ರಾಮನಗರ: ಮಾತೆತ್ತಿದರೆ ನಾವು ಗಂಡಸರು ಎಂದು ಹೇಳಿಕೊಳ್ಳುವ ಬಿಜೆಪಿಯವರು (BJP) ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್ ಬಳಿ ಹಣ ಬಿಡುಗಡೆ ಮಾಡಿಸಿಕೊಂಡು ಬನ್ನಿ ಎಂದು ಬಿಜೆಪಿಗರಿಗೆ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ಸವಾಲು ಹಾಕಿದ್ದಾರೆ.
ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಬರಹ ಬದಲಾಯಿಸುವ ವಿಚಾರ ಕುರಿತು ಮಾತನಾಡಿದರು. ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆದಿರೋದ್ರಲ್ಲಿ ಏನು ತಪ್ಪಿದೆ? ವಿಚಾರ ಮಾಡೋಕೆ ಬೇಕಾದಷ್ಟಿದೆ. ಅದು ಬಿಟ್ಟು ಬಿಜೆಪಿಯವರು ಇದನ್ನ ಹಿಡಿದುಕೊಂಡು ಅಳ್ಳಾಡಿಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರಿಗೂ ಅವಮಾನ ಮಾಡಬೇಕು ಎನ್ನುವ ಉದ್ದೇಶ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತದಾರ ಒಪ್ಪಿಲ್ಲ: ಸಿದ್ದರಾಮಯ್ಯ
ಶಾಲೆಗಳಲ್ಲಿ ಬರಹದ ವಿಚಾರ ಸರ್ಕಾರದ ಆದೇಶ ಕೂಡಾ ಅಲ್ಲ. ಸ್ಥಳೀಯವಾಗಿ ಏನೋ ಮಾಡಿಕೊಂಡಿದ್ದಾರೆ ಅಷ್ಟೇ. ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ತಪ್ಪಾಗಿದ್ರೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಮಂತ್ರಿಗಳೇನು ಆದೇಶ ಮಾಡಿಲ್ಲ. ಅಸಲಿಗೆ ಇದು ವಿಚಾರವೇ ಅಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಸ್ವಯಂ ನಿವೃತ್ತಿ ಘೋಷಣೆ
ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾರ್ಡ್‍ಗಳನ್ನು ಕೊಟ್ಟಿರೋದು ಮತ ಹಾಕಲು ಕ್ರಮ ಸಂಖ್ಯೆ ನೋಡಿಕೊಳ್ಳುವುದಕ್ಕೆ. ಮತ ಹಾಕುವ ವೇಳೆ ಪಾಂಪ್ಲೆಟ್ ಇಟ್ಟುಕೊಂಡು ಹೋಗಲು ಆಗುವುದಿಲ್ಲ. ಹೀಗಾಗಿ ನಮ್ಮ ಕ್ರಮ ಸಂಖ್ಯೆಗೆ ಮತ ಹಾಕಲು ಕಾರ್ಡ್ ನೀಡಿದ್ದೆವು ಎಂದಿದ್ದಾರೆ. ಅಲ್ಲದೇ ಈ ವೇಳೆ ಮಾಜಿ ಶಾಸಕ ಎ.ಮಂಜುನಾಥ್‍ರನ್ನು (A.Manjunath) ಮಾಮ ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಎಸ್ಸಿ, ಎಸ್ಟಿಗಳಿಗೆ ಅವಕಾಶ ಸೃಷ್ಟಿಸದ ಕಾಂಗ್ರೆಸ್ ದಲಿತ ದ್ರೋಹಿ ಪಕ್ಷ: ಜೋಶಿ ವಾಗ್ದಾಳಿ
ನಾನು ಪಕ್ಷ ಬದಲಾವಣೆ ಮಾಡಿದಾಗ ಜನರಿಗೆ ಚಿಹ್ನೆಯ ಗೊಂದಲ ಆಗುತ್ತದೆ, ಅದಕ್ಕಾಗಿ ನಾವು ನಮ್ಮ ಪಕ್ಷದ ಚಿಹ್ನೆಯ ಕಾರ್ಡ್ ಕೊಟ್ಟಿದ್ದೇವೆ. ನಾವು ಗಿಫ್ಟ್ ಕೊಡ್ತೀವಿ ಎಂದು ಎಲ್ಲೂ ಹೇಳಿಲ್ಲ. ಮಾಜಿ ಶಾಸಕ ಮಂಜುನಾಥ್ ಮೊದಲು ಜನರ ಬಳಿ ಪಡೆದಿರೋ ಹಣ ವಾಪಸ್ ಕೊಡಲಿ. ಆ ಮೇಲೆ ಗಿಫ್ಟ್ ಕೊಡಲು ಹೇಳಿ. ಒಬ್ಬ ಹೆಣ್ಣು ಮಗಳು ದಿನ ಮಂಜು ಮನೆ ಮುಂದೆ ಹೋಗಿ ಕಣ್ಣೀರು ಹಾಕುತ್ತಾಳೆ. ಮಂಜು ಮೊದಲು ಅವರ ನಡವಳಿಕೆ ಸರಿ ಮಾಡಿಕೊಳ್ಳಲಿ. ಜನರನ್ನ ಮುಂಡಾಯಿಸುವುದನ್ನ ಬಿಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ರಾಮನಗರ: ವೋಟ್ ಹಾಕಿಲ್ಲ ಅಂತ ಯಾರನ್ನಾದರೂ ಓಡಿಸ್ಕೊಂಡು ಹೋಗುತ್ತಿದ್ದೀವಾ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumarswamy) ವಿರುದ್ಧ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (Balakrishna) ಕಿಡಿಕಾರಿದ್ದಾರೆ.
ತಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದ ವಿಚಾರ ಕುರಿತು ಮಾಗಡಿಯಲ್ಲಿ (Magadi) ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿ, ನಾವು ಹೇಳಿರೋದು ಜನರಿಗೆ ಗ್ಯಾರಂಟಿ ಬೇಕಾ? ಅಕ್ಷತೆ ಬೇಕಾ ಎಂದು. ನಾವು ಯಾರನ್ನ ಬ್ಲ್ಯಾಕ್ ಮೇಲ್ ಮಾಡ್ತಾ ಇದೀವಿ ಹೇಳಿ? ಯಾರನ್ನಾದರು ವೋಟ್ ಹಾಕಲಿಲ್ಲ ಅಂತ ಓಡಿಸ್ಕೊಂಡು ಹೋಗ್ತಾ ಇದೀವಾ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗೂಗಲ್ ಪೇ ಮಾಡಿಸಿ ಸಿಕ್ಕಿಬಿದ್ದ ಹೆದ್ದಾರಿ ದರೋಡೆಕೋರರು
ಜೆಡಿಎಸ್ ಅವರಿಗೆ ನಾನು ಎಂಎಲ್‌ಎ ಆಗಿರೋದನ್ನ ತಡೆದುಕೊಳ್ಳಲು ಆಗುತ್ತಿಲ್ಲ. ಅದಕ್ಕೆ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಬೇಕಿದ್ರೆ ಕಾನೂನು ರೀತಿ ಪರಿಶೀಲನೆ ಮಾಡಲಿ. ಸತ್ಯಾಸತ್ಯತೆ ಹೊರಗೆ ಬರಲಿ. ನಾವು ಅಧಿಕಾರದಲ್ಲಿ ಇರೋದನ್ನ ಅವರ ಕುಟುಂಬ ಸಹಿಸುತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್‌ಗೆ ಹಂದಿ ಜ್ವರ & ಕೋವಿಡ್ ಪಾಸಿಟಿವ್
ಗ್ಯಾರಂಟಿ ರದ್ದು ಮಾಡುವ ಬಗ್ಗೆ ಕಾಂಗ್ರೆಸ್ ಒಳಗೆ ಚರ್ಚೆ ಆಗುತ್ತಿದೆ ಎಂಬ ಹೆಚ್‌ಡಿಕೆ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಆರೋಪಕ್ಕೆ ಗೌರವ ಕೊಡುವ ಅರ್ಥ ಇಲ್ಲ. ಕುಮಾರಸ್ವಾಮಿ ಒಂದೊಂದು ದಿನ ಒಂದೊಂದು ಥರ ಹೇಳ್ತಾರೆ. ಬಿಜೆಪಿಗೆ ವೋಟ್ ಹಾಕಿ ಒಂದು ದಿನ ಅನುಭವಿಸ್ತೀರಾ ಅಂತ ಹಿಂದೆ ಹೇಳಿದ್ದರು. ಶ್ರೀಲಂಕದಲ್ಲಿ ಆದಂಗೆ ಇಲ್ಲೂ ಆಗುತ್ತದೆ ಅಂತ ಹೇಳಿರಲಿಲ್ವಾ? ಈಗ ಅವರ ಜೊತೆಯೇ ಹೋಗಿಲ್ವಾ? ಹಾಗಾಗಿ ಅವರ ಹೇಳಿಕೆಗೆ ಮಹತ್ವ ಕೊಡೋದು ಒಳ್ಳೆಯದಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಪೋಸ್ಟ್ ಮೂಲಕ ಡ್ರಗ್ಸ್ ಸರಬರಾಜು – ವ್ಯಕ್ತಿ ಅರೆಸ್ಟ್, 6.50 ಲಕ್ಷ ಮೌಲ್ಯದ ಡ್ರಗ್ಸ್ ವಶ
ರಾಮನಗರ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Loksabha Election) ಮತ ನೀಡದಿದ್ದರೆ ಗ್ಯಾರಂಟಿ ಯೋಜನೆ ರದ್ದು ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.
ಸದ್ಯ ಶಾಸಕರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮತದಾರರಿಗೆ ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಮಾಗಡಿ ತಾಲೂಕಿನ ಶ್ರೀಗಿರಿಪುರದ ಜನಸಂಪರ್ಕ ಸಭೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ್ ಪರ ಮತ ನೀಡುವಂತೆ ಶಾಸಕರು ತಾಕೀತು ಮಾಡಿದ್ದಾರೆ.
ಶಾಸಕರು ಹೇಳಿದ್ದೇನು..?: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ರದ್ದು ಮಾಡಲಾಗುವುದು. ಬಿಜೆಪಿಯವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ. ನಾವು ಐದು ಗ್ಯಾರಂಟಿಗಳನ್ನ ನೀಡಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ (Congress) ಹೆಚ್ಚು ಸ್ಥಾನ ಗೆಲ್ಲದಿದ್ರೆ ಜನರಿಗೆ ಐದು ಗ್ಯಾರಂಟಿಗಳು ಇಷ್ಟ ಇಲ್ಲ ಅಂತ ಅರ್ಥ. ಹಾಗಾಗಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಜೊತೆಯೂ ಚರ್ಚೆ ಮಾಡಿದ್ದೇನೆ ಎಂದರು.
ನಿಮ್ಮ ಮತ ಅಕ್ಷತೆ ಕಾಳಿಗಾ ಅಥವಾ ಐದು ಗ್ಯಾರಂಟಿಗಾ (Congress Guarantee) ಯೋಚನೆ ಮಾಡಿ. ಈ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದ್ರೆ ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ. ಒಂದು ವೇಳೆ ಗೆಲ್ಲಿಸದೇ ಇದ್ದರೆ ಗ್ಯಾರಂಟಿ ಯೋಜನೆ ತಿರಸ್ಕಾರ ಮಾಡಿದ್ದೀರಿ ಅಂತ ಅಲ್ವಾ ಎಂದು ಬಾಲಕೃಷ್ಣ ಪ್ರಶ್ನಿಸುವ ಮೂಲಕ ಮತದಾರರಿಗೆ ಮತ ನೀಡುವಂತೆ ಒತ್ತಾಯಿಸಿದ್ದಾರೆ.
ರಾಮನಗರ: ಪ್ರಧಾನಿ ನರೇಂದ್ರ ಮೋದಿಯವ (Narendra Modi) ವಿರುದ್ಧ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸೈನಿಕರನ್ನು ಬಲಿ ಪಡೆದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತೆ. ಬಿಜೆಪಿಯವರು ಬ್ರಿಟಿಷರಿದ್ದಂತೆ… ಜನರ ಮಧ್ಯೆ ಗುಂಪು ಕಟ್ಟಿ, ಎತ್ತಿಕಟ್ಟುವ ಕೆಲಸ ಮಾಡುತ್ತಾರೆ ಎಂದು ಹೇಳುವ ಮೂಲಕ ಬಾಲಕೃಷ್ಣ ಅವರು ಬಿಜೆಪಿಯನ್ನು ಬ್ರಿಟೀಷರಿಗೆ ಹೋಲಿಕೆ ಮಾಡಿದರು.
ಇದೇ ವೇಳೆ ಕುಮಾರಸ್ವಾಮಿ, (HD Kumaraswamy) ದೇವೇಗೌಡರ (HD Devegowda) ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಕುಮಾರಣ್ಣ ಮಾತೆತ್ತಿದ್ರೆ ನಾವು ಜಾತ್ಯಾತೀತ ಅಂತಾರೆ. ದೇವೇಗೌಡರನ್ನು ಕೋಮುವಾದಿ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಎಸ್‍ಪಿಗೆ ಬಂದ ಗತಿ, ಕರ್ನಾಟಕದಲ್ಲಿ ಜೆಡಿಎಸ್ ಬರುತ್ತೆ. ಆ ರೀತಿ ಜೆಡಿಎಸ್ ಪಕ್ಷವನ್ನ ಬಿಜೆಪಿಯವರು ಮಾಡದಿದ್ದರೆ, ನಾನು ನನ್ನ ಹೆಸರು ಬದಲಾಯಿಸಿಕೊಳ್ತೀನಿ. ಜೆಡಿಎಸ್ ಎಚ್ಚೆತ್ತುಕೊಳ್ಳದಿದ್ದರೆ ಸಂಪೂರ್ಣ ಅಸ್ಥಿತ್ವವೇ ಮುಗಿಯುತ್ತೆ ಎಂದು ಶಾಸಕರು ಬಿಜೆಪಿ-ಜೆಡಿಎಸ್ ಮೈತ್ರಿಗೆ ಕಿಡಿಕಾರಿದರು. ಇದನ್ನೂ ಓದಿ: ಲೋಕ ಸಮರ ಗೆಲ್ಲಲು ದಳಪತಿ-ಕಮಲ ಸಾರಥಿ ಇನ್‌ಸೈಡ್ ಮೀಟಿಂಗ್!
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು (H D Kumaraswamy) ನಾನು ಸರ್ಕಾರದ ಹಣ ತಿಂದಿಲ್ಲ ಎಂದು ಹೇಳಿ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (MLA H C Balakrishna) ಸವಾಲೆಸೆದಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಡಿಕೆಶಿ ಖಜಾನೆ ವೃದ್ಧಿಗೆ ಇದನ್ನ ಮಾಡ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಗಳಿಗೆ ನಾವು ಉತ್ತರ ಕೊಡೋದು ಸೂಕ್ತವಲ್ಲ. ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಬಾಲಿಶವಾದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕುಮಾರಸ್ವಾಮಿ ಹೇಳಿಕೆಯಲ್ಲಿ ಹತಾಶೆ ಮನೋಭಾವ ಕಾಣುತ್ತಿದೆ. ಅವರಿಗೆ ಡಿಕೆ ಶಿವಕುಮಾರ್ ಡಿಸಿಎಂ ಆಗಿರೋದು, ನಾವು ಒಕ್ಕಲಿಗರು ಶಾಸಕರಾಗಿರೋದನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಹೀಗಾಗಿ ಬೇರೆ ಬೇರೆ ರೀತಿ ವಾಖ್ಯಾನ ಮಾಡ್ತಾರೆ ಎಂದರು.
ಕುಮಾರಸ್ವಾಮಿ ಏನೇನೋ ಅರ್ಥವಿಲ್ಲದಂತೆ ಮಾತಾಡ್ತಾರೆ. ಯಾರ ಜಮೀನು ಮೌಲ್ಯ ವೃದ್ಧಿ ಮಾಡಿಕೊಳ್ತಾರೆ.? ಕುಮಾರಸ್ವಾಮಿ ಜಮೀನು ಇಲ್ಲವಾ..? ಕುಮಾರಸ್ವಾಮಿ ಕುಟುಂಬ ಏನು ಸತ್ಯ ಹರಿಶ್ಚಂದ್ರ ಕುಟುಂಬನಾ?. ಸರ್ಕಾರದ ಒಂದು ರೂಪಾಯಿ ದುಡ್ಡನ್ನ ನಾನು ಮತ್ತು ನನ್ನ ಕುಟುಂಬ ಬಳಸಿಕೊಂಡಿಲ್ಲ ಅಂತ ಕುಮಾರಸ್ವಾಮಿ ಧರ್ಮಸ್ಥಳದ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡ್ತೇವೆ: ಬಾಲಕೃಷ್ಣ
ಪೊಲೀಸರ ವರ್ಗಾವಣೆಯನ್ನು ಬಿಟ್ಟಿಲ್ಲ. ಪೊಲೀಸರ ವರ್ಗಾವಣೆಯಲ್ಲೂ ಅವರ ಕುಟುಂಬ ದುಡ್ಡು ತೆಗೆದುಕೊಂಡಿದೆ. ಎಲ್ಲರೂ ಗಾಜಿನ ಮನೆಯಲ್ಲಿ ಇರೋದು. ಯಾರು ಕೂಡ ಸತ್ಯ ಹರಿಶ್ಚಂದ್ರರು ಇಲ್ಲ. ಅವಕಾಶ ಸಿಗದೇ ಇರೋನು ಸತ್ಯ ಹರಿಶ್ಚಂದ್ರ ಅಷ್ಟೆ. ಅವಕಾಶ ಸಿಕ್ಕಾಗ ಎಲ್ಲರೂ ಮಾಡಿದ್ದಾರೆ. ಕುಮಾರಸ್ವಾಮಿ ಯಾಕೆ ತಾಜ್ ನಲ್ಲಿ ಇದ್ದರು. ಕುಮಾರಸ್ವಾಮಿ ತಾಜ್ ವೆಸ್ಟ್ ಅಂಡ್ ನಲ್ಲಿ ಇದ್ದಿದ್ದು ಡೀಲ್ ಮಾಡಿಕೊಳ್ಳೋಕೆ. ಸಿದ್ದರಾಮಯ್ಯ ಇದ್ದರು ಅದಕ್ಕೆ ನಾನು ತಾಜ್‍ನಲ್ಲಿ ಇದ್ದೆ ಅಂತಾರೆ. ಕಾವೇರಿಗೆ ಯಾಕೆ ಕಾಯಬೇಕು. ಬೇರೆ ಬಂಗಲೆ ಇರಲಿಲ್ಲವಾ ಎಂದು ಪ್ರಶ್ನಿಸುವ ಮೂಲಕ ಹೆಚ್‍ಡಿಕೆ ವಿರುದ್ಧ ಕಿಡಿಕಾರಿದರು.
ಡಿಕೆ ಶಿವಕುಮಾರ್ (DK Shivakumar) ಅವರಿಗೆ ಅವರದ್ದೇ ಆದ ಬ್ಯುಸಿನೆಸ್ ಇದೆ. ವ್ಯವಹಾರ, ವಹಿವಾಟು ಇದೆ. ಡಿಕೆ ಶಿವಕುಮಾರ್ ಇಲಾಖೆಗಳನ್ನು ಮ್ಯಾನೇಜ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ಇದ್ದ ಯಾವ ಇಲಾಖೆಯಲ್ಲಿ ಕೆಟ್ಟ ಹೆಸರು ಬಂದಿದೆ. ಇಂಧನ ಇಲಾಖೆಯನ್ನ ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಮೋದಿ ಕರೆದು ಅವರಿಗೆ ಸನ್ಮಾನ ಮಾಡಿದ್ದಾರೆ. ಕುಮಾರಸ್ವಾಮಿ ಇಂತಹ ಚಿಲ್ಲರೆ ಹೇಳಿಕೆಗಳನ್ನ ಬಿಡಬೇಕು. ಇದನ್ನ ಮುಂದುವರಿಸುತ್ತೇನೆ ಅಂದರೆ ಕುಮಾರಸ್ವಾಮಿ ಮುಂದುವರಿಸಲಿ ಅವರ ಹಣೆಬರಹ ಎಂದರು.
ರಾಮನಗರ: ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (H C Balakrishna) ಅವರು ಇದೀಗ ಹೇಳಿಕೆಯೊಂದನ್ನು ನೀಡಿ ಭಾರೀ ಚರ್ಚೆಗೆ ಗ್ರಾಸವಾಗುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಕಾಂಗ್ರೆಸ್‍ಗೆ (Congres) ವೋಟು ಹಾಕುವ ಊರುಗಳಿಗೆ ಮಾತ್ರ ಕೆಲಸ ಮಾಡುತ್ತೇವೆ. ವೋಟ್ ಹಾಕದೇ ಇರೋರ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಶಾಸಕರ ಈ ಬೇಜಾವಾಬ್ದಾರಿ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ದ್ವೇಷದ ರಾಜಕಾರಣಕ್ಕೆ ಶಾಸಕರು ಮುಂದಾದ್ರಾ ಎಂಬ ಪ್ರಶ್ನೆಯೂ ಎದ್ದಿದೆ.
ಬಿಜೆಪಿ-ಜೆಡಿಎಸ್ (BJP_ JDS) ಮೈತ್ರಿಯಿಂದ ಕಾಂಗ್ರೆಸ್‍ಗೆ ಅನುಕೂಲವಾಗಲಿದೆ. ಕಾಂಗ್ರೆಸ್ ಮತಗಳು ವಿಭಜನೆ ಆಗಲ್ಲ. ರಾಜ್ಯದಲ್ಲಿ ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತೆ. ಬೂತ್ ಲೆಕ್ಕಾಚಾರದ ಮೇಲೆ ಎಲೆಕ್ಷನ್ ಆಗುತ್ತೆ. ಯಾವ್ ಬೂತ್ ನಲ್ಲಿ ಹೆಚ್ಚು ನಮಗೆ ವೋಟ್ ಬರುತ್ತೋ ಅಲ್ಲಿ ಕೆಲಸ ಮಾಡ್ತೀವಿ. ವೋಟ್ ಹಾಕದಿದ್ರೆ ಅಂತಹ ಬೂತ್ ಗಳ ಬಗ್ಗೆ ಆಲೋಚನೆ ಮಾಡ್ತೀವಿ. ಹಾಗಾಗಿ ಇದನ್ನ ಜನ ಯೋಚನೆ ಮಾಡಬೇಕು ಎಂದು ಶಾಸಕರು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ಗೆ ಬಂದಿಳಿದ ಅಮೆರಿಕದ ಶಸ್ತ್ರಾಸ್ತ್ರ ಹೊತ್ತ ಮೊದಲ ವಿಮಾನ – ಇಸ್ರೇಲ್‌ಗೆ ನೂರಾನೆ ಬಲ
ತಮ್ಮ ಹೇಳಿಕೆಯ ಮೂಲಕ ಶಾಸಕರು ಪರೋಕ್ಷವಾಗಿ ಕಾಂಗ್ರೆಸ್‍ಗೆ ಮತಹಾಕದಿದ್ರೆ ಅಭಿವೃದ್ಧಿ ಮಾಡಲ್ಲ ಎಂದಿದ್ದಾರೆ. ಸದ್ಯ ಬಾಲಕೃಷ್ಣ ಹೇಳಿಕೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಮನಗರ: ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟಗೊಂಡು (Cooker Blast) ಬಾಲಕಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ (Ramanagara) ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ (Congress) ಶಾಸಕ ಹೆಚ್.ಸಿ ಬಾಲಕೃಷ್ಣ (H C Balakrishna) ಈ ಕುಕ್ಕರ್ ಗಳನ್ನ ನೀಡಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟಗೊಂಡು ಮಹಾಲಕ್ಷ್ಮಿ (17) ಎಂಬ ಬಾಲಕಿಗೆ ಮುಖದ ಮೇಲೆ ಸುಟ್ಟಗಾಯಗಳಾವೆ. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ಶಿಕ್ಷಕಿಯರಿಬ್ಬರ ಜಡೆ ಜಗಳ- ಮೂಕಪ್ರೇಕ್ಷರಾದ ಶಾಲಾ ಮಕ್ಕಳು
ಇನ್ನೂ ಶಾಸಕ ಹೆಚ್.ಸಿ ಬಾಲಕೃಷ್ಣ ಈ ಕುಕ್ಕರ್ ನೀಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮಹಿಳೆಯರು ಕುಕ್ಕರ್ ಗಳನ್ನ ತಂದು ರಸ್ತೆಗೆ ಎಸೆದು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮ ಕುಕ್ಕರ್ ಗಳನ್ನ ನೀವೆ ತೆಗೆದುಕೊಂಡು ನಿಮ್ಮ ಹೆಂಡತಿಯರಿಗೆ ಕೊಡಿ, ಮತಪಡೆಯಲು ಬಡವರಿಗೆ ನೀಡಿ ಅವರ ಪ್ರಾಣಕ್ಕೆ ಕುತ್ತು ತರಬೇಡಿ ಎಂದು ಕುಕ್ಕರ್ ಗಳನ್ನ ಬೀದಿಗೆ ತಂದು ಎಸೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರೆಂಟಿ ಎಫೆಕ್ಟ್ – 6 ದಿನಗಳಲ್ಲಿ ಬರೋಬ್ಬರಿ 78 ಸಾವಿರ ಬಿಪಿಎಲ್ ಅರ್ಜಿ ಸಲ್ಲಿಕೆ
ರಾಮನಗರ: ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ಇಂದು (ಗುರುವಾರ) ಕೆಡಿಪಿ ಸಭೆ ನಡೆಸಿದ್ರು.
ಮೊದಲ ಕೆಡಿಪಿ ಸಭೆ (KDP Meeting) ಯಲ್ಲೇ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಶಾಸಕರು, ಜನಸ್ನೇಹಿ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಈ ಹಿಂದೆ ಹೇಗೆ ಕೆಲಸ ಮಾಡ್ತಿದ್ರೋ ಗೊತ್ತಿಲ್ಲ. ಮುಂದೆ ಸಾರ್ವಜನಿಕರ ಕೆಲಸ ಕಾರ್ಯ ಸರಾಗವಾಗಿ ಆಗಬೇಕು. ಪ್ರತೀ ಇಲಾಖೆಯಲ್ಲೂ ಮೂಮೆಂಟ್ ರಿಜಿಸ್ಟ್ರಾರ್ ಪಾಲನೆ ಕಡ್ಡಾಯ ಮಾಡಿ ಎಂದಿದ್ದಾರೆ.
ಸಭೆಗೂ ಮುನ್ನ ಮಾಗಡಿಯಲ್ಲಿ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಪತ್ನಿ ಜೊತೆ ಶ್ರೀನಿವಾಸ ಕಲ್ಯಾಣ ಪೂಜೆ ನೆರವೇರಿಸಿ ಸಚಿವ ಸ್ಥಾನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಶಾಸಕರಿಗೆ ಸಾಥ್ ನೀಡಿದ್ರು.
ರಾಮನಗರ: ಚುನಾವಣೆ (Elections) ಹತ್ತಿರವಾಗ್ತಿದ್ದಂತೆ ರಾಮನಗರದಲ್ಲಿ ರಾಜಕೀಯ ಪಕ್ಷಗಳ (Political Party) ನಡುವೆ ಕಿತ್ತಾಟ ಜೋರಾಗಿದೆ. ಈ ಮಧ್ಯೆ ಬುಧವಾರ ಕಾಂಗ್ರೆಸ್-ಜೆಡಿಎಸ್ (Congress – JDS) ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಆದರೆ ಬಾಲಕೃಷ್ಣ ಅವರು ಈ ಗಲಾಟೆಗೆ ಸಚಿವ ಅಶ್ವಥ್ ನಾರಾಯಣ (Ashwath Narayan) ಸಂಬಂಧಿ ಶ್ರೀಧರ್ ಕಾರಣ ಎಂದು ದೂರಿದ್ದಾರೆ.
ಈ ಹಿಂದೆ ಅನುದಾನದ ವಿಚಾರವಾಗಿ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಕಾರ್ಯಕರ್ತರ ನಡುವೆ ಗಲಾಟೆ ನಡೆದು ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ (CP Yogeshwar) ಕಾರಿನ ಮೇಲೆ ಜೆಡಿಎಸ್ (JDS) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಇದೀಗ ಮತ್ತೆ ಮಾಗಡಿ ತಾಲೂಕಿನ ಕಾಮಸಾಗರ ಗ್ರಾಮದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಇದನ್ನೂ ಓದಿ: ವಿಶ್ವ ನಾಯಕರ ಪಟ್ಟಿಯಲ್ಲಿ ಭಾರತೀಯರ ಪಾರುಪತ್ಯ – ರಿಷಿ ಸುನಾಕ್ ನೂತನ ಎಂಟ್ರಿ
ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆ ನಡೆದಿದೆ. ಕಾರ್ಯಕ್ರಮದ ಬ್ಯಾನರ್‌ನಲ್ಲಿ ಶಾಸಕ ಮಂಜುನಾಥ್ ಹೆಸರನ್ನು ಕೊನೆಯಲ್ಲಿ ಹಾಕಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಇದರ ಮಧ್ಯೆ ಬಾಲಕೃಷ್ಣ ಕಟ್ಟಡ ಉದ್ಘಾಟಿಸಿ ಕಾರಿನಲ್ಲಿ ವಾಪಸ್ ಆಗುತ್ತಿರುವಾಗ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುದೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್
ಈ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna), ಶಿಷ್ಟಾಚಾರದ ಪ್ರಕಾರವೇ ಕಾರ್ಯಕ್ರಮ ಉದ್ಘಾಟನೆಯಾಗಿದೆ. ಗಲಾಟೆಗೆ ಸಚಿವ ಅಶ್ವಥ್ ನಾರಾಯಣ ಸಂಬಂಧಿ ಶ್ರೀಧರ್ ಕಾರಣ. ಶ್ರೀಧರ್ ತನ್ನ ಪಟಾಲಂ ಕಟ್ಟಿಕೊಂಡು ಬಂದು ಗಲಾಟೆ ಮಾಡಿದ್ದಾನೆ. ಗಲಾಟೆ ಮಾಡಿದವರು ಕಾಂಗ್ರೆಸ್, ಜೆಡಿಎಸ್‌ನವರು ಅಲ್ಲ. ಅವರೆಲ್ಲ ಬಿಜೆಪಿ ಮುಖಂಡರು ಎಂದು ದೂರಿದ್ದಾರೆ.
Live Tv
[brid partner=56869869 player=32851 video=960834 autoplay=true]