Tag: ಹೆಚ್.ಸಿ.ಬಾಲಕೃಷ್ಣ

  • ಕುಮಾರಸ್ವಾಮಿಯವರು ಯಡಿಯೂರಪ್ಪನವರ ಬಳಿ ಹೋಗಿದ್ದರು: ಹೆಚ್.ಸಿ ಬಾಲಕೃಷ್ಣ

    ಕುಮಾರಸ್ವಾಮಿಯವರು ಯಡಿಯೂರಪ್ಪನವರ ಬಳಿ ಹೋಗಿದ್ದರು: ಹೆಚ್.ಸಿ ಬಾಲಕೃಷ್ಣ

    ರಾಮನಗರ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿಯವರು ಬಿಜೆಪಿಯ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪನವರ ಬಳಿ ಹೋಗಿದ್ದರು ಎಂದು ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.

    ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ಜೆಡಿಎಸ್ ಪಾಲಾದ ಹಿನ್ನೆಲೆ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಡಿಯೂರಪ್ಪನವರ ಬಳಿ ಹೋಗಿದ್ದರು. ಶಾಸಕ ಎ. ಮಂಜು ಜೊತೆಗೆ ಹೋಗಿ ಬೇಕಾದ ಕ್ಯಾಟಗರಿ ಮಾಡಿಸಿಕೊಂಡರು. 18 ವಾರ್ಡ್ ಗಳಲ್ಲಿ ಅವರು ಮೊದಲೇ ತಯಾರಿ ನಡೆಸಿದ್ದರು. ಹಾಗಾಗಿ ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆದ್ದರು. ಜೊತೆಗೆ ಕುಮಾರಸ್ವಾಮಿಯವರು ಎರಡು ದಿನ ಪ್ರಚಾರ ಕೂಡಾ ನಡೆಸಿದ್ದರು ಎಂದರು. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ಲೋಕಲ್ ಎಲೆಕ್ಷನ್ ಪ್ರಚಾರಕ್ಕಾಗಿ ನಾನು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಕರೆದಿದ್ದೆ. ಆದರೆ ನಮ್ಮ ನಾಯಕರು ಪ್ರಚಾರಕ್ಕೆ ಬರುವುದಿಲ್ಲ ಎಂದಿದ್ದರು. ಈ ಹಿನ್ನೆಲೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದು, ಆಡಳಿತವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ ಎಂದು ನುಡಿದರು.

    ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಇಲ್ಲ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಇದ್ದಾರೆ ಅಷ್ಟೇ. ಆದರೆ ಈ ಪುರಸಭೆ ಚುನಾವಣೆಯಲ್ಲಿ ಫೇಲ್ ಆಗಿದ್ದಾರೆ. ಸರ್ಕಾರ ಇದ್ದಾಗ ಒಂದೆರಡು ಸ್ಥಾನವನ್ನಾದರೂ ಗೆಲ್ಲಬೇಕಿತ್ತು. ಆದರೆ ಅವರು ಯಾವ ಸ್ಥಾನಗಳನ್ನೂ ಗೆದ್ದಿಲ್ಲ. ಇನ್ನು ಯೋಗೇಶ್ವರ್ ನ ನಾವು ಕಾಂಗ್ರೆಸ್‍ಗೆ ಕರೆಯಲ್ಲ. ನಾನು ಅಷ್ಟು ದೊಡ್ಡ ನಾಯಕ ಅಲ್ಲ, ಕೆಪಿಸಿಸಿ ಅಧ್ಯಕ್ಷ ಅಲ್ಲ. ಅವರು ಸಹ ನಮ್ಮನ್ನ ಕೇಳಿ ನಿರ್ಧಾರ ತೆಗೆದುಕೊಳ್ಳಲ್ಲ ಎಂದು ಹೇಳಿದರು. ಇದನ್ನೂ ಓದಿ:  ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತ

    ಅವರದ್ದೇ ಆದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದು ಯಾರೆಂದು ಅವರೇ ಹೇಳಿದ್ದಾರೆ. ವಿಧಾನಸಭೆಯಲ್ಲೇ ಅವರು ಹೇಳಿದ್ದಾರೆ. ಚೆಲುವನಾರಾಯಣಸ್ವಾಮಿ, ಮಾಗಡಿ ಬಾಲಕೃಷ್ಣ, ಜಮೀರ್ ನನ್ನನ್ನ ಸಿಎಂ ಮಾಡಿದ್ದು ಎಂದಿದ್ದಾರೆ. ಆದರೆ ಅವರು ಅದನ್ನ ಉಳಿಸಿಕೊಳ್ಳಲಿಲ್ಲ. ಉಳಿಸಿಕೊಂಡಿದ್ದರೆ ಅವರ ಮತ್ತು ರಾಜ್ಯದ ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದರು.

  • ಕುಮಾರಸ್ವಾಮಿ ಸ್ಲೋ ಪಾಯಿಸನ್: ಬಾಲಕೃಷ್ಣ ಕಿಡಿ

    ಕುಮಾರಸ್ವಾಮಿ ಸ್ಲೋ ಪಾಯಿಸನ್: ಬಾಲಕೃಷ್ಣ ಕಿಡಿ

    ರಾಮನಗರ: ಪಕ್ಷದ ಮುಖಂಡರ ಏಳಿಗೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ಅವರು ಒಂದು ರೀತಿಯ ಸ್ಲೋ ಪಾಯಿಸನ್ ಇದ್ದ ಹಾಗೆ ಎಂದು ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದ್ದಾರೆ.

    ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲ. ಈಗಾಗಲೇ ಹಲವು ಶಾಸಕರು ಜೆಡಿಎಸ್ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಶಾಸಕರಾದ ಪುಟ್ಟರಾಜು, ಶಿವಲಿಂಗೇಗೌಡ ಸೇರಿದಂತೆ ಹಲವು ಶಾಸಕರು ಪಕ್ಷ ಬಿಡುತ್ತಾರೆ. ಪಕ್ಷದ ಮುಖಂಡರ ಏಳಿಗೆಯನ್ನು ಕುಮಾರಸ್ವಾಮಿ ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ನಾನೂ ಕೂಡ ಅವರಿಂದ ಚುಚ್ಚಿಸಿಕೊಂಡಿದ್ದೇನೆ. ಕುಮಾರಸ್ವಾಮಿ ಸ್ಲೋ ಪಾಯಿಸನ್ ಇದ್ದ ಹಾಗೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ: ಎ.ಮಂಜು ತಿರುಗೇಟು

    ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನನ್ನ ತಮ್ಮನನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದರು. ಇವರ ರಾಜಕಾರಣ ನೋಡಿ ನನಗೆ ಬೇಸರವಾಗಿದೆ. ನನಗೆ ಕುಮಾರಸ್ವಾಮಿ ಬಗ್ಗೆ ಬೇಸರ ಇಲ್ಲ. ಅವರ ನಡವಳಿಕೆ ಬಗ್ಗೆ ಬೇಸರ. ಕುಮಾರಸ್ವಾಮಿ ಸರಿಯಾಗಿ ಈ ರಾಜ್ಯದಲ್ಲಿ ಇದ್ದಿದ್ದರೆ ಅವರಂತ ನಾಯಕರೇ ಕರ್ನಾಟಕದಲ್ಲಿ ಇರುತ್ತಿರಲಿಲ್ಲ. ಅವರು ನಾಯಕತ್ವವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

    ಈ ಬಗ್ಗೆ ರಾಮನಗರದಲ್ಲಿ ತಿರುಗೇಟು ನೀಡಿದ ಕುಮಾರಸ್ವಾಮಿ, ಹೆಚ್.ಸಿ.ಬಾಲಕೃಷ್ಣ ಅವರು ಮೊದಲು ತಮ್ಮ ನೆಲೆ ಬಗ್ಗೆ ಚಿಂತೆ ಮಾಡಲಿ. ಪಾಪ ಅವರಿಗೆ ನಮ್ಮ ಪಕ್ಷದ ಚಿಂತೆ ಯಾಕೆ ಈಗಾಗಲೇ ಜನ ತಿರಸ್ಕಾರ ಮಾಡಿದ್ದಾರೆ. ಜೆಡಿಎಸ್ ಮುಗಿಸುತ್ತೇವೆ ಎಂದು ಟೋಪಿ ಹಾಕಿ ಹೋಗಿದ್ದ ಅವರಿಗೆ ಜನರ ಕೊಟ್ಟಿರುವ ತೀರ್ಪನ್ನು ಅರಗಿಸಿಕೊಳ್ಳಲಿ. ಜೆಡಿಎಸ್ ಮುಳಗುತ್ತೋ, ಏಳತ್ತೋ ಜನ ತೀರ್ಮಾನ ಮಾಡುತ್ತಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್

  • 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ: ಎ.ಮಂಜು ತಿರುಗೇಟು

    50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ: ಎ.ಮಂಜು ತಿರುಗೇಟು

    – ನಾನು ಕುಮಾರಣ್ಣನಿಗೆ ಚಾಕಲೇಟ್ ಕೊಟ್ಟರೆ ಜನ ನನಗೆ ಬತಾಸ್ ಕೊಡ್ತಾರೆ

    ಬಿಡದಿ: 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಆರೋಪಕ್ಕೆ ಮಾಗಡಿ ಹಾಲಿ ಜೆಡಿಎಸ್ ಶಾಸಕ ಎ.ಮಂಜು ತಿರುಗೇಟು ನೀಡಿದ್ದಾರೆ.

    ಬಾಲಕೃಷ್ಣ ಅವರ ಆರೋಪಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜು ಅವರು, ನಾನು ಮಾತನಾಡಿದರೆ ಅವರ ಪೂರ್ವಜರಷ್ಟು ಮಾತನಾಡ್ತೇನೆ. ಇವರ ರೀತಿ ಹಲ್ಕಟ್ ರಾಜಕೀಯ ನಾನು ಮಾಡಲ್ಲ. 10 ಕೋಟಿ ಹಣ ಪಡೆದು ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಇವತ್ತು ನನ್ನ ಬಗ್ಗೆ ಇಲ್ಲಸಲ್ಲದನ್ನು ಮಾತನಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:  ಮಕ್ಕಳಿಗೆ ಐಸ್ ಕ್ರೀಂ ನೀಡದ್ದಕ್ಕೆ ಅಂಗಡಿ ಮೇಲೆ ದಾಳಿ ಮಾಡಿದ ತಂದೆ

    ಡಿ.ಕೆ.ಶಿವಕುಮಾರ್ ಅವರಿಗೆ, ಡಿ.ಕೆ.ಸುರೇಶ್ ಅವರಿಗೆ ನನ್ನಿಂದ ಸಹಾಯ ಆಗಿದೆ. ಆದರೆ ಅವರಿಂದ ನನಗೇನು ಸಹಾಯ ಆಗಿಲ್ಲ. ತೆಗೆದುಕೊಂಡಿದ್ದ ಹಣಕ್ಕೆ ಬಡ್ಡಿ ಸಮೇತ ವಾಪಸ್ ನೀಡಿದ್ದೇನೆ. ಅವರು ನನ್ನ ಪರವಾಗಿ ಇದ್ದಿದ್ದನ್ನ ಸಾಬೀತು ಮಾಡಲಿ. ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಇವರು ಕುಮಾರಸ್ವಾಮಿ ಅವರಿಗೆ ಚಾಕಲೇಟ್ ಕೊಟ್ಟು ಐಸ್‍ಕ್ರೀಂ ನೆಕ್ಕಿ ಹೋದರು. ನಾನು ಕುಮಾರಣ್ಣನಿಗೆ ಚಾಕಲೇಟ್ ಕೊಟ್ಟರೆ ಜನ ನನಗೆ ಬತಾಸ್ ಕೊಡ್ತಾರೆ. ಅದು ನನಗೆ ಗೊತ್ತಿದೆ. ಹಾಗಾಗಿ ನಾನು ಕುಮಾರಣ್ಣನ ಜೊತೆಗೆ ಇರುತ್ತೇನೆ ಎಂದರು.

  • ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಪುತ್ರಿಗೆ ಕೊರೊನಾ ಸೋಂಕು

    ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಪುತ್ರಿಗೆ ಕೊರೊನಾ ಸೋಂಕು

    ಬೆಂಗಳೂರು: ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಪುತ್ರಿಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಬಾಲಕೃಷ್ಣ ಅವರೇ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.

    ನನ್ನ ಮಗಳು ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕೊರೊನಾ ಪರೀಕ್ಷೆ ಮಾಡಿಸಿದಾಗ ವರದಿಯಲ್ಲಿ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ವಿಷಯವನ್ನು ನಿಮ್ಮೆಲ್ಲರ ಗಮನಕ್ಕೆ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಈ ಪ್ರಮುಖ ವಿಚಾರವನ್ನು ತಿಳಿಸಲು ಇಚ್ಛೆ ಪಡುತ್ತೇನೆ. ಎಲ್ಲಾ ನನ್ನ ಆತ್ಮೀಯರಲ್ಲಿ ನನ್ನ ಮನವಿ, ಯಾವುದೇ ಆತಂಕ ಬೇಡ, ದಯವಿಟ್ಟು ಯಾರೂ ಕರೆ ಮಾಡಬೇಡಿ, ಕರೆಗಳನ್ನು ಸ್ವೀಕರಿಸಲು ಆಗುತ್ತಿಲ್ಲ ಎಂದು ವಿನಂತಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಹೆಚ್.ಸಿ.ಬಾಲಕೃಷ್ಣ ಬರೆದುಕೊಂಡಿದ್ದಾರೆ.

    ಇಂದು ಸಚಿವ ಸುಧಾಕರ್ ಅವರ ತಂದೆ ಮತ್ತು ಮನೆಗೆಲಸದವನಿಗೂ ಕೊರೊನಾ ಸೋಂಕು ತಗುಲಿದೆ. ಇಂದು ರಾಜ್ಯದಲ್ಲಿ ಒಟ್ಟು 249 ಮಂದಿಗೆ ಸೋಂಕು ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9399ಕ್ಕೆ ಏರಿಕೆಯಾಗಿದೆ.