Tag: ಹೆಚ್‍ಐವಿ

  • ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್

    ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್

    ರಾಯ್ಪುರ್: ಸಾಮಾನ್ಯವಾಗಿ ನಮಗೆ ಯಾರಾದ್ರೂ ದ್ರೋಹ ಮಾಡಿದ್ರೆ ಅಥವಾ ಕಿರಿಕ್‌ ಮಾಡಿದ್ರೆ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಹುಕಾಲ ಹೊಂಚು ಹಾಕ್ತೀವಿ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಈ ಸ್ಥಿತಿಗೆ ದೇವರೇ ಕಾರಣ ಅಂತ ದೂಷಿಸಿದ್ದಾನೆ. ಅಷ್ಟೇ ಅಲ್ಲ ದೇವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹುಂಡಿಗಳ ಕಳ್ಳತನವನ್ನೂ ಮಾಡಿದ್ದಾನೆ.

    ಹೌದು. ಜೈಲಿನಲ್ಲಿರುವಾಗ ಹೆಚ್‌ಐವಿ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯೊಬ್ಬ ದೇವರ ವಿರುದ್ಧ ಸೇಡು ತೀರಿಸಿಕೊಳ್ಳಲು ದೇವಾಲಯ, ಜೈನ ದೇವಾಲಯ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ ಘಟನೆ ಛತ್ತೀಸ್‌ಗಡದಲ್ಲಿ ನಡೆದಿದೆ. ಸದ್ಯ ಈತನನ್ನು ದುರ್ಗ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಇದನ್ನೂ ಓದಿ: ಅಭಿಮಾನ್‌ ಸ್ಟುಡಿಯೋ ಜಮೀನು ವಿವಾದ – ವಿಷ್ಣುಸೇನಾ ಸಮತಿಯಿಂದ ಅರಣ್ಯ ಸಚಿವರ ಭೇಟಿ

    ಬಂಧಿತ ವ್ಯಕ್ತಿ 2012ರ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾಗ ಹೆಚ್‌ಐವಿ ಸೋಂಕು ತಗುಲಿತ್ತು. ಇದರಿಂದಾಗಿ ದೇವರ ಮೇಲಿನ ನಂಬಿಕೆ ಕಳೆದುಕೊಂಡು ದೇಗುಲಗಳಲ್ಲಿನ ಹುಂಡಿ ಕಳ್ಳತನ ಮಾಡುವುದರಲ್ಲಿ ತೊಡಗಿಕೊಂಡಿದ್ದ.

    ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಸುಮಾರು 10 ವರ್ಷಗಳಿಂದ ಛತ್ತೀಸ್‌ಗಢದ ದುರ್ಗ್ ಮತ್ತು ಸುತ್ತಮುತ್ತಲಿನ ದೇವಾಲಯಗಳಲ್ಲಿ ಹುಂಡಿ ಕಾಣಿಕೆಯ ಹಣ ಕಳ್ಳತನ ಆಗ್ತಿತ್ತು. ಬೀಗ ಮುರಿದು ಹಣ ಕಳ್ಳತನ ಮಾಡಿ, ಯಾವುದೇ ಸಾಕ್ಷಿಯನ್ನು ಬಿಡದೇ ಕಳ್ಳ ಪರಾರಿಯಾಗಿ ಬಿಡುತ್ತಿದ್ದ. ಈ ರೀತಿ 10ಕ್ಕೂ ಹೆಚ್ಚು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದಾನೆ. ಅದಲ್ಲದೇ ಇನ್ನೂ ಬೇರೆ ಕಳ್ಳತನ ಪ್ರಕರಣಗಳಲ್ಲಿ ಈತನೇ ಭಾಗಿಯಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

    ಆರೋಪಿ 2012ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯದ ಕಳ್ಳತನ ಮಾಡಲು ಪ್ರಾರಂಭಿಸಿದ್ದ. ಮೊದಲು ದೇವಾಲಯದ ಪರಿಶೀಲನೆ ಮಾಡಿ, ಮಾರನೇ ದಿನ ಸ್ಕೂಟರ್‌ನಲ್ಲಿ ಬರುತ್ತಿದ್ದ. ದೂರದಲ್ಲಿಯೇ ಸ್ಕೂಟರ್‌ನ್ನು ನಿಲ್ಲಿಸಿ, ಬಟ್ಟೆ ಬದಲಾಯಿಸಿ ಬಳಿಕ ಕಳ್ಳತನಕ್ಕೆ ಇಳಿಯುತ್ತಿದ್ದ. ಕೆಲಸ ಮುಗಿದ ನಂತರ ಮತ್ತೆ ಬಟ್ಟೆ ಬದಲಾಯಿಸಿಕೊಂಡು ಮನೆಗೆ ಹೋಗುತ್ತಿದ್ದ. ಹೀಗೆ ಆ.23 ಮತ್ತು 24ರ ಮಧ್ಯರಾತ್ರಿ ಆರೋಪಿಯು ದುರ್ಗ್ ಹೊರವಲಯದಲ್ಲಿರುವ ಜೈನ ದೇವಾಲಯಕ್ಕೆ ನುಗ್ಗಿ ಕಳ್ಳತನ ಮಾಡಿದ್ದ.ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

    ಕೊನೆಗೆ ಅಪರಾಧ ನಿಗ್ರಹ ದಳ, ಸೈಬರ್ ಘಟಕ ಮತ್ತು ನೆವಾಯಿ ಪೊಲೀಸ್ ಠಾಣೆಯ ಜಂಟಿ ತಂಡವು ಕಳ್ಳತನ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿ `ತ್ರಿಣಯನ್’ ಅಪ್ಲಿಕೇಶನ್ ಬಳಸಿ ಆತನ ಚಲನವಲನಗಳನ್ನು ಪತ್ತೆಹಚ್ಚಿದರು. ಬಳಿಕ ಆತನ ಮಾರ್ಗವನ್ನು ಕಂಡುಹಿಡಿದು, ಮನೆಯನ್ನು ಪತ್ತೆಹಚ್ಚಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು.

    ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಈವರೆಗೆ ನೆವಾಯ್, ಸುಪೇಲಾ, ಪದ್ಮನಾಭಪುರ, ಭಿಲಾಯಿ ಭಟ್ಟಿ ಮತ್ತು ಭಿಲಾಯಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ 10ಕ್ಕೂ ಹೆಚ್ಚು ದೇವಾಲಯಗಳಲ್ಲಿ ಹುಂಡಿ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಾನು ಜೈಲಿನಲ್ಲಿರುವಾಗ ನನಗೆ ಹೆಚ್‌ಐವಿ ಸೋಂಕು ತಗುಲಿತ್ತು. ಈ ಮೂಲಕ ದೇವರು ನನ್ನ ಜೀವನವನ್ನೇ ಹಾಳು ಮಾಡಿದ. ಹೀಗಾಗಿ ನಾನು ದೇವರ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದೆ. ಇನ್ನೂ ಕದ್ದ ಹಣವನ್ನು ನಾನು ಕೇವಲ ಜೀವನ ನಡೆಸಲು ಬಳಸುತ್ತೇನೆ ಎಂದು ಹೇಳಿಕೊಂಡಿದ್ದಾನೆ.

    ಸದ್ಯ ಆತನನ್ನು ಬಂಧಿಸಿ, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪೊಲೀಸರು 1,282 ರೂ. ಮೌಲ್ಯದ ನಾಣ್ಯಗಳು ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.ಇದನ್ನೂ ಓದಿ: ಕಿಚ್ಚನ ಬರ್ತ್‌ಡೇ ಸೆಲಬ್ರೇಷನ್‌ಗೆ ಸ್ಥಳ, ಟೈಮಿಂಗ್ ಫಿಕ್ಸ್!

  • ಚಿತ್ರದುರ್ಗ | ಸಹೋದರನಿಗೆ HIV – ಕುಟುಂಬದ ಮರ್ಯಾದೆಗೆ ಅಂಜಿ ತಮ್ಮನನ್ನೇ ಕೊಲೆಗೈದ ಅಕ್ಕ

    ಚಿತ್ರದುರ್ಗ | ಸಹೋದರನಿಗೆ HIV – ಕುಟುಂಬದ ಮರ್ಯಾದೆಗೆ ಅಂಜಿ ತಮ್ಮನನ್ನೇ ಕೊಲೆಗೈದ ಅಕ್ಕ

    ಚಿತ್ರದುರ್ಗ: ಹೆಚ್‌ಐವಿ (HIV) ಪೀಡಿತನೆಂಬ ಕಾರಣಕ್ಕೆ ಸ್ವಂತ ತಮ್ಮನನ್ನೇ ಅಕ್ಕ ತನ್ನ ಗಂಡನೊಂದಿಗೆ ಸೇರಿ ಕೊಲೆಗೈದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ.

    ಮಲ್ಲಿಕಾರ್ಜುನ್ (23) ಕೊಲೆಯಾದ ಸಹೋದರ, ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್ ಕೊಲೆ ಆರೋಪಿ. ದುಮ್ಮಿ ಗ್ರಾಮದ ನಾಗರಾಜ್‌ ಎನ್ನುವವರ ಪುತ್ರ ಮಲ್ಲಿಕಾರ್ಜುನ್‌ ಬೆಂಗಳೂರಿನ (Bengaluru) ಗಾರ್ಮೆಂರ್ಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಇದೇ ಜುಲೈ 23ರಂದು ತನ್ನ ಸ್ವಗ್ರಾಮವಾದ ದುಮ್ಮಿಗೆ ಕಾರಲ್ಲಿ ಸ್ನೇಹಿತರೊಂದಿಗೆ ಬರುತ್ತಿದ್ದ‌. ಆಗ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ಆದ ಕಾರಿನ ಅಪಘಾತದಲ್ಲಿ ಆತನ ಕಾಲು ಮುರಿವಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದ. ಇದನ್ನೂ ಓದಿ: ಧಾರವಾಡ‌ | ಬಿಜೆಪಿ ಮಹಿಳಾ ಮೋರ್ಚಾ ಮುಖಂಡೆಯ ಪತಿ ನೇಣಿಗೆ ಶರಣು‌

    ಅಪಘಾತಗೊಂಡಿದ್ದ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ನೀಡಲಾಗಿತ್ತು. ರಕ್ತ ಪರೀಕ್ಷೆ ವೇಳೆ ಮಲ್ಲಿಕಾರ್ಜುನ್‌ಗೆ ಹೆಚ್‌ಐವಿ ಕಾಯಿಲೆ ಇದೆ ಅನ್ನೋದು ಗೊತ್ತಾಯಿತು. ಜುಲೈ 25ರಂದು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಯಿಂದ‌ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಅಂಬುಲೆನ್ಸ್‌ನಲ್ಲೇ ಮಲ್ಲಿಕಾರ್ಜುನನ್ನ ಅಕ್ಕನೇ ಕೊಲೆಗೈದಿದ್ದಾಳೆ. ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ್ ಸೇರಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿ | ಸಿಲಿಂಡರ್ ದುರಂತ – ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿ ಸಾವು

    ಗೊತ್ತಾಗಿದ್ದು ಹೇಗೆ?
    ಅಂತ್ಯಕ್ರಿಯೆ ವೇಳೆ ಮಲ್ಲಿಕಾರ್ಜುನ್‌ನ ಕುತ್ತಿಗೆ ಮೇಲಿದ್ದ ಮಾರ್ಕ್‌ ಕಂಡು ಸಂಬಂಧಿಕರು ಹಾಗು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಮೃತನ ತಂದೆ ನಾಗರಾಜ್‌ ಹೊಳಲ್ಕೆರೆ ಪೊಲೀಸ್ ಠಾಣೆಗೆ ದೂರು ನೀಡಿರು. ತನಿಖೆ ವೇಳೆ ಮಲ್ಲಿಕಾರ್ಜುನ HIV ಪೀಡಿತ ಎಂಬ ಕಾರಣಕ್ಕೆ ಮರ್ಯಾದೆಗೆ ಅಂಜಿ ಸಹೋದರಿಯೇ ಹತ್ಯೆಗೈದಿರುವ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ಸವಾರರ ದಾರುಣ ಸಾವು

    ಅಂತರ್ಜಾತಿ ವಿವಾಹವಾಗಿದ್ದ ಮೃತನ ಸಹೋದರಿ ನಿಶಾ ಆಸ್ತಿ ಆಸೆಗೆ ಕೊಲೆಗೈದಿರುವ ಆರೋಪ ಕೂಡ ಕೇಳಿಬಂದಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಿಂದ ಆಗ್ರಹ ಕೇಳಿಬಂದಿದೆ. ಈಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಶಾಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಒಂದೇ ಶತಕ, ಹಲವು ದಾಖಲೆ – ಡಾನ್‌ ಬ್ರಾಡ್ಮನ್, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌

  • ತಾಯಿ-ಮಗ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್; ಮಗನಿಗಿತ್ತು ಹೆಚ್‌ಐವಿ ಸೋಂಕು

    ತಾಯಿ-ಮಗ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್; ಮಗನಿಗಿತ್ತು ಹೆಚ್‌ಐವಿ ಸೋಂಕು

    – ಪತ್ನಿ ಕುಟುಂಬಸ್ಥರಿಂದಲೇ ಸ್ಫೋಟಕ ಮಾಹಿತಿ ಬಹಿರಂಗ

    ಹಾಸನ: ಕೌಟುಂಬಿಕ ಕಲಹ (Family Feud) ಹಿನ್ನೆಲೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇವರಿಬ್ಬರ ಸಾವಿಗೆ ಅತ್ತೆ-ಸೊಸೆ ನಡುವಿನ ಹೊಂದಾಣಿಕೆ ಕಾರಣ ಅಲ್ಲ ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ.

    ಮೃತ ಭರತ್ ಹೆಚ್‌ಐವಿ ಸೋಂಕಿತನಾಗಿದ್ದ ಎಂಬ ಸತ್ಯವನ್ನು ಆತನ ಪತ್ನಿ ಕುಟುಂಬದವರು ಇದೀಗ ಬಹಿರಂಗಪಡಿಸಿದ್ದಾರೆ. ಪತ್ನಿ ಕುಟುಂಬಸ್ಥರು ಭರತ್‌ಗೆ 8 ತಿಂಗಳ ಹಿಂದೆ ನಾಲ್ಕು ಲಕ್ಷ ಹಣ, 100 ಗ್ರಾಂ ಚಿನ್ನ ನೀಡಿ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಭರತ್ ಮೂರು ವರ್ಷಗಳ ಹಿಂದಿನಿಂದಲೇ ಹೆಚ್‌ಐವಿ ಸೋಂಕಿತನಾಗಿದ್ದ. ಮಾರಣಾಂತಿಕ ಕಾಯಿಲೆ ಸೋಂಕು ತಗುಲಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಭರತ್, ಮದುವೆಯಾದ ಹದಿನೈದು ದಿನ ಮಾತ್ರ ಪತ್ನಿ ಜೊತೆ ಸಂಸಾರ ಮಾಡಿದ್ದ. ಬಳಿಕ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ. ಅಲ್ಲದೇ ಈ ವಿಚಾರವನ್ನು ಪತ್ನಿಯಿಂದ ಮುಚ್ಚಿಟ್ಟು ಕಾಯಿಲೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದ. ಇದನ್ನೂ ಓದಿ: ಬೆಸ್ಟ್‌ ಆಕ್ಟಿಂಗ್‌ ಆಸ್ಕರ್‌ ಅವಾರ್ಡ್‌ ಯಾರಿಗೆ ಹೋಗುತ್ತೆ ಅಂದ್ರೆ.. – ದರ್ಶನ್ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್

    ತನ್ನ ಹುಳುಕು ಮುಚ್ಚಿಕೊಳ್ಳಲು ಪಂಚಾಯ್ತಿ ಸೇರಿಸಿ ನನ್ನ ಪತ್ನಿ ಹೆಣ್ಣೇ ಅಲ್ಲ, ಮದ್ಯಪಾನ ಮಾಡುತ್ತಾಳೆ, ಮಾದಕ ವಸ್ತು ತೆಗೆದುಕೊಳ್ಳುತ್ತಾಳೆ ಎಂದು ಭರತ್ ಸುಳ್ಳು ಆರೋಪ ಮಾಡಿದ್ದ. ಕೆಲವು ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿ ಕೂಡ ಪತ್ನಿಯನ್ನು ಉಳಿಸಿದ್ದ. ಭರತ್ ವಂಚನೆ ತಿಳಿಯದೇ ಮತ್ತೊಂದು ಪಂಚಾಯ್ತಿ ನಡೆಸಿ ಪತ್ನಿ ಕುಟುಂಬಸ್ಥರು ಆಕೆಗೆ ಬುದ್ಧಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. ಆದರೆ ಭರತ್ ತನ್ನ ಪತ್ನಿ ತಪ್ಪು ಮಾಡದೇ ಇದ್ದರೂ ಮತ್ತೆ ತವರು ಮನೆಗೆ ಕಳುಹಿಸಿದ್ದ. ಇದನ್ನೂ ಓದಿ: ಪ್ರಧಾನಿ ಮೋದಿ ನನ್ನ ನೆಚ್ಚಿನ ನಟ: ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ರಾಜಸ್ಥಾನ ಸಿಎಂ

    ಭರತ್ ಹೆಚ್‌ಐವಿ ರೋಗಕ್ಕೆ ತೆಗೆದುಕೊಳ್ಳುವ ಮಾತ್ರೆ ಡಬ್ಬಿಯನ್ನು ಸದಾ ಕೊರಳಿಗೆ ಕಟ್ಟಿಕೊಂಡು ತಿರುಗುತ್ತಿದ್ದ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದು ಹಾಗೂ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಅನುಮಾನ ಪಟ್ಟ ಪತ್ನಿ, ಭರತ್ ಸ್ನಾನಕ್ಕೆ ಹೋಗಿದ್ದಾಗ ಮಾತ್ರೆಯ ಫೋಟೋ ತೆಗೆದು ತನ್ನ ಅಕ್ಕನಿಗೆ ಕಳುಹಿಸಿದ್ದಳು. ಆಕೆಯ ಸಹೋದರಿ ಮಾತ್ರೆಯ ಫೋಟೋಗಳನ್ನು ತನಗೆ ಪರಿಚಯ ಇರುವ ನರ್ಸ್‌ಗೆ ಕಳುಹಿಸಿದ್ದರು. ಇದನ್ನು ಪರಿಶೀಲಿಸಿದ ನರ್ಸ್ ಇದು ಹೆಚ್‌ಐವಿ ಸೋಂಕಿತರು ತೆಗೆದುಕೊಳ್ಳುವ ಮಾತ್ರೆ ಎಂದು ತಿಳಿಸಿದ್ದಾರೆ. ಇದರಿಂದ ಭರತ್ ಹೆಚ್‌ಐವಿ ಸೋಂಕಿತ ಎಂದು ಪತ್ನಿ ಕುಟುಂಬಸ್ಥರು ಅನುಮಾನಗೊಂಡಿದ್ದಾರೆ. ಇದನ್ನೂ ಓದಿ: ಬಸ್, ಮೆಟ್ರೋ ಬಳಿಕ ಪ್ರಯಾಣಿಕರಿಗೆ ಮತ್ತೊಂದು ಶಾಕ್ – ಇಂದೇ ಫೈನಲ್ ಆಗುತ್ತಾ ಆಟೋ ದರ ಏರಿಕೆ?

    ಬಳಿಕ ಎರಡೂ ಕಡೆಯ ಕುಟುಂಬಸ್ಥರಿಂದ ಮತ್ತೊಂದು ರಾಜಿ ಪಂಚಾಯ್ತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಭರತ್ ಆಧಾರ್ ಕಾರ್ಡ್ ತರಬೇಕು. ಇಬ್ಬರೂ ಮೆಡಿಕಲ್ ಟೆಸ್ಟ್‌ಗೆ ಒಳಪಡಬೇಕು ಎಂದು ನಿರ್ಧಾರ ಮಾಡಿ ಸೋಮವಾರ ಮೆಡಿಕಲ್ ಟೆಸ್ಟ್‌ಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಭರತ್ ಆಧಾರ್ ಕಾರ್ಡ್ ಕೊಡದೇ ಸತಾಯಿಸಿದ್ದ. ಪಂಚಾಯ್ತಿ ನಡೆದರೆ ತಾನು ಮುಚಿಟ್ಟಿದ್ದ ಎಲ್ಲಾ ಸತ್ಯ ಬಯಲಾಗಲಿದೆ ಎಂಭ ಭಯದಿಂದ ಭರತ್ ಮಾ.9 ರಂದು ರಾತ್ರಿ ಬೆಂಗಳೂರಿನಿಂದ ತಾಯಿ ಜೊತೆ ದಿಡಿಗದ ಸಂಬಂಧಿಕರ ಮನೆಗೆ ಬಂದಿದ್ದ. ಬಳಿಕ ಸಂಬಂಧಿಕರಿಂದ ಬೈಕ್ ಪಡೆದು ಕಬ್ಬಳಿ ಮನೆಗೆ ಬಂದು ಅಲ್ಲಿಂದ ನೆರಲೆಕೆರೆ ಗ್ರಾಮದಲ್ಲಿರುವ ಅಜ್ಜಿ ಮನೆಗೆ ತಾಯಿ ಮಗ ತೆರಳಿದ್ದರು. 100 ಗ್ರಾಂ ಒಡವೆ, 30 ಗ್ರಾಂ ಚೈನು ಎಲ್ಲವನ್ನೂ ಅಜ್ಜಿಗೆ ಕೊಟ್ಟು ಅವರ ಆಶೀರ್ವಾದ ಪಡೆದು ಭರತ್ ಹಾಗೂ ತಾಯಿ ಮರಳಿ ಗ್ರಾಮಕ್ಕೆ ಬಂದಿದ್ದರು. ಮಾ.10ರ ಮುಂಜಾನೆ 3:15 ರಿಂದ 4 ಗಂಟೆ ನಡುವೆ ಗ್ರಾಮದ ನೀರಿನ ಕಟ್ಟೆಗೆ ಬಿದ್ದು ತಾಯಿ-ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಭರತ್ ತಾಯಿ ಜಯಂತಿ ಗ್ರಾಮದ ದೇವರಿಗೆ ಕೈಮುಗಿದು ಹೋಗಿದ್ದರು. ಇದನ್ನೂ ಓದಿ: ಕೆಂಪು ಮೆಣಸಿನಕಾಯಿಗೆ ಬೆಂಬಲ ಬೆಲೆ – ಕರ್ನಾಟಕಕ್ಕೂ ವಿಸ್ತರಿಸಲು ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ

    ಭರತ್ ತಾಯಿ ಜಯಂತಿ ಅವರಿಗೆ ಸೇರಿದ್ದ 150 ತೆಂಗಿನ ಮರ, 2 ಎಕರೆ ಹೊಲ ಮತ್ತು 1 ಮನೆ ಮತ್ತು ಆಸ್ತಿ ಲಪಟಾಯಿಸಲು ಜಯಂತಿ ಸಂಬಂಧಿಕರಿಂದ ಭರತ್ ಪತ್ನಿ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಪತ್ನಿ ಕುಟುಂಬಸ್ಥರು ತಿಳಿಸಿದ್ದು, ಭರತ್‌ನಿಂದ ಮಗಳ ಬಾಳು ಹಾಳಾಗಿದೆ ಎಂದು ಕಣ್ಣೀರಿಡುತ್ತಿದ್ದಾರೆ. ಸದ್ಯ ಭರತ್ ಪತ್ನಿಯನ್ನು ಆಕೆಯ ಕುಟುಂಬಸ್ಥರು ಹೆಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೆ ಭರತ್ ಪತ್ನಿಯ ಮಾನಸಿಕ ಕಿರುಕುಳ, ಹಠಮಾರಿತನದಿಂದ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಾಯಿ ಜಯಂತಿ ಸಂಬಂಧಿಕರು ಬಿಂಬಿಸಿದ್ದಾರೆ. ತಾಯಿ-ಮಗನ ಸಾವಿಗೆ ನಮ್ಮ ಮಗಳು ಕಾರಣಳಲ್ಲ ಎಂದು ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ತಾಯಿ-ಮಗನ ಮೃತದೇಹ ನೋಡಲು ಭರತ್ ಸಂಬಂಧಿಕರು ಆತನ ಪತ್ನಿ ಹಾಗೂ ಕುಟುಂಬಸ್ಥರಿಗೆ ಅವಕಾಶ ನೀಡಿಲ್ಲ. ಇದನ್ನೂ ಓದಿ: EXCLUSIVE |ರನ್ಯಾ ಬಳಿ ಇದೆ ದುಬೈ ರೆಸಿಡೆಂಟ್ ವೀಸಾ – ಜಾಮೀನು ಸಿಕ್ರೆ ದೇಶ ಬಿಟ್ಟು ಹೋಗ್ತಾರಾ?

  • ಮದುವೆಯಾಗಿ ಹಣ, ಚಿನ್ನದೊಂದಿಗೆ ಎಸ್ಕೇಪ್‌ ಆಗ್ತಿದ್ದ ಮಹಿಳೆಗೆ ಹೆಚ್‌ಐವಿ – ಆಕೆ ದೈಹಿಕ ಸಂಪರ್ಕಕ್ಕೆ ಬಂದ ಪುರುಷರಿಗಾಗಿ ಹುಡುಕಾಟ

    ಮದುವೆಯಾಗಿ ಹಣ, ಚಿನ್ನದೊಂದಿಗೆ ಎಸ್ಕೇಪ್‌ ಆಗ್ತಿದ್ದ ಮಹಿಳೆಗೆ ಹೆಚ್‌ಐವಿ – ಆಕೆ ದೈಹಿಕ ಸಂಪರ್ಕಕ್ಕೆ ಬಂದ ಪುರುಷರಿಗಾಗಿ ಹುಡುಕಾಟ

    ಡೆಹ್ರಾಡೂನ್: ಮದುವೆಯಾಗಿ ನಗದು, ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿ ಅನೇಕ ಪುರುಷರನ್ನು ಯಾಮಾರಿಸಿದ್ದ ಮಹಿಳೆ ಈಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವೈದ್ಯಕೀಯ ತಪಾಸಣೆ ವೇಳೆ ಆಕೆಗೆ ಹೆಚ್‌ಐವಿ ಪಾಸಿಟಿವ್‌ ಬಂದಿರುವುದು ಪೊಲೀಸರಿಗೆ ಶಾಕ್‌ ನೀಡಿದೆ.

    ಮದುವೆ ಹೆಸರಿನಲ್ಲಿ ಅನೇಕ ಪುರುಷರನ್ನು ವಂಚಿಸಿದ್ದ ಮಹಿಳೆಯರು ಮೇ 6 ರಂದು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದರು. ಯುಪಿ ಮತ್ತು ಉತ್ತರಾಖಂಡದ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಕೆಯ ಗ್ಯಾಂಗ್‌ನ 6 ಸದಸ್ಯರನ್ನೂ ಬಂಧಿಸಿದ್ದು, ಪುಜಾಫರ್‌ನಗರ ಜೈಲಿಗೆ ಕಳುಹಿಸಲಾಗಿದೆ.

    ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಗೆ ಹೆಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ. ಬಂಧಿತ ಮಹಿಳೆ ಈಗ ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ)ಗೆ ಒಳಗಾಗುತ್ತಿದ್ದಾಳೆ ಎಂದು ಜೈಲು ಅಧೀಕ್ಷಕ ಸೀತಾರಾಮ್ ಶರ್ಮಾ ಹೇಳಿದ್ದಾರೆ.

    ಮಹಿಳೆಗೆ ಹೆಚ್‌ಐವಿ ಇರುವುದು ದೃಢಪಟ್ಟಿರುವುದು ಎರಡೂ ರಾಜ್ಯಗಳ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗ ಅವಳ ಜೊತೆ ಮದುವೆಯಾಗಿ ಯಾಮಾರಿದ್ದ ಪುರುಷರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ.

    ಉತ್ತರಾಖಂಡದ ಆರೋಗ್ಯ ಇಲಾಖೆಯು, ರಾಜ್ಯದೊಳಗೆ ಆಕೆ ದೈಹಿಕ ಸಂಪರ್ಕಕ್ಕೆ ಬಂದ ಮೂವರು ಪುರುಷರು ಈಗ ಹೆಚ್ಐವಿ ಪಾಸಿಟಿವ್ ಎಂದು ದೃಢಪಡಿಸಿದ್ದಾರೆ. ಉಧಮ್ ಸಿಂಗ್ ನಗರದ ಆರೋಗ್ಯ ಇಲಾಖೆಯು ಎನ್‌ಜಿಒ ಸಹಯೋಗದೊಂದಿಗೆ ಈ ಪುರುಷರಲ್ಲಿ ಪರೀಕ್ಷೆಗಳನ್ನು ನಡೆಸಿ ART ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಪುರುಷರ ಕುಟುಂಬದ ಇತರೆ ಸದಸ್ಯರನ್ನೂ ಪರೀಕ್ಷಿಸುವ ಪ್ರಕ್ರಿಯೆ ನಡೆಯುತ್ತಿದೆ.

    ಇದುವರೆಗೆ ಆರೋಪಿ ಮಹಿಳೆ ಐದು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಐವರ ಪೈಕಿ ಮೂವರು ಪುರುಷರು ಉತ್ತರಾಖಂಡ ರಾಜ್ಯದವರೇ ಆಗಿದ್ದಾರೆ. ಆದರೆ ಆಕೆ ಇನ್ನೂ ಹೆಚ್ಚಿನ ಮಂದಿಗೆ ಮದುವೆಯಾಗಿ ವಂಚಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?

    ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?

    ಲಂಡನ್‌ನಲ್ಲಾದ (London) ಸೋಂಕಿತರ ರಕ್ತದ ಹಗರಣಕ್ಕೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಈ ಹಗರಣಕ್ಕೆ ಬಲಿಯಾದವರು ಒಬ್ಬರು ಇಬ್ಬರಲ್ಲ. ಬರೋಬ್ಬರಿ 3,000 ಮಂದಿ. ವೈದ್ಯಕೀಯ ಲೋಕದ ನಿರ್ಲಕ್ಷ್ಯಕ್ಕೆ ಸಾವಿರಾರು ಜನರ ಬದುಕು ಬರಡಾಯಿತು. ಇನ್ನೂ ಬಾಳಬೇಕಿದ್ದ ನೂರಾರು ಮಕ್ಕಳ ಬದುಕು ಕಮರಿತು. ಹೌದು, 70-80 ರ ದಶಕದಲ್ಲಿ ಲಂಡನ್‌ನಲ್ಲಾದ ಈ ಹಗರಣವು ಈಗ ಬೆಳಕಿಗೆ ಬಂದಿದೆ. ಈ ಹಗರಣದಿಂದ ವೈದ್ಯಲೋಕದ ವೈಫಲ್ಯ ಜಗಜ್ಜಾಹೀರಾಗಿದೆ.

    ತನಿಖಾ ವರದಿಯಲ್ಲೇನಿದೆ?
    ಮೇ 20 ರಂದು ಯುನೈಟೆಡ್ ಕಿಂಗ್‌ಡಮ್‌ನ (United Kingdom) ಸೋಂಕಿತ ರಕ್ತದ ಹಗರಣದ ತನಿಖಾ ವರದಿ ಬಿಡುಗಡೆಯಾಯಿತು. ಸಾವಿರಾರು ಜನರು ಹೆಚ್‌ಐವಿ (HIV) ಅಥವಾ ಹೆಪಟೈಟಿಸ್‌ಗೆ (Hepatitis C) ತುತ್ತಾಗಲು ಕಾರಣವಾದ ಹಗರಣ ಇದು ಎಂಬುದು ಬಯಲಾಯಿತು. ಈ ಹಗರಣವು ರಾಜ್ಯ-ನಿಧಿಯ ರಾಷ್ಟ್ರೀಯ ಆರೋಗ್ಯ ಸೇವೆಯ (NHS) ಇತಿಹಾಸದಲ್ಲಿ ಮಾರಣಾಂತಿಕ ಚಿಕಿತ್ಸಾ ವಿಪತ್ತುಗಳಲ್ಲಿ ಒಂದು ಎಂಬ ಕೆಟ್ಟ ದಾಖಲೆ ಬರೆಯಿತು. ಬ್ರಿಯಾನ್ ಲ್ಯಾಂಗ್‌ಸ್ಟಾಫ್ ನೇತೃತ್ವದಲ್ಲಿ ತನಿಖೆ ನಡೆಯಿತು. ಹಗರಣವು 30,000 ಮಂದಿ ಆರೋಗ್ಯ ಸಮಸ್ಯೆ ಹಾಗೂ 3,000 ಮಂದಿ ಸಾವಿಗೆ ಕಾರಣವಾಯಿತು ಎಂಬುದನ್ನು ವರದಿ ಬಹಿರಂಗಪಡಿಸಿದೆ. ಇಂತಹ ದೊಡ್ಡ ದುರಂತವನ್ನು ಮುಚ್ಚಿಡಲು ಸರ್ಕಾರ ಪ್ರಯತ್ನಿಸಿತು ಎಂದು ಸಹ ದೂರಲಾಗಿದೆ. ‘ಸತ್ಯವನ್ನು ಮರೆಮಾಚುವುದು ಸಂಯೋಜಿತ ಪಿತೂರಿಗಿಂತ ಹೆಚ್ಚು ಅಪಾಯಕಾರಿ’ ಎಂದು ಬ್ರಿಯಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ನಾಸಾ ರೈಲು – ಏನಿದು ಹೊಸ ಪ್ರಯೋಗ?

    ಏನಿದು ಸೋಂಕಿತ ರಕ್ತ ಹಗರಣ?
    1970 ಮತ್ತು 1980 ರ ದಶಕಗಳಲ್ಲಿ ಬ್ರಿಟನ್‌ನಲ್ಲಿ ಸೋಂಕಿತ ರಕ್ತ ವರ್ಗಾವಣೆ ಹಗರಣ (Infected Blood Scandal) ನಡೆಯಿತು. ಆಗಿನ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವ ಹಿಮೋಫಿಲಿಯಾ ಸಮಸ್ಯೆ ಬ್ರಿಟನ್‌ನಾದ್ಯಂತ ಜನರನ್ನು ಭಾದಿಸಿತು. ಈ ಸಮಸ್ಯೆ ವೈದ್ಯಲೋಕವನ್ನು ಕಂಗೆಡಿಸಿತು. ಆಗ ಬ್ರಿಟನ್‌ನ ಆರೋಗ್ಯ ಸಂಸ್ಥೆ (ಎನ್‌ಹೆಚ್‌ಎಸ್) ‘ಫ್ಯಾಕ್ಟರ್ 8’ ಎಂಬ ಎಂಬ ವಿಧಾನದ ಮೂಲಕ ಚಿಕಿತ್ಸೆ ನೀಡಲು ಮುಂದಾಯಿತು. ಚಿಕಿತ್ಸೆ ಪ್ರಕಾರ, ಹತ್ತಾರು ದಾನಿಗಳಿಂದ ಪ್ಲಾಸ್ಮಾಗಳನ್ನು ಒಟ್ಟುಗೂಡಿಸಿ ರೋಗಿಗೆ ನಿಡಲಾಗುತ್ತಿತ್ತು. ಹಿಂದಿನ ಚಿಕಿತ್ಸೆಗಳಿಗಿಂತ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಹಾಗಾಗಿ, ಇದನ್ನ ‘ವಂಡರ್ ಡ್ರಗ್’ ಚಿಕಿತ್ಸೆ ಎಂದು ಬ್ರಿಟನ್ ವೈದ್ಯರು ಕರೆದರು.

    ಏನಿದು ಹಿಮೋಫೀಲಿಯಾ?
    ಇದೊಂದು ಅಪರೂಪದ ಆನುವಂಶಿಕ ಸಮಸ್ಯೆ. ಹಿಮೋಫೀಲಿಯಾಗೆ ಒಳಗಾದವರಲ್ಲಿ ರಕ್ತ ಹೆಪ್ಪುಗಟ್ಟಲು ಕಷ್ಟವಾಗುತ್ತದೆ. ರಕ್ತ ತೆಳುವಾಗುವ ಸಮಸ್ಯೆ ಇರುತ್ತದೆ. ಹಿಮೋಫೀಲಿಯಾದಲ್ಲಿ ಎರಡು ರೀತಿ ಇದೆ. ಹಿಮೋಫೀಲಿಯಾ-ಎ ಹೊಂದಿರುವವರ ರಕ್ತದಲ್ಲಿ ಹೆಪ್ಪುಗಟ್ಟುವ ಅಂಶವಾದ ಫ್ಯಾಕ್ಟರ್-8 ರ ಕೊರತೆ ಇರುತ್ತದೆ. ಹಿಮೋಫೀಲಿಯಾ-ಬಿ ಸಮಸ್ಯೆ ಇರುವವರಿಗೆ ಫ್ಯಾಕ್ಟರ್-9 ರ ಕೊರತೆ ಇರುತ್ತದೆ. ಇದನ್ನೂ ಓದಿ: ನಿಮ್ಮ ಡಿಜಿಟಲ್‌ ಆರೋಗ್ಯ ಹೇಗಿದೆ? – ಮಿತಿಮೀರಿದ ಎಐ ಬಳಕೆ ತಂದೊಡ್ಡುವ ಅಪಾಯಗಳೇನು? – ತಂತ್ರಜ್ಞರ ಕಳವಳ ಏನು?

    ರೋಗಿಗಳಿಗೆ ಫ್ಯಾಕ್ಟರ್-8 ಚಿಕಿತ್ಸೆ ನೀಡಲು ಸಾಕಷ್ಟು ಪ್ರಮಾಣದ ರಕ್ತದ ಅಗತ್ಯವಿತ್ತು. ಆಗ ಅಮೆರಿಕದಿಂದ ಬ್ರಿಟನ್ ರಕ್ತ ತರಿಸಿಕೊಳ್ಳಲು ಮುಂದಾಯಿತು. ದಾನ ಮಾಡಿದ್ದರಲ್ಲಿ ಮಾದಕ ವ್ಯಸನಿಗಳು, ಕೈದಿಗಳು, ಅಪಾಯಕಾರಿ ಸೋಂಕು ಹೊಂದಿದ ವ್ಯಕ್ತಿಗಳ ರಕ್ತವೇ ಹೆಚ್ಚಿನ ಪ್ರಮಾಣದಲ್ಲಿತ್ತು. ಪರೀಕ್ಷೆ ಮಾಡದೇ ಇದೇ ರಕ್ತವನ್ನು ಬಳಸಿ ಜನರಿಗೆ ಚಿಕಿತ್ಸೆ ನೀಡಲಾಯಿತು. ಒಬ್ಬ ದಾನಿ ನೀಡಿದ ರಕ್ತದಲ್ಲಿ ಸೋಂಕು ಇದ್ದರೆ, ಅದು ಇಡೀ ಬ್ಯಾಚ್ ಅನ್ನು ಕಲುಷಿತಗೊಳಿಸುವ ಅಪಾಯವಿತ್ತು. ಇಂತಹ ರಕ್ತ ಪಡೆದ ಸಾವಿರಾರು ಮಂದಿ ಸೋಂಕಿಗೆ ತುತ್ತಾದರು.

    ಸೋಂಕಿತ ರಕ್ತ ಪಡೆದವರಿಗೆ ಹೆಚ್‌ಐವಿ, ಹೆಪಟೈಟಿಸ್
    ತನಿಖಾ ವರದಿಯ ಪ್ರಕಾರ 30,000 ಜನರು ಹೆಚ್‌ಐವಿ, ಹೆಪಟೈಟಿಸ್ ಸಿ ಗೆ ತುತ್ತಾದರು. ರಕ್ತ ದಾನ ಮಾಡಿದವರಲ್ಲಿ ಹೆಚ್ಚಾಗಿ ಹೆಪಟೈಟಿಸ್ ಸಿ ಸೋಂಕು ಇತ್ತು. 380 ಮಕ್ಕಳು ಹೆಚ್‌ಐವಿ ಸೋಂಕಿಗೆ ತುತ್ತಾಗಿದ್ದಾರೆ. ಹೆರಿಗೆ ಅಥವಾ ಶಸ್ತ್ರಚಿಕಿತ್ಸೆಗಾಗಿ ರಕ್ತದ ಅಗತ್ಯವಿರುವ ಜನರಿಗೂ ಸೋಂಕಿತ ರಕ್ತವನ್ನೇ ನೀಡಲಾಗಿತ್ತು.

    ಹೆಚ್‌ಐವಿ ಸೋಂಕಿಗೆ ಒಳಗಾದವರಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಮರಣ ಹೊಂದಿದರು. ಬದುಕಿದ್ದಾಗ ಇವರ ಸಂಪರ್ಕ ಹೊಂದಿದವರಿಗೂ ಸೋಂಕು ವರ್ಗಾವಣೆಯಾಗಿದೆ. ಆ ಸಂಖ್ಯೆ ಎಷ್ಟು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಇದನ್ನೂ ಓದಿ: ಫಸ್ಟ್‌ ಟೈಂ ಸೌದಿಯಲ್ಲಿ ನಡೆಯಿತು ಸ್ವಿಮ್‌ ಸೂಟ್‌ ಫ್ಯಾಶನ್‌ ಶೋ!

    ಬ್ರಿಟನ್ ದೇಶವನ್ನೇ ಹೆಚ್ಚು ಕಾಡಿದ್ದೇಕೆ?
    70 ರ ದಶಕದಲ್ಲಿ ಹಿಮೋಫೀಲಿಯಾ ಬ್ರಿಟನ್ ದೇಶವನ್ನು ಹೆಚ್ಚು ಕಾಡಿತ್ತು. ಜಪಾನ್, ಸ್ಪೇನ್ ದೇಶಗಳಲ್ಲೂ ಈ ಸಮಸ್ಯೆ ಕಾಣಿಸಿಕೊಂಡರೂ, ಸೋಂಕು ತಗುಲುವ ಪ್ರಮಾಣ ಕಡಿಮೆಯಿತ್ತು. ಅಲ್ಲದೇ ಬ್ರಿಟನ್ ಫ್ಯಾಕ್ಟರ್-8 ಎಂಬ ಹೊಸ ಚಿಕಿತ್ಸಾ ವಿಧಾನವನ್ನು ಪರಿಚಯಿಸಿದ್ದು, ದೊಡ್ಡ ದುರಂತಕ್ಕೆ ಕಾರಣವಾಯಿತು. ಆದರೆ ಜಪಾನ್, ಸ್ಪೇನ್ ದೇಶಗಳು ಹಳೆ ಚಿಕಿತ್ಸಾ ವಿಧಾನವನ್ನೇ ಮುಂದುವರಿಸಿದ್ದರಿಂದ ಹೆಚ್ಚಿನ ಸಮಸ್ಯೆ ಆಗಲಿಲ್ಲ. 90 ರ ದಶಕಕದವರೆಗೂ ಬ್ರಿಟನ್‌ನಲ್ಲಿ ಹೆಪಟೈಟಿಸ್-ಸಿ ಪತ್ತೆಗಾಗಿ ಸೋಂಕಿಗೆ ಸ್ಕ್ರೀನಿಂಗ್ ಪರೀಕ್ಷೆ ಕೂಡ ಲಭ್ಯವಿರಲಿಲ್ಲ. ಇದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡಲು ಕಾರಣವಾಗಿತ್ತು.

    ಸರ್ಕಾರದ ಪ್ರತಿಕ್ರಿಯೆ ಏನು?
    ಯುಕೆನಲ್ಲಿ ದೊಡ್ಡ ದುರಂತಕ್ಕೆ ಕಾರಣವಾದ ಹಗರಣದ ವಿಚಾರವಾಗಿ ಬ್ರಿಟನ್‌ನ ಪ್ರಧಾನಿ ರಿಷಿ ಸುನಾಕ್ ದೇಶದ ಜನತೆಯಲ್ಲಿ ಕ್ಷಮೆಯಾಚಿಸಿದ್ದಾರೆ. ವೈದ್ಯಕೀಯ ಲೋಕದ ಅತಿ ದೊಡ್ಡ ಹಗರಣ ಇದಾಗಿದ್ದು, ಬ್ರಿಟನ್ ಸರ್ಕಾರ ಇದರಿಂದ ತಲೆ ತಗ್ಗಿಸುವಂತಾಗಿದೆ. ಈ ಘಟನೆಗೆ ನಾನು ಪೂರ್ಣ ಹೃದಯದಿಂದ ನಿಸ್ಸಂದಿಗ್ಧವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದಿದ್ದಾರೆ.

    ಅಂದಿನಿಂದ ಇಲ್ಲಿವರೆಗೆ ಏನಾಗಿದೆ?
    1980 ರ ದಶಕದ ಉತ್ತರಾರ್ಧದಲ್ಲಿ ಸಂತ್ರಸ್ತರು ಮತ್ತು ಅವರ ಕುಟುಂಬಗಳು ವೈದ್ಯಕೀಯ ನಿರ್ಲಕ್ಷ್ಯದ ಆಧಾರದ ಮೇಲೆ ಪರಿಹಾರ ನೀಡಬೇಕು ಎಂದು ಬ್ರಿಟನ್‌ನಾದ್ಯಂತ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. 1990 ರ ದಶಕದ ಆರಂಭದಲ್ಲಿ ಹೆಚ್‌ಐವಿ ಸೋಂಕಿತರಿಗೆ ಏಕಕಾಲದಲ್ಲಿ ಪರಿಹಾರ ನೀಡಲು ಸರ್ಕಾರವು ಚಾರಿಟಿಯನ್ನು ಸ್ಥಾಪಿಸಿತು. ಆದರೆ ಸಮಸ್ಯೆ ಅಲ್ಲಿಗೆ ಬಗೆಹರಿಯಲಿಲ್ಲ. ಸರ್ಕಾರದ ವಿರುದ್ಧ ಅಭಿಯಾನಗಳು ಪ್ರಾರಂಭವಾದವು.

    ಪ್ರಕರಣ ಸಂಸತ್ ಮೆಟ್ಟಿಲೇರಿ ತನಿಖೆಯ ಒತ್ತಾಯ ಕೇಳಿಬಂತು. ಕೊನೆಗೆ 2018 ರ ಫೆಬ್ರವರಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಸರ್ ಬ್ರಿಯಾನ್ ಲ್ಯಾಂಗ್‌ಸ್ಟಾಫ್ ಅವರ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಲಾಯಿತು. 2018 ರ ಜುಲೈ ತಿಂಗಳಿಂದ ತನಿಖೆ ಪ್ರಾರಂಭವಾಯಿತು. 2019 ರ ಏಪ್ರಿಲ್‌ನಿಂದ 2022 ರ ಡಿಸೆಂಬರ್ ವರೆಗೆ ಸೋಂಕಿತ ಮತ್ತು ಬಾಧಿತರಿಂದ ಸಾರ್ವಜನಿಕ ಸಾಕ್ಷ್ಯವನ್ನು ತನಿಖಾ ತಂಡ ಸಂಗ್ರಹಿಸಿತು. 2023 ರ ಫೆಬ್ರವರಿ 3 ರಲ್ಲಿ ಮೌಖಿಕವಾಗಿ ವರದಿ ಒಪ್ಪಿಸಲಾಯಿತು.

  • ಕಳ್ಳತನಕ್ಕಿಳಿದು ಸಿಕ್ಕಿಬಿದ್ದ ಸೈಕಲ್‍ನಲ್ಲೇ ದೇಶ ಸುತ್ತಿ HIV ಬಗ್ಗೆ ಜಾಗೃತಿ ಮೂಡಿಸ್ತಿದ್ದ ವ್ಯಕ್ತಿ

    ಕಳ್ಳತನಕ್ಕಿಳಿದು ಸಿಕ್ಕಿಬಿದ್ದ ಸೈಕಲ್‍ನಲ್ಲೇ ದೇಶ ಸುತ್ತಿ HIV ಬಗ್ಗೆ ಜಾಗೃತಿ ಮೂಡಿಸ್ತಿದ್ದ ವ್ಯಕ್ತಿ

    ಬೆಂಗಳೂರು: ಸೈಕಲ್‍ನಲ್ಲೇ ದೇಶ ಸುತ್ತಿ ಹೆಚ್‍ಐವಿ (HIV Awareness) ಬಗ್ಗೆ ಜಾಗೃತಿ ಮೂಡಿಸ್ತಾ ಇದ್ದ ವ್ಯಕ್ತಿ ಈಗ ಕಳ್ಳತನದ ಹಾದಿ ಹಿಡಿದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಹೌದು ಒಂದು ಕಾಲದಲ್ಲಿ ಗಿನ್ನೀಸ್ ದಾಖಲೆಯ ವೀರ ಕಳ್ಳತನ ಕೇಸ್‍ನಲ್ಲಿ ಅಂದರ್ ಆಗಿದ್ದಾನೆ. ವಿವಿ ಪುರಂ ಪೊಲೀಸರು (VV Puram Police) ವಾಸವಿ ದೇವಸ್ಥಾನದ ವಿಗ್ರಹ ಕಳವು ಆರೋಪದಲ್ಲಿ ರವಿ ಎಂಬಾತನ ಬಂಧಿಸಿದ್ದು, ಈತ 2000 ದಿಂದ 2006ರವೆರಗೂ ಸೈಕಲ್‍ನಲ್ಲೇ ದೇಶ ಸುತ್ತಿ ಹೆಚ್‍ಐವಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ 2016ರಲ್ಲಿ ಮಹಾರಾಷ್ಟ್ರ (Maharastra Govt)  ಸರ್ಕಾರ ಈತನಿಗೆ ಬೈಕೊಂದನ್ನು ಗಿಫ್ಟ್ ಆಗಿ ನೀಡಿತ್ತು.

    ಒಟ್ಟು 33 ರಾಜ್ಯಗಳನ್ನು ಸುತ್ತಿ ಗಿನ್ನೀಸ್ ದಾಖಲೆ ಮಾಡಿದ್ದ ರವಿ ಈಗ ಕಳ್ಳತನದ ಕೇಸ್‍ನಲ್ಲಿ ಅಂದರ್ ಆಗಿದ್ದಾನೆ. ದೇವರ ಬೆಳ್ಳಿ ವಿಗ್ರಹ ಕದ್ದು ಮಾರಾಟಕ್ಕೆ ಯತ್ನಿಸಿದ್ದಾನೆ. ದೇವಸ್ಥಾನದಲ್ಲಿ ವಿಗ್ರಹ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುಮಾರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಬಳಿಕ ರವಿ ಅರೆಸ್ಟ್ ಆಗಿದ್ದಾನೆ. ಇದನ್ನೂ ಓದಿ: ಅನ್ನಭಾಗ್ಯದ ಹಣ ವರ್ಗಾವಣೆ – ಷರತ್ತು ವಿಧಿಸಿದ ಸರ್ಕಾರ

    ಕಳವು ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ವಿವಿಪುರಂ ಪೊಲೀಸ್ ಠಾಣೆಯಲ್ಲಿ (VV Puram Police Station) ಕೇಸ್ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ತೀವ್ರ ಶೋಧ ನಡೆಸಿ ರವಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಜೀವನ ನಡೆಸಲು ಕಷ್ಟ ಅಂತ ವಿಗ್ರಹ ಕದ್ದೆ ಎಂದಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉತ್ತರಾಖಂಡ್ ಒಂದೇ ಜೈಲಿನ 44 ಕೈದಿಗಳಿಗೆ ಹೆಚ್‍ಐವಿ ಪಾಸಿಟಿವ್

    ಉತ್ತರಾಖಂಡ್ ಒಂದೇ ಜೈಲಿನ 44 ಕೈದಿಗಳಿಗೆ ಹೆಚ್‍ಐವಿ ಪಾಸಿಟಿವ್

    ಡೆಹ್ರಡೂನ್: ಉತ್ತರಾಖಂಡ್‍ನ ಹಲ್ದ್ವಾನಿಯ (Haldwani) ಜೈಲಿನಲ್ಲಿ 44 ಕೈದಿಗಳಿಗೆ (Prisoners) ಹೆಚ್‍ಐವಿ (HIV) ಇರುವುದು ಪತ್ತೆಯಾಗಿದೆ. ಒಬ್ಬ ಮಹಿಳಾ ಖೈದಿ ಕೂಡ ಹೆಚ್‍ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಸುಶೀಲಾ ತಿವಾರಿ ಆಸ್ಪತ್ರೆಯ ಎಆರ್‌ಟಿ ಸೆಂಟರ್‌ನ (ART Center) ಡಾ.ಪರಮ್‍ಜಿತ್ ಸಿಂಗ್ ತಿಳಿಸಿದ್ದಾರೆ.

    ಜೈಲಿನಲ್ಲಿ ಹೆಚ್‍ಐವಿ ಪಾಸಿಟಿವ್ ಕೈದಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದು ಜೈಲು ಆಡಳಿತದಲ್ಲಿ ಸಂಚಲನ ಮೂಡಿಸಿದೆ ಎಂದು ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: 1,100 ಕೋಳಿಗಳನ್ನು ಹೆದರಿಸಿ ಕೊಂದಿದ್ದ ವ್ಯಕ್ತಿಗೆ ಜೈಲು

    ಹೆಚ್‍ಐವಿ ರೋಗಿಗಳಿಗೆ ಎಆರ್‌ಟಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಲ್ಲಿ ಸೋಂಕಿತ ರೋಗಿಗಳಿಗೆ ಚಿಕಿತ್ಸೆ (Treatment) ನೀಡಲಾಗುತ್ತದೆ. ವೈದ್ಯರ ತಂಡ ಜೈಲಿನಲ್ಲಿರುವ ಕೈದಿಗಳನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

    ಹೆಚ್‍ಐವಿ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ (NACO) ಮಾರ್ಗಸೂಚಿಗಳ ಆಧಾರದ ಮೇಲೆ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲಾಗುತ್ತದೆ. ಪ್ರಸ್ತುತ 1,629 ಪುರುಷ ಮತ್ತು 70 ಮಹಿಳಾ ಕೈದಿಗಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೈದಿಗಳು ಹೆಚ್‍ಐವಿ ಪಾಸಿಟಿವ್‍ಗೆ ತುತ್ತಾದ ಬಳಿಕ ಜೈಲು ಆಡಳಿತ ದಿನನಿತ್ಯ ತಪಾಸಣೆ ನಡೆಸುತ್ತಿದೆ. ಇದರಿಂದ ಹೆಚ್‍ಐವಿ ಸೋಂಕಿತ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಯುರೋಪ್ ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಫ್ರಾನ್ಸ್ ಅಧ್ಯಕ್ಷ

  • ಹೆಚ್‌ಐವಿ ಸೋಂಕು – ಮನನೊಂದು ರೋಗಿ ಆತ್ಮಹತ್ಯೆ

    ಹೆಚ್‌ಐವಿ ಸೋಂಕು – ಮನನೊಂದು ರೋಗಿ ಆತ್ಮಹತ್ಯೆ

    ಬೀದರ್: ಹೆಚ್‌ಐವಿ (HIV) ಸೋಂಕಿಗೆ ಮನನೊಂದು ರೋಗಿ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೀದರ್ (Bidar) ಜಿಲ್ಲೆಯಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತ್ರಿಪುರಾಂತದಲ್ಲಿ ಈ ಘಟನೆ ನಡೆದಿದ್ದು, ರಮೇಶ್ ಮಡಿವಾಳ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಹೆಚ್‌ಐವಿ ರೋಗಕ್ಕೆ ತುತ್ತಾಗಿದ್ದ ರಮೇಶ್ ಮನನೊಂದು ಬುಧವಾರ ಯಾರೂ ಇಲ್ಲದ ವೇಳೆ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಸತತ 2ನೇ ಬಾರಿಗೆ ತ್ರಿಪುರ ಸಿಎಂ ಆಗಿ ಮಣಿಕ್ ಸಹಾ ಪ್ರಮಾಣ ವಚನ ಸ್ವೀಕಾರ

    ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ನೌಕಾಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮೂವರು ಪೈಲೆಟ್‌ಗಳ ರಕ್ಷಣೆ