Tag: ಹೆಚ್.ಡಿ.ತಮ್ಮಯ್ಯ

  • ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ: ಹೆಚ್.ಡಿ.ತಮ್ಮಯ್ಯ

    ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ: ಹೆಚ್.ಡಿ.ತಮ್ಮಯ್ಯ

    – 20 ದಿನದಲ್ಲಿ 30 ಲಕ್ಷ ಮೌಲ್ಯದ ಬೆಳೆ ನಾಶ!

    ಚಿಕ್ಕಮಗಳೂರು: ತಾಲೂಕಿನ (Chikkamagaluru) ಕೆಲವೆಡೆ ಬೀಟಮ್ಮ ಗ್ಯಾಂಗಿನ (Wild Elephant) ಹಾವಳಿಗೆ ಮಲೆನಾಡಿನ ಜನ ಕಂಗಾಲಾಗಿದ್ದಾರೆ. 20 ದಿನದಲ್ಲಿ ಆನೆಗಳ ಹಿಂಡಿನಿಂದ 30 ಲಕ್ಷ ರೂ. ಮೌಲ್ಯಕ್ಕೂ ಹೆಚ್ಚಿನ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

    ಜನ ಮನೆಯಿಂದ ಹೊರಬರಲು ಸಹ ಹಿಂದೇಟು ಹಾಕುತ್ತಿದ್ದಾರೆ. ಮಾಲೀಕರು-ಕಾರ್ಮಿಕರು ತೋಟಗಳಿಗೂ ಹೋಗುತ್ತಿಲ್ಲ. 4 ಮರಿ ಆನೆ ಇರುವುದರಿಂದ ಆನೆಗಳನ್ನ ಓಡಿಸುವುದು ಅರಣ್ಯ ಇಲಾಖೆಗೆ ಕಷ್ಟವಾಗಿದೆ. ಇದರಿಂದ ಹಳ್ಳಿಗರು ಆತಂಕದಲ್ಲಿದ್ದಾರೆ. ಅಧಿಕಾರಿಗಳು ಸಹ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.

    ಆನೆಗಳಿಂದ ಬೆಳೆ ಹಾನಿಗೊಳಗಾಗದ ಪ್ರದೇಶಗಳಿಗೆ ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ (H. D. Thammaiah) ಶನಿವಾರ ಭೇಟಿ ನೀಡಿದ್ದರು. ಈ ವೇಳೆ ಮೂಗ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ದುಂಬಗೆರೆ, ಎಂಎಂಡಿ ಹಳ್ಳಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮಗಳ ಮುಖಂಡರ ಜೊತೆ ತೆರಳಿ ಬೆಳೆಹಾನಿ ಪರಿಶೀಲನೆ ನಡೆಸಿದರು. ಇದೇ ವೇಳೆ, ರೈತರ ಬೆಳೆಗಳ ಹಾನಿಗೆ ಹೆಚ್ಚುವರಿ ಪರಿಹಾರ ಕೊಡುವಂತೆ ಹಾಗೂ ಶೀಘ್ರ ಆನೆಗಳನ್ನು ಓಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಕಾಡಾನೆಗಳು ಬೀಡು ಬಿಟ್ಟಿರುವ ಪ್ರದೇಶಗಳ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಕ್ಕೆ ಶಾಸಕ ತಮ್ಮಯ್ಯ ಮೆಸ್ಕಾಂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಭೆ ನಡೆಸಿದ್ದು, ಗಂಭೀರ ಚರ್ಚೆ ಆಗಿದೆ. ಬೆಳಗಾವಿ ಅಧಿವೇಶನದಲ್ಲಿ (Session) ಹಾಗೂ ಅರಣ್ಯ ಸಚಿವರ ಜೊತೆ ಸಭೆ ನಡೆಸಿ ಆನೆ ಹಾವಳಿಗೆ ಶಾಶ್ವತ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

  • ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ – ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ

    ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ – ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ

    ಚಿಕ್ಕಮಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಹೆಚ್.ಡಿ ತಮ್ಮಯ್ಯ (HD Thammaiah) ಮನವಿ ಮಾಡಿದ್ದಾರೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದಲ್ಲಿ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗುವ ಆಸೆಯನ್ನ ನೂರಾರು ಜನರ ಮುಂದೆ ಹೊರಹಾಕಿದ್ದಾರೆ. ನಮಗೆಲ್ಲ ಟಿಕೆಟ್ ನೀಡಿ ತುಂಬಾ ಸಹಾಯ ಮಾಡಿದ್ದಾರೆ. ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಅವಧೂತ ವಿನಯ್ ಗುರೂಜಿ (Vinay Guruji) ಬಳಿ ಮನವಿ ಮಾಡಿದ್ದಾರೆ.

    ಇದೇ ವೇಳೆ ಜೆಡಿಎಸ್ (JDS) ವಿಧಾನ ಪರಿಷತ್ ಸದಸ್ಯ ಶರವಣ ಮಾತನಾಡಿ, ಕೂಡ ಅವಧೂತ ವಿನಯ್ ಗುರೂಜಿ ಮೂರು ಉಂಗುರ ಮಾಡಿಸಿದ್ದರು. 2018ರಲ್ಲಿ ಒಂದನ್ನು ಕುಮಾರಸ್ವಾಮಿಗೆ ಕೊಟ್ಟಿದ್ದರು. ಮತ್ತೊಂದನ್ನ ಯಡಿಯೂರಪ್ಪನವರಿಗೆ ನೀಡಿದ್ದರು, ಇಬ್ಬರೂ ಸಿಎಂ ಆಗಿದ್ದರು. ಉಳಿದೊಂದು ಉಂಗುರವನ್ನ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಬಡವರಿಗೆ ಬೇಕಾಗಿರುವುದು ಅಕ್ಕಿ, ದುಡ್ಡಲ್ಲ: ಸಿಟಿ ರವಿ ವಿರುದ್ಧ ಜಾರ್ಜ್ ವಾಗ್ದಾಳಿ

    ಚುನಾವಣೆಗೂ ಮುನ್ನವೇ ನಾನು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲವಾ? ಕುಮಾರಸ್ವಾಮಿಯವರು ಸಿಎಂ ಆಗುವುದಿಲ್ಲವಾ? ಎಂದು ಕೇಳಿದ್ದೆಕ್ಕೆ ಇಲ್ಲ ಇಲ್ಲ ಈ ಬಾರಿ ಡಿಕೆಶಿ ಸರ್ಕಾರ ಬರುವುದು ಎಂದು ಹೇಳಿದ್ದರು. ಡಿಕೆಶಿ ಕೂಡ ಮುಖ್ಯಮಂತ್ರಿ ಅಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಅಂಬೇಡ್ಕರ್ ಅಷ್ಟೆ ಅಲ್ಲ, ಭಗತ್ ಸಿಂಗ್, ರಾಜಗುರು, ಸುಖದೇವ್ ಸಹ ವಿರೋಧಿಗಳು: ಸಿ.ಟಿ ರವಿ

    ದೇವರು ಇರುವುದೇ ಬಂಡೆ ಮೂರ್ತಿಯಲ್ಲಿ:
    ಶಾಸಕ ತಮ್ಮಯ್ಯ ಹಾಗೂ ಶರವಣ ಅವರ ಮನವಿ ಪುರಸ್ಕರಿಸಿದ ವಿನಯ್ ಗುರೂಜಿ ಅವರು ಡಿಕೆಶಿ ಸಿಎಂ ಆಗುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಶಾಸಕ ತಮ್ಮಯ್ಯ ಮನವಿ ಮಾಡಿದ್ದು, ಅವರ ಆ ಬಯಕೆ ಈಡೇರಿಕೆಯ ದಿನಗಳು ದೂರವಿಲ್ಲ. ಡಿ.ಕೆ.ಶಿವಕುಮಾರ್ ಮಗುವಿನಂತಹ ಮನಸ್ಸಿನವರು, ಅವರು ಮಠಕ್ಕೆ ಚಿರಪರಿಚಿತರು. ದೇವರು ಇರುವುದೇ ಬಂಡೆಯ ಮೂರ್ತಿಯಲ್ಲಿ, ನಾವು ಮೊದಲು ಅದನ್ನ ಕರೆಯುವುದೇ ಬಂಡೆ ಎಂದು. ಬಂಡೆಯೊಳಗೊಂದು ಮುಗ್ಧ ಮನಸ್ಸು ಇದೆ ಎಂದು ಡಿಕೆಶಿ ಅವರನ್ನ ಹಾಡಿ ಹೊಗಳಿದ್ದಾರೆ.

  • ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?

    ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?

    ಚಿಕ್ಕಮಗಳೂರು: ಯಾವುದೇ ಜಾತಿ ಮತಗಳ ಬಲವೂ ಇಲ್ಲದೇ 19ನೇ ಸುತ್ತಿನವರೆಗೂ ಪೈಪೋಟಿ ಕೊಟ್ಟು ಸೋತಿರುವ ಸಿ.ಟಿ.ರವಿ (C.T.Ravi) ಅವರದ್ದು ಸೋಲೇ ಅಲ್ಲ. ಸಿ.ಟಿ.ರವಿ ಸೋಲಿನಲ್ಲೂ ಗೆಲುವನ್ನು ಕಂಡಿದ್ದಾರೆ ಎನ್ನುತ್ತಿದ್ದಾರೆ ತಾಲೂಕಿನ ಮತದಾರರು.

    20 ವರ್ಷಗಳಿಂದ ವಿಧಾನಸೌಧಕ್ಕೆ ಖಾಯಂ ಸದಸ್ಯನಾಗಿದ್ದ ಸಿ.ಟಿ.ರವಿಗೆ ಐದನೇ ಬಾರಿ ವಿಧಾನಸೌಧ ಪ್ರವೇಶಿಸುವ ಕನಸಿಗೆ ಮತದಾರರು ತಣ್ಣೀರೆರಚಿದ್ದಾರೆ. 20 ವರ್ಷಗಳಿಂದ ಹಿಡಿತ ಸಾಧಿಸಿದ್ದ ಅವರಿಗೆ ಈ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟಸಾಧ್ಯ. ಈ ಸೋಲನ್ನು ಸ್ವತಃ ಸಿ.ಟಿ.ರವಿಯವರೇ ಊಹಿಸಿರಲಿಲ್ಲ. ಮತದಾರರೇ ಮೋಸ ಮಾಡಿದ್ದಾರೋ, ನಂಬಿಕಸ್ಥರು ಮೋಸ ಮಾಡಿದ್ದಾರೋ ಅಥವಾ ಬದಲಾವಣೆಯ ಗಾಳಿ ಬೀಸಿದೆಯೋ ಗೊತ್ತಿಲ್ಲ. ಆದರೆ ಎರಡು ದಶಕಗಳಿಂದ ಚಿಕ್ಕಮಗಳೂರಿನಲ್ಲಿ (Chikkamagaluru) ಸೋಲಿಲ್ಲದ ಸರದಾರನಂತೆ ಪಾರುಪಥ್ಯ ಮೆರೆದಿದ್ದ ಅವರು ಮೊದಲ ಸೋಲನ್ನು ಕಂಡಿದ್ದಾರೆ. ಇದನ್ನೂ ಓದಿ: ನನ್ನ ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕಿದ್ರು: ಪರಾಜಿತ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಸ್ವ ಪಕ್ಷದ ವಿರುದ್ಧ ಕಿಡಿ

    ಗುರುವನ್ನು ಸೋಲಿಸಿದ ಶಿಷ್ಯ:
    ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ 6 ಜನ ಸ್ಪರ್ಧಿಸಿದ್ದರು. ಅವರೆಲ್ಲಾ 20 ವರ್ಷಗಳಿಂದಲೂ ಸಿ.ಟಿ.ರವಿ ವಿರೋಧಿಗಳೇ. ಅವರ ಎದುರು ಸೋತಿದ್ದರೆ ಬಿಜೆಪಿಯವರಿಗೆ (BJP) ಅಷ್ಟೇನು ನೋವಾಗುತ್ತಿರಲಿಲ್ಲ. ಆದರೆ ಅದೇ 20 ವರ್ಷಗಳಿಂದ ಸ.ಟಿ.ರವಿ ಜೊತೆಗಿದ್ದು, ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದ ತಮ್ಮಯ್ಯನೆದುರು (H.D.Thammaiah) ಸೋತಿದ್ದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಸಿ.ಟಿ.ರವಿ ಜೊತೆಗಿದ್ದು ರಾಜಕೀಯವನ್ನು ಕರಗತ ಮಾಡಿಕೊಂಡಿದ್ದ ತಮ್ಮಯ್ಯ ನಂತರ ಮಾಡಿದ ಒಳ ರಾಜಕೀಯವೇ ಇಂದು ಬಿಜೆಪಿ ಸೋಲಿಗೆ ಕಾರಣವಾಗಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇದನ್ನೂ ಓದಿ: ಸಮುದಾಯದ ಐವರಿಗೆ ಸಚಿವ ಸ್ಥಾನ, 1 ಡಿಸಿಎಂ ಕೊಡಿ – ಮುಸ್ಲಿಂ ಮುಖಂಡರ ಆಗ್ರಹ

    ಭೋಜೇಗೌಡರ ಲೀಡ್ ರೋಲ್?
    ಸಿ.ಟಿ.ರವಿ ಸೋಲಿಗೆ ಜೆಡಿಎಸ್ (JDS) ಎಂಎಲ್ಸಿ ಭೋಜೇಗೌಡರದ್ದು ಲೀಡ್ ರೋಲ್ ಇದೆ ಎನ್ನುತ್ತಾರೆ ಮತದಾರರು. ಯಾಕೆಂದರೆ ತಾನೇ ಜೆಡಿಎಸ್ ಟಿಕೆಟ್ ಕೊಡಿಸಿ ನಿಲ್ಲಿಸಿದ್ದ ತಿಮ್ಮಶೆಟ್ಟಿ ಜೆಡಿಎಸ್ ಅಭ್ಯರ್ಥಿಯಾಗಿ ಅಧಿಕೃತವಾಗಿ ಕಣಕ್ಕಿಳಿದಿದ್ದರೂ ಕೂಡಾ ರಾಜಾರೋಷವಾಗಿ ಜೆಡಿಎಸ್‌ಗೆ ಮತ ಹಾಕಬೇಡಿ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಹಳ್ಳಿಹಳ್ಳಿ ಸುತ್ತಿ ಪಂಚಾಯಿತಿ ಕಟ್ಟೆ ಮೇಲೆ ಭಾಷಣ ಮಾಡಿದ್ದರು. ಸಖರಾಯಪಟ್ಟಣ ಹಾಗೂ ಲಕ್ಯಾ ಭಾಗದಲ್ಲಿ ಒಂದಷ್ಟು ಹಿಡಿತವಿರುವ ಭೋಜೇಗೌಡ ಕೂಡಾ ಸಿ.ಟಿ.ರವಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ: ಕೈ ನಾಯಕರಿಗೆ ಸೂರ್ಯ ತಿರುಗೇಟು

    ಯಡಿಯೂರಪ್ಪ ಕೈಕೊಟ್ರಾ?
    ಇಂತಹದ್ದೊಂದು ಜಿಜ್ಞಾಸೆ ಚಿಕ್ಕಮಗಳೂರು ಮತದಾರರನ್ನು ಕಾಡುತ್ತಲೇ ಇದೆ. ಯಡಿಯೂರಪ್ಪ ಒಮ್ಮೆ ಚಿಕ್ಕಮಗಳೂರಿಗೆ ಭೇಟಿ ನೀಡಿ ಎಂ.ಜಿ.ರಸ್ತೆಯಲ್ಲಿ ಬಂದು ಒಮ್ಮೆ ಕೈಬೀಸಿ ಹೋಗಿದ್ದರೆ ಸಾಕಿತ್ತು. ಇಂದು ಅದೇ 5 ಸಾವಿರ ಮತಗಳ ಅಂತರದಲ್ಲಿ ಸಿ.ಟಿ.ರವಿ ಗೆಲ್ಲುತ್ತಿದ್ದರು ಎನ್ನುವುದು ಮತದಾರರ ಮನದಾಳದ ಮಾತು. ಇದರ ಜೊತೆಗೆ, ಜಿಲ್ಲೆಗೆ ಯಾವುದೇ ಸ್ಟಾರ್ ಕ್ಯಾಂಪೇನರ್ ಕೂಡ ಬರಲಿಲ್ಲ. 4 ಪಕ್ಷ ಹಾಗೂ 3 ಬಲಿಷ್ಠ ಸಮುದಾಯಗಳ ಜೊತೆ ಹೋರಾಡಿ, ಹೊಡೆದಾಡಿದ್ದು ಎಂದರೇ ಅದು ಸಿ.ಟಿ.ರವಿ ಮಾತ್ರ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಜೊತೆಗೆ ಇಡೀ ವ್ಯವಸ್ಥೆ ವಿರುದ್ಧವಾಗಿದ್ದರೂ ಕಾರ್ಯಕರ್ತರ ಜೊತೆ ಏಕಾಂಗಿಯಾಗಿ ಹೋರಾಡಿದ ಸಿ.ಟಿ.ರವಿ ಸೋಲನ್ನು ಅವರ ಅಭಿಮಾನಿಗಳು ಗೆಲುವು ಎಂದೇ ಬಣ್ಣಿಸಿದ್ದಾರೆ. ನಾವು ಸೋತಿದ್ದೇವೆ ಅಷ್ಟೇ, ಸತ್ತಿಲ್ಲ ಎಂದು ಸೋಲನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಗದ್ದುಗೆ ಏರಿದ ಕೈಗೆ ಅಣ್ಣಾಮಲೈ ಅಭಿನಂದನೆ

    ಸಿ.ಟಿ.ರವಿ ಸೋಲಿಗೆ ಪ್ರಮುಖ ಕಾರಣಗಳು :
    1. ಲಿಂಗಾಯುತ, ಕುರುಬ, ಮುಸ್ಲಿಂ ಸಮುದಾಯದ ವಿರುದ್ಧದ ಹೇಳಿಕೆಗಳು.
    2. ಸಿದ್ದರಾಮಯ್ಯ ವಿರುದ್ಧ ನಿರಂತರ ಹೇಳಿಕೆ ನೀಡುತ್ತಾ ಸಿದ್ದರಾಮಯ್ಯನನ್ನು ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದು.
    3. ರಾಷ್ಟ್ರ ರಾಜಕಾರಣಕ್ಕೆ ಹೋಗಿ ಕ್ಷೇತ್ರದಲ್ಲಿ ಒಂದಷ್ಟು ಹಿಡಿತ ಹಾಗೂ ಸಂಪರ್ಕ ಕಳೆದುಕೊಂಡದ್ದು.
    4. ಲಿಂಗಾಯುತ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಎಸ್‌ವೈ ಕೈಕೊಟ್ಟದ್ದು ಹಾಗೂ ಸ್ಟಾರ್ ಪ್ರಚಾರಕರ ಕೊರತೆ.
    5. ವ್ಯವಸ್ಥೆಯ ವಿರುದ್ಧ ಏಕಾಂಗಿಯಾಗಿ ಹೋರಾಡಿದ್ದು.
    6. ಸಿ.ಟಿ.ರವಿಯನ್ನು ಸೋಲಿಸಲೇಬೇಕೆಂದು ಸ್ವಪಕ್ಷೀಯರ ಜೊತೆ ವಿಪಕ್ಷೀಯರು ಕೈಜೋಡಿಸಿದ್ದು.
    7. 4 ಬಾರಿ ಶಾಸಕರಾಗಿದ್ದಾರೆ, ಸಾಕು ಎಂದು ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು.
    8. ಮೂಡಿಗೆರೆ ಕ್ಷೇತ್ರದಲ್ಲಿ ಎಂ.ಪಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದರಿಂದ ದಲಿತ ವಿರೋಧಿ ಎಂಬ ಹಣೆಪಟ್ಟಿಯ ಆರೋಪ. ಇದನ್ನೂ ಓದಿ: ಸಿಎಂ ಕುರ್ಚಿ ಫೈಟ್‌; 50-50 ಪ್ಲಾನ್‌ ಡಿಕೆಶಿ ಮುಂದಿಡ್ತಾರಾ ಸಿದ್ದು?

  • ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?

    ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?

    ಚಿಕ್ಕಮಗಳೂರು: ಬಿಜೆಪಿಯ (BJP) ಭದ್ರಕೋಟೆಯಾದ ಚಿಕ್ಕಮಗಳೂರು (Chikmagaluru) ತಾಲೂಕಿನಲ್ಲಿ ಈ ಬಾರಿ ಗುರು-ಶಿಷ್ಯರ ಕಾಳಗದಲ್ಲಿ ಚುನಾವಣಾ ಕಣ ರಂಗೇರಿದೆ. ಒಂದೆಡೆ ಹಿಂದೂ ಹುಲಿ ಎಂದೇ ಕರೆಸಿಕೊಳ್ಳುವ ಬಿಜೆಪಿಯ ಸಿ.ಟಿ.ರವಿ (CT Ravi) ಮತ್ತೊಂದೆಡೆ ಅದೇ ಹಿಂದೂ ಹುಲಿ ಗರಡಿಯಲ್ಲಿ ಕಾಂಗ್ರೆಸ್ಸಿನ ಹೆಚ್.ಡಿ.ತಮ್ಮಯ್ಯ (H D Thammaiah) ಪಳಗಿದ್ದು ಇಬ್ಬರ 20 ವರ್ಷಗಳ ಸ್ನೇಹ ಇದೀಗ ನಾನಾ-ನೀನಾ ಎನ್ನುವಂತಿದೆ.

    2004ರ ಚುನಾವಣೆಯಿಂದ ಸತತ ಗೆಲ್ಲುತ್ತಿರುವ ಸಿ.ಟಿ.ರವಿಗೆ ಈ ಚುನಾವಣೆ ಒಂದಷ್ಟು ಟೆನ್ಷನ್ ತಂದಿರುವುದು ಸತ್ಯ. ಸಿ.ಟಿ.ರವಿಯ ಜೊತೆಗೆ ಇದ್ದು ರಾಜಕೀಯ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದ ಮಾಜಿ ಬಿಜೆಪಿ ನಾಯಕ, ಹಾಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಇದೀಗ ಅದೇ ರಾಜಕೀಯ ಒಳ ಏಟುಗಳನ್ನು ಸಿ.ಟಿ.ರವಿಗೆ ಕೊಡುತ್ತಿರುವುದರಿಂದ ಬಿಜೆಪಿಗೆ ಬಿಸಿ ತುಪ್ಪವಾಗಿದೆ.

     

    ಹೆಚ್.ಡಿ.ತಮ್ಮಯ್ಯನವರ ಗೆಲುವು ಅಷ್ಟು ಸುಲಭವಿಲ್ಲ. ಪಕ್ಷಕ್ಕೆ ಸೇರಿದ ಎರಡೇ ತಿಂಗಳಲ್ಲಿ ಅರ್ಜಿ ಹಾಕದೇ ಟಿಕೆಟ್ ತಂದ ಹೆಚ್.ಡಿ.ತಮ್ಮಯ್ಯನವರ ಪರ ಮೂಲ ಕಾಂಗ್ರೆಸ್ಸಿಗರು ಮನಸ್ಸು ಬಿಟ್ಟಿದ್ದಾರೆ. ಕಾಂಗ್ರೆಸ್ ವರಿಷ್ಠರಿಗೆ ಸಿ.ಟಿ.ರವಿ ಮೇಲಿದ್ದ ಕೋಪಕ್ಕೆ ಕಾಫಿನಾಡ ಮೂಲ ಕಾಂಗ್ರೆಸ್ಸಿಗರು ಬಲಿಯಾದರು ಎಂಬ ಮಾತು ಇದೆ. ಕಾಫಿನಾಡ ಮೂಲ ಕಾಂಗ್ರೆಸ್ಸಿಗರು ಡಿಕೆಶಿ ಜೊತೆ ಅರ್ಧ ರಾತ್ರಿವರೆಗೂ ಸಭೆ ನಡೆಸಿದರೂ ಕೈ ನಾಯಕರು ತಮ್ಮಯ್ಯಗೆ ಮಣೆ ಹಾಕಿರುವುದು ಬ್ಯಾನರ್ ಕಟ್ಟಿದ ಕೈ ಕಟ್ಟಾಳುಗಳಿಗೆ ಬೇಸರ ತರಿಸಿದೆ. ಇಬ್ಬರು ಲಿಂಗಾಯುತ ಸಮುದಾಯದ ನಾಯಕರಿದ್ದರೂ ಕೂಡ ತಮ್ಮಯ್ಯಗೆ ಮಣೆ ಹಾಕಿರುವುದು ಕಾಂಗ್ರೆಸ್‌ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆತ

    ಸಿ.ಟಿ.ರವಿ ಅಭಿವೃದ್ಧಿಯೇ ನನ್ನ ಶ್ರೀರಕ್ಷೆ ಎಂದು ಅಖಾಡಕ್ಕಿಳಿದು ಶಿಷ್ಯನಿಗೆ ಮತ್ತೊಂದು ರಾಜಕೀಯ ಪಾಠ ಮಾಡುತ್ತಿದ್ದಾರೆ. 12, 13 ಸಾವಿರ ಜಾತಿ ಮತದ ಸಿ.ಟಿ.ರವಿ 20 ವರ್ಷ ಗೆದ್ದು ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಸಿ.ಟಿ.ರವಿಯ ವರ್ಚಸ್ಸು, ರಾಜಕೀಯ ತಂತ್ರಗಾರಿಕೆ, ಮಾತಿನ ಶೈಲಿ, ಹಿಂದುತ್ವದ ಬ್ರಾಂಡ್ ಮಧ್ಯೆ ಶಿವಮೊಗ್ಗ-ಹಾಸನ-ಮೈಸೂರು-ಮಂಗಳೂರು-ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಿದ್ದ ಸಿಎಂ ಕುರ್ಚಿ ಕಾಫಿನಾಡಿಗೂ ಬರಬಹುದು ಎನ್ನುವುದು ಸಿಟಿ ರವಿ ಬೆಂಬಲಿಗರ ಅಭಿಪ್ರಾಯ.

    ಈ ಮಧ್ಯೆ ಜೆಡಿಎಸ್‌ ಪರಿಷತ್‌ ಸದಸ್ಯ ಬೋಜೇಗೌಡ ಬಹಿರಂಗವಾಗಿಯೇ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಚಿಕ್ಕಮಗಳೂರಿನಲ್ಲಿ ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರಾ ನೇರ ಸ್ಪರ್ಧೆ ನಡೆಯುತ್ತಿದೆ.


    2018ರ ಚುನಾವಣೆ ಯಾರಿಗೆ ಎಷ್ಟು ಮತ?
    ಒಟ್ಟು ಮತದಾರರು : 2,16,230
    ಚುಲಾವಣೆಯಾದ ಮತಗಳು : 1,61,387
    ನೋಟಾ : 1,224

    ಸಿ.ಟಿ.ರವಿ : ಬಿಜೆಪಿ : 70,863
    ಬಿ.ಎಲ್. ಶಂಕರ್ : ಕಾಂಗ್ರೆಸ್ : 44,549
    ಬಿ.ಹೆಚ್.ಹರೀಶ್ : ಜೆಡಿಎಸ್ : 3,8317
    ಅಂತರ – 26,314

    ಚಿಕ್ಕಮಗಳೂರು ಕ್ಷೇತ್ರದ ಜಾತಿ ವಿವರ :
    ಲಿಂಗಾಯಿತರು : 45,291
    ಒಕ್ಕಲಿಗರು : 15,629
    ಮುಸ್ಲಿಂರು : 35,902
    ಕುರುಬರು : 32.212
    ಪ.ಜಾತಿ /ಪ.ಪಂ : 48,820
    ಬ್ರಾಹ್ಮಣರು : 6,122
    ಕ್ರಿಶ್ಚಿಯನ್ : 5,100
    ತಮಿಳರು : 6,640