Tag: ಹೆಡ್‌ಬುಷ್

  • ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ‘ಹೆಡ್‌ಬುಷ್’ ನಟಿ ಪಾಯಲ್

    ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ‘ಹೆಡ್‌ಬುಷ್’ ನಟಿ ಪಾಯಲ್

    ಸೌತ್ ನಟಿ ಪಾಯಲ್ (Payal) ಸದ್ಯ ‘ಮಂಗಳವಾರಂ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮೊದಲ ಪ್ರೀತಿಯ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ. ರಿಜೆಕ್ಷನ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ : ಹೈದರಾಬಾದ್ ಗೆ ವಾಪಸ್

    ಪಾಯಲ್, ತಾವು ಹೈಸ್ಕೂಲಿನಲ್ಲಿ ಇದ್ದಾಗಲೇ ಒಬ್ಬ ಹುಡುಗನನ್ನು ನೋಡಿ ಇಷ್ಟಪಟ್ಟಿದ್ದೆ. ಆದರೆ ಆತ ನನ್ನನ್ನು ರಿಜೆಕ್ಟ್ ಮಾಡಿಬಿಟ್ಟ ಎಂದು ಮಾತನಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಕಡೆಯ ದಿನಗಳಲ್ಲಿ ನಾನು ನನ್ನ ಪ್ರೀತಿಯನ್ನು ಆತನ ಬಳಿ ವ್ಯಕ್ತಪಡಿಸಿದಾಗ ಅವನು ನನ್ನನ್ನು ತಿರಸ್ಕರಿಸಿದ. ನನಗೆ ಪ್ರೇಮ, ಪ್ರೀತಿಯಲ್ಲಿ ಆಸಕ್ತಿಯಿಲ್ಲ ಎಂದುಬಿಟ್ಟ.

    ಆ ನೋವಿನಿಂದ ಅಂದು ನನಗೆ ಓದಿನತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪರೀಕ್ಷೆಗಳಲ್ಲಿ ಫೇಲ್ ಆಗಿದ್ದೆ. ಈ ವಿಚಾರವನ್ನು ನನ್ನ ತಾಯಿಯ ಬಳಿ ಹೇಳಿಕೊಂಡು ಅತ್ತುಬಿಟ್ಟಿದ್ದೆ. ಅಂದು ತಾಯಿ ನನ್ನ ಬೆಂಬಲಕ್ಕೆ ನಿಂತರು ಎಂದು ಕನ್ನಡದ ‘ಹೆಡ್‌ಬುಷ್’ (Headbush) ನಟಿ ತಮ್ಮ ಹಳೆಯ ದಿನಗಳನ್ನ ಸ್ಮರಿಸಿದ್ದಾರೆ.

    ‘ಮಂಗಳವಾರಂ’ ಸಿನಿಮಾದಲ್ಲಿ ಪಾಯಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 17ರಂದು ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  • ಟಾಪ್‌ಲೆಸ್ ಆಗಿ ಪೋಸ್ ನೀಡಿದ ಕನ್ನಡದ ʻಹೆಡ್‌ಬುಷ್ʼ ನಟಿ ಪಾಯಲ್

    ಟಾಪ್‌ಲೆಸ್ ಆಗಿ ಪೋಸ್ ನೀಡಿದ ಕನ್ನಡದ ʻಹೆಡ್‌ಬುಷ್ʼ ನಟಿ ಪಾಯಲ್

    RX 100 ಸಿನಿಮಾ ಮೂಲಕ ಪಾಯಲ್‌ ರಜಪೂತ್ ಟಾಲಿವುಡ್‌ಗೆ ನಾಯಕಿಯಾಗಿ ಪಾದಾಪಣೆ ಮಾಡಿದ್ದರು. ಇದೀಗ‌ ಮತ್ತೆ ಚೊಚ್ಚಲ ಸಿನಿಮಾ ನಿರ್ದೇಶಕನ ಜೊತೆ ಪಾಯಲ್ ಕೈಜೊಡಿಸಿದ್ದಾರೆ. ಟಾಪ್‌ಲೆಸ್ ಅವತಾರದ ಮೂಲಕ ‘ಹೆಡ್‌ಬುಷ್’ ಬ್ಯೂಟಿ ಎಂಟ್ರಿ ಕೊಟ್ಟಿದ್ದಾರೆ.

    ಕನ್ನಡದ ‘ಹೆಡ್‌ಬುಷ್’ ನಟಿ ಪಾಯಲ್ ರಜಪೂತ್ (Payal Rajput) ಅವರು RX 100 ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಹೇಳಿಕೊಳ್ಳುವಂತಹ ಬ್ರೇಕ್ ಅವರಿಗೆ ಸಿಗಲಿಲ್ಲ. ಆದರೂ ಪಾಯಲ್ ರಜಪೂತ್‌ಗೆ ಬೇಡಿಕೆ ಕಮ್ಮಿಯಾಗಿಲ್ಲ. ಕೈತುಂಬಾ ಸಿನಿಮಾಗಳು ಅವರ ಕೈಯಲ್ಲಿದೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಇದೀಗ ತಮ್ಮ ಮೊದಲ ಸಿನಿಮಾ ನಿರ್ದೇಶಕ ಅಜಯ್ ಭೂಪತಿ (Ajay Bhupathi) ಜೊತೆ ‘ಮಂಗಳವಾರಂ’ (Mangalavaram) ಚಿತ್ರಕ್ಕೆ ಪಾಯಲ್ ಸಾಥ್ ನೀಡಿದ್ದಾರೆ. ನೀವು ನೋಡಿದರೆ ಈ ನೋಟವೇ ಸಾಕಷ್ಟು ವಿಷಯ ಹೇಳುತ್ತದೆ ಎಂಬ ಕ್ಯಾಪ್ಷನ್‌ನೊಂದಿಗೆ ಪಾಯಲ್ ರಜಪೂತ್ ಅವರು ಈ ಪೋಸ್ಟರ್ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಸಿನಿಮಾ ಬಗ್ಗೆ ಕೌತುಕ ಮೂಡಿಸಿದ್ದಾರೆ.

    ಚಿತ್ರದ ಪೋಸ್ಟರ್‌ನಲ್ಲಿ ನಟಿ ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ನಟಿ ಬೋಲ್ಡ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಏಬ್ಬಿಸಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಅಂದಹಾಗೆ, ಪಾಯಲ್ ಕಳೆದ ವರ್ಷ ಡಾಲಿ (Daali) ನಟನೆ, ನಿರ್ಮಾಣದ ‘ಹೆಡ್‌ಬುಷ್’ (Head Bush) ಸಿನಿಮಾದಲ್ಲಿ ನಟಿಸಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.

  • ಹೆಡ್ ಬುಷ್ ಚಿತ್ರದ ಪ್ರಚಾರ – ತೊಂದರೆ ಕೊಡ್ತಿದ್ದಾರೆಂದು ಐವರ ವಿರುದ್ಧ FIR

    ಹೆಡ್ ಬುಷ್ ಚಿತ್ರದ ಪ್ರಚಾರ – ತೊಂದರೆ ಕೊಡ್ತಿದ್ದಾರೆಂದು ಐವರ ವಿರುದ್ಧ FIR

    ಬೆಂಗಳೂರು: ಹೆಡ್ ಬುಷ್ ಚಿತ್ರತಂಡ (Head Bush Film Team) ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಿದೆ. ಇತ್ತೀಚೆಗೆ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಹಾಗೂ `ಜುಜುಬಿ ಕರಗ’ (Karaga) ಎನ್ನುವ ಪದ ಬಳಸಲಾಗಿದ್ದು ಕರಗ ಕುಣಿತಕ್ಕೂ ಅವಮಾನ ಮಾಡಲಾಗಿದೆ ಅನ್ನೋ ವಿವಾದ ಎದುರಿಸುತ್ತಿದ್ದ ಚಿತ್ರತಂಡ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ.

    ಹೆಡ್‌ಬುಷ್ ಚಿತ್ರದ ಪ್ರಚಾರ ಮಾಡುತ್ತಿದ್ದ ಐವರ ವಿರುದ್ಧ ಸ್ವಯಂಪ್ರೇರಿತವಾಗಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಕಾರು ಹಾಗೂ ಬೈಕ್‌ಗಳಲ್ಲಿ ಬಂದು ರಸ್ತೆ ಮಧ್ಯೆ ಕಿರುಚಾಡುತ್ತಾ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಆರೋಪದ ಮೇಲೆ ವಿಧಾನಸೌದ ಪೊಲೀಸರು (Vidhana Soudha Police) ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: ‘ಜುಜುಬಿ ಕರಗ’ ಪದ ಮ್ಯೂಟ್ ಮಾಡಲು ಧನಂಜಯ್ ಹಾಗೂ ಹೆಡ್ ಬುಷ್ ತಂಡ ಒಪ್ಪಿಗೆ

    ಐದಕ್ಕಿಂತ ಹೆಚ್ಚು ಜನ ಅಕ್ರಮ ಕೂಟ ಕಟ್ಟಿಕೊಂಡು ಹೆಡ್‌ಬುಷ್ (Head Bush) ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಾ ಕೂಗಾಡುತ್ತಿದ್ದರು. ಅಲ್ಲದೇ ವಿಧಾನಸೌಧ ಮೆಟ್ರೋ (Namma Metro) ನಿಲ್ದಾಣದ ಮುಂದೆ ಓಡಾಡುವ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಇತ್ತೀಚೆಗೆ ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದ್ದಂತೆ ಚಿತ್ರತಂಡ ಕ್ಷಮೆ ಕೇಳಿತ್ತು. ತದ ನಂತರ `ಜುಜುಬಿ ಕರಗ’ ಎನ್ನುವ ಪದವನ್ನೂ ಮ್ಯೂಟ್ ಮಾಡಲು ಒಪ್ಪಿಕೊಂಡಿತು. ಇದೀಗ ಪ್ರಚಾರದ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಅನ್ನೋ ಆರೋಪದ ಮೇಲೆ ಕೇಸ್ ದಾಖಲಾಗಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವೀರಗಾಸೆ ವಿವಾದ: ಡಾಲಿ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ ಭಜರಂಗದಳ ಆಕ್ರೋಶ

    ವೀರಗಾಸೆ ವಿವಾದ: ಡಾಲಿ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ ಭಜರಂಗದಳ ಆಕ್ರೋಶ

    ತುಮಕೂರು: ಹೆಡ್ ಬುಷ್ (Headbush) ಸಿನಿಮಾದಲ್ಲಿ (Cinema) ವೀರಗಾಸೆ (Veeragase) ಕುಣಿತಕ್ಕೆ ಅಪಮಾನ ಮಾಡಲಾಗಿದೆ. ಇದರಿಂದ ಹಿಂದೂ ಧರ್ಮಕ್ಕೆ (Hindu Religion) ಅವಮಾನವಾಗಿದೆ ಎಂದು ಆರೋಪಿಸಿ ಭಜರಂಗದಳದ (Bajrang Dal) ಕಾರ್ಯಕರ್ತರು ಡಾಲಿ ಧನಂಜಯ್ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ, ಕಪ್ಪು ಮಸಿ ಬಳಿದು ಆಕ್ರೋಶ ಹೊರಹಾಕಿದ ಘಟನೆ ತಿಪಟೂರು ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ನಡೆದಿದೆ.

    ಡಾಲಿ ಧನಂಜಯ (Dhananjaya) ಕ್ಷಮೆ ಕೇಳಬೇಕು ಹಾಗೂ ಚಿತ್ರದಿಂದ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ. ಇಲ್ಲದಿದ್ದರೇ ಯಾವ ಚಿತ್ರಮಂದಿರಗಳಲ್ಲೂ ಈ ಚಿತ್ರ ಪ್ರದರ್ಶನ ಮಾಡದಂತೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಳಕಿನ ಹಬ್ಬಕ್ಕೆ ‘ಕೆಜಿಎಫ್’ ಬೆಡಗಿಯ ಹೊಸ ಫೋಟೋ ಶೂಟ್

    ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head bush) ಸಿನಿಮಾದಲ್ಲಿ (Cinema) ಕರಗ ಮತ್ತು ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಿನಿಮಾ ಬೈಕಾಟ್ ಕೂಗು ಒಂದೆಡೆ ಕೇಳಿಬಂದಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ಡಾಲಿ ಧನಂಜಯ್ ಪರವಾಗಿದ್ದೇವೆ ಎಂಬ ಧ್ವನಿ ಎತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಗಂಧದಗುಡಿ ರಿಲೀಸ್‍ಗೆ ಕೌಂಟ್‍ಡೌನ್- ಮೊದಲ ಬಾರಿಗೆ ಅಶ್ವಿನಿ ವಿಶೇಷ ಸಂದರ್ಶನ

    ಕನ್ನಡದ ಇತರ ಸ್ಟಾರ್ ನಟ ಜೊತೆಗಿರುವ ಡಾಲಿ ಧನಂಜಯ್ ಫೋಟೋ ಹಾಗೂ ಅವರು ಮಾತನಾಡಿರುವ ವೀಡಿಯೋಗಳ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

    Live Tv
    [brid partner=56869869 player=32851 video=960834 autoplay=true]