Tag: ಹೆಚ್ ಡಿ ರೇವಣ್ಣ

  • ಮಂಡ್ಯದಲ್ಲಿ ಜೆಡಿಎಸ್ ಫ್ಲೆಕ್ಸ್‌ಗಳಿಂದ ಹೆಚ್.ಡಿ ರೇವಣ್ಣ ಕಿಕ್ ಔಟ್!

    ಮಂಡ್ಯದಲ್ಲಿ ಜೆಡಿಎಸ್ ಫ್ಲೆಕ್ಸ್‌ಗಳಿಂದ ಹೆಚ್.ಡಿ ರೇವಣ್ಣ ಕಿಕ್ ಔಟ್!

    ಮಂಡ್ಯ: ಜೆಡಿಎಸ್ ಫ್ಲೆಕ್ಸ್ ಗಳಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ (HD  DeveGowda)) ಹಿರಿಯ ಮಗ ಹೆಚ್.ಡಿ ರೇವಣ್ಣ ಅವರನ್ನು ಕಿಕ್ ಔಟ್ ಮಾಡಲಾಗಿದೆ.

    ಹೌದು. ಕುಮಾರಸ್ವಾಮಿ (hD Kumaraswamy) ಕೇಂದ್ರ ಸಚಿವರಾದ ಬಳಿಕ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಜೆಡಿಎಸ್‍ನಿಂದ ಬೃಹತ್ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಆದರೆ ಈ ಫ್ಲೆಕ್ಸ್ ಗಳಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಫೋಟೋವೇ ಇಲ್ಲ. ಈ ಮೂಲಕ ಮುಜುಗರದಿಂದ ಪಾರಾಗಲು ದಳಪತಿಗಳು ಕ್ರಮ ಕೈಗೊಂಡ್ರಾ ಎಂಬ ಪ್ರಶ್ನೆ ಎದ್ದಿದೆ.

    ಫ್ಲೆಕ್ಸ್ ಗಳಲ್ಲಿ ಜೆಡಿಎಸ್ ಮುಖಂಡರ ಜೊತೆಗೆ ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರ ಫೋಟೋಗಳನ್ನು ಬಳಸಲಾಗಿದೆ. ಜೊತೆಗೆ ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಹೆಚ್.ವಿಶ್ವನಾಥ್ ಫೋಟೋಗೂ ಪ್ಲೆಕ್ಸ್ ನಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ ರೇವಣ್ಣ (HD Revanna) ಫೋಟೋವನ್ನು ಮಾತ್ರ ಮಂಡ್ಯ ಜೆಡಿಎಸ್ ನಾಯಕರು ಕೈಬಿಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

    ಪಕ್ಷದಿಂದ ಉಚ್ಛಾಟನೆ ಮಾಡದಿದ್ರೂ ನಾಯಕರು ಅಂತರ ಕಾಯ್ದುಕೊಂಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ರೇವಣ್ಣ & ಫ್ಯಾಮಿಲಿ ಸಾಲು ಸಾಲು ಆರೋಪಗಳನ್ನು ಎದುರಿಸುತ್ತಿದೆ. ಕಿಡ್ನಾಪ್ ಕೇಸ್ ನಲ್ಲಿ ರೇವಣ್ಣ ಜೈಲಿಗೆ ಹೋಗಿ ಬಂದರೆ, ಪತ್ನಿ ಭವಾನಿ ರೇವಣ್ಣ ಜಾಮೀನು ಪಡೆದಿದ್ದಾರೆ. ಇನ್ನೊಂದೆಡೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದಾರೆ, ಮತ್ತೊಂದೆಡೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡಾ. ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಇದರಿಂದ ದೇವೇಗೌಡರ ಕುಟುಂಬದ ಜೊತೆಗೆ ಪಕ್ಷಕ್ಕೂ ಡ್ಯಾಮೇಜ್ ಆಗಿದೆ.

    ಈ ಡ್ಯಾಮೆಜ್ ಕಂಟ್ರೋಲ್ ಗೆ ರೇವಣ್ಣರಿಂದ ದಳಪತಿಗಳು ಅಂತರ ಕಾಯ್ದುಕೊಂಡಿದ್ದಾರೆ. ಈ ಹಿಂದೆ ಪಕ್ಷದ ಪ್ರತೀ ಫ್ಲೆಕ್ಸ್ ಗಳಲ್ಲೂ ರೇವಣ್ಣ ಫೋಟೋ ಕಡ್ಡಾಯವಾಗಿ ಇರುತ್ತಿತ್ತು. ರೇವಣ್ಣ ಜೊತೆಗೆ ಪ್ರಜ್ವಲ್, ಸೂರಜ್ ಫೋಟೋ ಕೂಡ ಬಳಸಲಾಗುತ್ತಿತ್ತು. ಒಟ್ಟಿನಲ್ಲಿ ಮಂಡ್ಯದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದ ರೇವಣ್ಣ ಕುಟುಂಬವನ್ನು ಇದೀಗ ದಳಪತಿಗಳು ದೂರ ಇಟ್ಟಿರುವುದು ಫ್ಲೆಕ್ಸ್ ವಿಚಾರದಲ್ಲಿ ಎದ್ದು ಕಾಣುತ್ತಿದೆ.

  • ರೇವಣ್ಣ ಕುಟುಂಬಕ್ಕೆ ಕಾನೂನು ಸಂಕಷ್ಟ – ಯಾರ ವಿರುದ್ಧ ಏನೇನು ಪ್ರಕರಣ?

    ರೇವಣ್ಣ ಕುಟುಂಬಕ್ಕೆ ಕಾನೂನು ಸಂಕಷ್ಟ – ಯಾರ ವಿರುದ್ಧ ಏನೇನು ಪ್ರಕರಣ?

    ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಇಡೀ ಕುಟುಂಬ (HD Revanna family) ಈಗ ಕಾನೂನು ಕಟ್ಟಳೆಯಲ್ಲಿ ಸಿಲುಕಿದೆ.

    ಕೆಲ ದಿನಗಳ ಹಿಂದೆಯಷ್ಟೇ ಪ್ರಜ್ವಲ್ ರೇವಣ್ಣ (Prajwal Revanna) ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎಂಬ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದರು. ಈ ಬೆನ್ನಲ್ಲೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavani Revanna) ಅವರಿಗೂ ಎಸ್‌ಐಟಿ ನೋಟಿಸ್ ಕೊಟ್ಟು ಬಂಧನಕ್ಕೆ ಮುಂದಾಗಿತ್ತು. ಅಷ್ಟರಲ್ಲಿ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹೆಚ್.ಡಿ ರೇವಣ್ಣ ಅವರ ಹಿರಿಯ ಪುತ್ರ ಸೂರಜ್ ರೇವಣ್ಣ (Suraj Revanna) ಅವರ ಬಂಧನವಾಗಿದೆ.

    ಯಾರ ವಿರುದ್ಧ ಏನು ಪ್ರಕರಣ?
    ರೇವಣ್ಣ, ಮಾಜಿ ಸಚಿವ
    ಆರೋಪ: ಕೆ.ಆರ್.ನಗರ ಮೂಲದ ಅತ್ಯಾಚಾರ ಸಂತ್ರಸ್ತೆ ಅಪಹರಣ
    ಜೈಲು ಶಿಕ್ಷೆ ಬಳಿಕ ಜಾಮೀನು

    ಭವಾನಿ, ರೇವಣ್ಣ ಪತ್ನಿ
    ಆರೋಪ: ಕೆ.ಆರ್.ನಗರ ಮೂಲದ ಅತ್ಯಾಚಾರ ಸಂತ್ರಸ್ತೆಗೆ ಬೆದರಿಕೆ
    ಎಸ್‌ಐಟಿ ನೋಟಿಸ್ ಬಳಿಕ ನಿರೀಕ್ಷಣಾ ಜಾಮೀನು

    ಪ್ರಜ್ವಲ್, ರೇವಣ್ಣ 2ನೇ ಮಗ
    ಆರೋಪ: ಅತ್ಯಾಚಾರ, ಲೈಂಗಿಕ ದೌರ್ಜನ್ಯ
    ಜೈಲು; ಸದ್ಯಕ್ಕೆ ಎಸ್‌ಐಟಿ ವಿಚಾರಣೆ

    ಸೂರಜ್, ರೇವಣ್ಣ ಮೊದಲ ಮಗ
    ಆರೋಪ: ಅಸಹಜ ಲೈಂಗಿಕ ದೌರ್ಜನ್ಯ
    ಹಾಸನ ಸೆನ್ ಪೊಲೀಸರಿಂದ ಬಂಧನ, ಸಿಐಡಿ ತನಿಖೆಗೆ ಕೇಸ್ ವರ್ಗ

    ರೇವಣ್ಣ ಕುಟುಂಬದ ಮೇಲೆ ಕಾನೂನು ಅಸ್ತ್ರ
    ರೇವಣ್ಣ – ಅಪಹರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಇದ್ದಾರೆ, ಕೆ.ಆರ್ ನಗರ ಪ್ರವೇಶ ಮಾಡುವಂತೆ ಇಲ್ಲ
    ಭವಾನಿ – ನಿರೀಕ್ಷಣಾ ಜಾಮೀನು – ಮೈಸೂರು ಹಾಸನ ಪ್ರವೇಶ ಇಲ್ಲ
    ಪ್ರಜ್ವಲ್ – 3 ಅತ್ಯಾಚಾರ ಪ್ರಕರಣ – ಸದ್ಯ ಸೋಮವಾರದ ವರೆಗೆ ಪೊಲೀಸ್ ಕಸ್ಟಡಿ – ಬಳಿಕ ಜೈಲು ಸಾಧ್ಯತೆ
    ಸೂರಜ್ – ಜಾಮೀನು ರಹಿತ ಪ್ರಕರಣದಲ್ಲಿ ಅರೆಸ್ಟ್, ತನಿಖೆ ಪ್ರಗತಿಯಲ್ಲಿದೆ.

  • ತಪ್ಪು ಮಾಡಿದ್ದರೆ ಸೂರಜ್ ಯಾಕೆ ದೂರು ಕೊಡೋಕೆ ಹೋಗ್ತಿದ್ರು? – ಹೆಚ್‌.ಡಿ ರೇವಣ್ಣ ಪ್ರಶ್ನೆ

    ತಪ್ಪು ಮಾಡಿದ್ದರೆ ಸೂರಜ್ ಯಾಕೆ ದೂರು ಕೊಡೋಕೆ ಹೋಗ್ತಿದ್ರು? – ಹೆಚ್‌.ಡಿ ರೇವಣ್ಣ ಪ್ರಶ್ನೆ

    ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿನಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್‌ ರೇವಣ್ಣ ಪರ ತಂದೆ ಹಾಗೂ ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಬ್ಯಾಟ್‌ ಬೀಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಅವರು, ನಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡ್ತಿದ್ದಾರೆ. ಹಾಸನದಲ್ಲಿ ಮೆಡಿಕಲ್ ಟೆಸ್ಟ್‌ (Medical Test) ಮಾಡಿಸದೇ ಬೆಂಗಳೂರಿಗೆ ಯಾಕೆ ಕರೆತಂದ್ರು? ಇದೇಲ್ಲ ನಮ್ಮನ್ನ ಹೆದರಿಸೋಕೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏಕದಿನ ವಿಶ್ವಕಪ್‌ ಸೋಲಿನ ಸೇಡು – ಬಲಿಷ್ಠ ಆಸೀಸ್‌ ವಿರುದ್ಧ ಅಫ್ಘಾನ್‌ಗೆ ಐತಿಹಾಸಿಕ ಗೆಲುವು!

    ಸೂರಜ್ ರೇವಣ್ಣ (Suraj Revanna) ಮೊದಲು ದೂರು ಕೊಟ್ಟಿರೋದು. ದೂರು ಕೊಟ್ಟ ಮೇಲೆ ಏನ್‌ ಮಾಡಿದ್ದಾರೆ. ತಪ್ಪು ಮಾಡಿದ್ರೇ ಸೂರಜ್ ಯಾಕೆ ದೂರು ಕೊಡೋಕೆ ಹೋಗ್ತಿದ್ರು? ಈಗ ಏನೂ ಹೇಳಲ್ಲ. ಟೈಂ ಬಂದಾಗ ಹೇಳ್ತೀನಿ. ನಾವು ತಪ್ಪು ಮಾಡಿದ್ರೇ ಓಡಿ ಹೋಗ್ತಿದ್ವಿ, ನಮ್ಮ ಕುಟುಂಬವನ್ನ ಯಾರು ಟಾರ್ಗೆಟ್ ಮಾಡ್ತಿದ್ದಾರೆ? ಅವೇಲ್ಲವನ್ನು ದೇವರಿಗೆ ಬಿಡ್ತೀನಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೋ ಹ್ಯಾಟ್ರಿಕ್‌ ಸಾಧನೆ – `ಪುಷ್ಪಕ್ʼ ಸೇಫ್‌ ಲ್ಯಾಂಡಿಂಗ್‌ ಪ್ರಯೋಗ ಯಶಸ್ವಿ!

    ಪೊಲೀಸರಿಗೆ ಸೂರಜ್‌ ಲಾಕ್‌ ಆಗಿದ್ದು ಹೇಗೆ?
    ತನ್ನ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದ ಸಂತ್ರನ ವಿರುದ್ಧ ಪ್ರತಿದೂರು ನೀಡಲು ಶನಿವಾರ ಸಂಜೆ 6 ಗಂಟೆ ವೇಳೆಗೆ ಹಾಸನದ ಸೆನ್‌ ಪೊಲೀಸ್‌ ಠಾಣೆಗೆ ತೆರಳಿದ್ದರು. ಅಲ್ಲಿಯೇ ಅವರನ್ನು ವಶಕ್ಕೆ ಪಡೆದ ಪೊಲೀಸರು ರಾತ್ರಿ ಸುಮಾರು 11:30ರ ವರೆಗೂ ವಿಚಾರಣೆ ನಡೆಸಿದ್ದರು. ಬಳಿಕ ಸೂರಜ್‌ ಜೊತೆಗೆ ನಿಗೂಢ ಸ್ಥಳಕ್ಕೆ ತೆರಳಿದ್ದ ಪೊಲೀಸರು ತಡರಾತ್ರಿ 1:30ರ ವರೆಗೂ ವಿಚಾರಣೆ ಮುಂದುವರಿಸಿದ್ದರು.

    ಪ್ರಕರಣದ ತನಿಖಾಧಿಕಾರಿ ಆಗಿರುವ ಸಕಲೇಶಪುರ ಡಿವೈಎಸ್‌ಪಿ ಪ್ರಮೋದ್‌ ಕುಮಾರ್‌ ಅವರು ಸೂರಜ್‌ ರೇವಣ್ಣ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಬೆಳಗ್ಗಿನ ಜಾವ ಅವರನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಸದ್ಯ ಅವರಿಗೆ ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಸಂಜೆ 4 ಗಂಟೆ ವೇಳೆಗೆ ಜಡ್ಜ್‌ ಮುಂದೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ – ಸಂತ್ರಸ್ತನಿಗಿಂದು ಬೆಂಗ್ಳೂರಲ್ಲಿ ಮೆಡಿಕಲ್‌ ಟೆಸ್ಟ್‌!

  • ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    ಬೆಂಗಳೂರು: ಕೆ.ಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ (Bhavani Revanna) ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆಯಾಗಿದೆ.

    ಕಿಡ್ನಾಪ್ ಪ್ರಕರಣದಲ್ಲಿ ಹೆಚ್‍ಡಿ ರೇವಣ್ಣ ಬಳಿಕ ಭವಾನಿ ರೇವಣ್ಣಗೂ ಸಂಕಷ್ಟ ಎದುರಾಗಿದೆ. ಸಂತ್ರಸ್ತೆಯ ಮಗ ಕೊಟ್ಟ ದೂರಿನಲ್ಲಿ ಭವಾನಿ ಹೆಸರು ಉಲ್ಲೇಖವಾಗಿದ್ದು, ಎಫ್‍ಐಆರ್ ದಾಖಲಾಗಿದೆ. ಈ ಸಂಬಂಧ ಎಸ್‍ಐಟಿ ಎರಡು ಬಾರಿ ನೋಟಿಸ್ ಕೊಟ್ಟರೂ ಉತ್ತರಿಸದೇ ಚಳ್ಳೆಹಣ್ಣು ತಿನ್ನಿಸುತ್ತಿರುವ ಭವಾನಿಗೆ ಬಂಧನದ ಭೀತಿ ಎದುರಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ಮೊರೆ ಹೋಗಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ಸೆಷನ್ಸ್ ಕೋರ್ಟ್, ನಾಳೆ (ಬುಧವಾರ) ಬೆಳಗ್ಗೆ 11 ಗಂಟೆಗೆ ಮುಂದೂಡಿದೆ.

    ಇತ್ತ ಎಸ್‍ಐಟಿ ಆಕ್ಷೇಪಣಾ ಅರ್ಜಿ ಸಲ್ಲಿಸೋಕೆ ಕಾಲಾವಕಾಶ ಕೇಳಿದೆ. ಭವಾನಿ ಅವರಿಗೆ ಮೂರು ನೋಟಿಸ್ ನೀಡಲಾಗಿದೆ. ಇದೂವರೆಗೂ ವಿಚಾರಣೆಗೆ ಹಾಜರಾಗಿಲ್ಲ ಅಂತ ಎಸ್‍ಪಿಪಿ ಜಗದೀಶ್ ವಾಡ ಮಂಡಿಸಿದ್ರು. ಭವಾನಿ ಈ ಪ್ರಕರಣದ ಆರೋಪಿ ಅಂತ ಎಫ್‍ಐಆರ್ ನಲ್ಲಿ ಇದ್ಯಾ ಅಂತ ಜಡ್ಜ್ ಪ್ರಶ್ನಿಸಿದ್ರು. ಇದೂವರೆಗೂ ಎಫ್‍ಐಆರ್ ಅಲ್ಲಿ ಇಲ್ಲ. ಇನ್ನು ದಿನದಿಂದ ದಿನಕ್ಕೆ ಆರೋಪಿಗಳ ಸಂಖ್ಯೆ ಹೆಚ್ಚಿಸ್ತಾ ಇದ್ದಾರೆ ಎಂದು ಸಂದೇಶ್ ಚೌಟ ಭವಾನಿ ಪರ ವಾದಿಸಿದ್ರು. ಎಸ್‍ಐಟಿ ಆಕ್ಷೇಪಣೆಗೆ ಕೋರಿದ ಕಾರಣ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯ್ತು.

  • ಧರ್ಮಸ್ಥಳದ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಹೆಚ್.ಡಿ ರೇವಣ್ಣ

    ಧರ್ಮಸ್ಥಳದ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಹೆಚ್.ಡಿ ರೇವಣ್ಣ

    -ಕಾನೂನಿನ ಬಗ್ಗೆ ಗೌರವ, ದೇವರ ಮೇಲೆ ನಂಬಿಕೆ ಇದೆ

    ಮಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D. Revanna) ಟೆಂಪಲ್ ರನ್ ಮುಂದುವರಿದಿದ್ದು, ಇಂದು (ಮೇ 27) ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala) ಮುಂಜುನಾಥ ಸ್ವಾಮಿ ದೇವಸ್ಥಾನಕ್ಕೆ (Sri Manjunatheshwara Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಒಂದು ಗಂಟೆಗಳ ಕಾಲ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲೇ ನಿಂತು ಸರ್ವ ಸೇವೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು (Veerendra Heggade) ಭೇಟೆಯಾಗಿ ಮಾತುಕತೆ ನಡೆಸಿದರು. ಇದನ್ನೂ ಓದಿ: ಮಧ್ಯರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ರೆಮಲ್ ಸೈಕ್ಲೋನ್ – ರೈಲು, ವಿಮಾನ ಹಾರಾಟ ಸ್ಥಗಿತ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಜುನಾಥ ಸ್ವಾಮಿಯ ದರ್ಶನಕ್ಕೆ ಯಾವಾಗಲೂ ಬರುತ್ತೇನೆ. ನಾನು ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ರಾಜಕಾರಣಿದಲ್ಲಿದ್ದೇನೆ. 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಾನೂನು ಬಗ್ಗೆ ಗೌರವವಿದೆ, ದೇವರ ಬಗ್ಗೆ ನಂಬಿಕೆಯಿದೆ. ಪ್ರಕರಣ ಕೋರ್ಟ್ ನಲ್ಲಿರುವುದರಿಂದ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಲ್ಲ. ಮಂಜುನಾಥ ಸ್ವಾಮಿ ಮೇಲೆ ನನಗೆ ನಂಬಿಕೆಯಿದೆ. ಸೋಮವಾರದ ವಿಶೇಷ ದಿನ ಮಂಜುನಾಥ ಸ್ವಾಮಿ ದರ್ಶನ ಮಾಡಿದ್ದೇನೆ. ರಾಜ್ಯದ ಜನತೆ ಬಗ್ಗೆ, ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

    ಹಾಸನ ಚಲೋ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲ. ದೇವೆಗೌಡರು ಪತ್ರ ಬರೆದಿರೋ ಬಗ್ಗೆಯೂ ಗೊತ್ತಿಲ್ಲ. ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಲ್ಲಿಂದ ಅವರು ತೆರಳಿದ್ದಾರೆ.

    ಭಾನುವಾರ (ಮೇ 26) ರಾತ್ರಿಯೇ ಧರ್ಮಸ್ಥಳಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಈಗಾಗಲೇ ಹಲವು ಪ್ರಮುಖ ದೇವಸ್ಥಾನಗಳಿಗೆ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅತ್ತಿಗೆಯಿಂದ ದೂರ ಇರಿ ಅಂದಿದ್ದಕ್ಕೆ ಮೈದುನನ ಕಲ್ಲಿನಿಂದ ಜಜ್ಜಿ ಕೊಲೆಗೈದ್ರು!

  • SIT ನೋಟಿಸ್‍ಗೆ ಭವಾನಿ ಡೋಂಟ್‍ಕೇರ್ ಇತ್ತ ಡ್ರೈವರ್ ಕೂಡ ನಾಪತ್ತೆ

    SIT ನೋಟಿಸ್‍ಗೆ ಭವಾನಿ ಡೋಂಟ್‍ಕೇರ್ ಇತ್ತ ಡ್ರೈವರ್ ಕೂಡ ನಾಪತ್ತೆ

    ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ವಿರುದ್ಧ ಮಹಿಳೆ ಅಪಹರಣ ಪ್ರಕರಣದಲ್ಲಿ ಈಗ ಎಸ್‍ಐಟಿ (SIT) ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ. ಒಂದೆಡೆ ಭವಾನಿ ರೇವಣ್ಣಗೆ (Bhavani Revanna) ನೋಟಿಸ್ ಕೊಟ್ಟರೂ ವಿಚಾರಣೆಗೆ ಬಂದಿಲ್ಲ. ಇನ್ನೊಂದೆಡೆ ಭವಾನಿ ಕಾರು ಚಾಲಕ ಕೂಡ ನಾಪತ್ತೆಯಾಗಿದ್ದಾರೆ.

    ನೋಟಿಸ್ ಕೊಟ್ರೂ ನೋ ಯೂಸ್: ಪ್ರಕರಣದಲ್ಲಿ ಭವಾನಿ ಅವರ ಪಾತ್ರದ ಬಗ್ಗೆ ತಿಳಿದುಕೊಳ್ಳೋದಕ್ಕಾಗಿ ಎಸ್‍ಐಟಿ ವಿಚಾರಣೆಗೆ ಕರೆದಿದೆ. ಈಗಾಗಲೇ 2 ನೋಟಿಸ್ ನೀಡಿದರು ಕೂಡ ಭವಾನಿ ರೇವಣ್ಣ ವಿಚಾರಣೆಗೆ ಬರೋದಿರಲ್ಲಿ ಎಸ್ ಐಟಿಯ ಸಂಪರ್ಕಕ್ಕೂ ಸಿಕ್ಕಿಲ್ಲ. ಅನಾರೋಗ್ಯದ ನೆಪದಿಂದ ಇದೂವರೆಗೂ ವಿಚಾರಣೆಗೆ ಹಾಜರಾಗಿಯೇ ಇಲ್ಲ. ಆದರೆ ಭವಾನಿ ಎಲ್ಲಿದ್ದಾರೆ…? ಭವಾನಿ ಯಾವಾಗ ವಿಚಾರಣೆಗೆ ಬರ್ತಾರೆ ಅಂತ ಕಾದುಕುಳಿತುಕೊಳ್ಳುವ ರೀತಿ ಆಗಿದೆ. ಇದನ್ನೂ ಓದಿ: ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿಗೆ ಸಿಎಂ 2ನೇ ಪತ್ರ- ಪ್ರಧಾನಿಗೆ ಬರೆದ ಲೆಟರ್‌ನಲ್ಲಿ ಏನಿದೆ?

    ಭವಾನಿ ಡ್ರೈವರ್ ನಾಪತ್ತೆ: ಇತ್ತ ಭವಾನಿ ರೇವಣ್ಣ ಡ್ರೈವರ್ ನಾಪತ್ತೆಯಾಗಿದ್ದಾನೆ. ಭವಾನಿ ರೇವಣ್ಣ ಡ್ರೈವರ್ ಅಜಿತ್ (Driver Ajit) ನಾಪತ್ತೆಯಾಗಿದ್ದು, ಎಸ್‍ಐಟಿ ಮೂರು ನೋಟಿಸ್ ಕೊಟ್ಟರು ಕೂಡ ವಿಚಾರಣೆಗೆ ಬಂದಿಲ್ಲ. ಇದೀಗ ಎಸ್‍ಐಟಿ ಪೊಲೀಸರು ಹೊಳೆನರಸೀಪುರ ಚಾಲಕ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ಜಾರಿ ಮಾಡಿದ್ದಾರೆ. ಕೆ.ಆರ್ ನಗರದ ಸಂತ್ರಸ್ತ ಮಹಿಳೆಯನ್ನು ತನ್ನದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಅನ್ನೋ ಮಾಹಿತಿಯ ಜೊತೆಗೆ ರೇವಣ್ಣ ನಿರೀಕ್ಷಣಾ ಜಾಮೀನು ವಿಚಾರಣೆ ದಿನ ಸಂತ್ರಸ್ತ ಮಹಿಳೆಯ ವೀಡಿಯೋ ಚಿತ್ರೀಕರಣ ಮಾಡಿದ್ದು ಇದೇ ಅಜಿತ್ ಅನ್ನೋ ಮಾಹಿತಿ ಇದೆ. ಹೀಗಾಗಿಯೇ ಅಜಿತ್ ನನ್ನು ಎಸ್‍ಐಟಿಯವರು ಹುಡುಕಾಟ ನಡೆಸಿದ್ದಾರೆ.

  • ಜಾಮೀನು ಸಿಕ್ಕರೂ ರೇವಣ್ಣಗೆ ತಪ್ಪಿಲ್ಲ ಸಂಕಷ್ಟ- ಹೈಕೋರ್ಟ್ ಮೆಟ್ಟಿಲೇರಿದ ಎಸ್‍ಐಟಿ

    ಜಾಮೀನು ಸಿಕ್ಕರೂ ರೇವಣ್ಣಗೆ ತಪ್ಪಿಲ್ಲ ಸಂಕಷ್ಟ- ಹೈಕೋರ್ಟ್ ಮೆಟ್ಟಿಲೇರಿದ ಎಸ್‍ಐಟಿ

    ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕರೂ ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಅವರಿಗೆ ಕಾನೂನು ಸಂಕಷ್ಟ ತಪ್ಪಿಲ್ಲ.

    ಹೌದು. ಜಾಮೀನು ಪಡೆದು ನಿರಾಳವಾಗಿದ್ದ ಹೆಚ್.ಡಿ ರೇವಣ್ಣಗೆ ವಿಶೇಷ ತನಿಖಾ ತಂಡ (SIT) ಶಾಕ್ ನೀಡಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಪಾಸ್‍ಪೋರ್ಟ್ ರದ್ದು ಮಾಡಲು ಚಿಂತನೆ

    ರೇವಣ್ಣ ಜಾಮೀನು ಆದೇಶ ವಜಾ ಮಾಡುವಂತೆ ಹೈಕೋರ್ಟ್‍ಗೆ ಎಸ್‍ಐಟಿ ಅರ್ಜಿ ಅಲ್ಲಿಸಿದೆ. ಹೈಕೋರ್ಟ್‍ನ ಜನಪ್ರತಿನಿಧಿಗಳ ಪೀಠಕ್ಕೆ ಅರ್ಜಿ ಸಲ್ಲಿಸಿದ ಎಸ್‍ಐಟಿ, ಕೆಳ ನ್ಯಾಯಾಲಯದ ಜಾಮೀನು ಆದೇಶ ರದ್ದು ಮಾಡುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ನಡೆಯುವ ವಾದ-ಪ್ರತಿಪಾದ ತೀವ್ರ ಕುತೂಹಲ ಕೆರಳಿಸಿದೆ.

    ಎಸ್‍ಐಟಿ ಪರ ಎಸ್‍ಪಿಪಿ ರವಿ ವರ್ಮಕುಮಾರ್ ಹಾಗೂ ರೇವಣ್ಣ ಪರ ಸಿವಿ ನಾಗೇಶ್ ವಾದ ಮಂಡಿಸುವ ಸಾಧ್ಯತೆಗಳಿವೆ. ಇನ್ನು ಎಸ್‍ಐಟಿ ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಗೆ ರೇವಣ್ಣ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಲೈಂಗಿಕ ದೌರ್ಜನ್ಯ ಪ್ರಕರಣ- ಹೆಚ್.ಡಿ ರೇವಣ್ಣಗೆ ಸಿಗುತ್ತಾ ಜಾಮೀನು?

    ಲೈಂಗಿಕ ದೌರ್ಜನ್ಯ ಪ್ರಕರಣ- ಹೆಚ್.ಡಿ ರೇವಣ್ಣಗೆ ಸಿಗುತ್ತಾ ಜಾಮೀನು?

    ಬೆಂಗಳೂರು: ಹೊಳೆನರಸೀಪುರ ಲೈಂಗಿಕ ದೌರ್ಜನ್ಯ (Sexual Assault Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಅವರಿಗೆ ಜಾಮೀನು ಅರ್ಜಿ ಭವಿಷ್ಯ ಇಂದು ನಿರ್ಧಾರವಾಗಲಿದೆ.

    ಮ್ಯಾಜಿಸ್ಟ್ರೇಟ್ 42 ರ ನ್ಯಾಯಾಧೀಶರು ಮುಖ್ಯ ಅರ್ಜಿಯ ತೀರ್ಪು ಪ್ರಕಟಿಸಲಿದ್ದಾರೆ. ಪ್ರಕರಣ ಸಂಬಂಧ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಇಬ್ಬರು ಎಸ್ ಪಿ ಪಿಗಳು ರೇವಣ್ಣಗೆ ಜಾಮೀನು ನೀಡದಂತೆ ಪ್ರಬಲ ವಾದ ಮಂಡಿಸಿದ್ದರು. ಎಸ್‍ಪಿಪಿಗಳ ವಾದಕ್ಕೆ ರೇವಣ್ಣ ಪರ ವಕೀಲ ಸಿ ವಿ ನಾಗೇಶ್ ಅವರು ಪ್ರಬಲ ಪ್ರತಿವಾದ ಸಲ್ಲಿಸಿದ್ದರು.

    ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಇಂದಿಗೆ ಇಂದಿಗೆ ಆದೇಶ ಕಾಯ್ದಿರಿಸಿದ್ದರು. ಸದ್ಯ ಮಧ್ಯಂತರ ಜಾಮೀನಿನ ಮೇಲಿರುವ ರೇವಣ್ಣಗೆ ಇಂದು ಜಾಮೀನು ಸಿಗುತ್ತಾ ಅಥವಾ ಮತ್ತೆ ಜೈಲು ಫಿಕ್ಸಾ ಎಂಬ ಕುತೂಹಲ ಮನೆ ಮಾಡಿದೆ. ಒಂದು ವೇಳೆ ಜಾಮೀನು ಸಿಕ್ಕರೆ ರೇವಣ್ಣಗೆ ಬಿಗ್ ರಿಲೀಫ್ ಸಿಗಲಿದೆ. ಇದನ್ನೂ ಓದಿ: ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ಎಸೆತ- ಪೊಲೀಸರಿಂದ ಬಿಗಿಭದ್ರತೆ

  • ಪೆನ್‌ಡ್ರೈವ್ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ – ಕೊನೆಗೂ ಮೌನ ಮುರಿದ ದೊಡ್ಡಗೌಡರು

    ಪೆನ್‌ಡ್ರೈವ್ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ – ಕೊನೆಗೂ ಮೌನ ಮುರಿದ ದೊಡ್ಡಗೌಡರು

    – ಪ್ರಜ್ವಲ್ ವಿರುದ್ಧ ಕ್ರಮ ತಗೆದುಕೊಳ್ಳಲು ನಮ್ಮ ತಕರಾರಿಲ್ಲ
    – ಸಂತ್ರಸ್ತ ಹೆಣ್ಣುಮ್ಕಳಿಗೆ ನ್ಯಾಯ ಸಿಗಬೇಕು ಎಂದ ಮಾಜಿ ಪ್ರಧಾನಿ

    ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ (Prajwal Revanna Case) ಬಗ್ಗೆ ಕೊನೆಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Deve Gowda) ಅವರು ಮೌನ ಮುರಿದಿದ್ದಾರೆ.

    ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಜೆಪಿ ನಗರ ಲಕ್ಷ್ಮಿ-ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಅವರ ಪ್ರಕಣದಲ್ಲಿ ಏನೇನು ನಡೆಯುತ್ತಿದೆ ಅನ್ನೋದು ಗೊತ್ತಿದೆ. ಪ್ರಕರಣ ಕೋರ್ಟ್‌ನಲ್ಲಿ ಇರೋದ್ರಿಂದ ನಾನು ಅದರ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ನಿವಾಸದ ಸಿಸಿಟಿವಿ ಟ್ಯಾಂಪರಿಂಗ್‌ ಮಾಡಲಾಗುತ್ತಿದೆ: ಸ್ವಾತಿ ಮಲಿವಾಲ್‌

    ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ. ಆದ್ರೆ ನೆಲದ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ. ಈ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ. ನಾನು ಯಾರ ಹೆಸರನ್ನೂ ಹೇಳಲ್ಲ. ಆದ್ರೆ ಯಾರೆಲ್ಲ ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

    ಅಲ್ಲದೇ ಈ ಪ್ರಕರಣದಲ್ಲಿ ಯಾರೆಲ್ಲಾ ಅಪಾಯಕ್ಕೆ ಸಿಲುಕಿದ್ದಾರೋ ಆ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು, ಜನತೆಗೆ ನ್ಯಾಯ ಸಿಗಬೇಕು ಎಂದು ಕುಮಾರಸ್ವಾಮಿ (HD Kumaraswamy) ಬಿಡಿಸಿ ಬಿಡಿಸಿ ಹೇಳಿದ್ದಾರೆ. ಪ್ರಜ್ವಲ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ಆದ್ರೆ ರೇವಣ್ಣ ಬಗ್ಗೆ ಮಾಡಿರೋ ಕೇಸ್ ಬಗ್ಗೆ ರಾಜ್ಯದ ಜನತೆ ನೋಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸದ್ಯ ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದೆ. ಆದ್ರೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಧ್ಯಂತರ ಜಾಮೀನನ್ನು ಸೋಮವಾರದವರೆಗೆ ಕೋರ್ಟ್‌ ಕಾಯ್ದಿರಿಸಿದೆ.

  • ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ

    ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ

    ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದ (Kidnap Case) ಆರೋಪ ಹೊತ್ತಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಾನೂನು ಬಿಟ್ಟು ನಾನೇನು ಮಾತನಾಡಲ್ಲ. ಕೈ ಮುಗಿಯುತ್ತೇನೆ ಬಿಟ್ಟು ಬಿಡಿ ಎಂದು ಗರಂ ಆದ ಘಟನೆ ವಿಧಾನಸೌಧದಲ್ಲಿ ನಡೆದಿದೆ‌.

    ವಿಧಾನಸಭೆಯ ಕಾಗದ ಪತ್ರ ಸಮಿತಿ ಅಧ್ಯಕ್ಷರಾಗಿರುವ ಹೆಚ್‌.ಡಿ ರೇವಣ್ಣ ಅವರಿಂದು ಸಮಿತಿಯ ಸಭೆಗೆ ವಿಧಾನಸೌಧಕ್ಕೆ (Vidhana Soudha) ಬಂದಿದ್ದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಮೌನವಾಗಿಯೇ ತೆರಳಿದ ರೇವಣ್ಣ, 15 ನಿಮಿಷಗಳಲ್ಲೇ ಕಾಗದ ಪತ್ರ ಸಮಿತಿ ಸಭೆ ಮುಗಿಸಿ ಹೊರಟರು.

    ಸದ್ಯ ರೇವಣ್ಣ ಅವರನ್ನು ಕಾಗದ ಪತ್ರ ಸಮಿತಿ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡುವಂತೆ ಮನವಿ ಸಹ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೇಶದ ಬೆಳವಣಿಗೆಗೆ ಸಾಕ್ಷಿಯಾಗಲು ತೃಪ್ತಿಕರವಾಗಿದೆ: ಮೋದಿ ಪ್ರತಿಕ್ರಿಯೆಗೆ ರಶ್ಮಿಕಾ ಸಂತಸ

    ವಿಧಾನಸೌಧದಿಂದ ವಾಪಾಸ್ ಹೋಗುವಾಗ, ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ರೇವಣ್ಣ ಅವರು, ಅಸಮಧಾನ, ಬೇಸರ, ಕೋಪದ ನಡುವೆಯೇ ನಾನು ಏನೂ ಮಾತಾಡಲ್ಲ, ಕಾನೂನು ಬಿಟ್ಟು ಏನೂ ಮಾತಾಡಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದು ಗರಂ ಆಗಿದ್ದಾರೆ. ಬಳಿಕ ಸಿಡುಕುತ್ತಲೇ ವಿಧಾನಸೌಧದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ