Tag: ಹೆಚ್.ಪಿ ಸ್ವರೂಪ್

  • ಎಫ್‍ಐಆರ್ ದಾಖಲಾಗಿರೋ ಐವರನ್ನು ಇದುವರೆಗೂ ಬಂಧಿಸಿಲ್ಲ: ಸ್ವರೂಪ್

    ಎಫ್‍ಐಆರ್ ದಾಖಲಾಗಿರೋ ಐವರನ್ನು ಇದುವರೆಗೂ ಬಂಧಿಸಿಲ್ಲ: ಸ್ವರೂಪ್

    ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಂಧನದ ಹಿಂದೆ ರಾಜಕೀಯ ಹಾಗೂ ಪೆನ್‍ಡ್ರೈವ್ ಪ್ರಕರಣ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ (HP Swaroop Prakash) ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪೆನ್‍ಡ್ರೈವ್ ಹಂಚಿಕೆ ಹಿಂದೆ ಪ್ರಭಾವಿಗಳ ಕೈವಾಡವಿದೆ. ಇದರ ಬಗ್ಗೆ ಎಸ್‍ಐಟಿ (SIT) ಸಮಗ್ರ ತನಿಖೆ ಮಾಡಬೇಕು. ಈಗ ಬಂಧಿತವಾಗಿರುವ ಯಾರೆಂದು ನನಗೂ ಗೊತ್ತಿಲ್ಲ. ಆದರೆ ಮಹಿಳೆಯರ ಮುಖವನ್ನು ಬ್ಲರ್ ಮಾಡದೆ ವೀಡಿಯೋ ವೈರಲ್ ಮಾಡಿದ್ದಾರೆ ಎಂದರು.

    ಪೆನ್‍ಡ್ರೈವ್ ಹಂಚಿಕೆ ಹಿಂದೆ ಯಾರೇ ಇದ್ದರೂ ತನಿಖೆ ನಡೆಸಿ ಬಂಧನ ಮಾಡಬೇಕು. ಎಫ್‍ಐಆರ್ ದಾಖಲಾಗಿರುವ ಐದು ಜನರನ್ನು ಇದುವರೆಗೂ ಬಂಧನ ಮಾಡಿಲ್ಲ. ಅಷ್ಟೊಂದು ಪೆನ್‍ಡ್ರೈವ್ ಹಂಚಿಕೆ ಮಾಡಿದವರು ಎಂದು ಸತ್ಯಾಂಶ ಹೊರಬರಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ವೀಡಿಯೋ ನೋಡಿದವರೆಲ್ಲ ತಪ್ಪಿತಸ್ಥರು ಅಂದ್ರೆ ಹಾಸನದ 15 ಲಕ್ಷ ಜನ ತಪ್ಪಿತಸ್ಥರಾಗ್ತಾರೆ: ಪ್ರೀತಂಗೌಡ

    ಎಚ್.ಡಿ.ರೇವಣ್ಣ ಬಂಧನ ಇದೆ ರಾಜಕೀಯ ಷಡ್ಯಂತ್ರವಿದೆ. ದೇವೇಗೌಡರ (HD Devegowda) ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ರೇವಣ್ಣ ಬಂಧನ ಮಾಡಿರುವುದರ ಹಿಂದೆ ರಾಜಕೀಯವಿದೆ. ಎಸ್‍ಐಟಿ ಸರ್ಕಾರದ ಅಣತಿಯಂತೆ ನಡೆಯುತ್ತಿದೆ. ಎಸ್‍ಐಟಿಯಿಂದ ಸರಿಯಾದ ತನಿಖೆ ಆಗಲ್ಲ. ಇಂತಹ ದೊಡ್ಡ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ಎ.ಮಂಜು ಶಾಸಕರು, ಶಾಸಕರ ಮೇಲೆ ಆರೋಪಗಳು ಸಹಜ. ಮೊದಲು ನವೀನ್ ಗೌಡ ಬಂಧಿಸುವಂತೆ ಸ್ವರೂಪ ಒತ್ತಾಯ ಮಾಡಿದರು.

  • ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ – ಗೆಲುವಿನ ಬಳಿಕ ಸ್ವರೂಪ್ ಟೆಂಪಲ್‌ ರನ್‌

    ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ – ಗೆಲುವಿನ ಬಳಿಕ ಸ್ವರೂಪ್ ಟೆಂಪಲ್‌ ರನ್‌

    ಮಂಡ್ಯ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್‌.ಪಿ ಸ್ವರೂಪ್‌ (HP Swaroop) ಹಾಸನ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಕಾಲಭೈರವೇಶ್ವರನ ಸನ್ನಿಧಿಗೆ ಬಂದು ದರ್ಶನ ಪಡೆದಿದ್ದಾರೆ. ನಂತರ ನಿರ್ಮಲಾನಂದನಾಥ ಶ್ರೀಗಳ (Nirmalanandanatha Swamiji) ಆಶೀರ್ವಾದ ಪಡೆದಿದ್ದಾರೆ.

    ಆದಿಚುಂಚನಗಿರಿಗೆ ಬಂದ ಸ್ವರೂಪ್ ಮೊದಲು ಕಾಲಭೈರವೇಶ್ವರನ ದರ್ಶನ ಪಡೆದು ಬಳಿಕ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ್ದಾರೆ. ತೀವ್ರ ಕೂತುಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಸ್ವರೂಪ್ ಜಯಭೇರಿ ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಆರಾಧ್ಯ ದೈವವಾಗಿರುವ ಕಾಲಭೈರವೇಶ್ವರಸ್ವಾಮಿಗೆ ಸ್ವರೂಪ್ ನಮಸ್ಕರಿಸಿದರು. ಇದನ್ನೂ ಓದಿ: ಹಾಸನದಲ್ಲಿ ಗೆಲುವು ಸಾಧಿಸಿದ ಸ್ವರೂಪ್ – ಕರೆ ಮಾಡಿ ಶುಭಾಶಯ ತಿಳಿಸಿದ ಹೆಚ್‌ಡಿಡಿ

    ಬಳಿಕ ಮಾತನಾಡಿದ ಸ್ವರೂಪ್, ನಿಖಿಲ್ (Nikhil Kumaraswamy) ಅವರ ಸೋಲು ನನಗೆ ವೈಯಕ್ತಿಕವಾಗಿ ಬೇಸರವಾಗಿದೆ. ಅವರು ಸೋಲಬಾರದಿತ್ತು, ರಾಮನಗರದ ಬಗ್ಗೆ ನನಗೆ ಗೊತ್ತಿಲ್ಲ ಹೀಗಾಗಿ ನಿಖಿಲ್ ಅವರು ಏಕೆ ಸೋತರು ಅನ್ನೋದು ಅರ್ಥವಾಗುತ್ತಿಲ್ಲ. ನಾನು‌ ಹಾಗೂ ನನ್ನ ಹಾಸನದ ಜನತೆ ನಿಖಿಲ್ ಅವರ ಜೊತೆಗೆ ಇರುತ್ತೇವೆ. ನಮ್ಮ ಪಕ್ಷದ ನಾಯಕರ ಶ್ರಮದಿಂದ ನಾನು ಗೆಲುವು ಸಾಧಿಸಿದ್ದೇನೆ. ಹಾಸನದ ಎಲ್ಲ ಕಾರ್ಯಕರ್ತರು ಶ್ರಮಿಸಿದ್ದಾರೆ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಪ್ರೀತಂ ಗೌಡಗೆ ಸೋಲು – ಜಿಲ್ಲೆಯಲ್ಲಿ 2 ಸ್ಥಾನ ಗೆದ್ದ ಬಿಜೆಪಿ

    ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ. ಕುಮಾರಣ್ಣ, ರೇವಣ್ಣ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ. ಮುಂದೆ ಅವರ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತೇನೆ. ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿರಲಿಲ್ಲ. ಜೆಡಿಎಸ್‌ ಮತ ಜೆಡಿಎಸ್‌ಗೆ ಬಂದಿದೆ ಸೋಲಿನ ವಿಶ್ಲೇಷಣೆ ಮಾಡುವವರು ಒಪ್ಪಂದ ಹೇಳ್ತಾರೆ ಅಷ್ಟೇ ಎಂದು ಸ್ವರೂಪ್ ಎದುರಾಳಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

  • ರೇವಣ್ಣ ಕುಟುಂಬದವ್ರು ನನ್ನ ಪರ ಪ್ರಚಾರಕ್ಕೆ ಬರುತ್ತಾರೆ: ಹಾಸನ ಜೆಡಿಎಸ್ ಅಭ್ಯರ್ಥಿ

    ರೇವಣ್ಣ ಕುಟುಂಬದವ್ರು ನನ್ನ ಪರ ಪ್ರಚಾರಕ್ಕೆ ಬರುತ್ತಾರೆ: ಹಾಸನ ಜೆಡಿಎಸ್ ಅಭ್ಯರ್ಥಿ

    ಹಾಸನ: ಟಿಕೆಟ್ ನೀಡಿದ್ದಕ್ಕಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ( H. D. Deve Gowda) ಧನ್ಯವಾದ ಅರ್ಪಿಸುತ್ತೇನೆ ಎಂದು ಜೆಡಿಎಸ್ (JDS) ಅಭ್ಯರ್ಥಿ ಹೆಚ್.ಪಿ ಸ್ವರೂಪ್ (H.P Swaroop) ಹೇಳಿದ್ದಾರೆ.

    ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಹೈಕಮಾಂಡ್ ನನಗೆ ಟಿಕೆಟ್ ನೀಡಿರುವುದು ಸಂತಸ ತಂದಿದೆ. ರೇವಣ್ಣ (H. D. Revanna) ಕುಟುಂಬ ನನ್ನ ಪರ ಪ್ರಚಾರಕ್ಕೆ ಬರುತ್ತಾರೆ. ಶೀಘ್ರದಲ್ಲೇ ರೇವಣ್ಣ ಅವರನ್ನು ಭೇಟಿಯಾಗುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಶಾಸಕ ವೆಂಕಟಸ್ವಾಮಿ ಹೃದಯಾಘಾತದಿಂದ ನಿಧನ

    ಈ ಚುನಾವಣೆ ಶಾಸಕ ಪ್ರೀತಂಗೌಡ ಹಾಗೂ ಸ್ವಾಭಿಮಾನದ ನಡುವೆ ನಡೆಯುವ ಚುನಾವಣೆಯಾಗಿದೆ. ಇಲ್ಲಿ ನಮ್ಮ ತಂದೆಯ ಕೆಲಸಗಳು ನನ್ನ ಕೈಹಿಡಿಯಲಿವೆ. ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದಿದ್ದಾರೆ.

    ಪಕ್ಷದ ಟಿಕೆಟ್ ಸಿಗಲು ಕಾರಣರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದನ್ನೂ ಓದಿ: ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧೆ – ಇಂದು ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ