Tag: ಹೆಚ್ ಡಿ ರೇವಣ್ಣ

  • ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ; ಸರ್ಕಾರದ ವಿರುದ್ಧ ಹೆಚ್.ಡಿ ರೇವಣ್ಣ ಕಿಡಿ

    ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ; ಸರ್ಕಾರದ ವಿರುದ್ಧ ಹೆಚ್.ಡಿ ರೇವಣ್ಣ ಕಿಡಿ

    ಹಾಸನ: 2024ರ ಲೋಕಸಭಾ ಚುನಾವಣಾ (Lok Sabha Elections) ದೃಷ್ಟಿಯಿಂದ ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಹಾಸನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ (Cauvery Issue) ಸರ್ಕಾರ ಆರಂಭಿಕ ಹಂತದಲ್ಲೇ ಮುಗ್ಗರಿಸಿದೆ. ಟ್ರಿಬ್ಯೂನಲ್ (ನ್ಯಾಯಾಧಿಕರಣ) ಮುಂದೆ ನೀರಿಲ್ಲ ಅನ್ನುತ್ತಾರೆ, ಹೊರಗೆ ಬಂದು ಒಳಹರಿವು 10,000 ಕ್ಯೂಸೆಕ್ ಇದೆ ಅಂತ ಹೇಳ್ತಿದ್ದಾರೆ. CWRC ತೀರ್ಪು ಬರುವ ಮುಂಚೆಯೇ ಒಳಹರಿವಿನ ಬಗ್ಗೆ ಹೇಳ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಇಬ್ಬರ ಮೆರವಣಿಗೆ

    ನೀರಾವರಿ ಸಲಹಾ ಸಮಿತಿ ಸಭೆ ಕರೆಯದೇ ತಮಿಳುನಾಡಿಗೆ ನೀರು ಹರಿಸಿದ್ದಾರೆ. ತಮಿಳುನಾಡಿನವರಿಗೆ ಕೀ ಕೊಟ್ಟು ಇವರು ಏನು ತೀರ್ಮಾನ ಮಾಡ್ತಾರೆ? ಕುಡಿಯಲು ನೀರಿಲ್ಲ ಎಂದು ಜನ ದಂಗೆ ಏಳುತ್ತಿದ್ದಾರೆ. 4 ತಿಂಗಳು ಗ್ಯಾರಂಟಿ ಕೊಡಲು ಹೋಗಿ ನೀರು ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಲ್ಲ ಕಡೆ ಗ್ಯಾರಂಟಿ ಕೊಡಲು ಲಕ್ಷಾಂತರ ಜನರನ್ನ ಸೇರಿಸಿ ಸರ್ಕಾರದ ಹಣ ಖರ್ಚು ಮಾಡಿದ್ದಾರೆ. ಆದ್ದರಿಂದ ರಾಜ್ಯದ ಹಿತದೃಷ್ಟಿಯಿಂದ, ನೆಲ-ಜಲಕ್ಕೋಸ್ಕರ ಯಾವುದೇ ಸಂಘಟನೆ ಬಂದ್ ಮಾಡಿದ್ರು ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ – ಸಾತೇರಿ ದೇವಿ ಮೂರ್ತಿಗೆ ಉಡಿಸಿದ ಸೀರೆ 1.06 ಲಕ್ಷ ರೂ.ಗೆ ಹರಾಜು

    ಅಲ್ಲದೇ 135 ಶಾಸಕರು ಸಾಕಾಗಲ್ಲ ಅಂತ ಕೆಲವು ಪಕ್ಷಗಳ ಮುಖಂಡರನ್ನ ಸೆಳೆಯುವಲ್ಲಿ ಕೆಲವರು ಮಗ್ನರಾಗಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಬೇರೆ ಪಕ್ಷದವರನ್ನು ಸೆಳೆಯುತ್ತಿದ್ದಾರೆ. ಮುಂದಿನ ಚುನಾವಣೆವರೆಗೂ ಕರ್ನಾಟಕ ಸರ್ಕಾರ, ತಮಿಳುನಾಡಿನ ಸರ್ಕಾರದ ಪಾದಕ್ಕೆ ರಾಜ್ಯವನ್ನ ಅಡ ಇಟ್ಟಿದ್ದಾರೆ. ತಮಿಳುನಾಡು ಸರ್ಕಾರ ಕರ್ನಾಟಕದಲ್ಲಿ ನೀರಿನ ವಿಚಾರದಲ್ಲಿ `ಆಪರೇಷನ್ ಐಎನ್‌ಡಿಐಎ’ ಮಾಡುತ್ತಿದೆ. ಇದರಿಂದ ಕರ್ನಾಟಕದ ರೈತರ ಮನೆ ಹಾಳಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರ ಜೊತೆ ಸೇರಿದರೂ ನಮ್ಮ ಸಿದ್ಧಾಂತ ಬಿಡಲ್ಲ. ಕಾಂಗ್ರೆಸ್‌ನವರು ಬೇಕಾದಾಗ ನಮ್ಮ ಹತ್ರ ಕೋಮುವಾದಿ ದೂರ ಇಡಬೇಕು ಅಂತ ಬರ್ತಾರೆ. ಅಧಿಕಾರ ಬಂದ ಮೇಲೆ ನಮ್ಮನ್ನ ಯಾವ ರೀತಿ ಟ್ರೀಟ್ ಮಾಡ್ತಿದ್ದಾರೆ ಎಂದು ಸಮಯ ಬಂದಾಗ ಹೇಳ್ತಿನಿ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲು ಬಿಡಲ್ಲ – HD ರೇವಣ್ಣ ಗುಡುಗು

    ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಲು ಬಿಡಲ್ಲ – HD ರೇವಣ್ಣ ಗುಡುಗು

    ಹಾಸನ: ನಾನು ಬದುಕಿರುವವರೆಗೂ ಅಲ್ಪ ಸಂಖ್ಯಾತರಿಗೆ (Minorities) ಅನ್ಯಾಯ ಆಗಲು ಬಿಡಲ್ಲ ಎಂದು ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಹೇಳಿದ್ದಾರೆ.

    ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್‌ (BJP-JDS) ಮೈತ್ರಿ ವಿಚಾರವಾಗಿ ಮಾತನಾಡುತ್ತಲೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಜೊತೆ ನಮ್ಮ ಪಕ್ಷವನ್ನ ವಿಲೀನ ಮಾಡಲು ಹೋಗಿಲ್ಲ. ಜೆಡಿಎಸ್ (JDS) ಪಕ್ಷವಾಗಿಯೇ ಉಳಿಯುತ್ತೆ. ನಾನು ಬದುಕಿರುವವರೆಗೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಲು ಬಿಡಲ್ಲ. ನಾವು ಅವರ ಜೊತೆ ಇದ್ದೇ ಇರುತ್ತೇವೆ. ಇದು ನನ್ನ ಧರ್ಮ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ಅಂಧರ ಕ್ರಿಕೆಟ್‌ನಲ್ಲಿ ಚಿನ್ನಗೆದ್ದ ಕರ್ನಾಟಕದ ಯುವತಿಗೆ ವಿಶೇಷ ಸನ್ಮಾನ

    ಇದೇ ವೇಳೆ ಹಾಸನ (Hassan) ಜಿಲ್ಲೆಯಲ್ಲಿ 1.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜೋಳ, 75,000. ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಇತರೆ ಬೆಳೆ ಬೆಳೆದಿದ್ದಾರೆ. ಒಟ್ಟು 2.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಂಪೂರ್ಣ ಬೆಳೆ ಉಳಿದಿಲ್ಲ. ಆದರೂ ಸರ್ಕಾರ ಇವತ್ತಿನವರೆಗೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಕುಡಿಯುವ ನೀರಿನ ಚಿಂತೆ; ತಮಿಳುನಾಡಿಗೆ ಬೆಳೆ ಬಾಡುವ ಚಿಂತೆ – 15 ದಿನ 5,000 ಕ್ಯೂಸೆಕ್ ಹರಿಸಲು CWRC ಸೂಚನೆ

    ರೈತರು ಹಾಳು ಬಿದ್ದು ಹೋಗಲಿ ಅನ್ನೋ ಪರಿಸ್ಥಿತಿಗೆ ಬಂದಿರುವ ಸರ್ಕಾರ, ಬರೀ ಗ್ಯಾರಂಟಿ ಕಡೆಗೆ ಗಮನ ಕೊಡುತ್ತಿದೆ. ನಾವೇನಾದ್ರೂ ಮಾತನಾಡಿದ್ರೆ ಜೆಡಿಎಸ್ ಮುಗಿದು ಹೋಗುತ್ತೆ, ಅವರತ್ರ ಹೋಗ್ತಾರೆ, ಇವರತ್ರ ಹೋಗ್ತಾರೆ ಅಂತಾರೆ. ನಾವು ಎಲ್ಲಾದ್ರೂ ಹೋಗ್ತಿವಿ. ನೀವು ಮೊದಲು ರೈತರನ್ನ ಉಳಿಸಿಕೊಳ್ಳಿ. ಇಲ್ಲದಿದ್ದರೆ ರೈತರು ಮನಸ್ಸು ಮಾಡಿದ್ರೆ ಏನು ಬೇಕಾದರೂ ಆಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಅಧಿವೇಶನ ಕರೆದು ಚರ್ಚೆ ಮಾಡಬೇಕು ಎಂದು ಎಚ್ಚರಿಸಿದ್ದಾರೆ.

    ತಮಿಳುನಾಡಿಗೆ 20 ಟಿಎಂಸಿ ನೀರು ಬಿಟ್ಟರು. ಹೇಮಾವತಿ ನದಿಯಿಂದ ತುಮಕೂರಿಗೆ (Tumakur) ಎರಡು ತಿಂಗಳಿನಿಂದ ನೀರು ಬಿಟ್ಟಿದ್ದಾರೆ. ಜೆಡಿಎಸ್‌ಗೆ ವೋಟು ಹಾಕಿದ್ದಾರೆ ಎಂದು ಹಾಸನ ಜಿಲ್ಲೆಗೆ ನೀರು ಹರಿಸಿಲ್ಲ. ನೀರು ಬಿಡುವುದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲೂ ಬರಗಾಲವಿದೆ. 7 ಕ್ಷೇತ್ರಗಳಿಗೂ ಬರ ಘೋಷಣೆ ಮಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ, ಕಣ್ಣು ಕಿತ್ತುಹಾಕಬೇಕು: ಗಜೇಂದ್ರ ಸಿಂಗ್‌ ಶೇಖಾವತ್‌

    ಜಿಲ್ಲೆಯಲ್ಲಿ 1,18,292 ಹೆಕ್ಟೇರ್‌ನಲ್ಲಿ ತೆಂಗಿನ ಮರಗಳಿದ್ದು, ಮಳೆ ಕೊರತೆಯಿಂದ ಹಾಳಾಗ್ತಿವೆ. ಅರಸೀಕೆರೆ, ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಹೆಚ್ಚು ನಷ್ಟವಾಗಿದೆ. ಈ ನಡುವೆ ಶೇ.60 ರಷ್ಟು ತೆಂಗಿನ ಮರಗಳಿಗೆ ರೋಗ ತಗುಲಿದ್ದು, ನಿಯಂತ್ರಣಕ್ಕೆ ಔಷಧಿ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಸದ ಸ್ಥಾನದಿಂದ ಪುತ್ರ ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್‌.ಡಿ.ರೇವಣ್ಣಗೆ ಹೈಕೋರ್ಟ್‌ ಸಮನ್ಸ್‌

    ಸಂಸದ ಸ್ಥಾನದಿಂದ ಪುತ್ರ ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್‌.ಡಿ.ರೇವಣ್ಣಗೆ ಹೈಕೋರ್ಟ್‌ ಸಮನ್ಸ್‌

    ಬೆಂಗಳೂರು: ಸಂಸದ ಸ್ಥಾನದಿಂದ ಪುತ್ರ ಪ್ರಜ್ವಲ್‌ ರೇವಣ್ಣ (Prajwal Revanna) ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್‌.ಡಿ. ರೇವಣ್ಣ (H.D.Revanna) ಅವರಿಗೆ ಹೈಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

    ಶಾಸಕ ಅಸಿಂಧು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿದೆ. ವಿಧಾನಸಭಾ ಕಾರ್ಯದರ್ಶಿ ಮೂಲಕ ಸಮನ್ಸ್ ನೀಡಿದೆ. ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಈ ಆದೇಶ ಬಂದಿದೆ. ಇದನ್ನೂ ಓದಿ: ನಾಮಪತ್ರದಲ್ಲಿ ಸುಳ್ಳು ಮಾಹಿತಿ – ಸಂಸದ ಸ್ಥಾನದಿಂದ ಪ್ರಜ್ವಲ್‌ ರೇವಣ್ಣ ಅನರ್ಹ

    ಚುನಾವಣಾ ಅಕ್ರಮ ವಿಚಾರವಾಗಿ ವಕೀಲ ದೇವರಾಜೇಗೌಡ ಅರ್ಜಿ ಸಲ್ಲಿಸಿದ್ದರು. ರೇವಣ್ಣ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ದೇವರಾಜೇಗೌಡ ಪರಾಜಿತಗೊಂಡಿದ್ದರು. ರೇವಣ್ಣ ಸೇರಿದಂತೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರಿಗೂ ಹೈಕೋರ್ಟ್‌ ಸಮನ್ಸ್ ಜಾರಿ ಮಾಡಿದೆ.

    ಚುನಾವಣಾ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಹಾಸನ ಸಂಸದ ಸ್ಥಾನದಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಹೈಕೋರ್ಟ್‌ ಈಚೆಗೆ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಈ ಪ್ರಕರಣದ ಬೆನ್ನಲ್ಲೇ ಈಗ ಪ್ರಜ್ವಲ್‌ ತಂದೆ ಹೆಚ್‌.ಡಿ. ರೇವಣ್ಣ ಅವರಿಗೆ ಸಮನ್ಸ್‌ ನೀಡಿದೆ. ಇದನ್ನೂ ಓದಿ: ಸನಾತನ ಧರ್ಮ ರೋಗ ಹರಡುವ ಸೊಳ್ಳೆಯಲ್ಲ – ಉದಯನಿಧಿ ಇನ್ನೂ ಬಚ್ಚ ಎಂದ ಮುತಾಲಿಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ದೇವೇಗೌಡರ ನಿರ್ಧಾರವೇ ಅಂತಿಮ: ಹೆಚ್‌.ಡಿ. ರೇವಣ್ಣ

    ಲೋಕಸಭೆಗೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ದೇವೇಗೌಡರ ನಿರ್ಧಾರವೇ ಅಂತಿಮ: ಹೆಚ್‌.ಡಿ. ರೇವಣ್ಣ

    ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಪ್ರಜ್ವಲ್ ರೇವಣ್ಣಗೆ (Prajwal Revanna) ಟಿಕೆಟ್ ಕೊಡುವ ಬಗ್ಗೆ ದೇವೇಗೌಡ, ಕುಮಾರಸ್ವಾಮಿ ನಿರ್ಧಾರವೇ ಅಂತಿಮ ಎಂದು ಮಾಜಿ ಸಚಿವ ಹೆಚ್‌.ಡಿ. ರೇವಣ್ಣ (H.D. Revanna) ಸ್ಪಷ್ಟಪಡಿಸಿದರು.

    ಲೋಕಸಭೆ ‌ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಇಲ್ಲ ಎಂಬ ವಿಷಯಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆ ಚುನಾವಣೆ ವಿಚಾರದಲ್ಲಿ ದೇವೇಗೌಡರು (H.D. Deve Gowda), ಕುಮಾರಸ್ವಾಮಿ (H.D. Kumaraswamy) ನಿರ್ಧಾರವೇ ಅಂತಿಮ. ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರವೂ ಅವರೇ ತೀರ್ಮಾನ ಮಾಡ್ತಾರೆ ಎಂದರು. ಇದನ್ನೂ ಓದಿ: ಸರ್ಕಾರವನ್ನ ಟೀಕಿಸಿದ್ದ ಹೆಚ್‍ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

    ಪಕ್ಷ ಏನ್ ತೀರ್ಮಾನ ಮಾಡುತ್ತೋ ಅದೇ ಅಂತಿಮ. ಅದಕ್ಕೆ ನಾವು ಬದ್ದ. ವಿಧಾನಸಭೆ ಚುನಾವಣೆಯಲ್ಲೂ ಭವಾನಿ ವಿಚಾರದಲ್ಲಿ ಇದೇ ಹೇಳಿದ್ದೆವು. ಜನಾಭಿಪ್ರಾಯಕ್ಕೆ ಭವಾನಿ ನಿಲ್ಲಬೇಕು ಅಂತ ಇತ್ತು. ಆದರೆ ಪಕ್ಷದ ತೀರ್ಮಾನದಂತೆ ನಾವು ಒಪ್ಪಿಕೊಂಡ್ವಿ ಅಂತ ವಿಧಾನಸಭೆ ಚುನಾವಣೆ ಬಗ್ಗೆ ಮೆಲುಕು ಹಾಕಿದರು.

    ಎಲ್ಲರಿಗೂ ದೇವೇಗೌಡರ ಕುಟುಂಬ ಮಾತ್ರ ಕಾಣಿಸೋದು. ಹೇಗಿದ್ರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ಕುಟುಂಬದವರು ಯಾರು ನಿಲ್ಲೋದು ಬೇಡ ಅಂತ ಒಂದು ಬಿಲ್ ತನ್ನಿ.‌ ಕುಟುಂಬದವರು ಸ್ಪರ್ಧೆ ಮಾಡಬಾರದು ಅಂತ ಬಿಲ್ ತಂದರೆ ನಾವು ಬೆಂಬಲ ಕೊಡ್ತೀವಿ. ಇಲ್ಲ ಅಂದರೆ ಕೇವಲ ರಾಷ್ಟ್ರೀಯ ಪಕ್ಷದವರ ಕುಟುಂಬವರು ಮಾತ್ರ ಸ್ಪರ್ಧೆ ಮಾಡಬಹುದು. ಪ್ರಾದೇಶಿಕ ಪಕ್ಷಗಳ ಕುಟುಂಬ ಸ್ಪರ್ಧೆ ಮಾಡಬಾರದು ಅಂತ ಬಿಲ್ ತನ್ನಿ ಅಂತ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು. ಇದನ್ನೂ ಓದಿ: ನಾನು ಯಾರಿಗೂ ಪ್ರಮಾಣ ಮಾಡ್ಬೇಕಾದ ಅವಶ್ಯಕತೆ ಇಲ್ಲ, ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ: ಡಿಕೆಶಿ

    ನಾವು ಯಾರೂ ಹಿಂಬಾಗಿಲಿನಿಂದ ರಾಜಕೀಯಕ್ಕೆ ಬಂದಿಲ್ಲ. ನಾನು ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ಮಾಡಿ ಬಂದಿದ್ದೇನೆ. ಮಾತು ಎತ್ತಿದರೆ ದೇವೇಗೌಡ ಕುಟುಂಬ ಅನ್ನೋದು ಬೇಡ ಅಂತ ವಿರೋಧಿಗಳಿಗೆ ತಿರುಗೇಟು ಕೊಟ್ಟರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ – ಗೆಲುವಿನ ಬಳಿಕ ಸ್ವರೂಪ್ ಟೆಂಪಲ್‌ ರನ್‌

    ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ – ಗೆಲುವಿನ ಬಳಿಕ ಸ್ವರೂಪ್ ಟೆಂಪಲ್‌ ರನ್‌

    ಮಂಡ್ಯ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್‌.ಪಿ ಸ್ವರೂಪ್‌ (HP Swaroop) ಹಾಸನ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಕಾಲಭೈರವೇಶ್ವರನ ಸನ್ನಿಧಿಗೆ ಬಂದು ದರ್ಶನ ಪಡೆದಿದ್ದಾರೆ. ನಂತರ ನಿರ್ಮಲಾನಂದನಾಥ ಶ್ರೀಗಳ (Nirmalanandanatha Swamiji) ಆಶೀರ್ವಾದ ಪಡೆದಿದ್ದಾರೆ.

    ಆದಿಚುಂಚನಗಿರಿಗೆ ಬಂದ ಸ್ವರೂಪ್ ಮೊದಲು ಕಾಲಭೈರವೇಶ್ವರನ ದರ್ಶನ ಪಡೆದು ಬಳಿಕ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ್ದಾರೆ. ತೀವ್ರ ಕೂತುಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಸ್ವರೂಪ್ ಜಯಭೇರಿ ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಆರಾಧ್ಯ ದೈವವಾಗಿರುವ ಕಾಲಭೈರವೇಶ್ವರಸ್ವಾಮಿಗೆ ಸ್ವರೂಪ್ ನಮಸ್ಕರಿಸಿದರು. ಇದನ್ನೂ ಓದಿ: ಹಾಸನದಲ್ಲಿ ಗೆಲುವು ಸಾಧಿಸಿದ ಸ್ವರೂಪ್ – ಕರೆ ಮಾಡಿ ಶುಭಾಶಯ ತಿಳಿಸಿದ ಹೆಚ್‌ಡಿಡಿ

    ಬಳಿಕ ಮಾತನಾಡಿದ ಸ್ವರೂಪ್, ನಿಖಿಲ್ (Nikhil Kumaraswamy) ಅವರ ಸೋಲು ನನಗೆ ವೈಯಕ್ತಿಕವಾಗಿ ಬೇಸರವಾಗಿದೆ. ಅವರು ಸೋಲಬಾರದಿತ್ತು, ರಾಮನಗರದ ಬಗ್ಗೆ ನನಗೆ ಗೊತ್ತಿಲ್ಲ ಹೀಗಾಗಿ ನಿಖಿಲ್ ಅವರು ಏಕೆ ಸೋತರು ಅನ್ನೋದು ಅರ್ಥವಾಗುತ್ತಿಲ್ಲ. ನಾನು‌ ಹಾಗೂ ನನ್ನ ಹಾಸನದ ಜನತೆ ನಿಖಿಲ್ ಅವರ ಜೊತೆಗೆ ಇರುತ್ತೇವೆ. ನಮ್ಮ ಪಕ್ಷದ ನಾಯಕರ ಶ್ರಮದಿಂದ ನಾನು ಗೆಲುವು ಸಾಧಿಸಿದ್ದೇನೆ. ಹಾಸನದ ಎಲ್ಲ ಕಾರ್ಯಕರ್ತರು ಶ್ರಮಿಸಿದ್ದಾರೆ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಪ್ರೀತಂ ಗೌಡಗೆ ಸೋಲು – ಜಿಲ್ಲೆಯಲ್ಲಿ 2 ಸ್ಥಾನ ಗೆದ್ದ ಬಿಜೆಪಿ

    ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ. ಕುಮಾರಣ್ಣ, ರೇವಣ್ಣ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ. ಮುಂದೆ ಅವರ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತೇನೆ. ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿರಲಿಲ್ಲ. ಜೆಡಿಎಸ್‌ ಮತ ಜೆಡಿಎಸ್‌ಗೆ ಬಂದಿದೆ ಸೋಲಿನ ವಿಶ್ಲೇಷಣೆ ಮಾಡುವವರು ಒಪ್ಪಂದ ಹೇಳ್ತಾರೆ ಅಷ್ಟೇ ಎಂದು ಸ್ವರೂಪ್ ಎದುರಾಳಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

  • ಸ್ವರೂಪ್ ನನ್ನ ಮಗನಿದ್ದಂತೆ, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ – ಭವಾನಿ ರೇವಣ್ಣ

    ಸ್ವರೂಪ್ ನನ್ನ ಮಗನಿದ್ದಂತೆ, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ – ಭವಾನಿ ರೇವಣ್ಣ

    – ಹಾಸನದಲ್ಲಿ ಅಬ್ಬರದ ಭಾಷಣ; ರೇವಣ್ಣ ಕುಟುಂಬ ಒಗ್ಗಟ್ಟು ಪ್ರದರ್ಶನ

    ಹಾಸನ: ಸ್ವರೂಪ್ (Swaroop) ನನ್ನ ಮಗನಿದ್ದಂತೆ, ನಾನು ಸ್ವರೂಪ್‌ನನ್ನ ಮಗನಾಗಿಯೇ ನೋಡಿದ್ದೇನೆ. ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡಿದ್ದೇನೆ, ಈ ಕ್ಷೇತ್ರದಲ್ಲಿ ಸ್ವರೂಪ್‌ ಗೆದ್ದೇ ಗೆಲ್ತಾನೆ ಎಂದು ಭವಾನಿ ರೇವಣ್ಣ (Bhavani Revanna) ಭವಿಷ್ಯ ನುಡಿದಿದ್ದಾರೆ.

    ಹಾಸನ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕುಟುಂಬ ಭಾಗಿಯಾಗಿ, ಸ್ವರೂಪ್ ಗೆಲ್ಲಿಸುವಂತೆ ಮನವಿ ಮಾಡಿದರು. ಈ ವೇಳೆ ಸ್ವರೂಪ್ ಅವರು, ರೇವಣ್ಣ ಹಾಗೂ ಭವಾನಿ ರೇವಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಇದನ್ನೂ ಓದಿ: ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ : ಎ.ಮಂಜು – ಭವಾನಿ ಜುಗಲ್ ಬಂದಿ

    ಸಭೆಯಲ್ಲಿ ಮಾತನಾಡಿದ ಭವಾನಿ ಅವರು, ಯಾರಿಗೆ ಟಿಕೆಟ್ ನೀಡಬೇಕು ಅನ್ನುವ ಚರ್ಚೆ ನಡೆಯುತ್ತಿದ್ದಾಗ ಕುಮಾರಣ್ಣ ಸ್ವರೂಪ್‌ಗೆ ಟಿಕೆಟ್‌ ಕೊಟ್ಟಿದ್ದಾರೆ. ನಾವೂ ಮೂರು ಬಾರಿ ಫೋನ್ ಮಾಡಿ ಸ್ವರೂಪ್‌ಗೇ ಟಿಕೆಟ್ ಕೊಡಿ ಅಂತಾ ಕುಮಾರಣ್ಣಗೆ ಹೇಳಿದ್ವಿ ಎಂದು ಹೇಳಿದರು.

    ನನಗೆ ದೇವೇಗೌಡರ ಆರೋಗ್ಯ ಮುಖ್ಯವಾಗಿತ್ತು. ದೇವೇಗೌಡರಿಗಿಂತ ನಾನೇ ದೊಡ್ಡವಳಾ ಅಂತಾ ಅನ್ನಿಸಿಬಿಡ್ತು. ಹಾಗಾಗಿ ನಾನೇ ತೀರ್ಮಾನಿಸಿ ಸ್ವರೂಪ್ ಹೆಸರು ಅನೌನ್ಸ್ ಮಾಡಿಸಿದೆ. ಶುಕ್ರವಾರ ಒಳ್ಳೆಯ ದಿನ ಅನೌನ್ಸ್ ಮಾಡಿ ಅಂತಾ ಕುಮಾರಣ್ಣಗೆ ಹೇಳಿದೆ. ನನಗೆ ಟಿಕೆಟ್ ಸಿಕ್ಕಿಲ್ಲ ಅಂತಾ ಹಾಸನ ಕಡೆಗಣಿಸಲ್ಲ. ಒಟ್ಟಿನಲ್ಲಿ ಬಿಜೆಪಿ ಸೋಲಿಸಬೇಕು ಅಷ್ಟೇ ಎಂದು ಕರೆ ನೀಡಿದರು. ಇದನ್ನೂ ಓದಿ: ರೇವಣ್ಣ ಕುಟುಂಬದವ್ರು ನನ್ನ ಪರ ಪ್ರಚಾರಕ್ಕೆ ಬರುತ್ತಾರೆ: ಹಾಸನ ಜೆಡಿಎಸ್ ಅಭ್ಯರ್ಥಿ

    ಹಾಸನದಲ್ಲಿ ಬಿಜೆಪಿಯನ್ನ ಸಂಪೂರ್ಣವಾಗಿ ತೆಗೆದುಹಾಕಬೇಕು. ಅದಕ್ಕಾಗಿ ನಿದ್ರೆ ಬಿಟ್ಟು ಕೆಲಸ ಮಾಡಿ, ಸ್ವರೂಪ್ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ, ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ತಾನೆ ಎಂದು ನುಡಿದರು.

  • ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ – ರೇವಣ್ಣ

    ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ – ರೇವಣ್ಣ

    ಹಾಸನ: ದೇವೇಗೌಡರು (HD Devegowda) ಹಾಸನ ಜಿಲ್ಲೆಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ ಅಂತೀನಿ ಎಂದು ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಹೇಳಿದ್ದಾರೆ.

    ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಾನು ಈಗಾಗಲೇ ದೇವೇಗೌಡರ ಬಳಿ ಹೇಳಿದ್ದೇನೆ. ಅದು ನಮ್ಮಿಬ್ಬರಿಗೇ ಗೊತ್ತು. ದೇವೇಗೌಡರೇ ನಮಗೆ ಸುಪ್ರೀಂ ನಾಯಕರು. ಅವರು ಏನು ಹೇಳುತ್ತಾರೋ ಅದಕ್ಕೆ ನಾನು ಬದ್ಧ ದೇವೇಗೌಡರು ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಅಂತಾ ಹೇಳಿದ್ರೂ ನಾನು ಓಕೆ ಅಂತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್‌ ಆರೋಗ್ಯದಲ್ಲಿ ಬಿಗ್‌ ಅಪ್ಡೇಟ್ಸ್‌

    ಕಾಂಗ್ರೆಸ್ (Congress) ನಾಯಕರ ಜೊತೆ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ (Siddaramaiah) ಮತ್ತು ನನ್ನ ನಡುವಿನ ಬಾಂಧವ್ಯ ಬೇರೆ. ದೇವೇಗೌಡರು, ಕುಮಾರಣ್ಣ ಇಲ್ವಾ? ನಾನೇಕೆ ಕಾಂಗ್ರೆಸ್‌ಗೆ ಹೊಗಲಿ? ಹಾಸನ ಟಿಕೆಟ್ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ, ನಾನು ಕುಮಾರಣ್ಣ ಮೊದಲೇ ಮಾತನಾಡಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್: ಪ್ರತಿಭಟನಾಕಾರರ ಮೇಲೆ ವೈಮಾನಿಕ ದಾಳಿ – 100ಕ್ಕೂ ಅಧಿಕ ಜನ ಬಲಿ

    ಹಾಸನದಲ್ಲಿ ಶಕುನಿಗಳು ತಲೆಕೆಡಿಸುತ್ತಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಶಕುನಿಗಳ ಮಾತಿಗೆ ನಾನು ತಲೆಕೆಡಿಸಿಕೊಳ್ಳುವಂತಹ ವ್ಯಕ್ತಿಯಲ್ಲ. ಯಾರೂ ನನ್ನ-ಕುಮಾರಣ್ಣನನ್ನ ಹೊಡೆದಾಡಿಸಲು ಸಾಧ್ಯವಿಲ್ಲ. ಬೆಳಗಾವುದರೊಳಗೆ ಒಂದಾಗ್ತೀವಿ ಎಂದಿದ್ದಾರೆ.

  • ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್ ಫಿಕ್ಸ್ – ಪರೋಕ್ಷವಾಗಿ ಸುಳಿವು ಕೊಟ್ಟ HDK

    ಹಾಸನದಲ್ಲಿ ಸ್ವರೂಪ್‌ಗೆ ಟಿಕೆಟ್ ಫಿಕ್ಸ್ – ಪರೋಕ್ಷವಾಗಿ ಸುಳಿವು ಕೊಟ್ಟ HDK

    – ನನ್ನ ಹತ್ರ ಬ್ಲ್ಯಾಕ್‌ಮೇಲ್‌ ನಡೆಯಲ್ಲ; ರೇವಣ್ಣ ದಂಪತಿಗೆ ಟಾಂಗ್

    ಬೆಂಗಳೂರು: ಹಾಸನ ಟಿಕೆಟ್ (Hassan Ticket) ಕಗ್ಗಂಟು ಮತ್ತೊಂದು ಹಂತದಲ್ಲಿ ಕುತೂಹಲ ಕೆರಳಿಸಿದೆ.

    ಯಲಹಂಕದಲ್ಲಿ ಪಂಚರತ್ನ ರಥಯಾತ್ರೆ ವೇಳೆ ಕಾರ್ಯಕರ್ತನೋರ್ವ, ಪಕ್ಷದ ಪರವಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಬೇಕು. ಹಾಸನದಲ್ಲಿ ಸ್ವರೂಪ್‌ಗೆ (Swaroop) ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಮುಲ್ ದೇಶದ ಬ್ರ್ಯಾಂಡ್‌, ಭಾರತದಲ್ಲೇ ಮಾರಾಟ ಮಾಡಿದ್ರೆ ಏನು ತೊಂದ್ರೆ – ಸಿ.ಟಿ ರವಿ ಪ್ರಶ್ನೆ

    ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಮಾಧ್ಯಮಮಿತ್ರರಿಗೂ ಹೇಳ್ತೀನಿ ಕೇಳಿಸಿಕೊಳ್ಳಿ. ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ಕಾರ್ಯಕರ್ತರಿಗೆ ಟಿಕೆಟ್ ಅಂತಾ ಹೇಳಿದ್ದೀನಿ. ಅದರಲ್ಲಿ ಬದಲಾವಣೆ ಇಲ್ಲ ಅಂತ ಪರೋಕ್ಷವಾಗಿ ಸ್ವರೂಪ್‌ಗೇ ಟಿಕೆಟ್ ಅಂತ ಹೇಳಿದ್ದಾರೆ. ಇದನ್ನೂ ಓದಿ: ದೇವೇಗೌಡ್ರು ಅಡುಗೆ ಮನೆಯಲ್ಲಿ ಅರ್ಧ ಗಂಟೆ ಕುಳಿತರೆ ಜೆಡಿಎಸ್ ಟಿಕೆಟ್ ಹಂಚಿಕೆ ಮುಗಿಯುತ್ತೆ: ತೇಜಸ್ವಿ ಸೂರ್ಯ ವ್ಯಂಗ್ಯ

    ಈ ಮಧ್ಯೆ, ಹಾಸನದಲ್ಲಿ ಭವಾನಿಗೆ (Bhavani Revanna) ಟಿಕೆಟ್ ತಪ್ಪಿದರೆ, ಹೊಳೇನರಸೀಪುರದಲ್ಲಿ ನಾನೂ ಕೂಡ ಸ್ಪರ್ಧೆ ಮಾಡಲ್ಲ ಅಂತಾ ಶುಕ್ರವಾರ ಸಭೆಯಲ್ಲಿ ರೇವಣ್ಣ (HD Revanna) ಹೇಳಿದ್ದಾರೆ ಅನ್ನೋದು ತಿಳಿದು ಬಂದಿದೆ. ಇದರ ಬೆನ್ನಲ್ಲೇ, ನನ್ನ ಹತ್ತಿರ ಬ್ಲ್ಯಾಕ್‌ ಮೇಲ್‌ ನಡೆಯಲ್ಲ ಅಂತಲೂ ಪರೋಕ್ಷವಾಗಿ ರೇವಣ್ಣ ದಂಪತಿಗೆ ಟಾಂಗ್ ಕೊಟ್ಟಿದ್ದಾರೆ.

  • ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್‌ಸಿಂಹ ವ್ಯಂಗ್ಯ

    ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್‌ಸಿಂಹ ವ್ಯಂಗ್ಯ

    – ಎಲ್ಲ ಭಾಗ್ಯಗಳನ್ನ ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರಭಾಗ್ಯವೇ ಇಲ್ಲವೆಂದು ಲೇವಡಿ

    ಮಡಿಕೇರಿ: ರೇವಣ್ಣಗೆ ಭವಾನಿಯವರ (Bhavani Revanna) ಚಿಂತೆ, ಕುಮಾರಣ್ಣ (HD Kumaraswamy) ಅವ್ರಿಗೆ ನಿಖಿಲ್‌ನ ಚಿಂತೆಯಾದ್ರೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಚಿಂತೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ.

    ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣ ಅವ್ರಿಗೆ ನಿಖಿಲ್‌ನ ಚಿಂತೆಯಾದ್ರೆ ಸಿದ್ದರಾಮಯ್ಯಗೆ (Siddaramaiah) ಕ್ಷೇತ್ರದ ಚಿಂತೆ. ಇವರಿಗೆಲ್ಲ ಅವರವರ ಕುಟುಂಬಗಳ ಚಿಂತೆ ಇದೆ ಆದ್ದರಿಂದ ಕರ್ನಾಟಕದ ಜನ ಇವರ ಮಾತಿಗೆ ಮರುಳಾಗಿ ಮಂಗಗಳಾಗಬೇಡಿ ಎಂದು ಲೇವಡಿ ಮಾಡಿದ್ದಾರೆ.

    ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಕೊಟ್ಟೆ ಎನ್ನುವ ಸಿದ್ದರಾಮಯ್ಯನವರಿಗೆ ಕ್ಷೇತ್ರಭಾಗ್ಯವೇ ಇಲ್ಲ. ಇದನ್ನ ನೋಡಿದ್ರೆ ಬಹಳ ಆಶ್ಚರ್ಯವಾಗುತ್ತೆ, ಅಷ್ಟೇ ಸೋಜಿಗವೂ ಆಗುತ್ತೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಯುಗಾದಿಯಂದೇ ಕಳ್ಳತನ – ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

    ಕರ್ನಾಟಕದ ಜನ ಮಂಗಗಳಾಗಬೇಡಿ:
    ಸಿದ್ದರಾಮಯ್ಯ ಅವರಿಗೆ ಯುಗಾದಿ ದಿನ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಬೇಕಾಗಿತ್ತು. ಆದರೆ ಇವತ್ತಿನವರೆಗೆ ಟಿಕೆಟ್ ಘೋಷಣೆ ಆಗಿಲ್ಲ. ಒಂದು ಕ್ಷೇತ್ರ ಹುಡುಕಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬಂದಿದ್ರೆ ಅಂದ್ರೆ ಅವರ ಭಾಗ್ಯಗಳಿಗೆ ಜನ ಬೆಲೆ ಕೊಟ್ಟಿಲ್ಲ. ನಾನು ಈಗಲೂ ಹೇಳುತ್ತೇನೆ ಅವರು ಕಡೆಗೆ ಮೈಸೂರಿನ ವರುಣಾಕ್ಕೆ ಬರುತ್ತಾರೆ. ಹೀಗಾಗಿ ಕರ್ನಾಟಕದ ಜನ ಇವರ ಮಾತಿಗೆ ಮರುಳಾಗಿ ಮಂಗಗಳಾಗಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಲೆಗೆ ಪೆಟ್ಟುಬಿದ್ದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾವು – ಹಾಸನ ಡಿಸಿ

    ಈಗಾಗಲೇ ಕಾಂಗ್ರೆಸ್ ಅವರು ಕೊಡುವ 200 ಯೂನಿಟ್ ವಿದ್ಯುತ್ ಉಚಿತ, ಗೃಹಿಣಿಯರಿಗೆ 2,000 ರೂ. ಮಾಸಿಕ ಭತ್ಯೆ ಕೊಡುತ್ತೇನೆ ಅನ್ನೋದನ್ನೆಲ್ಲಾ ನಂಬಬೇಡಿ. ಪಂಜಾಬ್ ನಲ್ಲಿ ಎಎಪಿಯವರು ಇದನ್ನೇ ಹೇಳಿ ಟೋಪಿ ಹಾಕಿದ್ದಾರೆ. ಈಗ ಕಾಂಗ್ರೆಸ್ ಅವರು ರಾಜ್ಯದ ಜನರಿಗೆ ಟೋಪಿ ಹಾಕಲು ಹೋರಟಿದ್ದಾರೆ. ಯಾವುದೇ ಪಕ್ಷ ಸುಳ್ಳು ಹೇಳಿಕೊಂಡು ಮತ ಕೇಳಿದರೂ, ಜನರು ಅರಿತು ಮತ ನೀಡಿ ಬಿಜೆಪಿ ಅವರು ಸುಳ್ಳು ಹೇಳಿದ್ರೂ ಮತ ನೀಡಬೇಡಿ ನಾನು ಬಿಜೆಪಿ ಕಾರ್ಯಕರ್ತನಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.