Tag: ಹೆಚ್ ಡಿ ರೇವಣ್ಣ

  • ಹೆಚ್.ಡಿ ರೇವಣ್ಣ ಕುಟುಂಬಸ್ಥರು ಜನರ ಪ್ರಾಣ ಹಿಂಡ್ತಿದ್ದಾರೆ – ಹಾಸನಾಂಬೆಗೆ ಪತ್ರ

    ಹೆಚ್.ಡಿ ರೇವಣ್ಣ ಕುಟುಂಬಸ್ಥರು ಜನರ ಪ್ರಾಣ ಹಿಂಡ್ತಿದ್ದಾರೆ – ಹಾಸನಾಂಬೆಗೆ ಪತ್ರ

    ಹಾಸನ: ಹೆಚ್.ಡಿ ರೇವಣ್ಣ ಕುಟುಂಬದವರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರನ್ನು ಸೋಲಿಸಿಬಿಡು ಎಂದು ಹಾಸನಂಬೆ ದೇವಿಗೆ ಭಕ್ತರೊಬ್ಬರು ಪತ್ರ ಬರೆಯುವ ಮೂಲಕ ಕೋರಿಕೊಂಡಿದ್ದಾರೆ.

    Revanna

    ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಾಲಯಕ್ಕೆ ರಾಜ್ಯದ ಮೂಲೆ ಮೂಲಗಳಿಂದ ಜನರು ಆಗಮಿಸಿ ದೇವಿಯ ದರ್ಶನ ಪಡೆದು, ಪತ್ರ ಬರೆಯುವ ಮೂಲಕ ತಮ್ಮ ಕೋರಿಕೆಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತಾರೆ. ಇದನ್ನೂ ಓದಿ: ಪದ್ಮಶ್ರೀ ಅಲ್ಲ, ಪುನೀತ್ ಅಮರಶ್ರೀ: ಶಿವರಾಜ್‍ಕುಮಾರ್

    ಪ್ರತಿವರ್ಷದಂತೆ ಈ ವರ್ಷವು ಭಕ್ತರು ಅನೇಕ ಪತ್ರಗಳನ್ನು ದೇವರಿಗೆ ಬರೆದು ಪ್ರಾರ್ಥಿಸಿದ್ದಾರೆ. ಹಲವಾರು ಪತ್ರಗಳ ಮಧ್ಯೆ ಭಕ್ತರೊಬ್ಬರು, ತಾಯಿ ಹಾಸನಾಂಬೆ, ನಿನ್ನ ಕೃಪೆಯಿಂದ ಹೊಳೆನರಸಿಪುರದ ಎಂಎಲ್‍ಎ ಬದಲಾಗಬೇಕು. ಜನರನ್ನು ಕಷ್ಟದಿಂದ ಪಾರುಮಾಡಬೇಕು. ಹೆಚ್. ಡಿ ರೇವಣ್ಣ ಕುಟುಂಬದ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದಾರೆ. ಅವರ ಕುಟುಂಬದವರೆಲ್ಲರನ್ನು ಸೋಲಿಸಿ ಬಿಡು ತಾಯಿ. ಅವರು ಮುಂದೆ ಯಾರನ್ನು ಬರಲು ಬಿಡುತ್ತಿಲ್ಲ. ಒಳ್ಳೆಯದು ಮಾಡು ತಾಯಿ ಎಂದು ಹೆಚ್.ಎನ್ ಪುರ ಜನತೆ ಪರವಾಗಿ ಬರೆದಿದ್ದಾರೆ. ಇದನ್ನೂ ಓದಿ: ಹೊಸ ಸಿನಿಮಾ ಅನೌನ್ಸ್ ಮಾಡಿದ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ

    ಮತ್ತೋರ್ವ ಭಕ್ತ, ಅಮ್ಮ ಆ ಧರ್ಮಾತ್ಮ ಪುನೀತ್ ರಾಜ್‍ಕುಮಾರ್ ಸಾಯುವುದರ ಬದಲು, ಈ ರಾಜಕೀಯದಲ್ಲಿ ನಾಟಕವಾಡಿ ಅವರು ತಿಂದು, ಅವರ ಮರಿಮೊಮ್ಮಕ್ಕಳು ತಿಂದು ತೇಗಿದರು ಕರಗದ ಆಸ್ತಿ ಮಾಡಿದ್ದಾರಲ್ಲ ಅವರು ಸಾಯಬೇಕಿತ್ತು. ಸಭೆಗಳಲ್ಲಿ ನಾಟಕವಾಡುತ್ತಾರಲ್ಲಾ ಅಂಥಾ ಬೇ.. ರಾಜಕಾರಣಿಗಳನ್ನು ಸಾಯಿಸು. ಆಗ ನಮ್ಮ ಕರ್ನಾಟಕ ರಾಜ್ಯ ಮುಂದುವರಿಯುತ್ತದೆ.  ಇದನ್ನೂ ಓದಿ:  ಭ್ರಷ್ಟ ರಾಜಕಾರಣಿಗಳು ಸಾಯಬೇಕಿತ್ತು – ಹಾಸನಾಂಬೆಗೆ ಪತ್ರ ಬರೆದ ಅಪ್ಪು ಅಭಿಮಾನಿ

    ಬಡವರು ಕರ್ನಾಟಕದಲ್ಲಿ ಸುಖವಾಗಿರುತ್ತಾರೆ. ನಿನ್ನೆ, ಮೊನ್ನೆ ಬಂದ ಈ ಕೆಲ ರಾಜಕಾರಣಿಗಳು ಕೋಟಿ ಕೋಟಿ ಆಸ್ತಿ ಮಾಡಿಕೊಂಡು ಬೀಗುತ್ತಾರಲ್ಲ ಅವರಿಗೆ ಕರ್ಮದ ಸಾವು ಬರಲಿ. ಪಾಪ ಪುನೀತ್ ಇದ್ದಿದ್ದರೆ ನಾಲ್ಕು ಜನ ನೆಮ್ಮದಿಯಿಂದ ಇರುತ್ತಿದ್ದರು ತಾಯಿ ಎಂದು ಭಕ್ತ ಪತ್ರದಲ್ಲಿ ಬರೆದಿದ್ದಾನೆ.

  • ಉಪಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಟಾರ್ಗೆಟ್ ಮಾಡಿದವು: ಹೆಚ್.ಡಿ.ರೇವಣ್ಣ

    ಉಪಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಟಾರ್ಗೆಟ್ ಮಾಡಿದವು: ಹೆಚ್.ಡಿ.ರೇವಣ್ಣ

    ಹಾಸನ: ಉಪಚುನಾವಣೆಯಲ್ಲಿ ಬಿಜೆಪಿ ಅವರು ಕಾಂಗ್ರೆಸ್‍ನ ಬೈಯಲಿಲ್ಲ, ಕಾಂಗ್ರೆಸ್ಸಿಗೆ ಬಿಜೆಪಿ ಬೈಯಲಿಲ್ಲ. ಆದರೆ ಎರಡು ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ಟಾರ್ಗೆಟ್ ಮಾಡಿದರು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದರು.

    ಸಿಂಧಗಿ, ಹಾನಗಲ್ ಉಪಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲಿನ ವಿಚಾರದ ಬಗ್ಗೆ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು, ಜೆಡಿಎಸ್ ಟಾರ್ಗೆಟ್ ಮಾಡಿದರು. ಈ ಪ್ರಾದೇಶಿಕ ಪಕ್ಷ ಮುಗಿಸಲು ಯಾರಿಂದಲೂ ಆಗಲ್ಲ. ಕಾಂಗ್ರೆಸ್ ಅವರು ಕೆಲವು ಬಟ್ಟಂಗಿಗಳನ್ನು ಇಟ್ಟುಕೊಂಡಿದ್ದರು ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ಬೆಳಗ್ಗೆ ಎದ್ದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೈಯುತ್ತಿದ್ದರು. ಇದರಿಂದಲೇ ಸಿಂಧಗಿಯಲ್ಲಿ ಕಾಂಗ್ರೆಸ್ ಹೋಯ್ತು. ಅದು ನಮ್ಮ ಪಕ್ಷದವರನ್ನು ಕರೆದುಕೊಂಡು ಹೋಗಿ 31 ಸಾವಿರ ಮತಗಳಿಂದ ಸೋತರು. ಒಂದು ರಾಷ್ಟ್ರೀಯ ಪಕ್ಷ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನಾಲ್ಕರಲ್ಲಿ ಮೂರು ಕಡೆ ಠೇವಣಿ ಕಳೆದುಕೊಂಡಿದೆ. ಒಂದು ರಾಷ್ಟ್ರೀಯ ಪಕ್ಷವೇ ಠೇವಣಿ ಕಳೆದುಕೊಂಡ ಮೇಲೆ ಜೆಡಿಎಸ್ ಏನಿದೆ? ಎಂದು ಪ್ರಶ್ನೆ ಹೇಳಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 300 ಸರ್ಕಾರಿ ಶಾಲೆಗಳ 600 ಕೊಠಡಿಗಳಿಗೆ ಹಾನಿ

    ಸಿಂಧಗಿಯಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ. ಬಿಜೆಪಿಯ ಒಳಜಗಳದಿಂದ ಕಾಂಗ್ರೆಸ್ ಗೆದ್ದಿದೆ. ಮತದಾರರು ಪ್ರೀತಿಯಿಂದ ಮತ ಹಾಕಿಲ್ಲ, ಮುಖಂಡರಿಂದಲೂ ಗೆದ್ದಿಲ್ಲ. ಜೆಡಿಎಸ್ ಮುಗಿಸಬೇಕೆಂಬುದೇ ಕಾಂಗ್ರೆಸ್ಸಿನ ಮೊದಲ ಪ್ರಿಯಾರಿಟಿ. ಎರಡು ರಾಷ್ಟ್ರೀಯ ಪಕ್ಷಗಳಿಂದ ದುಡ್ಡು ಚೆಲ್ಲಾಟ ಆಗಿದೆ. ಕಾಂಗ್ರೆಸ್ ಅವರು ಎಲ್ಲ ಕಡೆ ಇದೇ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಧೃತಿಗೆಡಬೇಕಿಲ್ಲ, ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೆ ಸಾಮಾನ್ಯ ಎಂದು ಕಿಡಿಕಾರಿದರು.

  • ರೇವಣ್ಣ  DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್

    ರೇವಣ್ಣ DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್

    – ಎಚ್‍ಡಿಕೆ ಯಡಿಯೂರಪ್ಪನರವರಿಗೂ ಮೋಸ ಮಾಡಿದ್ದಾರೆ
    – ಅಲ್ಪಸಂಖ್ಯಾತರಿಗೆ ಏನೂ ನೀಡಲಿಲ್ಲ, ಅದಕ್ಕೆ ನಾನು ಜೆಡಿಎಸ್ ಬಿಟ್ಟು ಬಂದಿದ್ದು

    ಹುಬ್ಬಳ್ಳಿ : ಹೆಚ್.ಡಿ.ರೇವಣ್ಣ ಎಲ್ಲಿ ಉಪ ಮುಖ್ಯಮಂತ್ರಿ ಆಗುತ್ತಾನೆಂದು ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ. ಇದರ ಬಗ್ಗೆ ನನ್ನ ಬಳಿ ವೀಡಿಯೋ ದಾಖಲೆ ಇದೆ ಎಂದು ಕುಮಾರಸ್ವಾಮಿ ವಿರುದ್ಧವಾಗಿ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಪರ್ ಶರೀಫರನ್ನು ರಾಜಕೀಯದಲ್ಲಿ ಮೇಲೆಳದಂತೆ ಮಾಡಿದ್ದು ಕುಮಾರಸ್ವಾಮಿ. ಗೆಲ್ಲುವ ಸಮಯದಲ್ಲಿ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ನೆನಪು ಏಕೆ ಬರುವುದಿಲ್ಲ. ಕೇವಲ ಅಲ್ಪಸಂಖ್ಯಾತರಿಗೆ ಅಷ್ಟೇ ಅಲ್ಲ, ಯಡಿಯೂರಪ್ಪನರವರಿಗೂ ಮೋಸ ಮಾಡಿದ್ದಾರೆ. ಯಡಿಯೂರಪ್ಪನವರಿಗೆ ಅಧಿಕಾರ ಕೊಡಿ ಎಂದು ನಾನು ಕುಮಾರಸ್ವಾಮಿಗೆ ಹೇಳಿದ್ದೇನು. ಹೆಚ್.ಡಿ.ರೇವಣ್ಣ ಎಲ್ಲಿ ಉಪ ಮುಖ್ಯಮಂತ್ರಿ ಆಗುತ್ತಾನೆಂದು ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ. ಇದರ ಬಗ್ಗೆ ನನ್ನ ಬಳಿ ವೀಡಿಯೋ ದಾಖಲೆ ಇದೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ

    ಕುಮಾರಸ್ವಾಮಿ ಸ್ವಂತ ಸಹೋದರನ ಏಳಿಗೆಯನ್ನ ಸಹಿಸಿಕೊಳ್ಳುವುದಿಲ್ಲ, ನಮ್ಮ ಏಳಿಗೆಯನ್ನ ಅವರು ಸಹಿಸಿಕೊಳ್ಳುವುದು ದೂರದ ಮಾತು. ಸೋಲುವ ಸಮಯದಲ್ಲಿ ಕುರಿ ಬಲಿ ಕೊಟ್ಟ ಹಾಗೆ, ಅಲ್ಪಸಂಖ್ಯಾತರನ್ನ ಬಲಿ ಕೋಡುತ್ತಾರೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಒಳ್ಳೆಯ ಯೋಜನೆಗಳನ್ನ ನೀಡಿದ್ದಾರೆ, ಹಲವು ಭಾಗ್ಯಗಳನ್ನ ನೀಡಿದ್ದಾರೆ. ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಏನೂ ನೀಡಲಿಲ್ಲ, ಅದಕ್ಕೆ ನಾನು ಜೆಡಿಎಸ್ ಬಿಟ್ಟು ಬಂದಿದ್ದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ 

  • ಹೆಚ್.ಡಿ.ರೇವಣ್ಣ ಶಾಸಕರಾಗಿರುವ ಕ್ಷೇತ್ರದಲ್ಲಿ ಯಾರಿಗೂ ವೈಯಕ್ತಿಕ ಸ್ವಾತಂತ್ರ್ಯ ಇಲ್ಲ: ಮಂಜೇಗೌಡ

    ಹೆಚ್.ಡಿ.ರೇವಣ್ಣ ಶಾಸಕರಾಗಿರುವ ಕ್ಷೇತ್ರದಲ್ಲಿ ಯಾರಿಗೂ ವೈಯಕ್ತಿಕ ಸ್ವಾತಂತ್ರ್ಯ ಇಲ್ಲ: ಮಂಜೇಗೌಡ

    -ಹೊಳೆನರಸೀಪುರದಲ್ಲಿ ಮುಕ್ತ ಚುನಾವಣೆ ನಡೆಯಲ್ಲ

    ಹಾಸನ: ಜಿಲ್ಲೆಯ ಜನ ಜೆಡಿಎಸ್‍ನಿಂದ ಸ್ವಾತಂತ್ರ್ಯ ಪಡೆಯಬೇಕಿದ್ದು, ಅದರಲ್ಲೂ ಹೊಳೆನರಸೀಪುರ ಕ್ಷೇತ್ರದ ಜನರಿಗೆ ಹೆಚ್.ಡಿ ರೇವಣ್ಣ ಶಾಸಕರಾದ ಬಳಿಕ ವೈಯಕ್ತಿಕ ಸ್ವಾತಂತ್ರ್ಯವೇ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಕಿಡಿಕಾರಿದ್ದಾರೆ.

    ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ, ಹೆಚ್‍ಡಿಕೆ ಹೇಳಿಕೆ ವಿರೋಧಿಸಿ, ನಾನು ರೇವಣ್ಣ ವಿರುದ್ಧ ಸ್ಪರ್ಧೆ ಮಾಡಿದ್ದರಿಂದ ಇದನ್ನು ಹೇಳುತ್ತಿದ್ದೇನೆ. ಅಲ್ಲಿಯ ಜನ ಹೆದರಿಕೊಂಡಿರೋದು ನಿಜ. ಈ ಹಿಂದೆ ಆ ಕ್ಷೇತ್ರದ ಸಚಿವರಾಗಿದ್ದ ಎಂಬಿ.ಪಾಟೀಲ್ ಬಳಿ ಹೋಗಿದ್ದೇವು. ರೇವಣ್ಣ ವಿರುದ್ಧ ಯಾರು ಮಾತನಾಡುತ್ತಾರೆ ಅವರ ಮೇಲೆ ರೌಡಿಶೀಟರ್ ಕೇಸ್ ಹಾಕಿಸುತ್ತಿದ್ದಾರೆ ಅದನ್ನು ತಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದೇವು. ಆಗ ಎಂಬಿ.ಪಾಟೀಲ್ ಎಸ್‍ಪಿಗೆ ಫೋನ್ ಮಾಡಿ ಆ ರೀತಿ ಮಾಡಬೇಡಿ ಎಂದಿದ್ದರು ಆದರೂ ಪ್ರಯೋಜನ ಆಗಲಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ – ಎಚ್‌ಡಿಕೆಯ ದ್ವಿಪತ್ನಿತ್ನ ವಿಚಾರ ಪ್ರಸ್ತಾಪಿಸಿ ಕಾಲೆಳೆದ ಬಿಜೆಪಿ

    Revanna
    ಹೊಳೆನರಸೀಪುರದಲ್ಲಿ ಮುಕ್ತ ಚುನಾವಣೆ ನಡೆಯಲ್ಲ. ಇದನ್ನು ನಾನು ಅಭ್ಯರ್ಥಿಯಾಗಿದ್ದಾಗ ಅನುಭವಿಸಿದ್ದೇನೆ. ಸುಮಾರು 70 ಹಳ್ಳಿಗಳಲ್ಲಿ ಯಾವ ಪೊಲೀಸರು ಬರಲ್ಲ. ಈ ಬಗ್ಗೆ ಯಾವ ಎಲೆಕ್ಷನ್ ಕಮಿಟಿಗೆ ದೂರು ಕೊಟ್ಟರೂ ಏನು ಆಗಲ್ಲ. ಜೆಡಿಎಸ್ ಪಕ್ಷದವರು ಜನ ಯಾರಿಗೆ ವೋಟ್ ಹಾಕ್ತಾರೆ ಎಂದು ಬೂತ್ ಬಳಿ ನಿಂತು ನೋಡುತ್ತಾರೆ. ಹೀಗಾಗಿ ಜನ ತಮಗೆ ಬೇಕಾದವರಿಗೆ ವೋಟ್ ಹಾಕಲು ಹೆದರುತ್ತಾರೆ. ಈ ಪರಿಸ್ಥಿರಿ ಸರಿಯಾಗಬೇಕಾದರೆ ನಮ್ಮ ಕಾಂಗ್ರೆಸ್ ರಾಜ್ಯ ನಾಯಕರು ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ ವಿರುದ್ಧ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಬಾಗೂರು ಮಂಜೇಗೌಡ ಸೋಲನುಭವಿಸಿದ್ದರು. ಆ ಬಳಿಕ ಇದೀಗ ರೇವಣ್ಣ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ

     

  • ಠಾಣೆಗಳಲ್ಲೂ ಕೇಸರಿಕರಣ ಅಂತ ಸಿದ್ದರಾಮಯ್ಯ ಟೀಕೆ

    ಠಾಣೆಗಳಲ್ಲೂ ಕೇಸರಿಕರಣ ಅಂತ ಸಿದ್ದರಾಮಯ್ಯ ಟೀಕೆ

    ಬೆಂಗಳೂರು: ಆರ್‍ಎಸ್‍ಎಸ್(RSS) ವಿರುದ್ಧ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ತಮ್ಮ ಟೀಕೆ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಕೂಡ ಕೇಸರಿಕರಣ ಆಗ್ತಿದೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

    ವಿಜಯಪುರದಲ್ಲಿ ಮಾತನಾಡಿರೋ ಸಿದ್ದರಾಮಯ್ಯ, ಪಕ್ಷದವರು, ಆರ್‍ಎಸ್‍ಎಸ್‍ನವರು ಬೇಕಾದ್ದು ಮಾಡಿಕೊಳ್ಳಲಿ. ಆದರೆ ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಇಲಾಖೆಗಳನ್ನೇ ಕೇಸರಿಕರಣ ಮಾಡೋದು ಎಷ್ಟು ಸರಿ..? ಹೀಗಾಗಿ ಕೇಸರಿ ಜೊತೆ ತ್ರಿಶೂಲವನ್ನೂ ಕೈಯಲ್ಲಿ ಕೊಟ್ಟುಬಿಡಿ ಅಂದಿದ್ದೆ ಅಂತ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಭಾರತ ದೇಶದ ಹಿಂದುತ್ವದ ಸಂಕೇತ ಕೇಸರಿ – ಸಿದ್ದರಾಮಯ್ಯಗೆ ಮುನಿರತ್ನ ಟಾಂಗ್

    ಸಿದ್ದರಾಮಯ್ಯ ವಿರುದ್ಧ ಸಿಡಿದಿರೋ ಸಚಿವ ಮುನಿರತ್ನ, ಪೊಲೀಸ್ ಠಾಣೆಯಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದರೆ ತಪ್ಪೇನಿದೆ..? ಕೇಸರಿ ಶಾಲಲ್ಲಿ ನಮ್ಮ ಪಕ್ಷದ ಚಿಹ್ನೆ ಇತ್ತಾ..? ಆರ್‍ಎಸ್‍ಎಸ್‍ನವರು ದೇಶದ್ರೋಹದ ಕೆಲಸ ಮಾಡಿದ್ದಾರಾ..? ಚುನಾವಣೆ ಬಂದಾಗ ಮಾತ್ರ ರಾಜಕೀಯಕ್ಕೋಸ್ಕರ ಈ ರೀತಿ ಹೇಳಿಕೆ ಕೊಡ್ತಿದ್ದೀರಿ ಅಷ್ಟೇ ಅಂತ ಮುನಿರತ್ನ ಜರಿದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಅವರನ್ನು ಯಾವ ಸಮುದ್ರಕ್ಕೆ ಎಸೆದಿದ್ದೀರಿ: ಬಿಜೆಪಿಗೆ ಡಿಕೆಶಿ ಪ್ರಶ್ನೆ

    ಇತ್ತ ಯುನಿವರ್ಸಿಟಿಗಳಲ್ಲಿ ಆರ್‍ಎಸ್‍ಎಸ್ ಸಿಂಡಿಕೇಟ್ ಇದೆ. ಕೆಲಸ ಆಗಬೇಕಾದರೆ ಲಕ್ಷ ಲಕ್ಷ ತೆಗೆದುಕೊಳ್ತಾರೆ ಅಂತ ಆರೋಪಿಸಿದ್ದ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಿಡಿಕಾರಿದೆ. ನಿಮ್ಮ ತಪ್ಪು, ವೈರುಧ್ಯ, ಸಮಯಸಾಧಕತನವನ್ನು ಅನ್ಯರ ನಿಂದನೆಯ ಮೂಲಕ ಮುಚ್ಚಿಕೊಳ್ಳಲು ಸಾಧ್ಯವೇ..? ಕಾಗೆ ಗಂಗಾ ಸ್ನಾನ ಮಾಡಿದರೆ ಬಿಳುಪಾಗುವುದೇ, ಕುಮಾರಸ್ವಾಮಿ..? ಕುಮಾರಸ್ವಾಮಿ ಅವರೇ, ‘ವೃದ್ಧನಾರಿ ಪತಿವ್ರತಾ’ ಎಂಬ ಮಾತು ಗೊತ್ತೇ..? ನಿಮ್ಮ ಸ್ಥಿತಿಯೂ ಹಾಗಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಗುಟ್ಟಿನಲ್ಲಿ ತಪ್ಪು ಮಾಡುವುದು. ಬಳಿಕ ಗರತಿಯ ಸೋಗು ಹಾಕುವುದು ನಿಮ್ಮ ಹಳೇ ಚಾಳಿ. ಕೆಪಿಎಸ್‍ಸಿ ಕರ್ಮಕಾಂಡದ ರೂವಾರಿಯಾಗಿರುವ ನೀವು ಈಗ ಊರಿಗೆ ಉಪದೇಶ ಕೊಡುವಂತಾಗಿರುವುದೇ ಕಾಲದ ಚೋದ್ಯ. ತಮಗೆ ಬೇಕಾದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಸರ್ಕಾರಿ ನೌಕರಿ ಒದಗಿಸಿದ್ದವರು ಯಾರು..? ಇವರಿಗೆಲ್ಲ ನೀವು ತರಬೇತಿ ನೀಡಿದ್ದೆಲ್ಲಿ..? ಪದ್ಮನಾಭ ನಗರದಲ್ಲೋ, ಕೇತಗಾನ ಹಳ್ಳಿಯ ತೋಟದ ಮನೆಯಲ್ಲೋ..? ಅಂತ ಟ್ವೀಟ್‍ನಲ್ಲಿ ಲೇವಡಿ ಮಾಡಿದೆ.

  • ಕುಮಾರಸ್ವಾಮಿ, ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಕನಸು ಕಂಡರೂ ಆಗಲ್ಲ: ರೇವಣ್ಣ

    ಕುಮಾರಸ್ವಾಮಿ, ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಕನಸು ಕಂಡರೂ ಆಗಲ್ಲ: ರೇವಣ್ಣ

    ಹಾಸನ: ಜಮೀರ್ ಅಹ್ಮದ್‍ಗೆ ನಮ್ಮ ಸುದ್ದಿ ಬೇಡ. ಕುಮಾರಸ್ವಾಮಿ ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದವರು ಕನಸಲ್ಲಿ ಕಂಡರೂ ಆಗಲ್ಲ ಎಂದು ಜಮೀರ್ ಹೇಳಿಕೆಗೆ ಜೆಡಿಎಸ್ ಮುಖಂಡ ಹೆಚ್‍.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.

    ರೇವಣ್ಣ ಉಪಮುಖ್ಯಮಂತ್ರಿ ಆಗುವುದದನ್ನೇ ಕುಮಾರಸ್ವಾಮಿ ಸಹಿಸಲಿಲ್ಲ ಎಂಬ ಜಮೀರ್ ಹೇಳಿಕೆಗೆ ಹಾಸನದಲ್ಲಿ ಆಕ್ರೋಶ ಹೊರಹಾಕಿದ ಅವರು, ಪ್ರಾದೇಶಿಕ ಪಕ್ಷವಾದ ನಾವು ಒಬ್ಬರು ಸಾಬ್ರನ್ನು ಅಧ್ಯಕ್ಷರನ್ನಾಗಿ ಮಾಡಿ, ಕೇಂದ್ರದ ಮಂತ್ರಿ ಮಾಡಿದ್ದೇವೆ. ಇವರು ಇಬ್ರಾಹಿಂ ಬಳಿ ಕೆಲಸ ಮಾಡಿಸಿಕೊಂಡು ಎಂಎಲ್‍ಸಿ ಮಾಡಲು ಎಷ್ಟು ಗೋಳು ಹೊಯ್ದುಕೊಂಡಿದ್ದಾರೆ ಗೊತ್ತು. ಅವರಿಗೆ ಒಂದು ಮಾತು ಹೇಳ್ತೀನಿ, ಅವರಿಗೆ ನಮ್ಮ ಸುದ್ದಿ ಬೇಡ. ಕುಮಾರಸ್ವಾಮಿ ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಅವರು ಕನಸಲ್ಲಿ ಕಂಡರೂ ಆಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

    ಉಪ ಮುಖ್ಯಮಂತ್ರಿ ಆಗಬೇಕು ಎಂದರೆ ನಾನು ಕುಮಾರಸ್ವಾಮಿ ಕುಳಿತು ಮಾತನಾಡುತ್ತೇವೆ. ಕುಮಾರಣ್ಣಂದು ಏನು, ರೇವಣ್ಣಂದು ಏನು ಗೊತ್ತಿದೆ? ಕಾಲ ಬಂದಾಗ ಕುಮಾರಣ್ಣ ಸ್ಥಾನಮಾನ ಕೊಡುತ್ತಾನೆ. ಆದರೆ ನನ್ನನ್ನು ಉಪಮುಖ್ಯಮಂತ್ರಿ ಮಾಡೋಕೆ ಕಾಂಗ್ರೆಸ್‍ನವರು ಬಿಡಲಿಲ್ಲ. 17 ಜನರನ್ನು ಕರೆದುಕೊಂಡು ಹೋದರು. ಕುಮಾರಸ್ವಾಮಿ ಮಗನನ್ನು, ದೇವೇಗೌಡರನ್ನು ಸೋಲಿಸಿದ್ರು ಎಂದು ರೇವಣ್ಣ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ

  • ಇಡೀ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡ್ರು: ಹೆಚ್.ಡಿ. ರೇವಣ್ಣ

    ಇಡೀ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡ್ರು: ಹೆಚ್.ಡಿ. ರೇವಣ್ಣ

    ಹಾಸನ: ಇಡೀ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.

    ಹಾಸನ ತಾಲೂಕಿನ ಹೆಚ್.ಆಲದಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಸ್ಥಾನವನ್ನು ಅಲ್ಪಸಂಖ್ಯಾತರಿಗೆ, ದಲಿತರಿಗೆ ಹಂಚಿಕೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ನೀಡಿದ ಹೇಳಿಕೆಗೆ ಉತ್ತರಿಸಿ, ಅದು ಕಾಂಗ್ರೆಸ್‍ನ ಆಂತರಿಕ ವಿಷಯವಾಗಿದ್ದು, ನಾನು ಈ ಬಗ್ಗೆ ಉತ್ತರಿಸಲು ಹೋಗುವುದಿಲ್ಲ. ಕೋಮುವಾದಿಗಳನ್ನು ದೂರ ಇಡಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿದ ತಕ್ಷಣ ಯಾವುದೂ ಸತ್ಯ ಆಗಲ್ಲ: ಬಿ.ಸಿ.ಪಾಟೀಲ್

    ಇದೇ ವೇಳೆ ಇಡೀ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದಾರೆ ಎಂದರೆ ಅದು ದೇವೇಗೌಡರು ಮಾತ್ರ ಎಂದು ಉತ್ತರಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷ, ಈ ಬಗ್ಗೆ ಅವರು ಪ್ರಣಾಳಿಕೆಯಲ್ಲಿ ಹೇಳಲಿ. ನಾವೇನು ಬೇಡ ಅಂತೀವಾ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನೀವೇ ಎತ್ತಾಕ್ತಿರಾ, ಇಲ್ಲಾ ನಾನೇ ಎತ್ತಿ ಹಾಕ್ಲಾ – ತೊಂದ್ರೆ ಕೊಡ್ತಿದ್ದ ವ್ಯಕ್ತಿಯ ವಿರುದ್ಧ ರೇವಣ್ಣ ಆಕ್ರೋಶ

  • ವೈರಿಗಳ ಕಾಟದಲ್ಲಿ ಬದ್ಕೋಕಾಗ್ತಿಲ್ಲ: ಹೆಚ್‍.ಡಿ.ರೇವಣ್ಣ

    ವೈರಿಗಳ ಕಾಟದಲ್ಲಿ ಬದ್ಕೋಕಾಗ್ತಿಲ್ಲ: ಹೆಚ್‍.ಡಿ.ರೇವಣ್ಣ

    ಹಾಸನ: ನಮಗೆ ವೈರಿಗಳ ಕಾಟ ಹೆಚ್ಚು. ದೇವರ ದರ್ಶನ ಮಾಡದಿದ್ರೆ ವೈರಿಗಳ ಕಾಟಕ್ಕೆ ಬದುಕಲು ಆಗಲ್ಲ. ಹೀಗಾಗಿ ಬೆಳಗ್ಗೆ ಎದ್ದು ದೇವರ ದರ್ಶನ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಹೇಳಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆ ಗೆಲ್ಲುವ ವಿಶ್ವಾಸ ಇದೆ: ದೇವೇಗೌಡ

    ಹಾಸನದಲ್ಲಿ ಮಾತನಾಡಿದ ಅವರು, ತಾವು ಯಾಕೆ ದೇವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ದೇವರ ದರ್ಶನ ಮಾಡದೆ ಹೋದರೆ ನಮಗೆ ವೈರಿಗಳ ಕಾಟ. ವೈರಿಗಳ ಕಾಟದಲ್ಲಿ ಬದುಕಲು ಆಗಲ್ವಲಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಚಿತ್ರೀಕರಣದ ಫೋಟೋ ವೈರಲ್ 

    Revanna

    ಬೆಳಿಗ್ಗೆ ಎದ್ದು ಲಕ್ಷ್ಮೀನರಸಿಂಹ ನೋಡಿಕೊಂಡು ಬಂದೆ. ಲಕ್ಷ್ಮೀನರಸಿಂಹ ಅಂದರೆ ಯಾರೇ ಏನೇ ಮಾಟ ಮಾಡಿದರೆ ಅವರಿಗೆ ರಿವರ್ಸ್ ಆಗುತ್ತದೆ. ಇವತ್ತು ಸಾಯಂಕಾಲ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರೋಣ ಅಂಥಾ ಮಾಡಿದ್ದೀನಿ ಎಂದು ರೇವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಡಿಎಪಿ,ಪೊಟ್ಯಾಷ್‍ಗಾಗಿ ರಾಜ್ಯದಿಂದ ಕೇಂದ್ರಕ್ಕೆ ಬೊಮ್ಮಾಯಿ ಮನವಿ

  • ಮಾನ ಮರ್ಯಾದೆ ಇದ್ರೆ ಹೊಸ ಕಾಂಗ್ರೆಸ್ ಸ್ಥಾಪನೆ ಮಾಡಲಿ: ಹೆಚ್.ಡಿ ರೇವಣ್ಣ

    ಮಾನ ಮರ್ಯಾದೆ ಇದ್ರೆ ಹೊಸ ಕಾಂಗ್ರೆಸ್ ಸ್ಥಾಪನೆ ಮಾಡಲಿ: ಹೆಚ್.ಡಿ ರೇವಣ್ಣ

    ಹಾಸನ: ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ ಬಾಗಿಲು ಮುಚ್ಚಿ, ಹೊಸ ಕಾಂಗ್ರೆಸ್ ಸ್ಥಾಪನೆ ಮಾಡಲಿ ಎಂದು ಮಾಜಿ ಸಚಿವ ಹೆಚ್‍ಡಿ ರೇವಣ್ಣ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರೂ ಕಾಲದ ಕಾಂಗ್ರೆಸ್ ಈಗಿಲ್ಲ. ಕೋಮುವಾದಿ ಜೊತೆ ಹೋಗಲ್ಲ ಅಂತ ಮಂಡ್ಯದಲ್ಲಿ ಕುಮಾರಣ್ಣನ ಮಗನನ್ನು ತೆಗೆದ್ರು. ತುಮಕೂರಿನಲ್ಲಿ ಕೋಮುವಾದಿ ಪಕ್ಷದ ಜೊತೆ ಸೇರಿ ದೇವೇಗೌಡರನ್ನ ಸೋಲಿಸಿದ್ರು ಎಂದರು. ಇದನ್ನೂ ಓದಿ: ಮಾನ ಮಾರ್ಯಾದೆ ಇಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ: ರಮೇಶ್ ಕುಮಾರ್

    ಕಾಂಗ್ರೆಸ್ಸಿನವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಎಂತಹ ಸ್ಥಿತಿ ತಂದರು. ಕಾಂಗ್ರೆಸ್ ನವರು ಕಾಂಗ್ರೆಸ್ ನವರನ್ನೇ ಸೋಲಿಸುತ್ತಾರೆ. 2023 ರ ಚುನಾವಣೆಯಲ್ಲೂ ಕಾಂಗ್ರೆಸ್ ನವರನ್ನ ಕಾಂಗ್ರೆಸ್ ನವರೇ ಸೋಲಿಸುತ್ತಾರೆ. ಕಾಂಗ್ರೆಸ್ ಗೆ ಇಂತಹ ಸ್ಥಿತಿ ಬಂತಲ್ಲಪ್ಪ ಅಂತ ನನಗೆ ವ್ಯಥೆ ಆಗ್ತಿದೆ ಎಂದು ವ್ಯಂಗ್ಯವಾಡಿದ್ರು.

    ಇದೇ ವೇಳೆ ಜೆಡಿಎಸ್ ಪಕ್ಷ ತೊರೆಯುತ್ತಿರುವವರ ಬಗ್ಗೆ ಮಾತನಾಡಿ, ಜೆಡಿಎಸ್ ಪಕ್ಷ ತೊರೆದು ಹೋಗುವವರು ಹೋಗಲಿ, ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರು.

  • 2023ರವರೆಗೆ ಅರುಣ್ ಸಿಂಗ್ ರಾಜ್ಯ ಬಿಜೆಪಿ ಉಸ್ತುವಾರಿ ಆಗಲಿ: ಹೆಚ್.ಡಿ.ರೇವಣ್ಣ

    2023ರವರೆಗೆ ಅರುಣ್ ಸಿಂಗ್ ರಾಜ್ಯ ಬಿಜೆಪಿ ಉಸ್ತುವಾರಿ ಆಗಲಿ: ಹೆಚ್.ಡಿ.ರೇವಣ್ಣ

    – ಅರುಣ್ ಸಿಂಗ್ 30 ಸೀಟ್ ಗೆಲ್ಲಿಸಲಿ

    ಹಾಸನ: 2023ರವರೆಗೆ ಇವರೇ ಇದ್ದರೆ ಜೆಡಿಎಸ್ ಮುಳುಗುತ್ತೋ ಅಥವಾ ಯಾವುದು ಮುಳುಗುತ್ತೋ ನೋಡೋಣ. ಅರುಣ್ ಸಿಂಗ್ ಅವರನ್ನೇ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಮುಂದುವರಿಸಬೇಕೆಂದು ಕೇಂದ್ರ ನಾಯಕರನ್ನು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.

    ಯಡಿಯೂರಪ್ಪ 150 ಸೀಟ್ ಗೆಲ್ಲಿಸುತ್ತೇನೆ ಎನ್ನುತ್ತಿದ್ದಾರೆ. ಯಡಿಯೂರಪ್ಪ ಜೊತೆ ಸೇರಿ ಅರುಣ್ ಸಿಂಗ್ ಇನ್ನೂ 30 ಸೀಟ್ ಹೆಚ್ಚು ಗೆಲ್ಲಿಸಲಿ. ಈಗಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅವರು 2023ರವರೆಗೆ ಇದ್ದು ಜೆಡಿಎಸ್ ಮುಳುಗಿಸಲಿ. ನಾವೇನು ಬಿಜೆಪಿಗೆ ಬರುತ್ತೀವಿ ಎಂದು ಅರ್ಜಿ ಹಾಕಿಕೊಂಡಿದ್ದೆವಾ? ಈ ಕುಟುಂಬ ಅಧಿಕಾರಕ್ಕೆ ಆಸೆ ಪಡುವುದಿಲ್ಲ. ಕಳೆದ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಹಿಂದಿನ ದಿನ, ನೀನೇ ಐದು ವರ್ಷ ಮುಖ್ಯಮಂತ್ರಿಯಾಗಿರು ಎಂದು ಪ್ರಧಾನಮಂತ್ರಿ ಹೇಳಿದ್ದರು. ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮುಂದುವರಿಯಬಹುದಿತ್ತು. ಇದನ್ನು ರಾಜ್ಯ ಉಸ್ತುವಾರಿ ವಿಚಾರಣೆ ಮಾಡಲಿ. ಮುಳುಗುತ್ತೆ ಅನ್ನುವುದು ಲೂಸ್ ಟಾಕ್ ಅಲ್ವಾ. ಮುಳುಗುತ್ತೆ ಅಂತಾ ಭವಿಷ್ಯ ಹೇಳಲು ಇವರು ಯಾರು ಎಂದು ಪ್ರಶ್ನಿಸಿದರು.

    ಸಿಎಂ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಲ್ಲ ಎಂದಿದ್ದರು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಸಿಎಂ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. 2023 ಕ್ಕೆ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ದೇವೇಗೌಡರು ಬದುಕಿರುವವರೆಗೂ ಪಕ್ಷ ಮುಳುಗಲು ಸಾಧ್ಯವಿಲ್ಲ ಎಂದು ರೇವಣ್ಣ ಕಿಡಿಕಾರಿದ್ದಾರೆ. ನಾನು ಯಾವತ್ತು ಬೊಮ್ಮಾಯಿ ಮನೆ ಬಾಗಿಲಿಗೆ ಹೋಗಿಲ್ಲ. ಅವರೇ ಬಾಯಿಬಿಟ್ಟು ಸಪೋರ್ಟ್ ಮಾಡಿ ಎಂದು ಹೇಳಿದಾಗ ಬೆಂಬಲ ನೀಡುವುದು ತಪ್ಪಾ? ಕಷ್ಟ ಬಂದಾಗ ನಿಮಗೆ ಸಹಾಯ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ ಎಂದರು.

    ಜಿ.ಟಿ.ದೇವೇಗೌಡರಿಗೆ ಭಗವಂತ ಒಳ್ಳೆಯದು ಮಾಡಲಿ
    ಜಿ.ಟಿ.ದೇವೇಗೌಡರು ದೊಡ್ಡವರಿದ್ದಾರೆ. ಭಗವಂತ ಅವರಿಗೆ ಒಳ್ಳೆಯದು ಮಾಡಲಿ. ಅವರಿಗೆ ಕುಮಾರಣ್ಣ ದೊಡ್ಡ ಹುದ್ದೆ ಕೊಡಲು ಆಗಲಿಲ್ಲ ಎಂದು ವ್ಯಂಗ್ಯವಾಡಿದ್ರು. ಜಿಟಿಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯ ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ. ಹೈಕಮಾಂಡ್ ಗೆ ಹೇಳಿ ಬೇಗ ಅವರಿಗೆ ಹುದ್ದೆ ಕೊಡಲಿ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ. ಅವರು ರಾಷ್ಟ್ರೀಯ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದರು. ಇದನ್ನೂ ಓದಿ: ಜೆಡಿಎಸ್ ಮುಳುಗುತ್ತಿದೆ, ಬಿಜೆಪಿ ಬೆಳೆಯುತ್ತಿದೆ : ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

    ಬಿಜೆಪಿ ನಾಯಕರು ಕುಮಾರಸ್ವಾಮಿ ಫೋಟೋ ಹಿಡಿಯಬೇಕು. ಕಾಂಗ್ರೆಸ್ ನವರು 2007 ರಲ್ಲಿ ಯಾವ ರೀತಿ ನಡೆದುಕೊಂಡರು. ಕೆಲವು ಸನ್ನಿವೇಶದಲ್ಲಿ ಕುಮಾರಣ್ಣ ನಿರ್ಣಯ ತಗೆದುಕೊಂಡರು. ಅದರಲ್ಲಿ ಕೆಲವು ತಪ್ಪು ಇರುತ್ತೆ. ಕುಮಾರಣ್ಣ ಇರಲಿಲ್ಲ ಅಂದಿದ್ದರೆ ಬಿಜೆಪಿ ಎಲ್ಲಿ ಅಧಿಕಾರಕ್ಕೆ ಬರುತ್ತಿತ್ತು. ಜೆಡಿಎಸ್ ಪಕ್ಷ ಸೋಲು ಗೆಲುವು ಎರಡನ್ನು ಕಂಡಿದೆ. ನೋವು ನಲಿವನ್ನು ಅನುಭವಿಸಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಕುಮಾರಸ್ವಾಮಿ ಗೌರವ ಕೊಡುವುದನ್ನು ತಂದೆಯಿಂದ ಕಲಿಯಲಿ: ಅರುಣ್ ಸಿಂಗ್