Tag: ಹೆಡ್ ಕಾನ್ಸ್ ಸ್ಟೇಬಲ್

  • ಸಚಿವ ಸಾರಾ ಮಹೇಶ್ ಕಾರು ತಡೆದಿದ್ದ ಮುಖ್ಯಪೇದೆ ಅಮಾನತು

    ಸಚಿವ ಸಾರಾ ಮಹೇಶ್ ಕಾರು ತಡೆದಿದ್ದ ಮುಖ್ಯಪೇದೆ ಅಮಾನತು

    ಮೈಸೂರು: ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾರಾ ಮಹೇಶ್ ಅವರ ಕಾರನ್ನು ತಡೆದಿದ್ದ ಮುಖ್ಯ ಪೇದೆಯನ್ನು ಅಮಾನತುಗೊಳಿಸಲಾಗಿದೆ.

    ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮುಖ್ಯ ಪೇದೆ ವೆಂಕಟೇಶ್ ಅಮಾನತುಗೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ವಿಜಯ್‍ಶಂಕರ್ ನಾಮಪತ್ರ ಸಲ್ಲಿಕೆ ವೇಳೆ ಮೂರು ಕಾರುಗಳಿಗೆ ಅವಕಾಶವಿದ್ದರೂ, ಸಚಿವರ ಕಾರಿಗೆ ಮುಖ್ಯಪೇದೆ ತಡೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿಯ ದೇವರಾಜು ಅರಸು ಜಂಕ್ಷನ್ ಬಳಿಯೇ ಕಾರು ತಡೆದಿದ್ದ ವೆಂಕಟೇಶ್ ಅವರನ್ನು ಇದೀಗ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

    ಸಾರಾಮಹೇಶ್ ಸ್ಪಷ್ಟನೆ:
    ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಮುಖ್ಯ ಪೇದೆಯೊಬ್ಬರು ಅನುಚಿತವಾಗಿ ವರ್ತಿಸಿದ್ದು ನಿಜ. ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲಾಧಿಕಾರಿ ಕಚೇರಿ ಸುತ್ತ 100 ಮೀಟರ್ ನಿಷೇಧಾಜ್ಞೆ ಇತ್ತು. ಆದರೆ ಅವರು ನನ್ನ ಕಾರನ್ನು ಅರ್ಧ ಕಿಲೋ ಮೀಟರ್ ಹಿಂದೆ ತಡೆದಿದ್ದರು. ಮುಖ್ಯ ಪೇದೆಗೆ ಕಾನೂನಿನ ಅರಿವಿರಲಿಲ್ಲ. ಈ ಬಗ್ಗೆ ನನ್ನ ಜೊತೆಯಿದ್ದವರು ತಿಳಿಸಿದರೂ ಅದನ್ನು ಒಪ್ಪಲು ಸಿದ್ಧರಿರಲಿಲ್ಲ. ಇದಾದ ನಂತರ ಹಿರಿಯ ಅಧಿಕಾರಿಗಳು ಬಂದು ಅವರಿಗೆ ತಿಳಿ ಹೇಳಿ ಕಾರನ್ನು ಬಿಟ್ಟರು. ಈ ಬಗ್ಗೆ ಪರಿಶೀಲನೆ ನಡೆಸಿ ಕರ್ತವ್ಯ ಲೋಪವೆಸಗಿದ ಮುಖ್ಯಪೇದೆಯನ್ನು ಅಮಾನತುಗೊಳಿಸಿರಬಹುದು. ಈ ಬಗ್ಗೆ ನಾನು ಯಾವುದೇ ದೂರು ನೀಡಿಲ್ಲ ಎಂದು ಸಾ.ರಾ ಮಹೇಶ್ ಸ್ಪಷ್ಟನೆ ನೀಡಿದ್ದಾರೆ.

  • ಪ್ರಧಾನಿ ಮೋದಿ ಪರ ಪೋಸ್ಟ್ ಹಾಕಿದ ಹೆಡ್ ಕಾನ್ಸ್ ಸ್ಟೇಬಲ್ ಅಮಾನತು

    ಪ್ರಧಾನಿ ಮೋದಿ ಪರ ಪೋಸ್ಟ್ ಹಾಕಿದ ಹೆಡ್ ಕಾನ್ಸ್ ಸ್ಟೇಬಲ್ ಅಮಾನತು

    ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಪರ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಣೇಬೆನ್ನೂರು ನಗರ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.

    ರಾಣೇಬೆನ್ನೂರು ನಗರ ಠಾಣೆಯ ಜಯಂತ ಬಳಿಗಾರ ಅಮಾನತಾದ ಹೆಡ್ ಕಾನ್ಸ್ ಸ್ಟೇಬಲ್. ಜಯಂತ ಬಳಿಗಾರ ಅವರನ್ನು ಎಸ್‍ಪಿ ಕೆ.ಪರಶುರಾಮ ಅಮಾನತು ಮಾಡುವಂತೆ ಆದೇಶ ಮಾಡಿದ್ದಾರೆ.

    ಕಾನ್ಸ್ ಸ್ಟೇಬಲ್ ಜಯಂತ ಬಳಿಗಾರ ಅವರು ಜಮ್ಮು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಹಾಕಿದ್ದರು ಎನ್ನಲಾಗಿದೆ. `ನಮ್ಮ ರಾಜ್ಯಕ್ಕೆ ಬೇಕು ಮೋದಿ ಬಲ’ ಎಂದು ಹೇಳಿ ಪೋಸ್ಟ್ ಮುಕ್ತಾಯ ಮಾಡಿದ್ದಾರೆ. ಇದನ್ನು ಎಸ್‍ಪಿ ಕೆ.ಪರಶುರಾಮ ಗಮನಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಇದೀಗ ಜಯಂತ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

  • ಮಹಿಳೆಗೆ ಕಿರುಕುಳ ಕೊಟ್ಟ ಪೇದೆ ಕೋರ್ಟ್ ಕಟ್ಟಡದಿಂದ ಜಿಗಿದು ಸಾವು: ವಿಡಿಯೋ

    ಮಹಿಳೆಗೆ ಕಿರುಕುಳ ಕೊಟ್ಟ ಪೇದೆ ಕೋರ್ಟ್ ಕಟ್ಟಡದಿಂದ ಜಿಗಿದು ಸಾವು: ವಿಡಿಯೋ

    ಮಂಗಳೂರು: ಪಕ್ಕದ ಮನೆಯ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಬಂಧನವಾಗಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಅವಮಾನ ಸಹಿಸಲಾಗದೇ ಕೋರ್ಟ್ ನ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡವರು. ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಪ್ರವೀಣ್ ಪೊಕ್ಸೋ ಕಾಯ್ದೆಯಡಿ ಬಂಧಿತರಾಗಿದ್ದರು. ಪ್ರಕರಣ ಸಂಬಂಧ ಮಂಗಳೂರು ಜಿಲ್ಲಾ ಸತ್ರ 2ನೇ ನ್ಯಾಯಾಲಯಕ್ಕೆ ಹಾಜರುಪಡಿಸಲು ಬಜಪೆ ಪೊಲೀಸರು ಪ್ರವೀಣ್ ಅವರನ್ನು ಕರೆ ತಂದಿದ್ದರು. ಈ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಕೋರ್ಟ್‍ನ ನಾಲ್ಕನೇ ಮಹಡಿಯಿಂದ ಜಿಗಿದು ಪ್ರವೀಣ್ ಆತ್ಮಹತ್ಯೆಗೆ ಯತ್ನಿಸಿದ್ದರು. ಪರಿಣಾಮ ತೀವ್ರ ಗಾಯಗೊಂಡ ಪ್ರವೀಣ್ ರನ್ನು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ: ಕೋರ್ಟ್ ಕಟ್ಟಡದ ಮೇಲಿಂದ ಬಿದ್ದ ಆರೋಪಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಸುಮಾರು ಅರ್ಧ ಗಂಟೆಗಳ ಕಾಲ ಪೊಲೀಸರು ಆಸ್ಪತ್ರೆಗೆ ಸೇರಿಸದೆ ಅಮಾನವೀಯತೆ ತೋರಿದ್ದಾರೆ ಅಂತಾ ಇದೀಗ ಪೊಲೀಸರ ಮೇಲೆ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಪ್ರವೀಣ್ ಜೊತೆ ಇನ್ನಿಬ್ಬರ ಪೊಲೀಸರ ಹೆಸರೂ ಕೇಳಿ ಬಂದಿದ್ದು ಪ್ರಕರಣದ ಸಮಗ್ರ ತನಿಖೆ ನಡೆಸುವುದಾಗಿ ಮಂಗಳೂರು ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ಹೇಳಿದ್ದಾರೆ.

    https://www.youtube.com/watch?v=Hp8_36DAAzQ