Tag: ಹೆಚ್‍ಡಿ ಕುಮಾರಸ್ವಾಮಿ

  • ಅವರು ರಾಜ್ಯದ ಹಣ ಲೂಟಿ ಮಾಡಲು ಬಂದಿರೋ ದೆಹಲಿ ಪ್ರತಿನಿಧಿ – `ಕೈ’ನಾಯಕನ ವಿರುದ್ಧ HDK ಕಿಡಿ

    ಅವರು ರಾಜ್ಯದ ಹಣ ಲೂಟಿ ಮಾಡಲು ಬಂದಿರೋ ದೆಹಲಿ ಪ್ರತಿನಿಧಿ – `ಕೈ’ನಾಯಕನ ವಿರುದ್ಧ HDK ಕಿಡಿ

    ಬೆಂಗಳೂರು: ಅವರು ರಾಜ್ಯದ ಹಣ ಲೂಟಿ ಮಾಡಲು ಬಂದಿರೋ ದೆಹಲಿ ಪ್ರತಿನಿಧಿ. ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್‌ನ ಹಂಗಿನ ಸರ್ಕಾರ ಆಗಿದೆ ಅನ್ನೋದು ಇದರಿಂದ ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದರು.

    BBMP ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ಕಿಡಿಕಾರಿದರು. ರಾಜ್ಯ ಸರ್ಕಾರಕ್ಕೆ ಸಂಬಂಧವಿಲ್ಲದ ದೆಹಲಿಯ ಪ್ರತಿನಿಧಿ ಅಧಿಕಾರಿಗಳ ಜೊತೆ ಸಭೆ ಮಾಡಿದ್ದಾರೆ. ಇದನ್ನ ನೋಡಿದರೆ ಉಪಮುಖ್ಯಮಂತ್ರಿಗಳು ಎಷ್ಟು ಸುಳ್ಳು ಹೇಳಿದ್ದಾರೆ ಗೊತ್ತಾಗುತ್ತದೆ. ನಾಡಿನ ಜನತೆಯ ಮುಂದೆ ಅವರ ನಾಟಕೀಯವಾದ ಮಾತುಗಳಿಗೆ ಇದು ಒಂದು ಸಾಕ್ಷಿ. ಎಷ್ಟು ದಿನ ಈ ರೀತಿಯ ಸುಳ್ಳುಗಳನ್ನ ಹೇಳಿಕೊಂಡು ಬದುಕುತ್ತೀರಾ ಆಕ್ರೋಶ ಹೊರ ಹಾಕಿದರು.

    ನಮ್ಮ ರಾಜ್ಯದ ಜನರ ಮತದಾನವನ್ನ ನಿಮ್ಮ ದೆಹಲಿ ಹೈಕಮಾಂಡ್‌ಗೆ ಗುಲಾಮರಾಗಿ ಇಟ್ಟುಕೊಂಡಿದ್ದೀರಾ. ಅಧಿಕಾರಿಗಳಿಗೆ, ಮಂತ್ರಿಗಳಿಗೆ ಸುರ್ಜೆವಾಲಾ ಏನು ಸೂಚನೆ ಕೊಟ್ಟಿದ್ದಾರೆ ಗೊತ್ತಿದೆ. ಜನ ಮತ ಹಾಕಿರೋದು ನಿಮಗೋ ಅಥವಾ ಕಾಂಗ್ರೆಸ್ ಹೈಕಮಾಂಡ್ ಗೋ? ಸರ್ಕಾರದ ತಿರ್ಮಾನಗಳ್ನ ಯಾರೋ ಬೀದಿಯಲ್ಲಿ ಹೋಗುವವರ ಜೊತೆ ಮೀಟಿಂಗ್ ಮಾಡುವುದನ್ನ ನೋಡಿದ್ರೆ ರಾಜ್ಯ ಎಂತ ದುರ್ಗತಿಗೆ ಬಂದಿದೆ ಅನ್ನೋದನ್ನ ನಾಡಿನ ಜನ ಅರ್ಥ ಮಾಡಿಕೊಳ್ಳಬೇಕು ಅಂತಾ ಕಿಡಿ ಕಾರಿದರು.

    ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್‌ನ ಹಂಗಿನಾ ಸರ್ಕಾರ ಆಗಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಸಭೆಯ ಫೋಟೋ ಬಿಡುಗಡೆ ಮಾಡಿರುವವರು ಯಾರು..? ಸಭೆಯಲ್ಲಿದ್ದ ನಿಮ್ಮ ಮಂತ್ರಿ ಒಬ್ಬ ಆ ಫೋಟೋಗಳನ್ನ ಬಿಡುಗಡೆ ಮಾಡಿರುವುದು. ಅಧಿಕಾರಿಗಳು ಕರೆದುಕೊಂಡು ಹೋಗಲು ಬಂದಿದ್ದಾರೆ ಅಂತ ಹೇಳುತ್ತೀರಾ? ಆ ಟೇಬಲ್ ನೋಡಿದರೆ ಸರ್ಕಾರದ ದಾಖಲೆಗಳನ್ನು ಇಟ್ಟುಕೊಂಡು ಕುಳಿತಿದ್ದಾರೆ. ರಾಜ್ಯವನ್ನ ಲೂಟಿ ಮಾಡಲು ದೆಹಲಿಯಿಂದ ಬಂದಿರುವ ಪ್ರತಿನಿಧಿ ಇವರು. ರಾಜ್ಯವನ್ನ ಲೂಟಿ ಹೊಡೆಯಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಡೈರಕ್ಷನ್ ಕೊಟ್ಟಿದೆ. ಹಣ ಲೂಟಿ ಮಾಡಲು ಬಂದಿರುವ ದೆಹಲಿ ಪ್ರತಿನಿಧಿ ಅವರು. ಸಂಪತ್ ಭರಿತ ರಾಜ್ಯವಾದ ಕರ್ನಾಟಕವನ್ನ ಲೂಟಿ ಹೊಡೆಯಲು ಎರಡು ರಾಷ್ಟ್ರೀಯ ಪಕ್ಷಗಳು ಇರುವುದು. ಸೋಲಿನಿಂದ ಹತಾಶರಾಗಿ ಇರುವವರು ನಾವಲ್ಲ. ಸೋಲು ಗೆಲುವನ್ನು ಎರಡನ್ನೂ ನೋಡಿದ್ದೇವೆ. ಜನರಿಗೆ ಗ್ಯಾರಂಟಿ ಭರವಸೆಗಳನ್ನು ಕೊಟ್ಟು ಈಡೇರಿಸಲು ಷರತ್ತು ಹಾಕಿ ನೀವು ಹತಾಶರಾಗಿದ್ದಾರೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

  • ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ, ಮೋದಿ ರ‍್ಯಾಲಿ ರದ್ದು ಮಾಡಿ: ಹೆಚ್‌ಡಿಕೆ ವಾಗ್ದಾಳಿ

    ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ, ಮೋದಿ ರ‍್ಯಾಲಿ ರದ್ದು ಮಾಡಿ: ಹೆಚ್‌ಡಿಕೆ ವಾಗ್ದಾಳಿ

    ಬೆಂಗಳೂರು: ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ರ‍್ಯಾಲಿಯಿಂದ (Rally) ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ ಮೋದಿ (Narendra Modi) ರ‍್ಯಾಲಿ ರದ್ದು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (H.D.Kumaraswamy) ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    ಭಾನುವಾರ ನೀಟ್ ಪರೀಕ್ಷೆ ಇದ್ದರೂ ಮೋದಿ ರ‍್ಯಾಲಿ ಮಾಡುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಪಕ್ಷಕ್ಕೆ ನಾಡಿನ ಜನರ ಸಮಸ್ಯೆಗಳಿಗಿಂತ ಅಧಿಕಾರ ಮುಖ್ಯ. ಅವರು ಅಧಿಕಾರಕ್ಕೆ ಬರಲು ಏನು ಬೇಕಾದರೂ ಮಾಡುತ್ತಾರೆ. ಜನರ ಬದುಕಿನ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಏನಾದರು ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವುದು ಅವರ ಅಜೆಂಡಾ. ಅವರಿಂದ ಸರಿ-ತಪ್ಪುಗಳನ್ನು ನಿರೀಕ್ಷೆ ಮಾಡಬೇಡಿ. ಈ ರ‍್ಯಾಲಿ ನಿಲ್ಲಿಸಬೇಕೆಂದು ನಾನು ಪ್ರಧಾನ ಮಂತ್ರಿಗಳಿಗೆ ಆಗ್ರಹ ಮಾಡುತ್ತೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಎಲ್‍ಕೆಜಿ ಮಕ್ಕಳ ಶಾಲಾ ದಾಖಲಾತಿಗೆ ವಯೋಮಿತಿ ನಿಗದಿ – 4 ವರ್ಷ ಕಡ್ಡಾಯ

    ಮಂಡ್ಯದಲ್ಲಿ (Mandya) ಸುಮಲತಾ (Sumalatha Ambareesh) ಗೆಲ್ಲಿಸಿ ತಪ್ಪು ಮಾಡಿದೆವು ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮಾತಿನಿಂದ ಸತ್ಯ ಹೊರಬಂದಿದೆ. ಮಂಡ್ಯ ಮತ್ತು ತುಮಕೂರಿನಲ್ಲಿ ಏನು ಮಾಡಿದ್ದಾರೆ ಎಂದು ಈಗ ಗೊತ್ತಾಯಿತು ತಾನೇ? ಈಗ ಅದು ಮುಗಿದು ಹೋದ ಅಧ್ಯಾಯ. ಸಮ್ಮಿಶ್ರ ಸರ್ಕಾರವನ್ನು ತೆಗೆದವರೇ ಸಿದ್ದರಾಮಯ್ಯ ಎಂದು ಹರಿಹಾಯ್ದರು. ಇದನ್ನೂ ಓದಿ: ರಾಜಕೀಯ ಅಖಾಡಕ್ಕೆ ಅಪ್ಪು ಎಳೆತಂದ ಪ್ರತಾಪ್ ಸಿಂಹ : ನಟ ಶಿವಣ್ಣ ಪ್ರತಿಕ್ರಿಯೆ

    ನಾನು ತಾಜ್‌ನಲ್ಲಿ ಕೂತಿದ್ದೆ, ಶಾಸಕರನ್ನು ನೋಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನಾನು ನೋಡದೇ ಹೋಗಿದ್ದರೆ ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ರೂ. ಅನುದಾನ ಕೊಡಲು ಆಗುತ್ತಿತ್ತಾ? ನಾನು ಸಿಎಂ ಆಗಿ ನಿದ್ದೆ ಮಾಡಿಲ್ಲ. ಅವ್ಯವಹಾರ ಮಾಡಲು ಹೋಗಿರಲಿಲ್ಲ. ಅಧಿಕಾರ ಹೋದಮೇಲೂ ಸಿದ್ದರಾಮಯ್ಯ ಯಾಕೆ ಸರ್ಕಾರಿ ಬಂಗಲೆಯಲ್ಲಿ ಕುಳಿತಿದ್ದರು? ಬಿಟ್ಟು ಕೊಡಬೇಕಿತ್ತು ಅಲ್ಲವಾ? ತಪ್ಪು ಮಾಡಿರೋರು ಸಿದ್ದರಾಮಯ್ಯ. ಈಗ ನನ್ನ ಮೇಲೆ ಆರೋಪ ಮಾಡಿದ್ದಾರೆ. ಅದರಿಂದ ಏನು ಉಪಯೋಗ? ನಾನು ಸಿಎಂ ಆಗಿದ್ದಾಗ ಸಿಎಂ ಫಂಡ್‌ನಿಂದ ಜನರಿಗೆ 109 ಕೋಟಿ ರೂ. ಪರಿಹಾರ ನೀಡಿದ್ದೇನೆ. ಜನರನ್ನು ನೋಡದೇ ಹೋಗಿದ್ದರೆ ಇದೆಲ್ಲಾ ಮಾಡಲು ಸಾಧ್ಯವಿತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇವಿಎಂ ಖರೀದಿಯಲ್ಲಿ ಅಕ್ರಮ ಆರೋಪ – ಚುನಾವಣಾ ಆಯೋಗದ ವಿರುದ್ಧದ ಪಿಐಎಲ್ ವಜಾಗೊಳಿಸಿದ ಸುಪ್ರೀಂ

    ಬಿಜೆಪಿಯಿಂದ ಬಜರಂಗದಳ (Bajarang Dal) ವಿಷಯ ಪ್ರಚಾರದ ಬಗ್ಗೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಅಂಶವೇ ಇಲ್ಲ. ಇಂತಹ ವಿಷಯಗಳನ್ನು ಕೆದಕೋದೇ ಎರಡೂ ಪಕ್ಷಗಳ ಕೆಲಸ. ಸ್ವಲ್ಪ ದಿನ ವಿಷಸರ್ಪ, ಈಗ ಬಜರಂಗದಳ ಎಂದು ಹೋಗುತ್ತಿದ್ದಾರೆ. ಚುನಾವಣೆ (Election) ಮುಗಿದ ಮೇಲೆ ಈ ವಿಷಯಗಳು ಮುಗಿಯುತ್ತವೆ ಎಂದರು. ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ಹಿನ್ನೆಲೆ – ಕರ್ನಾಟಕದಲ್ಲಿ ಅಮಿತ್ ಶಾ ಕಾರ್ಯಕ್ರಮಗಳು ರದ್ದು

    ಕಾಂಗ್ರೆಸ್ (Congress) ಮತ್ತು ಬಿಜೆಪಿ ಎರಡೂ ಪಕ್ಷಗಳೂ 100 ಸ್ಥಾನ ದಾಟುವುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗೆ ಭಯ ಶುರುವಾಗಿದೆ. ಈಗ ಬರುತ್ತಿರುವ ಸಮೀಕ್ಷೆಗಳು ಕೃತಕವಾದ ಸಮೀಕ್ಷೆಗಳು. ಈ ಸಮೀಕ್ಷೆಗಳಲ್ಲಿ ಸತ್ಯಾಂಶವಿಲ್ಲ. ಯಾವುದೇ ಕಾರಣಕ್ಕೂ ಎರಡು ಪಕ್ಷಗಳು 100 ಸ್ಥಾನ ದಾಟಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಆನೆ ಗಾತ್ರದ ಮೋದಿ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್‌ ಖರ್ಗೆ ಮಾತಾಡಿದ್ದಾರೆ – ಈಶ್ವರಪ್ಪ ಲೇವಡಿ

    ಈ ಬಾರಿ ಜನ ಜೆಡಿಎಸ್ (JDS) ಕೈಹಿಡಿಯುತ್ತಾರೆ. ಜನರ ಮುಂದೆ ನಾವು ವಿಷಯಾಧಾರಿತವಾಗಿ ಹೋಗಿದ್ದೇವೆ. ಆರ್ಥಿಕ ಶಕ್ತಿ ಇದ್ದಿದ್ದರೆ ನಾನೇ 130-140 ಸ್ಥಾನ ದಾಟುತ್ತಿದ್ದೆ. ನಮ್ಮಲ್ಲಿ ಆರ್ಥಿಕ ಶಕ್ತಿ ಕೊರತೆಯಿದೆ. ಆದ್ದರಿಂದ ನನ್ನ ನಿರೀಕ್ಷೆಗೆ ಹಿನ್ನಡೆ ಆಗಬಹುದು. ಜನ ನಮ್ಮ ಪರ ಇದ್ದಾರೆ. ಅವರು ದುಡ್ಡಿಗೆ ಮರಳಾಗದೆ ಬಹುಮತದ ಸರ್ಕಾರ ತರಲು ತೀರ್ಮಾನ ಮಾಡಿದ್ದಾರೆ. ಸಿಎಂ ಕ್ಷೇತ್ರದಲ್ಲಿ ನಮಗೆ ಒಳ್ಳೆಯ ಅಭಿಪ್ರಾಯವಿದೆ. ಜನ ದುಡ್ಡನ್ನು ತಿರಸ್ಕಾರ ಮಾಡಿ ಅವರ ಭವಿಷ್ಯಕ್ಕಾಗಿ ಜೆಡಿಎಸ್ ಬೆಂಬಲಿಸುವ ನಿರ್ಧಾರ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಜರಂಗದಳ ನಿಷೇಧ ವಿಚಾರಕ್ಕೆ ಕೈ ಹಾಕಿದ್ರೆ ಹುಷಾರ್: ಸಿದ್ದಲಿಂಗ ಶ್ರೀಗಳಿಂದ ಡಿಕೆಶಿಗೆ ಎಚ್ಚರಿಕೆ

  • ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ: ಹೆಚ್.ಡಿ.ದೇವೇಗೌಡ

    ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ: ಹೆಚ್.ಡಿ.ದೇವೇಗೌಡ

    ರಾಮನಗರ: ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತಹ (HD Kumaraswamy) ಮತ್ತೊಬ್ಬ ಮುಖ್ಯಮಂತ್ರಿಯಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ (HD Devegowda) ತಿಳಿಸಿದರು.

    ಚನ್ನಪಟ್ಟಣದ ಶೇರು ಸರ್ಕಲ್ ಬಳಿ ಬಹಿರಂಗ ಸಭೆ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಕಳೆದೆರಡು ದಿನಗಳಲ್ಲಿ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ‌ ಕೊಡುತ್ತೇನೆ ಎಂದು ಹೇಳುವ ವ್ಯಕ್ತಿ ಇದ್ರೆ ಅದು ಕುಮಾರಸ್ವಾಮಿ. ನುಡಿದಂತೆ ನಡೆಯುವ ರಾಜಕಾರಣಿ ಯಾವನಾದ್ರು ಇದ್ದರೇ ಅವರೇ ಕುಮಾರಸ್ವಾಮಿಯಾಗಿದ್ದಾರೆ. ಕಾಂಗ್ರೆಸ್‌ನವರ (Congress) ವ್ಯಂಗ್ಯದ ನಡುವೆ ಸಾಲ‌ ಮನ್ನಾ ಮಾಡಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗುತ್ತಾರೆ ಎಂದು ಹೇಳಿದರು.

    ಹಿಂದೂಸ್ತಾನದಲ್ಲಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ರೆ ಕುಮಾರಸ್ವಾಮಿ. ಸಿದ್ದರಾಮಯ್ಯ 50 ಸಾವಿರ ಸಾಲ‌ ಮನ್ನಾ ಮಾಡಿದ್ದರೂ 3,500 ಕೋಟಿ ರೂ. ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಹೆಚ್‌ಡಿಕೆ. ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ. ಕಾಂಗ್ರೆಸ್ (Congress) ಬಿಜೆಪಿಯವ್ರು (BJP) ನನ್ನ ಮುಂದೆ ನಿಂತು ಹೇಳಲಿ, ‌ಇದು ನನ್ನ ಸವಾಲು. ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದ್ರೂ ಚನ್ನಪಟ್ಟಣ ನನ್ನ ಕರ್ಮ ಭೂಮಿ ಅಂತ ನಿರಾಕರಿಸಿದರು.

    ಚನ್ನಪಟ್ಟಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ರೂ ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ. ಸಮೀಕ್ಷಾ ವರದಿಗಳ ಬಗ್ಗೆ ತಲೆ‌ಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧ. ಮುಖ್ಯಮಂತ್ರಿ ಕೊಡುವ ಹೆಗ್ಗಳಿಕೆ ಚನ್ನಪಟ್ಟಣಕ್ಕೆ ಸಲ್ಲಬೇಕು. ಯುವಕರು ದೇಶದ ಮುಂದಿನ ಪ್ರಜೆಗಳು ಈ ಪಕ್ಷವನ್ನ ಉಳಿಸಿ. ನಾವು ತಾಯಿ ಭುವನೇಶ್ವರಿ ಮಕ್ಕಳು ನಾಡಿಗಾಗಿ ತಮ್ಮ ಶಕ್ತಿ ತೋರಿಸಿ ಎಂದ ಹೆಚ್‌ಡಿಡಿ, ಕುಮಾರಸ್ವಾಮಿ ಇಡೀ ರಾಜ್ಯ ಸುತ್ತಬೇಕು ಅವರು ಬರಲು ಸಾಧ್ಯವಿಲ್ಲ ಎಂದರು. ದ್ವಿಚಕ್ರ ವಾಹನ ಸವಾರನಿಗೆ ಸೀಟ್ ಬೆಲ್ಟ್ ಹಾಕಿಲ್ಲ ಅಂತ ದಂಡ!

  • ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ

    ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ

    ರಾಯಚೂರು: ಬಿಜೆಪಿಯವರು (BJP) ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ (Manifesto) ಪಂಚರತ್ನ ವಿಷಯಗಳನ್ನು ನಕಲು ಮಾಡಿದ್ದಾರೆ. ನಮ್ಮ ಹಲವು ಯೋಜನೆಗಳನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಆರೋಪಿಸಿದ್ದಾರೆ.

    ರಾಯಚೂರಿನಲ್ಲಿ (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಮಾದರಿಯ ನೀರಾವರಿ ಯೋಜನೆ ಸಮ್ಮಿಶ್ರ ಸರ್ಕಾರದ ಯೋಜನೆ. ಈಗ ಅದನ್ನು ಬಿಜೆಪಿಯವರು ನಕಲು ಮಾಡಿದ್ದಾರೆ. ಮೂರು ಸಿಲಿಂಡರ್ ಕೊಡುತ್ತೇವೆ ಎನ್ನುತ್ತಾರೆ. ಅದರಿಂದ ಏನು ಉಪಯೋಗ? ಬಿಜೆಪಿಯವರು ಸಿಲಿಂಡರ್ ರೇಟ್ ನೆನಪಿಸಲು ಕೊಡುತ್ತಾರಾ? ಸರ್ಕಾರ ಇದ್ದಾಗಲೇ ಸಿಲಿಂಡರ್ ಕೊಡಬಹುದಿತ್ತು. ದಸರಾ ದೀಪಾವಳಿ ಗಣೇಶ ಹಬ್ಬಕ್ಕೊಂದು ಸಿಲಿಂಡರ್ ಕೊಡುತ್ತಾರ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ

    ಕುಮಾರಸ್ವಾಮಿ ಸಾಲಮನ್ನಾ ಮಾಡಲಿಲ್ಲ ಎಂದು ಕಾಂಗ್ರೆಸ್ (Congress) ನಾಯಕರು ಹೇಳುತ್ತಾರೆ. ಸಿದ್ದರಾಮಯ್ಯ (Siddaramaiah) ಅವರಿಗೆ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನೆನೆಪಿನ ಶಕ್ತಿ ಕಡಿಮೆಯಾಗಿದ್ದರೆ ನಾನೇ ನೆನಪು ಮಾಡುತ್ತೇನೆ. ಎರಡು ಸಾರಿ ಸಾಲಮನ್ನಾ ಮಾಡಿದ್ದು ಜೆಡಿಎಸ್ (JDS) ಸರ್ಕಾರ. 75 ವರ್ಷ ಆಡಳಿತ ಮಾಡಿದವರು ಈಗ ನಿರುದ್ಯೋಗ ಭತ್ಯೆ ಕೊಡುತ್ತೇನೆ ಎನ್ನುತ್ತಿದ್ದಾರೆ. ಎಷ್ಟು ಜನರಿಗೆ ನಿರುದ್ಯೋಗ ಭತ್ಯೆ ಕೊಡುತ್ತೀರಿ? ಅದನ್ನು ನಿಮ್ಮ ಅವಧಿಯಲ್ಲಿ ಯಾಕೆ ಕೊಡಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ

    ಹಲವಾರು ವರ್ಗದ ಜನರಿಗೆ ನೀವು ಇನ್ನೂ ಕೈಒಡ್ಡುವ ಸ್ಥಿತಿಯಲ್ಲಿದ್ದೀರಿ ಎಂದು ಎರಡು ರಾಷ್ಟ್ರೀಯ ಪಕ್ಷಗಳು ಹೇಳುತ್ತಿವೆ. ಜಿಎಸ್‌ಟಿ (GST) ಸಂಗ್ರಹದ ದುಡ್ಡು ಎಲ್ಲಿ? ಯಾವ ಕಂಪನಿಗೆ ಹೋಗುತ್ತಿದೆ? ಬಡವರ ಪರಸ್ಥಿತಿ ಸುಧಾರಣೆಗೆ ಬಂಡವಾಳ ಹಾಕುತ್ತಿದ್ದಿರೋ ಅಥವಾ ನಾಲ್ಕೈದು ಕಂಪನಿಯ ಅಭಿವೃದ್ಧಿಗೆ ಹಾಕ್ತಿರಾ? ಮೂರುವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? ನಮ್ಮ ಆಡಳಿತ ಅವಧಿ ಬಗ್ಗೆ ಚರ್ಚೆ ಮಾಡುವ ನೈತಿಕತೆ ಯಾರೂ ಉಳಿಸಿಕೊಂಡಿಲ್ಲ. ಎರಡೂ ಪಕ್ಷ ಹಣದಲ್ಲಿ ಏನಾದರೂ ಕೊಂಡುಕೊಳ್ಳುತ್ತೇವೆ ಎಂದು ತಿಳಿದಿದ್ದಾರೆ. ನಮ್ಮ ಪಂಚರತ್ನ ಕಾರ್ಯಕ್ರಮಕ್ಕೂ ಇವರ ಕಾರ್ಯಕ್ರಮಕ್ಕೂ ಬಹಳ ವ್ಯತ್ಯಾಸವಿದೆ ಎಂದರು. ಇದನ್ನೂ ಓದಿ: ಅಂಬರೀಶ್ ಅಂತಿಮ ದರ್ಶನ ಪಡೆಯಲು ಬರದಿದ್ದಕ್ಕೆ ರಮ್ಯಾ ಮೊದಲ ಪ್ರತಿಕ್ರಿಯೆ

    ಜೆ.ಪಿ.ನಡ್ಡಾ (J.P.Nadda) ಜೆಡಿಎಸ್‌ಗೆ ವೋಟು ಹಾಕಬೇಡಿ 10ರಿಂದ 15 ಸೀಟು ಬರುತ್ತೆ ಅಷ್ಟೇ ಎಂದಿದ್ದಾರೆ. ಬಿಜೆಪಿ ಆ ಸ್ಥಿತಿಗೆ ಬಂದರೂ ಅಚ್ಚರಿಯಿಲ್ಲ. ರಾಜ್ಯದಲ್ಲಿ 50ರಿಂದ 60 ಸಿಟಿಗಾಗಿ ಬಿಜೆಪಿ ಬೆವರಳಿಸುತ್ತೆ ನೋಡುತ್ತಿರಿ. ಉತ್ತರ ಕರ್ನಾಟಕದಲ್ಲಿ ಕನಿಷ್ಠ 30ರಿಂದ 35 ಸ್ಥಾನ ಜೆಡಿಎಸ್ ಪಡೆಯುತ್ತದೆ. ನಾವು ಕಾಂಗ್ರೆಸ್ ಅಥವಾ ಬಿಜೆಪಿ ಬಿ ಟೀಮ್ ಅಲ್ಲ. ನಾವು ಯಾರ ಬಿ ಟೀಮ್ ಅಲ್ಲ. ನಾವು ರಾಜ್ಯದ ಜನರ ಅಭಿವೃದ್ಧಿಯ ಬಿ ಟೀಮ್. ಸಿದ್ದರಾಮಯ್ಯ ಜೆಡಿಎಸ್‌ಗೆ ಸಿದ್ದಾಂತವಿಲ್ಲ ಎನ್ನುತ್ತಾರೆ. ನಮಗೆ ಸಿದ್ಧಾಂತವಿಲ್ಲ ಎನ್ನೋದಾದರೆ 2018ರ ಚುನಾವಣೆ ಬಳಿಕ ಜೆಡಿಎಸ್ ಮನೆಬಾಗಿಲಿಗೆ ಯಾಕೆ ಬಂದಿರೀ? ಸಿದ್ದರಾಮಯ್ಯನವರಿಗೆ ಕೇಳುತ್ತೆವೆ ನಿಮ್ಮದು ಯಾವ ಸಿದ್ದಾಂತವಿದೆ ಹೇಳಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಂಚಮಸಾಲಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ

    ಚುನಾವಣೆ ಹತ್ತಿರವಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಈಗ ಜನರ ಬಗ್ಗೆ ಕಾಳಜಿ ತೋರಿಸುತ್ತಿವೆ. ಪ್ರಧಾನಿ, ಗೃಹ ಸಚಿವರು ಇಲ್ಲೇ ಠಿಕಾಣಿ ಹೂಡಿದ್ದಾರೆ. ರಾಜ್ಯ ಬಿಟ್ಟು ಹೋಗಿಲ್ಲ. ಅಧಿಕಾರದಲ್ಲಿದ್ದವರು ದೇಶ, ರಾಜ್ಯದ ವಿಷಯ ಬೇಡ ರಾಯಚೂರು ಜಿಲ್ಲೆ ಜನ ಏನು ಬಯಸಿದ್ದರು ಅದರ ಒಂದು ಕಾರ್ಯಕ್ರಮವನ್ನಾದರೂ ಈಡೇರಿಸಿದ್ದಾರಾ ಎಂದು ಕೇಳಿದರು. ಇದನ್ನೂ ಓದಿ: ಹಿಂದೆ ರಾಮನನ್ನು ಬಂಧಿಸಿಟ್ಟಿತ್ತು, ಈಗ ಹನುಮಾನ್ ಜನ್ಮಸ್ಥಳದಲ್ಲೇ ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಮೋದಿ ಕಿಡಿ

    ಸಿಂಧನೂರಿಗೆ ಪ್ರಧಾನಿ ಮೋದಿ (Narendra Modi) ಬರುತ್ತಿದ್ದಾರೆ. ನೀವು ಜನತೆಯ ಕಷ್ಟವನ್ನು ಕೇಳಿದ್ದೀರಾ? ಬರ ಹಾಗೂ ಪ್ರವಾಹ ಬಂದಾಗ ಎಲ್ಲಿದ್ದಿರಿ? ಜನರ ಕಷ್ಟ ಭಾವನೆಗಳಿಗೆ ಕಿಂಚಿತ್ತು ಗೌರವ ಕೊಡದವರು ನೀವು. ಪರಿವಾರ , ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ. ಯಾವ ಪರಿವಾರದ ಬಗ್ಗೆ ನೀವು ಮಾತನಾಡುತ್ತೀರಿ. ಕೊಪ್ಪಳ (Koppal) ವಿಧಾನಸಭಾ ಕ್ಷೇತ್ರದಲ್ಲಿ ಪರಿವಾರಕ್ಕೆ ಟಿಕೆಟ್ ಕೊಟ್ಟಿದ್ದೀರಲ್ಲಾ. ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತೀರಿ. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: Sharad Pawar: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್‌ ಪವಾರ್‌ ರಾಜೀನಾಮೆ

    ರಾಜ್ಯದಲ್ಲಿ ಯಾವ ನೈತಿಕೆಯಿದೆ ನಿಮಗೆ? ಮೂರುವರೆ ವರ್ಷ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತಾಡಲಿ ಅವರು. ರೈತರು ನೆಮ್ಮದಿಯಿಂದ ಬದುಕಿಲ್ಲ. ವಾಸಿಸಲು ಮನೆಯಿಲ್ಲ. ರಾಜ್ಯದಲ್ಲಿ ಈಗಲೂ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಕೇಂದ್ರದ ವರದಿಯೇ ಹೇಳುತ್ತದೆ. ಅಪೌಷ್ಟಿಕತೆಗೆ ಪರಿಹಾರ ಏನು ಕೊಟ್ಟಿದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಿಎಫ್‌ಐ ಪ್ರಚೋದಿತ, ಮುಸ್ಲಿಂ ಮೂಲಭೂತವಾದಿಗಳು ಕಾಂಗ್ರೆಸ್ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ: ಭಜರಂಗ ದಳ ನಿಷೇಧಕ್ಕೆ ಬಿಸ್ವಾ ಕಿಡಿ

  • ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗ್ಬೇಕು – ತುಳುನಾಡಿನ ದೈವ, ದೇವರ ಮೊರೆ ಹೋದ ಹೆಚ್‌ಡಿಡಿ

    ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗ್ಬೇಕು – ತುಳುನಾಡಿನ ದೈವ, ದೇವರ ಮೊರೆ ಹೋದ ಹೆಚ್‌ಡಿಡಿ

    ಮಂಗಳೂರು: ತನ್ನ ಮಗ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಮಾಜಿ ಪ್ರಧಾನಿ, ಮಣ್ಣಿನ ಮಗ ಕಾಲಿಗೆ ಚಕ್ರ ಕಟ್ಟಿ ತಿರುಗಾಡುತ್ತಿದ್ದಾರೆ. ತನ್ನ ಇಳಿ ವಯಸ್ಸಿನಲ್ಲೂ ಆರೋಗ್ಯವನ್ನು ಲೆಕ್ಕಿಸದೆ ಮಗನಿಗಾಗಿ ಶ್ರಮಿಸುತ್ತಿದ್ದಾರೆ. ಇದರ ಜೊತೆಗೆ ತುಳುನಾಡಿನ ದೈವ-ದೇವರ ಮೊರೆ ಹೋದ ಮಾಜಿ ಪ್ರಧಾನಿ ಹರಕೆಯನ್ನೂ ಹೊತ್ತಿದ್ದಾರೆ.

    ರಾಜ್ಯದಲ್ಲಿ ಚುನಾಚಣಾ ಕಾವು ಹೆಚ್ಚಾಗುತ್ತಿದ್ದು ಯಾರು ಶಾಸಕರಾಗುತ್ತಾರೆ, ಯಾವ ಪಕ್ಷಕ್ಕೆ ಬಹುಮತ ಬರುತ್ತೆ ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಜೆಡಿಎಸ್ (JDS) ವರಿಷ್ಠ ಮಾಜಿ ಪ್ರಧಾನಿ ಹೆಚ್‌ಡಿ ದೇವೆಗೌಡ (HD Deve Gowda) ಮಾತ್ರ ಈ ಬಾರಿ ತನ್ನ ಮಗನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂಬ ಛಲದಲ್ಲಿ ಇದ್ದಾರೆ. ಇದಕ್ಕೆಲ್ಲ ದೈವಬಲ ಬೇಕೆಂಬ ಕಾರಣಕ್ಕಾಗಿ ಇದೀಗ ದೈವ ದೇವರ ನೆಲೆಬೀಡು ಪರಶುರಾಮ ಸೃಷ್ಟಿಯ ತುಳುನಾಡಿನ ಮಣ್ಣಿಗೆ ಮಣ್ಣಿನ ಮಗ ಕಾಲಿಟ್ಟಿದ್ದಾರೆ.

    ಮಂಗಳೂರು (Mangaluru) ಸೇರಿದಂತೆ ಕರಾವಳಿಯಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಿದ್ದರೂ ಇಲ್ಲಿ ಕೆಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್ ವರಿಷ್ಠ ದೇವೇಗೌಡ ಇಲ್ಲಿನ ದೈವ ದೇವರ ಮೊರೆ ಹೋಗಿದ್ದಾರೆ. ತನ್ನ ಮಗನನ್ನು ಈ ಬಾರಿ ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಿಸುವಂತೆ ದೈವ ದೇವರಲ್ಲಿ ಪ್ರಾರ್ಥಿಸಲು ಮಂಗಳೂರಿಗೆ ಬಂದಿದ್ದಾರೆ. ತನ್ನ ಆರೋಗ್ಯವನ್ನೂ ಲೆಕ್ಕಿಸದೆ ದೈವ, ದೇವರು ಹಾಗೂ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಜೆಡಿಎಸ್ ಕರಾವಳಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಟಿಕೆಟ್ ಸಿಗದೆ ಜೆಡಿಎಸ್ ಸೇರಿದ್ದಾರೆ. ಕಾಂಗ್ರೆಸ್ ಟಿಕೆಟ್ ನೀಡದ ಮಂಗಳೂರು ಉತ್ತರ ಕ್ಷೇತ್ರದಲ್ಲೇ ಮೊಯಿದ್ದೀನ್ ಬಾವಾ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಬಾವಾ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲು ದೇವೇಗೌಡರು ಬಂದಿದ್ದರು. ಇದನ್ನೂ ಓದಿ: ಉಚಿತ ಘೋಷಣೆಗಳ ಬಗ್ಗೆ ಮೋದಿ ದಿನಾ ಜಾಗಟೆ ಹೊಡೀತಿದ್ರು, ಈಗ ಅನುಮತಿ ಯಾರು ಕೊಟ್ರು?: ಹೆಚ್‌ಡಿಕೆ

    ಪ್ರಚಾರ ಸಭೆಗೂ ಮೊದಲು ಬಜಪೆ ಸಮೀಪದ ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾಕ್ಕೆ ಭೇಟಿ ನೀಡಿದ್ದು ಬಳಿಕ ಅಲ್ಲಿನ ಕಾರ್ಯಕರ್ತರ ಮೂಲಕ ದೇವಿಗೆ ಹರಕೆ ಹೇಳಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿಯಾದರೆ ರಂಗಪೂಜೆ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದಾರೆ. ಬಳಿಕ ಅಲ್ಲೇ ಸಮೀಪದ ಪೆರಾರ ಬ್ರಹ್ಮಬಲಾಂಡಿ ದೈವಸ್ಥಾನಕ್ಕೆ ಭೇಟಿ ನೀಡಿ ಅಲ್ಲೂ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಂಡಿದ್ದಾರೆ. ಬಳಿಕ ಗುರುಕಂಬಳ ಹಝ್ರತ್ ಅಸ್ತ್ರಾರುದ್ದೀನ್ ಅಹ್ಲಿಯಾ ದರ್ಗಾಕ್ಕೆ ಭೇಟಿ ನೀಡಿ ಉಸ್ತಾದ್‌ರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ನಡೆದ ಸಮಾವೇಶದಲ್ಲಿ ಮಾತನಾಡಿ ಕುಮಾರಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ಕೊಡಿ ಎಂದು ಮತದಾರರಲ್ಲಿ ವಿನಂತಿಸಿದರು. ಇದನ್ನೂ ಓದಿ: ವೋಟ್‌ ಹಾಕಿ ಸೈ ಎನಿಸಿಕೊಂಡ 104ರ ವೃದ್ಧೆ – ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನ ಶುರು

  • ಉಚಿತ ಘೋಷಣೆಗಳ ಬಗ್ಗೆ ಮೋದಿ ದಿನಾ ಜಾಗಟೆ ಹೊಡೀತಿದ್ರು, ಈಗ ಅನುಮತಿ ಯಾರು ಕೊಟ್ರು?: ಹೆಚ್‌ಡಿಕೆ

    ಉಚಿತ ಘೋಷಣೆಗಳ ಬಗ್ಗೆ ಮೋದಿ ದಿನಾ ಜಾಗಟೆ ಹೊಡೀತಿದ್ರು, ಈಗ ಅನುಮತಿ ಯಾರು ಕೊಟ್ರು?: ಹೆಚ್‌ಡಿಕೆ

    ಯಾದಗಿರಿ: ಬಿಜೆಪಿಯ (BJP) ಚುನಾವಣಾ ಪ್ರಣಾಳಿಕೆ ಎಲ್ಲಾ ಚುನಾವಣಾ ಗಿಮಿಕ್. ಮೂರುವರೆ ವರ್ಷ ಆಡಳಿತ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮ ತರೋಕೆ ಅವಕಾಶ ಇತ್ತಲ್ವಾ? ಆಗ ಯಾಕೆ ತರಲಿಲ್ಲ? ಹಾಲು ಕೊಡೋದು ಆಗಲೇ ಮಾಡಬಹುದಿತ್ತಲ್ವಾ? ಉಚಿತ ಘೋಷಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಿನಾ ಜಾಗಟೆ ಹೊಡೆಯುತ್ತಿದ್ದರು. ಫ್ರೀ ಕೊಡಬಾರದು ಅಂತ ಮೋದಿನೇ ಹೇಳುತ್ತಿದ್ದರು. ಈಗ ಅವರಿಗೆ ಘೋಷಣೆ ಮಾಡಲು ಅನುಮತಿ ಯಾರು ಕೊಟ್ರು? ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿಗೆ ಸವಾಲು ಹಾಕಿದ್ದಾರೆ.

    ಯಾದಗಿರಿ (Yadgiri) ಜಿಲ್ಲೆಯ ಶಹಾಪುರ ನಗರದಲ್ಲಿ ಮಾತನಾಡಿದ ಹೆಚ್‌ಡಿಕೆ, ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಡೂಪ್ಲಿಕೇಟ್ ಅಂತ ಚರ್ಚೆ ಮಾಡುತ್ತಿದ್ದರು. ಹಾಗಿದ್ದರೆ ಇವರದ್ದು ಏನು? ಮೂರುವರೆ ವರ್ಷ ಅಧಿಕಾರದಲ್ಲಿದ್ರು. ಗ್ಯಾಸ್ ಬೆಲೆ ಹೆಚ್ಚಾಗಿದೆ. ಅವಾಗ ಯಾಕೆ ಕಮ್ಮಿ ಮಾಡಲಿಲ್ಲ? ಮೂರುವರೆ ವರ್ಷದಲ್ಲಿ ಹಣ ಲೂಟಿ ಮಾಡೋದು ಬಿಟ್ಟು ಜನಸಾಮಾನ್ಯರ ಬಗ್ಗೆ ನೋಡಲಿಲ್ಲ. ಬರೀ ಜನರ ಜೊತೆ ಚೆಲ್ಲಾಟವಾಡಿದರು. ಈಗ 2 ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಬಗ್ಗೆ ಜನರಲ್ಲಿ ಭ್ರಮನಿರಸನವಿದೆ ಎಂದರು.

    ಎನ್‌ಕೌಂಟರ್ ಮಾಡಲಾಗುತ್ತೆ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆ ತರಹ ಆದರೆ ಮೊದಲು ಯತ್ನಾಳ್ ಅವರಿಗೆ ಎನ್‌ಕೌಂಟರ್ ಮಾಡಬೇಕಲ್ವಾ? ಅವರ ಪಕ್ಷದಲ್ಲಿ ಯಾರ್ ಯಾರು ಏನೇನು ಮಾತಾಡಿಕೊಂಡಿದ್ದಾರೆ? ನಿರಾಣಿ ಬಗ್ಗೆ ಯತ್ನಾಳ್, ಯತ್ನಾಳ್ ಬಗ್ಗೆ ನಿರಾಣಿ ಏನೇನೋ ಮಾತಾಡಿಕೊಂಡಿಲ್ವಾ? ಮೊದಲು ಇವೆಲ್ಲ ಅವರ ಮೇಲೆ ಮಾಡಬೇಕಲ್ವಾ? ನಾನು ಆ ತರಹದ ಪದಗಳನ್ನು ಬಳಕೆ ಮಾಡಲ್ಲ. ನಾನು ತಮಾಷೆಗೆ ಹೇಳಿದ್ದೇನೆ. ನಾನು ಆ ಮಟ್ಟಕ್ಕೆ ಇಳಿಯಲ್ಲ ಎಂದು ಕುಮಾರಸ್ವಾಮಿ ತಮ್ಮ ಮಾತನ್ನು ಸರಿಪಡಿಸಿಕೊಂಡರು.

    ಇಂದು ಸಮಾಜ ಒಡೆಯುವಂತಹ ಕೆಲಸ ಮಾಡುತ್ತಿರುವುದು ಅವರು. ಹಿಂದೂ ಎಂದರೆ ಅರ್ಥ ಏನು ಅಂತ ಯತ್ನಾಳ್ ಅವರು ಹೇಳಬೇಕಲ್ಲ? ಬಿಜೆಪಿಯ ಹಿಂದುತ್ವವಾದಕ್ಕೂ ನಮ್ಮ ದೇಶದ ಸಂಸ್ಕೃತಿ ಹಿಂದುತ್ವವಾದಕ್ಕೂ ವ್ಯತ್ಯಾಸವಿದೆ. ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎನ್ನುವ ಸಂದೇಶ ಕೋಡೋದು ಹಿಂದೂ ಧರ್ಮ. ಸಮಾಜ ಹಾಳು ಮಾಡು ಅಂತ ಹೇಳಿಕೊಡುವ ಧರ್ಮ ಅಲ್ಲ. ಇದು ಹಿಂದೂ ಧರ್ಮದ ಹೆಸರಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಅಮಾಯಕ ಯುವಕರನ್ನು ಬಲಿ ತೆಗೆದುಕೊಳ್ಳೋದಕ್ಕೆ ಹಿಂದೂ ಧರ್ಮ ಹೇಳಿಲ್ಲ. ಅಧಿಕಾರ ಹಿಡಿಯೋದಕ್ಕೆ ಇವರು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‍ನ ಗ್ಯಾರಂಟಿಗಳು ಮೆಹಂದಿಯಷ್ಟೇ ಗ್ಯಾರಂಟಿ: ಸುಧಾಕರ್ ವ್ಯಂಗ್ಯ

    ನಾಡಿನ ಜನತೆ ನೆಮ್ಮದಿಯಿಂದ ಬದುಕಲು ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತದೆ. 5 ವರ್ಷ ಅಧಿಕಾರ ಕೊಡಿ ಎಂದು ಕೇಳುತ್ತಿದ್ದೇನೆ ಏಕೆಂದರೆ, ಸಮಾಜದಲ್ಲಿ ಅಶಾಂತಿಯ ವಾತಾವರಣ ಬರದೆ ಜನ ನೆಮ್ಮದಿಯಿಂದ ಬದುಕಬೇಕು ಅನ್ನೋದು ನಮ್ಮ ಕಾರ್ಯಕ್ರಮದ ಉದ್ದೇಶ. ಮೋದಿ ಹೇಳುತ್ತಾರೆ, ಜೆಡಿಎಸ್‌ಗೆ ವೋಟ್ ಹಾಕಿದ್ರೆ ಕಾಂಗ್ರೆಸ್‌ಗೆ ಹಾಕಿದ ಹಾಗೆ ಅಂತ. ಇತ್ತ ಸಿದ್ದರಾಮಯ್ಯನವರು ಜೆಡಿಎಸ್‌ಗೆ ವೋಟ್ ಹಾಕಿದ್ರೆ ವೇಸ್ಟ್ ಆಗುತ್ತೆ ಅಂತ ಹೇಳ್ತಾರೆ. ನಾನು ಹೇಳುತ್ತೇನೆ, ಜೆಡಿಎಸ್‌ಗೆ ನೀಡುವ ಮತ ಕನ್ನಡ ನಾಡಿಗೆ ಹಿತ ಅಂತ ನುಡಿದರು. ಇದನ್ನೂ ಓದಿ: ನನ್ನ ಆತ್ಮೀಯರ ಮೇಲೆ ಐಟಿ ರೇಡ್ ಮಾಡುವ ಹುನ್ನಾರ ನಡೆದಿದೆ: ವಿನಯ್ ಕುಲಕರ್ಣಿ

  • ಇನ್ಮುಂದೇ ಮಂಡ್ಯದಲ್ಲಿ ಮೂರನೇ ಆಟ ಶುರು : ಬಿಜೆಪಿ ಸೇರುವುದಾಗಿ ಶಿವರಾಮೇಗೌಡ ಘೋಷಣೆ

    ಇನ್ಮುಂದೇ ಮಂಡ್ಯದಲ್ಲಿ ಮೂರನೇ ಆಟ ಶುರು : ಬಿಜೆಪಿ ಸೇರುವುದಾಗಿ ಶಿವರಾಮೇಗೌಡ ಘೋಷಣೆ

    ಬೆಂಗಳೂರು: ಇನ್ನೂ ಎರಡು, ಮೂರು ದಿನಗಳಲ್ಲಿ ಬಿಜೆಪಿ (BJP) ಸೇರುತ್ತೇನೆ. ಮಂಡ್ಯದಲ್ಲಿ (Mandya) ಇನ್ಮುಂದೆ ಮೂರನೇ ಆಟ ಶುರುವಾಗುತ್ತದೆ ಎಂದು ಮಂಡ್ಯದ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ( L.R Shivarame gowda) ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗಮಂಗಲದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಸೋಲಿಸುವ ಅವಕಾಶ ಇರುವುದು ನನ್ನೊಬ್ಬನಿಗೇ ಮಾತ್ರ. ಕ್ಷೇತ್ರದಲ್ಲಿ ನನಗೆ ನನ್ನದೇ ಆದಂತಹ ಮತಗಳು ಇವೆ. ಮಂಡ್ಯದಲ್ಲಿ 7ಕ್ಕೆ 7 ಸೀಟು ಗೆಲ್ಲಿಸಲು ಪಣ ತೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನಾನು ಬಿಜೆಪಿಯ ಎಲ್ಲಾ ನಾಯಕರ ಜೊತೆಗೆ ಚರ್ಚೆ ಮಾಡಿದ್ದೇನೆ. ನನಗೆ ಒಂದು ರಾಷ್ಟ್ರೀಯ ಪಕ್ಷದ ಶಕ್ತಿ ಬೇಕಾಗಿತ್ತು. ಮಂಡ್ಯದಲ್ಲಿ ಬಿಜೆಪಿಯ ಶಕ್ತಿ ಸ್ವಲ್ಪ ಕಡಿಮೆ ಇತ್ತು. ಆದರೆ ರಾಷ್ಟ್ರೀಯ ನಾಯಕರು ಅಲ್ಲಿ ಪಕ್ಷ ಕಟ್ಟುವ ಇಚ್ಛೆ ಪಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಮುಟ್ಟಿ ನೋಡಿಕೊಳ್ಳಬೇಕು ಆ ರೀತಿಯಲ್ಲಿ ಮಂಡ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.

    ಮಂಡ್ಯದ ಸ್ವಾಭಿಮಾನ ಅಮಿತ್ ಶಾ ಕಾಲು ಕೆಳಗೆ ಹೋಗಿದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಗೆ ಅಮಿತ್ ಶಾ ಜೊತೆ ಹೋದಾಗ ಅವರಿಗೆ ಅವರ ಪಾದ ನೆನಪು ಆಗಲಿಲ್ಲವೇ? ನರೇಂದ್ರ ಮೋದಿಯವರು ದೇವೇಗೌಡರನ್ನು ಅಷ್ಟೊಂದು ಗೌರವಯುತವಾಗಿ ಕಂಡಿದ್ದಾರೆ. ದೇವೇಗೌಡರು ಅಂತವರು ನರೇಂದ್ರ ಮೋದಿ, ಅಮಿತ್ ಶಾ ಮೇಲೆ ಪ್ರೀತಿ ಇಟ್ಕೊಂಡಿದ್ದಾರೆ. ಅಂತಹವರ ಕಾಲು ಕೆಳಗೆ ಬಿದ್ದಿದ್ದಾರೆ ಎಂದು ಯಾಕೆ ಅವರು ಹೇಳುತ್ತಿದ್ದಾರೆಯೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ನಿಮ್ಮ ಕಾಲಿಗೆ ಬಿದ್ದಿದ್ದಾರೆ ಅಂದರೆ ಅದು ಲೆಕ್ಕಕ್ಕೆ ಇಲ್ವಾ? ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಯಾವುದೇ ಸಂದರ್ಭದಲ್ಲೂ ಮಂಡ್ಯ ಜನರು ಅವರ ಜೊತೆಗೆ ಇರುತಾರೆ ಎಂಬುದನ್ನು ಅವರು ಬಿಡಬೇಕು. ಈ ಸಾರಿ ಅವರು ಮಂಡ್ಯದಲ್ಲಿ 7ಕ್ಕೆ 7 ಸ್ಥಾನ ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಮೂರನೇ ಬಾರಿಗೆ ಛತ್ರಪತಿ ಶಿವಾಜಿ ಪ್ರತಿಮೆಗೆ ಎಂಇಎಸ್‌ನಿಂದ ಪೂಜೆ

    ಚಲುವರಾಯಸ್ವಾಮಿಯನ್ನು ಸೋಲಿಸಲು ನನ್ನನ್ನು ಜೆಡಿಎಸ್‍ಗೆ ಕರೆದುಕೊಂಡು ಬಂದರು. ಆ ಮೇಲೆ 5 ತಿಂಗಳಿಗೆ ನನ್ನ ಸಂಸದನನ್ನಾಗಿ ಮಾಡಿ ಸಾಲಗಾರನನ್ನಾಗಿ ಮಾಡಿದರು. ಆಮೇಲೆ ಪಾರ್ಟಿಯಲ್ಲಿ ನನ್ನನ್ನು ಏನು ಅಂತಾ ನೋಡಿಲ್ಲ. ಪಾರ್ಟಿಯಿಂದ ಹೊರಗೆ ಹಾಕಿ ಆಮೇಲೆ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಕುಮಾರಸ್ವಾಮಿ ವಿರುದ್ಧ ಎಲ್.ಆರ್ ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಿಕೆಶಿ ಕರ್ನಾಟಕದ ಇತಿಹಾಸದ ಕಥೆ ಬರೆಯಲು ತಿಹಾರ್ ಜೈಲಿಗೆ ಹೋದ್ರಾ? – ಕಟೀಲ್ ಟೀಕೆ

  • ಬೆಂಗಳೂರು – ಮೈಸೂರು ಹೆದ್ದಾರಿ ಯಾರಿಗೆ ಉಪಯೋಗ : ಹೆಚ್‍ಡಿಕೆ ಕಿಡಿ

    ಬೆಂಗಳೂರು – ಮೈಸೂರು ಹೆದ್ದಾರಿ ಯಾರಿಗೆ ಉಪಯೋಗ : ಹೆಚ್‍ಡಿಕೆ ಕಿಡಿ

    ಬೆಂಗಳೂರು: ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ (Mysuru Bengaluru Expressway) ಯಾರಿಗೆ ಉಪಯೋಗ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದರು.

    ಭಾನುವಾರ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಮಂಡ್ಯದಲ್ಲಿ (Mandya) ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

    ಟ್ವೀಟ್‍ನಲ್ಲಿ ಏನಿದೆ?: ಇದು ಅತ್ಯಂತ ಮುಖ್ಯ ವಿಷಯ. ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ ರಹದಾರಿ? ಎನ್ನುವುದು ನನ್ನ ಪ್ರಶ್ನೆ. ರಾಮನಗರ (Ramanagara), ಮಂಡ್ಯ ಜಿಲ್ಲೆಗಳ ಜನರಿಗೆ, ಅದರಲ್ಲೂ ಬೆಂಗಳೂರು-ಮೈಸೂರು ನಡುವೆ ಆ ಹೆದ್ದಾರಿ ಉದ್ದಕ್ಕೂ ಜೀವಿಸುತ್ತಿರುವ ಜನರಿಗೆ ಇದರಿಂದ ನಯಾಪೈಸೆ ಉಪಯೋಗ ಇದೆಯಾ? ಇಲ್ಲ.

    ಸ್ಥಳೀಯರಿಗೆ ದಶಪಥದಿಂದ ಉಪಯೋಗ ಇದೆಯಾ ಎಂದು ಇನ್ನೂ ಒಳಹೊಕ್ಕು ಲೆಕ್ಕ ಹಾಕಿದರೆ, ಉತ್ತರ ದೊಡ್ಡ ಸೊನ್ನೆ. ಕೇವಲ ಬೆಂಗಳೂರಿನಿಂದ ಮೈಸೂರಿಗೆ ಶರವೇಗದಲ್ಲಿ ನೇರವಾಗಿ ಸಂಚರಿಸುವವರಿಗೆ ಮಾತ್ರ ಲಾಭ. ಹಾಗಾದರೆ, ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣದವರಿಗೆ ಉಪಯೋಗ ಇದೆಯಾ? ಎಳ್ಳಷ್ಟೂ ಇಲ್ಲ. ಈ ಸತ್ಯವನ್ನು ನಾವೆಲ್ಲರೂ ಅರಿಯಬೇಕಿದೆ.

    ಕೆಲವರ ಪಾಲಿಗೆ ದೊಡ್ಡ ಎಟಿಎಂ ಆಗಿಬಿಟ್ಟ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಅಸಲಿ ಅಂಶಗಳನ್ನು ಪಟ್ಟಿ ಮಾಡಿದರೆ ಕನ್ನಡಿಗರಿಗೆ ನಿರಾಶೆ, ನೋವು, ಹತಾಶೆ ಖಂಡಿತಾ. ಹಾಗಾದರೆ ಕೆಳಗಿನ ಅಂಶಗಳನ್ನು ಗಮನಿಸೋಣ.

    ಈ ದಶಪಥ ಹೆದ್ದಾರಿಯ ಮಾರಣಾಂತಿಕ ಹೊಡೆತ ಮೊದಲು ಬಿದ್ದಿರುವುದು ಮಂಡ್ಯ ಜಿಲ್ಲೆಯ ಜನರಿಗೆ. ಆರ್ಥಿಕವಾಗಿ, ಸಾಮಾಜಿಕವಾಗಿ ಈ ಜಿಲ್ಲೆಯನ್ನು ಮುಗಿಸುವುದೇ ದಶಪಥ ಹೆದ್ದಾರಿಯ ದುರುದ್ದೇಶವಾ? ಜಿಲ್ಲೆಯ ಆರ್ಥಿಕ ಸರಪಳಿಗೆ ಕುಣಿಕೆ ಬಿಗಿಯುವುದೇ ಇದರ ಒಳ ಉದ್ದೇಶವಾ? ಎನ್ನುವುದು ನನ್ನ ಅನುಮಾನ.

    ಮಧ್ಯಮ, ಸಣ್ಣ ಗಾತ್ರದ ಹೊಟೆಲ್, ಸಣ್ಣ-ಅತಿಸಣ್ಣ ಉದ್ದಿಮೆ, ಕಬ್ಬುಬೆಲ್ಲ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ಸುಮಾರು 2,600ಕ್ಕೂ ಹೆಚ್ಚು ಸ್ಥಳೀಯ ಉದ್ಯಮ ನೆಲಕಚ್ಚಿವೆ. ಎಳನೀರು ವ್ಯಾಪಾರಕ್ಕೆ ಎಳ್ಳುನೀರು ಬಿಡಲಾಗಿದೆ. 6,000ಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಹೊಡೆತ ಬಿದ್ದು, ಅವರ ಬದುಕಿನ ಮೇಲೆ ಹೆದ್ದಾರಿ ಹೆಮ್ಮಾರಿ ಬಂದು ಕೂತಿದೆ.

    ಮಂಡ್ಯ, ರಾಮನಗರ ಜಿಲ್ಲೆಗಳ ಜನರ ಜೀವನಾಡಿಯೇ ಆಗಿದ್ದ ಹಳೆಯ ಹೆದ್ದಾರಿ ಲಕ್ಷಾಂತರ ಜನರ ಜೀವನಕ್ಕೆ ದಾರಿ ಆಗಿತ್ತು. ಹೊಸ ಹೆದ್ದಾರಿ ಕೆಲವರಿಗೆ ಹಣದ ದಾರಿಯಷ್ಟೆ. ಜನರ ಜೀವನೋಪಾಯದ ಸರಪಳಿಯನ್ನು ಎಕ್ಸ್‌ಪ್ರೆಸ್ ಹೆದ್ದಾರಿ ಬಲಿ ತೆಗೆದುಕೊಂಡಿದೆ. ಅವರ ವೈಯಕ್ತಿಕ ಬದುಕಿಗೆ, ಆರ್ಥಿಕ ಶಕ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಇದು ಸತ್ಯ.

    ಹಳೆಯ ಹೆದ್ದಾರಿ ಜೊತೆ ಹಾಸು ಹೊಕ್ಕಾಗಿದ್ದ ಜನರು, ಈಗ ತಮ್ಮ ಊರುಗಳಿಗೆ ತೆರಳಲು ಕನಿಷ್ಠ 10ರಿಂದ 25 ಕಿ.ಮೀ. ಸುತ್ತಿ ಬರಬೇಕಿದೆ. ಸ್ಥಳೀಯರಿಗೆ ಸುತ್ತುವ ಶಿಕ್ಷೆ ಯಾಕೆ? ಭೂಮಿ ಕಳೆದುಕೊಂಡ ಪುಣ್ಯಕ್ಕೆ ಅವರು ಬಳಸಿ ಬಳಿಸಿ ಬಸವಳಿದು ತಮ್ಮ ಹಳ್ಳಿಗಳಿಗೆ ಬರಬೇಕಾ? ಇದು ಯಾವ ಸೀಮೆಯ ನ್ಯಾಯ? ದಶಪಥ ಕಲ್ಪಿಸಿದ ದೌರ್ಭಾಗ್ಯ ಇದು.

    ಬದುಕು ಕಸಿದುಕೊಂಡ ದಶಪಥ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಂಡ್ಯ ಸೇರಿ ಹೆದ್ದಾರಿ ಉದ್ದಕ್ಕೂ ಜನರ ಆಕ್ರೋಶ ಅಸ್ಫೋಟಗೊಂಡಿದೆ. ಕಪ್ಪುಪಟ್ಟಿ ಪ್ರದರ್ಶನ ಮಾಡಲು ಹೊರಟಿದ್ದಾರೆ. ಅದು ಬೇಡ ಎಂದು ವಿನಂತಿಸುತ್ತೇನೆ. ನ್ಯಾಯ ಕೇಳೋಣ, ಹಕ್ಕು ಪ್ರತಿಪಾದಿಸೋಣ. ಅವರಿಗೆ ಅಗೌರವ ತೋರಿಸುವುದು ಬೇಡ.

    ಜನರಿಗೂ ಸಿಟ್ಟಿದೆ, ಅದು ಸಹಜ. ದ್ವಿಚಕ್ರ ವಾಹನಗಳಿಗೆ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ನಿರಾಕರಿಸಿದ್ದು ಏಕೆ? ಇದು ಅವೈಜ್ಞಾನಿಕ ಮತ್ತು ಅಕ್ಷಮ್ಯ. ಷಟ್ಪಥದ (ಆರು ಪಥ) ಮುಖ್ಯ ಕಾರಿಡಾರಿನಲ್ಲಿ ಕೊನೆಯ ಪಕ್ಷ ಎರಡನ್ನಾದರೂ ದ್ವಿಚಕ್ರ ವಾಹನಗಳಿಗೆ ಮೀಸಲಿಡಬಾರದೇಕೆ? ಇದೇನು ಬಿಟ್ಟಿ ಉಪಕಾರವೇ? ಅಲ್ಲ, ಆ ಜನರ ಹಕ್ಕು.

    30 ವರ್ಷ ಕಾಲ ಈ ಹೆದ್ದಾರಿಯಲ್ಲಿ ಸಂಚರಿಸುವ ಜನರು ಟೋಲ್ ಕಟ್ಟುತ್ತಾರೆ. ಸಂಗ್ರಹವಾಗುವ ಶುಲ್ಕದ ಮೂಲಕವೇ ರಸ್ತೆ ನಿರ್ಮಾಣದ ಖರ್ಚನ್ನು ಜನರೇ ಭರಿಸುತ್ತಾರೆ. ಗುತ್ತಿಗೆದಾರರ ಜೇಬಿಗೆ ಬಹುದೊಡ್ಡ ಗಂಟು ಸೇರಲಿದೆ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದಿಂದ ಈ ಯೋಜನೆಗೆ ಬಿಡಿಗಾಸು ಬಂದಿಲ್ಲ. ದಶಪಥದ ಒಳಲೆಕ್ಕಗಳ ಸತ್ಯ ಜನರಿಗೆ ಗೊತ್ತಾಗಬೇಕಿದೆ.

    ಕನ್ನಡಿಗರಿಗೆ ಕಣ್ಣಿಗೆ ಮಂಕುಬೂದಿ ಎರಚಿ, ಈ ಸತ್ಯವನ್ನು ಮರೆಮಾಚಿ, ತಾವೇ ಈ ರಸ್ತೆ ನಿರ್ಮಾಣಕ್ಕೆ ಕಾರಣ ಎಂದು ಬಿಜೆಪಿಗರು ರಣರಣ ಬೊಬ್ಬೆ ಹೊಡೆಯುತ್ತಿರುವುದು ದಶಪಥ ಹೆದ್ದಾರಿ ಹೆಸರಿನಲ್ಲಿ ಮಾಡುತ್ತಿರುವ ಮಹಾದ್ರೋಹವಾಗಿದೆ. ಈ ಎಕ್ಸ್‌ಪ್ರೆಸ್ ಹೆದ್ದಾರಿಯ ನಿಜವಾದ ಹಕ್ಕುದಾರರಾದ ರಾಮನಗರ, ಮಂಡ್ಯ ಜನರನ್ನು ಪರಾವಲಂಬಿಗಳನ್ನಾಗಿ ಮಾಡಿದ್ದಲ್ಲದೆ, ಭೂಮಿ ಕಳೆದುಕೊಂಡ ಬಡರೈತರು ಹೆದ್ದಾರಿ ಬದಿ ನಿಂತು ಭಿಕ್ಷೆ ಬೇಡುವಂಥ ದುಃಸ್ಥಿತಿಯನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ.

    ದಶಪಥ ಹೆದ್ದಾರಿ ಕಸಿದುಕೊಂಡ ಬದುಕಿಗೆ ಉತ್ತರದಾಯಿ ಯಾರು? ಅವರ ಜೀವನೋಪಾಯಕ್ಕೆ ಪರ್ಯಾಯ ದಾರಿ ಯಾವುದು? ಪ್ರಧಾನಮಂತ್ರಿಗಳು ಈ ಬಗ್ಗೆ ಜನರಿಗೆ ವಿಶ್ವಾಸ ತುಂಬಬೇಕು. ರೋಡ್ ಶೋ ಮಾಡುವುದಕ್ಕಿಂತ ತುರ್ತಾಗಿ ಮಾಡಬೇಕಿರುವುದು ಇದನ್ನು. ಅಬ್ಬರ, ಅರ್ಭಟದಲ್ಲಿ ಜನರ ಬದುಕು ಅವನತಿ ಆಗಬಾರದು ಎನ್ನುವುದು ನನ್ನ ಕಳಕಳಿ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ

    ಕರ್ನಾಟಕ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ! ಕರ್ನಾಟಕ ಕೇಂದ್ರದಿಂದ ಅತಿಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ!! ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ಈ ನೀತಿಯ ಕೆನ್ನಾಲಿಗೆಗೆ ಸಿಕ್ಕಿ ಕನ್ನಡಿಗರು ಬೇಯುತ್ತಿದ್ದಾರೆ. ಹೆದ್ದಾರಿ ಕನ್ನಡಿಗರದು, ಅದನ್ನು ಬಳಸುವ ಹಕ್ಕು ಕನ್ನಡಿಗರದು. ಕನ್ನಡಿಗರಿಗೆ ನ್ಯಾಯ ಬೇಕು. ಇದನ್ನೂ ಓದಿ: ಕಾಂಗ್ರೆಸ್ ನನ್ನ ಸಮಾಧಿ ಮಾಡುವ ಕನಸು ಕಾಣುತ್ತಿದೆ: ಮೋದಿ ವಾಗ್ದಾಳಿ

  • ಕುಮಾರಣ್ಣ ನನ್ನ ಹಿತೈಷಿ, ಬಿಜೆಪಿ ಬಂದರೆ ಸ್ವಾಗತ: ಪ್ರೀತಂ ಗೌಡ

    ಕುಮಾರಣ್ಣ ನನ್ನ ಹಿತೈಷಿ, ಬಿಜೆಪಿ ಬಂದರೆ ಸ್ವಾಗತ: ಪ್ರೀತಂ ಗೌಡ

    ಹಾಸನ: ಕುಮಾರಣ್ಣ (HD Kumaraswamy) ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುವಂತಹವರು. ಅವರು ಏನು ಹೇಳಿದರೂ ಆಶೀರ್ವಾದ ಅನ್ಕೊತೀನಿ ಎಂದು ಬಿಜೆಪಿ (BJP) ಶಾಸಕ ಪ್ರೀತಂ ಗೌಡ (Preetham Gowda) ಹೇಳಿದ್ದಾರೆ.

    ಅವನ್ಯಾವನೋ ಶಾಸಕ 50 ಸಾವಿರ ಲೀಡ್‌ನಿಂದ ಗೆಲ್ತೀನಿ ಅಂತ ಚಾಲೆಂಜ್ ಹಾಕ್ತಾನೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿಗೆ ನಯವಾಗಿಯೇ ತಿರುಗೇಟು ಕೊಟ್ಟ ಪ್ರೀತಂ ಗೌಡ, ಅವರು ವೈಯುಕ್ತಿಕವಾಗಿ ನನ್ನ ಬಗ್ಗೆ ಮಾತಾನಾಡಿದರೆ ಅವರು ಯಾವಾಗಲೂ ನನ್ನ ಹಿತೈಷಿಯೇ. ನನ್ನ ಬಗ್ಗೆ ವೈಯುಕ್ತಿಕವಾಗಿ ಮಾತನಾಡಿದರೆ ಅವರು ಪ್ರೀತಿಯಿಂದ ಮಾತನಾಡಿರುತ್ತಾರೆ ಎಂದು ಹೇಳಿಕೆ ನೀಡಿದರು.

    ಅವರ ಪ್ರೀತಿಯನ್ನು ನಾನು ಆಶೀರ್ವಾದ ಎಂದು ತೆಗೆದುಕೊಂಡಿರುತ್ತೇನೆ. ಅವರ ಆಶೀರ್ವಾದ ಯಾವಾಗಲೂ ನನ್ನ ಮೇಲೆ ಇರುತ್ತದೆ. ಅವರು ಏನು ಬಯಸುತ್ತಾರೆ ಅದನ್ನು ಮಾಡುವುದಕ್ಕೆ ಅವರ ಒಬ್ಬ ಸಹೋದರನಾಗಿ ನಾನು ಹಾಸನದಲ್ಲಿ ಅವರ ಪರವಾಗಿ ಯೋಚನೆ ಮಾಡುತ್ತೇನೆ ಎಂದರು.

    ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ರೇವಣ್ಣ ಅವರ ಮನೆಯವರನ್ನು ಕ್ಯಾಂಡಿಡೇಟ್ ಮಾಡಲ್ಲ ಎಂದು ಶಪಥ ಮಾಡಿದ್ದಾರೆ ಹೊರತು ಪ್ರೀತಂ ಗೌಡನನ್ನು ಚುನಾವಣೆಯಲ್ಲಿ ಸೋಲಿಸುತ್ತೇನೆ ಎಂದು ಶಪಥ ಮಾಡಿಲ್ಲ. ಅವರು ಸಾಮಾನ್ಯ ಕಾರ್ಯಕರ್ತನನ್ನು ಕ್ಯಾಂಡಿಡೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಶಾಸಕನಾಗಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರಾ? ಅವರು ಹಾಗೆ ಹೇಳಲ್ಲ, ಪಾಪ ಅವರು ನನ್ನ ಹಿತೈಷಿ ಎಂದು ತಿರುಗೇಟು ನೀಡಿದರು.

    ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಎಂದಿದ್ದಾರೆ ಹೊರತು ಗೆಲ್ಲಿಸಿಕೊಳ್ತೀನಿ ಅಂತ ಹೇಳಿಲ್ಲ. ಗೆಲ್ಲಿಸಿಕೊಳ್ಳೋದು ಪ್ರೀತಂ ಗೌಡನನ್ನು. ಟಿಕೆಟ್ ಕೋಡೋದು ಸಾಮಾನ್ಯ ಕಾರ್ಯಕರ್ತನಿಗೆ. ನಿಮಗೆ ಅಷ್ಟು ರಾಜಕೀಯ ಮರ್ಮ ಅರ್ಥವಾಗಲಿಲ್ಲ ಎಂದರೆ ನಾನು ಮತ್ತೇನು ಹೇಳಲಿ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು. ಇದನ್ನೂ ಓದಿ: ಕಾರವಾರದಲ್ಲಿ PDO ವರ್ಗಾವಣೆ ಕಿರಿಕ್ – ಕಚೇರಿಯಲ್ಲೇ ಹಾಲಿ, ಮಾಜಿ ಶಾಸಕರ ಫೈಟ್

    ಅವರು ನಮ್ಮ ಜೊತೆ ಬರುತ್ತಾರೆ. ನಾನು ಹೇಳ್ತಿರೋದು ಅಧಿಕಾರ ಮಾಡೋಕೆ ಬರ್ತಾರೆ ಅಂತ ಅಲ್ಲ. ಕುಮಾರಣ್ಣ ಬಿಜೆಪಿಗೆ ಬಂದರೆ ಸ್ವಾಗತ, ಯಾರು ಬೇಡ ಅಂತಾರೆ? ಕುಮಾರಣ್ಣನನ್ನು ನಾನು ಭಾರತೀಯ ಜನತಾ ಪಾರ್ಟಿಗೆ ಕರೆಯುತ್ತಿದ್ದೇನೆ. ನಿಮ್ಮ ಕುಟುಂಬದಲ್ಲಿ ಆಗುತ್ತಿರುವಂತಹ ಒತ್ತಡವನ್ನು ನನ್ನಿಂದ ನೋಡಲು ಆಗುತ್ತಿಲ್ಲ. ಆ ಒತ್ತಡವನ್ನು ಅವರಿಂದ ಸಹಿಸಲು ಆಗುತ್ತಿಲ್ಲ ಎಂದರೆ ದಯಮಾಡಿ ಭಾರತೀಯ ಜನತಾ ಪಾರ್ಟಿಗೆ ಬಂದು ಸೇರಿಕೊಳ್ಳಿ ಎಂದು ಟಾಂಗ್ ನೀಡಿದರು.

    ನಿಮಗೆ ಉತ್ತಮವಾದಂತಹ ಜನಾಭಿಪ್ರಾಯ ಇದೆ. ನಾನು ವೈಯಕ್ತಿಕವಾಗಿ ನನ್ನ ಹಾಗೂ ಅವರ ಸಂಬAಧದ ಮೇಲೆ ಕರೆಯುತ್ತಿದ್ದೇನೆ. ನನಗೆ ಪಕ್ಷದ ಅಥವಾ ಸರ್ಕಾರದ ಯಾವುದೇ ಜವಾಬ್ದಾರಿ ಇಲ್ಲ. ಅವರು ಏಕವಚನದಲ್ಲಿ ಮಾತನಾಡಿರುವುದು ನಮ್ಮಿಬ್ಬರ ನಡುವೆ ಇರುವಂತಹ ಸಲುಗೆ, ವಿಶ್ವಾಸ, ಪ್ರೀತಿಯಿಂದ. ಆ ಪ್ರೀತಿಗೆ ಯಾಕೆ ಅಪಾರ್ಥ ಕಲ್ಪಿಸಬೇಕು ಎಂದು ನುಡಿದರು. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

  • HDK ಕುಟುಂಬದಿಂದ ದೇವರ ಮೊರೆ – ಚಂಡಿಕಾ ಯಾಗ, ಮಹಾಮೃತ್ಯುಂಜಯ ಜಪ ಆಯೋಜನೆ

    HDK ಕುಟುಂಬದಿಂದ ದೇವರ ಮೊರೆ – ಚಂಡಿಕಾ ಯಾಗ, ಮಹಾಮೃತ್ಯುಂಜಯ ಜಪ ಆಯೋಜನೆ

    ರಾಮನಗರ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಇತ್ತ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕುಟುಂಬ ಆರೋಗ್ಯ ವೃದ್ಧಿ ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಲು ದೈವ ಸಂಕಲ್ಪದ ಮೊರೆ ಹೋಗಿದೆ.

    ಹೆಚ್‌ಡಿಕೆ ಕುಟುಂಬ ಬಿಡದಿ ಕೇತಗಾನಹಳ್ಳಿ ಬಳಿಯ ತೋಟದ ಮನೆಯಲ್ಲಿ ಶುಕ್ರವಾರದಿಂದ ಪಂಚರತ್ನ ಯಾತ್ರೆ ಶ್ರೇಯಸ್ಸಿಗಾಗಿ 11 ದಿನಗಳ ಕಾಲ ಚಂಡಿಕಾ ಯಾಗ ಹಾಗೂ ಮಾಜಿ ಪ್ರಧಾನಿ ದೇವೇಗೌಡರ (HD Deve Gowda) ಆರೋಗ್ಯ ವೃದ್ಧಿಗಾಗಿ ಕೋಟಿ ಮೃತ್ಯುಂಜಯ ಜಪ ಆಯೋಜನೆ ಮಾಡಿದ್ದಾರೆ. ಮೊದಲನೇ ದಿನ ಮಹಾಯಾಗದ ಪೂಜಾಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ.

    ವಿವಿಧ ರಾಜ್ಯಗಳಿಂದ ಆಗಮಿಸಿರುವ 300 ಕ್ಕೂ ಅಧಿಕ ಪುರೋಹಿತರು ಈ ಮಹಾಯಾಗದಲ್ಲಿ ಭಾಗವಹಿಸಿದ್ದಾರೆ. ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ಆರಂಭವಾದ ಮಹಾ ಯಾಗದಲ್ಲಿ ಮಂತ್ರ ಪಾರಾಯಣ ಹಾಗೂ ಪೂಜಾ ಸಂಕಲ್ಪ ನೆರವೇರಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ನಡೆದ ಮೊದಲ ದಿನದ ಪೂಜಾ ವಿಧಿವಿಧಾನಗಳು ಮುಕ್ತಾಯವಾಗಿದೆ.

    ಮೊದಲ ದಿನದ ಪೂಜಾ ಕೈಂಕರ್ಯದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ದಂಪತಿ ಸಾಂಪ್ರದಾಯಿಕ ಉಡುಗೆ ತೊಟ್ಟು ಸತತ 6 ಗಂಟೆಗಳ ಕಾಲ ಪೂಜಾ ಕೈಂಕರ್ಯ ನೆರವೇರಿಸಿದರು. ಮಾಜಿ ಸಚಿವ ಹೆಚ್‌ಡಿ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ, ನಿಖಿಲ್ ಪುತ್ರ ಅವ್ಯಾನ್ ದೇವ್ ಗೌಡ ಭಾಗಿಯಾಗಿದ್ದರು. ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಶೀಘ್ರ ಗುಣಮುಖರಾಗಲೆಂದು ಹಾಗೂ ಹಾಸನ ಟಿಕೆಟ್ ವಿಚಾರ ಕುರಿತು ಉಂಟಾಗಿರುವ ಗೊಂದಲ ಬಗೆಹರಿಸುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಇದನ್ನೂ ಓದಿ: ಸ್ಪಷ್ಟ ಬಹುಮತದೊಂದಿಗೆ ನಾವು ಸರ್ಕಾರ ಮಾಡುತ್ತೇವೆ: ಗೋವಿಂದ ಕಾರಜೋಳ

    ಹೆಚ್‌ಡಿ ಕುಮಾರಸ್ವಾಮಿ ಕುಟುಂಬ ದೈವದ ಮೊರೆ ಹೋಗಿರುವುದು ಹೊಸತೇನಲ್ಲ. ದೇವರ ಮೇಲೆ ಅಪಾರ ನಂಬಿಕೆ ಇಟ್ಟಿರುವ ಹೆಚ್‌ಡಿಕೆ ಕುಟುಂಬ ಈ ಬಾರಿ ಚುನಾವಣೆಯ ಜನಾಶೀರ್ವಾದದ ಜೊತೆಗೆ ಲೋಕ ಕಲ್ಯಾಣಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರ ಅನುಗ್ರಹ ಪಡೆಯಲು ಮುಂದಾಗಿದೆ. ಇದನ್ನೂ ಓದಿ: ಪುತ್ರ ಸಿಕ್ಕಿಬಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ