Tag: ಹೆಚ್.ಡಿ.ಕೋಟೆ

  • ಕಬಿನಿ ಡ್ಯಾಂಗೆ ಶಿವಣ್ಣ ದಂಪತಿ ಭೇಟಿ

    ಕಬಿನಿ ಡ್ಯಾಂಗೆ ಶಿವಣ್ಣ ದಂಪತಿ ಭೇಟಿ

    – ಹಾಡಿ ಮಕ್ಕಳ ಜೊತೆ ಫೋಟೊ ತೆಗೆಸಿಕೊಂಡ ಹ್ಯಾಟ್ರಿಕ್‌ ಹೀರೋ

    ಮೈಸೂರು: ಮೈಸೂರಿನ (Mysuru) ಹೆಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿನ ಕಬಿನಿ ಡ್ಯಾಂಗೆ (Kabini Dam) ನಟ ಶಿವರಾಜ್ ಕುಮಾರ್ (Shivarajkumar) ತಮ್ಮ ಪತ್ನಿ ಸಮೇತ ಭೇಟಿ ನೀಡಿದ್ದರು.

    ಕಬಿನಿ ಡ್ಯಾಂನಲ್ಲಿ ಶಿವಣ್ಣ ಜೊತೆ ಫೋಟೊಗೆ ಅಭಿಮಾನಿಗಳು ಮುಗಿಬಿದ್ದರು. ರಸ್ತೆಯಲ್ಲಿ ಹೋಗುವಾಗ ಹಾಡಿ ಮಕ್ಕಳನ್ನ ಕಂಡು ಮಕ್ಕಳ ಜೊತೆ ಶಿವಣ್ಣ ದಂಪತಿ ಫೋಟೊ ತೆಗೆಸಿಕೊಂಡರು. ಇದನ್ನೂ ಓದಿ: `ಸ್ಮೋಕರ್ ಶಿವ’ ಚಿತ್ರಕ್ಕೆ ನೆನಪಿರಲಿ ಪ್ರೇಮ್ ಸಾಥ್

    1986ರಲ್ಲಿ ‘ಆನಂದ್‌’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಶಿವಣ್ಣ ಎಂಟ್ರಿ ಕೊಟ್ಟರು. ಸಿನಿ ಜರ್ನಿಯಲ್ಲಿ 40 ವರ್ಷ ಪೂರೈಸಿದ್ದಾರೆ. ಕನ್ನಡದ ಜನಮಾನಸದಲ್ಲಿ ಹ್ಯಾಟ್ರಿಕ್‌ ಹೀರೋ, ಸೆಂಚುರಿ ಸ್ಟಾರ್‌ ಆಗಿ ಉಳಿದಿದ್ದಾರೆ.

    ಶಿವರಾಜ್‌ಕುಮಾರ್‌ ಸದ್ಯ 125 ಸಿನಿಮಾಗಳನ್ನು ಪೂರೈಸಿದ್ದಾರೆ. ಸದ್ಯ ಅವರ ಕೈಯಲ್ಲಿ ಐದಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳಿವೆ. ಕೆಲ ದಿನಗಳ ಹಿಂದಷ್ಟೇ ಸಿನಿಪಯಣದಲ್ಲಿ 40 ವರ್ಷದ ಪೂರೈಸಿದ ಸಂಭ್ರಮವನ್ನು ಶಿವಣ್ಣ ಮಿಂದೆದ್ದರು. ಇದನ್ನೂ ಓದಿ: `ಮಹಾವತಾರ ಸಿನಿಮಾಟಿಕ್ ಯೂನಿವರ್ಸ್’ ಅನಾವರಣ – ಹೊಂಬಾಳೆ ಫಿಲ್ಮ್ಸ್ ದಿಟ್ಟ ಹೆಜ್ಜೆ

  • ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು

    ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು

    ಮೈಸೂರು: ನಾಲೆಗೆ ಬಿದ್ದ ಪುತ್ರಿಯನ್ನು (Daughter) ರಕ್ಷಿಸಲು ಹೋಗಿ ಒಂದೇ ಕುಟುಂಬದ (Family) ಮೂವರು ನೀರುಪಾಲಾದ ಘಟನೆ ಮೈಸೂರು (Mysuru) ಜಿಲ್ಲೆಯ ಹೆಚ್.ಡಿ.ಕೋಟೆ (HD Kote) ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡದಿದೆ.

    ಅಪ್ಪ ಮಹಮ್ಮದ್ ಕಪೀಲ್ (42), ಅಮ್ಮ ಶಾವರ ಭಾನು (35), ಪುತ್ರಿ ಶಾಹೀರಾ ಭಾನು (20) ಮೃತ ದುರ್ದೈವಿಗಳು. ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಮಗಳನ್ನು ಕಾಪಾಡಲು ಹೋಗಿ ಅಪ್ಪ, ಅಮ್ಮ ಹಾಗೂ ಪುತ್ರಿ ಮೂವರೂ ಸಾವನ್ನಪ್ಪಿದ್ದಾರೆ. ನುಗು ಜಲಾಶಯದ (Nugu Reservoir) ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಘಟನೆ ನಡೆದಿದೆ. ಶಾಹೀರಾ ಭಾನು ಮೊದಲಿಗೆ ಕಾಲು ಜಾರಿ ಬಿದ್ದಿದ್ದು, ರಕ್ಷಣೆಗೆ ಹೋದ ಅಪ್ಪ, ಅಮ್ಮ ಸೇರಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಯುವತಿಯನ್ನು ಹಿಂಬಾಲಿಸಿ ಮುತ್ತಿಟ್ಟು ಎಸ್ಕೇಪ್ – ಬೆಂಗಳೂರಿನ ಬೀದಿ ಕಾಮುಕ ಅರೆಸ್ಟ್

    ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಮೂವರ ಮೃತ ದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅಪಮಾನ – ಮುಸ್ಲಿಂ ಯುವಕನ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ನೇಣಿಗೆ ಕೊರಳೊಡ್ಡಿದ ಅಣ್ಣ

    ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ನೇಣಿಗೆ ಕೊರಳೊಡ್ಡಿದ ಅಣ್ಣ

    ಮೈಸೂರು: ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ಅಣ್ಣ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಮನಕಲಕುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದೆ.

    ವೆಂಕಟೇಶ್(28) ಮತ್ತು ಹರೀಶ್(26) ಮೃತ ಸೋದರರು. ರೈತನಾಗಿದ್ದ ಹರೀಶ್ ಟ್ರ್ಯಾಕ್ಟರ್ ಚಾಲಕ ಸಹ ಆಗಿದ್ದನು. ಹರೀಶ್ ಟ್ರ್ಯಾಕ್ಟರ್ ವೇಗವಾಗಿ ಚಲಾಯಿಸುತ್ತಿದ್ದರಿಂದ ತಂದೆ ಚಿನ್ಮಯಿಗೌಡ ಬುದ್ಧಿ ಹೇಳಿದ್ದರು. ಇತ್ತ ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ತಮ್ಮನಿಗೆ ಕರೆ ಮಾಡಿ ನಿಧಾನವಾಗಿ ಟ್ರ್ಯಾಕ್ಟರ್ ಚಲಾಯಿಸುವಂತೆ ತಿಳಿ ಹೇಳಿದ್ದರು. ಆತ್ಮೀಯ ಅಣ್ಣ ತನಗೆ ಬೈದನೆಂದು ನೊಂದ ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ತಮ್ಮ ಸಾವಿನ ಸುದ್ದಿ ತಿಳಿದ ವೆಂಕಟೇಶ್ ಮಾನಸಿಕವಾಗಿ ಕುಸಿದಿದ್ದರು. ಈ ವೇಳೆ ಮೊಬೈಲ್ ಗೆ ತಮ್ಮನ ಸಾವಿನ ಫೋಟೋಗಳು ಬಂದಿವೆ. ಫೋಟೋ ನೋಡಿ ಮತ್ತಷ್ಟು ಆಘಾತಕ್ಕೊಳಾದ ವೆಂಕಟೇಶ್, ನನ್ನಿಂದಲೇ ತಮ್ಮನ ಸಾವು ಆಯ್ತು ಎಂದು ನೊಂದು ಊರಿಗೆ ಬರುವ ಬದಲು ಸರಗೂರು ರಸ್ತೆ ಕಡೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಕ್ಕ-ಪಕ್ಕದಲ್ಲಿ ಸೋದರರ ಅಂತ್ಯಕ್ರಿಯೆ ಮಾಡಲಾಗಿದೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನ್ಯಾಯಕ್ಕಾಗಿ ನ್ಯಾಯಾಲಯದ ಆವರಣದಲ್ಲಿ ಬಿದ್ದು ಹೊರಳಾಡಿದ ಮಹಿಳೆ

    ನ್ಯಾಯಕ್ಕಾಗಿ ನ್ಯಾಯಾಲಯದ ಆವರಣದಲ್ಲಿ ಬಿದ್ದು ಹೊರಳಾಡಿದ ಮಹಿಳೆ

    ಮೈಸೂರು: ನ್ಯಾಯಕ್ಕಾಗಿ ನ್ಯಾಯಾಲಯದ ಆವರಣದಲ್ಲಿಯೇ ಮಹಿಳೆ ಬಿದ್ದು ಹೊರಳಾಡಿದ ಮನಕಲಕುವ ಘಟನೆ ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.

    ಹೆಚ್.ಡಿ.ಕೋಟೆಯ ಲಕ್ಷ್ಮಿ ಅವರ ಆಕ್ರಂದನದ ಕಣ್ಣೀರು ಕೋರ್ಟ್ ಆವರಣದಲ್ಲಿದ್ದ ಜನರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿದ್ದವು. 2005ರಲ್ಲಿ ಪಿರಿಯಾಪಟ್ಟಣ ತಾಲೂಕು ಬೈಲುಕುಪ್ಪೆಯ ಸತೀಶ್ ಎಂಬಾತನ ಜೊತೆ ಲಕ್ಷ್ಮಿ ವಿವಾಹವಾಗಿತ್ತು. ಹೆಣ್ಣು ಮಗು ಹುಟ್ಟಿದ್ದರಿಂದ ಸತೀಶ್ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದನು. ಅಲ್ಲದೇ ಮತ್ತೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿದೆ.

    ಲಕ್ಷ್ಮಿ ಅವರಿಗೆ ವಿಚ್ಛೇದನ ನೀಡದ ಸತೀಶ್ ಅಕ್ರಮ ಸಂಬಂಧ ಮುಂದುವರಿಸಿದ್ದನು. ಇದರಿಂದ ಬೇಸತ್ತ ಲಕ್ಷ್ಮಿ, ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಶುಕ್ರವಾರ ವಿಚಾರಣೆಗೆ ಲಕ್ಷ್ಮಿ ಮಗಳು ಹರ್ಷಿತಾ ಜೊತೆ ಆಗಮಿಸಿದ್ದರು. ನ್ಯಾಯಾಲಯದ ಆವರಣದಲ್ಲಿ ತಂದೆಯನ್ನ ಕಂಡ ಹರ್ಷಿತಾ ಮತನಾಡಿಸಲು ಹೋಗಿದ್ದಾಳೆ. ತನ್ನ ಮುಂದಿನ ಭವಿಷ್ಯಕ್ಕಾದ್ರೂ ಸಹಾಯ ಮಾಡುವಂತೆ ತಂದೆಯ ಬಳಿ ಮನವಿ ಮಾಡಿಕೊಂಡಿದ್ದಾಳೆ.

    ಈ ವೇಳೆ ಸತೀಶ್ ಕೆಟ್ಟ ಪದಗಳಿಂದ ಮಗಳನ್ನ ನಿಂದಿಸಿದ್ದಾನೆ. ಅಲ್ಲಿಯೇ ಇದ್ದ ಲಕ್ಷ್ಮಿ ಪತಿಯನ್ನ ಪ್ರಶ್ನಿಸಿಸಿದ್ದಕ್ಕೆ ಪತ್ನಿಯನ್ನು ಅವಾಚ್ಯ ಪದಗಳಿಂದ ರಸ್ತೆಯಲ್ಲಿ ತಳ್ಳಿ ಪರಾರಿಯಾಗಿದ್ದಾನೆ. ಪತಿಯ ವರ್ತನೆಗೆ ಬೇಸತ್ತ ಲಕ್ಮಿ ರಸ್ತೆಯಲ್ಲಿಯೇ ಕುಳಿತು ಆವರಣದಲ್ಲಿ ಕಣ್ಣೀರು ಹಾಕಿದ್ದಾರೆ.

  • ನಾಗರಹೊಳೆ, ಬಂಡೀಪುರ ಸಫಾರಿ ಬಂದ್

    ನಾಗರಹೊಳೆ, ಬಂಡೀಪುರ ಸಫಾರಿ ಬಂದ್

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಹೊಳೆ, ಬಂಡೀಪುರ ಸಫಾರಿ ಬಂದ್ ಮಾಡಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.

    ಜುಲೈ 10ರಿಂದ ಮುಂದಿನ ಆದೇಶದವರೆಗೆ ಹೊರ ಜಿಲ್ಲೆ/ರಾಜ್ಯ/ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಹೆಚ್.ಡಿ.ಕೋಟೆ ತಾಲೂಕಿನ ಎಲ್ಲ ಹೋಟೆಲ್, ರೆಸಾರ್ಟ್, ಲಾಡ್ಜ್, ಹೋಂ ಸ್ಟೇಗಳಲ್ಲಿ ವಸತಿ ಸೌಕರ್ಯ ನೀಡಕೂಡದು. ಮುಂದಿನ ಹೊರಭಾಗದ ಪ್ರವಾಸಿಗರ ಆನ್‍ಲೈನ್ ಅಥವಾ ಆಫ್‍ಲೈನ್ ಮುಂತಾದ ರೂಪದ ಬುಕ್ಕಿಂಗ್ ಮಾಡಿಕೊಳ್ಳಬಾರದು.

    ಸದ್ಯ ವಸತಿ ಸೌಕರ್ಯ ಪಡೆದುಕೊಂಡಿರುವ ಪ್ರವಾಸಿಗರನ್ನು ಬಲವಂತವಾಗಿ ಕಳಿಸಕೂಡದು. ಅವರ ಬುಕ್ಕಿಂಗ್ ಅವಧಿ ಮುಗಿಯವರೆಗೂ ಸೇವೆ ನೀಡತಕ್ಕದ್ದು ಎಂದು ಆದೇಶಿಸಿದೆ. ಪ್ರವಾಸಿ ಉದ್ದೇಶಕ್ಕೆ ಮುಂಗಡ ಬುಕ್ಕಿಂಗ್ ಮಾಡಿ ಆಗಮಿಸಿರದಿದ್ದಲ್ಲಿ ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದುಗೊಳಿಸಬೇಕು.

    ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಬರುವ ದಮ್ಮನಕಟ್ಟೆ, ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳಲ್ಲಿ ಬರುವ ಎಲ್ಲ ಸಫಾರಿಗಳಿಗೂ ಸಹ ಅನ್ವಯವಾಗುತ್ತದೆ. ಮುಂದಿನ ಆದೇಶದವರೆಗು ಇಡೀ ತಾಲೂಕಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವಂತಿಲ್ಲ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

  • ತಂತಿ ಬೇಲಿಗೆ ಸಿಲುಕಿದ್ದ ಚಿರತೆಯ ರಕ್ಷಣೆ-ಇತ್ತ ನಾಡಿಗೆ ಬಂದಿದ್ದ ಚಿರತೆ ಬೋನಿನಲ್ಲಿ ಸೆರೆ

    ತಂತಿ ಬೇಲಿಗೆ ಸಿಲುಕಿದ್ದ ಚಿರತೆಯ ರಕ್ಷಣೆ-ಇತ್ತ ನಾಡಿಗೆ ಬಂದಿದ್ದ ಚಿರತೆ ಬೋನಿನಲ್ಲಿ ಸೆರೆ

    ಮೈಸೂರು/ ರಾಮನಗರ: ಹಂದಿ ಬೇಟೆಗೆ ಜಮೀನಿನಲ್ಲಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆಯ ಎನ್.ಬೆಳತ್ತೂರು ಗ್ರಾಮದಲ್ಲಿ ನಡೆದಿದೆ. ಸಾವು ಬದುಕಿನೊಂದಿಗೆ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

    ಆಹಾರ ಅರಸಿ ಬಂದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. 4 ದಿನಗಳ ಹಿಂದೆ ಗಿರೀಶ್ ಎಂಬುವವರ ತೋಟದಲ್ಲಿ ಬೋನನ್ನ ಇಡಲಾಗಿತ್ತು. ರಾತ್ರಿ ಆಹಾರ ಅರಸಿ ಬಂದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿದೆ.

    ಕಳೆದ 2 ತಿಂಗಳಿನಿಂದ ಗ್ರಾಮದ ಸುತ್ತಮುತ್ತ ಎರಡು ಚಿರತೆಗಳ ಹಾವಳಿಗೆ ಸಾಕಷ್ಟು ಪ್ರಾಣಿಗಳು ಬಲಿಯಾಗಿದ್ದವು. ಇದೀಗ ಒಂದು ಚಿರತೆ ಸೆರೆಯಾಗಿದ್ದು, ಮತ್ತೊಂದು ಚಿರತೆಯನ್ನ ಸೆರೆ ಹಿಡಿಯುವಂತೆ ಗ್ರಾಮಸ್ಥರು ಇಲಾಖೆಗೆ ಮನವಿ ಮಾಡಿದ್ದಾರೆ. ಸೆರೆ ಸಿಕ್ಕ ಚಿರತೆ ಗಾಯಗೊಂಡಿದ್ದು ಚಿಕಿತ್ಸೆ ನೀಡಿ ಬಳಿಕ ಬನ್ನೇರುಘಟ್ಟ ಅರಣ್ಯಕ್ಕೆ ರವಾನಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

  • ಹೆಚ್‍ಡಿ ಕೋಟೆಯ ಜೆಡಿಎಸ್ ಶಾಸಕ ಚಿಕ್ಕಮಾದು ಇನ್ನಿಲ್ಲ

    ಹೆಚ್‍ಡಿ ಕೋಟೆಯ ಜೆಡಿಎಸ್ ಶಾಸಕ ಚಿಕ್ಕಮಾದು ಇನ್ನಿಲ್ಲ

    -ಅಭಿಮಾನಿಗಳು, ಕಾರ್ಯಕರ್ತರ ಕಂಬನಿ

    ಮೈಸೂರು: ಜಿಲ್ಲೆಯ ಹೆಚ್‍ಡಿ ಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಚಿಕ್ಕಮಾದು ಇನ್ನಿಲ್ಲ. ಕಳೆದ ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಾಸಕ ಚಿಕ್ಕಮಾದು ಅವರು ಇಂದು ನಸುಕಿನ ಜಾವ 2 ಗಂಟೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಕಳೆದ ಮೂರು ದಿನಗಳಿಂದ ಮೈಸೂರಿನ ಅರವಿಂದ ಆಸ್ಪತ್ರೆಯಲ್ಲಿ ಶಾಸಕ ಚಿಕ್ಕಮಾದು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಶಾಸಕ ಚಿಕ್ಕಮಾದು ಅವರ ಪಾರ್ಥೀವ ಶರೀರವನ್ನು ಅರವಿಂದ ಆಸ್ಪತ್ರೆಯಿಂದ ಮೈಸೂರಿನ ವಿಜಯನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಮಾಜಿ ಸಂಸದ ವಿಶ್ವನಾಥ್, ಶಾಸಕರಾದ ಜಿ.ಟಿ.ದೇವೆಗೌಡ, ಸಾ.ರಾ.ಮಹೇಶ್ ಸೇರಿದಂತೆ ಹಲವು ಪ್ರಮುಖರು ಚಿಕ್ಕಮಾದು ಅವರ ಅಂತಿಮ ದರ್ಶನ ಪಡೆದರು. ಶಾಸಕ ಚಿಕ್ಕಮಾದು ಇಬ್ಬರು ಪತ್ನಿಯರು ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

    ಕೆ.ಆರ್.ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿಯಲ್ಲಿ ಜನಿಸಿದ್ದ ಚಿಕ್ಕಮಾದು ಅವರು, ಹುಣಸೂರು ತಾಲೂಕಿನ ಹೊಸ ರಾಮೇನಹಳ್ಳಿಯಲ್ಲಿ ಹಲವು ವರ್ಷ ವಾಸವಿದ್ದರು. ನಂತರ ಮೈಸೂರಿಗೆ ಶಿಫ್ಟ್ ಆಗಿದ್ದರು. 1978 ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಧುಮುಕಿ, 1991ರಲ್ಲಿ ಹುಣಸೂರು ಕ್ಷೇತ್ರದಿಂದ ಚುನಾಯಿತರಾಗಿದ್ದರು. ನಂತರದ ದಿನಗಳಲ್ಲಿ ಜೆಡಿಎಸ್ ಸೇರಿದ ಚಿಕ್ಕಮಾದು ಅವರು 2007ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ರು. 2013ರಲ್ಲಿ ಹೆಚ್ ಡಿ ಕೋಟೆ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.