Tag: ಹೆಚ್.ಡಿ.ದೇವೇಗೌಡ ಬ್ಯಾರೇಜ್

  • ಮೈದುಂಬಿ ಹರಿಯುತ್ತಿರುವ ಇಗ್ಗಲೂರಿನ ಹೆಚ್.ಡಿ.ದೇವೇಗೌಡ ಬ್ಯಾರೇಜ್

    ಮೈದುಂಬಿ ಹರಿಯುತ್ತಿರುವ ಇಗ್ಗಲೂರಿನ ಹೆಚ್.ಡಿ.ದೇವೇಗೌಡ ಬ್ಯಾರೇಜ್

    ರಾಮನಗರ: ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಇಗ್ಗಲೂರಿನ ಹೆಚ್.ಡಿ.ದೇವೇಗೌಡ ಬ್ಯಾರೇಜ್ ಮೈದುಂಬಿ ಹರಿಯುತ್ತಿದೆ.

    ರಾಮನಗರ ಜಿಲ್ಲೆಯ ಚನ್ನಪಟ್ಟಣದ ತಾಲೂಕಿನಲ್ಲಿರುವ ಇಗ್ಗಲೂರು ಬ್ಯಾರೇಜ್‍ನಲ್ಲಿ ಒಟ್ಟು 9 ಗೇಟ್‍ಗಳಿದೆ. 1.95 ಲಕ್ಷ ಕ್ಯೂಸೆಕ್ ನೀರು ಸಾಮರ್ಥ್ಯ ಹೊಂದಿರುವ ಈ ಬ್ಯಾರೇಜ್‍ನಿಂದ ಇದೀಗ 55 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ. ಇದನ್ನೂ ಓದಿ: ನನ್ನ ತಪ್ಪುಗಳಿಂದ ರಾಷ್ಟ್ರಗೀತೆ ಮೊಳಗಲಿಲ್ಲ – ಅದು ತಪ್ಪಲ್ಲ ಕ್ಷಮೆ ಕೇಳುವ ಅಗತ್ಯವಿಲ್ಲ: ಮೋದಿ

    ಪ್ರತಿನಿತ್ಯ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದೇ ಮೊದಲ ಬಾರಿಗೆ 9 ಗೇಟ್‍ಗಳ ಮೂಲಕ ಹೆಚ್ಚುವರಿ ನೀರು ಹೊರಕ್ಕೆ ಬಿಡಲಾಗಿದೆ. ಇನ್ನೂ ಬ್ಯಾರೇಜ್ ವೀಕ್ಷಿಸಲು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ನೂಪುರ್‌ಗೆ ಬೆಂಬಲ – ಚಾಕುವಿನಿಂದ ಚುಚ್ಚಿ, ಹಾಕಿಸ್ಟಿಕ್‍ನಿಂದ ಹಲ್ಲೆ: ಐಸಿಯುನಲ್ಲಿ ಯುವಕನಿಗೆ ಚಿಕಿತ್ಸೆ

    ಈ ಹೆಚ್ಚುವರಿ ನೀರು ಶಿಂಷಾ ನದಿ ಮೂಲಕ ಕನಕಪುರದ ಸಂಗಮ ಸೇರಿ ನಂತರ ತಮಿಳುನಾಡು ಸೇರುತ್ತದೆ. ನೀರಿನ ರಭಸಕ್ಕೆ ಜಲಾಶಯದ ಪಕ್ಕದ ಜಮೀನುಗಳಿಗೂ ಹಾನಿಯಾಗಿದು, ರೈತರ ಪಂಪ್ ಹೌಸ್ ಸಹ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು, ಮುಂಜಾಗ್ರತ ಕ್ರಮವಾಗಿ ಬ್ಯಾರೇಜ್ ಬಳಿ ಪೊಲೀಸ್ ಭದ್ರತೆ ಒದಗಿಸುವಂತೆ ಮನವಿ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]