Tag: ಹೆಚ್.ಡಿ ಕುಮಾರ ಸ್ವಾಮಿ

  • ರಾಜಕೀಯ ಸಹವಾಸ ಬೇಡ: ಮಗನಿಗೆ ಸಲಹೆ ನೀಡಿದ ಕುಮಾರಸ್ವಾಮಿ

    ರಾಜಕೀಯ ಸಹವಾಸ ಬೇಡ: ಮಗನಿಗೆ ಸಲಹೆ ನೀಡಿದ ಕುಮಾರಸ್ವಾಮಿ

    ಗಾಗಲೇ ಎರಡು ಬಾರಿ ಚುನಾವಣೆಯಲ್ಲಿ (Election)  ಸೋತಿರುವ ನಿಖಿಲ್ ಕುಮಾರ್ (Nikhil Kumar) ಗೆ ಅತ್ಯುತ್ತಮ ಸಲಹೆಯೊಂದನ್ನು ನೀಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy). ನಿಖಿಲ್ ಗೆ ರಾಜಕೀಯ ಸಹವಾಸ ಬೇಡ. ಅವರು ಸಿನಿಮಾ (Cinema) ರಂಗದಲ್ಲೇ ಮುಂದುವರೆಯಲಿ ಎಂದು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ನಿಖಿಲ್‌ಗೆ ರಾಜಕೀಯದ ಸಹವಾಸ ಹೋಗಬೇಡ ಅಂತ ಹೇಳಿದ್ದೇನೆ. ಭಗವಂತ ಕೊಟ್ಟಿರೋ ಕಲೆಯಲ್ಲೇ ಮುಂದುವರೆಯುವಂತೆ ಹೇಳಿದ್ದೇನೆ. ಹಾಗಾಗಿ ಮುಂದಿನ ಐದು ವರ್ಷ ನಿಖಿಲ್ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ’ ಎಂದು ಹೇಳಿದರು. ಇದನ್ನೂ ಓದಿ:ಬಹುಕಾಲದ ಗೆಳತಿ ಜೊತೆ ಎಂಗೇಜ್‌ ಆದ ಸಿಂಗರ್ ಅರ್ಮಾನ್ ಮಲಿಕ್

    ‘ದಯವಿಟ್ಟು ರಾಜಕೀಯ ಜಂಗುಳಿ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ. ಈಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಸಿನಿಮಾ ಮಾಡಲು ನಿಖಿಲ್ ಮುಖ ಮಾಡಿದ್ದಾರೆ. ಮಂಡ್ಯ ಎಂಪಿಗೆ ನಿಲ್ಲುವಾಗಲೂ ಬೇಡ ಅಂದಿದ್ದೆ. ನಿಖಿಲ್ ಮಂಡ್ಯದಲ್ಲಿ ನಿಲ್ಲಲು ತಯಾರು ಇರಲಿಲ್ಲ. ಶಾಸಕರು ಹಾಗೂ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ತಲೆ ಕೊಟ್ಟ’  ಎನ್ನುವುದು ಕುಮಾರಸ್ವಾಮಿ ಮಾತು.

    ಮುಂದುವರೆದು ಮಾತನಾಡಿದ ಅವರು, ‘ಸೋಲು ಗೆಲುವು ಇರುತ್ತೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ಜನಾಭಿಪ್ರಾಯ ಏನು ಇದೆ ಅದಕ್ಕೆ ತಲೆಬಾಗಬೇಕು. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ. ಸದ್ಯಕ್ಕೆ ನಿಖಿಲ್‌ಗೆ ರಾಜಕೀಯ ಬೇಡಾ ಅಂತಾ ಹೇಳಿದ್ದೇನೆ. ಮುಂದೆ ನೋಡೋಣ, ಅವನ ಹಣೆಯಲ್ಲಿ ಬರೆದಿದ್ರೆ ನಾನು ತಪ್ಪಿಸೋಕೆ‌ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನ ರೂಪಿಸಿಕೋ ಎಂದು ನಿಖಿಲ್‌ಗೆ ಹೇಳಿದ್ದೇನೆ. ಭಗವಂತ ನಿಖಿಲ್‌ಗೆ ಒಂದು ಕಲೆ ಕೊಟ್ಟಿದ್ದಾನೆ. ಆ ಕಲೆಯಲ್ಲಿ‌ ಮುಂದುವರೆಯಪ್ಪಾ ಅಂತಾ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ಚುನಾವಣೆಗೆ ಬರಲ್ಲ. ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಇದೀಗ ಅದೇ ಜನ ಪಶ್ಚಾತ್ತಾಪ ಪಡುವಂತೆ ಆಗಿದೆ. ಇದೇ ರಾಮನಗರದ ಜನರು ಎಲ್ಲಾ ನೋಡ್ತಾ ಇದ್ದಾರೆ. ರಾಮನಗರವನ್ನು ಹೇಗೆ ಉದ್ಧಾರ ಮಾಡ್ತಾ ಇದಾರೆ ಅಂತಾ ನೋಡ್ತಾ ಇದೀನಿ’ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಖಿಲ್ ಕುಮಾರ್ ಚಿತ್ರಕ್ಕೆ ಆಯ್ಕೆಯಾದ ಹಿರೋಯಿನ್ ಎಲ್ಲಿಯವರು?

    ನಿಖಿಲ್ ಕುಮಾರ್ ಚಿತ್ರಕ್ಕೆ ಆಯ್ಕೆಯಾದ ಹಿರೋಯಿನ್ ಎಲ್ಲಿಯವರು?

    ನಿಖಿಲ್ ಕುಮಾರ್ ಸ್ವಾಮಿ (Nikhil Kumaraswamy) ನಟನೆಯ ಹೊಸ ಸಿನಿಮಾದ ಮೂಲಕ ಬಾಲಿವುಡ್ ನಟಿ ಯುಕ್ತಿ ತಾರೇಜ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ. ಇದು ಇವರ ದಕ್ಷಿಣದ ಎರಡನೇ ಚಿತ್ರವಾದರೆ, ಕನ್ನಡದಲ್ಲಿ ಮೊದಲು.

    ನಟ ನಾಗಶೌರ್ಯ ಜೊತೆ ರಂಗಾಬಲಿ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟವರು ಯುಕ್ತಿ ತಾರೇಜ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಹುಡುಗಿಯನ್ನು ಟಾಲಿವುಡ್ ಗೆ ಕರೆತರಲಾಗಿತ್ತು.

    ಯುಕ್ತಿ ತಾರೇಜ (Yukti Thareja) ಮೂಲತಃ ಹರಿಯಾಣ ಮೂಲದವರು. ದೆಹಲಿಯಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಮಾಡಿಕೊಂಡಿದ್ದಾರೆ. ಕೋವಿಡ್ ವೇಳೆಯಲ್ಲಿ ಮತ್ತೆ ಹರಿಯಾಣಕ್ಕೆ ಪ್ರಯಾಣ ಬೆಳೆಸಿದ್ದರು.

    ಕಾಲೇಜು ದಿನಗಳಲ್ಲೇ ಫ್ಯಾಷನ್ ಜಗತ್ತಿನತ್ತ ಮುಖ ಮಾಡಿ, ಓದುತ್ತಿರುವಾಗಲೇ ‘ದೆಹಲಿ ಫ್ರೆಶ್ ಫೇಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದೇ ಮಾಡೆಲಿಂಗ್ ಜಗತ್ತಿಗೆ ಬರಲು ಪ್ರೇರಣೆ ಅಂತಾರೆ.

    ದೆಹಲಿಯಲ್ಲೇ ಮಾಡೆಲಿಂಗ್ ಜಗತ್ತಿನಲ್ಲಿ ಹೆಸರು ಮಾಡುತ್ತಿರುವಾಗಲೇ ಸಿನಿಮಾ ರಂಗದತ್ತ ಒಲವು. ಮಾಡೆಲಿಂಗ್ ಮಾಡುವಾಗಲೇ ಚಿತ್ರದಲ್ಲಿ ನಟಿಸುವಂತೆ ಆಫರ್. ಹಾಗಾಗಿ ದೆಹಲಿಯಿಂದ ಮುಂಬೈಗೆ ಶಿಫ್ಟ್ ಆಗಿದ್ದಾರೆ.

    ಬಾಲಿವುಡ್ ನಲ್ಲಿ ‘ಲುಟ್ ಗಯೆ’ ಹಾಡಿನ ಮೂಲಕ ಸಖತ್ ಫೇಮಸ್. ಆ ಹಾಡಿನ ಮೂಲಕ ಬಾಲಿವುಡ್ ಗೆ ಪರಿಚಯವಾದ ನಟಿ. ಈ ಹಾಡು ಪಡ್ಡೆಗಳ ಹಾರ್ಟ್ ಬೀಟ್ ಹೆಚ್ಚು ಕಡಿಮೆ ಮಾಡಿತ್ತು.

    ಲುಟ್ ಗಯೆ ಹಾಡಿನ ನಂತರ ಬಾಲಿವುಡ್ ನಲ್ಲಿ ಸಾಕಷ್ಟು ಆಫರ್ ಬಂದರೂ, ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕಿದರು. ಹಾಗಾಗಿ ರಂಗಬಲಿ ಇವರ ಚೊಚ್ಚಲು ಸಿನಿಮಾವಾಯಿತು.

    ರಂಗಬಲಿ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದರು ಯುಕ್ತಿ ತಾರೇಜ. ಮೊದಲ ಸಿನಿಮಾದಲ್ಲೇ ಅಷ್ಟೊಂದು ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಚರ್ಚೆಗೂ ಕಾರಣವಾಗಿತ್ತು.

    ಇದೀಗ ಕನ್ನಡ ಸಿನಿಮಾ ರಂಗಕ್ಕೂ ಯುಕ್ತಿ ತಾರೇಜ ಕಾಲಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಯಾವ ರೀತಿಯ ಪಾತ್ರ ಮಾಡುತ್ತಾರೆ ಎನ್ನುವುದು ಬಹಿರಂಗವಾಗಿಲ್ಲ. ಮುಂದಿನ ದಿನಗಳಲ್ಲಿ ತಿಳಿಯಬಹುದು.

    ಈ ಸಿನಿಮಾದ ಮೂಲಕ ಲೈಕಾ ಸಂಸ್ಥೆ (Lyca Production) ಕೂಡ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಯುಕ್ತಿ ತಾರೇಜ ಆಯ್ಕೆ ಕೂಡ ಕುತೂಹಲ ಮೂಡಿಸಿದೆ.

    ಮೊನ್ನೆಯಷ್ಟೇ ಯುಕ್ತಿ ತಾರೇಜ ಮತ್ತು ನಿಖಿಲ್ ಕಾಂಬಿನೇಷನ್ ಚಿತ್ರಕ್ಕೆ ಮುಹೂರ್ತವಾಗಿದೆ. ಮಾಜಿ ಸಿಎಂ ಕುಮಾರ ಸ್ವಾಮಿ (H.D. Kumar Swamy) ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇವನಿಂದ ನಾನೇನು ಕಲಿಯಬೇಕಾಗಿಲ್ಲ, ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ – ಡಿ.ಕೆ.ಸುರೇಶ್‍ಗೆ ಏಕವಚನದಲ್ಲೇ ಹೆಚ್‍ಡಿಕೆ ವಾರ್ನಿಂಗ್

    ಇವನಿಂದ ನಾನೇನು ಕಲಿಯಬೇಕಾಗಿಲ್ಲ, ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ – ಡಿ.ಕೆ.ಸುರೇಶ್‍ಗೆ ಏಕವಚನದಲ್ಲೇ ಹೆಚ್‍ಡಿಕೆ ವಾರ್ನಿಂಗ್

    ರಾಮನಗರ: ಇವನಿಂದ ನಾನೇನು ಕಲಿಯಬೇಕಾಗಿಲ್ಲ. ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ. ಇವರ ಬ್ಯಾಕ್ ಗ್ರೌಂಡ್ ನನಗೆ ಗೊತ್ತಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

    ರಾಮನಗರದ ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಲ್ ಟನ್‍ಗೆ 98 ಸಾವಿರ ಕೊಡಬೇಕು ಅಂತ ಹೇಳಿ 980 ಕೋಟಿ ದಂಡ ಹಾಕಿದ್ದು ಯಾರು? ನಾನು ರಾಮನಗರದಲ್ಲಿ ಇರುವುದು ಅನ್ಯಾಯದ ಬಗ್ಗೆ ಪ್ರಶ್ನಿಸುವುದಕ್ಕೆ. ಅನ್ಯಾಯವಾದಾಗ ಅನ್ಯಾಯ ಆಗಿದೆ ಎನ್ನುವುದು ತಪ್ಪೇ? ಯಾವುದೇ ವಿಷಯದಲ್ಲಿ ಅನ್ಯಾಯ ಆಗಿರಲಿ, ಅದನ್ನು ಜನತೆ ಮುಂದಿಡುವೆ. ಇಂತಹದನ್ನು ಜನತೆ ಮುಂದೆ ಇಡಲೆಂದೇ ನಾನಿರುವುದು. ಅವರಿಂದ ನಾನು ವಿಚಾರಗಳನ್ನು ಕಲಿಯಬೇಕಿಲ್ಲ. ಅವರಿಂದ ಯಾವ ವಿಷಯ ಎತ್ತಬೇಕು, ರೈತರ ವಿಷಯದಲ್ಲಿ ಏನು ಮಾತನಾಡಬೇಕು ಎಂದು ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋತರೂ ಸಿದ್ದರಾಮಯ್ಯಗೆ ಸೊಕ್ಕು ಇನ್ನೂ ಇಳಿದಿಲ್ಲ: ಈಶ್ವರಪ್ಪ

    ಕನಕಪುರದಲ್ಲಿ ಎಷ್ಟು ರೈತ ಕುಟುಂಬಗಳನ್ನು ಹಾಳು ಮಾಡಿದ್ದಾರೋ, ಹಣ ದಾಹಕ್ಕೆ ಜಮೀನು ಒಡೆದು ಬಂಡೆಗಳನ್ನು ಲೂಟಿ ಮಾಡಿದ್ದಾರೋ, ಬಂಡೆಗಳನ್ನು ವಿದೇಶಕ್ಕೆ ಸಾಗಿಸಿದಂತವರು ಇವರು, ಇವರಿಂದ ನಾನು ಬುದ್ಧಿ ಕಲಿಯಬೇಕೇ? ರೈತರ ಬಗ್ಗೆ ರೈತರ ಪರವಾಗಿ ಯಾವ ವಿಷಯ ಚರ್ಚೆ ಮಾಡಬೇಕು ಅಂತ ನೀರಾವರಿ ಬಗ್ಗೆ 3 ಗಂಟೆಗಳ ಕಾಲ ಚರ್ಚೆ ನಡೆಸಿದ್ದೇನೆ. ಎತ್ತಿನಹೊಳೆ ಪರಿಸ್ಥಿತಿ ಏನು, ಮೇಕೆದಾಟು ಪರಿಸ್ಥಿತಿ ಏನು, ಕೃಷ್ಣ ಮೇಲ್ದಂಡೆ ಪರಿಸ್ಥಿತಿ ಏನಾಗಿದೆ, ನವಿಲೆ ಡ್ಯಾಮ್ ಕಟ್ಟಲು ಯಾವ ಸಮಸ್ಯೆ ಆಗಿದೆ. ಇದೆಲ್ಲಾ ವಿಷಯ ಸುದೀರ್ಘವಾಗಿ ಸದನದಲ್ಲಿ ಚರ್ಚೆ ಮಾಡಿದ್ದೇದೆ. ಇವರ ಬಳಿ ಒಂದು ಸಬ್ಜೆಕ್ಟ್ ಮಾಹಿತಿ ಇಟ್ಟುಕೊಂಡಿದ್ದರೋ? ನೀರಾವರಿ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ದ್ರೋಹ ಮಾಡಿವೆ. ಇದನ್ನು ಸದನದಲ್ಲಿ ಚರ್ಚೆ ನಡೆಸುವ ಸಂದರ್ಭದಲ್ಲೇ ಹೇಳಿದ್ದೇನೆ ಎಂದು ಹೇಳಿದ್ದಾರೆ.

    ಈಗಲ್ ಟನ್ ವಿಚಾರವಾಗಿ ಕೋರ್ಟ್ ಆದೇಶ ದಿಕ್ಕರಿಸಿದ್ದಾರೆ. ಇದರ ಬಗ್ಗೆ ನಾನು ಚರ್ಚೆ ಮಾಡಿದ್ದೇನೆ ಇದು ತಪ್ಪೇ? ಒಬ್ಬ ಜನ ಪ್ರತಿನಿಧಿಯಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ. ಯಾರಿಗೆ ಅನ್ಯಾಯವಾಗಲಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಜನಪ್ರತಿನಿಧಿಯ ಕರ್ತವ್ಯ. ಜನ ಪ್ರತಿನಿಧಿ ಕರ್ತವ್ಯ ಅಂದರೆ ಇವರಿಗೆ ಕಂಡವರ ಜಮೀನು ಲೂಟಿ ಹೊಡೆಯುವುದು, ಕಿಡ್ನಾಪ್ ಮಾಡಿಸುವುದು, ಮಕ್ಕಳನ್ನು ಹೆದರಿಸಿ ತಂದೆ ತಾಯಿ ಕೈಯಲ್ಲಿ ರುಜು ಹಾಕಿಸಿಕೊಳ್ಳುವುದು. ಇದು ಅವರ ಜೀವನ. ನಾನು ಈ ಜೀವನ ಮಾಡಿಲ್ಲ. ಇವನಿಂದ ನಾನೇನು ಕಲಿಯಬೇಕಾಗಿಲ್ಲ. ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ. ಇವರ ಬ್ಯಾಕ್ ಗ್ರೌಂಡ್ ನನಗೆ ಗೊತ್ತಿಲ್ವಾ.. ಯಾವ ರೀತಿ ದೇಶ ಲೂಟಿ ಹೊಡೆದಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ: ಸಿದ್ದರಾಮಯ್ಯ

    ಸರ್ಕಾರ ನಡೆಸುವವರಿಗೆ ಒಂದು ಸಹಿ ಹಾಕಬೇಕಾದರೆ ತಲೆಯಲ್ಲಿ ಬುದ್ಧಿ ಇರಬೇಕು. ಕಾಂಗ್ರೆಸ್ ಸರ್ಕಾರದಲ್ಲೇ ತಾನೇ ಈಗಲ್ ಟನ್ ವಿಚಾರ ಆಗಿರುವುದು. ಕೋರ್ಟ್ ಆದೇಶ ಧಿಕ್ಕರಿಸಿ ಈ ರೀತಿಯ ಆದೇಶ ಮಾಡಬೇಕೋ? ನಾಳೆ ಮತ್ತೆ ಸದನದಲ್ಲಿ ಮತ್ತಷ್ಟು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಇಂದು ಸಮುದಾಯ ಭವನ ಲೋಕಾರ್ಪಣೆ ಮಾಡಿದ ಅವರು, ಈ ಭಾಗದ ಹಲವು ಸಮುದಾಯದ ಜನರಿಗೆ ಅನುಕೂಲವಾಗುವ ಭವನ ನಿರ್ಮಿಸಿದ್ದಾರೆ. ಸ್ವಾಮೀಜಿ ಜನರ ಅನುಕೂಲಕ್ಕೆ ಭವನ ಕಟ್ಟಿಕೊಟ್ಟಿದ್ದಾರೆ. ಇಂದು ಈ ಸಮುದಾಯ ಭವನ ಲೋಕಾರ್ಪಣೆ ಮಾಡಿದ್ದೇನೆ. ಭವನ ಎಲ್ಲರೂ ಸದುಪಯೋಗ ಪಡಿಸಿಕೊಳ್ಳಲೆಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

  • ತಾತ ಆಗಲಿದ್ದಾರೆ ಎಚ್‍ಡಿಕೆ – ಸಂಭ್ರಮದಲ್ಲಿ ಗೌಡರ ಕುಟುಂಬ

    ತಾತ ಆಗಲಿದ್ದಾರೆ ಎಚ್‍ಡಿಕೆ – ಸಂಭ್ರಮದಲ್ಲಿ ಗೌಡರ ಕುಟುಂಬ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ಶೀಘ್ರವೇ ಹೊಸ ಅತಿಥಿಯೊಬ್ಬರು ಬರಲಿದ್ದಾರೆ. ಅಷ್ಟಕ್ಕೂ ಯಾರಪ್ಪಾ ಅದು ಅಂತ ಯೋಚಿಸ್ತಿದ್ದೀರಾ? ಹೌದು ನಟ ನಿಖಿಲ್ ಕುಮಾರ್ ಸ್ವಾಮಿಯವರು ತಂದೆಯಾಗಲಿದ್ದಾರೆ.

    ಇಂದು ನಿಖಿಲ್ ಮನದರಸಿ ರೇವತಿಯವರ ಹುಟ್ಟುಹಬ್ಬವಿದ್ದು, ಪ್ರೀತಿಯ ಪತ್ನಿಗೆ ನಿಖಿಲ್ ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದರು. ಇದೀಗ ಮಾಜಿ ಸಿಎಂ ಕುಮಾರ ಸ್ವಾಮಿಯವರ ಸೊಸೆ ರೇವತಿಯವರು 5 ತಿಂಗಳ ಗರ್ಭಿಣಿಯಾಗಿದ್ದಾರೆ.

    ನಿಖಿಲ್- ರೇವತಿ ದಂಪತಿಗಳು ಅಪ್ಪ- ಅಮ್ಮ ಆಗುತ್ತಿರುವ ಸಂತಸದಲ್ಲಿದ್ದರೆ, ಈ ಸಿಹಿ ಸುದ್ದಿ ಕೇಳಿ ಇಡೀ ದೇವೇಗೌಡರ ಕುಟುಂಬ ಫುಲ್ ಖುಷ್ ಆಗಿದೆ. ಒಟ್ಟಾರೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯವರ ಹುಟ್ಟುಹಬ್ಬದ ದಿನದಂದೇ ಈ ವಿಚಾರ ರಿವೀಲ್ ಆಗಿರುವುದು ಅಭಿಮಾನಿಗೆ ಸಂತಸ ತರಿಸಿದೆ. ಇದನ್ನೂ ಓದಿ: ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ