Tag: ಹೆಚ್ ಬಸವರಾಜೇಂದ್ರ

  • ಯಡಿಯೂರಪ್ಪ ತಪ್ಪು ಮಾಡಿದ್ರೂ ಬಿಡಲು ಆಗುತ್ತಾ: ಸಿದ್ದರಾಮಯ್ಯ

    ಯಡಿಯೂರಪ್ಪ ತಪ್ಪು ಮಾಡಿದ್ರೂ ಬಿಡಲು ಆಗುತ್ತಾ: ಸಿದ್ದರಾಮಯ್ಯ

    ಬೆಂಗಳೂರು: ಎಸಿಬಿ ವಿಚಾರದಲ್ಲಿ ಬಿಜೆಪಿಯವರು ತಪ್ಪಿತಸ್ಥ ಸ್ಥಾನದಲ್ಲಿದ್ದಾರೆ. ಅದಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ. ಯಡಿಯೂರಪ್ಪ ತಪ್ಪು ಮಾಡಿದ್ರೂ ಬಿಡಲು ಆಗುತ್ತಾ? ತಪ್ಪು ಮಾಡಿಲ್ಲ ಅಂದ್ರೆ ಅಲ್ಲಿ ಹೋಗಿ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಸಿಬಿ ದುರ್ಬಳಕೆ ಮಾಡಿಕೊಂಡಿಲ್ಲ. ಹಾಗಾದರೆ ಕೆಎಎಸ್ ಅಧಿಕಾರಿ ಹೆಚ್ ಬಸವರಾಜೇಂದ್ರ ಇಷ್ಟು ದಿನ ಸುಮ್ಮನಿದ್ದಿದ್ದು ಯಾಕೆ? ಮತ್ತೆ ತಡವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದು ಯಾಕೆ? ಇದು ಏನು ತೋರಿಸುತ್ತೆ ಎಂದು ಪ್ರಶ್ನೆ ಮಾಡಿದರು.

    ವಿಮಲಾ ಗೌಡರ ನಿಧನದಿಂದ ಒಂಬತ್ತು ತಿಂಗಳು ಇರೋ ಕಾರಣ ಈ ಚುನಾವಣಾ ನಡೆಸಬೇಕಾಯ್ತು. ಸಿಎಂ ಇಬ್ರಾಹಿಂ ಅವರು ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ. ವಿಸಿ ಪೋರ್ ಸಮೀಕ್ಷೆ ಕುರಿತು ಸಮೀಕ್ಷೆ ನೋಡಿದ ಮೇಲೆ ಬಿಜೆಪಿಯವರು ಏನು ಹೇಳೊಕೆ ಸಾಧ್ಯ. ನಾನು 60 ಬರುತ್ತೆ ಅಂತ ಸಮೀಕ್ಷೆಯಲ್ಲಿ ಹೇಳಿದ್ದೆ ಹಾಗಾಗೀ ಕಾಂಗ್ರೆಸ್ ನವರೇ. ಈ ಸಮೀಕ್ಷೆಯನ್ನು ಮಾಡಿಸಿದ್ದಾರೆ ಅಂದ್ರೆ ಮತ್ತೆ ನಾನ್ ಹೇಳೊಕೆ ಸಾಧ್ಯ ಹೇಳಿ ಎಂದರು.

    ರಾಜ್ಯಪಾಲರಿಗೆ ಬಿಜೆಪಿಯವರು ದೂರು ನೀಡಿರುವ ವಿಚಾರದಲ್ಲಿ ಬಿಜೆಪಿ ಭೇಟಿ ಮಾಡಲಿ. ಡಿನೋಟಿಫೈ ಮಾಡಿರುವುದನ್ನು ತನಿಖೆ ಮಾಡಬಾರದು. ಎಫ್‍ಐಆರ್ ಹಾಕಬಾರದು ಅಂದರೆ ಏನರ್ಥ. ಎಸಿಬಿ ಸ್ವಾತಂತ್ರ್ಯವಾಗಿದೆ ಎಂದು ಹೇಳಿದರು.