ಬೆಂಗಳೂರು: ಇಂದು ನಗರದ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa), ಪುತ್ರ ಬಿ.ವೈ ವಿಜಯೇಂದ್ರ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD DeveGowda) ಅವರ ಆರೋಗ್ಯ ವಿಚಾರಿಸಿದರು. ಜೊತೆಗೆ ದೇಶದ ಮತ್ತು ರೈತರ ಹಿತಕ್ಕಾಗಿ ಸದಾ ಶ್ರಮಿಸಿದ ಈ ಮಹಾನ್ ನಾಯಕರು ಶೀಘ್ರ ಚೇತರಿಸಿಕೊಂಡು ಉತ್ತಮ ಆರೋಗ್ಯದಲ್ಲಿ ಇರಲಿ ಎಂದು ಹಾರೈಸಿದರು.
ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ನಮ್ಮ ದೇಶದ ಹಿರಿಯ ನಾಯಕರು ಹಾಗೂ ಮಾಜಿ ಪ್ರಧಾನ ಮಂತ್ರಿ ಶ್ರೀ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಲಾಯಿತು. ದೇಶ ಮತ್ತು ರೈತರ ಹಿತಕ್ಕಾಗಿ ಸದಾ ಶ್ರಮಿಸಿದ ಈ ಮಹಾನ್ ನಾಯಕರು ಶೀಘ್ರ ಚೇತರಿಸಿಕೊಂಡು ಉತ್ತಮ ಆರೋಗ್ಯದಲ್ಲಿ ಇರಲಿ ಎಂದು ಹಾರೈಸುತ್ತೇನೆ. pic.twitter.com/daFBQrz4QG
ಸದ್ಯಕ್ಕೆ ಆಸ್ಪತ್ರೆಯಲ್ಲೇ ಚಿಕಿತ್ಸೆ
ಇತ್ತೀಚೆಗೆ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ (Bengaluru Manipal Hospital) ದಾಖಲಾಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಆರೋಗ್ಯ ಸ್ಥಿರವಾಗಿರುವುದಾಗಿ ಎಂದು ಜೆಡಿಎಸ್ ಪಕ್ಷ ಒಂದು ದಿನದ ಹಿಂದೆ ತಿಳಿಸಿದೆ.
ತಾವುಗಳು ಆತಂಕಪಡುವ ಆಗತ್ಯವಿಲ್ಲ. ಮಾಜಿ ಪ್ರಧಾನಮಂತ್ರಿಗಳು ಹಾಗೂ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕರಾದ ದೇವೇಗೌಡರು ಚೇತರಿಸಿಕೊಂಡು ಗುಣಮುಖರಾಗಿದ್ದು, ಆರೋಗ್ಯವಾಗಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ನಾಡಿನ ಜನರ ಹಾರೈಕೆ, ಪ್ರೀತಿ, ಪ್ರಾರ್ಥನೆಯೇ ಅವರಿಗೆ ಶ್ರೀರಕ್ಷೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪಕ್ಷ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಹೆಚ್‌ಡಿಕೆ ಹೇಳಿದ್ದೇನು?
ಇನ್ನೂ ದೊಡ್ಡಗೌಡರ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ದೇವೇಗೌಡರು ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ 3-4 ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ ಎಂದು 2 ದಿನಗಳ ಹಿಂದೆ ಹೇಳಿದ್ದರು.
ಬೆಂಗಳೂರು: ಕಲ್ಯಾಣ ಕರ್ನಾಟಕ (Kalyana Karnataka) ಭಾಗದಲ್ಲಿ ಪ್ರವಾಹದಿಂದ ಆಗಿರೋ ಅನಾಹುತಕ್ಕೆ ಅವಶ್ಯಕತೆ ಬಿದ್ದರೆ ನಾನೇ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ, ಪರಿಹಾರಕ್ಕೆ ಮನವಿ ಮಾಡೋದಾಗಿ ಮಾಜಿ ಪ್ರಧಾನಿ ದೇವೇಗೌಡ (H D Deve Gowda) ತಿಳಿಸಿದ್ದಾರೆ.
ಪ್ರವಾಹ (Flood) ವಿಚಾರ ಕುರಿತು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಮೊನ್ನೆ ನೆರೆ ಹಾನಿ ಪ್ರದೇಶಗಳ ವೈಮಾನಿಕ ಸರ್ವೆ ಮಾಡಿದ್ದಾರೆ. ನಾನು ಅವರು ಮಾಡಿದ ಸರ್ವೆ ನೋಡಿದೆ. ನಾನು ಸಿಎಂ ಮೇಲೆ ಆಪಾದನೆ ಮಾಡೊಲ್ಲ. ವೈಮಾನಿಕ ಸರ್ವೆ ಮಾಡಿ 3 ದಿನ ಆಗಿದೆ. 6 ಜಿಲ್ಲೆಯಲ್ಲಿ ಬೆಳೆ ನಾಶ ಆಗಿದೆ. 50ಕ್ಕೂ ಹೆಚ್ಚು ಜನರು, ಜಾನುವಾರುಗಳು ಸತ್ತು ಹೋಗಿವೆ. ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಅವ್ರು ಎಕ್ರೆಗೆ ಇಷ್ಟು ಹಣ ಅಂತ ಘೋಷಣೆ ಮಾಡಿದ್ರು. ಆದರೆ ಫೀಲ್ಡ್ಗೆ ಹೋಗಿ ಎಷ್ಟು ಪ್ರದೇಶ ಹಾನಿಯಾಗಿದೆ ಅಂತ ನೋಡಿ ಸಂಬಂಧಪಟ್ಟವರ ನೋವಿಗೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಆಡಳಿತವೂ ಮಾಡಿಲ್ಲ. ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ತಿಂಗಳು ನನ್ನ ಮನೆಮುಂದೆ ಮಾಧ್ಯಮಗಳು ಕಾಯೋ ಹಾಗೇ ಮಾಡಿದ್ದು ಯಾರ ಪ್ರೇರಣೆಯಿಂದ – HDD ಕಿಡಿ
48 ಗಂಟೆ ಒಳಗೆ ಡಿಸಿಗಳು, ಜಿಲ್ಲಾ ಉಸ್ತುವಾರಿಗಳು ಜಾಗಕ್ಕೆ ಹೋಗಿ ಸ್ಥಳ ಪರಿಶೀಲನೆ ಮಾಡಬೇಕು. ನೋವಿನಲ್ಲಿ ಇರೋ ರೈತರಿಗೆ ಪರಿಹಾರ ಕೊಟ್ಟಿದ್ದಾರಾ ಇಲ್ವಾ ಅಂತ ನೋಡಿ ಮಾತಾಡಬೇಕು. ಮೂರ್ನಾಲ್ಕು ದಿನ ಆದ ಮೇಲೆ ಕಲಬುರಗಿಗೆ ವಿಮಾನದಲ್ಲಿ ಬಂದಿದ್ದಾರೆ. ನಾನೇ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗ್ತೀನಿ. ಸ್ಥಳ ಪರಿಶೀಲನೆ ಮಾಡಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಮಾತಾಡ್ತೀನಿ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ: ಹೆಚ್‌ಡಿಡಿ ಘೋಷಣೆ
ಈಗಾಗಲೇ ಪರಿಹಾರ ಕೊಡಿ ಅಂತ ಪ್ರಧಾನಿ ಮೋದಿ, ಅಮಿತ್ ಶಾಗೆ ಕುಮಾರಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ. ನಾನು ಅವಶ್ಯಕತೆ ಬಿದ್ದರೆ ಮೋದಿ, ಅಮಿತ್ ಶಾಗೆ ಪತ್ರ ಬರೆಯುತ್ತೇನೆ. ನಾನೇ ದೆಹಲಿಗೆ ಹೋಗಿ ಪ್ರಧಾನಿ ಅವರ ಬಳಿ ಪರಿಹಾರಕ್ಕಾಗಿ ಮನವಿ ಮಾಡ್ತೀನಿ ಎಂದು ಹೇಳಿದ್ದಾರೆ.
ಬೇರೆ ರಾಜ್ಯದ ಪ್ರವಾಹಕ್ಕೆ ಕೇಂದ್ರ ಹಣ ಕೊಟ್ಟಿದೆ. ಕರ್ನಾಟಕಕ್ಕೆ ಕೊಟ್ಟಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪದ ಪ್ರತಿಕ್ರಿಯಿಸಿದ ಅವರು, ನಾನು ಇದರಲ್ಲಿ ರಾಜಕೀಯ ಬೆರೆಸಲು ಹೋಗಲ್ಲ. ಕಾಂಗ್ರೆಸ್‌ನ ಶಾಸಕರು ಗ್ಯಾರಂಟಿ ಕಾರ್ಯಕ್ರಮವನ್ನ ಅನುಷ್ಠಾನಕ್ಕೆ ತರಲು ಹೋಗಿ, ಇವತ್ತು ರಾಜ್ಯ ಬರಡಾಗಿದೆ. ಹಣಕಾಸಿನ ಸ್ಥಿತಿ ಹದಗೆಟ್ಟಿದೆ ಅಂತ ಹೇಳ್ತಿದ್ದಾರೆ. ಇದನ್ನ ನಾನು ಹೇಳ್ತಿಲ್ಲ. ಕಾಂಗ್ರೆಸ್ ಶಾಸಕರು ಹೇಳ್ತಿದ್ದಾರೆ. ರಾಜ್ಯದ ಬೊಕ್ಕಸದಲ್ಲಿ ದುಡ್ಡು ಇದೆಯೋ? ಇಲ್ಲವೋ ಅಂತ ಅವರಲ್ಲೇ ಗೊಂದಲವಿದೆ. ರಾಜ್ಯ ಸರ್ಕಾರ ಪ್ರವಾಹದಿಂದ ಸಮಸ್ಯೆಗೊಳಗಾದ ಜನರಿಗೆ ತನ್ನ ಸಂಪನ್ಮೂಲದಿಂದ ಶಕ್ತಿ ಮೀರಿ ಸಹಾಯ ಮಾಡಬೇಕು ಎಂದಿದ್ದಾರೆ.
– ಜೆಡಿಎಸ್‌ನಿಂದ 1 ಲಕ್ಷ ರೂ. ಪರಿಹಾರ ಘೋಷಣೆ; ವಿದ್ಯಾಭ್ಯಾಸ ಖರ್ಚು ಭರಿಸುವ ಭರವಸೆ
ಹಾಸನ: ಇಲ್ಲಿನ ಮೊಸಳೆಹೊಸಳ್ಳಿಯಲ್ಲಿ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ ದುರಂತ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಮೂಲಕ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇತ್ತ ಟ್ರಕ್ ಡೈವರ್‌ಗೆ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಮುಂದುವರೆದ್ದು, ಆತನ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ನಡುವೆ ನಿನ್ನೆ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದ ಹೆಚ್.ಡಿ ದೇವೇಗೌಡ (HD Devegowda) ಅವರು ಇಂದು ಮೃತರ ಕುಟುಂಬಕ್ಕೆ ತೆರಳಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಜೆಡಿಎಸ್ ಪಕ್ಷದಿಂದ ಪರಿಹಾರ ಮೊತ್ತವನ್ನೂ ಘೋಷಣೆ ಮಾಡಿದ್ದಾರೆ. ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಪರಿಹಾರದ ಮೊತ್ತ ಹೆಚ್ಚಿಸುವಂತೆ ಸರ್ಕಾರಕ್ಕೆ ಆಗ್ರಹ ಕೂಡ ಮಾಡಿದ್ದಾರೆ. ಇದನ್ನೂ ಓದಿ: Hassan Tragedy | ಟ್ರಕ್ ಅಪಘಾತ ನಡೆದ ಜಾಗದಲ್ಲಿ ಹಂಪ್ಸ್ ನಿರ್ಮಿಸಲು ತೀರ್ಮಾನ
ವ್ಹೀಲ್ ಚೇರ್‌ನಲ್ಲೇ ಸ್ಥಳಕ್ಕೆ ಭೇಟಿ
ಶನಿವಾರ ಸಂಜೆ ಹಾಸನಕ್ಕೆ (Hassan) ಭೇಟಿ ನೀಡಿದ ಮಾಜಿ ಪ್ರಧಾನಿ ದೇವೇಗೌಡರು. ವ್ಹೀಲ್‌ಚೇರಲ್ಲೇ ತೆರಳಿ ಹಿಮ್ಸ್‌ಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಬಳಿಕ ಮಾತನಾಡಿದ ಹೆಚ್.ಡಿ ದೇವೇಗೌಡರು, ಜೆಡಿಎಸ್ ಪಕ್ಷದ ವತಿಯಿಂದ ಮೃತ ಕುಟುಂಬಸ್ಥರಿಗೆ 1 ಲಕ್ಷ ಪರಿಹಾರ ಘೋಷಣೆ ಮಾಡಿದರು. ಪೊಲೀಸರು ಮುಂಜಾಗ್ರತೆ ವಹಿಸಿದ್ದರೇ ಈ ಅನಾಹುತ ತಡೆಯಬಹುದಿತ್ತು ಎಂದರಲ್ಲದೇ ರಾಜ್ಯ ಸರ್ಕಾರ ಪರಿಹಾರದ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಇಂದು ಮೊಸಳೆಹೊಸಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ಕಟ್ಟಡದ ಕಾಮಗಾರಿ ವೀಕ್ಷಿಸಿದ ಹೆಚ್‌ಡಿಡಿ ಬಳಿಕ ಟ್ರಕ್ ಹರಿದು ಮೃತಪಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಶಾಸಕರಾದ ಹೆಚ್.ಡಿ ರೇವಣ್ಣ, ಹೆಚ್.ಪಿ ಸ್ವರೂಪ್‌ಪ್ರಕಾಶ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹಾಸನ ಟ್ರಕ್ ದುರಂತಕ್ಕೆ 10 ಬಲಿ – ಗಾಯಾಳುಗಳ ಆರೋಗ್ಯ ವಿಚಾರಿಸಲು ವ್ಹೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ಹೆಚ್‌ಡಿಡಿ
ಡಿಜೆಗೆ ಕುಣಿಯಲು ಬಂದು ಮಸಣ ಸೇರಿದ ಯುವಕರು
ಗಣೇಶ್ ಸಂಭ್ರಮ ನೋಡಲು ಬಂದವರು ನೋಡ ನೋಡ್ತಿದ್ದಂತೆ ಹೆಣವಾಗಿದ್ದು, ನಿಜಕ್ಕೂ ಘೋರ ದುರಂತವೇ ಸರಿ. ಟ್ರಕ್ ಹರಿದ ರಭಸಕ್ಕೆ ಸ್ಥಳದಲ್ಲೇ 9 ಜನರು ಸಾವನಪ್ಪಿದ್ದರೇ. ಗಂಭೀರವಾಗಿ ಗಾಯಗೊಂಡಿದ್ದ ಹಾಸನದ ಶಿವಯ್ಯನ ಕೊಪ್ಪಲು ಗ್ರಾಮದ 28 ವರ್ಷದ ಯುವಕನ ಬ್ರೈನ್ ಡೆಡ್ ಆಗಿತ್ತು. ಹಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಂದನ್ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರೆಳೆದಿದ್ದಾನೆ. ಪುತ್ರನ ಸಾವಿನ ಸುದ್ದಿ ತಿಳಿದು ಆಸ್ಪತ್ರೆ ಅವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆಟೋ ಚಾಲಕನಾಗಿದ್ದ ಚಂದನ್‌ಗೆ ಇನ್ನೂ ಮದುವೆಯಾಗಿಲ್ಲ.. ಕುಟುಂಬಕ್ಕೆ ಅಧಾರ ಸ್ತಂಭವಾಗಿದ್ದ, ತನ್ನ ಗ್ರಾಮದಿಂದ ಮೊಸಳೆಹೊಸಳ್ಳಿ ಬಾಡಿಗಿಗೆ ಬಂದಿದ್ದ ಚಂದನ ಟೀ ಕುಡಿಯಲು ಆಟೋ ನಿಲ್ಲಿಸಿ. ಕುತೂಹಲಕ್ಕೆ ಮೆರವಣಿಗೆ ನೋಡಲು ನಿಂತವನು ಮಸಣ ಸೇರಿದ್ದಾನೆ.
ಅಪಘಾತದಲ್ಲಿ ಸಾವನಪ್ಪಿದ ಹೊಳೆನರಸೀಪುರ ತಾಲೂಕು ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಈಶ್ವರ ಬಿನ್ ರವಿಕುಮಾರ್ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೇರವೇರಿದೆ. ಎಸ್‌ಎಸ್‌ಎಲ್‌ಸಿಯಲ್ಲಿ 95% ಅಂಕ ಪಡೆದು, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಈಶ್ವರ. ಮೆರವಣಿಗೆ ನೋಡಲು ಬಂದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆಟೋ ಓಡಿಸಿಕೊಂಡು ಗ್ರಾಮದಲ್ಲಿ ಜೀವನ ಸಾಗಿಸುತ್ತಿದ್ದ ಈಶ್ವರ ಪೋಷಕರು. ಮಗನನ್ನು ಚನ್ನಾಗಿ ಓದಿಸುವ ಆಕಾಂಕ್ಷೆ ಹೊಂದಿದ್ದರು. ಇದನ್ನೂ ಓದಿ: Hassan Tragedy | ಮೃತರೆಲ್ಲ ಹಳ್ಳಿಯವ್ರು, 10 ಲಕ್ಷ ಪರಿಹಾರ ಕೊಟ್ರೆ ಒಳ್ಳೆಯದು – ಸರ್ಕಾರಕ್ಕೆ ಆರ್.ಅಶೋಕ್ ಮನವಿ
– ಮೃತರ ಕುಟುಂಬಕ್ಕೆ ಜೆಡಿಎಸ್‌ನಿಂದ 1 ಲಕ್ಷ ಪರಿಹಾರ ಘೋಷಣೆ – ಸರ್ಕಾರದಿಂದ ಪರಿಹಾರ ಹೆಚ್ಚಳಕ್ಕೆ ದೇವೇಗೌಡರ ಆಗ್ರಹ
ಹಾಸನ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಹರಿದು 10 ಮಂದಿ ಸಾವಿಗೀಡಾಗಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾನು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಜನರ ಕಷ್ಟ ಕೇಳಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮೊಸಳೆ ಹೊಸಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ವಿಚಾರಿಸಲು ಹಾಸನಕ್ಕೆ ದೇವೇಗೌಡರು ಆಗಮಿಸಿದರು. ಜಿಲ್ಲಾಸ್ಪತ್ರೆಯ ಹೊರಭಾಗದಿಂದ ವ್ಹೀಲ್‌ಚೇರ್‌ನಲ್ಲೇ ಆಗಮಿಸಿದರು. ಪ್ರತಿಯೊಬ್ಬರ ಯೋಗಕ್ಷೇಮ ವಿಚಾರಿಸಿದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ
ಭೇಟಿಗೂ ಮುನ್ನ ದುರಂತದ ಕುರಿತು ಹಾಸನದ ಪ್ರವಾಸಿ ಮಂದಿರದಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿದ್ದರು. ಆ ಊರಿನ ಮಗ ನಾನು. ಅದಕ್ಕೆ 93 ನೇ ವಯಸ್ಸಿನಲ್ಲೂ ಬಂದಿದ್ದೇನೆ. ನಮ್ಮದು ಸಣ್ಣ ರಾಜಕೀಯ ಪಕ್ಷ. ವೈದ್ಯರ ಜೊತೆ ಚರ್ಚೆ ಮಾಡಿದ್ದೇನೆ, ಮೇಜರ್ ಎಲ್ಲಾ ನಾನೇ ಮಾಡ್ತೀವಿ. ಜಾಸ್ತಿ ಗಾಯ ಆದವರಿಗೆ ಪಕ್ಷದಿಂದ 25 ಸಾವಿರ, ಸಣ್ಣಪುಟ್ಟ ಗಾಯ ಆದವರಿಗೆ 20, ಸ್ವಲ್ಪ ಗಾಯ ಆದವರಿಗೆ 15 ಸಾವಿರ ಕೊಡ್ತೀವಿ. ಮೃತರ ಕುಟುಂಬಕ್ಕೆ ಪಕ್ಷದಿಂದ 1 ಲಕ್ಷ ಹಣ ಕೊಡುತ್ತೇವೆ ಎಂದು ತಿಳಿಸಿದ್ದರು.
5 ಲಕ್ಷ ಸಾಲಲ್ಲ, ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ದುಡಿಯೋ ಮಕ್ಕಳು ಸಾವನ್ನಪ್ಪಿದ್ದಾರೆ. ನಿಮ್ಮ ಹಣ ಬ್ಯಾಂಕಿನಲ್ಲಿಟ್ಟರೂ ಬರುವ ಬಡ್ಡಿಯಲ್ಲಿ ಬದುಕಲು ಆಗಲ್ಲ. ನೆರೆ ರಾಜ್ಯಕ್ಕೆ ಹೇಗೆ ಪರಿಹಾರ ಕೊಡ್ತಿದ್ದಾರೆ. ವಯಸ್ಸಾದವರು ಇದ್ದಾರೆ, ದುಡಿಯೋರು ಸಾವನ್ನಪ್ಪಿದ್ದಾರೆ, ನಾನು ರಾಜಕೀಯ ಮಾಡಲ್ಲ ಇಲ್ಲ. ಪರಿಹಾರವಾಗಿ 10 ಲಕ್ಷ ನೀಡಬೇಕು. ಕುಟುಂಬದ ಸ್ಥಿತಿ ನೋಡಿ ಪರಿಹಾರ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ
ಇಲ್ಲಿ ನಾನು ಜಾತಿ ತರಲ್ಲ, ಮಾಡಲ್ಲ. ಲೋಕಲ್ ಪೊಲೀಸ್ ಸ್ವಲ್ಪ ಕೇರ್ ತೆಗೆದುಕೊಂಡಿದ್ದರೆ ಇದು ಆಗ್ತಿರಲಿಲ್ಲ. ನಾಳೆ ಜಿಲ್ಲೆಗಳಿಗೆ ಹೋಗಬಹುದು. ದೇವೇಗೌಡರೇ 93 ನಡೀತಿದೆ. ರಾಜಕೀಯದಲ್ಲಿ ನಿಮಗೆ ಭ್ರಮೆ ಇಲ್ಲ. ಕೆಲಸ ಮಾಡುವ ಮನಸ್ಸು-ಶಕ್ತಿ ಇದೆಯೋ ಹೋರಾಟ ಮಾಡ್ತೀನಿ. ಅದು ನನ್ನ ನೇಚರ್. ನಾಳೆ ಪ್ರೆಸ್‌ಮೀಟ್ ಮಾಡಿದ್ರೆ ಬೇರೆ ಚರ್ಚೆ ಮಾಡೋಣ. ಇಲ್ಲಿ ಮಿಕ್ಸ್ ಮಾಡೋದು ಬೇಡ. ರಾಜಕೀಯದಲ್ಲಿ ನನ್ನ ಕೆಲಸ ಮುಗಿದಿಲ್ಲ. ಇನ್ನೂ ಸ್ವಲ್ಪ ಕೆಲಸ ಇದೆ ಎಂದು ತಿಳಿಸಿದರು.
ಟ್ರಕ್ ದುರಂತದಲ್ಲಿ ಮೃತಪಟ್ಟವರ ಪೈಕಿ 6 ಮಂದಿ ಹೊಳೆನರಸೀಪುರದವರು. ಸುಮಾರು 65 ವರ್ಷಗಳಿಂದ ಹೊಳೆನರಸೀಪುರ ಕ್ಷೇತ್ರದ ಜೊತೆ ದೇವೇಗೌಡರು ರಾಜಕೀಯ ನಂಟು ಹೊಂದಿದ್ದಾರೆ. ಮೊಸಳೆ ಹೊಸಳ್ಳಿ ಹೋಬಳಿಯಲ್ಲಿ ಹೆಚ್ಚು ಕೌಟುಂಬಿಕ ಸಂಬಂಧವನ್ನು ದೊಡ್ಡಗೌಡ ದಂಪತಿ ಹೊಂದಿದ್ದಾರೆ.
ಹಾಸನ: ಕಾಶ್ಮೀರದ (Kashmir) ವಿಚಾರದಲ್ಲಿ ಪ್ರಧಾನಮಂತ್ರಿಗಳು ಬಹಳ ಬಿಗಿ ಕ್ರಮ ತೆಗೆದುಕೊಂಡಿದ್ದಾರೆ. ಈ ವಿಷಯದಲ್ಲಿ ರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳು ಐಕ್ಯತೆಯನ್ನು ತೋರಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H D Devegowda) ಹೇಳಿದರು.
ಅವರು ಹಾಸನ (Hassan) ಜಿಲ್ಲೆಯ ದ್ಯಾಪಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಮಹೋತ್ಸವ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ 150 ಕೋಟಿ ಜನ, ಏಕಮುಖವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ತೀರ್ಮಾನಕ್ಕೆ ಬದ್ಧರಾಗಿರಬೇಕು. ಆಗ ಮಾತ್ರ ಇಂತಹ ದುರ್ಘಟನೆ ನಡೆಯುವುದಿಲ್ಲ ಎಂದರು. ಇದನ್ನೂ ಓದಿ: ಹೌತಿ ಕ್ಷಿಪಣಿ ದಾಳಿ – ಮೇ 6ರ ವರೆಗೆ ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನಯಾನ ಬಂದ್
ಪಹಲ್ಗಾಮ್‌ನಲ್ಲಿ (Pahalgam) 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದಾರೆ. ಇದರಲ್ಲಿ ಒಬ್ಬ ವಿದೇಶಿಗ. ನಮ್ಮ ದೇಶದ 25 ಜನರು ಇದ್ದು, ನಿಷ್ಕರುಣೆಯಿಂದ ಅವರನ್ನು ಹತ್ಯೆ ಮಾಡಿದಂತಹ ಉಗ್ರಗಾಮಿಗಳನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೂ ಪ್ರಧಾನಮಂತ್ರಿಗಳು ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದಾರೆ. ಈ ವಿಷಯದಲ್ಲಿ ನನ್ನ ಅನುಭವದಿಂದ ಅಭಿಪ್ರಾಯವನ್ನು ತಿಳಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಕೋಮುದ್ವೇಷ ಭಾಷಣ ಆರೋಪ – ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್
ಇದು ಸೂಕ್ಷ್ಮವಾದ ವಿಚಾರ. ಇದರ ಕುರಿತು ಕೇಂದ್ರ ಕೈಗೊಳ್ಳುವ ಕ್ರಮಕ್ಕೆ ನನ್ನದು, ನನ್ನ ಪಕ್ಷದ್ದು ಪೂರ್ಣ ಬೆಂಬಲವಿದೆ ಎಂದು ಈಗಾಗಲೇ ಹೇಳಿದ್ದೇನೆ. ಮುಂದೆ ಕೂಡ ಏನು ಕ್ರಮ ತೆಗೆದುಕೊಳ್ಳುತ್ತಾರೋ ಆ ಕ್ರಮಕ್ಕೆ ಇಡೀ ದೇಶ ಪಕ್ಷ ಭೇದ ಇಲ್ಲದೇ ಎಲ್ಲರೂ ಒಗ್ಗಟ್ಟಾಗಿ ಬೆಂಬಲ ನೀಡಬೇಕು. ಮುಂದೆ ಇಂತಹ ದುಷ್ಕ್ರತ್ಯ ನಡೆಯಬಾರದು. ಅವರಿಗೆ ಪಾಠ ಕಲಿಸಬೇಕು ಎಂದು ಪ್ರಧಾನಮಂತ್ರಿಗಳು ಪ್ರತಿಜ್ಞೆ ಮಾಡಿದ್ದು, ಅವರ ಹಿಂದೆ ನಿಲ್ಲುತ್ತೇವೆ ಎಂದರು. ಇದನ್ನೂ ಓದಿ: ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲುವು – ರೊಚ್ಚಿಗೆದ್ದ ಸಿಎಸ್‌ಕೆ ಅಭಿಮಾನಿಗಳಿಂದ ಹಾಸ್ಟೆಲ್ ಸಾಮಗ್ರಿ ಧ್ವಂಸ
ಮೊದಲು ಕಾಂಗ್ರೆಸ್ (Congress) ನಾಯಕರು ಸಹಮತವನ್ನು ವ್ಯಕ್ತಪಡಿಸಿದ್ದರು. ಮಧ್ಯೆ ಸ್ವಲ್ಪ ಒಡಕು ಶಬ್ದ ಬಂದ ಮೇಲೆ ಪುನಃ ಅವರು ಈ ವಿಷಯದಲ್ಲಿ ಐಕ್ಯತೆ ಬಗ್ಗೆ ಪ್ರತಿಪಾದನೆ ಮಾಡಿದ್ದಾರೆ ಎಂದು ಹೇಳಿದರು.
ಹಾಸನ: ನಾನು ಸಮಯಕ್ಕಾಗಿ ಕಾಯ್ತಾ ಇದಿನಿ, ಎಲ್ಲವನ್ನೂ ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡರ (H.D Devegowda) ಮಗನೇ ಅಲ್ಲ ಎಂದು ಮಾಜಿಸಚಿವ ಹೆಚ್.ಡಿ ರೇವಣ್ಣ (H.D Revanna) ಗುಡುಗಿದ್ದಾರೆ.
ಹಾಸನದ (Hassan) ದ್ಯಾಪಲಾಪುರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಕೆಲವರು ಹೇಳ್ತಾರೆ ದೇವೇಗೌಡರದು, ರೇವಣ್ಣ ಅವರದ್ದು ಮುಗಿತು ಅಂತಾರೆ. ಈ ಜಿಲ್ಲೆಗೆ ದೇವೇಗೌಡರ ಕೊಡುಗೆ ಏನೆಂದು ಜನರಿಗೆ ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಒಂದು ವಿಶೇಷ ಪಡೆ ಅಗತ್ಯವಿದೆ: ಸಿಎಂ
ಕೆಲವು ಅಧಿಕಾರಿಗಳು ರೇವಣ್ಣ ಹಾಗೂ ದೇವೇಗೌಡರದು ಮುಗೀತು ಎಂದು ತಿಳಿದುಕೊಂಡಿದ್ದಾರೆ. ಹಿಂದೆ ಕೂಡ ಜಿಲ್ಲೆಯಲ್ಲಿ ಎಲ್ಲಾ ಸ್ಥಾನ ಸೋತಿದ್ದೆವು. ಬಳಿಕ ಐದೇ ವರ್ಷಕ್ಕೆ ದೇವೇಗೌಡರು ಅಧಿಕಾರಕ್ಕೆ ಬಂದಿದ್ದರು. ಹಾಸನಕ್ಕೆ ದೇವೇಗೌಡರ ಕೊಡುಗೆ ಏನು ಅಂತಾರೆ. ರೈಲ್ವೆ ಯೋಜನೆ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ನಸಿರ್ಂಗ್ ಕಾಲೇಜು ಮಾಡಿದ್ದು ಯಾರು? ಹಾಸನ ಜಿಲ್ಲೆಯ ಶಿಕ್ಷಣಕ್ಕೆ ಕುಮಾರಸ್ವಾಮಿ ಐದು ಸಾವಿರ ಕೋಟಿ ರೂ. ಕೊಟ್ಟಿದ್ರು ಎಂದಿದ್ದಾರೆ.
ಕಾಂಗ್ರೆಸ್‍ನವರು ಹಾಸನ – ಮೈಸೂರು ರೈಲ್ವೆ ಯೋಜನೆ ಸ್ಥಗಿತ ಮಾಡಿದ್ದರು. ಆದರೆ ದೇವೇಗೌಡರು ಪ್ರಧಾನಿಯಾಗಿ ಹತ್ತೆ ತಿಂಗಳಿಗೆ ಆ ಯೋಜನೆ ಮಾಡಿದ್ರು. ಕಾಂಗ್ರೆಸ್‍ನವರು ಈ ಜಿಲ್ಲೆಯಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಜಿಲ್ಲೆ ಲೂಟಿಕೋರರ ಕೈ ಸೇರಿದೆ. ನಾನೂ ಇಲ್ಲೇ ಇರ್ತಿನೆ, ಇದೆಲ್ಲಾ ಎಷ್ಟು ದಿನ ಇರುತ್ತದೆ ನೋಡೋಣ. ಈ ದೇಶ ಉಳಿಯಬೇಕಾದರೆ ಮೋದಿಯವರು ಇರಲೇಬೇಕು. ಅವರಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ರನ್ನ ಸೋಲಿಸಿದ್ದು ಕಾಂಗ್ರೆಸ್ ಅಲ್ಲ ಎಂದು ಸಾಬೀತಾದ್ರೆ, ರಾಜೀನಾಮೆಗೆ ಸಿದ್ಧ: ಛಲವಾದಿ ಸವಾಲ್
ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ (Pahalgam Terror Attack) ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಂಡರೂ ನನ್ನ ಸಂಪೂರ್ಣ ಬೆಂಬಲ ಇರಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H D Devegowda) ಹೇಳಿದರು.
ಪಹಲ್ಗಾಮ್ ಘಟನೆಗೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಶ್ಮೀರ ಘಟನೆ ಬಗ್ಗೆ ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಮೊದಲ ಬಾರಿಗೆ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಪಾಕಿಸ್ತಾನದ (Pakistan) ಬೆಂಬಲದಿಂದ ಮಾಡಿದ್ದಾರೆ ಎಂಬ ಮಾಹಿತಿ ಕೇಂದ್ರದ ಬಳಿ ಇದೆ. ಇಡೀ ದೇಶದ ಎಲ್ಲಾ 140 ಕೋಟಿ ಜನರು ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ನೇತೃತ್ವದಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬೆಂಬಲ ಕೊಡಬೇಕು. ಒಂದೇ ಧ್ವನಿಯಲ್ಲಿ ಬೆಂಬಲ ಕೊಡಬೇಕು ಎಂದರು. ಇದನ್ನೂ ಓದಿ: Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್ ಸಭೆ
ಪ್ರಧಾನಿ ಮೋದಿ (Narendra Modi) ಅವರೇನು ನನಗೆ ಕರೆ ಮಾಡಿಲ್ಲ. ಮಾಡೋ ಅವಶ್ಯಕತೆಯೂ ಇಲ್ಲ. ಅವಶ್ಯಕತೆ ಬಿದ್ದರೆ ನಾನೇ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ನಾನು ಅನೇಕ ಸಮಯದಲ್ಲಿ ಪತ್ರಗಳನ್ನು ಬರೆದಿದ್ದೇನೆ. ಮುಂದೆಯೂ ಬರೆಯುತ್ತೇನೆ. ನನಗೆ ಅನ್ನಿಸಿದ್ದನ್ನ ಆತಂಕ ಇಲ್ಲದೇ ಹೇಳುತ್ತೇನೆ. ಮೋದಿ ಹಾಗೂ ನನ್ನ ಸಂಬಂಧ ಇಂದು-ನಾಳೆ ಅಂತ ಅಲ್ಲ. ನನ್ನ ಜೀವನದ ಕೊನೆ ಘಟ್ಟದಲ್ಲಿ ಈ ನಿರ್ಣಯ ಮಾಡಿದ್ದೇನೆ ಎಂದು ಹೇಳಿದರು.
ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆ ಹಿಡಿದಿರುವ ವಿಚಾರ ಮತ್ತು ಯುದ್ಧ ಆಗಬೇಕು ಎಂಬ ಒತ್ತಡಗಳ ವಿಚಾರವಾಗಿ ಪ್ರತಿಕ್ರಿಯಿಸಿದರು. ಯುದ್ದ ಮಾಡಬೇಕು ಅನ್ನುವ ಸನ್ನಿವೇಶದ ಬಗ್ಗೆ ನಮ್ಮ ದೇಶದ ಪ್ರಧಾನಿಗಳು ತೀರ್ಮಾನ ಮಾಡ್ತಾರೆ. ಇಡೀ ರಾಷ್ಟ್ರದ ನಾಯಕತ್ವ ಅಲ್ಲ. ವಿಶ್ವದಲ್ಲಿ ಮೋದಿ ಅವರಿಗೆ ಗೌರವ ಇದೆ. ವಿಶ್ವದ ಅನೇಕ ನಾಯಕರು ಈ ಘಟನೆ ಖಂಡಿಸಿದ್ದಾರೆ. ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಕೂಡಾ ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಪಹಲ್ಗಾಮ್‌ಗೆ ಹೋಗಿದ್ರೆ ಜಮೀರ್, ಖಾದರ್ ಬಿಟ್ಟು ಸಿದ್ದರಾಮಯ್ಯಗೆ ಗುಂಡು ಹೊಡೆಯುತ್ತಿದ್ರು: ಮುತಾಲಿಕ್
ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಕೊಡುವ ಅನೇಕ ರಾಷ್ಟ್ರಗಳು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಮುಂದೆ ಏನಾಗಬಹುದು ಅನ್ನೋ ಬಗ್ಗೆ ನಾನು ಈಗ ಹೇಳೋಕೆ ಆಗುವುದಿಲ್ಲ. ಆದರೆ ಪ್ರಧಾನಮಂತ್ರಿಗಳು ತೆಗೆದುಕೊಳ್ಳುವ ಆಯಾ ಸನ್ನಿವೇಶಕ್ಕೆ ತಕ್ಕಂತೆ ಏನು ನಿರ್ಣಯ ತೆಗೆದುಕೊಳ್ಳುತ್ತಾರೆ. ಅದಕ್ಕೆ ಇಡೀ ರಾಷ್ಟ್ರದ ಜನತೆ ಬೆಂಬಲ ಕೊಡಬೇಕು. ನಾನು ಒಬ್ಬ ಮಾತ್ರ ಅಲ್ಲ. ಎಲ್ಲರೂ ಬೆಂಬಲ ಕೊಡಬೇಕು. ಇದರಲ್ಲಿ ಯಾರು ರಾಜಕೀಯ ಮಾಡಬಾರದು. ಪ್ರಧಾನಿಗಳು ತೆಗೆದುಕೊಳ್ಳೋ ನಿರ್ಧಾರಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಸಹಕಾರ ಕೊಡಬೇಕು. ಇಂತಹ ಘಟನೆ ಮುಂದೆ ನಡೆಯಬಾರದು. ಕೃತ್ಯ ಮಾಡಿರೋರನ್ನ ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡೋವರೆಗೂ, ಯಾರು ಇದರ ಹಿಂದೆ ಇದ್ದಾರೆ ಅವರಿಗೂ ಶಿಕ್ಷೆ ಕೊಡೋಕೆ ಪ್ರಧಾನಿಗಳು ತೆಗೆದುಕೊಳ್ಳೋ ನಿರ್ಣಯಕ್ಕೆ, ರಕ್ಷಣಾ ಹಾಗೂ ಗೃಹ ಸಚಿವರು ತೆಗೆದುಕೊಳ್ಳೋ ನಿರ್ಧಾರಕ್ಕೆ ನಾವು, ನಮ್ಮ ಪಕ್ಷ ಬದ್ಧರಾಗಿ ಇದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಜೊತೆಗೆ ನಾವಿದ್ದೇವೆ, ಪಾಕ್ ವಿರುದ್ಧ ಇಂದಿರಾ ಗಾಂಧಿಯಂತೆ ಕ್ರಮ ಕೈಗೊಳ್ಳಬೇಕು: ಎಂ.ಬಿ ಪಾಟೀಲ್
ಘಟನೆ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ರಾಜಕೀಯ ಮಾಡ್ತಿರೋ ವಿಚಾರಕ್ಕೆ ಮಾತನಾಡಿದ ಅವರು, ಈಗಾಗಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಘಟನೆ ಬಗ್ಗೆ ಯಾವುದೇ ಕೊಂಕು ಇಲ್ಲದೇ ಪ್ರಧಾನಿಗಳ ಜೊತೆ ನಿಲ್ಲೋದಾಗಿ ಹೇಳಿದ್ದಾರೆ. ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರು ಹಿರಿಯ ಮುಖಂಡರು, ಅನುಭವದಿಂದ ಹೇಳಿದ್ದಾರೆ. ಕಾಂಗ್ರೆಸ್ ವರಿಷ್ಠರು ಮಾತಾಡಿರೋ ಮಾತಿಗೆ ಮಾತ್ರ ಬೆಲೆ ಹೆಚ್ಚು. ಇದಕ್ಕಿಂತ ಹೆಚ್ಚು ನಾನೇನೂ ಹೇಳೋದಿಲ್ಲ. ಕಾಂಗ್ರೆಸ್‌ನ ಸಹಕಾರ ಇದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರ ಮಾತಿಗೆ ಬೆಲೆ ಇಲ್ಲ ಅಂತ ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು.
– ರಾಮನಗರ ಹೆಸ್ರು ಬದಲಾವಣೆ ಮಾಡಿಯೇ ತೀರುತ್ತೇನೆ; ಡಿಸಿಎಂ ಶಪಥ
ಮೈಸೂರು: ಟೌನ್‌ಶಿಪ್ ಪಿತಾಮಹ ದೇವೇಗೌಡ (H D Devegowda) ಹಾಗೂ ಕುಮಾರಸ್ವಾಮಿ ಅವರು. ಯಾರು ಏನೇ ಹೇಳಿದ್ರು ಗ್ರೇಟರ್ ಬೆಂಗಳೂರು (Greater Bengaluru) ಮಾಡೇ ಮಾಡುತ್ತೇವೆ. ಬೆಂಗಳೂರಿಗಿಂತ (Bengaluru) ಚೆನ್ನಾಗಿ 10 ಸಾವಿರ ಎಕ್ರೆಯಲ್ಲಿ ಉತ್ತಮ ಸಿಟಿ ಮಾಡುತ್ತೇವೆ. ಇದು ಮಾಡೆಲ್ ಸಿಟಿ ಆಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಹೇಳಿದ್ದಾರೆ.
ಬಿಡದಿ ಟೌನ್‌ಶಿಪ್‌ಗೆ (Bidadi Township) ರೈತರ ಭೂಮಿ ಕೈಬಿಡುವಂತೆ ಸಿಎಂಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಪತ್ರ ಬರೆದಿರುವ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ಕಾಲದಲ್ಲೇ 7 ಟೌನ್‌ಶಿಪ್ ಮಾಡಬೇಕು ಎಂದು ತೀರ್ಮಾನ ಆಗಿತ್ತು. ಅದಕ್ಕಾಗಿ 300 ಕೋಟಿ ರೂ. ಹಣ ಕೊಟ್ಟಿದ್ದರು. ಟೌನ್‌ಶಿಪ್ ಪ್ಲಾನ್ ಅವರ ಕಾಲದಲ್ಲೇ ಆಗಿದ್ದು. ನಾನು ಡೈನೋಟಿಫಿಕೇಶ್ ಮಾಡಲು ಹೋಗಲ್ಲ ಎಂದರು. ಇದನ್ನೂ ಓದಿ: ಹಿಂದೂಗಳ ನರಮೇಧ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ – ಇಬ್ಬರು ಭಯೋತ್ಪಾದಕರ ಮನೆಗಳು ಬ್ಲಾಸ್ಟ್!
ಈ ಹಿಂದೆ ನನ್ನ ಮೇಲೆ ಏನೆಲ್ಲಾ ಹೇಳಿದ್ರು, ಅದೆಲ್ಲಾ ಇತಿಹಾಸ. ಟೌನ್‌ಶಿಪ್ ಪಿತಾಮಹ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು. ಯಾರು ಏನೇ ಹೇಳಿದ್ರು ಗ್ರೇಟರ್ ಬೆಂಗಳೂರು ಮಾಡೇ ಮಾಡುತ್ತೇವೆ. ಬೆಂಗಳೂರಿಗಿಂತ ಚೆನ್ನಾಗಿ 10 ಸಾವಿರ ಎಕ್ರೆಯಲ್ಲಿ ಉತ್ತಮ ಸಿಟಿ ಮಾಡುತ್ತೇವೆ. ಇದು ಮಾಡೆಲ್ ಸಿಟಿ ಆಗುತ್ತದೆ. ರೈತರು ಜಮೀನಿನ ಬದಲಾಗಿ ದುಡ್ಡು ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಅಭಿವೃದ್ದಿ ಪಡಿಸಿದ ಲ್ಯಾಂಡ್ ತೆಗೆದುಕೊಳ್ಳಬಹುದು ಎಂದು ಹೇಳಿದರು. ಇದನ್ನೂ ಓದಿ: ನಾನು ಒಂದು ಧರ್ಮದ ಪರ ಅಲ್ಲ: ಸಿದ್ದರಾಮಯ್ಯ
ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದನ್ನು ಹೇಗೆ ಮಾಡಬೇಕು ಅಂತಾ ನನಗೆ ಗೊತ್ತು. ಅದನ್ನು ಮಾಡೇ ಮಾಡುತ್ತೇನೆ. ನಾವೇನು ಹೊರಗಿನಿಂದ ಬಂದವರಲ್ಲ. ನಮ್ಮ ಭೂಮಿ ನಮ್ಮ ನೆಲದ ಬಗ್ಗೆ ನಮಗೆ ಗೊತ್ತು. ಯಾರು ಅಪ್ಪ ಅಮ್ಮನ ಹೆಸರು ಬದಲಾಯಿಸಲ್ಲ. ಅಫಿಡೆವಿಟ್ ಮಾಡಿಸಿಕೊಳ್ಳಬಹುದು ಅಷ್ಟೇ ಎಂದರು.
– ಸಿಎಂಗೆ ಪತ್ರ ಬರೆದು ಭೂಸ್ವಾಧೀನ ನಿಲ್ಲಿಸಲು ಮಾಜಿ ಪ್ರಧಾನಿ ಒತ್ತಾಯ
ರಾಮನಗರ: ಬಿಡದಿ (Bidadi) ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್‌ಶಿಪ್ ನಿರ್ಮಾಣ ಸಂಬಂಧ ರೈತರ ಭೂಮಿ ಸ್ವಾಧೀನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H D Devegowda) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ದೇವೇಗೌಡ ಅವರು ಪತ್ರದ ಮೂಲಕ ಭೂಸ್ವಾಧೀನ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿರುವ ಅಂಶಗಳು:
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿನ ಹಲವಾರು ಸರ್ವೆ ನಂಬರ್‌ಗಳಲ್ಲಿರುವ ಸುಮಾರು 10,000 ಎಕ್ರೆ ಜಮೀನನ್ನು ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್ ಯೋಜನೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: Pahalgam Terrorist Attack | ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಭರತ್ ಭೂಷಣ್ ಅಂತ್ಯಕ್ರಿಯೆ
ಜಿಲ್ಲೆಯ ರಾಮನಗರ (Ramanagara) ಮತ್ತು ಕನಕಪುರ ತಾಲೂಕಿನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಸಾವಿರಾರು ಎಕ್ರೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವನ್ನಾಗಿ ಸ್ಥಾಪಿಸಿದೆ. ಜಿಲ್ಲೆಯು ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಂತೆ ಇದ್ದು, ಇಲ್ಲಿ ಹವವಾರು ಉದ್ಯಮಿಗಳು ಖಾಸಗಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ಕೊಲೆಯಾಗಿದ್ದ ಮಹಿಳೆ ಪತ್ತೆ ಕೇಸ್; 2 ವರ್ಷ ಜೈಲುಶಿಕ್ಷೆ ಅನುಭವಿಸಿ ನಿರಪರಾಧಿಯಾಗಿ ಬಿಡುಗಡೆಯಾದ ಸುರೇಶ್
ಉಳಿದಂತೆ ಇರುವ ಕೃಷಿ ಭೂಮಿಯಲ್ಲಿ ರೈತರು ತಮ್ಮ ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಕೃಷಿ ಅವಲಂಬಿತರಾಗಿದ್ದಾರೆ. ಬಹುಪಾಲು ರೈತರು ಅತೀ ಸಣ್ಣ ಮತ್ತು ಸಣ್ಣ ಹಿಡುವಳಿದಾರರಾಗಿದ್ದು, ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಮತ್ತು ಸುತ್ತಮುತ್ತ ಲಕ್ಷಾಂತರ ಮರಗಿಡಗಳನ್ನು ಬೆಳೆಸಿದ್ದಾರೆ. ಇಂತಹ ಪ್ರದೇಶವನ್ನು ಟೌನ್‌ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಂಡರೆ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತದೆ. ಇದನ್ನೂ ಓದಿ: ಪಾಕ್ ನಟನ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಬಹಿಷ್ಕಾರ
ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ಧಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಗಳಾಗಿ ಬೀದಿಪಾಲಾಗುತ್ತಾರೆ. ಈ ಬಡ ರೈತರ ಜೀವನೋಪಾಯಕ್ಕೆ ಕೃಷಿ ಭೂಮಿಯೇ ಆಧಾರವಾಗಿದೆ. ಇದಲ್ಲದೇ ಕರ್ನಾಟಕ ಹೌಸಿಂಗ್ ಬೋರ್ಡ್ ಹಾಗೂ ಇತರೆ ಸರ್ಕಾರಿ ಪ್ರಾಧಿಕಾರಗಳು ಬಿಡದಿಯ ಸುತ್ತಮುತ್ತಲೂ ಹಲವಾರು ವಸತಿ ಯೋಜನೆಗಳನ್ನು ರೂಪಿಸಿ, ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಇದನ್ನೂ ಓದಿ: ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್
ಬಡ ರೈತರ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಟೌನ್‌ಶಿಪ್ ಯೋಜನೆಗೆ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಹೆಚ್.ಡಿ.ದೇವೇಗೌಡ ಅವರು ಪತ್ರದ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.
– ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಮಾಜಿ ಪ್ರಧಾನಿ
ನವದೆಹಲಿ: ಹಾಸನ (Hassan) ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಸನ ವರ್ತುಲ ರಸ್ತೆ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮಾಜಿ ಪ್ರಧಾನಿಗಳು, ರಾಜ್ಯಸಭೆ ಸದಸ್ಯರಾದ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.
ಸಂಸತ್ ಭವನದಲ್ಲಿರುವ ಸಾರಿಗೆ ಸಚಿವರ ಕಚೇರಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರೊಂದಿಗೆ ಗಡ್ಕರಿ ಅವರನ್ನು ಭೇಟಿಯಾದ ಮಾಜಿ ಪ್ರಧಾನಿಗಳು, ಹಾಸನ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಕರಾವಳಿ ಮತ್ತು ಒಳನಾಡು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಹೀಗಾಗಿ, ಸಂಚಾರ ದಟ್ಟಣೆ ಕಡಿಮೆ ಮಾಡುವ ಅಗತ್ಯವಿದ್ದು, ವರ್ತುಲ ರಸ್ತೆ ನಿರ್ಮಾಣದ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು. ಇದನ್ನೂ ಓದಿ: ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ – ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ
ಅಲ್ಲದೆ, ಕರ್ನಾಟಕದ ಮೂಲಸೌಕರ್ಯ ವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ತಾವು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದು, ನಾನಾ ಭಾಗಗಳಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಕ್ಷಿಪ್ರಗತಿಯ ಪೂರ್ಣಗೊಳಿಸಬೇಕು ಎಂದು ಮಾಜಿ ಪ್ರಧಾನಿಗಳು ಸಚಿವರನ್ನು ಕೋರಿದರು.
ಹಾಸನ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಸಾರಿಗೆ ಸಚಿವರಿಗೆ ಮನವಿ ಪತ್ರ ನೀಡಿದ ದೇವೇಗೌಡರು, ಯೋಜನೆಗೆ ಅದಷ್ಟು ಬೇಗ ಅನುಮೋದನೆ ನೀಡಬೇಕು ಎಂದು ಕೋರಿದರು. ಹಾಸನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ, ಸಂಪರ್ಕವನ್ನು ಸುಧಾರಿಸುವಲ್ಲಿ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವಲ್ಲಿ ಪ್ರಸ್ತಾವಿತ ರಿಂಗ್ ರಸ್ತೆಯ ನಿರ್ಣಾಯಕ ಪಾತ್ರವನ್ನು ನಿಯೋಗ ಒತ್ತಿಹೇಳಿತು.
ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಎರಡನೇ ಹಂತದ ನಗರವಾದ ಹಾಸನ, ಆರ್ಥಿಕ ಬೆಳವಣಿಗೆ ಮತ್ತು ನಗರ ವಿಸ್ತರಣೆಯಿಂದಾಗಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಹೊರವರ್ತುಲ ರಸ್ತೆ ಅಗತ್ಯವಾಗಿದೆ. ಈ ಯೋಜನೆಯು ಸಂಚಾರವನ್ನು ವಿಕೇಂದ್ರೀಕರಿಸಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಒದಗಿಸುತ್ತದೆ ಎಂದು ಮಾಜಿ ಪ್ರಧಾನಿಗಳು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಏ.1ರಿಂದ ಟೋಲ್ ದರದಲ್ಲಿ ರಿಯಾಯಿತಿ – ನಿತಿನ್ ಗಡ್ಕರಿ
ಪ್ರಸ್ತಾವಿತ ಹೊರ ವರ್ತುಲ ರಸ್ತೆಯು ಬೆಂಗಳೂರು-ನೆಲಮಂಗಲ-ಮಂಗಳೂರು ರಸ್ತೆ (NH-75) ಅನ್ನು ಹಾಸನ ವಿಮಾನ ನಿಲ್ದಾಣ, ಹಾಸನ-ಅರಸೀಕೆರೆ ರಸ್ತೆ (SH-71), ಹಾಸನ-ಹಳೇಬೀಡು-ಹಾಸನ ರಸ್ತೆ ಮತ್ತು ಹಾಸನ-ಬೆಲೂರು ರಸ್ತೆ (NH-373)ಗೆ ಸಂಪರ್ಕಿಸುತ್ತದೆ. ಈ ಸಂಪರ್ಕವು ಸುಗಮ ಸಾರಿಗೆಗೆ ಅನುಕೂಲವಾಗುತ್ತದೆ. ಅಲ್ಲದೆ, ಹಾಸನ ಜಿಲ್ಲೆಯಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು ಮತ್ತು ರಾಷ್ಟ್ರೀಯ ಪ್ರವಾಸಿ ಸರ್ಕ್ಯೂಟ್‌ನ ಭಾಗವಾಗಿರುವ ಹಾಸನ, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಶ್ರವಣಬೆಳಗೊಳ, ಮೈಸೂರು, ಮಡಿಕೇರಿ ಮತ್ತು ಮಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ದೇವೇಗೌಡರು ಕೇಂದ್ರ ಸಾರಿಗೆ ಸಚಿವರಿಗೆ ವಿವರಿಸಿದರು.
ಯೋಜನೆಯ ವಿವರ:
ಪ್ರಸ್ತಾವಿತ ವರ್ತುಲ ರಸ್ತೆಯ ಒಟ್ಟು ಉದ್ದ 21.950 ಕಿ.ಮೀ. ದೂರವನ್ನು ಹೊಂದಿದ್ದು, ಯೋಜನೆಗೆ ಸುಮಾರು 120 ಹೆಕ್ಟೇರ್ ಭೂಮಿ ಅಗತ್ಯವಿದೆ. ಜಿಎಸ್‌ಟಿ, ಭೂಸ್ವಾಧೀನ ಮತ್ತು ಸ್ಥಳಾಂತರ ಸೇರಿದಂತೆ ಯೋಜನೆಯ ಅಂದಾಜು ವೆಚ್ಚ ಸುಮಾರು 750 ಕೋಟಿ ರೂ. ಆಗಲಿದೆ ಎಂದು ಮಾಜಿ ಪ್ರಧಾನಿಗಳು ಸಾರಿಗೆ ಸಚಿವರಿಗೆ ವಿವರಿಸಿದರು.
ಯೋಜನೆಯ ಆರ್ಥಿಕ ಪರಿಣಾಮದ ಕುರಿತು ವಿವರಿಸಿದ ದೇವೇಗೌಡರು, ಉತ್ತಮ ರಸ್ತೆ ಮೂಲಸೌಕರ್ಯವು ಈ ಪ್ರದೇಶದಲ್ಲಿ ವೇಗಯುತ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಈ ವರ್ತುಲ ರಸ್ತೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ವ್ಯಾಪಾರ, ಕೃಷಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಹಾಸನದ ಜನರಿಗೆ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ
ನಿಯೋಗದಲ್ಲಿ ಮಾಜಿ ಸಚಿವ ಸಂಸದ ಹೆಚ್.ಡಿ.ರೇವಣ್ಣ, ಕೋಲಾರದ ಲೋಕಸಭೆ ಕ್ಷೇತ್ರದ ಸದಸ್ಯ ಎಂ.ಮಲ್ಲೇಶ್ ಬಾಬು, ಮಾಜಿ ಸಚಿವ ಎ.ಮಂಜು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ ಅವರಿದ್ದರು.