ಹಾಸನ: ಜೆಡಿಎಸ್‍ನಲ್ಲಿ (JDS) ಭಿನ್ನಮತ ಸ್ಫೋಟಗೊಂಡಿದೆ. ಸೆ.13 ರಂದು ಹಾಸನದಲ್ಲಿ (Hassana) ನಡೆದಿದ್ದ ದಿ. ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ಹುಟ್ಟುಹಬ್ಬದ ಕಾರ್ಯಕ್ರಮದ ಬಗ್ಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ (H.D Revanna) ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಎಚ್.ಡಿ.ರೇವಣ್ಣ ಅದೇನು ಅಂತ ನನಗೆ ಗೊತ್ತಿಲ್ಲ. ನನಗೆ ಆ ವಿಷಯವೇ ಗೊತ್ತಿಲ್ಲ. ನನಗೆ ಅವರು ಯಾವ ವಿಷಯಕ್ಕೆ ಕಾರ್ಯಕ್ರಮ ಮಾಡಿದ್ದಾರೆ, ಅದೇನು ಅಂತ ಗೊತ್ತಿಲ್ಲ. ನನ್ನ ಜೊತೆ ಯಾರು ಫೋನ್‍ನಲ್ಲಿ ಮಾತನಾಡಿಲ್ಲ ಎಂದು ಫುಲ್ ಗರಂ ಆದರು. ಇದನ್ನೂ ಓದಿ: ಹರಿಯುವ ನೀರಿನಲ್ಲಿ ಸಿಲುಕಿದ ತಾಯಿ, ಮಗ – ಗುಜುರಿ ವ್ಯಾಪಾರಿಯಿಂದ ರಕ್ಷಣೆ
ಹಾಸನದಲ್ಲಿ ನಡೆದಿದ್ದ ದಿ.ಎಚ್.ಎಸ್.ಪ್ರಕಾಶ್ ಅವರ 71 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, (H.DKumaraswamy) ಸಿ.ಎಂ.ಇಬ್ರಾಹಿಂ (C.M Ibrahim) ಹಾಗೂ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಎಚ್.ಪಿ.ಸ್ವರೂಪ್‍ಗೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಎಂದು ಪರೋಕ್ಷವಾಗಿ ಹೆಚ್‌ಡಿಕೆ ಹೇಳಿದ್ದರು. ಅಲ್ಲದೇ ರೇವಣ್ಣ ಜೊತೆ ಫೋನ್‍ನಲ್ಲಿ ಮಾತನಾಡಿದ್ದೇನೆ ಎಂದಿದ್ದರು. ಇದರಿಂದ ಕೆಂಡಾಮಂಡಲರಾಗಿರುವ ರೇವಣ್ಣ ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಸಿಟ್ಟಿನಿಂದಲೇ ಮಾಧ್ಯಮಗೋಷ್ಠಿಯಿಂದ ಎದ್ದು ಹೋದರು. ಇದನ್ನೂ ಓದಿ: ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ
Live Tv
[brid partner=56869869 player=32851 video=960834 autoplay=true]
ಹಾಸನ: ದಬ್ಬಾಳಿಕೆ ರಾಜಕಾರಣ ಒಪ್ಪಲ್ಲ, ಹಿಟ್ಲರ್ ಸಂಸ್ಕೃತಿಯನ್ನು ಹಾಸನದ ಜನರು ಒಪ್ಪುವುದಿಲ್ಲ. ಜೆಡಿಎಸ್(JDS) ಕಾರ್ಯಕರ್ತರ ಸಭೆಗೆ ಪೊಲೀಸ್ ಪ್ರೊಟೆಕ್ಷನ್ ಕೇಳುವ ಸ್ಥಿತಿಗೆ ರೇವಣ್ಣ ಬಂದಿದ್ದಾರೆ ಎಂದರೆ, ಅವರ ಪರಿಸ್ಥಿತಿ ರಾಜಕೀಯವಾಗಿ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಊಹೆ ಮಾಡಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ(HD Revanna) ಅವರ ವಿರುದ್ಧ ಶಾಸಕ ಪ್ರೀತಂ ಗೌಡ(Preetham Gowda) ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರನ್ನು ಒಂದು ಸಭೆಯಲ್ಲಿ ರೌಡಿಶೀಟರ್ ಎಂದರು. ಇನ್ನೊಂದು ಸಭೆಯಲ್ಲಿ ಕುಡುಕರು ಎಂದರು. ನಾನು ಬೇರೆ ಪಕ್ಷದ ಕಾರ್ಯಕರ್ತರ ಬಗ್ಗೆ ಮಾತನಾಡುವುದೇ ಇಲ್ಲ. ಆದರೆ ರೇವಣ್ಣ ಅವರು ತಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆಯೇ ಆ ತರಹ ಮಾತನಾಡಿದ್ದಾರೆ ಎಂದರು.
ಜೆಡಿಎಸ್ ಕಾರ್ಯಕರ್ತರ ಸಭೆಗೆ ಪೊಲೀಸ್ ಪ್ರೊಟೆಕ್ಷನ್ ಕೇಳುವ ಸ್ಥಿತಿಗೆ ರೇವಣ್ಣ ಅವರು ಬಂದಿದ್ದಾರೆ ಅಂತ ಹೇಳಿದರೆ, ರೇವಣ್ಣ ಅವರ ಪರಿಸ್ಥಿತಿ ರಾಜಕೀಯವಾಗಿ ಏನಾಗಿದೆ ಅಂತ ಕ್ಷಣಕ್ಕೆ ಊಹೆ ಮಾಡಿ. ನಾನು ನಮ್ಮ ಕಾರ್ಯಕರ್ತರ ಸಭೆ ನಡೆಸಬೇಕಾದರೆ ಪೊಲೀಸರನ್ನು ಕರೆಯುವುದೇ ಇಲ್ಲ. ಗೌಪ್ಯವಾಗಿ ಸಭೆ ಮಾಡುತ್ತೇನೆ. ಅವರ ಕಾರ್ಯಕರ್ತರ ಜೊತೆ ಅವರು ಮಾತನಾಡಲು ಪೊಲೀಸ್ ಪ್ರೊಟೆಕ್ಷನ್ ಬೇಕು ಎಂದರೆ, ಅವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಯೋಚಿಸಿ ಎಂದು ಕುಟುಕಿದರು. ಇದ್ನನೂ ಓದಿ: ಗಣಪತಿ ಡಿಜೆ – ನಿಮ್ಮ ಪುಂಗಿ ಇಲ್ಲಿ ನಡಿಯೋದಿಲ್ಲ, ನೀವು ಪುಂಗಿ ಊದಿದ್ರೆ, ನಾವು ನಮ್ಮ ಪುಂಗಿ ಊದುತ್ತೇವೆ: ಇನ್ಸ್‌ಪೆಕ್ಟರ್ ಅವಾಜ್
ನನ್ನ ಸಭೆಗೆ ನಾನು ಯಾವತ್ತೂ ಪೊಲೀಸರನ್ನು ಕರೆಯುವುದಿಲ್ಲ. ನನ್ನ ಕಾರ್ಯಕರ್ತರ ಮೇಲೆ ನನಗೆ ನಂಬಿಕೆ ಇದೆ. ನಮ್ಮ ಕಾರ್ಯಕರ್ತರನ್ನು ನಾವು ಯಾವತ್ತೂ ಕುಡುಕರು, ರೌಡಿಶೀಟರ್ ಅಂತ ಕರೆಯುವುದಿಲ್ಲ. ಸಭೆಯಿಂದ ಎದ್ದು ಹೋಗಿ ಅಂತ ಹೇಳೋದಿಲ್ಲ ಎಂದು ತಿಳಿಸಿದರು.
ನಮ್ಮ ಐಡಿಯಾಲಜಿಯನ್ನು ಹಾಸನದ ಜನರು ಒಪ್ಪಿದ್ದಾರೆ. ಅವರ ಐಡಿಯಾಲಜಿಯನ್ನು ಹಾಸನದ ಜನ ಒಪ್ಪುವುದಿಲ್ಲ. ಅವರ ಐಡಿಯಾಲಜಿ ಎಂದರೆ ಕಾರ್ಯಕರ್ತರನ್ನು ಎದ್ದು ಹೋಗಿ ಎನ್ನುವುದು, ಕುಡುಕರು, ರೌಡಿಶೀಟರ್ ಎನ್ನುವುದು. ಆ ಐಡಿಯಾಲಜಿಯನ್ನು, ದಬ್ಬಾಳಿಕೆ ರಾಜಕಾರಣವನ್ನು, ಹಿಟ್ಲರ್ ಸಂಸ್ಕೃತಿಯನ್ನು ಹಾಸನದ ಜನ ಒಪ್ಪುವುದಿಲ್ಲ. ಇಲ್ಲಿ ಏನೇ ಇದ್ದರೂ ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವುದು ಎಂದು ಟೀಕಿಸಿದರು.
ಸಾಮಾನ್ಯ ಕಾರ್ಯಕರ್ತರನ್ನೂ ನಾನು ಅಣ್ಣ ಎಂದೇ ಮಾತನಾಡಿಸುತ್ತೇನೆ, ಹೋಗಿ ಬನ್ನಿ ಎನ್ನುತ್ತೇನೆ. ನಾನು ಯಾರಿಗೂ ಇಲ್ಲಿಯವರೆಗೆ ಏಕವಚನದಲ್ಲಿ ಮಾತನಾಡಿಸಿಲ್ಲ. ಇನ್ನು ಎದ್ದು ಹೋಗಿ ಎನ್ನುವುದು ದೂರದ ಪ್ರಶ್ನೆ. ಇದೇ ಪ್ರೀತಂ ಗೌಡನಿಗೂ ಮಾನ್ಯ ರೇವಣ್ಣ ಅವರಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.
ಹಾಸನದ ಜನರು ಮಾತ್ರ ಕೂಲಿ ಕಾರ್ಮಿಕರಾಗಿ ಇರಬೇಕು, ಇವರು ಮಾತ್ರ ಕಾರಿನಲ್ಲಿ ಓಡಾಡಬೇಕು. ರೈತರ ಭೂಮಿಗೆ ಬೆಲೆ ಬಂದರೆ ಕಾರಿನಲ್ಲಿ ಓಡಾಡುತ್ತಾರೆ. ಇವರು ಮಾತ್ರ ಕಾರಿನಲ್ಲಿ ಓಡಾಡಬೇಕಾ? ನಿಮ್ಮ ಕಾರ್ಯಕರ್ತರೇ ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ, ನಾವು ಕಾರ್ಯಕರ್ತರನ್ನು ದೇವರು ಎಂದು ಕರೆಯುತ್ತೇವೆ. 45 ವರ್ಷ ರಾಜಕೀಯ ಮಾಡಿರುವವರು 5 ವರ್ಷ ರಾಜಕೀಯ ಮಾಡಿರೋ ಪ್ರೀತಂ ಗೌಡನ ಬಗ್ಗೆ ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತಾರೆ? ಆರಾಮಾಗಿ ಇರಲು ಹೇಳಿ ಎಂದು ವ್ಯಂಗ್ಯವಾಡಿದರು. ಇದ್ನನೂ ಓದಿ: ಗಣಿಗಾರಿಕೆಯಿಂದ ಭಾರತದ GDPಗೆ ಶೇ.2.5 ರಷ್ಟು ಕೊಡುಗೆ: ಪ್ರಲ್ಹಾದ್ ಜೋಶಿ
Live Tv
[brid partner=56869869 player=32851 video=960834 autoplay=true]
ಹಾಸನ: ನಗರದ ಜಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಸಭೆ ಉದ್ಘಾಟಿಸುವ ಮುನ್ನವೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇದು ಟಿಕೆಟ್ ಘೋಷಣೆ ಮಾಡುವ ಸಭೆಯಲ್ಲ ಪಕ್ಷ ಸಂಘಟನೆ ಹಾಗೂ ಮಳೆಯಿಂದ ಆಗಿರುವ ಹಾನಿ ಮತ್ತು ಪರಿಹಾರ ನೀಡುವಂತೆ ಗಮನ ಸೆಳೆಯಲು ಚರ್ಚಿಸಲು ಕರೆದಿರುವ ಸಭೆಯಾಗಿದ್ದು ಯಾರು ಯಾರ ಪರ ಘೋಷಣೆ ಕೂಗಬಾರದೆಂದು ತಾಕೀತು ಮಾಡಿದರು.
ಸಭೆ ಉದ್ಘಾಟನೆ ಆಗುತ್ತಿದ್ದಂತೆ ಮಾಜಿ ಶಾಸಕ ದಿ.ಎಚ್.ಎಸ್.ಪ್ರಕಾಶ್ ಪುತ್ರ ಹೆಚ್.ಪಿ.ಸ್ವರೂಪ್‍ಗೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿವಂತೆ ಕಾರ್ಯಕರ್ತರು ಒತ್ತಾಯಿಸಿದರು. ಇದರಿಂದ ಕೆರಳಿದ ರೇವಣ್ಣ ಇವೆಲ್ಲ ನನ್ನ ಹತ್ರ ನಡೆಯಲ್ಲ. ಎಣ್ಣೆ ಕುಡಿಸಿಕೊಂಡು ಬಂದು ಘೋಷಣೆ ಕೂಗಿದ್ರೆ ನಾನು ಹೆದರಲ್ಲ ಎದ್ದು ಹೊರಗೆ ಹೋಗಿ ಎಂದು ಗದರಿದರು. ಇದರಿಂದ ಕೆರಳಿದ ಸ್ವರೂಪ್ ಬೆಂಬಲಿಗರು ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಬಲಿಗರ ಆಕ್ರೋಶದಿಂದ ರೇವಣ್ಣ ವೇದಿಕೆಯಲ್ಲಿ ಸುಮ್ಮನೆ ಕುಳಿತರು. ಇದನ್ನೂ ಓದಿ: ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ – ಹಿಜಬ್ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅಭಿಪ್ರಾಯ
ನಂತರ ವೇದಿಕೆಯ ಮೇಲೆ ಕುಳಿತಿದ್ದ ಎಚ್.ಪಿ.ಸ್ವರೂಪ್ ವಿರುದ್ಧ ರೇವಣ್ಣ ಕೆಂಡಾಮಂಡಲರಾದರು. ಮೈಕ್ ಎಸೆದು ಸ್ವರೂಪ್ ವಿರುದ್ಧ ಸಿಟ್ಟಾದರು. ಈ ವೇಳೆ ಬೆಂಬಲಿಗರನ್ನು ಸಮಾಧಾನ ಮಾಡಲು ಸ್ವರೂಪ್ ಹರಸಾಹಸಪಟ್ಟರು. ಆದರೂ ಸುಮ್ಮನಾಗದ ಕಾರ್ಯಕರ್ತರು ಸ್ವರೂಪ್ ಪರ ಘೋಷಣೆಗಳನ್ನು ಕೂಗಿ ಸಭೆಯಿಂದ ಹೊರ ನಡೆದರು. ಅಲ್ಲೇ ಹಾಕಲಾಗಿದ್ದ ಜೆಡಿಎಸ್ ಮುಖಂಡ ಪ್ರಸಾದ್‍ಗೌಡರ ಫ್ಲೆಕ್ಸ್‌ಗಳನ್ನು ಹರಿದು ಹಾಕಿದರು. ಸ್ವರೂಪ್‌ಗೆ ಟಿಕೆಟ್ ಕೊಡಬೇಕು ಮನೆಮನೆಗೆ ಹೋಗಿ ಜನರ ಕಾಲಿಗೆ ಬಿದ್ದು ಗೆಲ್ಲಿಸಿಕೊಂಡು ಬರುತ್ತೇವೆ. ಇಲ್ಲವಾದಲ್ಲಿ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ನಿದ್ರೆ ಬರುತ್ತಿಲ್ಲ ಅಂತ 19ರ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
Live Tv
[brid partner=56869869 player=32851 video=960834 autoplay=true]
ಹಾಸನ: ಸೆಂಟ್ ಹಾಕಿಕೊಳ್ಳದೆ ಈಚೆಗೆ ಬರಲ್ಲ ಈ ಗಿರಾಕಿ ಎಂದು ಹೇಳುವ ಮೂಲಕ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರೇವಣ್ಣ ಅವರಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ ಎಂಬ ಅಶ್ವತ್ಥ್ ನಾರಾಯಣ್ ಹೇಳಿಕೆ ವಿಚಾರವಾಗಿ ಹಾಸನದಲ್ಲಿ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಚಿವರ ಬಗ್ಗೆ ನಮಗೆ ಗೌರವವಿದೆ. ಅವರು ಬಂದ ಕೂಡಲೇ ಉನ್ನತ ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತಾರೆ ಅಂದುಕೊಂಡಿದ್ದೆ. ನಾವು ಯಾವುದೇ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಬಿಜೆಪಿ ಐದು ವರ್ಷ ಅಧಿಕಾರದಲ್ಲಿತ್ತು. ಹಾಸನಕ್ಕೆ ಒಂದು ಲ್ಯಾಬ್ ಕೊಟ್ಟಿದ್ದಾರಾ ನೈತಿಕತೆ ಇದ್ದರೆ ಹೇಳಲಿ ಎಂದು ಅಶ್ವತ್ಥ್ ನಾರಾಯಣ್‍ಗೆ ಸವಾಲೆಸೆದಿದ್ದಾರೆ.
ನಾಚಿಕೆಯಾಗಬೇಕು ಇವರಿಗೆ, ಇವರ ಹಗರಣಗಳ ಬಗ್ಗೆ ಸಮಯ ಬಂದಾಗ ಹೇಳ್ತೀನಿ. ನಾನು ಸಾಮಾನ್ಯ ರೈತನ ಮಗ, ಅವರ ಹಾಗೆ ಬಾರ್ ಅಟ್‍ಲಾ ಮಾಡಿಲ್ಲ. ಇಲ್ಲಿ ಬಂದು ಅವನಿಗೆ ನೋಡೋಕೆ ಹೇಳಿ. ಈ ಮಂತ್ರಿಗೆ ಶಿಕ್ಷಣ ಖಾತೆ ಅಂದರೆ ಏನೂ ಅಂತ ಗೊತ್ತೆ ಇಲ್ವೇನೋ. ಖಾಸಗಿಯವರ ಜೊತೆ ಶಾಮೀಲಾಗಿದ್ದಾರೆ. ನಾನು ಹಳ್ಳಿ ಗಮಾಡು ಒಂದನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದೇನೆ. ಬನ್ನಿ ಅಶ್ವತ್ಥ್ ನಾರಾಯಣ್ ಅವರೇ ಹಾಸನ ಜಿಲ್ಲೆಯನ್ನು ನೋಡಿ. ಖಾಸಗಿಯವರ ಗುಲಾಮರಾಗಿ ಕೆಲಸ ಮಾಡಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಮಾಡಿರುವ ತಪ್ಪಿಗೆ ನಮ್ಮನ್ನು ದೋಷಿಸಬೇಡಿ – ಮೋದಿ ವಿರುದ್ಧ ಠಾಕ್ರೆ ಕಿಡಿ
ಕಾಂಗ್ರೆಸ್‍ನವರ ವಚನ ಭ್ರಷ್ಟದಿಂದ ಈ ಸರ್ಕಾರ ಇರೋದು. ಇವರು ಸರ್ಕಾರ ಕಾಲೇಜುಗಳನ್ನು ಬಾಗಿಲು ಮುಚ್ಚುವ ಶಾಸಕರು. ಸೆಂಟ್ ಹಾಕಿಕೊಳ್ಳದೆ ಈಚೆಗೆ ಬರಲ್ಲ ಈ ಗಿರಾಕಿ. ನನ್ನ ಮೇಲಿನ ಸೇಡಿಗೆ ಉಪನ್ಯಾಸರನ್ನು ಕಲಬುರಗಿಗೆ ವರ್ಗ ಮಾಡಿದ್ದಾರೆ. ನಾನು ನೊಂದು ಹೆಳ್ತೀನಿ. ಮುಖ್ಯಮಂತ್ರಿಗೆ ಬಡವರ ಬಗ್ಗೆ ಕಾಳಜಿ ಇಲ್ವ. ಮುಖ್ಯಮಂತ್ರಿ ತಂದೆ, ದೇವೇಗೌಡರು ಒಟ್ಟಿಗೆ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಮೊಸಳೆಹೊಸಳ್ಳಿ ಎಂಜಿನಿಯರ್ ಕಾಲೇಜು ಮುಚ್ಚಲೇಬೇಕು ಅಂತ ಈ ಮಂತ್ರಿ ಹೋರಾಡಿದ್ರು. ಇಡೀ ರಾಜ್ಯದಲ್ಲಿ ಮೊಸಳೆಹೊಸಳ್ಳಿ ಕಾಲೇಜು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಹಾಸನ ಎಂಜಿನಿಯರ್ ಕಾಲೇಜು ಇದೆ. ರಾಜಕೀಯವಾಗಿ ಎದುರಿಸಲು ನಾನು ರೆಡಿ ಎಂದು ಕಿಡಿಕಾರಿದ್ದಾರೆ.
ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಮೊದಲು ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ, ಹಾಸನ ಕ್ಷೇತ್ರದವರೆಗೆ ಬರುವುದು ಬೇಡ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಹಾಸನದಲ್ಲಿ ನೂತನ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಹಾಸನದಲ್ಲಿ ಮಾತಮಾಡಿದ ಆರ್.ಅಶೋಕ್, ಹಾಸನದಲ್ಲೂ ಮಾದರಿಯಾದ ಆಡಳಿತ ಸೌಧ ಆದರೆ ನಿಮಗ್ಯಾಕೆ ಹೊಟ್ಟೆಉರಿ ಎಂದು ರೇವಣ್ಣ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಅಭಿವೃದ್ಧಿ ಕಾರ್ಯಕ್ಕೆ ಯಾರು ತೊಂದರೆ ಕೊಡಬಾರದು. ಹಾಸನದಲ್ಲೂ ಮಾದರಿಯಾದ ಆಡಳಿತ ಸೌಧ ಆದರೆ ನಿಮಗ್ಯಾಕೆ ಹೊಟ್ಟೆಉರಿ. ನಿಮ್ಮ ಕೈಯಲ್ಲಿ ಮಾಡೋದಕ್ಕೆ ಆಗಿಲ್ಲ. ಹೊಸದಾಗಿ ಮಾಡೋಕೆ ಹೋದರೆ ಯಾಕೆ ಕಲ್ಲು ಹಾಕ್ತೀರಿ. ರೇವಣ್ಣ ಅವರ ಕ್ಷೇತ್ರವನ್ನು ನೋಡಿಕೊಳ್ಳಲಿ, ಇಲ್ಲಿಯವರೆಗೂ ಬರೋದು ಬೇಡ. ಅವರ ಕಾಲದಲ್ಲಿ ಆಗಿಲ್ಲ ಅಂತ ಬೇಜಾರು ಅವರಿಗೆ. ಎಲ್ಲಾ ನಾನೇ ಮಾಡಿದೆ ಅಂತಾರೆ. ಈ ಮೈಂಡ್ ಸೆಟಪ್ ಮೊದಲು ಹೋಗಬೇಕು. ನೀವು ಮಾಡಿದ್ರೆ ನ್ಯಾಯ, ಬೇರೆಯವರು ಮಾಡಿದ್ರೆ ಯಾಕೆ ನಂಬಲ್ಲ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ: ಸದ್ಯಕ್ಕೆ ಟಫ್ ರೂಲ್ಸ್ ಜಾರಿಯಿಲ್ಲ: ಸಿಎಂ
ನಾವು ‘ಎ’ ಟಿಂ ‘ಬಿ’ ಟೀಂ ಮಾತು ಕೇಳಲ್ಲ. ಕಾಂಗ್ರೆಸ್-ಜೆಡಿಎಸ್ ‘ಎ’ ಟೀಂ ‘ಬಿ’ ಟೀಂ. ಲೋಕಸಭಾ ಚುನಾವಣೆ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡ್ರಿ..?. ದೇವೇಗೌಡರು ಯಾರ ಬೆಂಬಲದಿಂದ ಪ್ರಧಾನಮಂತ್ರಿ ಆದರು. ಹತ್ತು ಸರಿ ಹೊಂದಾಣಿಕೆ ಮಾಡಿಕೊಂಡು ‘ಎ’ ಟೀಂ ‘ಬಿ’ ಟೀಂ ಅಲ್ಲ ಅಂತ ಏಕೆ ನಮ್ಮ ಮೇಲೆ ಆಪಾದನೆ ಮಾಡುತ್ತೀರಿ. ಪಕ್ಕಾ ಇವರಿಬ್ಬರು ಅಣ್‍ತಮ್ಮಾಸ್ ಇದ್ದಂಗೆ. ದೇವೇಗೌಡರಿಗೆ ಇವತ್ತು ಕಾಂಗ್ರೆಸ್ ಕಡೆಗೆ ಒಲವಿದೆ ಎಂದು ಆರ್.ಅಶೋಕ್ ಅಸಮಾಧಾನ ಹೊರಹಾಕಿದ್ರು.
ಹಾಸನ: ಭ್ರಷ್ಟಾಚಾರ ಯಾರ್ಯಾರಿಂದ ಎಲ್ಲೆಲ್ಲಿ ಹುಟ್ಟಿಕೊಂಡಿದೆ. ಪಾಪ ಈಶ್ವರಪ್ಪ ಅವರ ಬಗ್ಗೆ ನಾನು ಮಾತನಾಡಲ್ಲ. ಕಾಂಗ್ರೆಸ್‍ನವರು ಈಗ ಮೇಲೆ ಹತ್ತಿ ಕುಣಿಯುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ನಡೆದ ಪರ್ಸಂಟೇಜ್ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ.
ಹಾಸನದಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಮೇಲೆ ಹತ್ತಿ ಕುಣಿಯದು ಬೇಡ, ನಿಮ್ಮ ಕಾಲದಲ್ಲಿ ಏನಾಗಿದೆ. ಈಶ್ವರಪ್ಪ ತಪ್ಪು ಮಾಡಿದ್ದರೆ ತಪ್ಪೇ. ತನಿಖೆ ನಂತರ ಸತ್ಯಾಂಶ ತಿಳಿಯಲಿದೆ. ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಿದ್ದರೆ ಸರ್ಕಾರ ಆ ಕುಟುಂಬಕ್ಕೆ ಪರಿಹಾರ ಕೊಡಬೇಕು. ಆ ಕುಟುಂಬಕ್ಕೆ ದೇವರು ದು:ಖ ಭರಿಸುವ ಶಕ್ತಿ ನೀಡಲಿ. ರಾಷ್ಟ್ರದ ಐಕ್ಯತೆಗೆ ಧಕ್ಕೆ ತರಬೇಡಿ, ಎರಡು ರಾಷ್ಟ್ರೀಯ ಪಕ್ಷಗಳಿಗೂ ಹೇಳುತ್ತೇನೆ. ಎಲ್ಲಾ ಸಮುದಾಯದವರು ಸೇರಿ ದೇಶ ಕಟ್ಟಬೇಕಿದೆ. ರಾಜಕೀಯಕ್ಕೋಸ್ಕರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಬೇರೆ ಬೇರೆ ಅಂತ ಮಾಡಲು ಹೋಗಬೇಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?
ನಾಲ್ಕು ದಿನ ಹಾಸನ ಜಿಲ್ಲೆಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ
ನಾಳೆ ಹಾಸನ ಜಿಲ್ಲೆಯ ಎರಡು ಕಡೆ ಜನತಾ ಜಲಧಾರೆ ಕಾರ್ಯಕ್ರಮ ನಡೆಯಲಿದೆ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರ ಕಟ್ಟೆ ಹಾಗೂ ಸಕಲೇಶಪುರ ತಾಲೂಕಿನ ಹೆನ್ನಲಿಯಲ್ಲಿ ಎತ್ತಿನಹೊಳೆಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಹಾಸನ ಜಿಲ್ಲೆಯ ಶ್ರೀರಾಮದೇವರ ಕಟ್ಟೆ, ಗೊರೂರು ಅಣೆಕಟ್ಟು, ವಾಟೆಹೊಳೆ, ಎತ್ತಿನಹೊಳೆ, ಯಗಚಿ ಡ್ಯಾಂನಲ್ಲಿ ಕಾರ್ಯಕ್ರಮ ಮಾಡಲಾಗುವುದು. ಜಿಲ್ಲೆಯ ಎಲ್ಲಾ ಶಾಸಕರು, ತುಮಕೂರಿನ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಏ.20 ರಂದು ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ
ಹಾಸನ: ರಾಜ್ಯದ ಕನ್ನಡಿಗರಿಗೆ ಏನೇ ಆದರೂ, ಧಕ್ಕೆ ತರುವಂತಹ ಸನ್ನಿವೇಶ ಬಂದರೆ ನಾವೆಲ್ಲ ಕನ್ನಡಿಗರು ಹೋರಾಟ ಮಾಡಬೇಕು. ಸರ್ಕಾರ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಳಗಾವಿಯಲ್ಲಿ MES ಪುಂಡಾಟದ ವಿರುದ್ಧ ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಎಂಇಎಸ್, ಶಿವಸೇನೆ ಯಾವುದೇ ಇರಲಿ. ಈ ರಾಜ್ಯದ ಹಿತಕ್ಕೆ ಧಕ್ಕೆಯಾದಾಗ ಎಲ್ಲಾ ಪಕ್ಷಗಳು ಒಂದಾಗಿ ನಮ್ಮ ರಾಜ್ಯದ ನೆಲ ಜಲ ಉಳಿಸಿಕೊಳ್ಳಬೇಕು. ಇದರಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಬೇಕು. ಬೆಳಗಾವಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಮುಖ್ಯಮಂತ್ರಿಗಳಿಗೆ, ಗೃಹಮಂತ್ರಿಗಳಿಗೆ, ಬೆಳಗಾವಿ ಉಸ್ತುವಾರಿ ಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ
ಬೇರೆ ಬೇರೆ ರಾಜ್ಯದಲ್ಲಿರುವ ಕನ್ನಡಿಗರಿಗೆ ಯಾವುದೇ ನೋವಾದಾಗ, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಅದನ್ನು ತಡೆಗಟ್ಟುವ ಪ್ರಯತ್ನ ಮಾಡಬೇಕು. ಬೇರೆ ರಾಜ್ಯದಲ್ಲಿರುವ ಕನ್ನಡಿಗರ ರಕ್ಷಣೆಯಾಗಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರು ಇರುತ್ತಾರೆ. ಅಲ್ಲಿ ಹೋಗಿ ಯಾರಾದರೂ ಗಲಾಟೆ ಮಾಡಿದರೆ ಅವರಿಗೆ ರಕ್ಷಣೆ ಕೊಡುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇತುವೆಯಾಗಿ ಕೆಲಸ ಮಾಡಬೇಕು ಎಂದು ರೇವಣ್ಣ ಸಲಹೆ ನೀಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ
ಹಾಸನ : ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಅವರನ್ನು ರಾವಣನಿಗೆ ಹೋಲಿಸಿ ಬಿಜೆಪಿ ಎಂಎಲ್‍ಸಿ ಅಭ್ಯರ್ಥಿ ವಿಶ್ವನಾಥ್ ಜರಿದಿದ್ದಾರೆ.
ಹಾಸನದಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್, ಜೆಡಿಎಸ್ ನಲ್ಲಿ ಬೇರೆ ಯಾರೂ ಅಭ್ಯರ್ಥಿಗಳಿರಲಿಲ್ವಾ. ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬೆಂಗಳೂರಿನಲ್ಲಿ ಎಂ.ಎಲ್.ಸಿ. ಮಾಡಿದ್ರಿ. ಇಡೀ ಮನೆಯವರೆಲ್ಲಾ ಸೇರಿಕೊಂಡು ಕಳೆದ ಭಾರೀ ಪಟೇಲ್ ಶಿವರಾಂ ಅವರನ್ನು ಸೋಲಿಸಿದ್ದರು. ಮಾತು ಎತ್ತಿದ್ರೆ ಎಲ್ಲಾ ದೇವರ ಕೃಪೆ ಅಂತೀರಾ. ಮಹಿಷಾಸುರ ಮರ್ದನ ಮಾಡಿದ್ದು ದೇವರೇ. ರಾವಣನ ದುಷ್ಟ ಬುದ್ದಿಗೆ ಶ್ರೀರಾಮಚಂದ್ರ ಅವನನ್ನು ಕೊಂದ. ರಾವಣನ ಅಂಶ ನಿಮ್ಮ ಹತ್ರಾನು ಇದೆ. ಈ ಜಿಲ್ಲೆಯ ಜನರನ್ನು ಕಾಡುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ
ಹಾಸನ: ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಎಂ.ಎಲ್.ಸಿ. ಚುನಾವಣೆಗೆ ಸೂರಜ್ ರೇವಣ್ಣ ಸ್ಪರ್ಧೆಗೆ ಬಿಜೆಪಿ-ಕಾಂಗ್ರೆಸ್ ಟೀಕೆ ವಿಚಾರ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಯಾವುದು..? ಇಂಧಿರಾಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬಂದರು. ಯಡಿಯೂರಪ್ಪ ಅವರ ಮಕ್ಕಳು ರಾಜಕೀಯಕ್ಕೆ ಬಂದರು. ನಾವೇನು ಹಿಂದುಗಡೆ ಬಾಗಿಲಿನಿಂದ ಬರುತ್ತಿದ್ದೇವಾ ಎಂದು ಪ್ರಶ್ನಿಸುತ್ತಾ ವಾಗ್ದಾಳಿ ನಡೆಸಿದ್ದಾರೆ.
ರಿಸರ್ವೇಷನ್ ಇಲ್ಲದಿದ್ದಾಗ ಹಿಂದುಳಿದ ವರ್ಗದವರನ್ನು ಜಿ.ಪಂ. ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಅವರೇನು ನಮ್ಮ ಕುಟುಂಬದವರಾ..? ಎಂದು ಇದೇ ವೇಳೆ ಜೆಡಿಎಸ್ ನಿಂದ ಅಧ್ಯಕ್ಷರನ್ನಾಗಿ ಮಾಡಿದವರ ಹೆಸರು ಹೇಳಿ ರೇವಣ್ಣ ವಾಗ್ದಾಳಿ ನಡೆಸಿದರು. ಕಾಂಗ್ರೆಸ್, ಬಿಜೆಪಿ ಕಾನೂನು ತರಲಿ. ಕುಟುಂಬದಿಂದ ಒಬ್ಬರೇ ನಿಲ್ಲಲಿ ಎಂದು ಕಾನೂನು ತರಲಿ. ಆ ಕಾನೂನನ್ನು ನಾನು ಒಪ್ಪುತ್ತೇನೆ. ಜೆಡಿಎಸ್ ಪ್ರೊಡಕ್ಷನ್ ಪಾರ್ಟಿ. ಕಾಂಗ್ರೆಸ್-ಬಿಜೆಪಿಯಲ್ಲಿರುವವರೆಲ್ಲಾ ದೇವೇಗೌಡರ ಕಂಪನಿಲಿ ಸರ್ವಿಸ್ ಆಗಿರುವವರು. ಪ್ರೊಡಕ್ಷನ್ ಬೈ ಎಚ್.ಡಿ.ದೇವೇಗೌಡ ಬಿಜೆಪಿ-ಕಾಂಗ್ರೆಸ್ ನಲ್ಲಿರೋದು ಜೆಡಿಎಸ್ ಪ್ರೊಡಕ್ಷನ್ ನವರು ಎಂದರು.
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ, ಹಾಸನ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುಯ್ಲಿಗೆ ಬಂದಿದ್ದ ಜೋಳ, ರಾಗಿ, ಭತ್ತ ನಾಶವಾಗಿದೆ. 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಉದುರಿ ಹೋಗಿದೆ. 4,200 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಹಾಳಾಗಿದೆ. 2000 ಎಕರೆ ಪ್ರದೇಶದಲ್ಲಿ ತರಕಾರಿ, 1000 ಎಕರೆ ಪ್ರದೇಶದಲ್ಲಿ ಇತರೆ ಬೆಳೆಗಳು ನಾಶವಾಗಿದೆ. 420 ಕೋಟಿಗೂ ಅಧಿಕ ನಷ್ಟವಾಗಿದೆ. ರಾಜ್ಯ ಸರ್ಕಾರ ಸತ್ತೋಗಿದೆ. ಇದು ರೈತರ ಪರವಾದ ಸರ್ಕಾರವಲ್ಲ ಎಂದು ಹೇಳಿದರು.
ರೈತರನ್ನೇ ಮಟ್ಟ ಹಾಕಲು ಬಂದಿರುವ ಸರ್ಕಾರ. ಈ ಸರ್ಕಾರ ಯಾವಾಗ ಹೋಗುತ್ತೆ ಅಂಥಾ ಜನ ಶಾಪ ಹಾಕುತ್ತಿದ್ದಾರೆ. ಸರ್ಕಾರ ಎಲ್ಲಾ ಬೆಳೆಗಳಿಗೂ 6000 ಪರಿಹಾರ ನೀಡುತ್ತಿದೆ. ಯಾರೂ ಹೇಳೋರು ಕೇಳೋರು ಇಲ್ಲಾ. ಕುಮಾರಸ್ವಾಮಿ ಶಂಖ ಕೊಟ್ಟ ಊದುತ್ತಾ ಕೂತಿದ್ದಾರೆ. ಜನರ ಸತ್ತರೆ ಮಸಣಕ್ಕೆ ದುಡ್ಡು ಕೊಡ್ತೀವಿ ಅಂತ ಕೂತಿದ್ದಾರೆ. ಯಡಿಯೂರಪ್ಪ ಭಾಷಣ ಮಾಡಿದ್ದೇ ಮಾಡಿದ್ದು, ದೇವಸ್ಥಾನದ ಹುಂಡಿ ತರ ಡಬ್ಬಿ ಇಟ್ಟುಕೊಂಡಿದ್ದರು. ಯಾರು ದುಡ್ಡು ಹಾಕ್ತಾರೆ ಅವರಿಗೆ ಕೆಲಸ ಮಾಡಿಕೊಡುತ್ತಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊಹ್ಲಿ ಪುತ್ರಿಯನ್ನು ರೇಪ್ ಮಾಡ್ತಿನಿ ಅಂದಿದ್ದ ಐಐಟಿ ಪದವೀಧರನಿಗೆ ಜಾಮೀನು
ನೀರಾವರಿ ಇಲಾಖೆಯಲ್ಲಿ ಬೋಗಸ್ ಬಿಲ್ ನಡೆಯುತ್ತಿದೆ. ಎಷ್ಟು ಆಗುತ್ತೆ ಅಷ್ಟು ಬಾಚೋಣ ಅಂತ ಅಧಿಕಾರಿಗಳು ಕುಳಿತಿದ್ದಾರೆ. ಈ ರಾಜ್ಯವನ್ನು ಯಾರೂ ಹೇಳೋರು, ಕೇಳೋರು ಇಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಚುನಾವಣೆ ಒಂದೇ ಸಾಕು. ಎರಡೂ ಸೇರಿ ಪ್ರಾದೇಶಿಕ ಪಕ್ಷವನ್ನು ಮುಗಿಸಲು ಪ್ರಯತ್ನಿಸುತ್ತಿವೆ. ಕುಮಾರಣ್ಣ ಇಲ್ಲದಿದ್ದರೆ ಬಿಜೆಪಿಯಲ್ಲಿ ಶಂಖ ಊದಲು ಜನ ಸಿಕ್ಕುತ್ತಿರಲಿಲ್ಲ. ಕುಮಾರಣ್ಣನ ಶಂಖ ರಾಜ್ಯದಲ್ಲಿ ಊದುತ್ತಿರುವುದು. ಕುಮಾರಣ್ಣ-ಕಾಂಗ್ರೆಸ್ ಮಾಡಿದ್ದರಿಂದ ಬಿಜೆಪಿಯವರು ಶಂಖ ಊದುತ್ತಿದ್ದಾರೆ. ದೇವಸ್ಥಾನದಲ್ಲಿ ಶಂಖ ಊದಿದರೆ ಹುಂಡಿಗೆ ಕಾಸು ಹಾಕುತ್ತಾರೆ. ಅದೇ ರೀತಿ ಬಿಜೆಪಿಯವರು ಒಂದು ಹುಂಡಿ ಇಟ್ಟುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮನೇ ಬಿದ್ದು ಹೋಗಿ ಬೀದಿಯಲ್ಲಿ ಮಲಗುತ್ತಿದ್ದಾರೆ. ಕಳೆದ ವರ್ಷ ಸುರಿದ ಮಳೆಗೆ ರಸ್ತೆಯಲ್ಲಿ ಬಿದ್ದಿರುವ ಒಂದೇ ಒಂದು ಗುಂಡಿ ಮುಚ್ಚಿಲ್ಲ. ಸರ್ಕಾರವನ್ನು ಒತ್ತಾಯಿಸುತ್ತೇನೆ. ಬೆಳೆ ನಷ್ಟಕ್ಕೆ ರೈತರು ಖರ್ಚು ಮಾಡಿರುವ ಹಣವನ್ನಾದರೂ ಕೊಡಿ. ರಾಜ್ಯದಲ್ಲಿ, ಪಶುಪಾಲನಾ ಇಲಾಖೆ, ಕೃಷಿ ಇಲಾಖೆ ತೋಟಗಾರಿಕೆ ಸತ್ತು ಹೋಗಿದೆ. ಬೆಳಗ್ಗೆ ಎದ್ದರೆ ಯಡಿಯೂರಪ್ಪ ಹೆಗಲ ಮೇಲೆ ಹಸಿರು ಶಾಲು, ಈಗ ಶಾಲು ಎಲ್ಲಿಟ್ಟಿದ್ದಾರೆ ಗೊತ್ತಿಲ್ಲ. ಯಡಿಯೂರಪ್ಪ ಸೂಟ್ ಕೇಸ್ ನಲ್ಲಿ ಶಾಲು ಇಟ್ಟಿರಬೇಕು. 2023ಕ್ಕೆ ಶಾಲು ತೆಗೆಯುತ್ತಾರಾ ನೋಡಬೇಕು. ಯಡಿಯೂರಪ್ಪ ಮಾಡಿರುವ ಘನಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಪ್ರಧಾನಮಂತ್ರಿಗಳೇ ಇತ್ತ ಕಣ್ಣು ಬಿಡಿ. ಕೇಂದ್ರ ಸರ್ಕಾರದದಿಂದ ಒಂದು ತಂಡ ಕಳಿಸಬೇಕು. ಇಡೀ ರಾಜ್ಯವನ್ನು ವೀಕ್ಷಣೆ ಮಾಡಲಿ. ಮಂತ್ರಿಗಳ ಊರಲ್ಲೇ ಜನ ಬೀದಿಗೆ ಬಿದ್ದಿದ್ದಾರೆ. ಜನ ಉಗಿದ ಮೇಲೆ ಸಿಎಂ ವಿಸಿಟ್ ಮಾಡಿದ್ದಾರೆ ಎಂದು ರೇವಣ್ಣ ಗರಂ ಆದರು. ಇದನ್ನೂ ಓದಿ: ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ಪ್ರಕರಣ- ಇಂಜಿನಿಯರ್ ಅರೆಸ್ಟ್
ಹಾಸನ: ನಾನು ಜೀವನದಲ್ಲಿ ಯಾರಿಗೂ ಕಿರುಕುಳ ನೀಡಿಲ್ಲ. ಹಾಗೇನಾದ್ರು ಮಾಡಿದ್ರೆ ಆ ತಾಯಿಯೇ ಶಿಕ್ಷೆ ನೀಡಲಿ ಎಂದು ಶಾಸಕ ಹೆಚ್‍ಡಿ.ರೇವಣ್ಣ ಹೇಳಿದ್ದಾರೆ.
ಹಾಸನಾಂಬೆ ದೇವಿ ಹುಂಡಿಯಲ್ಲಿ ಭಕ್ತರ ನಾನಾ ಬಗೆಯ ಬೇಡಿಕೆ ಪತ್ರಗಳು ಗಮನ ಸೆಳೆದವು. ಇದರಲ್ಲಿ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರನ್ನ ಹೊಳೆನರಸೀಪುರ ಶಾಸಕ ಸ್ಥಾನದಿಂದ ಬದಲಿಸಿ, ಭೂಗಳ್ಳರಿಂದ ನನ್ನ ಭೂಮಿ ವಾಪಸ್ ಕೊಡಿಸು, ಮಗಳಿಗೆ ಮದುವೆ ಮಾಡಿಸು, ಸರ್ಕಾರಿ ಕೆಲಸ ಕೊಡಿಸು ಹೀಗೆ ವಿಭಿನ್ನ ಪತ್ರಗಳು ಹಾಸನಾಂಬೆ ಹುಂಡಿಯಲ್ಲಿ ಸಿಕ್ಕಿ ಗಮನ ಸೆಳೆದವು. ಇದನ್ನೂ ಓದಿ:ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ
ತಮ್ಮ ಬಗ್ಗೆ ಪತ್ರ ಸಿಕ್ಕಿದ್ದ ಬಗ್ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಜೀವನದಲ್ಲಿ ಯಾರಿಗೂ ಕಿರುಕುಳ ನೀಡಿಲ್ಲ. ಹಾಗೇನಾದರು ಮಾಡಿದ್ದರೆ ಆ ತಾಯಿಯೇ ಶಿಕ್ಷೆ ನೀಡಲಿ. ಯಾರಾದರೂ ಕಿಡಿಗೇಡಿಗಳು ಇರ್ತಾರಲ್ಲ ಅವರು ಇದನ್ನ ಮಾಡಿಸುತ್ತಾರೆ. ನಾವು ಮಂದೆ ಎರಡು ರಾಷ್ಟ್ರೀಯ ಪಕ್ಷಗಳನ್ನ ತೆಗೆಯೋವರೆಗೂ ಕೊರೊನಾ ಹೋಗಲ್ಲ ಅಂತ ಬರೆಸಿ ಹಾಕ್ಬೇಕಾಗುತ್ತೆ. ಹಾಗೇನಾದರು ಇದ್ದರೆ ದೇವಿ ತೆಗೆಯಲಿ ಆಕೆ ನೋಡಿ ಕೊಳ್ಳಲಿ. ನಮಗೇನು ನಾವು ಆಲೂಗೆಡ್ಡೆ ಹೊರವುದಕ್ಕೂ ರೆಡಿ, ಬೆಡ್ ಶೀಟ್ ಹೊದ್ಕಂಡ್ ಮಲಗೋಕೂ ರೆಡಿ ಎಂದಿದ್ದಾರೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣ ಕುಟುಂಬಸ್ಥರು ಜನರ ಪ್ರಾಣ ಹಿಂಡ್ತಿದ್ದಾರೆ – ಹಾಸನಾಂಬೆಗೆ ಪತ್ರ