Tag: ಹೆಚ್ ಡಿ ರೇವಣ್ಣ

  • ಚುನಾವಣೆ ಬಗ್ಗೆ ಭವಿಷ್ಯ ನುಡಿಯಲು ಕೊರವಂಜಿಗಳಿದ್ದಾರೆ: ರೇವಣ್ಣ ವ್ಯಂಗ್ಯ

    ಚುನಾವಣೆ ಬಗ್ಗೆ ಭವಿಷ್ಯ ನುಡಿಯಲು ಕೊರವಂಜಿಗಳಿದ್ದಾರೆ: ರೇವಣ್ಣ ವ್ಯಂಗ್ಯ

    ಹಾಸನ: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಎಂಬ ಭವಿಷ್ಯ ನುಡಿಯಲು ನಮ್ಮಬಳಿ  ಕೊರವಂಜಿಗಳಿದ್ದಾರೆ ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್‍ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: 1.25 ಲಕ್ಷಕ್ಕೆ ಮಾರಾಟವಾದ ಎರಡು ಬಂಡೂರು ಟಗರು

    ಹಾಸನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಇದೇ ವೇಳೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಡಿಕೆಶಿ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ಚುನಾವಣೆ ಕುರಿತಾಗಿ ಭವಿಷ್ಯ ಹೇಳಲು ನಮ್ಮಬಳಿ ಮೂವರು ಕೊರವಂಜಿಗಳಿದ್ದಾರೆ. ದೊಡ್ಡವರ ಕಥೆ ನಾನೇನು ಹೇಳಲ್ಲ ಎಂದಿದ್ದಾರೆ. ಇದನ್ನೂ ಓದಿ: ಇಂದ್ರಜಿತ್‍ಗೆ ಬೆದರಿಕೆ ಕರೆ – ದರ್ಶನ್ ಹಿಂಬಾಲಕರ ವಿರುದ್ಧ ದೂರು

    ಸರ್ಕಾರ ಕೂಡಲೇ ಕೊರೊನಾ ಮೂರನೇ ಅಲೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಹಾಸನ ಜಿಲ್ಲಾಧಿಕಾರಿ ಈಗಾಗಲೇ ಮೂರನೇ ಅಲೆಗೆ ಏನುಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಟ್ಟಿದ್ದಾರೆ. ಆದರೆ ಸರ್ಕಾರ ಇದುವರೆಗೂ ಏನನ್ನೂ ಮಾಡಿಲ್ಲ. ಮೂರನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ಸರ್ಕಾರ ಕೂಡಲೇ ಎಲ್ಲಾ ಆಸ್ಪತ್ರೆಗಳಲ್ಲೂ ಕನಿಷ್ಟ ನೂರು ಬೆಡ್ ವ್ಯವಸ್ಥೆ ಮಾಡಬೇಕು. ಜಿಲ್ಲಾಧಿಕಾರಿಗಳು ಕಳುಹಿಸಿಕೊಟ್ಟಿರುವ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲಿಂಗಾಯತರ ಧೀಮಂತ ನಾಯಕ ಬಿಎಸ್‍ವೈಯನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ: ಎಂ.ಬಿ ಪಾಟೀಲ್

  • ಹಾಸನ ವಿಮಾನ ನಿಲ್ದಾಣ ರೇವಣ್ಣನವರ ಕುಟುಂಬದ ಒಕ್ಕಣೆ ಮಾಡುವ ಕಣವಲ್ಲ: ಪ್ರೀತಂ ಗೌಡ

    ಹಾಸನ ವಿಮಾನ ನಿಲ್ದಾಣ ರೇವಣ್ಣನವರ ಕುಟುಂಬದ ಒಕ್ಕಣೆ ಮಾಡುವ ಕಣವಲ್ಲ: ಪ್ರೀತಂ ಗೌಡ

    ಹಾಸನ: ಇಲ್ಲಿ ಕೇಳಿ ಸರ್. ಹಾಸನ ವಿಮಾನ ನಿಲ್ದಾಣ ರೇವಣ್ಣನವರದಲ್ಲ. ಅವರ ಕುಟುಂಬದ ಒಕ್ಕಣೆ ಮಾಡುವ ಕಣವೂ ಅಲ್ಲ. ಇದು ಹಾಸನದ ಆಸ್ತಿ. ವಿಮಾನ ನಿಲ್ದಾಣದ ವಿಚಾರದಲ್ಲಿ ತಜ್ಞರು ಏನು ಹೇಳುತ್ತಾರೆ ಅದನ್ನು ಮಾಡುತ್ತೇವೆ ಅಂತ ಮಾಜಿ ಸಚಿವ ಎಚ್.ಡಿ ರೇವಣ್ಣನವರ ವಿರುದ್ಧ ಶಾಸಕ ಪ್ರೀತಂ ಜೆ.ಗೌಡ ವಾಗ್ದಾಳಿ ನಡೆಸಿದರು.

    ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಇಂದು ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನದ ಏರ್‍ಪೋರ್ಟ್ ಅಂದರೆ ಅದು ಕೇವಲ ರೇವಣ್ಣನಿಗೆ ಮಾತ್ರ ಸೀಮಿತವಲ್ಲ. ಇನ್ನೂ ಅವರು ಒಕ್ಕಣೆ ಮಾಡುವ ಕಣವಲ್ಲ. ಇದು ಹಾಸನದ ಜನರ ಆಸ್ತಿ. ಹಿರಿಯರಾದ ದೇವೇಗೌಡರು ಸಿಎಂಗೆ ಮನವಿ ಮಾಡಿದ್ದರು. ಅವರ ನಿರ್ಧಾರದಂತೆ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದಾರೆ ಎಂದರು. ಇದನ್ನೂ ಓದಿ: ಲಿಂಗಾಯತರ ಧೀಮಂತ ನಾಯಕ ಬಿಎಸ್‍ವೈಯನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ: ಎಂ.ಬಿ ಪಾಟೀಲ್

    ಒಂದು ಬಾರಿ ಪ್ರಧಾನಿ ಮೂರು ಬಾರಿ ಸಿಎಂ ಆದ ಕುಟುಂಬದವರು ಯಾಕೆ ಏರ್ ಪೋರ್ಟ್ ಮಾಡಲಿಲ್ಲ..? ಅಧಿಕಾರ ಇದ್ದಾಗ ಮಾಡಲಿಲ್ಲ ಈಗ ಆ ರೀತಿ ಮಾಡಬೇಕು ಈ ರೀತಿ ಮಾಡಬೇಕು ಎಂದರೆ ಹೇಗೆ..? ರೇವಣ್ಣನವರು ಮಾತನಾಡುವುದಾದರೆ 20 ಸಾವಿರ ಜನ ಸೇರಿಸಿ ಮಾತನಾಡಲಿ. ಆಮೇಲೆ ನಾನು ಮಾತನಾಡುತ್ತೇನೆ. ತಜ್ಞರು ಏನು ಹೇಳುತ್ತಾರೆ ಆ ರೀತಿ ಸರ್ಕಾರ ಮಾಡುತ್ತದೆ. ಸುಖಾಸುಮ್ಮನೆ ಎಲ್ಲಾ ವಿಚಾರಕ್ಕೂ ತಲೆ ತೂರಿಸುವುದು ಸರಿಯಲ್ಲ ಅಂತ ಶಾಸಕ ಪ್ರೀತಂ ಗೌಡ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

    ಈ ಹಿಂದೆ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ರೇವಣ್ಣ, ಬಿಜೆಪಿ ಸರ್ಕಾರ ಈ ಹಿಂದೆ ನಿಗದಿಯಾದಂತೆ ವಿಮಾನ ನಿಲ್ದಾಣ ಕಾಮಗಾರಿ ಮಾಡದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.

  • ರಾಜ್ಯದ ಭೂಪಟದಲ್ಲಿ ಶಿವಮೊಗ್ಗ ಬಿಟ್ರೆ ಬೇರೆ ಜಿಲ್ಲೆ ಇಲ್ವೇ ಇಲ್ವಾ: ಸಿಎಂಗೆ ಹೆಚ್.ಡಿ ರೇವಣ್ಣ ಪ್ರಶ್ನೆ

    ರಾಜ್ಯದ ಭೂಪಟದಲ್ಲಿ ಶಿವಮೊಗ್ಗ ಬಿಟ್ರೆ ಬೇರೆ ಜಿಲ್ಲೆ ಇಲ್ವೇ ಇಲ್ವಾ: ಸಿಎಂಗೆ ಹೆಚ್.ಡಿ ರೇವಣ್ಣ ಪ್ರಶ್ನೆ

    ಹಾಸನ: ಮುಖ್ಯಮಂತ್ರಿ ಜಿಲ್ಲೆ ಶಿವಮೊಗ್ಗ ಒಂದಕ್ಕೆ 2019 ರಿಂದ ಇಲ್ಲಿಯವರೆಗೆ ನ್ಯಾಷನಲ್ ಹೈವೇ ಅಥಾರಿಟಿಯಿಂದ ಐದೂವರೆ ಸಾವಿರ ಕೋಟಿ ಕಾಮಗಾರಿ ನೀಡಲಾಗಿದೆ. ರಾಜ್ಯದ ಭೂಪಟದಲ್ಲಿ ಬೇರೆ ಜಿಲ್ಲೆಗಳು ಇಲ್ವೆ ಇಲ್ವಾ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಪ್ರಶ್ನಿಸಿದ್ದಾರೆ.

    ಬಿಜೆಪಿ ಎಂಪಿಗಳು ಇದರ ಬಗ್ಗೆ ಉಸಿರಾಡುತ್ತಿಲ್ಲ, ಟಿಎಡಿಎ, ಸಂಬಳಕ್ಕಾಗಿ ಓಡಾಡುತ್ತಿವೆ. ಶಿವಮೊಗ್ಗಕ್ಕೆ ಮಾತ್ರ ಅಚ್ಛೇ ದಿನ್ ಬಂದಿದೆ. ಆತ್ಮಸ್ಥೈರ್ಯ ಇದ್ದರೆ ಬಿಜೆಪಿಯ 25 ಸಂಸದರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

    ನಿತಿನ್ ಗಡ್ಕರಿ ಈಸ್ ಎ ಡೈನಾಮಿಕ್ ಲೀಡರ್, ಟಿ.ಆರ್.ಬಾಲು, ಗಡ್ಕರಿ ಇಬ್ಬರೂ ನಾನು ಕಂಡ ಉತ್ತಮ ಸಚಿವರು. ಬಿಜೆಪಿ ರಾಜ್ಯಾಧ್ಯಕ್ಷರಿಗೆ 10 ವರ್ಷದಿಂದ ಸಕಲೇಶಪುರದಿಂದ ಗುಂಡ್ಯ -ಬಿಸಿ ರೋಡ್ ಗೆ ರಸ್ತೆ ಮಾಡಿಸಲು ಆಗಿಲ್ಲ. ಮಂಗಳೂರಿನಿಂದ ವಿಮಾನದಲ್ಲಿ ಹೋಗುತ್ತಾರೆ. ರಸ್ತೆಯಲ್ಲಿ ಓಡಾಡಲು ಜನರು ಹರಸಾಹಸಪಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

     

    ಮುಖ್ಯಮಂತ್ರಿಗೆ ಜೈ ಅಂದವರಿಗೆ 850 ಕೋಟಿ ನೀರಾವರಿ ಕಾಮಗಾರಿಗೆ ಹಣ ನೀಡಿದ್ದಾರೆ. ಅಧಿಕಾರಿಗಳು ವರ್ಗಾವಣೆಗೆ ಹೆದರಿ ಬಿಜೆಪಿಯವರು ಹೇಳಿದಂತೆ ಕೇಳುತ್ತಾರೆ. ಮುಂದೊಂದು ದಿನ ಕೆಲವು ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ನಿಂಬೆಹಣ್ಣಿನ ಜ್ಯೂಸ್ ಮಾರುತ್ತಿದ್ದ ಮಹಿಳೆ ಇಂದು ಪೊಲೀಸ್

  • ಹತ್ತು ಲಕ್ಷ ಹಣದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಹೆಚ್‍ಡಿ.ರೇವಣ್ಣ, ಶಿವಲಿಂಗೇಗೌಡ

    ಹತ್ತು ಲಕ್ಷ ಹಣದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಹೆಚ್‍ಡಿ.ರೇವಣ್ಣ, ಶಿವಲಿಂಗೇಗೌಡ

    ಹಾಸನ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್, ಅರಸೀಕೆರೆ ನಗರಸಭೆಯ ಜೆಡಿಎಸ್ ಸದಸ್ಯರಿಗೆ 10 ಲಕ್ಷ ಹಣ ನೀಡಿ ಬಿಜೆಪಿಗೆ ಸೇರಲು ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿ, ಹತ್ತು ಲಕ್ಷ ಹಣದ ಸಮೇತ ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

    ಹಾಸನದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣ್ಣ, ಈ ಬಗ್ಗೆ ಸಿಬಿಐ ತನಿಖೆ ಮಾಡಬೇಕು. ಪೊಲೀಸ್ ದೂರು ಕೊಡುತ್ತೇವೆ. ಸುಪ್ರೀಂ ಕೋರ್ಟ್ ಗೆ ಹೋಗುತ್ತೇನೆ. ನಾಲ್ಕೈದು ತಿಂಗಳಿನಿಂದ ನಮ್ಮ ಸದಸ್ಯರಿಗೆ ಧಮ್ಕಿ ಹಾಕುತ್ತಿದ್ದಾರೆ. ಬಿಜೆಪಿಗೆ ಸೇರದೇ ಹೋದರೆ ನಿಮ್ಮನ್ನು ಮುಗಿಸುತ್ತೇನೆ ಅಂತಿದ್ದಾರೆ. ರಾಜ್ಯದಲ್ಲಿ ಕಾನೂನು ಇಲ್ಲ, ಅಧಿಕಾರಕ್ಕೋಸ್ಕರ ಏನು ಬೇಕಾದರು ಮಾಡುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ:ಕುಮಾರಸ್ವಾಮಿ ಅವರೇ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ: ರೇವಣ್ಣ

    ಬಿಜೆಪಿಗೆ ಸೇರಲು ಆಮಿಷ ಒಡ್ಡಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅವರ ಫೋನ್ ಕಾಲ್ ಗಳನ್ನು ಪರಿಶೀಲಿಸಬೇಕು. ಇದಕ್ಕೆ ಮುಖ್ಯಮಂತ್ರಿಯವರೇ ನೇರ ಹೊಣೆ. ಮುಖ್ಯಮಂತ್ರಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ರೇವಣ್ಣ ಆಗ್ರಹಿಸಿದರು.

    ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬಹುಮತ ಹೊಂದಿದ್ದರೂ ಮೀಸಲಾತಿ ಆಧಾರದ ಮೇಲೆ ಬಿಜೆಪಿಯವರು ಅಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ಜೆಡಿಎಸ್‍ನ ಏಳು ಜನ ನಗರಸಭೆ ಸದಸ್ಯರು ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಅವರಿಗೆಲ್ಲ ಹಣ ನೀಡಲಾಗಿದೆ ಎನ್ನುವುದು ರೇವಣ್ಣ ಮತ್ತು ಶಿವಲಿಂಗೇಗೌಡರ ಆರೋಪವಾಗಿದೆ.

  • ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ – ರೇವಣ್ಣ ಕಿಡಿ

    ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ – ರೇವಣ್ಣ ಕಿಡಿ

    ಹಾಸನ: ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ ಎಮದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಧಾನಿಗಳ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಆಕ್ರೋಶ ಹೊರಹಾಕಿದ ಅವರು, ಜಿಲ್ಲಾಧಿಕಾರಿಗಳನ್ನು ಕೂರಿಸಿಕೊಂಡು ಅವಮಾನ ಮಾಡಿದ್ದೀರಿ. ಯಾವ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೀರಿ. ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ. ಪ್ರಧಾನಿಗಳು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಬೇಕಿತ್ತು. ಪ್ರಧಾನಿ ಸಭೆ ಮಾಡಿ ಈ ರಾಜ್ಯದ ಬಗ್ಗೆ ಏನು ತಿಳಿದುಕೊಂಡ್ರು ಎಂದು ಪ್ರಶ್ನಿಸಿದರು.

    ಆ ಗೌರವ್‍ಗುಪ್ತಾ ಅವರ ಜೊತೆ ಮಾತನಾಡಿದ್ದಾರೆ. ಅವರಿಗೆ ಎಷ್ಟು ಫೋನ್ ಮಾಡಿದ್ರು ರಿಸೀವ್ ಮಾಡಲ್ಲ. ಅವರು ಫೋನ್ ರಿಸೀವ್ ಮಾಡಿದ್ರೆ ರಾಜಕೀಯ ನಿವೃತ್ತಿ ತಗೋತೀನಿ ಎಂದು ಚಾಲೆಂಜ್ ಹಾಕಿದ್ರು.

    ಎರಡು ತಿಂಗಳು ತೆಗೆದುಕೊಂಡು ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. 20 ಸಾವಿರ ರೈತರು ಅಂತಾರೆ. ಹಾಗಾದ್ರೆ ಅವರನ್ನು ಗುರುತಿಸಿರೋರು ಯಾರು..? ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ. ಇದು ಟೆಂಪ್ರವರಿ ಪ್ಯಾಕೇಜ್. ಒಬ್ಬರಿಗೆ ತಿಂಗಳಿಗೆ ಕನಿಷ್ಟ 5 ಸಾವಿರದಂತೆ ಪ್ಯಾಕೇಜ್ ಕೊಡಬೇಕಿತ್ತು. ಸ್ವಲ್ಪ ಮಂತ್ರಿಗಳು ಲೂಟಿ ಮಾಡೋದು ನಿಲ್ಲಿಸಬೇಕಿತ್ತು ಎಂದು ತಿಳಿಸಿದರು.

    ಒಂದು ತಿಂಗಳ ಕಾಲ ಲಾಕ್‍ಡೌನ್ ಮಾಡಬೇಕು. ಬಡವರಿಗೆ ಲೂಟಿ ಮಾಡುವುದರಲ್ಲಿ ಶೇ.10ರಷ್ಟು ಕೊಡಿ. ಬಡವರಿಗೆ ಒಂದು ತಿಂಗಳು ಏನೆಲ್ಲ ಸಹಾಯ ಮಾಡಬೇಕು ಎಂದು ಹೇಳಿದರು.

  • ಸಚಿವ ಸುಧಾಕರ್ ಎದುರೇ ಪತ್ರ ಹರಿದು ಹಾಕಿ ರೇವಣ್ಣ ಆಕ್ರೋಶ

    ಸಚಿವ ಸುಧಾಕರ್ ಎದುರೇ ಪತ್ರ ಹರಿದು ಹಾಕಿ ರೇವಣ್ಣ ಆಕ್ರೋಶ

    ಹಾಸನ: ತಾಲೂಕಿನ ನಿರ್ವಹಣೆ ಹಣಕ್ಕೆ ರೀ ಸ್ವಾಮಿ ನಿಮ್ಮ ಬಳಿ ಬಿಕ್ಷೆ ಬೇಡಬೇಕಾ..? ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ತಮ್ಮ ಕೈಯಲ್ಲಿದ್ದ ಮಾಹಿತಿ ಪತ್ರವನ್ನು ಸಚಿವರೆದುರೇ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

    ಹಾಸನದ ಜಿಲ್ಲಾ ಪಂಚಾಯ್ತಿ ಆವಣದಲ್ಲಿ ಕೋವಿಡ್ 19 ರ ಸಭೆ ನಡೆಯುವ ಸಂದರ್ಭದಲ್ಲಿ ಆರೋಗ್ಯ ಸಚಿವರ ಎದುರಲ್ಲಿಯೇ ಪತ್ರ ಹರಿದು ಹಾಕುವ ಮೂಲಕ ಕೆಂಡಾಮಂಡಲವಾದ್ರು.

    ನನ್ನ ಜನ ಜಿಲ್ಲೆಯಲ್ಲಿ ಸಾಯುತ್ತಿದ್ದಾರೆ. ಅವರಿಗೆ ನಾವು ಯಾವ ರೀತಿ ಉತ್ತರ ಕೊಡಬೇಕು. ನಿಮ್ಮ ಡಿಸಿ ಬಳಿ ಸರ್ಕಾರದ ಹಣವನ್ನು ಇಟ್ಟುಕೊಂಡು ದಿನಾ ಪೂಜೆ ಮಾಡೋಕೆ ಹೇಳಿ ಅಂತ ಕೂಗಾಡಿದ್ರು.

    ರೇವಣ್ಣನ ಕೂಗಾಟ ಕಿರುಚಾಟ ನೋಡಿ ಆಕ್ರೋಶವನ್ನು ತಣ್ಣಗಾಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಧ್ಯಸ್ಥಿಕೆ ವಹಿಸಿ ಕಡೆಗೂ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.

  • 30 ಸಾವಿರಕ್ಕೆ ರೆಮ್‍ಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

    30 ಸಾವಿರಕ್ಕೆ ರೆಮ್‍ಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

    ಬಾಗಲಕೋಟೆ: ಜಿಲ್ಲೆಯಲ್ಲಿ ಕದ್ದು ಮುಚ್ಚಿ ರೆಮ್‍ಡಿಸಿವಿರ್ ಇಂಜೆಕ್ಷನ್ ಅನ್ನು ಕದ್ದು ಮಾರುತ್ತಿದ್ದ 10 ಜನ ಗ್ಯಾಂಗ್ ಅನ್ನು ಬಾಗಲಕೋಟೆ ಸಿಇಎನ್ ಪೊಲೀಸರು ಬೇಟೆಯಾಡಿದ್ದಾರೆ.

    ಆಸ್ಪತ್ರೆ ಸಿಬ್ಬಂದಿಯೇ ಈ ಕಳ್ಳರಾಗಿರೋದು ಬೆಳಕಿಗೆ ಬಂದಿದೆ. 10 ಜನರಲ್ಲಿ ಮೂವರು ಕೋವಿಡ್ ಆಸ್ಪತ್ರೆ ಸಿಬ್ಬಂದಿ, 7 ಜನ ಖಾಸಗಿ ಆಸ್ಪತ್ರೆ ಸಿಬ್ಬಂದಿ ಆಗಿದ್ದಾರೆ. ರೋಗಿಗಳಿಗೆ ಕೊಡುವ ಇಂಜೆಕ್ಷನ್ ಅನ್ನು ಹೊರತಂದು ಬ್ಲಾಕ್‍ನಲ್ಲಿ 25-30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾರೆ.

    ಇತ್ತ, ತುಮಕೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಸೈಯದ್ ಮತ್ತು ರಖೀಬ್ ಅನ್ನೋವ್ರು ಸಿದ್ದಗಂಗಾ ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ. ಈ ಮಧ್ಯೆ ಹಾಸನ ಜಿಲ್ಲೆಯಲ್ಲಿ ಹಳ್ಳಿ ಹಳ್ಳಿಯಲ್ಲೂ ಕೊರೊನಾ ಸಾವಾಗ್ತಿದೆ. ಆದರೆ ಸರ್ಕಾರದ ಡೇಟಾ ಏನೇನೂ ಅಲ್ಲ ಅಂತ ಮಾಜಿ ಸಚಿವ ರೇವಣ್ಣ ಕಿಡಿಕಾರಿದ್ದಾರೆ.

    ಅಲ್ಲದೆ ಜಿಲ್ಲೆಯಲ್ಲಿ ರೆಮ್‍ಡಿಸಿವಿರ್ ಔಷಧಿ ಸಿಗ್ತಿಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಆರೋಗ್ಯ ಸಚಿವರೂ ಹಾಸನಕ್ಕೆ ಭೇಟಿ ನೀಡೋದಾಗಿ ಹೇಳಿದ್ದಾರೆ ಅಂತ ರೇವಣ್ಣ ಹೇಳಿದ್ದಾರೆ.

  • ಹಾಸನ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿರುವ ಕೆಲವರು ಲೋ.. ನನ್ಮಕ್ಕಳು – ಹೆಚ್.ಡಿ.ರೇವಣ್ಣ

    ಹಾಸನ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿರುವ ಕೆಲವರು ಲೋ.. ನನ್ಮಕ್ಕಳು – ಹೆಚ್.ಡಿ.ರೇವಣ್ಣ

    – ಜಿಲ್ಲಾಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೇವಣ್ಣ ಆಕ್ರೋಶ

    ಹಾಸನ: ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆ ಮಾಜಿ ಸಚಿವ ರೇವಣ್ಣ ಬಹಳ ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ಲಿ ಕೆಲಸ ಮಾಡುತ್ತಿರುವ ಕೆಲವರು ಲೋ.. ನನ್ಮಕ್ಕಳು ಎಂದು ಅಶ್ಲೀಲ ಪದ ಬಳಕೆ ಮಾಡಿದ್ದಾರೆ.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೇವಣ್ಣ ಅವರು, ಕಾವೇರಿ ಗ್ರಾಮೀಣ ಬ್ಯಾಂಕ್ ರೈತರ ಮನೆ ಹಾಳು ಮಾಡುತ್ತಿದೆ. ಜನರ ಹಣವನ್ನು ಲೂಟಿ ಮಾಡಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ ನನ್ನ ಜೀವನದಲ್ಲಿ ಒಂದೇ ಗುರಿ ಕಾವೇರಿ ಗ್ರಾಮೀಣ ಬ್ಯಾಂಕ್ ಮುಚ್ಚಿಸುತ್ತೇನೆ. ಎಂದು ಅಲ್ಲಿನ ಕಾರ್ಯವೈಖರಿಯ ಬಗ್ಗೆ ಕೆಲ ಅಧಿಕಾರಿಗಳ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ಏರುಧ್ವನಿಯ ಮೂಲಕ ಏಕವಚನದಲ್ಲಿಯೇ ರೇಗಾಡಿ ಬ್ಯಾಂಕ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

    ಸಭೆಯಲ್ಲಿ ತಾಳ್ಮೆ ಕಳೆದುಕೊಂಡ ರೇವಣ್ಣ, ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವರು ಲೋ.. ನನ್ನ ಮಕ್ಕಳು. ನಾನೇ ಜಾಮೀನು ಹಾಕಿದರು ಕೂಡ ಸಾಲ ಕೊಡಲ್ಲ ಅಂತಾರೆ. ಓರ್ವ ಮಾಜಿ ಪ್ರಧಾನಿ ತವರೂರಲ್ಲಿ ಇಂತಹ ಪರಿಸ್ಥಿತಿ ಇದೆ ಎಂದರೆ ಬೇರೆ ಕಡೆ ಯಾವ ರೀತಿ ಪರಿಸ್ಥಿತಿ ಇರಬಹುದು ಎಂದು ಬ್ಯಾಂಕ್ ನೌಕರರ ವಿರುದ್ಧ ಅವ್ಯಾಚ ಶಬ್ದಗಳ ಬಳಕೆ ಮಾಡಿ ತುಂಬಿದ ಸಭೆಯಲ್ಲಿಯೇ ರೇಗಾಡಿದರು.

  • ದೊಡ್ಡವರ ವಿಷಯ ನಮಗ್ಯಾಕೆ ಅಂದ್ರು ಹೆಚ್.ಡಿ ರೇವಣ್ಣ

    ದೊಡ್ಡವರ ವಿಷಯ ನಮಗ್ಯಾಕೆ ಅಂದ್ರು ಹೆಚ್.ಡಿ ರೇವಣ್ಣ

    ಹಾಸನ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡವರ ವಿಷಯ ನಮಗ್ಯಾಕೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಡಿ ವಿಚಾರವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಹೊಡೆದಾಡುತ್ತಿದ್ದಾರೆ. ದೊಡ್ಡವರ ವಿಷಯ ನಮಗ್ಯಾಕೆ. ಬಡವ ನೀ ಮಡಿದಂಗೆ ಇರು ಅಂತ ನಾವಿದ್ದರೆ ಸಾಕು. ನಮ್ಮ ಜನರಿಗೆ ಕುಡಿಯುವ ನೀರಿಲ್ಲ ಬೋರ್ ವೆಲ್‍ಕೊರಿರಿ ಎಂದರೆ ಕೇಳೊರಿಲ್ಲ ಎಂದು ಹೇಳಿದರು.

    ಹಾಸನ ನಗರದ ಸುತ್ತಮುತ್ತ ಹಲವಾರು ಖಾಸಗೀ ಲೇಔಟ್‍ಗಳು ಕಾನೂನು ಬಾಹಿರವಾಗಿ ನಡೆಯುತ್ತಿದೆ. ಇದಕ್ಕೆ ಕೆಲವು ಅಧಿಕಾರಿಗಳೂ ಸಹ ಭಾಗಿಯಾಗಿದ್ದಾರೆ. ಹೂಡಾ ಹಾಗೂ ಹೌಸಿಂಗ್ ಬೊರ್ಡ್ ಮುಚ್ಚೋದು ಒಳ್ಳೆಯದು ಅಂತ ಸಿಎಂ ಹಾಗೂ ವಸತಿ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು.

    ಅಧಿಕಾರಿಗಳಿಗೆ ಲೂಟಿ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಇದೊಂದು ದಂಧೆಯಾಗಿ ಮಾರ್ಪಟ್ಟಿದೆ. ಹಾಸನ ನಗರದಲ್ಲಿ ಯಾವ ಜಾಗ, ಯಾರ ಹೆಸರಿಗೆ ಬೇಕಾದರೂ ಬರೆಸಿಕೊಳ್ಳಬಹುದು. ಪರ್ಸೇಂಟ್ ಲೆಕ್ಕದಲ್ಲಿ ಹಂಚಿಕೆಯಾಗಿ ಲೇಔಟ್‍ಗಳು ನಡೆಯುತ್ತಿವೆ. ಸ್ಥಳೀಯವಾಗಿ ಸಣ್ಣಪುಟ್ಟ ಲೇಔಟ್ ಮಾಡುವವರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ಒಂದು ಇಲಾಖೆಯ ಹೆಸರೇಳಿ ಸೈಟ್ ಮಾಡಿ, ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  • ನಮಗೆ ಸಿಡಿ ಅಂದ್ರೆ ಏನು ಅಂತ ಗೊತ್ತಿಲ್ಲ: ಹೆಚ್.ಡಿ ರೇವಣ್ಣ

    ನಮಗೆ ಸಿಡಿ ಅಂದ್ರೆ ಏನು ಅಂತ ಗೊತ್ತಿಲ್ಲ: ಹೆಚ್.ಡಿ ರೇವಣ್ಣ

    ಬೆಂಗಳೂರು: ನಮಗೆ ಸಿಡಿ ಅಂದ್ರೆ ಏನು ಅಂತ ಗೊತ್ತಿಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

    ರಾಜ್ಯದಲ್ಲಿ ಪ್ರಸ್ತುತ ಮಾಜಿ ಸಚಿವರ ಸಿಡಿ ವಿಚಾರವೇ ಚರ್ಚೆಯಾಗುತ್ತಿದೆ. ಈ ಸಂಬಂಧ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ರೇವಣ್ಣ ಅವರು ನಮಗೆ ಸಿಡಿ ಬಗ್ಗೆ ಗೊತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಾಗಿದ್ದು ನಮ್ಮನ್ನು ಯಾರು ಕೇಳುತ್ತಾರೆ. ಅವರ ಮೇಲೆ ಇವರು ಹೇಳ್ತಾರೆ, ಇವರ ಮೇಲೆ ಅವರು ಹೇಳ್ತಾರೆ. ಇವೆಲ್ಲವನ್ನು ಜನ ನೋಡುತ್ತಿದ್ದಾರೆ. ನಾವೇನು ಹೇಳೋಣ ಎಂದರು.

    ನಿನ್ನೆ ಸದನದಲ್ಲಿ ಸಿಡಿ ಪ್ರದರ್ಶಿಸಿದ ವಿಚಾರದ ಕುರಿತು ಮಾತನಾಡಿದ ರೇವಣ್ಣ, ಒಬ್ಬ ಅಧಿಕಾರಿ ಪರಿಶಿಷ್ಟ ಜಾತಿ ಹುಡುಗನನ್ನ ಗುಂಡಿಕ್ಕಿ ಕೊಲ್ಲೋದಾಗಿ ಹೇಳಿದ್ದು, ಇನ್ನೊಂದು ಶಿವಲಿಂಗೇ ಗೌಡರನ್ನ ಅವಹೇಳನಕಾರಿಯಾಗಿ ಮಾತನಾಡಿರುವ ಸಿಡಿಯನ್ನು ಕೊಟ್ಟು ಅದನ್ನ ಸ್ಪೀಕರ್ ಗಮನಕ್ಕೆ ತಂದಿದ್ದೇವೆ. ಅವರು ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವ ಎಸ್.ಟಿ.ಸೋಮಶೇಖರ್, ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ಸಿನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್ಸಿನವರೇ ಮಾಡಿದ್ದಾರೆ ಎಂದು ಆರೋಪಿಸಿದ್ದರು.