Tag: ಹೆಚ್ ಡಿ ರೇವಣ್ಣ

  • ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ರೇವಣ್ಣ ದಂಪತಿ – ಕಾರು ತಡೆದಿದ್ದಕ್ಕೆ ಫುಲ್ ಗರಂ

    ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ರೇವಣ್ಣ ದಂಪತಿ – ಕಾರು ತಡೆದಿದ್ದಕ್ಕೆ ಫುಲ್ ಗರಂ

    – ಪ್ರಜ್ವಲ್, ಸೂರಜ್, ನಿಖಿಲ್, ಹೆಚ್‌ಡಿಕೆ ಹೆಸರಿನಲ್ಲಿ ಅರ್ಚನೆ

    ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ (H D Revanna) ದಂಪತಿ ಹಾಸನಾಂಬೆಯ ದೇವಾಯಲಕ್ಕೆ (Hasanambe Temple) ಭೇಟಿ ನೀಡಿ, ದೇವಿ ದರ್ಶನ ಪಡೆದಿದ್ದಾರೆ. ಶಿಷ್ಟಾಚಾರ ಪಾಲನೆ ಅಧಿಕಾರಿಗಳ ಗಮನಕ್ಕೆ ತಾರದೇ ರೇವಣ್ಣ ನೇರವಾಗಿ ದೇಗುಲಕ್ಕೆ ಆಗಮಿಸಿದ್ದಾರೆ.

    ಮಾಜಿ ಪ್ರಧಾನಿ ಕುಟುಂಬದ ಹಿನ್ನೆಲೆಯಲ್ಲಿ ವಿಶೇಷ ಭದ್ರತೆ ಹೊಂದಿರುವ ರೇವಣ್ಣ ಅವರು ತಮ್ಮದೇ ಕಾರಿನಲ್ಲಿ ತಮ್ಮದೇ ಭದ್ರತಾ ವ್ಯವಸ್ಥೆಯೊಂದಿಗೆ ದೇವಿ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಕಾರನ್ನ ತಡೆದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ

    ಪತ್ನಿ ಭವಾನಿ ರೇವಣ್ಣ ಜೊತೆ ಸಾವಿರ ರೂ. ಟಿಕೆಟ್ ಪಡೆದು ನೇರ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು. ಹೆಚ್.ಡಿ.ದೇವೇಗೌಡರು, ಚೆನ್ನಮ್ಮ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ ಸೇರಿ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

    ಬ್ಯಾಹ್ಮಿ, ಕೌಮಾರಿ, ಮಹೇಶ್ವರಿ ಮೂರು ದೇವರ ಮೇಲಿದ್ದ ಕುಂಕುಮ ಕೇಳಿ ಪಡೆದ ರೇವಣ್ಣ, ಪ್ರತ್ಯೇಕವಾಗಿ ಬಾಕ್ಸ್ನಲ್ಲಿ ಕುಂಕುಮ, ದೇವರ ಮೇಲಿದ್ದ ಹೂವು ಕೊಂಡೊಯ್ದರು. ಈ ವೇಳೆ ರೇವಣ್ಣ ದಂಪತಿಗೆ ಹಾಸನ ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಸಾಥ್ ನೀಡಿದ್ದಾರೆ.

  • ಗಲಾಟೆಗೆ ಕೇಸ್ ಇಲ್ಲದೇ ರೌಡಿಶೀಟರ್ ಓಪನ್, ಕೊಲೆಗಳಿಗೆ ಅದೆಷ್ಟು ರೌಡಿಶೀಟರ್ ತೆರೆದಿದ್ದೀರಿ? – ರೇವಣ್ಣ ಕಿಡಿ

    ಗಲಾಟೆಗೆ ಕೇಸ್ ಇಲ್ಲದೇ ರೌಡಿಶೀಟರ್ ಓಪನ್, ಕೊಲೆಗಳಿಗೆ ಅದೆಷ್ಟು ರೌಡಿಶೀಟರ್ ತೆರೆದಿದ್ದೀರಿ? – ರೇವಣ್ಣ ಕಿಡಿ

    – ನಾನು ಕಾಲ್ ಮಾಡಿ ಕೇಸ್ ಹಾಕಿ ಎಂದಿದ್ರೆ ರಾಜಕೀಯ ಬಿಟ್ಬಿಡ್ತೀನಿ!

    ಹಾಸನ: ನಾನು ಯಾರ ಮೇಲಾದ್ರೂ ಕೇಸ್ ಹಾಕಿ ಎಂದು ಫೋನ್ ಮಾಡಿದ್ರೆ ರಾಜಕೀಯ ಬಿಟ್ಟು ಹೋಗ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಗುಡುಗಿದ್ದಾರೆ.

    ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಪೊಲೀಸ್ ಇಲಾಖೆ ಬಗ್ಗೆ ನೀಡಿದ್ದ ಹೇಳಿಕೆ ವಿಚಾರವಾಗಿ ಸಂಸದ ಶ್ರೇಯಸ್ ಪಟೇಲ್ (Shreyas Patel) ನೀಡಿದ್ದ ಪ್ರತಿಕ್ರಿಯೆ ವಿರುದ್ಧ ಅವರು ಅಸಮಾಧಾನ ಹೊರಹಾಕಿದರು. ಇವರಿಗೆಲ್ಲಾ ಉತ್ತರ ಕೊಡಲು ಹೋದ್ರೆ ನಾನು ಪೊಳ್ಳೆದ್ದು ಹೋಗ್ತೇನೆ. ಅವರು ದೊಡ್ಡವರಿದ್ದಾರೆ, ಅವರಿಗೆ ಹೇಳಿಕೆ ಕೊಡುವ ಶಕ್ತಿ ನನಗಿಲ್ಲ. ನಾನು ಶಾಸಕನಾಗಿ ಸುಳ್ಳು ಹೇಳಲು ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ – DRI, ED ಬಳಿಕ ಈಗ IT ಎಂಟ್ರಿ

    ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಘಟ್ಟ ಗ್ರಾಮದಲ್ಲಿ ಓರ್ವ ಗ್ರಾಪಂ ಸದಸ್ಯ, ಗುತ್ತಿಗೆದಾರ ಹಾಗೂ ಸದಸ್ಯನ ನಡುವೆ ಗಲಾಟೆಯಾಗಿದೆ. ಗಲಾಟೆ ಅದಾಗ ಏನು ಕ್ರಮ ಮಾಡಬೇಕು ಮಾಡಲಿ. ಅದು ಬಿಟ್ಟು ಯಾವುದೇ ಕೇಸ್ ಇಲ್ಲದೇ ರೌಡಿಶೀಟರ್ ಹಾಕಿದ್ದಾರೆ. ಹಾಗಿದ್ದರೆ ಕೊಲೆ, ಕೊಲೆ ಯತ್ನ ಮಾಡಿದವರ ಮೇಲೆ ಎಷ್ಟು ರೌಡಿಶೀಟರ್ ಓಪನ್ ಮಾಡಿದ್ದೀರಿ ಎಂದು ಪೊಲೀಸರಿಗೆ ಅವರು ಪ್ರಶ್ನಿಸಿದ್ದಾರೆ.

    ನಾನು ಅಧಿಕಾರಿಗಳಿಗೆ ಹೇಳೋದು ಒಂದೇ, ಯಾರೇ ತಪ್ಪು ಮಾಡಿದ್ರೂ, ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ.

    ಇತ್ತೀಚೆಗೆ ರೇವಣ್ಣ ಅವರು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಸದರು, ರೇವಣ್ಣ ಅಸ್ಪಷ್ಟ ಆರೋಪಗಳನ್ನು ಮಾಡುವ ಬದಲು, ನಿರ್ದಿಷ್ಟ ಮಾಹಿತಿಯನ್ನು ನೀಡಲಿ ಎಂದಿದ್ದರು. ಇದನ್ನೂ ಓದಿ: ಚಿಕ್ಕಮಗಳೂರು | ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ವೀರ ಯೋಧನಿಗೆ ಸನ್ಮಾನ

  • ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಮಾಜಿ ಸಚಿವ ಹೆಚ್.ಡಿ ರೇವಣ್ಣ

    ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಮಾಜಿ ಸಚಿವ ಹೆಚ್.ಡಿ ರೇವಣ್ಣ

    ರಾಯಚೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ(H D Revanna) ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿ ವೃಂದಾವನ ದರ್ಶನ ಪಡೆದರು. ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಮಂತ್ರಾಲಯದಲ್ಲಿ ಮಂಚಾಲಮ್ಮ ದೇವಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

    ಬಳಿಕ ಮಂತ್ರಾಲಯ(Mantralaya) ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ ಪಡೆದರು. ಮಂತ್ರಾಕ್ಷತೆ ಫಲ ಪುಷ್ಪ ನೀಡಿ ಶ್ರೀಗಳು ಆಶೀರ್ವದಿಸಿದರು. ಈ ವೇಳೆ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಜೊತೆಗಿದ್ದರು. ಇದನ್ನೂ ಓದಿ: ಪಾಕ್‌ನ ಉಗ್ರವಾದದ ನಿಜ ಬಣ್ಣ ಬಯಲು ಮಾಡಲು ವಿದೇಶಕ್ಕೆ ಹೊರಟ ಸರ್ವಪಕ್ಷಗಳ ನಿಯೋಗ

    ಇದಕ್ಕೂ ಮುನ್ನ ರಾಯಚೂರಿನಲ್ಲಿ(Raichur) ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು, ಇವತ್ತು ಕೆಲ ಶಕ್ತಿಗಳನ್ನ ದಮನ ಮಾಡಬೇಕು ಅಂದ್ರೆ ದೇವರ ಹತ್ರ ಹೋಗಬೇಕಲ್ಲ. ಆ ಕೆಲಸ ಮಾಡುತ್ತಿದ್ದೇನೆ ಹೀಗಾಗಿ ಮಂತ್ರಾಲಯಕ್ಕೆ ಹೊರಟಿದ್ದೇನೆ ಎಂದು ಹೇಳಿದ್ದರು.

  • ದೈವ ಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡೋಕೆ ಆಗಲ್ಲ: ಹೆಚ್.ಡಿ ರೇವಣ್ಣ

    ದೈವ ಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡೋಕೆ ಆಗಲ್ಲ: ಹೆಚ್.ಡಿ ರೇವಣ್ಣ

    ರಾಯಚೂರು: ನನಗೆ ಯಾವ ಶಕ್ತಿಯೂ ಕಾಡ್ತಿಲ್ಲ, ದೈವ ಶಕ್ತಿ ಹಾಗೂ ಜನಶಕ್ತಿ ಇರೋವರೆಗೆ ಯಾರು ನನ್ನನ್ನು ಕಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಹೇಳಿದ್ದಾರೆ.

    ರಾಯಚೂರು (Raichur) ಮಾರ್ಗದಲ್ಲಿ ಮಂತ್ರಾಲಯಕ್ಕೆ (Mantralayam) ಹೊರಟಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಕೆಲ ಶಕ್ತಿಗಳನ್ನು ದಮನ ಮಾಡಬೇಕು ಎಂದರೆ ದೇವರ ಹತ್ರ ಹೋಗಬೇಕಲ್ವ, ಆ ಕೆಲಸ ಮಾಡ್ತಿದಿನಿ. ನಾನು ದೇವಸ್ಥಾನಕ್ಕೆ ಸಾಮಾನ್ಯವಾಗಿ ಹೋಗುತ್ತೇನೆ. ಹಾಗಾಗಿ ಮಂತ್ರಾಲಯಕ್ಕೆ ಹೋಗಲು ಬಂದಿದ್ದೇನೆ. ಮೊನ್ನೆ ತಿರುಪತಿಗೆ ಹೋಗಿದ್ದೆ ನಮ್ಮ ತಂದೆ ಜೊತೆ. ಶೃಂಗೇರಿಗೂ ಹೋಗಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಲಂಚ ಪಡೆದು ಲಾಕ್ ಆದ ಅಧಿಕಾರಿ – ಲೋಕಾ ದಾಳಿ ವೇಳೆ ಅಸ್ವಸ್ಥಗೊಂಡ ಸಿಬ್ಬಂದಿ!

    ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಏನನ್ನೂ ಹೇಳುವ ಶಕ್ತಿ ಇಲ್ಲ. ಕಾಂಗ್ರೆಸ್‍ಗೆ ರಾಜ್ಯದ ಜನತೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಏನು ಮಾಡ್ತಾರೆ ಅಂತ ನೋಡೋಣ, ಈಗಾಗ್ಲೆ ಐದನೇ ಗ್ಯಾರಂಟಿ, ಆರನೇ ಗ್ಯಾರಂಟಿ, ಏಳನೇ ಗ್ಯಾರಂಟಿ ಅಂತ ಹೇಳ್ತಿದ್ದಾರೆ. ಮಳೆಯಿಂದ ಬೆಳೆ ಹಲವೆಡೆ ನಾಶ ಆಗಿದೆ, ಸರ್ಕಾರ ಬೆಳೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

    ಬೆಂಗಳೂರಿನಲ್ಲಿ ಮಳೆ ಅವಾಂತರ ಲೆಕ್ಕಿಸದೇ ಕಾಂಗ್ರೆಸ್ ಸಮಾವೇಶ ನಡೆಸಿದೆ. ಈ ವಿಚಾರವನ್ನು ರಾಜ್ಯದ ಜನತೆಗೆ ಬಿಡ್ತೀವಿ, ಸರ್ಕಾರ ಎರಡು ವರ್ಷ ಏನು ಕೆಲಸ ಮಾಡಿದೆ ಅನ್ನೋದನ್ನ ರಾಜ್ಯದ ಜನತೆ ನಿರ್ಧಾರ ಮಾಡ್ತಾರೆ. ಕಾಲವೇ ಇದನ್ನೆಲ್ಲ ನಿರ್ಧರಿಸುತ್ತೆ. ಇನ್ನೂ, ಗೃಹಲಕ್ಷ್ಮೀ ಹಣದ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ ಹೇಳಿಕೆ ವಿಚಾರವಾಗಿ, ಅವರ ಬಗ್ಗೆ ರಿಯಾಕ್ಟ್ ಮಾಡೋಕೆ ನನ್ನಲ್ಲಿ ಶಕ್ತಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್‌

  • ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡ್ರ ಮಗನೇ ಅಲ್ಲ: ಹೆಚ್.ಡಿ ರೇವಣ್ಣ

    ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡ್ರ ಮಗನೇ ಅಲ್ಲ: ಹೆಚ್.ಡಿ ರೇವಣ್ಣ

    ಹಾಸನ: ನಾನು ಸಮಯಕ್ಕಾಗಿ ಕಾಯ್ತಾ ಇದಿನಿ, ಎಲ್ಲವನ್ನೂ ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡರ (H.D Devegowda) ಮಗನೇ ಅಲ್ಲ ಎಂದು ಮಾಜಿಸಚಿವ ಹೆಚ್.ಡಿ ರೇವಣ್ಣ (H.D Revanna) ಗುಡುಗಿದ್ದಾರೆ.

    ಹಾಸನದ (Hassan) ದ್ಯಾಪಲಾಪುರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಕೆಲವರು ಹೇಳ್ತಾರೆ ದೇವೇಗೌಡರದು, ರೇವಣ್ಣ ಅವರದ್ದು ಮುಗಿತು ಅಂತಾರೆ. ಈ ಜಿಲ್ಲೆಗೆ ದೇವೇಗೌಡರ ಕೊಡುಗೆ ಏನೆಂದು ಜನರಿಗೆ ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಒಂದು ವಿಶೇಷ ಪಡೆ ಅಗತ್ಯವಿದೆ: ಸಿಎಂ

    ಕೆಲವು ಅಧಿಕಾರಿಗಳು ರೇವಣ್ಣ ಹಾಗೂ ದೇವೇಗೌಡರದು ಮುಗೀತು ಎಂದು ತಿಳಿದುಕೊಂಡಿದ್ದಾರೆ. ಹಿಂದೆ ಕೂಡ ಜಿಲ್ಲೆಯಲ್ಲಿ ಎಲ್ಲಾ ಸ್ಥಾನ ಸೋತಿದ್ದೆವು. ಬಳಿಕ ಐದೇ ವರ್ಷಕ್ಕೆ ದೇವೇಗೌಡರು ಅಧಿಕಾರಕ್ಕೆ ಬಂದಿದ್ದರು. ಹಾಸನಕ್ಕೆ ದೇವೇಗೌಡರ ಕೊಡುಗೆ ಏನು ಅಂತಾರೆ. ರೈಲ್ವೆ ಯೋಜನೆ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ನಸಿರ್ಂಗ್ ಕಾಲೇಜು ಮಾಡಿದ್ದು ಯಾರು? ಹಾಸನ ಜಿಲ್ಲೆಯ ಶಿಕ್ಷಣಕ್ಕೆ ಕುಮಾರಸ್ವಾಮಿ ಐದು ಸಾವಿರ ಕೋಟಿ ರೂ. ಕೊಟ್ಟಿದ್ರು ಎಂದಿದ್ದಾರೆ.

    ಕಾಂಗ್ರೆಸ್‍ನವರು ಹಾಸನ – ಮೈಸೂರು ರೈಲ್ವೆ ಯೋಜನೆ ಸ್ಥಗಿತ ಮಾಡಿದ್ದರು. ಆದರೆ ದೇವೇಗೌಡರು ಪ್ರಧಾನಿಯಾಗಿ ಹತ್ತೆ ತಿಂಗಳಿಗೆ ಆ ಯೋಜನೆ ಮಾಡಿದ್ರು. ಕಾಂಗ್ರೆಸ್‍ನವರು ಈ ಜಿಲ್ಲೆಯಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಜಿಲ್ಲೆ ಲೂಟಿಕೋರರ ಕೈ ಸೇರಿದೆ. ನಾನೂ ಇಲ್ಲೇ ಇರ್ತಿನೆ, ಇದೆಲ್ಲಾ ಎಷ್ಟು ದಿನ ಇರುತ್ತದೆ ನೋಡೋಣ. ಈ ದೇಶ ಉಳಿಯಬೇಕಾದರೆ ಮೋದಿಯವರು ಇರಲೇಬೇಕು. ಅವರಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ರನ್ನ ಸೋಲಿಸಿದ್ದು ಕಾಂಗ್ರೆಸ್ ಅಲ್ಲ ಎಂದು ಸಾಬೀತಾದ್ರೆ, ರಾಜೀನಾಮೆಗೆ ಸಿದ್ಧ: ಛಲವಾದಿ ಸವಾಲ್

  • ತವರು ಜಿಲ್ಲೆಯಲ್ಲಿ ಟೆಂಪಲ್ ರನ್ – ರೇವಣ್ಣ ಜೊತೆಗೂಡಿ ಮನೆದೇವರ ದರ್ಶನ ಪಡೆದ ಕುಮಾರಸ್ವಾಮಿ

    ತವರು ಜಿಲ್ಲೆಯಲ್ಲಿ ಟೆಂಪಲ್ ರನ್ – ರೇವಣ್ಣ ಜೊತೆಗೂಡಿ ಮನೆದೇವರ ದರ್ಶನ ಪಡೆದ ಕುಮಾರಸ್ವಾಮಿ

    ಹಾಸನ: ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರಿಂದು ತವರು ಜಿಲ್ಲೆಗೆ ಆಗಮಿಸಿದ್ದು, ಕೇಂದ್ರ ಸಚಿವರಾದ ಬಳಿಕ ಮೊದಲಬಾರಿಗೆ ಮನೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಯಲಿಗೂರು ಗ್ರಾಮದಲ್ಲಿರುವ ದೇವೀರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆಯ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದಾರೆ. ದೇವಾಲಯದಲ್ಲಿ ನೆಲೆದ ಮೇಲೆ ಕುಳಿತು ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 12 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳ – ಸಿದ್ಧತೆ ಹೇಗಿದೆ? ವಿಶೇಷತೆಗಳೇನು?

    ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಚೆನ್ನಮ್ಮ, ಪುತ್ರ, ಸೊಸೆ, ಮೊಮ್ಮಗನ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಇದೇ ವೇಳೆ ಹೆಚ್‌ಡಿಕೆ ಸಹೋದರನೂ ಆಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna), ಶಾಸಕ ಸಿ.ಎನ್ ಬಾಲಕೃಷ್ಣ ಜೊತೆಯಾಗಿದ್ದಾರೆ. ಇದನ್ನೂ ಓದಿ: Brazil | ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ

    ಹೆಚ್‌ಡಿಕೆ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರರಾದ ಸೂರಜ್, ಪ್ರಜ್ವಲ್ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಸಂಕಷ್ಟಗಳು ದೂರಾಗಲೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ – ಹೆಬ್ಬಾಳ್ಕರ್‌ ಆಪ್ತ ಸೇರಿ 10 ಜನರ ವಿರುದ್ಧ FIR

  • ಕುಮಾರಸ್ವಾಮಿ ಇಲ್ಲದೇ ಹೋಗಿದ್ರೆ ಜಿಟಿಡಿ ಮಗನೊಂದಿಗೆ ಜೈಲಿನಲ್ಲಿರಬೇಕಿತ್ತು – ಹೆಚ್‌.ಡಿ ರೇವಣ್ಣ

    ಕುಮಾರಸ್ವಾಮಿ ಇಲ್ಲದೇ ಹೋಗಿದ್ರೆ ಜಿಟಿಡಿ ಮಗನೊಂದಿಗೆ ಜೈಲಿನಲ್ಲಿರಬೇಕಿತ್ತು – ಹೆಚ್‌.ಡಿ ರೇವಣ್ಣ

    – ಕಾಂಗ್ರೆಸ್‌ ಸರ್ಕಾರ ಜಿಟಿಡಿ ಅರೆಸ್ಟ್‌ ಮಾಡಲು ಸಿದ್ಧತೆ ಮಾಡಿಕೊಂಡಿತ್ತು ಎಂದ ಮಾಜಿ ಸಚಿವ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಇಲ್ಲದೆ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ (GT Devegowda) ಮತ್ತು ಅವರ ಪುತ್ರ ಜೈಲಿನಲ್ಲಿ ಇರಬೇಕಾಗಿತ್ತು ಅಂತ ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಬಾಂಬ್‌ ಸಿಡಿಸಿದ್ದಾರೆ.

    ವಿಧಾನಸೌಧದಲ್ಲಿಂದು (Vidhanasoudha) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2017 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಬಂಧನ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಈ ವಿಷಯವನ್ನು ನನಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ರು. ಬಳಿಕ ಕುಮಾರಸ್ವಾಮಿ ಅವರು ಪೊಲೀಸರಿಗೆ ಫೋನ್ ಮೂಲಕ ಗುಟುರು ಹಾಕಿದ್ರು. ಕುಮಾರಸ್ವಾಮಿಯವರ (HD kumaraswamy) ಒಂದೇ ಒಂದು ಗುಟುರಿಗೆ ಪೊಲೀಸರು ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡೋದು ಬಿಟ್ಟರು. ಇಲ್ಲದೇ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ 20 ದಿನ ಜೈಲಲ್ಲಿ ಕಳೆಯಬೇಕಾಗಿತ್ತು ಹೇಳಿದರು.

    ಯಾವ ಕೇಸ್ ಅಂತ ಈಗ ಇರೋ ಸರ್ಕಾರದಲ್ಲಿರೋ ನಾಯಕರನ್ನ ಕೇಳಿ ಅಂತ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿದ್ರು. ಇದನ್ನೂ ಓದಿ: ಕಾಶಪ್ಪನವರ್ ಆಯ್ತು ಈಗ ಜಯ ಮೃತ್ಯುಂಜಯ ಶ್ರೀ ವಿರುದ್ಧ ಹೆಬ್ಬಾಳ್ಕರ್ ಅಸಮಾಧಾನ 

    ಗೌಡರು, ಹೆಚ್‌ಡಿಕೆ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗುತ್ತೆ:
    ಇದೇ ವೇಳೆ ಜೆಡಿಎಸ್ ನಾಯಕ ಸುರೇಶ್ ಬಾಬು ಮಾತನಾಡಿ, ಜಿ.ಟಿ ದೇವೇಗೌಡರಿಗೆ ಅಸಮಾಧಾನ ಇರೋದು ಸತ್ಯ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗಲಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಬೈಕ್‌ ಸ್ಕಿಡ್‌ ಆಗಿ ಕೆಳಗೆ ಬಿದ್ದ ದಂಪತಿ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌ – ಸ್ಥಳದಲ್ಲೇ ಸಾವು

    ಕುಮಾರಸ್ವಾಮಿ ವಿರುದ್ಧ ಜಿಟಿ ದೇವೇಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿ ದೇವೇಗೌಡರಿಗೆ ಅಸಮಾಧಾನ ಇರೋದು ನಿಜ. ಅವರಿಗೆ ಸ್ಥಾನಮಾನದ ಬಗ್ಗೆ ಅಸಮಾಧಾನ ಇದೆ. ಇವತ್ತು ನಾನು ಸುದ್ದಿಗೋಷ್ಠಿಗೆ ಬರೋಕೆ ಹೇಳಿದ್ದೆ ಅವರು ಬರಲಿಲ್ಲ. ಚನ್ನಪಟ್ಟಣ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬರುವಂತೆ ದೇವೇಗೌಡ ಕರೆ ಮಾಡಿದ್ದು ನಿಜ. ಆದರೆ ಅವರು ಬರಲಿಲ್ಲ, ಪಕ್ಷದ ಮೇಲೆ ಅವರಿಗೆ ಅಸಮಾಧಾನ ಇದೆ. ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡಿದ್ರೆ ಎಲ್ಲವೂ ಸರಿ ಆಗುತ್ತೆ. ಪಕ್ಷದಲ್ಲಿ ಎಲ್ಲವೂ ಸರಿ ಆಗಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

  • ಪ್ರಜ್ವಲ್ ರೇವಣ್ಣ ಜಾಮೀನಿನ ವಾದ-ಪ್ರತಿವಾದ ಮುಕ್ತಾಯ; ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು

    ಪ್ರಜ್ವಲ್ ರೇವಣ್ಣ ಜಾಮೀನಿನ ವಾದ-ಪ್ರತಿವಾದ ಮುಕ್ತಾಯ; ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು

    – ಹೆಚ್‌.ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೆ.26ಕ್ಕೆ ಮುಂದೂಡಿಕೆ

    ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜಾಮೀನೀನ ಅರ್ಜಿಯ ವಾದ ಪ್ರತಿವಾದ ಮುಗಿದಿದ್ದು, ಆದೇಶ ಕಾಯ್ದಿರಿಸಲಾಗಿದೆ.

    ಹೈಕೋರ್ಟ್‌ನ (Karnataka High Court) ಜನಪ್ರತಿನಿಧಿಗಳ ಪೀಠದಲ್ಲಿ ಎರಡು ಕೇಸ್ ಗಳಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಗೂ ಒಂದು ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗಾಗಿ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದರು. ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ, ಇದೊಂದು ರಾಜಕೀಯ ಷಡ್ಯಂತ್ರ್ಯವಾಗಿದ್ದು, 3-4 ವರ್ಷಗಳ ಹಿಂದೆ ಅತ್ಯಾಚಾರವಾಗಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಅತ್ಯಾಚಾರ ನಡೆದಿದೆ ಅನ್ನೋದಾದ್ರೆ ಆಗಲೇ ಯಾಕೆ ದೂರು ನೀಡಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: J&K ಚುನಾವಣೆಯಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟ ಗೆಲ್ಲುವ ಸಾಧ್ಯತೆ ಹೆಚ್ಚಿದೆ: ಪಾಕ್‌ ರಕ್ಷಣಾ ಸಚಿವ

    ಪ್ರಜ್ವಲ್‌ ವಿರುದ್ಧ ದೂರು ದಾಖಲಾಗಿರುವುದು ದುರುದ್ದೇಶಪೂರಕ. ತನಿಖೆಗೆ ಸ್ಪಂದಿಸಿ, ಕಳೆದ 4 ತಿಂಗಳಿಂದ ಜೈಲಲಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ವಾದ ಮಂಡಿಸಿದ್ರು. ಇದಕ್ಕೆ ಪರತಿವಾದ ಸಲ್ಲಿಸಿದ್ದ ಎಸ್‌ಪಿಪಿ ಪ್ರೊ.ರವಿವರ್ಮಕುಮಾರ್, ಆರೋಪಿ ಸಾಕ್ಷಿನಾಶ ಪಡಿಸಿದ್ದು, ಈವರೆಗೂ ತನಿಖೆಗೆ ಮೊಬೈಲ್ ಕೊಟ್ಟಿಲ್ಲ. ಎಫ್‌ಐಆರ್‌ ದಾಖಲಾಗ್ತಿದ್ದಂತೆ ವಿದೇಶಕ್ಕೆ ಹಾರಿ ತಲೆ ಮರೆಸಿಕೊಂಡಿದ್ರು. ಪ್ರಭಾವಿಯಾಗಿದ್ದು ಜಾಮೀನಿನ ಮೇಲೆ ಹೊರ ಬಂದ್ರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರ್ತಾರೆ. ಹೀಗಾಗಿ ಜಾಮೀನು ನೀಡಬಾರದು ಅಂತ ಪ್ರತಿವಾದ ಮಂಡಿಸಿದ್ರು. ವಾದ-ಪ್ರತಿ ವಾದ ಆಲಿಸಿದ ಮಾನ್ಯ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆದೇಶವನ್ನ ಕಾಯ್ದಿರಿಸಿದ್ದಾರೆ. ಇದನ್ನೂ ಓದಿ: ಹೊರಗೆ ಹೋದ್ಮೇಲೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ – ದರ್ಶನ್ ಪಶ್ಚಾತ್ತಾಪದ ಮಾತು

    ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೆ.26ಕ್ಕೆ ಮುಂದೂಡಿಕೆ:
    ಇನ್ನೂ ಕೆ.ಆರ್‌ ನಗರ ಸಂತ್ರಸ್ತೆ ಪ್ರಕರಣ ರದ್ದು ಕೋರಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಏಕಸದಸ್ಯ ಪೀಠವು ಸೆ.26ಕ್ಕೆ ಮುಂದೂಡಿದೆ. ಇದನ್ನೂ ಓದಿ: ದರ್ಶನ್ ಬಿಡುಗಡೆಗಾಗಿ ದೇವಿ ಮೊರೆ ಹೋದ ಫ್ಯಾನ್ಸ್‌- ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ ಪೂಜೆ

  • ರೇವಣ್ಣ ಸೂಚನೆ ಮೇರೆಗೆ ಸಂತ್ರಸ್ತೆ ಕಿಡ್ನ್ಯಾಪ್‌ – ರೇವಣ್ಣ, ಭವಾನಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ರೇವಣ್ಣ ಸೂಚನೆ ಮೇರೆಗೆ ಸಂತ್ರಸ್ತೆ ಕಿಡ್ನ್ಯಾಪ್‌ – ರೇವಣ್ಣ, ಭವಾನಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ಕೆ.ಆರ್‌ ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಹೆಚ್‌.ಡಿ ರೇವಣ್ಣ (HD Revanna) ಅವರೊಂದಿಗೆ ಪತ್ನಿ ಭವಾನಿ ರೇವಣ್ಣ (Bhavani Revanna) ಅವರನ್ನೂ ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.

    ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಸೇರಿ 7 ಆರೋಪಿಗಳ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ (ACMM Court) ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಅಲ್ಲದೇ ಭವಾನಿ ರೇವಣ್ಣರನ್ನ 8ನೇ ಆರೋಪಿಯಾಗಿ ಹೆಸರಿಸಲಾಗಿದೆ. ಇದನ್ನೂ ಓದಿ: Paris Olympics | ಭಾರತಕ್ಕೆ ಮೂರನೇ ಪದಕ- ಕಂಚು ಗೆದ್ದ ಸ್ವಪ್ನಿಲ್

    ರೇವಣ್ಣ ವಿರುದ್ಧ ಎಫ್‌ಐಆರ್‌ ರದ್ದು ಕೋರಿರುವ ಹಾಗೂ ರೇವಣ್ಣ ಜಾಮೀನು ರದ್ದಿಗೆ ಕೋರಿದ್ದ ಎರಡೂ ಅರ್ಜಿಗಳನ್ನು ಏಕಕಾಲಕಕ್ಕೆ ಹೈಕೋರ್ಟ್‌ನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಎಸ್‌ಐಟಿ ಪರ ಪ್ರೊ.ರವಿವರ್ಮಕುಮಾರ್ ವಾದ ಮಂಡಿಸಿದರು. ಸದ್ಯ ಜಾಮೀನು ರದ್ದು ಕೋರಿರುವ ಸಂಬಂಧ ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಎಫ್‌ಐಆರ್‌ ರದ್ದು ಕೋರಿರುವ ಅರ್ಜಿ ವಿಚಾರಣೆಯನ್ನು ಆಗಸ್ಟ್‌ 8ಕ್ಕೆ ಕೋರ್ಟ್‌ ಮುಂದೂಡಿದೆ. ಇದನ್ನೂ ಓದಿ: ಎರಡು ಭಾಗಗಳಲ್ಲಿ ಬರಲಿದೆ ‘ಹಾಯ್ ನಾನ್ನಾ’ ಡೈರೆಕ್ಟರ್‌ ಜೊತೆಗಿನ ಜ್ಯೂ.ಎನ್‌ಟಿಆರ್‌ ಹೊಸ ಸಿನಿಮಾ

    ದೋಷಾರೋಪ ಪಟ್ಟಿಯಲ್ಲಿರುವ ಅಂಶಗಳೇನು?
    ಎಸ್‌ಐಟಿ ಅಧಿಕಾರಿಗಳ ತಂಡ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದೆ. ಪ್ರಕರಣದ ಆರೋಪಿಗಳಾದ ರೇವಣ್ಣ ಮತ್ತು ಭವಾನಿ ಅಣತಿಯ ಮೇರೆಗೆ ಸಂತ್ರಸ್ತೆಯ ಅಪಹರಣ ನಡೆದಿದೆ. ರೇವಣ್ಣ ಏಪ್ರಿಲ್ 23ರಂದು ಸಂತ್ರಸ್ತೆಯನ್ನು ಹೊಳೆನರಸೀಪುರಕ್ಕೆ ಕರೆದು ಬೆದರಿಕೆ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಪೊಲೀಸರ ಕೈಗೆ ಸಿಗಬಾರದು ಅಂತ ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕ ಏ.26ರಂದೇ ಸತೀಶ್ ಬಾಬು ಅವರ ಮೂಲಕ ಸಂತ್ರಸ್ತೆಯನ್ನ ಅಪಹರಣ ಮಾಡಿಸಿದ್ದಾರೆ ಎಸ್‌ಐಟಿ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ʻ9 ಮಕ್ಕಳು ನೀರಲ್ಲಿ ಕೊಚ್ಚಿ ಹೋದ್ರು, ಮನೆ ನೆಲಸಮ ಆಗೋಯ್ತು, ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿ ಸಾಹೇಬ್ರೆʼ

    ಮಹಿಳೆಯನ್ನ ಅಪಹರಿಸಿ 7ನೇ ಆರೋಪಿ ಮನೆಯಲ್ಲಿ ಇರಿಸಲಾಗಿತ್ತು. ಆಕೆಗೂ ಆರೋಪಿಗೂ ಯಾವುದೇ ಸಂಬಂಧ ಇರಲಿಲ್ಲ. ಪೊಲೀಸರು ಆ ಸ್ಥಳದಲ್ಲಿ ಮಹಜರ್‌ ನಡೆಸಿದಾಗ, ಆಕೆಯ ಕೂದಲು ದೊರೆತಿದೆ. 7ನೇ ಆರೋಪಿ ಈ ಹಿಂದೆ ರೇವಣ್ಣ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಭವಾನಿ ಅವರು ಕೀರ್ತಿ ಮತ್ತು ಮನು ಜೊತೆಯಲ್ಲಿ ಮಾತನಾಡಿದ್ದರು. ಆರೋಪಿಗಳ ಜೊತೆ ಭವಾನಿ ಮಾತನಾಡಿರೋದಕ್ಕೆ 22 ಆಡಿಯೋ ಕ್ಲಿಪ್ಪಿಂಗ್‌ಗಳು ಸಿಕ್ಕಿದೆ. ಫೋನ್‌ನಲ್ಲಿಯೇ ಭವಾನಿ ಅವರು ನಿರಂತರವಾಗಿ ಬೆದರಿಕೆ ಹಾಕಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

  • ನಾನು ಸದ್ಯಕ್ಕೆ ಪ್ರಜ್ವಲ್ ಭೇಟಿಗೆ ಹೋಗಲ್ಲ: ಹೆಚ್.ಡಿ ರೇವಣ್ಣ

    ನಾನು ಸದ್ಯಕ್ಕೆ ಪ್ರಜ್ವಲ್ ಭೇಟಿಗೆ ಹೋಗಲ್ಲ: ಹೆಚ್.ಡಿ ರೇವಣ್ಣ

    – ಸೂರಜ್ ಮಹಾನ್ ದೈವ ಭಕ್ತ

    ಮೈಸೂರು: ನಾನು ಸದ್ಯಕ್ಕೆ ಪ್ರಜ್ವಲ್ (Prajwal Revanna) ಭೇಟಿಗೆ ಹೋಗಲ್ಲ. ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೋಟ್ಟ ಅಂತಾ ಹೇಳುತ್ತಾರೆ. ಹೀಗಾಗಿ ನಾನು ಹೋಗಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಹೇಳಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು ಎಂದು ಮಾತು ಆರಂಭಿಸಿದ ರೇವಣ್ಣ, ಸೋಮವಾರ ನನ್ನ ಪತ್ನಿ ಹೋಗಿದ್ದಾರೆ, ಮಗ ಅಲ್ವ ಹೀಗಾಗಿ ಹೋಗಿದ್ದಾರೆ ಅಷ್ಟೇ. ತಾಯಿ-ಮಗ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ, ಕೇಳಲೂ ಹೋಗಿಲ್ಲ ಎಂದರು.

    ಸೂರಜ್ ರೇವಣ್ಣ (Suraj Revanna) ಮಹಾನ್ ದೈವ ಭಕ್ತ. ಅವನು ಬಹಳ ಬೇಗ ಇದರಿಂದ ಹೊರಬರುತ್ತಾನೆ ಅನ್ನೋ ನಂಬಿಕೆ ಇದೆ. ಉಳಿದ ಯಾವ ವಿಚಾರಗಳ ಬಗ್ಗೆಯೂ ನಾನು ಮಾತನಾಡಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇವೆ. ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ಎಂದು ರೇವಣ್ಣ ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸಿಎಂ ಮಾಡಿದ್ದು ಶಾಸಕರು: ನರೇಂದ್ರಸ್ವಾಮಿ

    ಎಂಥೆಂತವರಿಗೋ ಕಷ್ಟ ಬರುತ್ತದೆ, ಅದ್ರಲ್ಲಿ ನಮ್ಮದು ಏನಿದೆ. ದೇವೇಗೌಡರು (HD Devegowda) ಒಂದು ತಿಂಗಳಿನಿಂದ ಸಹಜವಾಗಿ ನೋವಿನಲ್ಲೇ ಇದ್ದಾರೆ. ಎಲ್ಲದಕ್ಕೂ ಕಾಲದಲ್ಲಿ ಉತ್ತರ ಸಿಗುತ್ತದೆ. ನಾನು ಯಾವತ್ತೂ ಯಾವುದಕ್ಕೂ ಎದೆಗುಂದುವುದಿಲ್ಲ. 30 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಇಂಥವನೆಲ್ಲ ಬಹಳ ನೋಡಿದ್ದೇನೆ ಎಂದರು.