕಂಗನಾಗೆ ಪ್ರಶ್ನೆ ಮಾಡಿದ್ದಾರೆ. ಏನನ್ನು ನೀವು ನೇರವಾಗಿ ಹೇಳುವುದಕ್ಕೆ ಹೊರಟಿದ್ದೀರೋ, ಅದನ್ನು ನೇರವಾಗಿ ಹೇಳಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

  • ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ – ರಥೋತ್ಸವದಲ್ಲಿ ಹರಕೆ ತೀರಿಸಿದ ರೈತ

    ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ – ರಥೋತ್ಸವದಲ್ಲಿ ಹರಕೆ ತೀರಿಸಿದ ರೈತ

    ವಿಜಯನಗರ: ಸಾಮಾನ್ಯವಾಗಿ ಕೃಷಿ ಕೆಲಸ ಮಾಡುವವರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರಲ್ಲ. ಈ ಹಿನ್ನೆಲೆಯಲ್ಲಿ ಯುವ ರೈತನೊಬ್ಬ, ರೈತರಿಗೆ (farmer) ಕನ್ಯೆ ಕೊಡಲಿ ಎಂದು ಬರೆದು ರಥೋತ್ಸವದಲ್ಲಿ ಹರಕೆ ತೀರಿಸಿದ್ದಾನೆ.

    ವಿಜಯನಗರ (Vijayanagara) ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ ನಿನ್ನೆ (ಬುಧವಾರ) ಸಂಜೆ ಜರುಗಿದೆ‌. ಈ ರಥೋತ್ಸವದಲ್ಲಿ, ಓರ್ವ ಯುವ ರೈತ ಬಾಳೆಹಣ್ಣಿನ ಮೇಲೆ ಬರೆದಿರುವ ಹರಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹರಿಕೆಯಲ್ಲಿ ಏನಿದೆ?: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ ಎಂದು ಬಾಳೆಹಣ್ಣಿನ ಮೇಲೆ ಬರೆದಿದ್ದಾನೆ. ಇದನ್ನು ನಂತರ ರಥೋತ್ಸವದ ವೇಳೆ ದುರ್ಗಾದೇವಿ ರಥಕ್ಕೆ ಸಮರ್ಪಿಸಿ ತನ್ನ ಹರಕೆಯನ್ನು ಸಮರ್ಪಣೆ ಮಾಡಿದ್ದಾನೆ. ಇದನ್ನೂ ಓದಿ: ಹೂಡಿಕೆದಾರರ ಹಿತಾಸಕ್ತಿಯೇ ನನಗೆ ಮುಖ್ಯ – 20,000 ಕೋಟಿ ಮೌಲ್ಯದ FPO ಹಿಂಪಡೆದ ಬಳಿಕ ಅದಾನಿ ಮೊದಲ ಪ್ರತಿಕ್ರಿಯೆ

    ತಾಯಿ ದುರ್ಗಾಂಬಿಕೆ ಜನರ ಮನಸ್ಸು ಬದಲಾಯಿಸಿ, ರೈತರಿಗೂ ಮದುವೆಯಾಗಲು ಹೆಣ್ಣು ಸಿಗಲಿ. ಎಲ್ಲರಿಗೂ ಈ ರೀತಿಯ ಮನಸ್ಥಿತಿಯನ್ನು ಕರುಣಿಸಲಿ ಎಂದು ಹರಕೆ ತೀರಿಸಿದ್ದಾರೆ. ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 1 ಲಕ್ಷ ಖರ್ಚು ಮಾಡಿ ಹೆಣ್ಣುಮಗುವನ್ನು ಚಾಪರ್‌ನಲ್ಲಿ ಮನೆಗೆ ಕರೆತಂದ್ರು!

    1 ಲಕ್ಷ ಖರ್ಚು ಮಾಡಿ ಹೆಣ್ಣುಮಗುವನ್ನು ಚಾಪರ್‌ನಲ್ಲಿ ಮನೆಗೆ ಕರೆತಂದ್ರು!

    ಮುಂಬೈ: ಹುಟ್ಟಿದ ಮಗು ಹೆಣ್ಣು ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ದಂಪತಿ ತಮಗೆ ಹೆಣ್ಣು ಮಗು ಹುಟ್ಟಿದ ಸಂತಸದಲ್ಲಿ ಆ ಆಗುವನ್ನು ವಿಶೇಷವಾಗಿ ತಮ್ಮ ಕುಟುಂಬಕ್ಕೆ ಬರಮಾಡಿಕೊಂಡ ಘಟನೆ ಪುಣೆಯ ಶೆಲ್ಗಾಂವ್‍ನಲ್ಲಿ ನಡೆದಿದೆ.

    ಹಲವು ವರ್ಷಗಳ ಬಳಿಕ ವಿಶಾಲ್ ಝರೇಕರ್ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದೆ. ಹುಟ್ಟಿದ ಮಗು ಹೆಣ್ಣು ಅಂತ ಗೊತ್ತಾದ ಕೂಡಲೇ ವಿಶಾಲ್ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇದೇ ಖುಷಿಯಲ್ಲಿ ವಿಶಾಲ್ ದಂಪತಿ ತಮ್ಮ ಮಗಳನ್ನು ವಿಶೇಷವಾಗಿ ಚಾಪರ್ ಮೂಲಕ ಮನೆಗೆ ಕರೆದುಕೊಂಡು ಬರಲು ತೀರ್ಮಾನಿಸಿದ್ದಾರೆ.

    ನಮ್ಮ ಇಡೀ ಕುಟುಂಬದಲ್ಲಿ ಹೆಣ್ಣು ಮಗುವಿರಲಿಲ್ಲ. ಆದರೆ ಇದೀಗ ನಮಗೆ ಹೆಣ್ಣು ಮಗು ಜನಿಸಿದೆ. ಹೀಗಾಗಿ ನಮಗೆ ಹುಟ್ಟಿದ ಮಗುವನ್ನು ವಿಶೇಷವಾಗಿ ಮನೆಗೆ ಬರಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆವು. ಅಂತೆಯೇ 1 ಲಕ್ಷ ನೀಡಿ ಚಾಪರ್ ನಲ್ಲಿ ಕರೆದುಕೊಂಡು ಬಂದೆವು ಎಂದು ಮಗುವಿನ ತಂದೆ ವಿಶಾಲ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಮುಸ್ಲಿಂ ಏರಿಯಾಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್

    ವಿಶಾಲ್ ತಮ್ಮ ಮಗಳನ್ನು ಚಾಪರ್‍ನಲ್ಲಿ ಕರೆದುಕೊಂಡು ಬಂದು ಇಳಿಯುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕೆಲವರು ತಂದೆಯ ಕಾರ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅಷ್ಟು ಚಿಕ್ಕ ಮಗುವನ್ನು ಹೆಲಿಕಾಪ್ಟರ್ ನಲ್ಲಿ ಯಾಕೆ ಕರೆದುಕೊಂಡು ಬಂದ್ರಿ..?, ಜೋರಾದ ಶಬ್ಧದಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಹೀಗೆ ಹಲವಾರು ಪರ- ವಿರೋಧ ಕಾಮೆಂಟ್ ಗಳು ಬರುತ್ತಿವೆ.

  • ಪತ್ನಿಯಾಗುವವಳು ನನ್ನಂತೆಯೇ ಕ್ರೀಡಾಪಟುವಾಗಿರಬೇಕು: ನೀರಜ್ ಚೋಪ್ರಾ

    ಪತ್ನಿಯಾಗುವವಳು ನನ್ನಂತೆಯೇ ಕ್ರೀಡಾಪಟುವಾಗಿರಬೇಕು: ನೀರಜ್ ಚೋಪ್ರಾ

    ನವದೆಹಲಿ: ನನ್ನ ಪತ್ನಿಯಾಗಿ ಬರುವವಳು ನನ್ನಂತೆಯೇ ಕ್ರೀಡಾಪಟು ಆಗಿರಬೇಕು ಎಂದು ಒಲಿಂಪಿಕ್ಸ್ ಗೋಲ್ಡ್ ಮೆಡಲಿಸ್ಟ್ ನೀರಜ್ ಚೋಪ್ರಾ ಬಹಿರಂಗಪಡಿಸಿದ್ದಾರೆ.

    ಡಾನ್ಸ್ +6 ಕಾರ್ಯಕ್ರಮದ ಸಂದರ್ಭದಲ್ಲಿ ನಿರೂಪಕರು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚಾಗಿ ಹುಡುಕಿರುವ ಕೆಲವೊಂದು ಪ್ರಶ್ನೆಗಳನ್ನು ನೀರಜ್ ಮುಂದಿಟ್ಟರು. ನೀರಜ್ ಗೆಳತಿಯ ಹೆಸರೇನು?. ನೀರಜ್ ಜೊತೆ ಯಾರ ಜಾತಕ ಹೇಗೆ ಹೊಂದುತ್ತದೆ ಎಂಬ ಪ್ರಶ್ನೆಗಳನ್ನು ಹುಡುಕಲಾಗಿತ್ತು.

    ಈ ಬಗ್ಗೆ ನೀರಜ್ ಅವರನ್ನು ಕೇಳಿದಾಗ ಸಂಕೋಚದಿಂದಲೇ ಉತ್ತರಿಸಿದ ಗೋಲ್ಡ್ ಮೆಡಲಿಸ್ಟ್, ಜಾತಕದ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದರು. ಇದೇ ವೇಳೆ ತೀರ್ಪುಗಾರರೊಬ್ಬರು ನೀರಜ್ ಎಂತಹ ಹುಡುಗಿಯನ್ನು ಮದುವೆಯಾಗಲು ಬಯಸುತ್ತಾರೆ ಎಂದು ನೇರವಾಗಿ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ನೀರಜ್, ನಾನು ಮದುವೆಯಾಗುವ ಹುಡುಗಿ ನನ್ನಂತೆಯೇ ಕ್ರೀಡಾಪಟುವಾಗಿರಬೇಕು. ಅಲ್ಲದೆ ಅವಳು ತನ್ನ ಕುಟುಂಬವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಮನಬಿಚ್ಚಿ ಮಾತನಾಡಿದರು. ಇದನ್ನೂ ಓದಿ: ಚಿನ್ನ ಗೆದ್ದ ಬಳಿಕ ರಾಷ್ಟ್ರಗೀತೆ ವೇಳೆ ನೀರಜ್ ಕಣ್ಣೀರು- ಪದಕವನ್ನು ಮಿಲ್ಕಾ ಸಿಂಗ್‍ಗೆ ಸಮರ್ಪಿಸಿದ ಸಾಧಕ

    ಈ ಹಿಂದೆ ಸಂದರ್ಶನವೊಂದರಲ್ಲಿ ಮಹಿಳಾ ಅಭಿಮಾನಿಗಳಿಂದ ಇಷ್ಟೊಂದು ಪ್ರಿತಿ, ಮೆಚ್ಚುಗೆ ಬರುತ್ತಿದೆ ಈ ಕುರಿತಾಗಿ ಏನು ಹೇಳುತ್ತೀರಿ ಎಂಬ ಪ್ರಶ್ನೆಯನ್ನು ನೀರಜ್ ಅವರಿಗೆ ಕೇಳಲಾಗಿತ್ತು. ಆಗ ಅವರು, ಇದು ಒಳ್ಳೆಯದು. ಆದರೆ ಸತ್ಯವನ್ನು ಹೇಳಬೇಕು ಎಂದರೆ, ನಾನು ಇನ್ನೂ ಸಿಂಗಲ್. ನಾನು ಅಭಿಮಾನಿಗಳಿಂದ ತುಂಬಾ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಇದು ಸಂತೋಷದ ವಿಚಾರವಾಗಿದೆ. ಮುಂಬರುವ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‍ಶಿಪ್ ಮೇಲೆ ಕಣ್ಣಿಟ್ಟಿದ್ದೇನೆ. ಹಾಗಾಗಿ ನಾನು ನನ್ನ ಆಟದ ಮೇಲೆ ಗಮನ ಹರಿಸಲು ಬಯಸುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ನೀರಜ್‌ ಚೋಪ್ರಾ ತರಬೇತಿಗಾಗಿ 7 ಕೋಟಿ ರೂ. ಖರ್ಚು ಮಾಡಿದ್ದ ಸರ್ಕಾರ

    ಇದೇ ವೇಳೆ ನಿಮಗೆ ಯಾರಾದ್ರೂ ಗರ್ಲ್ ಫ್ರೆಂಡ್ ಇದ್ದಾರಾ ಎಂಬ ಪ್ರಶ್ನೆಗೆ, ಈ ವಿಚಾರವಾಗಿ ನಾನು ಮುಂದಿನ ದಿನಗಳಲ್ಲಿ ಯೋಚನೆ ಮಾಡುತ್ತೇನೆ. ಸದ್ಯ ಈಗ ನನ್ನ ಗಮನ ನನ್ನ ಆಟ ಮತ್ತು ಗುರಿಯ ಮೇಲಿದೆ ಎಂದು ಹೇಳಿದ್ದರು. ನೀರಜ್ ಅವರು ಈ ಸಂದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ಸಕಥ್ ಸುದ್ದಿಯಾಗಿತ್ತು.  ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ತರಬೇತಿ ನೀಡಿದ್ದಿದ್ದು ಶಿರಸಿಯ ಯೋಧ..!

  • ಮದುವೆಯಾಗಲು ಹೆಣ್ಣು ಸಿಕ್ತಿಲ್ಲ – ಯೋಗೇಶ್ವರ್ ಬಳಿ ಅಳಲು ತೋಡಿಕೊಂಡ ರೈತ

    ಮದುವೆಯಾಗಲು ಹೆಣ್ಣು ಸಿಕ್ತಿಲ್ಲ – ಯೋಗೇಶ್ವರ್ ಬಳಿ ಅಳಲು ತೋಡಿಕೊಂಡ ರೈತ

    – ನನ್ನದು ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆಯಿದು
    – ರೈತನನ್ನು ಮದುವೆಯಾದರೆ ಪ್ರೋತ್ಸಾಹ ಧನ ನೀಡಿ

    ಮಂಡ್ಯ: ಮದುವೆಯಾಗಲು ಹೆಣ್ಣು ನೀಡುತ್ತಿಲ್ಲ ಎಂದು ಸಚಿವ ಪಿ ಯೋಗೇಶ್ವರ್ ಬಳಿ ಯುವ ರೈತರೊಬ್ಬರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

    ಲಾಕ್‍ಡೌನ್ ಸಂದರ್ಭದಲ್ಲಿ ಪಟ್ಟಣ ಪ್ರದೇಶದಲ್ಲಿ ವಾಸ ಮಾಡಲು ಸಾಧ್ಯವಾಗದೇ ಶೇ.75 ಜನರು ಹಳ್ಳಿಗಳಿಗೆ ವಾಪಸ್ ಬಂದಿದ್ದರು. ಈ ವೇಳೆ ಜನರು ಹಳ್ಳಿ ಲೈಫ್ ಸೂಪರ್, ರೈತನೇ ಗ್ರೇಟ್ ಎಂದು ಹೇಳುತ್ತಿದ್ದರು. ಆದರೆ ಲಾಕ್‍ಡೌನ್ ಮುಗಿದ ಬಳಿಕ ಹಳ್ಳಿ ಲೈಫ್‍ನ ಅನುಭವಿಸಲು ಇಷ್ಟ ಪಡುತ್ತಿಲ್ಲ ಹಾಗೂ ರೈತನಿಗೆ ಹೆಣ್ಣು ಕೊಡಲು ಹೆಣ್ಣೆತ್ತವರು ಮೂಗು ಮುರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರೈತ ಪ್ರವೀಣ್ ಅವರು ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಸಚಿವ ಯೋಗೇಶ್ವರ್ ಹತ್ತಿರ ತನ್ನ ಕಣ್ಣೀರಿನ ಕಹಾನಿಯನ್ನು ಹೇಳಿಕೊಂಡಿದ್ದಾರೆ. ಸರ್ ನಾನೊಬ್ಬ 28 ವರ್ಷದ ಯುವಕ, ನಾನು ರೇಷ್ಮೆ ಕೃಷಿಯನ್ನು ಮಾಡುತ್ತೇನೆ. ಅದರಿಂದ ಒಳ್ಳೆಯ ಸಂಪಾದನೆಯನ್ನು ಮಾಡುತ್ತಿದ್ದೇನೆ. ಆದರೆ ನಾನು ಮದುವೆಯಾಗಲು ಹುಡುಗಿ ಕೇಳಲು ಹೋದರೆ, ನನಗೆ ಹುಡುಗಿ ಕೊಡುತ್ತಿಲ್ಲ. ನಾವು ರೈತರಿಗೆ ಕೊಡಲ್ಲ. ಸಿಟಿಯಲ್ಲಿ ಇದ್ದವರಿಗೆ ಹೆಣ್ಣು ಕೊಡುತ್ತೇವೆ ಎಂದು ಹೆಣ್ಣೆತ್ತವರು ಹೇಳುತ್ತಿದ್ದಾರೆ. ಇದು ನನ್ನೊಬ್ಬನ ಸಮಸ್ಯೆ ಮಾತ್ರವಲ್ಲ, ಇಡೀ ರೈತ ಯುವಕರ ಸಮಸ್ಯೆ ಎಂದು ಹೇಳಿದ್ದಾರೆ.

    ಈ ಸಮಸ್ಯೆ ಹೋಗಲಾಡಿಸಲು ಒಂದು ಕಾಯ್ದೆ ತನ್ನಿ. ಅಂತರ್ಜಾತಿ ಮದುವೆಯಾದವರಿಗೆ 2 ಲಕ್ಷ, 3 ಲಕ್ಷ ಎಂದು ಕೊಡುತ್ತೀರಾ. ಅದೇ ರೀತಿ ರೈತನನ್ನು ಮದುವೆಯಾದರೆ ಅವರಿಗೆ ಹುಟ್ಟಿಗೆ ಹುಟ್ಟಿದ ಮಕ್ಕಳಿಗೆ ವಿಮೆ ಅಥವಾ ಪ್ರೋತ್ಸಾಹ ಧನ ನೀಡುವಂತಹ ಯೋಜನೆಗಳನ್ನು ತನ್ನಿ. ಈ ಬಗ್ಗೆ ಸಿಎಂ ಸರ್‍ಗೂ ಹೇಳಿ ಸರ್, ಇದೊಂದು ಒಳ್ಳೆಯ ಕೆಲಸ ಮಾಡಿ ಎಂದು ಪ್ರವೀಣ್ ಅವರು ಮನವಿ ಮಾಡಿಕೊಂಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಪಿ.ಯೋಗೇಶ್ವರ್, ಹೌದು ಅಣ್ಣ ನೀನು ಹೇಳುತ್ತಿರುವುದು ಸರಿ ಇದೆ. ಯೋಚನೆ ಮಾಡೋಣಾ ಇದು ಬಹಳ ಗಂಭೀರ ಸಮಸ್ಯೆ. ಈ ಬಗ್ಗೆ ನಾನು ಮಾತನಾಡುತ್ತೇನೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

  • 9ನೇ ತರಗತಿ ವಿದ್ಯಾರ್ಥಿನಿ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ

    9ನೇ ತರಗತಿ ವಿದ್ಯಾರ್ಥಿನಿ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ

    – ಐಎಎಸ್ ಶ್ರೇಣಿಯ ಅಧಿಕಾರಿಯಾದ ಪ್ರಗತಿ

    ಯಾದಗಿರಿ: ರಾಷ್ಟ್ರೀಯ ಹೆಣ್ಣು ಮಗು ದಿನದ ಅಂಗವಾಗಿ, ಗ್ರಾಮೀಣ ಭಾಗದ ಓರ್ವ ಬಡ ವಿದ್ಯಾರ್ಥಿನಿ ಕೆಲ ಸಮಯ ಐಎಎಸ್ ಶ್ರೇಣಿಯ ಅಧಿಕಾರಿಯಾಗಿ ಜಿ.ಪಂ ಸಿಇಒ ಹುದ್ದೆಯನ್ನು ಅಲಂಕರಿಸಿ ಸಂಭ್ರಮಿಸಿದ್ದಾಳೆ.

    ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಂದಕೂರ ಗ್ರಾಮದ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರಗತಿ ಅಥಿತಿ ಜಿ.ಪಂ ಸಿಇಒ ಆಗಿ ಪಟ್ಟಕ್ಕೇರಿದ ಬಾಲಕಿ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸ್ಪೂರ್ತಿ ತುಂಬುವ ಉದ್ದೇಶದಿಂದ ಯಾದಗಿರಿಯ ಜಿ.ಪಂ ಹಾಲಿ ಸಿಇಒ ಶಿಲ್ಲಾ ಶರ್ಮಾ ತಮ್ಮ ಹುದ್ದೆಯನ್ನು ಪ್ರಗತಿಗೆ ಬಿಟ್ಟುಕೊಟ್ಟಿದ್ದಾರೆ.

    ಶಿಲ್ಲಾ ಶರ್ಮಾ ತಮ್ಮ ಕಾರ್ಯಾದ ಬಗ್ಗೆ ವಿವರಣೆ ನೀಡಿ ಬಳಿಕ ಅಥಿತಿ ಸಿಇಒ ಪ್ರಗತಿ ಸಭೆಯ ನೇತೃತ್ವವನ್ನು ವಹಿಸಿಕೊಂಡರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸವನಗೌಡ ಯಡಿಯಾಪುರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ಸಹ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಪ್ರಗತಿ ಹೆಣ್ಣಿನ ಶಿಕ್ಷಣಕ್ಕೆ ಪಾಲಕರು ಹೆಚ್ಚಿನ ಸಹಕಾರ ನೀಡಬೇಕೆಂದು ಭಾಷಣ ಮಾಡಿ ಇತರರಿಗೆ ಪ್ರೇರಣೆಯಾದಳು.

    ಇನ್ನೂ ಸಿಇಒ ಕುರ್ಚಿಯಲ್ಲಿ ಕುಳಿತಿದ್ದ ಪ್ರಗತಿಯನ್ನು ಕಂಡು ಆಕೆಯ ಸ್ನೇಹಿತೆಯರು ಮತ್ತು ಶಾಲಾ ಸಿಬ್ಬಂದಿ ಸಂತಸಪಟ್ಟರು. ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯಾಧಿಕಾರಿ ಪ್ರಭಾಕರ್ ಅವರ ತಂಡ, ಹೆಣ್ಣಿನ ಮಹತ್ವವನ್ನು ಸಾರಲು ಈ ಅಪರೂಪದ, ಕಾರ್ಯಕ್ರಮ ಆಯೋಜನೆ ಮಾಡಿದ್ದರು.

  • ಹುಟ್ಟಿದ ಮಗು ಹೆಣ್ಣೆಂದು ಗೊತ್ತಾಗ್ತಿದ್ದಂತೆ ಬಾಯೊಳಗೆ ಬೆರಳು ತುರುಕಿ ಉಸಿರುಗಟ್ಟಿಸಿ ಕೊಂದ!

    ಹುಟ್ಟಿದ ಮಗು ಹೆಣ್ಣೆಂದು ಗೊತ್ತಾಗ್ತಿದ್ದಂತೆ ಬಾಯೊಳಗೆ ಬೆರಳು ತುರುಕಿ ಉಸಿರುಗಟ್ಟಿಸಿ ಕೊಂದ!

    ಶಿಮ್ಲಾ: ಆಗ ತಾನೇ ಹುಟ್ಟಿದ ಮಗು ಹೆಣ್ಣು ಎಂದು ಗೊತ್ತಾಗುತ್ತಿದ್ದಂತೆ ಅದರ ಬಾಯೊಳಗೆ ತನ್ನ ಬೆರಳು ತುರುಕಿ ಉಸಿರುಗಟ್ಟಿಸಿ ಕೊಲೆಗೈದ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಕೃತ್ಯ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಆರೋಪಿಯನ್ನು ಹರೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲೆಯ ನಸ್ಲೋಹ್ ಗ್ರಾಮದ ನಿವಾಸಿ. ಈತನ ವಿರುದ್ಧ ಪತ್ನಿ ಮೀನಾ ದೇವಿ(27) ಪೊಲೀಸರ ಬಳಿ ಪತಿಯ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ.

    8 ವರ್ಷಗಳ ಹಿಂದೆ ನಾನು ಕುಮಾರ್ ನನ್ನು ಮದುವೆಯಾಗಿದ್ದು, ಈಗಾಗಲೇ ನಮಗೆ 7 ಮತ್ತು 4 ವರ್ಷದ ಹೆಣ್ಣು ಹಾಗೂ ಗಂಡು ಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ನನಗೆ ಇಬ್ಬರು ಗಂಡು ಮಕ್ಕಳು ಬೇಕು ಎಂದು ಕುಮಾರ್ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದನು ಎಂದು ಮೀನಾ ಪೊಲೀಸರ ಬಳಿ ತಿಳಿಸಿದ್ದಾಳೆ.

    ಇತ್ತ ಬುಧವಾರ ಮೀನಾ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದರಿಂದ ಸಿಟ್ಟಿಗೆದ್ದ ಕುಮಾರ್, ಪತ್ನಿಗೆ ಚೆನ್ನಾಗಿ ಥಳಿಸಿದ್ದಾನೆ. ಅಲ್ಲದೆ ಆಗ ತಾನೇ ಹುಟ್ಟಿದ ಮಗುವನ್ನು ತಲೆಕೆಳಗೆ ಮಾಡಿ ಹಿಡಿದುಕೊಂಡು ಬಾಯೊಳಗೆ ತನ್ನ ಕೈ ಬೆರಳು ತುರುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇಷ್ಟಾದ ನಂತರ ಕೆಲ ಸಮಯದ ಬಳಿಕ ಮತ್ತೆ ನನ್ನ ಬಳಿ ಬಂದು ತಾನು ಮಗುವನ್ನು ಸಮಾಧಿ ಮಾಡಿದೇನೆ ಎಮದು ಹೇಳಿದ್ದಾನೆ ಅಂತ ಮೀನಾ ಪೊಲೀಸರ ಬಳಿ ಕಣ್ಣೀರು ಹಾಕಿದ್ದಾಳೆ.