Tag: ಹೆಚ್ ಡಿ ರೇವಣ್ಣ

  • ಮಹಿಳೆಯ ಅಪಹರಣ ಪ್ರಕರಣ- ಹೆಚ್‌.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ಮಹಿಳೆಯ ಅಪಹರಣ ಪ್ರಕರಣ- ಹೆಚ್‌.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

    ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

    ಪ್ರಕರಣ ಸಂಬಂಧ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಸುಮಾರು 2 ಗಂಟೆಗಳ ವಿಚಾರಣೆ ನಡೆಸಿದ ಕೋರ್ಟ್‌ ಕೆಲ ಕಾಲ ತೀರ್ಪು ಕಾಯ್ದಿರಿಸಿತು. ಬಳಿಕ ಸಂಜೆ 6.25ರ ಸುಮಾರಿಗೆ ಆದೇಶ ಪ್ರಕಟಿಸಿತು. ಜೊತೆಗೆ ಮೇ 6 ಕ್ಕೆ ವಿಚಾರಣೆ ಮುಂದೂಡಿದೆ. ಈ ಮೂಲಕ ರೇವಣ್ಣ ಅವರಿಗೆ ರಿಲೀಫ್‌ ಸಿಕ್ಕಿಲ್ಲ.

    ರೇವಣ್ಣ ಪರ ವಕೀಲರು ಹೇಳಿದ್ದೇನು..?: ಪ್ರಕರಣ ಗಂಭೀರತೆ ವಿಚಾರವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆಗೆ ಎಸ್ ಪಿ ಪಿ ಜಗದೀಶ್‌ ಮನವಿ ಮಾಡಿದರು. ಇದಕ್ಕೆ ರೇವಣ್ಣ ಪರ ವಕೀಲ ಮೂರ್ತಿ ನಾಯ್ಕ್‌ ಆಕ್ಷೇಪಣೆ ವ್ಯಕ್ತಪಡಿಸಿದರು. ನಿರ್ದಿಷ್ಟ ಪ್ರಕರಣಗಳಿಗೆ ಮಾತ್ರ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸುವುದಾಗಿದೆ ಆದರೆ ಇಲ್ಲಿ ಅಂತಹ ದೊಡ್ಡ ಪ್ರಕರಣ ಏನಿಲ್ಲ ಎಂದು ತಿಳಿಸಿದರು.

    ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಇದ್ದಾರೆ ಎಂದು ಆರೋಪಿಸಿ ವಾದ ಮುಂದುವರಿಸಿದ ರೇವಣ್ಣ ಪರ ವಕೀಲರು, FIR ಅಲ್ಲಿ ಇರುವ ಸಾರಾಂಶದ ಬಗ್ಗೆ ವಿವರಣೆ ನೀಡಿದ್ದಾರೆ. ಪ್ರಕರಣವನ್ನು ಅನಗತ್ಯವಾಗಿ ವಿಜೃಂಭಿಸಲು SIT ಪ್ರಯತ್ನ ಮಾಡುತ್ತಿದೆ. ಈ ಪ್ರಕರಣದಲ್ಲಿ ನಾವು ಏನನ್ನೂ ಮುಚ್ಚಿಡುವ ಅಗತ್ಯವಿಲ್ಲ. ಸತೀಶ್ ಹೇಳಿಕೆ ಮತ್ತು ಎಫ್ ಐ ಆರ್ ಅಲ್ಲಿ ಇರುವ ಅಂಶಗಳಿಗು ವ್ಯತ್ಯಾಸ ಇದೆ. ನಿನ್ನೆ ಎಫ್ ಐ ಆರ್ ಮಾಡ್ತಾರೆ. ಇಂದು ವಿಚಾರಣೆಗೆ ಬನ್ನಿ ಅಂತಾರೆ ಅದರಿಂದಲೇ ಎಸ್ ಐಟಿ ಉದ್ದೇಶ ಏನು ಅಂತ ಗೊತ್ತಾಗ್ತಾ ಇದೆ. ಇವತ್ತು ಶನಿವಾರ ಬೇರೆ ವಿಚಾರಣೆಗೆ ಕರೆಸಿ ಬಲವಂತದ ಕ್ರಮ ಮಾಡಿದ್ರೆ ಎಂಬುದೇ ಆತಂಕವಾಗಿದೆ. ದೂರುದಾರನ ಹೇಳಿಕೆ ಬಿಟ್ಟರೆ ಬೇರೆ ಏನೂ ಇಲ್ಲ. ತಡರಾತ್ರಿ ತರಾತುರಿಯಲ್ಲಿ ಎಫ್ಐಆರ್ ದಾಖಲಾಗಿದೆ. ನಾನ್ ಬೇಲೆಬಲ್ ಸೆಕ್ಷನ್ ಹಾಕಿ ಎಫ್ಐಆರ್ ದಾಖಲು ಮಾಡಿದ್ದಾರೆ. ಅಲ್ಲದೇ ತಕ್ಷಣ ಮತ್ತೆ 41 A ಯಲ್ಲಿ ನೊಟೀಸ್ ನೀಡಿದ್ದಾರೆ. ನಿನ್ನೆ ನಾನ್ ಬೇಲೆಬಲ್ ಸೆಕ್ಷನ್ ಹಾಕಿಲ್ಲ ಅಂದಿದ್ರು. ಆದರೆ ರಾತ್ರಿ ಇನ್ನೊಂದು ನಾನ್ ಬೇಲೆಬಲ್ ಸೆಕ್ಷನ್ FIR ಹಾಕಿದ್ದಾರೆ. ಅಲ್ಲದೇ ಇವತ್ತು ಶನಿವಾರ ಅಂತಾ ನೋಡಿಕೊಂಡು ನೊಟೀಸ್ ನೀಡಿದ್ದಾರೆ ಎಂದು ರೇವಣ್ಣ ಪರ ವಕೀಲ ಕೆಲ ನ್ಯಾಯಾಲಯದ ಆದೇಶಗಳನ್ನು ವಿವರಿಸಿದರು.

    ಕಿಡ್ನಾಪ್ ಪ್ರಕರಣ ಆಗಬೇಕಾದರೆ ಹಲ್ಲೆ, ಹಣಕ್ಕೆ ಬೇಡಿಕೆ ಇರಬೇಕು. ಈ ಪ್ರಕರಣದಲ್ಲಿ ಈ ರೀತಿಯಲ್ಲಿ ನಡೆದೇ ಇಲ್ಲ. ಹೀಗಾಗಿ ಕಿಡ್ನಾಪ್ ಸೆಕ್ಷನ್ ಅಪ್ಲೈ ಆಗುವುದೇ ಇಲ್ಲ. 365 ಕೂಡ 7 ವರ್ಷ ಶಿಕ್ಷೆ & ದಂಡದ ಬಗ್ಗೆ ಹೇಳತ್ತೆ.. ಇದು ಬೇಲೆಬಲ್.‌ ಆದರೆ ಇಲ್ಲಿ 364A ಹಾಕಲಾಗಿದೆ. ಈ ಸೆಕ್ಷನ್ ಡೆತ್ ಸೆಂಟೆನ್ಸ್ ವರೆಗೂ ಶಿಕ್ಷೆ ಆಗಿರುತ್ತದೆ. ಆದರೆ ಇಲ್ಲಿ ರೇವಣ್ಣ ವಿರುದ್ಧ ಅಂತ ಗಂಭೀರ ಆರೋಪಗಳು ಇಲ್ಲ. ಬೇರೆ ಆರೋಪಿ ಹೇಳಿದ್ದಾರೆ ಅನ್ನೋ ಅಂಶಕ್ಕೆ ಈ ರೀತಿ ಹಾಕಲಾಗಿದೆ. ರೇವಣ್ಣ ವಿರುದ್ಧ ಕಿಡ್ನಾಪ್ ಆರೋಪಕ್ಕೆ ಯಾವುದೆ ಸಾಕ್ಷಿ ಇಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು.  ಇದನ್ನೂ ಓದಿಪ್ರಜ್ವಲ್ ಅಂತಹ ಸ್ವಭಾವದ ಹುಡುಗ ಅಲ್ಲ: ಜಿ.ಎಸ್ ಬಸವರಾಜ್

    ಆರೋಪಿ ಪ್ರಭಾವಿಯಾಗಿದ್ದು, ಯಾವುದೇ ಹಂತಕ್ಕೂ ಹೋಗಿ ತಿರುಚಬಹುದು ಅಂತಾ ಬರೆಯಲಾಗಿದೆ. ಲೀಗಲ್ ಸಿಸ್ಟಮ್ ನೇ ಅವರ ತಿರುಚಬಹುದೆಂದು ಉಲ್ಲೇಖಿಸಿದ್ದಾರೆ. ಮತ್ತೊಬ್ಬ ಆರೋಪಿ ಅನೇಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇವರು ರೇವಣ್ಣನ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೋ, ಅವರ ಪುತ್ರನ ಬಗ್ಗೆಯೋ.? ಎಂದು ಎಸ್ಐಟಿ ಆಕ್ಷೇಪಣೆಗೆ ರೇವಣ್ಣ ಪರ ವಕೀಲರು ಪ್ರತಿವಾದ ಮಂಡಿಸಿದರು. ಇವರು ಆಕ್ಷೇಪಣೆ ರೇವಣ್ಣನ ಬಗ್ಗೆ ಸಲ್ಲಿಸಬೇಕಿತ್ತು. ಆದರೆ ಇಲ್ಲಿ ಪ್ರಜ್ವಲ್ ರೇವಣ್ಣ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೇ ಆ ಪ್ರಕರಣಕ್ಕೂ ಇದಕ್ಕೂ ಲಿಂಕ್ ಇದೆ ಎಂದಿದ್ದಾರೆ. ಇಲ್ಲಿ ಇದು ಹೇಗೆ ಅಪ್ಲೇ ಆಗತ್ತೆ ಎಂದು ರೇವಣ್ಣ ಪರ ವಕೀಲರು ವಾದಿಸಿದರು.

    ಪೊಲೀಸ್ರು ಸರ್ಕಾರದ ಏಜೆಂಟ್ ಗಳಲ್ಲ. ಅದನ್ನ ಬಳಸಿ ಆರೋಪಿಗೆ ಕಿರುಕುಳ, ಟಾರ್ಚರ್ ಮಾಡುವಂತಿಲ್ಲ. ಈ ಅಂಶಗಳ ಆಧಾರದ ಮೇಲೆ ಆಗ ನಿರೀಕ್ಷಣಾ ಜಾಮೀನನ್ನ ನೀಡಿತ್ತು. ಸುಪ್ರೀಂ ಕೋರ್ಟ್ ನ ಆದೇಶದ ಅಂಶಗಳ ಉಲ್ಲೇಖ ಮಾಡಿ, ಈ ಪ್ರಕರಣದಲ್ಲಿ ಹೀಗೆ ಆಗುತ್ತಾ ಇಲ್ಲ ಎಂದು ಹೇಳಿದರು. ಇದೇ ವೇಳೆ ಬಂಧನದ ರಕ್ಷಣೆ ಕೋರಿದ ರೇವಣ್ಣ ಪರ ವಕೀಲರು, ಜಾಮೀನು ನೀಡಿದ್ರೆ ಒಂದು ಒಂದು ಕ್ಷಣ ಹೆಚ್‌ಚೂ, ಕಡಿಮೆ ಆಗದಂತೆ 5:30ಕ್ಕೆ ಎಸ್ ಐಟಿ ಮುಂದೆ ಇರ್ತಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಪ್ರಕರಣ ಇದೆ ಸರಿ. ಆದರೆ ಕಿಡ್ನ್ಯಾಫ್ ಪ್ರಕರಣದಲ್ಲಿ ಪ್ರಜ್ವಲ್ ಆರೋಪಿ ಅಲ್ಲ. ಎಲ್ಲರ ಗಮನ ಪ್ರಜ್ವಲ್ ರೇವಣ್ಣ ಮೇಲಿದೆ. ರೇವಣ್ಣಗೆ ಜಾಮೀನು ‌ನೀಡಿ ಎಂದು‌ ಕೋರ್ಟ್‌ಗೆ ರೇವಣ್ಣ ಪರ ವಕೀಲ ಮೂರ್ತಿ ಡಿ ನಾಯ್ಕ್ ಮನವಿ ಮಾಡಿಕೊಂಡರು.

    ಎಸ್‌ಐಟಿ ಪರ ವಕೀಲರ ವಾದವೇನು..?: ಬಳಿಕ ಎಸ್ ಪಿ ಪಿ ಜಗದೀಶ್ ವಾದ ಮಂಡಿಸಿ, ಎಸ್ ಐಟಿ ಯ ಮೊದಲ ಆದ್ಯತೆ ಇರುವುದು ಸಂತ್ರಸ್ತೆಯನ್ನು ಹುಡುಕಾಟ ಮಾಡೋದಾಗಿದೆ. ಸಂತ್ರಸ್ತೆಯ ಸುರಕ್ಷತೆ ಮೊದಲು ಆಗಬೇಕಿದೆ. ಆಕೆ ಎಲ್ಲಿದ್ದಾಳೆ ಅನ್ನೋದು ಗೊತ್ತಾಗ್ತಾ ಇಲ್ಲ. ಸಂತ್ರಸ್ತೆಯ ಮಗ ತುಂಬಾ ಆತಂಕ ವ್ಯಕ್ತಪಡಿಸ್ತಾ ಇದ್ದಾನೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆ ಬಡ ಮಹಿಳೆ ಎಲ್ಲಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ದುರದೃಷ್ಟಕರ ಎಂದರೆ ಈಗ ನಾಪತ್ತೆ ಆಗಿರುವ ಮಹಿಳೆಯ ಫೋಟೋ ವಿಡಿಯೋ ಬಹಿರಂಗ ಆಗಿದೆ. ಆಕೆಗೆ ಏನಾಗಿದೆ ಅನ್ನೋದು ನಮ್ಮ ಆತಂಕವಾಗಿದೆ. 2ಸಾವಿರಕ್ಕೂ ಹೆಚ್ಚು ವೀಡಿಯೋಗಳು ಎಂದು ಹೇಳಲಾಗುತ್ತಿದೆ. ಅವುಗಳಲ್ಲಿ ಒಬ್ಬರು ಈ ಅಪಹರಣಕ್ಕೆ ಒಳಗಾಗಿರುವ ಮಹಿಳೆ‌ಯಾಗಿದ್ದಾರೆ ಎಂದು ತಿಳಿಸಿದರು.

    ಸಂತ್ರಸ್ತೆಯ ಮಗ ನನ್ನ ತಾಯಿ ರೇವಣ್ಣ ಅವರು ಕಿಡ್ನಾಪ್ ಮಾಡಿಸಿದ್ದಾರೆ ಅಂತ ಹೇಳಿದ್ದಾರೆ.‌ ಪೊಲೀಸರ ಮುಂದೆ ಹೇಳಿಕೆ ನೀಡಬಾರದು, ಯಾವುದೇ ದೂರನ್ನು ಕೊಡಬಾರದು ಅಂತ ಈ ಮೊದಲೇ ಬೆದರಿಕೆ ಹಾಕಿದ್ದಾರೆ. ಪ್ರಕರಣ ದಾಖಲಾಗುವ ಮುನ್ನವೇ ಬೆದರಿಕೆ ಹಾಕಲಾಗಿದೆ. ಆ ಮಹಿಳೆ ಜೀವಂತವಾಗಿ ಇದ್ದಾಳೆ ಎಂದು ನಾವು ನಂಬಿದ್ದೇವೆ. ನಾವು ಹೆಚ್ಚಾಗಿ ಹೇಳಿದ್ರೆ ಆಕೆಗೆ ನಾವು ಮಾಡಿದ ಅವಮಾನ ಆಗುತ್ತೆ. ಹೀಗಾಗಿ ನಾನು ಆಕೆಯ ಬಗ್ಗೆ ನಾನು ಹೆಚ್ಚು ಹೇಳಿ ವಾದಿಸುವುದಿಲ್ಲ ಎಂದು ಹೇಳಿದರು.

    ಒಟ್ಟಿನಲ್ಲಿ ಹೆಚ್.ಡಿ.ರೇವಣ್ಣ ಅಥವಾ ಪ್ರಜ್ವಲ್ ವಿರುದ್ಧ ಯಾವುದೇ ಮಹಿಳೆ ದೂರು ಅಥವಾ ಹೇಳಿಕೆ ನೀಡಿದ್ರೆ ಇದೇ ರೀತಿ ಆಗುತ್ತದೆ ಎಂಬ ಸಂದೇಶ ರವಾನಿಸಲು ಈ ಕಿಡ್ನಾಪ್ ಮಾಡಿಸಲಾಗಿದೆ. ಆರೋಪಿ ರಾಜಕೀಯವಾಗಿ ಹಣಕಾಸಿನಲ್ಲಿ ಬಲಾಡ್ಯ ವ್ಯಕ್ತಿ. ಸಾಕ್ಷಿಗಳ ಮೇಲೆ ಅಲ್ಲ, ದೂರುದಾರ ಮೇಲೂ ಪ್ರಭಾವ ಬೀರಲಿದ್ದಾರೆ. ಇನ್ನೂ ಪ್ರಕರಣ ಪ್ರಾಥಮಿಕ ಹಂತದಲ್ಲಿ ಇದೆ ಈ ಸಂದರ್ಭದಲ್ಲಿಯೇ ಜಾಮೀನು ನೀಡೋದು ಸೂಕ್ತ ಅಲ್ಲ. ಯುಪಿ, ಬಿಹಾರದಲ್ಲಿ ನಡೆಯುವ ರೀತಿ ಜನರನ್ನ ಎದರಿಸಲು ಈ ಹಂತಕ್ಕೆ ಆರೋಪಿಗಳು ಹೋಗಿದ್ದಾರೆ. ಜನರನ್ನ/ಸಂತ್ರಸ್ತೆಯರನ್ನ ರಕ್ಷಿಸುವುದು ಸರ್ಕಾರ/ಎಸ್ಐಟಿ ಕರ್ತವ್ಯ. ಈ ಪ್ರಕರಣಲ್ಲಿ ನಿರೀಕ್ಷಣಾ ಜಾಮೀನು ನೀಡಲು ಯೋಗ್ಯವಲ್ಲ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ಕೂಡ ಮಂಜೂರು ಮಾಡಬಾರದು ಎಂದು ತಿಳಿಸಿದರು. ಬಳಿಕ ಮತ್ತೆ ರೇವಣ ಪರ ವಕೀಲರು ವಾದ ಮುಂದುವರಿಸಿದರು. ನಿರಂತರ 1 ಗಂಟೆ 40 ನಿಮಿಷಗಳ ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶವನ್ನು ಕೆಲಕಾಲ ಕಾಯ್ದಿರಿಸಿದರು.

  • ಕಿಡ್ನಾಪ್ ಕೇಸ್- ಸಂತ್ರಸ್ತೆಯ ರಕ್ಷಿಸಿ ಬೆಂಗಳೂರಿಗೆ ಕರೆತರುತ್ತಿರುವ ಎಸ್‍ಐಟಿ

    ಕಿಡ್ನಾಪ್ ಕೇಸ್- ಸಂತ್ರಸ್ತೆಯ ರಕ್ಷಿಸಿ ಬೆಂಗಳೂರಿಗೆ ಕರೆತರುತ್ತಿರುವ ಎಸ್‍ಐಟಿ

    ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಮೈಸೂರಿನ ಕೆ.ಆರ್‌ ನಗರದ ಸಂತ್ರಸ್ತೆಯನ್ನು (K.R Nagar Victim Woman) ಇದೀಗ ರಕ್ಷಿಸಲಾಗಿದೆ.

    ಮೈಸೂರು ಜಿಲ್ಲೆ ಹುಣಸೂರು ಬಳಿಯ ರೇವಣ್ಣ ಆಪ್ತನ ಕಾಳೇನಹಳ್ಳಿ ತೋಟದ ಮನೆಯಿಂದ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಎಸ್‍ಪಿ ಸೀಮಾ ಲಾಠ್ಕರ್ ತಂಡದಿಂದ ಮಹಿಳೆಯನ್ನು ರಕ್ಷಿಸಲಾಗಿದ್ದು, ಸದ್ಯ ಎಸ್‍ಐಟಿ ತಂಡ ಬೆಂಗಳೂರಿಗೆ ಕರೆತರುತ್ತಿದೆ.

    ಪ್ರಕರಣ ಸಂಬಂಧ ಹೆಚ್.ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡುವೆಯೇ ಕೆ.ಆರ್.ನಗರದ ಮಹಿಳೆಯ ಹುಡುಕಾಟ ಚುರುಕಾಗಿತ್ತು. ಮಹಿಳೆಯನ್ನು ಅಪಹರಿಸಿ ಎಲ್ಲಿ ಇಟ್ಟಿರಬಹುದು ಎಂಬ ವಿಚಾರದಲ್ಲಿ ತನಿಖೆ ಚುರುಕುಗೊಂಡಿತ್ತು. ಇದೀಗ ಸಂತ್ರಸ್ತೆ ಹಲ್ಲೆಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿವರೆಗೂ ಶಿರಾದಲ್ಲಿದ್ದು, ಅಲ್ಲಿಂದ ಹಣಸೂರಿಗೆ ಶಿಫ್ಟ್ ಮಾಡಲಾಗಿದೆ. ಇಂದು ಎಸ್‌ಐಟಿ ಅಧಿಕಾರಿಗಳು ತೋಟದ ಮನೆಗೆ ದಾಳಿ ಮಾಡುತ್ತಿದ್ದಂತೆಯೇ ಆರೋಪಿಗಳು ಎಸ್ಕೇಪ್‌ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ಹೆಚ್.ಡಿ.ರೇವಣ್ಣ ನಿವಾಸಕ್ಕೆ ಎಸ್‍ಐಟಿ ತಂಡ – ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು

    ಹೆಚ್.ಡಿ.ರೇವಣ್ಣ ನಿವಾಸಕ್ಕೆ ಎಸ್‍ಐಟಿ ತಂಡ – ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು

    ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ (H.DRevanna) ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಆರಂಭಿಸಿರುವ ಎಸ್‍ಐಟಿ (SIT) ಅಧಿಕಾರಿಗಳು, ಹೊಳೆನರಸೀಪುರದ  (Holenarasipur) ಅವರ ನಿವಾಸದಲ್ಲಿ ಸಂತ್ರಸ್ತೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

    ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಸಂತ್ರಸ್ತ ಮಹಿಳೆಯ ಅಪಹರಣ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ರೇವಣ್ಣ ವಿರುದ್ಧ ಆರೋಪಿಸಿರುವ ಮಹಿಳೆಯ ಸಮ್ಮುಖದಲ್ಲಿ, ಅಡುಗೆ ಮನೆ, ಬೆಡ್ ರೂಂ ಹಾಗೂ ಸ್ಟೋರ್‌ ರೂಮ್‌ನಲ್ಲಿ ಮಹಜರು ನಡೆಸಿದ್ದಾರೆ. ಮನೆಯಲ್ಲಿ ಭವಾನಿ ರೇವಣ್ಣ ಇಲ್ಲದ ವೇಳೆ ಈ ಮೂರು ಕಡೆ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

    ಡಿವೈಎಸ್‍ಪಿ ಸತ್ಯ ನಾರಾಯಣ್ ಸಿಂಗ್, ಸುಮರಾಣಿ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಆಗಮಿಸಿರುವ ಎಸ್‍ಐಟಿ ತಂಡ ಪರಿಶೀಲನೆ ನಡೆಸುತ್ತಿದೆ. ಮನೆಯಲ್ಲಿ ಹೆಚ್.ಡಿ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಇದ್ದು, ಮನೆಯ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಮನೆ ದೇವರು ಈಶ್ವರನ ಪ್ರಸಾದ ತಂದ ಅರ್ಚಕ

    ಸ್ಥಳ ಮಹಜರು ವೇಳೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಪೊಲೀಸರು, ಇನ್ಸ್‌ಪೆಕ್ಟರ್‌ ಸುರೇಶ್‍ಕುಮಾರ್ ಹಾಗೂ ಸಬ್‍ಇನ್ಸ್‍ಪೆಕ್ಟರ್ ಅಜಯ್‍ಕುಮಾರ್ ಎಸ್‍ಐಟಿ ತಂಡಕ್ಕೆ ಸಹಕಾರ ನೀಡಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸರು ಮನೆಯಲ್ಲಿದ್ದ ಸಿಪಿಯು, ಮಾನೀಟರ್, ಪ್ರಿಂಟರ್‌ನ್ನು ವಶಕ್ಕೆ ಪಡೆದಿದ್ದಾರೆ.

    ಏನಿದು ಪ್ರಕರಣ?
    ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳ ಪೆನ್‍ಡ್ರೈವ್ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆಯರು ಮಹಿಳಾ ಆಯೋಗದ ಮೊರೆ ಹೋಗಿದ್ದು, ಸರ್ಕಾರ ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಮಾಡಿತ್ತು. ಇದಾದ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣ ವಿರುದ್ಧ ಸಹ ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆಯ ಅಪಹರಣದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಎಸ್‍ಐಟಿ ತನಿಖೆ ನಡೆಸುತ್ತಿದೆ. ಇನ್ನೂ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದು, ಅವರಿಗೆ ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೇ ರೇವಣ್ಣ ಸಹ ವಿದೇಶಕ್ಕೆ ತೆರಳುವ ಶಂಕೆಯ ಮೇಲೆ ಅವರ ಮೇಲೂ ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಸಂತ್ರಸ್ತ ಮಹಿಳೆಯರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಿ: ಸಿಎಂ ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಪತ್ರ

  • ರೇವಣ್ಣಗೆ ಸದ್ಯಕ್ಕಿಲ್ಲ ಬಂಧನ ಭೀತಿ- ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್

    ರೇವಣ್ಣಗೆ ಸದ್ಯಕ್ಕಿಲ್ಲ ಬಂಧನ ಭೀತಿ- ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್

    ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್‌ ಪಡೆದಿದ್ದಾರೆ.

    ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ರೇವಣ್ಣ ಪರ ವಾದ ಮಂಡಿಸಿದ ವಕೀಲರು, ಬಲವಂತದ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದರು.

    ಎಸ್ಐಟಿ ಪರವಾಗಿ ಎಸ್ಪಿಪಿ ಜಗದೀಶ್ ವಾದ ಮಂಡಿಸಿ, ಸೆಕ್ಷನ್‌ 376 ಸೇರ್ಪಡೆ ಮಾಡಿಲ್ಲ. 376 ಅಲ್ಲದೆ ಬೇರೆ ಯಾವುದು ನಾನ್ ಬೇಲೆಬಲ್ ಸೆಕ್ಷನ್ ಹಾಕಲ್ಲ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದರು.

    ರೇವಣ್ಣ ಅವರು ಮನೆಗೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದರು. ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

  • ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು!

    ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು!

    ಮೈಸೂರು: ಮಗನ ಪೆನ್‍ಡ್ರೈವ್ ಪ್ರಕರಣದಿಂದ ಆರಂಭವಾಗಿ ಇದೀಗ ಅಪ್ಪನಿಗೂ ಸಂಕಷ್ಟ ಎದುರಾಗಿದೆ. ಪೆನ್‍ಡ್ರೈವ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ.

    ಎಚ್.ಡಿ ರೇವಣ್ಣ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದೆ. ಹೀಗಾಗಿ ಇದೀಗ ರೇವಣ್ಣ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಪೆನ್‌ಡ್ರೈವ್‌ ಪ್ರಕರಣ ಸದ್ದು ಮಾಡ್ತಿದ್ದಂತೇ ಅಭಿಮಾನಿಯಿಂದ ಪ್ರಜ್ವಲ್‌ಗೆ ಗೆಲುವಿನ ಶುಭಾಶಯ!

    ಸಂತ್ರಸ್ತೆ ಪುತ್ರ ರೇವಣ್ಣ ಹಾಗೂ ಸತೀಶ್ ಬಾಬಣ್ಣ ಎಂಬಿಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಭವಾನಿ ಅಕ್ಕ ಕರೆಯುತ್ತಿದ್ದಾರೆ ಅಂತ ಬಾಬಣ್ಣ ಎಂಬಾತ ಮನೆಗೆ ಬಂದು ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಂದಿನಿಂದ ನನ್ನ ತಾಯಿ ನಾಪತ್ತೆಯಾಗಿದ್ದಾರೆ . ಪೊಲೀಸರು ಕೇಳಿದರೆ ನಮಗೇನು ಗೊತ್ತಿಲ್ಲ ಎಂದು ಹೇಳಿದ್ರು. ಬಳಿಕ ಪೊಲೀಸರ ಮೇಲೆಯೂ ಒತ್ತಡ ಹಾಕಿದ್ರು ಅಂತ ದೂರಿನಲ್ಲಿ ತಿಳಿಸಿದ್ದಾರೆ.

    ಈಗಾಗಲೇ ಮನೆಗೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹೆಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಬೆಳಗ್ಗೆ 11:30ಕ್ಕೆ ಈ ಅರ್ಜಿಯ ವಿಚಾರಣೆ ನಡೆಸಲಿದೆ. ಇತ್ತ ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಅರ್ಜಿಯನ್ನು ಎಸ್‍ಐಟಿ ಸಲ್ಲಿಕೆ ಮಾಡಿದೆ. ಒಟ್ಟಿನಲ್ಲಿ ಇಂದು ರೇವಣ್ಣಗೆ ನಿರೀಕ್ಷಣಾ ಜಾಮೀನು ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

  • ಪೆನ್‌ಡ್ರೈವ್‌ ಪ್ರಕರಣ ಸದ್ದು ಮಾಡ್ತಿದ್ದಂತೇ ಅಭಿಮಾನಿಯಿಂದ ಪ್ರಜ್ವಲ್‌ಗೆ ಗೆಲುವಿನ ಶುಭಾಶಯ!

    ಪೆನ್‌ಡ್ರೈವ್‌ ಪ್ರಕರಣ ಸದ್ದು ಮಾಡ್ತಿದ್ದಂತೇ ಅಭಿಮಾನಿಯಿಂದ ಪ್ರಜ್ವಲ್‌ಗೆ ಗೆಲುವಿನ ಶುಭಾಶಯ!

    ಹಾಸನ: ಲೋಕಸಭಾ ಚುನಾವಣೆಯ ಅಬ್ಬರದ ನಡುವೆ ಕೆಲ ದಿನಗಳಿಂದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳು ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ನಡುವೆ ಅಭಿಮಾನಿಯೊಬ್ಬ ಪ್ರಜ್ವಲ್‌ ರೇವಣ್ಣಗೆ ಶುಭಾಶಯಗಳನ್ನು ತಿಳಿಸಿದ್ದಾನೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿರುವ ಪ್ರಜ್ವಲ್‌ ರೇವಣ್ಣಗೆ ಅಭಿಮಾನಿ ಶುಭಾಶಯಗಳನ್ನು ತಿಳಿಸಿ ಪತ್ರ ಬರೆದಿದ್ದಾನೆ. ಈ ಪತ್ರ ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ಕಚೇರಿ ಬಾಗಿಲ ಬಳಿ ಸಿಕ್ಕಿದೆ.

    ಪತ್ರದಲ್ಲೇನಿದೆ..?: ನೀವು ಈಗಾಗಲೇ ಹಾಸನ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದೀರಿ. ಈ ಸಲವೂ ತಾವುಗಳೇ ಚುನಾಯಿತರಾಗುತ್ತೀರಿ ಎಂದು ನಾನು ನಂಬುತ್ತೇನೆ. ಇನ್ನು ಮುಂದೆಯೂ ಹಾಸನ ಮತ್ತು ಕರ್ನಾಟಕಕ್ಕೆ ತಮ್ಮಿಂದ ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಕುಷ್ಟಗಿ ಮೂಲದ ಶಂಕರಗೌಡ ಎಂಬವರು ಪತ್ರದಲ್ಲಿ ತಿಳಿಸಿದ್ದಾರೆ.

    ಲೋಕಸಭಾ ಚುನಾವಣೆಗೆ ಮೊದಲನೇ ಹಂತದ ಮತದಾನ ಮುಗಿಯುತ್ತಂದೆಯೇ ಸಂಸದರ ಅಶ್ಲೀಲ ವೀಡಿಯೋ ಪ್ರಕರಣ ಸದ್ದು ಮಾಡಿದೆ. ವೀಡಿಯೋ ಕುರಿತು ಸುದ್ದಿಯಾಗುತ್ತಿದ್ದಂತೆಯೇ ಸಂಸದರು ವಿದೇಶಕ್ಕೆ ಹಾರಿದ್ದಾರೆ. ಇತ್ತ ಪ್ರಕರಣವನ್ನು ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದೆ. ಈಗಾಗಲೇ ತನಿಖೆಗಿಳಿದಿರುವ ಎಸ್‌ಐಟಿ ಅಧಿಕಾರಿಗಳು ತನಿಖೆಗೆ ಹಾಜರಾಗುವಂತೆ ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣಗೆ ನೋಟಿಸ್‌ ನೀಡಿದೆ. ಆದರೆ ಇಬ್ಬರೂ ವಿಚಾರಣೆಗೆ ಹಾಜರಾಗಿಲ್ಲ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ಹಿಂಪಡೆಯಲು ಕೋರ್ಟ್‌ನಿಂದ ಯಾವುದೇ ಆದೇಶ ಬಂದಿಲ್ಲ: MEA

    ಈ ನಡುವೆ ಪ್ರಜ್ವಲ್‌ ರೇವಣ್ಣ ಸಮಯ ಕೇಳಿದ್ದಾರೆ. ಹೀಗಾಗಿ ಇದೀಗ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಇತ್ತ ಮನೆಗೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಈ ಅರ್ಜಿಯ ವಿಚಾರಣೆ ನಡೆಸಲಿದೆ.

  • SIT ವಿಚಾರಣೆ ಎದುರಿಸಿ, ಕಾನೂನು ಹೋರಾಟ ಮಾಡಿ – ಹೈಕಮಾಂಡ್ ಖಡಕ್ ವಾರ್ನಿಂಗ್

    SIT ವಿಚಾರಣೆ ಎದುರಿಸಿ, ಕಾನೂನು ಹೋರಾಟ ಮಾಡಿ – ಹೈಕಮಾಂಡ್ ಖಡಕ್ ವಾರ್ನಿಂಗ್

    – ಹೊಂದಾಣಿಕೆ ಅಷ್ಟೇ ಸಮರ್ಥನೆಯಿಲ್ಲ, ಸಹಾಯವೂ ಇಲ್ಲ ಎಂದಿತಾ ಹೈಕಮಾಂಡ್?
    – ಮಹಿಳೆಯರಿಗೆ ಅನ್ಯಾಯ ಆಗೋದನ್ನು ಬಿಜೆಪಿ ಸಹಿಸಲ್ಲ: ಅಮಿತ್ ಶಾ

    ಬೆಂಗಳೂರು: ಸದ್ಯ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ (Prajwal Pendrive Case) ದೇಶವ್ಯಾಪಿಯಾಗಿ ಸದ್ದು ಮಾಡುತ್ತಿದೆ. ಈ ನಡುವೆ ಕಾನೂನು ಮೀರದಂತೆ ಬಿಜೆಪಿ ಹೈಕಮಾಂಡ್‌ನಿಂದ (BJP Highcommand) ಖಡಕ್ ಸಂದೇಶ ರವಾನೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಹೌದು. ಎಸ್‌ಐಟಿ ವಿಚಾರಣೆ (SIT Investigation) ಎದುರಿಸಿ, ಕಾನೂನು ಹೋರಾಟ ಮಾಡಿಕೊಳ್ಳಿ, ಮೊದಲು ವಿದೇಶದಿಂದ ಪ್ರಜ್ವಲ್‌ರನ್ನ ವಾಪಸ್ ಕರೆಸಿಕೊಳ್ಳಿ ಎಂದು ಜೆಡಿಎಸ್ ವರಿಷ್ಠರಿಗೆ (JDS Leaders) ಸಂದೇಶ ನೀಡಲಾಗಿದೆ. ರಾಜಕೀಯ ಹೊಂದಾಣಿಕೆ ಅಷ್ಟೇ.. ಸಮರ್ಥನೆಯೂ ಇಲ್ಲ.. ಸಹಾಯವೂ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಕಟ್ಟುನಿಟ್ಟಿನ ವಾರ್ನಿಂಗ್ ನೀಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಕೇಸ್- SIT ಮುಂದೆ ಸಂತ್ರಸ್ತೆಯರು ಕಣ್ಣೀರು

    ಬಿಜೆಪಿ ಹೈಕಮಾಂಡ್ ಸಂದೇಶದ ಬೆನ್ನಲ್ಲೇ ಕಾನೂನು ಹೋರಾಟಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಜ್ಜಾಗುತ್ತಿದ್ದಾರೆ, ಕಾನೂನು ಹೋರಾಟದ ಬಗ್ಗೆ ದೇವೇಗೌಡರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ವಿದೇಶದಿಂದ ಪುತ್ರನ ಕರೆಸಿಕೊಳ್ಳಲು ನಿರ್ಧಾರ ಮಾಡಿರುವ ರೇವಣ್ಣ, ವಕೀಲರ ತಂಡದೊಂದಿಗೂ ಚರ್ಚೆ ಮಾಡಿದ್ದಾರೆ. ಎಸ್‌ಐಟಿ ವಿಚಾರಣೆಗೆ ಹಾಜರಾಗುವ ಮುನ್ನ ಕೋರ್ಟ್ ಮೊರೆ ಹೋಗುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ – ಹಾಸ್ಯನಟ ಶ್ಯಾಮ್ ರಂಗೀಲಾ

    ಅಮಿತ್ ಶಾ ಹೇಳಿದ್ದೇನು?
    ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾವು ಚುನಾವಣೆಗಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಮಹಿಳೆಗೂ ಅನ್ಯಾಯವಾಗಲು ಬಿಜೆಪಿ ಬಿಡುವುದಿಲ್ಲ. ಸರ್ಕಾರ ನಿಮ್ಮದು, ಕ್ರಮ ತಗೆದುಕೊಳ್ಳಬೇಕಾದವರು ನೀವು. ಒಕ್ಕಲಿಗರ ಪ್ರದೇಶ ಮತದಾನ ಆಗುವವರೆಗೂ ಸುಮ್ಮನೆಯಿದ್ದು, ಎಲ್ಲವೂ ಗೊತ್ತಿದ್ದು, ಯಾವುದೇ ಕ್ರಮಕ್ಕೂ ಮುಂದಾಗದೇ, ರಾಜಕೀಯ ಉದ್ದೇಶಕ್ಕಾಗಿ ಸುಮ್ಮನಿದ್ದು, ಅವರಿಗೆ ಓಡಲು ಅವಕಾಶ ಮಾಡಿಕೊಟ್ಟವರು ನೀವು. ನಿಮಗೆ ಧೈರ್ಯವಿದ್ದರೆ ಜನರಿಗೆ ತಿಳಿಸಿ. ನಿಮ್ಮ ತಪ್ಪಿನಿಂದಾಗಿ ಮಹಾ ಅಪರಾಧವಾಗಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಈ ರೀತಿಯ ಅಪರಾಧ ಮಾಡಿದವರಿಗೆ ಕಠಿಣಾಧಿಕಠಿಣ ಶಿಕ್ಷೆ ನೀಡಬೇಕು. ನಮ್ಮ ಮೇಲೆ ನೀವು ಆರೋಪ ಮಾಡುತ್ತೀರಾ ಎಂದು ಸಿಎಂ ಹಾಗೂ ಡಿಸಿಎಂ ವಿರುದ್ಧ ಹರಿಹಾಯ್ದಿದ್ದರು.

  • ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋದ ರೇವಣ್ಣ; ಮನೆಯಲ್ಲೇ ಅಗ್ನಿಕುಂಡ ನಿರ್ಮಿಸಿ ಹೋಮ!

    ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋದ ರೇವಣ್ಣ; ಮನೆಯಲ್ಲೇ ಅಗ್ನಿಕುಂಡ ನಿರ್ಮಿಸಿ ಹೋಮ!

    ಹಾಸನ: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಎ1 ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರು ಸದ್ಯ ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋಗಿದ್ದಾರೆ. ಹೊಳೆನರಸೀಪುರದ ತಮ್ಮ ಮನೆಯಲ್ಲಿ ಅಗ್ನಿಕುಂಡ ನಿರ್ಮಿಸಿ ಮನೆದೇವರಿಗೆ ವಿಶೇಷ ಪೂಜೆ (Speical Pooja) ಸಲ್ಲಿಸಿದ್ದಾರೆ.

    ಬೆಳ್ಳಂಬೆಳಗ್ಗೆಯೇ ದೇವಸ್ಥಾನಕ್ಕೆ (Hassan Temple) ಭೇಟಿ ನೀಡಿದ್ದ ಮಾಜಿ ಸಚಿವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಎಲ್ಲ ಸಂಕಷ್ಟಗಳು ದೂರವಾಗಲೆಂದು ಮೆನಯಲ್ಲೇ ಅಗ್ನಿಕುಂಡ ನಿರ್ಮಿಸಿ ಹೋಮ ನೆರವೇರಿಸಿದ್ದಾರೆ. ನಂತರ ಬೆಂಗಳೂರಿಗೆ ತೆರಳಿದ್ದಾರೆ. ಇದನ್ನೂ ಓದಿ: ತಕ್ಷಣವೇ ವಿಚಾರಣೆಗೆ ಹಾಜರಾಗಿ- ಪ್ರಜ್ವಲ್, ಹೆಚ್.ಡಿ ರೇವಣ್ಣಗೆ ಎಸ್‍ಐಟಿ ನೋಟಿಸ್

    ಪ್ರಕರಣದ ಎ1 ಆರೋಪಿ:
    ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ವಿರುದ್ಧವೂ ದೌರ್ಜನ್ಯ ಆರೋಪ ಕೇಳಿಬಂದಿದೆ. ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆಯೇ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌; ಸಂತ್ರಸ್ತರಿಗೆ ನೆರವಾಗದ ಪೊಲೀಸರು!

    ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಜ್ವಲ್‌ ಮತ್ತು ಹೆಚ್‌ಡಿ ರೇವಣ್ಣ ಇಬ್ಬರ ವಿರುದ್ಧವೂ ದೂರು ದಾಖಲಾಗಿದೆ. ದೂರಿನ ಆಧಾರದಲ್ಲಿ ಎಫ್‌ಐಆರ್‌ನಲ್ಲಿ ಹೆಚ್.ಡಿ.ರೇವಣ್ಣ ಎ1 ಮತ್ತು ಪ್ರಜ್ವಲ್‌ ರೇವಣ್ಣ ಎ2 ಆರೋಪಿಯಾಗಿದ್ದಾರೆ. 354 A, 354 D, 509 ಅಡಿ ಪ್ರಕರಣ ದಾಖಲಾಗಿದೆ. 2015 ರಲ್ಲಿ ಹೆಚ್.ಡಿ ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ದೂರು ನೀಡಿದ್ದಾರೆ. ತಂದೆ ಮತ್ತು ಮಗನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

    ಈ ಹಿನ್ನೆಲ್ಲಿ ಪ್ರಕರಣದ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡ ಇಬ್ಬರಿಗೂ ನೋಟಿಸ್‌ ಜಾರಿಗೊಳಿಸಿದೆ. ಅಲ್ಲದೇ ಈಗಾಗಲೇ 32 ಮತ್ತು 8 ಜಿಬಿಯ ಎರಡು ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

  • ನಾಮಪತ್ರ ಸಲ್ಲಿಕೆ ದಿನಾಂಕ ಮುಕ್ತಾಯ – ಹಾಸನದಲ್ಲಿ ಹೆಚ್‌.ಡಿ ರೇವಣ್ಣ, ಪ್ರಜ್ವಲ್‌ ರೇವಣ್ಣ ಸೇರಿ 29 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

    ನಾಮಪತ್ರ ಸಲ್ಲಿಕೆ ದಿನಾಂಕ ಮುಕ್ತಾಯ – ಹಾಸನದಲ್ಲಿ ಹೆಚ್‌.ಡಿ ರೇವಣ್ಣ, ಪ್ರಜ್ವಲ್‌ ರೇವಣ್ಣ ಸೇರಿ 29 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

    ಹಾಸನ: ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಗುರುವಾರ ಅಂತ್ಯಗೊಂಡಿದ್ದು, ಹಾಸನ ಕ್ಷೇತ್ರದಲ್ಲಿ ಒಟ್ಟು 29 ನಾಮಪತ್ರಗಳು ಸಲ್ಲಿಕೆಯಾಗಿವೆ.

    ಪ್ರಜ್ವಲ್ ಆರ್‌. (ಜೆಡಿಎಸ್‌), ಜೆಕೆ ಚಿಕ್ಕಯ್ಯ (ಪಕ್ಷೇತರ), ಬಿ.ಎನ್ ಸುರೇಶ್ (ಪಕ್ಷೇತರ), ಶ್ರೇಯಸ್ ಎಂ. ಪಟೇಲ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಬಿ.ಎನ್ ಹೇಮಂತ್ ಕುಮಾರ್ (ಪಕ್ಷೇತರ), ಜಿ.ಎನ್ ಆನಂದ್ (ಭಾರತೀಯ ಡಾ.ಬಿ.ಆರ್ ಅಂಬೇಡ್ಕರ್ ಜನತಾಪಕ್ಷ), ಎಸ್.ಕೆ ನಿಂಗರಾಜ (ಬಹುಜನ್ ಭಾರತ್ ಪಾರ್ಟಿ), ಪರಮೇಶ ಎನ್.ಎಂ. (ಪಕ್ಷೇತರ), ಸಿದ್ಧಾಭೋವಿ (ಪಕ್ಷೇತರ), ಶೇಖ್ ಅಹಮದ್ (ನವರಂಗ್ ಕಾಂಗ್ರೆಸ್) ಶಿವರಾಜ್ ಬಿ. (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ್) ಅವರು ಗುರುವಾರ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ.

    ಇದುವರೆಗೆ ನಾಮಪತ್ರಗಳನ್ನು ಸಲ್ಲಿಸಿರುವ ಇತರೆ ಅಭ್ಯರ್ಥಿಗಳು:
    ದೇವರಾಜಾಚಾರಿ ಎಂ.ವೈ. (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಆರ್.ಜಿ. ಸತೀಶ್ (ಪಕ್ಷೇತರ), ಎಚ್.ಡಿ. ರೇವಣ್ಣ (ಪೂರ್ವಾಂಚಲ ಮಹಾಪಂಚಾಯತ್ ಪಕ್ಷ), ಗಂಗಾಧರ ಡಿ.ಎಸ್. (ಬಹುಜನ ಸಮಾಜ ಪಕ್ಷ), ಹೊಳೆಯಪ್ಪ ಜಿ (ಲೋಕ್ ಶಕ್ತಿ), ಎಂ. ಮಹೇಶ್ ಉರ್ಫ್ ಹರ್ಷ(ಪಕ್ಷೇತರ), ಬಸವರಾಜು ಜೆ.ಡಿ. (ಪಕ್ಷೇತರ), ಸಂತೋಷ್ ಬಿ.ಎನ್. (ಅಖಿಲ ಭಾರತ ಹಿಂದೂ ಮಹಾಸಭಾ), ಪ್ರತಾಪ ಕೆ.ಎ. (ಉತ್ತಮ ಪ್ರಜಾಕೀಯ ಪಾರ್ಟಿ), ಕೆ.ಆರ್. ಗಂಗಾಧರ (ಪಕ್ಷೇತರ). ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.8 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಏ.26 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ.

  • ರೇವಣ್ಣ ಆಪ್ತನ ಕಿಡ್ನ್ಯಾಪ್ ಯತ್ನ ಕೇಸ್ – ಇನ್ಸ್‌ಪೆಕ್ಟರ್‌ಗೆ ಭೂಗತ ಪಾತಕಿ ಲಿಂಕ್

    ರೇವಣ್ಣ ಆಪ್ತನ ಕಿಡ್ನ್ಯಾಪ್ ಯತ್ನ ಕೇಸ್ – ಇನ್ಸ್‌ಪೆಕ್ಟರ್‌ಗೆ ಭೂಗತ ಪಾತಕಿ ಲಿಂಕ್

    ಬೆಂಗಳೂರು: ಹೆಚ್.ಡಿ ರೇವಣ್ಣ (H.D Revanna) ಆಪ್ತ ಅಶ್ವಥ್ ನಾರಾಯಣ್ ಗೌಡನ ಅಪಹರಣ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಎಸ್‍ಡಿ ಇನ್ಸ್‌ಪೆಕ್ಟರ್ (Inspector) ಅಶೋಕ್ ಭೂಗತ ಪಾತಕಿ ಬಾಂಬೆ ರವಿ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.

    ಬಾಂಬೆ ರವಿ ಹಾಗೂ ಆತನ ಸಹಚರರನ್ನು ಬಳಸಿಕೊಂಡು ಹಫ್ತಾ ವಸೂಲಿ, ಬಡ್ಡಿ ವ್ಯವಹಾರ ಹಾಗೂ ಬೆದರಿಕೆ ಹಾಕಿರುವ ಆರೋಪ ಕೂಡ ಇನ್ಸ್‌ಪೆಕ್ಟರ್ ಅಶೋಕ್ ವಿರುದ್ಧ ಕೇಳಿ ಬಂದಿದೆ. ರೇವಣ್ಣ ಆಪ್ತನ ಅಪಹರಣ ಯತ್ನ ಪ್ರಕರಣದಲ್ಲಿ ಲೊಕೇಷನ್ ಸೇರಿದಂತೆ ಪ್ರತಿ ವಿಚಾರದಲ್ಲೂ ಆರೋಪಿಗಳಿಗೆ ಇನ್ಸ್‌ಪೆಕ್ಟರ್ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೇ ನಿರ್ಮಾಪಕ ಉಮಾಪತಿ ಗೌಡ ಹಾಗೂ ಉದ್ಯಮಿ ದೀಪಕ್ ಗೌಡ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲೂ ಇನ್ಸ್‌ಪೆಕ್ಟರ್ ಪಾತ್ರ ಇರುವ ಶಂಕೆ ಇದೆ. ಇದನ್ನೂ ಓದಿ: ನಾವೆಲ್ಲ ಗೆಲ್ಲುವುದು ಮೋದಿ ಹೆಸರಿಂದ, ಮೋದಿಯೇ ನಮ್ಮ ದೇವರು: ಪ್ರತಾಪ್ ಸಿಂಹ

    ಉಮಾಪತಿ ಗೌಡ ಕೇಸಲ್ಲಿ ಅರೆಸ್ಟ್ ಆಗಿದ್ದ ರೌಡಿ ಶೀಟರ್ ಸಂತು ಹಾಗೂ ಕರಿಯಾ ರಾಜೇಶ್ ಆರೋಪಿ ಅಶೋಕ್‍ಗೆ ಹುಟ್ಟುಹಬ್ಬದ ಶುಭಾಶಯದ ಸ್ಟೇಟಸ್ ಹಾಕಿಕೊಂಡಿದ್ದರು. ಅಲ್ಲದೇ ಇನ್ಸ್‌ಪೆಕ್ಟರ್‌ಗೆ ಪ್ರಮೋಷನ್ ಆದಾಗ ಸಹ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಇದೇ ಕಾರಣಕ್ಕೆ ಈ ಪ್ರಕರಣಗಳಲ್ಲಿ ಆತನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

    ಈ ಹಿಂದೆ ಸಿಸಿಬಿಯಲ್ಲಿ (CCB) ಇನ್ಸ್‌ಪೆಕ್ಟರ್ ಆಗಿದ್ದ ಅಶೋಕ್, ರೌಡಿಗಳ ಜೊತೆ ಲಿಂಕ್ ಬೆಳೆಸಿಕೊಂಡು ಸಮಾಜಘಾತುಕ ಶಕ್ತಿಗಳ ಜೊತೆ ಸೇರಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈ ಬಂಟ ಬರ್ಬರ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]